Mangaluru
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ‘ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ’ ಹೆಸರಿಡಲು ಮನವಿ
ಮಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ನಿರ್ಮಾಣಕ್ಕೆ ಸ್ವಂತ ಜಾಗವನ್ನು ದಾನವಾಗಿ ನೀಡಿದ ಮಹಾನ್ ದೇಶಪ್ರೇಮಿ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಅವರ ಹೆಸರನ್ನು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ಗೆ ಮರುನಾಮಕರಣ ಮಾಡಬೇಕು ಹಾಗೂ ನಿಲ್ದಾಣದ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಕರ್ನಾಟಕ ಸರಕಾರದ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಜಿ ಮೇಯರ್ ಅನಂತ್ ಮೈಸೂರು ಆಗ್ರಹಿಸಿದ್ದಾರೆ.
ಆಗಸ್ಟ್ 2ರಂದು ಸಂಜೆ ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ಗೆ ಭೇಟಿ ನೀಡಿದ ಅವರು, ಗಾಣಿಗ ಸಮಾಜದ ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ರೈಲ್ವೇ ಕ್ಷೇತ್ರಾಧಿಕಾರಿ ರಾಕೇಶ್ ಕುಮಾರ್ ಪಾರಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅನಂತ್ ಮೈಸೂರು, “ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪನವರು ಗಾಣಿಗ (ಸಫಲಿಗ) ಸಮಾಜಕ್ಕೆ ಸೇರಿದವರಾಗಿದ್ದು, ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡವರು. ನಿಲ್ದಾಣ ನಿರ್ಮಾಣಕ್ಕೆ ತಮ್ಮದೇ ಜಾಗವನ್ನು ಕೊಡುಗೆಯಾಗಿ ನೀಡಿದ ಅವರ ಸ್ಮರಣಾರ್ಥ ನಿಲ್ದಾಣಕ್ಕೆ ಅವರ ಹೆಸರನ್ನಿಟ್ಟು, ಪ್ರತಿಮೆ ನಿರ್ಮಿಸುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ,” ಎಂದರು.

ಪಠ್ಯಪುಸ್ತಕದಲ್ಲೂ ವಿಷಯ ಸೇರ್ಪಡೆಯಾಗಲಿ: ಮೋಹಿತ್
ಅಜೇಯ ಭಾರತ ಸಂಸ್ಥಾಪಕ ಮೋಹಿತ್ ಬೆಂಗಳೂರು ಮಾತನಾಡಿ, “ಅತ್ತಾವರ ಎಲ್ಲಪ್ಪನವರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ, ಇಡೀ ದೇಶ ಹೆಮ್ಮೆ ಪಡುವ ವ್ಯಕ್ತಿತ್ವ. ನಿಲ್ದಾಣಕ್ಕೆ ಹೆಸರಿಡುವ ಜತೆಗೆ ಶಾಲಾ ಪಠ್ಯಪುಸ್ತಕಗಳಲ್ಲೂ ಅವರ ಹೋರಾಟದ ಹಾದಿಯ ವಿಷಯಗಳನ್ನು ಸೇರ್ಪಡೆಗೊಳಿಸಬೇಕು. ಈ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರವೇ ಕೇಂದ್ರ ರೈಲ್ವೇ ಸಚಿವ ವಿ. ಸೋಮಣ್ಣ ಅವರ ಗಮನಕ್ಕೂ ತರಲಾಗುವುದು,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾರಿಸ್ಟರ್ ಎಲ್ಲಪ್ಪ ಅವರ ಸೋದರಳಿಯ ಪ್ರಭಾಕರ್ ದಾಸ್, ದ.ಕ. ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಪುತ್ತೂರು ಗಾಣಿಗ ಯಾನೆ ಸಫಲಿಗರ ಸೇವಾ ಸಂಘದ ಲಕ್ಷ್ಮೀ ಪ್ರಸಾದ್ ಬೆಟ್ಟ, ಪ್ರೊ| ಸುರೇಶ್ ಕಟೀಲು, ಕಮಲಾಕ್ಷ ಉಳ್ಳಾಲ್, ರವೀಂದ್ರ ಟಿ. ಮಂಗಳೂರು, ಭರತ್ ಕುಮಾರ್ ಅತ್ತಾವರ, ಹರೀಶ್ ಮಂಜೇಶ್ವರ, ತಾರನಾಥ ಸುವರ್ಣ, ಪದ್ಮನಾಭ, ಕಾರ್ತಿಕ್ ಕಬಕ, ಪ್ರವನ್ ಮೆಲ್ಕಾರ್ ಉಪಸ್ಥಿತರಿದ್ದರು.
crime
ಮಂಗಳೂರಿನಲ್ಲಿ ಫಿಲ್ಮಿ ದರೋಡೆ: ಬಸ್ ಇಳಿದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ₹1.15 ಕೋಟಿ ದರೋಡೆ!
ಮಂಗಳೂರು, ಅ.29: ಶಿವಮೊಗ್ಗದಿಂದ ಮಂಗಳೂರಿಗೆ ತರಲಾಗುತ್ತಿದ್ದ ₹1.15 ಕೋಟಿ ನಗದು ಹಣವನ್ನು ದರೋಡೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೆಎಸ್ಆರ್ಟಿಸಿ ಬಸ್ಸಿನಿಂದ ಇಳಿದ ಕೂಡಲೇ ವ್ಯಕ್ತಿಯನ್ನು ಅಪಹರಿಸಿ ನಗರದಾದ್ಯಂತ ಸುತ್ತಾಡಿಸಿ ಹಣ ಕಿತ್ತುಕೊಂಡು ಕಾವೂರಿನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಶಿವಮೊಗ್ಗ ಗಾಂಧಿ ಬಜಾರ್ ನಿವಾಸಿ ನಾಗರಾಜ್ ಎಂಬುವರ ಕೆಲಸದಾಳು ಸತ್ಯನಾರಾಯಣ ಅವರು ಅ.23ರಂದು 2 ಬ್ಯಾಗ್ಗಳಲ್ಲಿ ₹1 ಕೋಟಿ 15 ಲಕ್ಷ ಹಣವನ್ನು ಮಂಗಳೂರಿಗೆ ತರಲು ದಾವಣಗೆರೆಯಿಂದ ಹೊರಟಿದ್ದರು. ಅ.27ರ ರಾತ್ರಿ ದಾವಣಗೆರೆಯಿಂದ ಬಸ್ ಹತ್ತಿದ್ದ ಅವರು, ಅ.28ರ ಬೆಳಿಗ್ಗೆ 6 ಗಂಟೆಗೆ ಲಾಲ್ಬಾಗ್ ಬಳಿ ಬಸ್ ಇಳಿದಿದ್ದಾರೆ.
ಈ ವೇಳೆ ಕಪ್ಪು ಕಾರಿನಲ್ಲಿ ಮುಖಕ್ಕೆ ಮಫ್ಲರ್ ಕಟ್ಟಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಸತ್ಯನಾರಾಯಣ ಅವರನ್ನು ಬಲವಂತವಾಗಿ ಕಾರಿನಲ್ಲಿ ಎಳೆದು ಅಪಹರಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಮಂಗಳೂರು ನಗರದಾದ್ಯಂತ ಕಾರಿನಲ್ಲಿ ಸುತ್ತಾಡಿಸಿ, ಅವರ ಬಳಿ ಇದ್ದ 2 ಬ್ಯಾಗ್ ಹಣ ಮತ್ತು 2 ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ.
ನಂತರ ಬೆಳಿಗ್ಗೆ 8 ಗಂಟೆಗೆ ಕಾವೂರು ಬಸ್ ನಿಲ್ದಾಣದ ಬಳಿಯ ಗುಡ್ಡದ ಮೇಲೆ ಅವರನ್ನು ತಳ್ಳಿ, “ಪೊಲೀಸರಿಗೆ ಹೇಳಿದರೆ ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಈ ಸಂಬಂಧ ಮಂಗಳೂರು ಪೊಲೀಸರು ಬಿಎನ್ಎಸ್ ಕಾಯ್ದೆಯಡಿ ಅಪಹರಣ, ದರೋಡೆ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದು, ಕಪ್ಪು ಕಾರು ಮತ್ತು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಈ ದೊಡ್ಡ ಮೊತ್ತದ ಹಣದ ಸಾಗಾಟದ ಮಾಹಿತಿ ದರೋಡೆಕೋರರಿಗೆ ಮೊದಲೇ ಹೇಗೆ ಗೊತ್ತಾಯಿತು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
accident
ಮಂಗಳೂರು: ಮುಲ್ಕಿ ಕೊಲ್ನಾಡು ಬಳಿ ಶಾಲಾ ಬಸ್ಗೆ ಟೂರಿಸ್ಟ್ ಮಿನಿ ಬಸ್ ಡಿಕ್ಕಿ – ಚಾಲಕ, 13 ವಿದ್ಯಾರ್ಥಿಗಳಿಗೆ ಗಾಯ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೊಲ್ನಾಡು ಸುಂದರ ರಾಮ್ ಶೆಟ್ಟಿ ಕನ್ವೆನ್ಷನ್ ಹಾಲ್ ಮುಂಭಾಗ ರಾಯನ್ ಇಂಟರ್ನ್ಯಾಷನಲ್ ಶಾಲೆಯ ಬಸ್ಗೆ ಖಾಸಗಿ ಟೂರಿಸ್ಟ್ ಮಿನಿ ಬಸ್ಸೊಂದು ಹಿಂಭಾಗದಿಂದ ಡಿಕ್ಕ ಹೊಡೆದ ಪರಿಣಾಮ ಶಾಲಾ ಬಸ್ ಚಾಲಕ ಹಾಗೂ 13 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಘಟನೆಯ ವಿವರ:
ಅಕ್ಟೋಬರ್ 23, 2026ರ ಶುಕ್ರವಾರ ಸಂಜೆ ಸುಮಾರು 3:40 ಗಂಟೆಯ ವೇಳೆಗೆ ಕುಳಾಯಿಯ ರಾಯನ್ ಇಂಟರ್ನ್ಯಾಷನಲ್ ಶಾಲೆಯ ಬಸ್ (ಒಟ್ಟು 16 ಮಕ್ಕಳಿದ್ದರು) ಮಂಗಳೂರು ನಗರದ ಮುಲ್ಕಿ ಕೊಲ್ನಾಡು ಸುಂದರರಾಮ್ ಶೆಟ್ಟಿ ಸಭಾಂಗಣದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಮಕ್ಕಳನ್ನು ಇಳಿಸುತ್ತಿತ್ತು. ಈ ಸಂದರ್ಭದಲ್ಲಿ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಅತಿಯಾದ ವೇಗ, ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಬಂದ ಬೆಂಗಳೂರು ಮೂಲದ SRS ಟೂರಿಸ್ಟ್ ಮಿನಿ ಬಸ್ (ನೋಂದಣಿ ಸಂಖ್ಯೆ: KA-01-AR-1655) ಶಾಲಾ ಬಸ್ಸಿನ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಶಾಲಾ ಬಸ್ಸು ಸಮೀಪದ ಚರಂಡಿಗೆ ಬಿದ್ದಿದೆ. ಅಪಘಾತದಲ್ಲಿ ಶಾಲಾ ಬಸ್ಸಿನಲ್ಲಿದ್ದ 13 ವಿದ್ಯಾರ್ಥಿಗಳು ಹಾಗೂ ಬಸ್ ಚಾಲಕ ದೇವದಾಸ್ ಎಂಬವರಿಗೆ ಸಾಮಾನ್ಯ ಗಾಯಗಳಾಗಿವೆ.
ಆಸ್ಪತ್ರೆಗೆ ದಾಖಲು:
ಗಾಯಗೊಂಡ 13 ವಿದ್ಯಾರ್ಥಿಗಳು ಹಾಗೂ ಚಾಲಕ ದೇವದಾಸ್ ಅವರನ್ನು ತಕ್ಷಣವೇ ಮುಕ್ಕದ ಶ್ರೀನಿವಾಸ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ತನಿಖೆ:
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ (ಸಂಚಾರ) ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೂರಿಸ್ಟ್ ಮಿನಿ ಬಸ್ ಚಾಲಕ ದೇವರಾಜ್ ಎಂಬಾತನ ವಿರುದ್ಧ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 248/2026, ಕಲಂ 281, 125(ಎ) ಬಿ.ಎನ್.ಎಸ್. (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Entertainment
ದೈಗೋಳಿ ಶ್ರೀ ಸಾಯಿನಿಕೇತನ ಸೇವಾಶ್ರಮದಲ್ಲಿ ಅನ್ನದಾನ: ಡಾ. ಮಂಜುನಾಥ ಭಂಡಾರಿ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆ
ಗ್ರಾಮ ಸ್ವರಾಜ್ ಟ್ರಸ್ಟ್ ಮಂಗಳೂರು (ರಿ.) ವತಿಯಿಂದ ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷರಾದ ಶಾಸಕ ಡಾ. ಮಂಜುನಾಥ ಭಂಡಾರಿ ಅವರ ಹುಟ್ಟುಹಬ್ಬವನ್ನು ದೈಗೋಳಿಯ ಶ್ರೀ ಸಾಯಿನಿಕೇತನ ಸೇವಾಶ್ರಮದಲ್ಲಿ ವಿಶೇಷ ಅನ್ನದಾನ ಸೇವೆ ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸುಸಂದರ್ಭದಲ್ಲಿ ಖುದ್ದಾಗಿ ಉಪಸ್ಥಿತರಿದ್ದ ಡಾ. ಮಂಜುನಾಥ ಭಂಡಾರಿಯವರು ಆಶ್ರಮದ ಸಮಾಜಮುಖಿ ಹಾಗೂ ಮಾನವೀಯ ಕಾರ್ಯಚಟುವಟಿಕೆಗಳಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ತಮ್ಮ ವೈಯಕ್ತಿಕ ನೆಲೆಯಲ್ಲಿ ₹50,000 ಪ್ರೋತ್ಸಾಹಕ ದೇಣಿಗೆಯನ್ನು ಹಸ್ತಾಂತರಿಸಿದ ಅವರು, ಮುಂಬರುವ ದಿನಗಳಲ್ಲಿಯೂ ಆಶ್ರಮದ ಪ್ರತಿಯೊಂದು ಸತ್ಕಾರ್ಯಗಳಿಗೆ ಅಗತ್ಯವಿರುವ ಸಕಲ ಬೆಂಬಲ ಹಾಗೂ ಸಹಕಾರ ನೀಡುವ ಭರವಸೆಯನ್ನು ನೀಡಿದರು.

ಈ ಮಂಗಳಕರ ಕಾರ್ಯಕ್ರಮದಲ್ಲಿ ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ) ಮಂಗಳೂರು ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಟ್ರಸ್ಟ್ನ ಕೋಶಾಧಿಕಾರಿ ಹಾಗೂ ಮಾಜಿ ಕಾರ್ಪರೇಟರ್ ಪ್ರವೀಣ್ ಚಂದ್ರ ಆಳ್ವ, ಮಂಗಳೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಸುರೇಂದ್ರ ಕಂಬಳಿ, ಮಾಜಿ ಮೇಯರ್ ಮಹಾಬಲ ಮಾರ್ಲ ಹಾಗೂ ಟ್ರಸ್ಟ್ ಕಾರ್ಯದರ್ಶಿ ಲಾರೆನ್ಸ್ ಡಿ ಸೋಜಾ, ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕರಾದ ಅನಿಲ್ ಕುಮಾರ್ ಪ್ರಮುಖವಾಗಿ ಭಾಗವಹಿಸಿದ್ದರು. ಇವರೊಂದಿಗೆ ಪವಿತ್ರ ಪೂಂಜ ಕೊಡಂಗೆ, ಹಿರಿಯ ಪತ್ರಕರ್ತ ವಿ. ಟಿ. ಪ್ರಸಾದ್, ಮಂಗಳೂರಿನ ಸುನಿಲ್ ಪೂಜಾರಿ ಹಾಗೂ ರಾಕೇಶ್ ದೇವಾಡಿಗ, ಕುಂದಾಪುರದ ಇಚ್ಚಿತ್ ಶೆಟ್ಟಿ, ಉಡುಪಿಯ ರವಿ ಶೆಟ್ಟಿ ಸೇರಿದಂತೆ ಹಲವು ಪ್ರಮುಖ ಮುಖಂಡರು, ಆಶ್ರಮದ ಪದಾಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶ್ರೀ ಸಾಯಿ ನಿಕೇತನ ಸೇವಾಶ್ರಮದ ಡಾ. ಉದಯಕುಮಾರ್-ಡಾ. ಶಾರದಮ್ಮ ದಂಪತಿ ಮಂಜುನಾಥ ಭಂಡಾರಿಯವರ ಮುಂದಿನ ರಾಜಕೀಯ ಜೀವನ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
