INCIDENT
ಪುಚ್ಚೆಮೊಗರು: ದೈವದ ಭಂಡಾರ ಮೆರವಣಿಗೆ ವೇಳೆ ಕಾಲುಸಂಕ ಕುಸಿತ – 8 ಮಂದಿಗೆ ಗಂಭೀರ ಗಾಯ
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/04/AAA-1000x600.jpg&description=ಪುಚ್ಚೆಮೊಗರು: ದೈವದ ಭಂಡಾರ ಮೆರವಣಿಗೆ ವೇಳೆ ಕಾಲುಸಂಕ ಕುಸಿತ – 8 ಮಂದಿಗೆ ಗಂಭೀರ ಗಾಯ', 'pinterestShare', 'width=750,height=350'); return false;" title="Pin This Post">
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪುಚ್ಚೆಮೊಗರು: ಮೂಡಬಿದಿರೆ ತಾಕೋಡೆ ಬರ್ಕೆ ಧರ್ಮನೇಮೋತ್ಸವದ ಅಂಗವಾಗಿ ನಡೆಯುತ್ತಿದ್ದ ದೈವದ ಭಂಡಾರ ಮೆರವಣಿಗೆ ವೇಳೆ ಭಾರೀ ಅವಘಡ ಸಂಭವಿಸಿದೆ. ಪುಚ್ಚೆಮೊಗರು ಗ್ರಾಮದ ಬಾವದಬೈಲಿನಲ್ಲಿ ಕಾಲುಸಂಕ ಏಕಾಏಕಿ ಮುರಿದು ಬಿದ್ದು 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವಿವರ:
ದೈವದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಕೊಂಬು, ಬ್ಯಾಂಡ್ ವಾದ್ಯಗಳ ಜೊತೆ ಭಕ್ತರು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಬಾವದಬೈಲು ಎಂಬಲ್ಲಿ ಸಣ್ಣ ಕಾಲುಸಂಕ ದಾಟುವಾಗ ಸಂಕ ಮುರಿದುಬಿದ್ದಿದೆ. ಪರಿಣಾಮ ಭಂಡಾರ ಹೊತ್ತ ಪಲ್ಲಕ್ಕಿ ಸಮೇತ ಭಕ್ತರು ಕೆಳಗೆ ಬಿದ್ದಿದ್ದಾರೆ.

ಸಂಕದ ಭಾರೀ ಗಾತ್ರದ ಬೀಮ್ ಪಲ್ಲಕ್ಕಿ ಹೊತ್ತವರ ಮೇಲೆಯೇ ಬಿದ್ದ ಪರಿಣಾಮ ಗಾಯದ ತೀವ್ರತೆ ಹೆಚ್ಚಾಗಿದೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಸುನಿಲ್ ಶೆಟ್ಟಿ ಮುಕಾಲ್ದಿ ಮಾರೂರು ಮತ್ತು ಲೋಕೇಶ್ ಭಂಡಾರಿ ಸೇರಿದ್ದಾರೆ.

ಮೊಗಮೂರ್ತಿಗಳಿಗೆ ಹಾನಿ: ದುರ್ಘಟನೆಯಲ್ಲಿ ಪಲ್ಲಕ್ಕಿಯಲ್ಲಿದ್ದ ದೈವದ ಮೊಗಮೂರ್ತಿಗಳು ಹಾಗೂ ಪವಿತ್ರ ಧಾರ್ಮಿಕ ಪರಿಕರಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.
ಘಟನೆಯ ಆತಂಕಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಕ್ತ ವಲಯದಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

INCIDENT
ಬಾವಿಗೆ ಇಳಿದು ಉಸಿರುಗಟ್ಟಿ ಕುಸಿದ ವ್ಯಕ್ತಿ: ಪತ್ನಿಯ ಸಮಯಪ್ರಜ್ಞೆ, ಅಗ್ನಿಶಾಮಕ ದಳದ ಸಾಹಸದಿಂದ ಬದುಕುಳಿದ ನವೀನ್!
ಸುಳ್ಯ: ಮುಂಗಾರು ಮಳೆ ಆರಂಭಕ್ಕೂ ಮುನ್ನ ಸ್ವಂತ ಮನೆಯ ಬಾವಿ ಸ್ವಚ್ಛಗೊಳಿಸಲು ಇಳಿದ ವ್ಯಕ್ತಿಯೊಬ್ಬರು ಆಮ್ಲಜನಕದ ಕೊರತೆಯಿಂದ ಬಾವಿಯೊಳಗೇ ಉಸಿರುಗಟ್ಟಿ ಕುಸಿದು ಬಿದ್ದು, ತದನಂತರ ಪತ್ನಿಯ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಕಾಲಿಕ ಸಾಹಸದಿಂದ ಪ್ರಾಣಾಪಾಯದಿಂದ ಪಾರಾದ ರೋಮಾಂಚನಕಾರಿ ಘಟನೆ ಸುಳ್ಯ ತಾಲೂಕಿನ ದುಗಲಡ್ಕ ಸಮೀಪದ ಕಂದಡ್ಕ ಎಂಬಲ್ಲಿ ನಡೆದಿದೆ.
ಕಂದಡ್ಕ ನಿವಾಸಿ ನವೀನ್ ಫೆರಾವೋ ಬದುಕುಳಿದ ಅದೃಷ್ಟವಂತ. ಅವರ ಪತ್ನಿ, ಸುಳ್ಯ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿರುವ ರೂತ್ ಮೇರಿ ಅವರ ಧೈರ್ಯ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಘಟನೆಯ ವಿವರ:
ಮಳೆಗಾಲ ಆರಂಭವಾಗುವ ಮುನ್ನ ಬಾವಿ ಕ್ಲೀನ್ ಮಾಡೋಣ ಎಂದು ನವೀನ್ ಅವರು ತಮ್ಮ ಮನೆಯ ಸುಮಾರು 40 ಅಡಿ ಆಳದ ಬಾವಿಗೆ ಹಗ್ಗದ ಸಹಾಯದಿಂದ ಇಳಿದಿದ್ದಾರೆ. ಬಾವಿಯ ತಳಭಾಗದ ಕೊನೆಯ ಎರಡು ರಿಂಗ್ಗಳು ಬಾಕಿ ಇರುವಾಗ ಅವರಿಗೆ ತೀವ್ರ ಆಮ್ಲಜನಕದ (Oxygen) ಕೊರತೆ ಉಂಟಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆ ಅರಿತ ನವೀನ್ ತಕ್ಷಣವೇ ವಾಪಸ್ ಮೇಲೆ ಬರಲು ಪ್ರಯತ್ನಿಸಿದರಾದರೂ, ಅಷ್ಟರಲ್ಲೇ ಪ್ರಜ್ಞೆ ತಪ್ಪಿ ಬಾವಿಯೊಳಗೆ ಕುಸಿದು ಬಿದ್ದಿದ್ದಾರೆ.

ಪತ್ನಿಯ ಸಮಯಪ್ರಜ್ಞೆ – ದೇವತೆಯಂತೆ ಬಂದ ಅಗ್ನಿಶಾಮಕ ದಳ:
ಬಾವಿಯ ಮೇಲಿದ್ದ ಮೌರಿಸ್ ಡಿಸೋಜಾ ಹಾಗೂ ನವೀನ್ ಅವರ ಮಾವ ಮಾರ್ಕ್ ಅವರು ತಕ್ಷಣವೇ ನವೀನ್ ಪತ್ನಿ ರೂತ್ ಮೇರಿ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೂತ್ ಮೇರಿ, ನೆರೆಹೊರೆಯವರನ್ನು ಕರೆಯುವುದರ ಜೊತೆಗೆ ಅತ್ಯಂತ ಜಾಣ್ಮೆಯಿಂದ ಅಗ್ನಿಶಾಮಕ ದಳಕ್ಕೆ ಮತ್ತು ತಾಲೂಕು ಆಸ್ಪತ್ರೆಯ ಸಿಬ್ಬಂದಿ ಲೀಲಾಧರ್ ಅವರಿಗೆ ಕರೆ ಮಾಡಿ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆ ಮಿಂಚಿನ ವೇಗದಲ್ಲಿ ಸ್ಥಳಕ್ಕೆ ಧಾವಿಸಿದ ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಆಮ್ಲಜನಕದ ಕವಚ ಧರಿಸಿ ಬಾವಿಯೊಳಗೆ ಇಳಿದು ಅತ್ಯಂತ ಸಾಹಸದಿಂದ ನವೀನ್ ಅವರನ್ನು ಮೇಲಕ್ಕೆ ಎತ್ತಿದ್ದಾರೆ.
ಜೀವರಕ್ಷಕವಾದ ಸಿಪಿಆರ್ (CPR) ಚಿಕಿತ್ಸೆ:
ಬಾವಿಯಿಂದ ಮೇಲಕ್ಕೆ ಎತ್ತಿದಾಗ ನವೀನ್ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆದರೆ ವೃತ್ತಿಯಿಂದ ನರ್ಸ್ ಆಗಿರುವ ಪತ್ನಿ ರೂತ್ ಮೇರಿ ಅವರು ಧೃತಿಗೆಡದೆ, ತಕ್ಷಣವೇ ಪತಿಗೆ ಪ್ರಥಮ ಚಿಕಿತ್ಸೆಯಾಗಿ ಸಿಪಿಆರ್ (CPR) ನೀಡಿದ್ದಾರೆ. ಇವರ ಸಕಾಲಿಕ ಸಿಪಿಆರ್ ಚಿಕಿತ್ಸೆಯ ಫಲವಾಗಿ ನವೀನ್ ತಕ್ಷಣವೇ ಉಸಿರಾಡಲು ಆರಂಭಿಸಿದ್ದಾರೆ.
ಆಸ್ಪತ್ರೆಯಲ್ಲಿ ಚುರುಕಿನ ಚಿಕಿತ್ಸೆ – ನವೀನ್ ಚೇತರಿಕೆ:
ಅಷ್ಟರಲ್ಲೇ ಸ್ಥಳಕ್ಕೆ ಆಗಮಿಸಿದ ‘ಶಿವ ಆಂಬುಲೆನ್ಸ್’ ಮೂಲಕ ನವೀನ್ ಅವರನ್ನು ತಕ್ಷಣವೇ ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ರೂತ್ ಮೇರಿ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಅಲ್ಲಿನ ಸಿಬ್ಬಂದಿ ಪ್ರೇಮಾವತಿ ಸಿಸ್ಟರ್ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಅತ್ಯಂತ ವೇಗವಾಗಿ ತುರ್ತು ಚಿಕಿತ್ಸೆ ನೀಡಿದ್ದರಿಂದ ನವೀನ್ ಅವರು ಪ್ರಾಣಾಪಾಯದಿಂದ ಪಾರಾಗಿ, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸ್ ಸಿಬ್ಬಂದಿಯವರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೃತಜ್ಞತೆ ಸಲ್ಲಿಕೆ: ಕರೆ ಮಾಡಿದ ತಕ್ಷಣವೇ ಓಡೋಡಿ ಬಂದು ಜೀವರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ, ಆಂಬುಲೆನ್ಸ್ ಚಾಲಕ ಹಾಗೂ ಮಾಲೀಕರ ಸಂಘದವರಿಗೆ, ಸುಳ್ಯ ತಾಲೂಕು ಆಸ್ಪತ್ರೆಯ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ, ಪೊಲೀಸ್ ಸಿಬ್ಬಂದಿಗೆ ಮತ್ತು ಸಂಕಷ್ಟದ ಸಮಯದಲ್ಲಿ ಹೆಗಲಿಗೆ ನಿಂತ ನೆರೆಹೊರೆಯ ಸಾರ್ವಜನಿಕರಿಗೆ ನವೀನ್ ಫೆರಾವೋ ಕುಟುಂಬಸ್ಥರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.



DEATH
ಕಾಸರಗೋಡು: ಅಡೂರಿನಲ್ಲಿ ಭೀಕರ ದುರಂತ; ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಸಹೋದರರು ಸಾವು, ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯ
ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಅಡೂರು ಸಮೀಪದ ಸಂಚಕ್ಕಡವ್ (ಪೊನೋರಂ) ಎಂಬಲ್ಲಿ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದು, ಇಬ್ಬರು ಸೋದರ ಸಂಬಂಧಿ ಬಾಲಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು (ಶನಿವಾರ) ಸಂಜೆ ಸಂಭವಿಸಿದೆ

ಅಬೂಬಕರ್ ಎಂಬುವವರ ಪುತ್ರರಾದ ಮುಸಮ್ಮಿಲ್ (14 ವರ್ಷ – 8ನೇ ತರಗತಿ) ಮತ್ತು ಮುನ್ಸಿರ್ (10 ವರ್ಷ – 5ನೇ ತರಗತಿ) ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಇವರ ನೆರೆಮನೆಯ 9 ವರ್ಷದ ಮತ್ತೊಬ್ಬ ಬಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಮೃತ ಬಾಲಕರು ಸ್ಥಳೀಯ ಅಡೂರು ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ .

ಘಟನೆಯ ವಿವರ: ಶಾಲಾ ರಜಾದಿನಗಳ ಹಿನ್ನೆಲೆಯಲ್ಲಿ ಈ ಮಕ್ಕಳು ತಮ್ಮ ಮನೆಯ ಸಮೀಪದ ರಸ್ತೆ ಬದಿಯಲ್ಲಿದ್ದ ಬಸ್ ಕಾಯುವ ನಿಲ್ದಾಣದ (Bus Waiting Shed) ಬಳಿ ಆಟವಾಡುತ್ತಾ ಪುಟ್ಟದೊಂದು ತಾತ್ಕಾಲಿಕ ಅಂಗಡಿಯನ್ನು ಇಟ್ಟುಕೊಂಡಿದ್ದರು . ಇಂದು ಸಂಜೆ ಕರಾವಳಿ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಕಾರಣ ಮೂವರೂ ಮಕ್ಕಳು ಅದೇ ಶೆಡ್ನ ಒಳಗೆ ಕುಳಿತಿದ್ದರು . ಈ ವೇಳೆ ಮಳೆಯ ತೀವ್ರತೆಗೆ ರಸ್ತೆಗಿಂತ ಎತ್ತರದಲ್ಲಿದ್ದ ಇವರ ಮನೆಯ ದೊಡ್ಡ ಕಾಂಪೌಂಡ್ ಗೋಡೆಯು ಏಕಾಏಕಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ .

ಗೋಡೆಯ ಭಾರಿ ಗಾತ್ರದ ಕಲ್ಲುಗಳು ಮತ್ತು ಮಣ್ಣು ನೇರವಾಗಿ ಬಸ್ ಶೆಡ್ ಹಾಗೂ ಅದರೊಳಗಿದ್ದ ಮಕ್ಕಳ ಮೇಲೆ ಬಿದ್ದಿದೆ . ಮಣ್ಣಿನ ರಾಶಿಯಡಿ ಸಿಲುಕಿದ ಮಕ್ಕಳನ್ನು ತಕ್ಷಣವೇ ಸ್ಥಳೀಯರು ರಕ್ಷಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ಕೊಂಡೊಯ್ದರಾದರೂ, ಇಬ್ಬರು ಸಹೋದರರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು . ಸದ್ಯ ಗಾಯಗೊಂಡ ಮತ್ತೊಬ್ಬ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯಿಂದ ಅಡೂರು ಗ್ರಾಮದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ



INCIDENT
2 ವಾರದಲ್ಲೇ 75 ಟನ್ ಚಿನ್ನ ಮಾರಿದ ಭಾರತ! ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್ಬಿಐ ಬಿಗ್ ಸ್ಟೆಪ್
ನವದೆಹಲಿ: ಮಧ್ಯಪ್ರಾಚ್ಯದಲ್ಲಿ (ವೆಸ್ಟ್ ಏಷ್ಯಾ) ಹೆಚ್ಚುತ್ತಿರುವ ಯುದ್ಧದ ಉದ್ವಿಗ್ನತೆ ಹಾಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿಯ ಮೌಲ್ಯದ ಭಾರಿ ಕುಸಿತವನ್ನು ನಿಯಂತ್ರಿಸಲು ಮತ್ತು ವಿದೇಶಿ ಕರೆನ್ಸಿ ಆಸ್ತಿಗಳನ್ನು ರಕ್ಷಿಸಲು ಆರ್ಬಿಐ ತನ್ನ ಸಂಗ್ರಹದಿಂದ ಕೇವಲ ಎರಡೇ ವಾರಗಳಲ್ಲಿ ಭಾರಿ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿದೆ ಎಂದು ವರದಿಯಾಗಿದೆ.
ಬ್ಲೂಮ್ಬರ್ಗ್ ಎಕನಾಮಿಕ್ಸ್ ಬಿಡುಗಡೆ ಮಾಡಿರುವ ಇತ್ತೀಚಿನ ಆರ್ಥಿಕ ವಿಶ್ಲೇಷಣೆಯ ಪ್ರಕಾರ, ಮೇ 22ಕ್ಕೆ ಕೊನೆಗೊಂಡ ಎರಡು ವಾರಗಳ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ಸುಮಾರು 12 ಬಿಲಿಯನ್ ಡಾಲರ್ (ಅಂದಾಜು 1.14 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಹತ್ತಿರಹತ್ತಿರ 75 ಟನ್ ಚಿನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವ ಸಾಧ್ಯತೆಯಿದೆ.
ಚಿನ್ನ ಮಾರಾಟಕ್ಕೆ ಪ್ರಮುಖ ಕಾರಣಗಳೇನು?
ರೂಪಾಯಿ ಮೌಲ್ಯದ ಕುಸಿತಕ್ಕೆ ಬ್ರೇಕ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ (Strait of Hormuz) ಮುಚ್ಚಲ್ಪಟ್ಟಿರುವುದರಿಂದ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಇದರಿಂದಾಗಿ ಭಾರತೀಯ ರೂಪಾಯಿಯ ಮೌಲ್ಯ ಡಾಲರ್ ಎದುರು ಭಾರಿ ಕುಸಿತ ಕಾಣುತ್ತಿದ್ದು, ಇದನ್ನು ನಿಯಂತ್ರಿಸಲು ಆರ್ಬಿಐ ಈ ಕ್ರಮಕ್ಕೆ ಮುಂದಾಗಿದೆ.
ವಿದೇಶಿ ಕರೆನ್ಸಿ ನಗದೀಕರಣ (Forex Liquidity): ಚಿನ್ನ ಮಾರಾಟ ಮಾಡಿದ ಅದೇ ಎರಡು ವಾರಗಳ ಅವಧಿಯಲ್ಲಿ ಆರ್ಬಿಐ ಸುಮಾರು 7.5 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ಕರೆನ್ಸಿ ಆಸ್ತಿಗಳನ್ನು (ಡಾಲರ್) ಖರೀದಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಚಿನ್ನದ ದಾಸ್ತಾನಿಗಿಂತ ತಕ್ಷಣವೇ ಬಳಸಬಹುದಾದ ಲಿಕ್ವಿಡ್ ನಗದು (ಡಾಲರ್) ಅತ್ಯಗತ್ಯವಾಗಿರುವುದರಿಂದ ಈ ಅದಲು-ಬದಲು ಪ್ರಕ್ರಿಯೆ ನಡೆದಿದೆ.
ತೈಲ ಆಮದು ವೆಚ್ಚದ ಹೊರೆ: ಭಾರತವು ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶವಾಗಿದೆ. ಯುದ್ಧದ ಬಿಕ್ಕಟ್ಟಿನಿಂದಾಗಿ ಹೆಚ್ಚುತ್ತಿರುವ ಕರೆಂಟ್ ಅಕೌಂಟ್ ಡೆಫಿಸಿಟ್ (ಚಾಲ್ತಿ ಖಾತೆ ಕೊರತೆ) ನಿಭಾಯಿಸಲು ವಿದೇಶಿ ವಿನಿಮಯ ನಿಧಿಯನ್ನು ಬಲಪಡಿಸುವುದು ಅನಿವಾರ್ಯವಾಗಿದೆ.
ಸುಂಕ ಹೆಚ್ಚಳದ ನಡುವೆಯೂ ಕುಸಿದ ಚಿನ್ನದ ದಾಸ್ತಾನು ಮೌಲ್ಯ!
ಆರ್ಥಿಕ ತಜ್ಞರ ಪ್ರಕಾರ, ಭಾರತ ಸರ್ಕಾರವು ಇತ್ತೀಚೆಗೆ ಮೌಲ್ಯಯುತ ಲೋಹಗಳ (ಚಿನ್ನ ಮತ್ತು ಬೆಳ್ಳಿ) ಮೇಲಿನ ಆಮದು ಸುಂಕವನ್ನು (Import Duty) ಭಾರಿ ಪ್ರಮಾಣದಲ್ಲಿ ಹೆಚ್ಚಿಸಿತ್ತು. ಸಾಮಾನ್ಯ ನಿಯಮಗಳ ಪ್ರಕಾರ ಆಮದು ಸುಂಕ ಹೆಚ್ಚಾದಾಗ ರಿಸರ್ವ್ ಬ್ಯಾಂಕ್ ಬಳಿ ಇರುವ ಚಿನ್ನದ ಮೌಲ್ಯ ತಾನಾಗಿಯೇ ವೃದ್ಧಿಸಬೇಕಿತ್ತು. ಆದರೆ, ಆರ್ಬಿಐನ ಚಿನ್ನದ ದಾಸ್ತಾನಿನ ಒಟ್ಟು ಮೌಲ್ಯದಲ್ಲಿ ಇಳಿಕೆ ಕಂಡುಬಂದಿರುವುದು, ಬ್ಯಾಂಕ್ ಸಕ್ರಿಯವಾಗಿ ಚಿನ್ನವನ್ನು ಮಾರಾಟ ಮಾಡಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಬ್ಲೂಮ್ಬರ್ಗ್ನ ಹಿರಿಯ ಭಾರತೀಯ ಆರ್ಥಿಕ ತಜ್ಞ ಅಭಿಷೇಕ್ ಗುಪ್ತಾ ವಿಶ್ಲೇಷಿಸಿದ್ದಾರೆ.
ಭಾರತದ ಬಳಿ ಸದ್ಯ ಎಷ್ಟಿದೆ ಚಿನ್ನ?
ಒಟ್ಟು ದಾಸ್ತಾನು: 2026ರ ಮಾರ್ಚ್ ಅಂತ್ಯದ ಅಧಿಕೃತ ವರದಿಯ ಪ್ರಕಾರ, ಆರ್ಬಿಐ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದ ದಾಸ್ತಾನನ್ನು ಹೊಂದಿತ್ತು.
ದೇಶದೊಳಗಿನ ಸುರಕ್ಷತೆ: ರಷ್ಯಾ-ಉಕ್ರೇನ್ ಯುದ್ಧದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ವಿದೇಶಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಎಚ್ಚೆತ್ತಿದ್ದ ಭಾರತ, ಬ್ಯಾಂಕ್ ಆಫ್ ಇಂಗ್ಲೆಂಡ್ನಲ್ಲಿದ್ದ ತನ್ನ ಚಿನ್ನವನ್ನು ಭಾರತಕ್ಕೆ ತರಲಾರಂಭಿಸಿತ್ತು. ಪ್ರಸ್ತುತ ಭಾರತದ ಶೇ. 77 ರಷ್ಟು ಚಿನ್ನದ ದಾಸ್ತಾನು ದೇಶದೊಳಗಿನ ಸುರಕ್ಷಿತ ತಿಜೋರಿಗಳಲ್ಲೇ ಇದೆ.
ತಾತ್ಕಾಲಿಕ ಕ್ರಮ: ತಜ್ಞರ ಪ್ರಕಾರ, ಆರ್ಬಿಐನ ಈ ಚಿನ್ನದ ಮಾರಾಟವು ಕೇವಲ ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಕೈಗೊಂಡ “ತಾತ್ಕಾಲಿಕ ನಗದು ನಿರ್ವಹಣಾ ಕ್ರಮ” (Temporary Liquidity Measure) ಆಗಿದೆಯೇ ಹೊರತು ಆರ್ಬಿಐ ತನ್ನ ಚಿನ್ನದ ನಿಧಿಯನ್ನು ಕಾಯಂ ಆಗಿ ಕಡಿಮೆ ಮಾಡುತ್ತಿಲ್ಲ. ಮಾರುಕಟ್ಟೆ ಯಥಾಸ್ಥಿತಿಗೆ ಮರಳಿದಾಗ ಆರ್ಬಿಐ ಮತ್ತೆ ಚಿನ್ನವನ್ನು ಖರೀದಿಸಲಿದೆ.
ರೂಪಾಯಿ ಮೌಲ್ಯವು ಇತ್ತೀಚೆಗೆ ಸಾರ್ವಕಾಲಿಕ ಕುಸಿತ ಕಂಡು ಪ್ರತಿ ಡಾಲರ್ಗೆ 96.92 ರ ಗಡಿ ತಲುಪಿತ್ತು. ಆದರೆ ಆರ್ಬಿಐನ ಈ ತಂತ್ರಗಾರಿಕೆಯ ಮಧ್ಯಪ್ರವೇಶದಿಂದಾಗಿ ರೂಪಾಯಿ ಸದ್ಯ ಇತರ ಏಷ್ಯನ್ ಕರೆನ್ಸಿಗಳಿಗಿಂತ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು, ಜೂನ್ ಆರಂಭದ ವೇಳೆಗೆ 95.17 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.



-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
