cyber crime
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ: ಕಾಸರಗೋಡು ಗಣೇಶ್ ಪ್ರಸಾದ್ ಮಂಗಳೂರು ಪೊಲೀಸರ ವಶಕ್ಕೆ
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/03/3-12-1000x600.jpg&description=ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ: ಕಾಸರಗೋಡು ಗಣೇಶ್ ಪ್ರಸಾದ್ ಮಂಗಳೂರು ಪೊಲೀಸರ ವಶಕ್ಕೆ', 'pinterestShare', 'width=750,height=350'); return false;" title="Pin This Post">
ಸೌಹಾರ್ದತೆಯ ತಾಣವಾದ ಕರಾವಳಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ದ್ವೇಷ ಬಿತ್ತಲು ಯತ್ನಿಸುವವರ ವಿರುದ್ಧ ಮಂಗಳೂರು ಪೊಲೀಸರು ಕಠಿಣ ಕ್ರಮ ಮುಂದುವರಿಸಿದ್ದಾರೆ. ಜನವರಿ ತಿಂಗಳಿನಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋಗೆ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಕಮೆಂಟ್ ಹಾಕಿದ ಆರೋಪದ ಮೇಲೆ ಕಾಸರಗೋಡು ಮೂಲದ ವ್ಯಕ್ತಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿ ತಿಂಗಳಿನಲ್ಲಿ ಮಂಗಳೂರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ‘ಕಿರಾತ್’ (ಕುರಾನ್ ಪಠಣ) ಸ್ಪರ್ಧೆ ನಡೆದಿತ್ತು. ಈ ಕಾರ್ಯಕ್ರಮದ ವಿಡಿಯೋವನ್ನು ಪ್ರಮುಖ ಮಾಧ್ಯಮ ಸಂಸ್ಥೆಯಾದ ‘ಉದಯವಾಣಿ’ ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಸಾರ ಮಾಡಿತ್ತು. ಈ ವಿಡಿಯೋದ ಅಡಿಯಲ್ಲಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ನಿವಾಸಿ ಎಸ್ ಎನ್ ಕಬನುರಾಯ ಅವರ ಮಗ ಗಣೇಶ್ ಪ್ರಸಾದ್ (41 ವರ್ಷ) ಎಂಬಾತನು ತನ್ನ ಫೇಸ್‌ಬುಕ್ ಖಾತೆಯಿಂದ ಅತ್ಯಂತ ಪ್ರಚೋದನಕಾರಿ ಕಮೆಂಟ್ ಮಾಡಿದ್ದನು.“ಮಕ್ಕಳ ತಲೆಯನ್ನು ಬ್ರೈನ್ ವಾಶ್ ಮಾಡಿ ನಾಳೆ ದೇಶಕ್ಕೆ ಬಾಂಬ್ ಇಡೋಕೆ ಕಳಿಸೋದು ಅಷ್ಟೇ” ಎಂಬ ವಿವಾದಾತ್ಮಕ ಹೇಳಿಕೆಯನ್ನು ಪೋಸ್ಟ್ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಮತ್ತು ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕಲು ಯತ್ನಿಸಿದ ಆರೋಪ ಇವನ ಮೇಲಿದೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 15/2026 ರಂತೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಾರ್ಚ್ 27ರಂದು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಕಲಂ 196 BNS (Bharatiya Nyaya Sanhita): ಧರ್ಮ, ಜಾತಿ ಅಥವಾ ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು. ಮತ್ತು ಕಲಂ 66 IT ಕಾಯ್ದೆ: ಮಾಹಿತಿ ತಂತ್ರಜ್ಞಾನ ದುರ್ಬಳಕೆ. ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ನಮ್ಮ ಕರಾವಳಿ ಭಾಗವು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿನ ಶಾಂತಿ ಕದಡಲು ಸಣ್ಣದೊಂದು ಕಿಡಿ ಸಾಕು ಎನ್ನುವುದನ್ನು ಸಮಾಜಘಾತುಕ ಶಕ್ತಿಗಳು ಅರಿತಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕಮೆಂಟ್ ಮಾಡುವ ಮುನ್ನ ಯೋಚಿಸಿರಿ, ನಿಮ್ಮ ಒಂದು ಕಮೆಂಟ್ ಅಥವಾ ಶೇರ್ ಸಮಾಜದ ಶಾಂತಿಯನ್ನು ಹಾಳುಗೆಡವಬಹುದು ಮತ್ತು ನಿಮ್ಮನ್ನು ಜೈಲು ಪಾಲಾಗಿಸಬಹುದು. ಯಾವುದೇ ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಸಿ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ ಇರಲಿ.ಸೈಬರ್ ಕ್ರೈಂ ವಿಭಾಗವು ಪ್ರತಿಯೊಂದು ಪೋಸ್ಟ್ ಮತ್ತು ಕಮೆಂಟ್‌ಗಳ ಮೇಲೆ ತೀವ್ರ ನಿಗಾ ಇರಿಸಿದೆ. ಅನಾಮಧೇಯ ಖಾತೆಗಳ ಮೂಲಕ ದ್ವೇಷ ಹರಡಿದರೂ ತಾಂತ್ರಿಕವಾಗಿ ಪತ್ತೆಹಚ್ಚುವುದು ಈಗ ಸುಲಭವಾಗಿದೆ. ಭಾವೋದ್ವೇಗಕ್ಕೆ ಒಳಗಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ. ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಕಾನೂನು ಉಲ್ಲಂಘಿಸುವವರ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
crime
ಯುಪಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ‘ಡಿಜಿಟಲ್ ಅರೆಸ್ಟ್’ ಭೀತಿಯಿಂದ ಗೃಹಿಣಿ ಆತ್ಮಹತ್ಯೆ; ಅಂತ್ಯಕ್ರಿಯೆ ವೇಳೆ ಬಯಲಾಯ್ತು ಸೈಬರ್ ಕ್ರಿಮಿನಲ್‌ಗಳ ಕೃತ್ಯ!
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ದುರಂತವೊಂದು ಸಂಭವಿಸಿದೆ. ಸೈಬರ್ ಅಪರಾಧಿಗಳ ‘ಡಿಜಿಟಲ್ ಅರೆಸ್ಟ್’ (Digital Arrest) ಜಾಲಕ್ಕೆ ಸಿಲುಕಿ ಭಯಭೀತರಾದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಏನಿದು ಘಟನೆ? ಮೃತ ಮಹಿಳೆಯನ್ನು ಶಾಂತಿ ಎಂದು ಗುರುತಿಸಲಾಗಿದೆ. ವಂಚಕರು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಆಕೆಗೆ ವಿಡಿಯೋ ಕಾಲ್ ಮಾಡಿ, ಆಕೆಯ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಅಥವಾ ಯಾವುದೋ ಕಾನೂನುಬಾಹಿರ ಕೃತ್ಯ ನಡೆದಿದೆ ಎಂದು ಬೆದರಿಸಿದ್ದಾರೆ. ಗಂಟೆಗಟ್ಟಲೆ ಆಕೆಯನ್ನು ‘ಡಿಜಿಟಲ್ ಬಂಧನ’ದಲ್ಲಿರಿಸಿ (ವಿಡಿಯೋ ಕಾಲ್‌ನಿಂದ ಕಟ್ ಆಗದಂತೆ ತಡೆದು) ತೀವ್ರ ಮಾನಸಿಕ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಇದರಿಂದ ತೀವ್ರವಾಗಿ ಹೆದರಿದ ಮಹಿಳೆ, ತನ್ನ ಮದುವೆಯ ವಾರ್ಷಿಕೋತ್ಸವಕ್ಕೆ ಒಂದು ದಿನ ಬಾಕಿ ಇರುವಾಗಲೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ತನ್ನ ಪತಿಗೆ ವಾಟ್ಸಾಪ್ ಸಂದೇಶ ಕಳುಹಿಸಿ, “ನನ್ನನ್ನು ಕ್ಷಮಿಸಿ, ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ಬರೆದಿದ್ದಾರೆ.
ದುರಂತ ಬಯಲಾದದ್ದು ಹೇಗೆ? ಮಹಿಳೆಯ ಅಂತ್ಯಕ್ರಿಯೆಯ ಸಮಯದಲ್ಲಿ ಆಕೆಯ ಮೊಬೈಲ್‌ಗೆ ಸತತವಾಗಿ ಕರೆಗಳು ಬಂದಾಗ ಕುಟುಂಬಸ್ಥರಿಗೆ ಅನುಮಾನ ಬಂದಿದೆ. ನಂತರ ಪರಿಶೀಲಿಸಿದಾಗ ಸೈಬರ್ ವಂಚಕರು ಆಕೆಯನ್ನು ಹೇಗೆ ಬೆದರಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಂತಹ ‘ಡಿಜಿಟಲ್ ಅರೆಸ್ಟ್’ ವಂಚನೆಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಅಪರಿಚಿತ ಕರೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂದರೇನು?
ಇದು ಸೈಬರ್ ವಂಚಕರ ಹೊಸ ತಂತ್ರವಾಗಿದ್ದು, ಸಂತ್ರಸ್ತರನ್ನು ಮನೆಯಿಂದ ಹೊರಬರದಂತೆ ಹೆದರಿಸಿ, ವಿಡಿಯೋ ಕರೆ ಮೂಲಕ ಪೊಲೀಸ್, ಸಿಬಿಐ ಅಥವಾ ಇಡಿ ಅಧಿಕಾರಿಗಳಂತೆ ನಟಿಸಿ, ಸುಳ್ಳು ಪ್ರಕರಣಗಳಲ್ಲಿ ಬಂಧಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಾರೆ.
ಎಚ್ಚರಿಕೆ:
ಪೊಲೀಸರು ಅಥವಾ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕರೆಗಳ ಮೂಲಕ ಅಥವಾ ವಾಟ್ಸಾಪ್‌ನಲ್ಲಿ ಯಾರನ್ನೂ ‘ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ. ಇಂತಹ ಕರೆಗಳು ಬಂದರೆ ತಕ್ಷಣವೇ 1930 ಗೆ ಕರೆ ಮಾಡಿ ಸೈಬರ್ ಕ್ರೈಮ್‌ಗೆ ದೂರು ನೀಡಿ.


cyber crime
AI ತಂತ್ರಜ್ಞಾನ ಬಳಸಿ ಕೋಮುದ್ವೇಷ ಹರಡುವ ವಿಡಿಯೋ ಹಂಚಿಕೆ: ಮಂಗಳೂರಿನ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ
ಮಂಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ವಿಡಿಯೋ ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಟ್ವಾಳ ಮೂಲದ ವ್ಯಕ್ತಿಯೊಬ್ಬನನ್ನು ಕಂಕನಾಡಿ ನಗರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕುಡೆಲ್ ಹೌಸ್ ನಿವಾಸಿ ಮಹಮ್ಮದ್ ರಫೀಕ್ (38) ಎಂದು ಗುರುತಿಸಲಾಗಿದೆ. ಈತ ಫೇಸ್‌ಬುಕ್‌ನಲ್ಲಿ “ನಝೀರ ಮಂಗಳೂರು” ಎಂಬ ಹೆಸರಿನ ಖಾತೆಯ ಮೂಲಕ ವಿವಾದಾತ್ಮಕ ಕೃತ್ಯ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
2025ರ ಅಕ್ಟೋಬರ್‌ನಲ್ಲಿ ಆರೋಪಿಯು ತನ್ನ ಫೇಸ್‌ಬುಕ್ ಖಾತೆಯಲ್ಲಿ AI ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದನು. ಇದು ಸಮಾಜದಲ್ಲಿ ಶಾಂತಿ ಕದಡುವ ಮತ್ತು ಕೋಮು ಸಂಘರ್ಷಕ್ಕೆ ಪ್ರಚೋದಿಸುವ ಉದ್ದೇಶ ಹೊಂದಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಮಂಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196, 353(1), ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 22, 2026 ರಂದು ಬೆಂಗಳೂರಿನಲ್ಲಿ ಆತನನ್ನು ದಸ್ತಗಿರಿ ಮಾಡಿದ್ದಾರೆ. ಬಳಿಕ ಆತನನ್ನು ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
cyber crime
ನನ್ನನ್ನು ಗರ್ಭಿಣಿ ಮಾಡಿ: ಲಕ್ಷಾಂತರ ರೂ. ಹಣ ಗಳಿಸಿ- ಜಾಹೀರಾತುಗಳಿಗೆ ಬಲಿಯಾಗದಿರಿ !
“ನನ್ನನ್ನು ಗರ್ಭಿಣಿ ಮಾಡಿ. ಲಕ್ಷಾಂತರ ರೂಪಾಯಿ ಗಳಿಸಿ..ಗರ್ಭಿಣಿ ಮಾಡಿದ್ರೆ 13 ಲಕ್ಷ ರೂ. + 2BHK ಫ್ಲಾಟ್ ಗಿಫ್ಟ್ !” ಎಂಬ ಆಕರ್ಷಣಿಯ ಜಾಹೀರಾತೊಂದು ವೈರಲ್ ಆಗಿದ್ದು, ಇದರ ಹಿಂದೆ ಹೋದವರು ಎಲ್ಲವನ್ನೂ ಕಳೆದುಕೊಂಡು ಯಾರಿಗೂ ಹೇಳಲಾರದೆ ಒದ್ದಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗುತ್ತಿರುವ ಒಂದು ಆಕರ್ಷಣೀಯ ಜಾಹೀರಾತಿನ ಆಫರ್‌ಗೆ ಮರುಳಾಗಿ ಸಾವಿರಾರು ಪುರುಷರು ಹಣ ಕಳೆದುಕೊಂಡಿದ್ದಾರೆ. ಇದು ಕೇವಲ ವಂಚನೆಯಾಗಿದ್ದು, ಬಿಹಾರದ ವಂಚಕರ ಗ್ಯಾಂಗ್‌ಗಳಿಂದ ನಡೆಯುತ್ತಿರುವ ಸೈಬರ್ ಕ್ರೈಂ ಎಂದು ಪೊಲೀಸರು ತಿಳಿಸಿದ್ದಾರೆ.

“ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್” ಅಥವಾ “ಪ್ರೆಗ್ನೆಂಟ್ ಸರ್ವಿಸ್” ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ವಂಚನೆಯು ದೇಶಾದ್ಯಂತ ಹರಡಿದೆ. ಬಿಹಾರದ ನವಾದಾ, ನಾಲಂದಾ ಜಿಲ್ಲೆಗಳಲ್ಲಿ ಪೊಲೀಸರು ಇಂತಹ ಗ್ಯಾಂಗ್‌ಗಳನ್ನು ಪತ್ತೆಹಚ್ಚಿ, ಹಲವು ಜನರನ್ನು ಬಂಧಿಸಿದ್ದಾರೆ. ವಂಚಕರು ಬ್ಯಾಂಕ್ ಖಾತೆಗಳ ಮೂಲಕ ಹಣ ಸಂಗ್ರಹಿಸುತ್ತಿದ್ದು, ಪೊಲೀಸರು ಈಗ ಖಾತೆಗಳ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.
ಸುಂದರ ಯುವತಿಯರ ಫೋಟೋಗಳು ಮತ್ತು ವಿಡಿಯೋಗಳೊಂದಿಗೆ ಪೋಸ್ಟ್ ಮಾಡಲಾದ ಈ ಜಾಹೀರಾತುಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್‌ನಲ್ಲಿ ಹರಿದಾಡುತ್ತಿವೆ. ಆಸೆಗೆ ಮರುಳಾದವರು ನೀಡಿದ ಸಂಪರ್ಕ ಸಂಖ್ಯೆಗೆ ಕರೆ ಮಾಡಿದರೆ, ವಂಚಕರು ನಯವಾಗಿ ಮಾತನಾಡಿ ಬಲೆಗೆ ಬೀಳಿಸುತ್ತಾರೆ. ಮೊದಲ ಹಂತದಲ್ಲಿ ರಿಜಿಸ್ಟ್ರೇಷನ್ ಫೀಸ್ ಎಂದು ₹20,000 (ಕೆಲವೊಮ್ಮೆ ₹799 ರಿಂದ ಆರಂಭ) ಕಟ್ಟುವಂತೆ ಒತ್ತಾಯಿಸುತ್ತಾರೆ. ಹಣ ಕಟ್ಟಿದ ಕೂಡಲೇ ವಂಚಕರ ಮೊಬೈಲ್ ಸ್ವಿಚ್ ಆಫ್. ಯಾವುದೇ ದೇಹ ಸುಖವಿಲ್ಲ, ಹಣವಿಲ್ಲ, ಫ್ಲಾಟ್ ಕೂಡ ಇಲ್ಲ. ಲಕ್ಷಾಂತರ ಹಣ ಕಳೆದುಕೊಂಡ ನತದೃಷ್ಟರು ಇಂತಹ ಜಾಹೀರಾತುಗಳನ್ನು ಹುಡುಕಾಡುತ್ತಲೇ ಇರುತ್ತಾರೆ.
ಅನೇಕ ರಾಜ್ಯಗಳಲ್ಲಿ ಇದೇ ರೀತಿಯ ವಂಚನೆಗಳು ಪತ್ತೆಯಾಗಿವೆ. ಹಣ ಕಳೆದುಕೊಂಡವರು ಮರ್ಯಾದೆಗಾಗಿ ದೂರು ನೀಡದೇ ಇರುವುದರಿಂದ ವಂಚಕರಿಗೆ ಇನ್ನಷ್ಟು ಬಲ ಸಿಗುತ್ತಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ, ಹಲವಾರು ರಾಜ್ಯಗಳಲ್ಲಿ ನಡೆದ ತನಿಖೆಗಳು ಅಖಿಲ ಭಾರತ ಗರ್ಭಿಣಿ ಉದ್ಯೋಗ ಸೇವೆ ಎಂದು ಕರೆಯಲ್ಪಡುವ ವಂಚನೆಯು 2022ರ ಕೊನೆಯಲ್ಲಿ ಅಥವಾ 2023ರ ಆರಂಭದಲ್ಲಿ ಬಿಹಾರದ ನವಾಡಾ ಜಿಲ್ಲೆಯಲ್ಲಿ ಹುಟ್ಟಿಕೊಂಡಿತು ಎಂದು ಬಹಿರಂಗಪಡಿಸಿವೆ. ವಂಚಕರು ಫೇಸ್‌ಬುಕ್, ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ನಿರುದ್ಯೋಗಿ ಅಥವಾ ನಿರ್ದಿಷ್ಟ ಪುರುಷರನ್ನು ಗುರಿಯಾಗಿಸಿಕೊಳ್ಳುತ್ತಾರೆ. ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯಾಗಿಸುವ ಮೂಲಕ 5 ರಿಂದ 25 ಲಕ್ಷ ರೂ.ಗಳವರೆಗೆ ಹಣ ಗಳಿಸಬಹುದು ಎಂದು ಹೇಳಿಕೊಳ್ಳುತ್ತಾರೆ.ಬ ಇಂತಹ ವಂಚನೆಗಳಿಗೆ ಬಲಿಯಾಗುವ ಜನರು ಪಾನ್, ಆಧಾರ್ ಮತ್ತು ಸೆಲ್ಫಿಗಳಂತಹ ವೈಯಕ್ತಿಕ ವಿವರಗಳನ್ನು ಸಲ್ಲಿಸಲು ಕೇಳಲಾಗುತ್ತದೆ. ನಂತರ ನೋಂದಣಿ, ಭದ್ರತಾ ಠೇವಣಿ, ತೆರಿಗೆಗಳು ಮತ್ತು ಹೋಟೆಲ್ ಬುಕಿಂಗ್‌ಗಳಂತಹ ಹಲವಾರು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ವಂಚಕರು ನಕಲಿ ಕಾನೂನು ದಾಖಲೆಗಳು, ಮಗುವಿನ ಜನನ ಒಪ್ಪಂದಗಳು ಮತ್ತು ನಕಲಿ ಸಹಿಗಳನ್ನು ಸಹ ಹಾಕಿ ವಿಶ್ವಾಸಾರ್ಹವೆಂದು ತೋರಿಸಿಕೊಳ್ಳುತ್ತಾರೆ. ನಂತರ, ಪೊಲೀಸ್ ಕ್ರಮದ ಮೂಲಕ ಹೆಚ್ಚಿನ ಹಣವನ್ನು ಸುಲಿಗೆ ಮಾಡಲು ಪ್ರಾರಂಭಿಸುತ್ತಾರೆ.
ಭಾರತದಾದ್ಯಂತ ನೂರಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ವಂಚನೆಗೊಳಗಾದ ಹಲವಾರು ಮಂದಿ ಮುಜುಗರದಿಂದ ದೂರು ನೀಡಲು ಹಿಂದೇಟು ಹಾಕುತ್ತಾರೆ. ಪೊಲೀಸ್ ಮೂಲಗಳು ಹೇಳುವಂತೆ ಈ ದಂಧೆಯು ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದೆ.
-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
