Connect with us

Kasaragod

ಬಿಎಲ್‌ಒ ಮುಹಮ್ಮದ್ ಸವಾದ್ ಆತ್ಮಹತ್ಯೆ ಪ್ರಕರಣ; ಸಮಗ್ರ ತನಿಖೆಗೆ ಜಿಲ್ಲಾಧಿಕಾರಿ ಆದೇಶ

Published

on

ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಒಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಕುಂಬಳೆ ಸಮೀಪದ ಮೊಗ್ರಾಲ್‌ನಲ್ಲಿ ನಡೆದಿದೆ.

ಮೊಗ್ರಾಲ್ ನಿವಾಸಿ ಮುಹಮ್ಮದ್ ಸವಾದ್ (32) ಮೃತಪಟ್ಟ ದುರ್ದೈವಿ. ಇವರು ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಬೆಳಿಗ್ಗೆಯಿಂದಲೇ ನಾಪತ್ತೆಯಾಗಿದ್ದ ಸವಾದ್‌ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮೊಗ್ರಾಲ್ ಸೇತುವೆಯ ಮೇಲೆ ಅವರ ಬೈಕ್ ಪತ್ತೆಯಾಗಿತ್ತು. ಬಳಿಕ ಸ್ಥಳೀಯರು ಮತ್ತು ಕುಟುಂಬಸ್ಥರು ನದಿಯಲ್ಲಿ ಹುಡುಕಾಟ ನಡೆಸಿದಾಗ ಸವಾದ್ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು ಅತ್ಯಂತ ಕಡಿಮೆ ಕಾಲಾವಕಾಶದಲ್ಲಿ ಹೆಚ್ಚಿನ ಕೆಲಸಗಳನ್ನು ಪೂರ್ಣಗೊಳಿಸುವಂತೆ ಬಿಎಲ್‌ಒಗಳ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಪ್ರಕರಣದಲ್ಲಿ, ಘಟನೆಯ ಹಿಂದಿನ ದಿನವಷ್ಟೇ ಅವರಿಗೆ ಹೆಚ್ಚಿನ ಕೆಲಸದ ಜವಾಬ್ದಾರಿ ನೀಡಲಾಗಿದ್ದು, ಮರುದಿನ ಮಧ್ಯಾಹ್ನ 12 ಗಂಟೆಯೊಳಗೆ ಅದನ್ನು ಕಡ್ಡಾಯವಾಗಿ ಮುಗಿಸುವಂತೆ ಗಡುವು ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಕೇವಲ ಕೇರಳ ಮಾತ್ರವಲ್ಲದೆ, ದೇಶದಾದ್ಯಂತ ಬಿಎಲ್‌ಒಗಳು ಇಂತಹ ಕಠಿಣ ಕೆಲಸದ ಒತ್ತಡವನ್ನು ಎದುರಿಸುತ್ತಿದ್ದಾರೆ. ಒಬ್ಬ ಶಿಕ್ಷಕರಾಗಿ ಅತಿಯಾದ ಮಾನಸಿಕ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಅವರು ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸೂಕ್ತ ಕಾಲಾವಕಾಶ ನೀಡಬೇಕು ಮತ್ತು ಮಾನವೀಯ ನೆಲೆಯಲ್ಲಿ ಅವರ ಶ್ರಮವನ್ನು ಪರಿಗಣಿಸಬೇಕು ಎಂಬ ಒತ್ತಾಯಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

DEATH

ಕಾಸರಗೋಡು: ಅಡೂರಿನಲ್ಲಿ ಭೀಕರ ದುರಂತ; ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಸಹೋದರರು ಸಾವು, ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯ

Published

on

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಅಡೂರು ಸಮೀಪದ ಸಂಚಕ್ಕಡವ್ (ಪೊನೋರಂ) ಎಂಬಲ್ಲಿ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದು, ಇಬ್ಬರು ಸೋದರ ಸಂಬಂಧಿ ಬಾಲಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು (ಶನಿವಾರ) ಸಂಜೆ ಸಂಭವಿಸಿದೆ

ಅಬೂಬಕರ್ ಎಂಬುವವರ ಪುತ್ರರಾದ ಮುಸಮ್ಮಿಲ್ (14 ವರ್ಷ – 8ನೇ ತರಗತಿ) ಮತ್ತು ಮುನ್ಸಿರ್ (10 ವರ್ಷ – 5ನೇ ತರಗತಿ) ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಇವರ ನೆರೆಮನೆಯ 9 ವರ್ಷದ ಮತ್ತೊಬ್ಬ ಬಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಮೃತ ಬಾಲಕರು ಸ್ಥಳೀಯ ಅಡೂರು ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ .

ಘಟನೆಯ ವಿವರ: ಶಾಲಾ ರಜಾದಿನಗಳ ಹಿನ್ನೆಲೆಯಲ್ಲಿ ಈ ಮಕ್ಕಳು ತಮ್ಮ ಮನೆಯ ಸಮೀಪದ ರಸ್ತೆ ಬದಿಯಲ್ಲಿದ್ದ ಬಸ್ ಕಾಯುವ ನಿಲ್ದಾಣದ (Bus Waiting Shed) ಬಳಿ ಆಟವಾಡುತ್ತಾ ಪುಟ್ಟದೊಂದು ತಾತ್ಕಾಲಿಕ ಅಂಗಡಿಯನ್ನು ಇಟ್ಟುಕೊಂಡಿದ್ದರು . ಇಂದು ಸಂಜೆ ಕರಾವಳಿ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಕಾರಣ ಮೂವರೂ ಮಕ್ಕಳು ಅದೇ ಶೆಡ್‌ನ ಒಳಗೆ ಕುಳಿತಿದ್ದರು . ಈ ವೇಳೆ ಮಳೆಯ ತೀವ್ರತೆಗೆ ರಸ್ತೆಗಿಂತ ಎತ್ತರದಲ್ಲಿದ್ದ ಇವರ ಮನೆಯ ದೊಡ್ಡ ಕಾಂಪೌಂಡ್ ಗೋಡೆಯು ಏಕಾಏಕಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ .

ಗೋಡೆಯ ಭಾರಿ ಗಾತ್ರದ ಕಲ್ಲುಗಳು ಮತ್ತು ಮಣ್ಣು ನೇರವಾಗಿ ಬಸ್ ಶೆಡ್ ಹಾಗೂ ಅದರೊಳಗಿದ್ದ ಮಕ್ಕಳ ಮೇಲೆ ಬಿದ್ದಿದೆ . ಮಣ್ಣಿನ ರಾಶಿಯಡಿ ಸಿಲುಕಿದ ಮಕ್ಕಳನ್ನು ತಕ್ಷಣವೇ ಸ್ಥಳೀಯರು ರಕ್ಷಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ಕೊಂಡೊಯ್ದರಾದರೂ, ಇಬ್ಬರು ಸಹೋದರರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು . ಸದ್ಯ ಗಾಯಗೊಂಡ ಮತ್ತೊಬ್ಬ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯಿಂದ ಅಡೂರು ಗ್ರಾಮದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ






Continue Reading

DEATH

ಕಣಜದ ಹುಳು ಕಡಿದು ಶಿಕ್ಷಕ ದಾರುಣ ಸಾವು; ಕೃಷಿ ಭೂಮಿ ಸ್ವಚ್ಛಗೊಳಿಸುವಾಗ ನಡೆದ ದಾಳಿ

Published

on

ಕಾಸರಗೋಡು: ಕೃಷಿ ಜಾಗದ ಪೊದೆ ಕಾಡು ಕಡಿದು ಶುಚೀಕರಿಸುವಾಗ ಕಣಜದ ಹುಳುಗಳ ದಾಳಿಗೆ ಒಳಗಾಗಿ ಶಿಕ್ಷಕರೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಬಳಾಂತೋಡು ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ, ಕಾಞಂಗಾಡು ಚಾಮುಂಡಿಕುನ್ನ್ ನಿವಾಸಿ ವಿಜಯನ್ ಮಾಸ್ತರ್ (56) ಮೃತಪಟ್ಟವರು.

ಘಟನೆ ವಿವರ
ಇಂದು ಬೆಳಿಗ್ಗೆ ವಿಜಯನ್ ಮಾಸ್ತರ್ ತಮ್ಮ ಭೂಮಿಯನ್ನು ಕಾರ್ಮಿಕರೊಂದಿಗೆ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಮಣ್ಣಿನ ಹುತ್ತದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು ಏಕಾಏಕಿ ಗುಂಪಾಗಿ ದಾಳಿ ನಡೆಸಿವೆ.

ಕಣಜದ ಹುಳುಗಳ ತೀವ್ರ ದಾಳಿಗೆ ಒಳಗಾದ ವಿಜಯನ್ ಮಾಸ್ತರ್‌ರನ್ನು ಕೂಡಲೇ ಬಂದಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನಾಲ್ವರು ಕಾರ್ಮಿಕರಿಗೆ ಗಾಯ
ಇವರ ಜೊತೆಗಿದ್ದ ನಾಲ್ವರು ಕಾರ್ಮಿಕರೂ ಕಣಜದ ಹುಳು ಕಡಿತಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ.

ಈ ಅಧ್ಯಯನ ವರ್ಷವೇ ಸೇವಾ ನಿವೃತ್ತಿ ಪಡೆಯಲು ಸಿದ್ಧತೆಯಲ್ಲಿದ್ದ ವಿಜಯನ್ ಮಾಸ್ತರ್ ದಾರುಣವಾಗಿ ಮೃತಪಟ್ಟಿರುವುದು ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಊರವರನ್ನು ಕಣ್ಣೀರಲ್ಲಿ ಮುಳುಗಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿತ್ತು ಎಂದು ಸ್ಥಳೀಯರು ಕಂಬನಿ ಮಿಡಿದಿದ್ದಾರೆ.



Continue Reading

accident

ವೈದ್ಯ ಪವಾಡಸದೃಶ ಪಾರು; ಚಲಿಸುವ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ಜಖಂ

Published

on

ಪೆರ್ಲ: ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಮಣಿಯಂಪಾರೆಯಲ್ಲಿ ಚಲಿಸುವ ಕಾರಿನ ಮೇಲೆ ಮರ, ವಿದ್ಯುತ್ ಕಂಬ ಹಾಗೂ ತಂತಿ ಕುಸಿದು ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಸೀತಾಂಗೋಳಿಯ ವೈದ್ಯ ಡಾ. ವಿಷ್ಣು ಪ್ರಸಾದ್ ಬರೆಕೆರೆ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೂದಲೆಳೆ ಅಂತರದಲ್ಲಿ ಜೀವದಾನ

ಸೀತಾಂಗೋಳಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಪೆರ್ಲ ನಿವಾಸಿ ಡಾ. ವಿಷ್ಣು ಪ್ರಸಾದ್ ಬರೆಕೆರೆ ಅವರೇ ಈ ಅಪಾಯದಿಂದ ಪಾರಾದವರು. ಇವರು ಯಕ್ಷಪ್ರೇಮಿ ಮತ್ತು ಯಕ್ಷ ಪ್ರೋತ್ಸಾಹಕರಾಗಿದ್ದಾರೆ. ಡಾ.ವಿಷ್ಣುಪ್ರಸಾದ್ ಬರೆಕೆರೆ ಕ್ಲಿನಿಕ್‌ನಿಂದ ಉಕ್ಕಿನಡ್ಕ ನೆಲ್ಲಿಕುಂಜದ ದೇವಸ್ಥಾನದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಭಾರಿ ಗಾಳಿಯ ಕಾರಣ ರಸ್ತೆ ಬದಿಯಲ್ಲಿದ್ದ ಮರವು ಹಠಾತ್ತನೆ ಕಾರಿನ ಮೇಲೆ ಉರುಳಿ ಬಿತ್ತು.

ವಿದ್ಯುತ್ ವ್ಯತ್ಯಯ ಮತ್ತು ಹಾನಿ

ಅಪಘಾತದ ತೀವ್ರತೆಗೆ ಕಾರು ಭಾರೀ ಪ್ರಮಾಣದಲ್ಲಿ ಅಪ್ಪಚ್ಚಿಯಾಗಿದೆ. ಕಾರಿನೊಳಗೆ ಸಿಲುಕಿಕೊಂಡಿದ್ದ ವೈದ್ಯರನ್ನು ಸ್ಥಳೀಯ ನಾಗರಿಕರು ಕೂಡಲೇ ಕಾರ್ಯಪ್ರವೃತ್ತರಾಗಿ ಹೊರತೆಗೆದು ರಕ್ಷಿಸಿದ್ದಾರೆ. ವೈದ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದೊಡ್ಡ ಅನಾಹುತ ತಪ್ಪಿದೆ.

ಮರ ಮತ್ತು ವಿದ್ಯುತ್ ಕಂಬ ಕುಸಿದ ಪರಿಣಾಮ ರಾತ್ರಿ ಸುದೀರ್ಘ ಕಾಲ ಪರಿಸರದ ವಿದ್ಯುತ್ ವಿತರಣೆ ಸ್ಥಗಿತಗೊಂಡಿತ್ತು. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಮಳೆಗಾಲದಲ್ಲಿ ರಸ್ತೆ ಬದಿಯ ಶಿಥಿಲ ಮರಗಳು ಹಾಗೂ ವಿದ್ಯುತ್ ಕಂಬಗಳ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.




Continue Reading

Trending

Copyright © 2025 Deevatige

error: Content is protected !!