Entertainment
ದೇಶದಲ್ಲಿ ಹೊಸ ಸಂಚಲನ: ಬಕ್ರೀದ್‌ಗೆ ‘ಗೋಹತ್ಯೆ’ ಮಾಡಲ್ಲ ಎಂದು ಒಕ್ಕೊರಲಿನಿಂದ ಘೋಷಿಸಿದ ಮುಸ್ಲಿಂ ಧರ್ಮಗುರುಗಳು!
ನವದೆಹಲಿ: ದಶಕಗಳಿಂದ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ತೀವ್ರ ಸಂಘರ್ಷ ಹಾಗೂ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಗೋಹತ್ಯೆ ವಿಚಾರದಲ್ಲಿ ಇದೀಗ ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತಿ ದೊಡ್ಡ ಮತ್ತು ಅಭೂತಪೂರ್ವ ತಿರುವು ಸಿಕ್ಕಿದೆ. “ನಾವು ಇನ್ಮುಂದೆ ಗೋಹತ್ಯೆ ಮಾಡುವುದಿಲ್ಲ; ಕೇಂದ್ರ ಸರ್ಕಾರ ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಲಿ” ಎಂದು ದೇಶದ ಪ್ರಮುಖ ಮುಸ್ಲಿಂ ಧರ್ಮಗುರುಗಳು ಹಾಗೂ ಪ್ರಭಾವಿ ಇಸ್ಲಾಮಿಕ್ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿವೆ.
ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ನಾಯಕರೇ ಸ್ವತಃ ಬೀದಿಗಿಳಿದು, ತಮ್ಮ ಸಮುದಾಯದ ಯುವಕರಿಗೆ ಹಸುಗಳನ್ನು ಬಲಿ ಕೊಡದಂತೆ ಕರೆ ನೀಡುತ್ತಿರುವುದು ದೇಶಾದ್ಯಂತ ಭಾರಿ ಸಂಚಲನ ಹಾಗೂ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಮುಸ್ಲಿಂ ಸಂಘಟನೆಗಳ ಪ್ರಮುಖ ನಾಯಕರ ಹೇಳಿಕೆಗಳು ಮತ್ತು ಆಗ್ರಹಗಳು:
ಮೌಲಾನ ಅರ್ಷದ್ ಮದನಿ (ಅಧ್ಯಕ್ಷರು, ಜಮಿಯತ್ ಉಲೇಮಾ ಎ ಹಿಂದ್): ಭಾರತದ ಅತ್ಯಂತ ಪ್ರಭಾವಿ ಮುಸ್ಲಿಂ ಸಂಘಟನೆಯಾದ ಜಮಿಯತ್ ಉಲೇಮಾ ಎ ಹಿಂದ್ ಮುಖ್ಯಸ್ಥರಾದ ಮೌಲಾನ ಅರ್ಷದ್ ಮದನಿ ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲಿನ ಬೇಡಿಕೆಯಿಟ್ಟಿದ್ದಾರೆ. “ಪ್ರಧಾನಿಯವರೇ, ನೀವು ನವಿಲನ್ನು ಹೇಗೆ ರಾಷ್ಟ್ರೀಯ ಪಕ್ಷಿ ಎಂದು ಘೋಷಿಸಿದ್ದೀರೋ, ಅದೇ ರೀತಿ ಹಸುವನ್ನು ಕೂಡ ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿ. ನಾವೆಲ್ಲರೂ ಅದನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಈ ಮೂಲಕ ಗೋಹತ್ಯೆಯ ಹೆಸರಿನಲ್ಲಿ ನಡೆಯುವ ಗುಂಪು ದಾಳಿಗಳಿಗೆ (ಮಾಬ್ ಲಿಂಚಿಂಗ್) ಶಾಶ್ವತ ಅಂತ್ಯ ಹಾಡಿ” ಎಂದು ಆಗ್ರಹಿಸಿದ್ದಾರೆ.
ಮೌಲಾನ ಶಹಾಬುದ್ದೀನ್ ರಿಜ್ವಿ (ಆಲ್ ಇಂಡಿಯಾ ಮುಸ್ಲಿಂ ಜಮಾತ್): ಗೋವಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನ ಸಿಗಬೇಕು ಎಂಬ ಮದನಿಯವರ ನಿಲುವನ್ನು ಬೆಂಬಲಿಸಿರುವ ಇವರು, ಮುಸ್ಲಿಂ ಸಮುದಾಯದ ಪರವಾಗಿ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಅಧಿಕೃತ ಮನವಿ ಪತ್ರ (ಮೆಮೋರಾಂಡಂ) ಸಲ್ಲಿಸುವುದಾಗಿ ಘೋಷಿಸಿದ್ದಾರೆ.
ಉಬೈದುಲ್ಲ ಕಾಸ್ಮಿ (ನಾಯಕರು, ಆಲ್ ಇಂಡಿಯಾ ಪಸ್ಮಾಂಡ ಉಲೇಮಾ ಬೋರ್ಡ್): ಮುಸ್ಲಿಂ ಯುವಕರಿಗೆ ಕಡಕ್ ಸಂದೇಶ ನೀಡಿರುವ ಇವರು, “ಕುರ್ಬಾನಿ ಎಂದರೆ ದೇವರ ಆರಾಧನೆ. ಇಸ್ಲಾಂ ಧರ್ಮದಲ್ಲಿ ಬಲಿ ಕೊಡಲು ಆಡು, ಕುರಿ ಅಥವಾ ಒಂಟೆಗಳ ಆಯ್ಕೆ ಇರುವಾಗ ಹಸುವನ್ನೇ ಏಕೆ ಕೊಲ್ಲಬೇಕು? ಎಲ್ಲಿ ಗೋಹತ್ಯೆ ನಿಷೇಧ ಕಾನೂನು ಬಿಗಿಯಾಗಿದೆಯೋ, ಅಲ್ಲಿ ಹಸುಗಳನ್ನು ಕೊಂದು ಮುಸ್ಲಿಂ ಯುವಕರು ಅನಾವಶ್ಯಕವಾಗಿ ಜೈಲಿಗೆ ಹೋಗಬೇಡಿ” ಎಂದು ಕಿವಿಮಾತು ಹೇಳಿದ್ದಾರೆ.
ಮೌಲಾನ ಯಾಸುಬ್ ಅಬ್ಬಾಸ್ (ಶಿಯಾ ಪರ್ಸನಲ್ ಲಾ ಬೋರ್ಡ್): “ನಮ್ಮ ಹಿಂದೂ ಸಹೋದರರು ಹಸುವನ್ನು ದೇವರಂತೆ ಪೂಜಿಸುತ್ತಾರೆ ಮತ್ತು ತಾಯಿಯ ಸ್ಥಾನ ನೀಡಿದ್ದಾರೆ. ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಹಸುವನ್ನು ಕೊಂದರೆ ಅವರ ಭಾವನೆಗಳಿಗೆ ಧಕ್ಕೆಯಾಗುತ್ತದೆ, ಆದ್ದರಿಂದ ದೇಶದಲ್ಲಿ ಗೋಹತ್ಯೆ ಸಂಪೂರ್ಣವಾಗಿ ಬಂದ್ ಆಗಬೇಕು” ಎಂದು ಪ್ರತಿಪಾದಿಸಿದ್ದಾರೆ.
ಸಿರಾಜ್ ಕುರೇಶಿ (ಅಧ್ಯಕ್ಷರು, ಕುರೇಶಿ ಜಮಾತ್ – ಮಾಂಸ ವ್ಯಾಪಾರಿಗಳ ಸಂಘಟನೆ): ಆಶ್ಚರ್ಯಕರವಾಗಿ, ಮಾಂಸದ ವ್ಯಾಪಾರದಲ್ಲಿ ತೊಡಗಿರುವ ಅತಿ ದೊಡ್ಡ ಸಂಘಟನೆಯ ಮುಖ್ಯಸ್ಥರಾದ ಸಿರಾಜ್ ಕುರೇಶಿ ಅವರು ಕೂಡ ಗೋಹತ್ಯೆ ನಿಲ್ಲಿಸುವ ಧರ್ಮಗುರುಗಳ ಈ ಐತಿಹಾಸಿಕ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಬದಲಾವಣೆಯ ಗಾಳಿ:
ಅಸ್ಸಾಂನಲ್ಲಿ ಮುಸ್ಲಿಂ ಸಮಿತಿಗಳ ಬಿಗಿ ನಿಯಮ: ಹಿಮಂತ ಬಿಸ್ವ ಶರ್ಮ ನೇತೃತ್ವದ ಅಸ್ಸಾಂನ ಬೊಂಗೈಗಾವ್, ದುಬ್ರಿ ಮತ್ತು ಕಚಾರ್ ಜಿಲ್ಲೆಗಳ ಇದ್ಕಾ ಕಮಿಟಿಗಳು (ಹಬ್ಬದ ಮೇಲ್ವಿಚಾರಣಾ ಸಮಿತಿಗಳು) ಕಟ್ಟುನಿಟ್ಟಿನ ಆದೇಶ ಹೊರಡಿಸಿವೆ. ಬಕ್ರೀದ್‌ಗೆ ಯಾರೂ ಗೋಹತ್ಯೆ ಮಾಡುವಂತಿಲ್ಲ. ಹಸುವಿನ ಮಾಂಸದ ಫೋಟೋ ಅಥವಾ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ, ಅಂತಹವರನ್ನು ಸ್ವತಃ ಮುಸ್ಲಿಂ ಸಮಿತಿಯವರೇ ಪೊಲೀಸರಿಗೆ ಹಿಡಿದುಕೊಡುವುದಾಗಿ ಎಚ್ಚರಿಸಿದ್ದಾರೆ. ಈ ಮಹತ್ತರ ಬದಲಾವಣೆಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಾದರಿ ಘಟನೆ: ಇಷ್ಟು ದಿನ ಗೋಹತ್ಯೆಯ ಪರ ಧ್ವನಿ ಎತ್ತುತ್ತಿದ್ದ ಎಜೆಯುಪಿ ನಾಯಕ ಹುಮಾಯುನ್ ಕಬೀರ್ ಅವರು ಯು-ಟರ್ನ್ ಹೊಡೆದಿದ್ದು, ಹಸುವನ್ನು ‘ಗೋಮಾತೆ’ ಎಂದು ಕರೆದಿದ್ದಾರೆ. ಇತ್ತೀಚೆಗೆ ಬಂಗಾಳದ ಮಗ್ರಹತ್ತ ಸಂತೆಯಲ್ಲಿ ಹಿಂದೂ ವ್ಯಾಪಾರಿಗಳು ಹಸುಗಳನ್ನು ಮಾರಲು ತಂದಾಗ, ಅಲ್ಲಿನ ಮುಸ್ಲಿಂ ಯುವಕರು “ನೀವು ಪೂಜಿಸುವ ಗೋಮಾತೆಯನ್ನು ನಮಗೆ ಕಡಿಯಲು ಏಕೆ ತಂದಿದ್ದೀರಿ? ನಾವು ಇನ್ನು ಮುಂದೆ ಹಸುಗಳನ್ನು ಖರೀದಿಸುವುದಿಲ್ಲ, ವಾಪಸ್ ಕೊಂಡೊಯ್ದು ಸಾಕಿ” ಎಂದು ಕಳುಹಿಸಿಕೊಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ.
ಇಸ್ಲಾಂ ಧರ್ಮಗ್ರಂಥ ಹಾಗೂ ಇತಿಹಾಸ ಏನು ಹೇಳುತ್ತದೆ?
ಇಸ್ಲಾಮಿಕ್ ಪಂಡಿತರ ಪ್ರಕಾರ, ಇಸ್ಲಾಂ ಧರ್ಮದಲ್ಲಿ ಹಸುವನ್ನೇ ಬಲಿ ಕೊಡಬೇಕೆಂದು ಎಲ್ಲಿಯೂ ಕಡ್ಡಾಯವಾಗಿ ಹೇಳಿಲ್ಲ. ಕುರಾನ್‌ನ ಅತಿ ದೊಡ್ಡ ಅಧ್ಯಾಯವಾದ ‘ಸೂರ್ ಅಲ್ ಬಕ್ರಾ’ ಎಂದರೆ ‘ಹಸು’ ಎಂದೇ ಅರ್ಥ. ಹದೀಸ್ ಪ್ರಕಾರ, ಹಸುವಿನ ಹಾಲು ಮತ್ತು ತುಪ್ಪ ಔಷಧಿಯ ಗುಣ ಹೊಂದಿದ್ದು, ಅದರ ಮಾಂಸ ರೋಗಕ್ಕೆ ಕಾರಣವಾಗಬಹುದು ಎನ್ನಲಾಗಿದೆ.
ಇತಿಹಾಸದಲ್ಲಿ ಮೊಘಲ್ ದೊರೆಗಳಾದ ಬಾಬರ್, ಅಕ್ಬರ್ ಮತ್ತು ಜಹಾಂಗೀರ್ ಕೂಡ ಹಿಂದೂಗಳ ಭಾವನೆಗೆ ಗೌರವ ಕೊಟ್ಟು ತಮ್ಮ ಆಡಳಿತದಲ್ಲಿ ಗೋಹತ್ಯೆಯನ್ನು ನಿಷೇಧಿಸಿದ್ದರು. ಜೊತೆಗೆ 1958ರ ‘ಮೊಹಮ್ಮದ್ ಹನೀಫ್ ಕುರೇಶಿ’ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ಕೂಡ “ಗೋಹತ್ಯೆ ಇಸ್ಲಾಂನ ಕಡ್ಡಾಯ ಆಚರಣೆಯಲ್ಲ” ಎಂದು ಸ್ಪಷ್ಟಪಡಿಸಿತ್ತು.

ಇದರ ಹಿಂದೆ ರಾಜಕೀಯ ತಂತ್ರ ಅಡಗಿದೆಯೇ?: ವಿಶ್ಲೇಷಕರ ಅಭಿಮತ
ಮುಸ್ಲಿಂ ನಾಯಕರ ಈ ದಿಢೀರ್ ಹೆಜ್ಜೆಯ ಹಿಂದೆ ಒಂದು ಮಾಸ್ಟರ್ ರಾಜಕೀಯ ರಣತಂತ್ರವೂ ಅಡಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ:
ಬಿಜೆಪಿಯ ಅಸ್ತ್ರಕ್ಕೆ ಬ್ರೇಕ್: ಇಷ್ಟು ದಿನ ಗೋಹತ್ಯೆ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಪಡೆಯುತ್ತಿದ್ದ ರಾಜಕೀಯ ಲಾಭ ಹಾಗೂ ಧ್ರುವೀಕರಣವನ್ನು ತಡೆಯಲು ಮುಸ್ಲಿಂ ನಾಯಕರು ಈ ತಂತ್ರ ಹೂಡಿದ್ದಾರೆ. ಮುಸ್ಲಿಮರೇ ಗೋಹತ್ಯೆ ಬೇಡ ಎಂದ ಮೇಲೆ ಬಿಜೆಪಿಗೆ ಈ ವಿಷಯದಲ್ಲಿ ಮಾತನಾಡಲು ರಾಜಕೀಯ ಜಾಗವಿರುವುದಿಲ್ಲ.
ಕೇಂದ್ರ ಸರ್ಕಾರಕ್ಕೆ ಧರ್ಮಸಂಕಟ: ಹಸುವನ್ನು ರಾಷ್ಟ್ರೀಯ ಪ್ರಾಣಿ ಮಾಡಿ ಎಂದು ಮುಸ್ಲಿಮರು ಬೇಡಿಕೆ ಇಟ್ಟಿರುವುದು ಬಿಜೆಪಿಗೆ ದೊಡ್ಡ ತಲೆನೋವಾಗಲಿದೆ. ಏಕೆಂದರೆ ಗೋವಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಅಲ್ಲಿ ಕ್ರೈಸ್ತರು ಹೆಚ್ಚಾಗಿದ್ದಾರೆ ಮತ್ತು ಗೋಮಾಂಸ ಸೇವನೆ ಸಾಮಾನ್ಯವಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿದರೆ, ಆ ರಾಜ್ಯಗಳಲ್ಲಿನ ಜನರು ಬಿಜೆಪಿ ವಿರುದ್ಧ ತಿರುಗಿಬೀಳುವ ಸಾಧ್ಯತೆಯಿದೆ.
ಒಟ್ಟಾರೆಯಾಗಿ, ಮುಸ್ಲಿಂ ಧರ್ಮಗುರುಗಳು ತೆಗೆದುಕೊಂಡಿರುವ ಈ ಐತಿಹಾಸಿಕ ನಿರ್ಧಾರವು ದೇಶದ ಧಾರ್ಮಿಕ ಹಾಗೂ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಹೊಸ ‘ಗೋಕ್ರಾಂತಿ’ ಭಾರತದಲ್ಲಿ ಕೋಮು ಸೌಹಾರ್ಧತೆಯ ಹೊಸ ಯುಗಕ್ಕೆ ನಾಂದಿ ಹಾಡಲಿದೆಯೇ ಅಥವಾ ಕೇವಲ ರಾಜಕೀಯ ತಂತ್ರವಾಗಿ ಉಳಿಯಲಿದೆಯೇ ಎಂಬುದನ್ನು ಮುಂಬರುವ ದಿನಗಳೇ ನಿರ್ಧರಿಸಬೇಕಿದೆ.



Bantawala
ದಕ್ಷಿಣಗಾಣಗಾಪುರ ಒಡಿಯೂರಿನಲ್ಲಿ ಶ್ರೀಗಳವರ ಜನ್ಮದಿನೋತ್ಸವ ಹಾಗೂ ‘ಗ್ರಾಮೋತ್ಸವ-2026’: ವೈಭವದ ಗುರುವಂದನೆ – ಸೇವಾ ಸಂಭ್ರಮ
ಆಗಸ್ಟ್ 8ರಂದು ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸೇವಾಸಂಭ್ರಮ | ಬೆಳ್ಳಿರಥೋತ್ಸವ, ಪಾದಪೂಜೆ, ತುಲಾಭಾರ ಸೇವೆ
ವಿಟ್ಲ: ದಕ್ಷಿಣಗಾಣಗಾಪುರ ಎಂದೇ ಅಪಾರ ಭಕ್ತಾದಿಗಳಿಂದ ಶ್ರದ್ಧಾ-ಭಕ್ತಿಗಳಿಂದ ಪೂಜಿಸಲ್ಪಡುವ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ‘ಗ್ರಾಮೋತ್ಸವ-2026’ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದೊಂದಿಗೆ ‘ಗುರುವಂದನೆ-ಸೇವಾಸಂಭ್ರಮ’ವಾಗಿ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮವು ಆಗಸ್ಟ್ 08ರ ಶನಿವಾರದಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಅನುಗ್ರಹ ಸಂದೇಶ ಮತ್ತು ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಇವರ ದಿವ್ಯ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಮತ್ತು ಸಾಮಾಜಿಕ ಮಹೋತ್ಸವವು ನೆರವೇರಲಿದೆ.
ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳು ಬೆಳಿಗ್ಗೆ 8.00 ಗಂಟೆಯಿಂದಲೇ ಆರಂಭಗೊಳ್ಳಲಿದ್ದು, ಶ್ರೀ ಗಣಪತಿ ಹವನ ಹಾಗೂ ಮಹಾಪೂಜೆ ನಡೆಯಲಿದೆ. ತದನಂತರ ಬೆಳಿಗ್ಗೆ 9.00 ಗಂಟೆಯಿಂದ ಶ್ರೀ ರವಿರಾಜ್ ಒಡಿಯೂರು ಮತ್ತು ಬಳಗದವರಿಂದ ಭಕ್ತಿಪೂರ್ವಕ ನಾಮಸಂಕೀರ್ತನೆ ಜರುಗಲಿದೆ. ಬೆಳಿಗ್ಗೆ 9.30 ರಿಂದ ಪರಮಪೂಜ್ಯ ಶ್ರೀಗಳವರಿಗೆ ಭಕ್ತಾದಿಗಳಿಂದ ಪಾದಪೂಜೆ, ತುಲಾಭಾರ ಸೇವೆ ಮತ್ತು ಗುರುವಂದನೆ ನೆರವೇರಲಿದೆ. ಅಪರಾಹ್ನ 4.00 ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 7.00 ಗಂಟೆಗೆ ಶ್ರೀ ಸನ್ನಿಧಿಯಲ್ಲಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ, ಮಹಾಪೂಜೆ ನಡೆಯಲಿದೆ.
ಬೆಳಿಗ್ಗೆ 11.30ಕ್ಕೆ ಸರಿಯಾಗಿ ನಡೆಯಲಿರುವ ಭವ್ಯ ಸಭಾ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ರಾಜಕೀಯ, ಸಾಮಾಜಿಕ ಹಾಗೂ ಉದ್ಯಮ ರಂಗದ ಧುರೀಣರು ಭಾಗವಹಿಸಲಿದ್ದಾರೆ.
ಮಂಗಳೂರು ಸಂಸದ ಕ್ಯಾ| ಬ್ರಿಜೇಶ್ ಚೌಟ, ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ಆಡಳಿತ ನಿರ್ದೇಶಕ ಕೆ.ಕೆ. ಶೆಟ್ಟಿ, ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಮುಂಬೈ ಉದ್ಯಮಿ ರಘು ಎಲ್. ಶೆಟ್ಟಿ ದೇವಸ್ಯ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು., ಶಶಿ ಕ್ಯಾಟರಿಂಗ್ ಸರ್ವೀಸಸ್ ಇದರ ಆಡಳಿತ ನಿರ್ದೇಶಕರಾದ ಶಶಿಧರ ಬಿ. ಶೆಟ್ಟಿ ಬರೋಡ, ಹಿರಿಯ ವಕೀಲರಾದ ಶ್ಯಾಮ ಭಟ್ , ಪ್ರಗತಿಪರ ಕೃಷಿಕರಾದ ಶ್ಯಾಮ್ ಪ್ರಸಾದ್ ಕೊಣಲೆ, ಬಾಂಬೆ ಬಂಟ್ಸ್ ಎಸೋಸಿಯೇಷನ್ಸ್ ಮುಂಬೈ ಇದರ ಮಾಜಿ ಅಧ್ಯಕ್ಷರಾದ ಶ್ಯಾಮ ಎನ್. ಶೆಟ್ಟಿ , ಎಟಿಎಸ್ ದೋಹ ಕತಾರ್ ಆಡಳಿತ ನಿರ್ದೇಶಕರಾದ ರವಿಶೆಟ್ಟಿ ಮೂಡಂಬೈಲು ಹಾಗೂ ನವಿಮುಂಬೈ ಉದ್ಯಮಿ ಭಾಸ್ಕರ ಆರ್. ಶೆಟ್ಟಿ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಾದ ಗುಜರಾತ್ನ ಖ್ಯಾತ ಪರಿಸರವಾದಿ, ‘ಗ್ರೀನ್ ಹೀರೊ ಆಫ್ ಇಂಡಿಯಾ’ ಡಾ. ಆರ್.ಕೆ. ನಾಯರ್ ಅವರಿಗೆ ವಿಶೇಷ ಗೌರವಾಭಿನಂದನೆ ನೆರವೇರಲಿದೆ.
ಗ್ರಾಮೋತ್ಸವದ ವಿಶೇಷತೆಗಳು
ಕ್ಷೇತ್ರದ ಸಾಮಾಜಿಕ ಕಾಳಜಿಯ ಸಂಕೇತವಾಗಿರುವ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರಗಳು ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದರೊಂದಿಗೆ ವನಮಹೋತ್ಸವ ಆಚರಣೆ, ಭಕ್ತಾದಿಗಳಿಗೆ ಉಚಿತ ಸಸಿ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಅರ್ಹ ಬಡ ರೋಗಿಗಳಿಗೆ ವೈದ್ಯಕೀಯ ಶುಶ್ರೂಷೆಗೆ ಧನಸಹಾಯ ನೀಡುವ ಉದಾತ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜವನ್ನು ಸುಸ್ಥಿತಿಯಲ್ಲಿಡಲು ವಿವಿಧ ಸಂಘ-ಸಂಸ್ಥೆಗಳಿಂದ ಗುರುವಂದನೆ, ವ್ಯಸನಮುಕ್ತ ಸಮಾಜ ಜಾಗೃತಿ ಅಭಿಯಾನಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತಿದೆ.
ಈ ಪವಿತ್ರ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿ, ಶ್ರೀಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಹಾಗೂ ಒಡಿಯೂರು ಶ್ರೀ ಸಂಸ್ಥಾನಮ್ ಪ್ರಕಟಣೆಯಲ್ಲಿ ತಿಳಿಸಿದೆ
Entertainment
ಮೈಸೂರು ದಸರಾದಲ್ಲಿ ಈ ಬಾರಿ ಕಂಬಳ ವೈಭವ: ಶಾಸಕ ಅಶೋಕ್ ರೈಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ
ಪುತ್ತೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ಮತ್ತೊಂದು ಜಾನಪದ ಕಳೆ ಬರಲಿದೆ. ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಈ ಬಾರಿಯ ದಸರಾ ಮಹೋತ್ಸವದಲ್ಲಿ ಆಯೋಜಿಸುವಂತೆ ಮತ್ತು ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ನಡೆಸುವ ಮೂಲಕ ಈ ಗ್ರಾಮೀಣ ಕ್ರೀಡೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಹೆಗ್ಗಳಿಕೆ ಶಾಸಕ ಅಶೋಕ್ ರೈ ಅವರಿಗಿದೆ. ಕಳೆದ ಬಾರಿ ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಡಿ.ಕೆ. ಶಿವಕುಮಾರ್ ಅವರು ದಸರಾ ಕಂಬಳದ ಕುರಿತು ಪ್ರಸ್ತಾಪಿಸಿದ್ದರು. ಇದೀಗ ಮುಖ್ಯಮಂತ್ರಿಗಳೇ ಸ್ವತಃ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಿರುವುದರಿಂದ ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ನಡೆಯುವುದು ಖಚಿತವಾಗಿದೆ.
ಅಕ್ಟೋಬರ್ 18, 19 ರಂದು ಕಂಬಳ ಆಯೋಜನೆ
ಮೈಸೂರಿನ ಜಯಲಕ್ಷ್ಮೀಪುರಂನ ಪ್ರೀಮಿಯರ್ ಸ್ಟುಡಿಯೋ ಬಳಿ ಇರುವ ಸುಮಾರು 17 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಐತಿಹಾಸಿಕ ಕಂಬಳ ನಡೆಯಲಿದೆ. ಅಕ್ಟೋಬರ್ ತಿಂಗಳ 18 ಮತ್ತು 19 ರಂದು ಎರಡು ದಿನಗಳ ಕಾಲ ಈ ಕ್ರೀಡಾಕೂಟವನ್ನು ಆಯೋಜಿಸಲು ದಿನಾಂಕ ನಿಗದಿಪಡಿಸಲಾಗಿದೆ. ಈಗಾಗಲೇ ಕಂಬಳದ ಸಿದ್ಧತೆಗಳ ಕುರಿತು ಮೊದಲ ಸುತ್ತಿನ ಅಧಿಕಾರಿಗಳ ಸಭೆ ಮುಕ್ತಾಯಗೊಂಡಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಮೈಸೂರಿನಲ್ಲಿ ಅಧಿಕಾರಿಗಳ ಮಹತ್ವದ ಸಭೆ
ಮುಖ್ಯಮಂತ್ರಿಗಳ ಸೂಚನೆಯ ಬೆನ್ನಲ್ಲೇ ಮೈಸೂರಿನಲ್ಲಿ ಇಂದು ಅಧಿಕಾರಿಗಳು ಹಾಗೂ ಜಿಲ್ಲೆಯ ಕಂಬಳ ಪ್ರಮುಖರ ಸಭೆ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಮುಂದಿನ ಗುರುವಾರ ಮೈಸೂರಿನಲ್ಲಿ ಎರಡನೇ ಹಂತದ ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಶಾಸಕ ಅಶೋಕ್ ರೈ, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲಿದ್ದಾರೆ.
“ಬೆಂಗಳೂರು ಕಂಬಳದಂತೆ ಮೈಸೂರು ದಸರಾ ಕಂಬಳವೂ ವಿಶ್ವವಿಖ್ಯಾತಿ ಪಡೆಯಲಿದೆ” “ಕಳೆದ ಬಾರಿ ಡೆಪ್ಯುಟಿ ಸಿಎಂ ಆಗಿದ್ದಾಗ ಡಿ.ಕೆ. ಶಿವಕುಮಾರ್ ಅವರು ದಸರಾದಲ್ಲಿ ಕಂಬಳ ನಡೆಸಲು ಆಸಕ್ತಿ ತೋರಿದ್ದರು, ಆದರೆ ಕೊನೆಯ ಹಂತದಲ್ಲಿ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಮುಖ್ಯಮಂತ್ರಿಯಾಗಿ ಅವರೇ ಖುದ್ದಾಗಿ ಸೂಚನೆ ನೀಡಿದ್ದಾರೆ. ಕಂಬಳ ನಡೆಯುವುದು ನೂರಕ್ಕೆ ನೂರು ಖಚಿತ, ಜಾಗವೂ ನಿಗದಿಯಾಗಿದೆ. ಬೆಂಗಳೂರು ಕಂಬಳದ ಮಾದರಿಯಲ್ಲೇ ಮೈಸೂರು ದಸರಾ ಕಂಬಳವೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲಿದ್ದು, ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆಯನ್ನು ಜಗತ್ತಿಗೆ ಪರಿಚಯಿಸುವ ಸೌಭಾಗ್ಯ ನಮಗೆ ಸಿಕ್ಕಿದೆ.” – ಅಶೋಕ್ ರೈ, ಶಾಸಕರು, ಪುತ್ತೂರು



Bantawala
ಯಕ್ಷ ಚಿಗುರು ಕಲಾತಂಡದ 7ನೇ ವರ್ಷದ ಯಕ್ಷಗಾನ ಹಾಗೂ ನೃತ್ಯ ತರಗತಿಗಳ ಅದ್ಧೂರಿ ಉದ್ಘಾಟನೆ
ಅಡ್ಯಾಲು ಅಜಿಲಮೊಗರು: ಮಕ್ಕಳಲ್ಲಿ ಯಕ್ಷಗಾನ ಮತ್ತು ಸಾಂಸ್ಕೃತಿಕ ಕಲೆಗಳನ್ನು ಬೆಳೆಸುವ ಉದಾತ್ತ ಉದ್ದೇಶದಿಂದ ನಿರಂತರವಾಗಿ ಶ್ರಮಿಸುತ್ತಿರುವ ಇಲ್ಲಿನ ಪ್ರಸಿದ್ಧ ‘ಯಕ್ಷ ಚಿಗುರು ಕಲಾತಂಡ’ದ 7ನೇ ವರ್ಷದ ಯಕ್ಷಗಾನ ಹಾಗೂ ನೃತ್ಯ ತರಗತಿಗಳ ಉದ್ಘಾಟನಾ ಸಮಾರಂಭವು ಕಲಾತಂಡದ ನಾರಾಯಣ ಗುರುವೇದಿಕೆಯಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಪೂಜಾರಿ ಮಜಲು ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಯಾಣಿ ಕ್ಯಾಟರಿಂಗ್ನ ಮಾಲಕರಾದ ಲೋಕೇಶ್ ಪೂಜಾರಿ, ಬ್ರಹ್ಮಶ್ರೀ ವೆಲ್ಡಿಂಗ್ನ ಮಾಲಕರಾದ ಪ್ರಶಾಂತ್, ಪ್ರಮುಖರಾದ ಮಧುಶ್ರೀ ಮೇಗಿನಮನೆ ಹಾಗೂ ಶಶಿಕಲಾ ತಿಂಗಳಾಡಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಲಾತಂಡದ ಸ್ಥಾಪಕರಾದ ನವೀನ್ ಶಾಂತಿ ಮತ್ತು ಯಕ್ಷ ಗುರುಗಳಾದ ಶಶಿಧರ್ ಬಾಚಕೆರೆ ಅವರು ಉಪಸ್ಥಿತರಿದ್ದು, ತರಗತಿಗೆ ಸೇರ್ಪಡೆಗೊಂಡ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅತಿಥಿಗಳ ಅನಿಸಿಕೆ: “ಯಕ್ಷಗಾನ ಮತ್ತು ನೃತ್ಯದಂತಹ ಸಾಂಸ್ಕೃತಿಕ ಕಲೆಗಳು ನಮ್ಮ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಇಂತಹ ತರಗತಿಗಳ ಮೂಲಕ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ, ಅವರಲ್ಲಿ ಉತ್ತಮ ಸಂಸ್ಕಾರದ ಅರಿವು ಮೂಡಿಸುತ್ತಿರುವ ಯಕ್ಷ ಚಿಗುರು ಕಲಾತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ” ಎಂದು ಅತಿಥಿಗಳು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟರು.
ಪ್ರಮೋದ್ ಬೊಲ್ಲುಕಲ್ಲು ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸಮಗ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಧನ್ಯವಾದ ಸಮರ್ಪಣೆ ಮಾಡಿದರು.
ಈ ಸಾಂಸ್ಕೃತಿಕ ವಿದ್ಯಾರಂಭದ ಶುಭ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಪೋಷಕರು, ಕಲಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
