cyber crime
ನನ್ನನ್ನು ಗರ್ಭಿಣಿ ಮಾಡಿ: ಲಕ್ಷಾಂತರ ರೂ. ಹಣ ಗಳಿಸಿ- ಜಾಹೀರಾತುಗಳಿಗೆ ಬಲಿಯಾಗದಿರಿ !
“ನನ್ನನ್ನು ಗರ್ಭಿಣಿ ಮಾಡಿ. ಲಕ್ಷಾಂತರ ರೂಪಾಯಿ ಗಳಿಸಿ..ಗರ್ಭಿಣಿ ಮಾಡಿದ್ರೆ 13 ಲಕ್ಷ ರೂ. + 2BHK ಫ್ಲಾಟ್ ಗಿಫ್ಟ್ !” ಎಂಬ ಆಕರ್ಷಣಿಯ ಜಾಹೀರಾತೊಂದು ವೈರಲ್ ಆಗಿದ್ದು, ಇದರ ಹಿಂದೆ ಹೋದವರು ಎಲ್ಲವನ್ನೂ ಕಳೆದುಕೊಂಡು ಯಾರಿಗೂ ಹೇಳಲಾರದೆ ಒದ್ದಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗುತ್ತಿರುವ ಒಂದು ಆಕರ್ಷಣೀಯ ಜಾಹೀರಾತಿನ ಆಫರ್ಗೆ ಮರುಳಾಗಿ ಸಾವಿರಾರು ಪುರುಷರು ಹಣ ಕಳೆದುಕೊಂಡಿದ್ದಾರೆ. ಇದು ಕೇವಲ ವಂಚನೆಯಾಗಿದ್ದು, ಬಿಹಾರದ ವಂಚಕರ ಗ್ಯಾಂಗ್ಗಳಿಂದ ನಡೆಯುತ್ತಿರುವ ಸೈಬರ್ ಕ್ರೈಂ ಎಂದು ಪೊಲೀಸರು ತಿಳಿಸಿದ್ದಾರೆ.

“ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್” ಅಥವಾ “ಪ್ರೆಗ್ನೆಂಟ್ ಸರ್ವಿಸ್” ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ವಂಚನೆಯು ದೇಶಾದ್ಯಂತ ಹರಡಿದೆ. ಬಿಹಾರದ ನವಾದಾ, ನಾಲಂದಾ ಜಿಲ್ಲೆಗಳಲ್ಲಿ ಪೊಲೀಸರು ಇಂತಹ ಗ್ಯಾಂಗ್ಗಳನ್ನು ಪತ್ತೆಹಚ್ಚಿ, ಹಲವು ಜನರನ್ನು ಬಂಧಿಸಿದ್ದಾರೆ. ವಂಚಕರು ಬ್ಯಾಂಕ್ ಖಾತೆಗಳ ಮೂಲಕ ಹಣ ಸಂಗ್ರಹಿಸುತ್ತಿದ್ದು, ಪೊಲೀಸರು ಈಗ ಖಾತೆಗಳ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.
ಸುಂದರ ಯುವತಿಯರ ಫೋಟೋಗಳು ಮತ್ತು ವಿಡಿಯೋಗಳೊಂದಿಗೆ ಪೋಸ್ಟ್ ಮಾಡಲಾದ ಈ ಜಾಹೀರಾತುಗಳು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ನಲ್ಲಿ ಹರಿದಾಡುತ್ತಿವೆ. ಆಸೆಗೆ ಮರುಳಾದವರು ನೀಡಿದ ಸಂಪರ್ಕ ಸಂಖ್ಯೆಗೆ ಕರೆ ಮಾಡಿದರೆ, ವಂಚಕರು ನಯವಾಗಿ ಮಾತನಾಡಿ ಬಲೆಗೆ ಬೀಳಿಸುತ್ತಾರೆ. ಮೊದಲ ಹಂತದಲ್ಲಿ ರಿಜಿಸ್ಟ್ರೇಷನ್ ಫೀಸ್ ಎಂದು ₹20,000 (ಕೆಲವೊಮ್ಮೆ ₹799 ರಿಂದ ಆರಂಭ) ಕಟ್ಟುವಂತೆ ಒತ್ತಾಯಿಸುತ್ತಾರೆ. ಹಣ ಕಟ್ಟಿದ ಕೂಡಲೇ ವಂಚಕರ ಮೊಬೈಲ್ ಸ್ವಿಚ್ ಆಫ್. ಯಾವುದೇ ದೇಹ ಸುಖವಿಲ್ಲ, ಹಣವಿಲ್ಲ, ಫ್ಲಾಟ್ ಕೂಡ ಇಲ್ಲ. ಲಕ್ಷಾಂತರ ಹಣ ಕಳೆದುಕೊಂಡ ನತದೃಷ್ಟರು ಇಂತಹ ಜಾಹೀರಾತುಗಳನ್ನು ಹುಡುಕಾಡುತ್ತಲೇ ಇರುತ್ತಾರೆ.
ಅನೇಕ ರಾಜ್ಯಗಳಲ್ಲಿ ಇದೇ ರೀತಿಯ ವಂಚನೆಗಳು ಪತ್ತೆಯಾಗಿವೆ. ಹಣ ಕಳೆದುಕೊಂಡವರು ಮರ್ಯಾದೆಗಾಗಿ ದೂರು ನೀಡದೇ ಇರುವುದರಿಂದ ವಂಚಕರಿಗೆ ಇನ್ನಷ್ಟು ಬಲ ಸಿಗುತ್ತಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ, ಹಲವಾರು ರಾಜ್ಯಗಳಲ್ಲಿ ನಡೆದ ತನಿಖೆಗಳು ಅಖಿಲ ಭಾರತ ಗರ್ಭಿಣಿ ಉದ್ಯೋಗ ಸೇವೆ ಎಂದು ಕರೆಯಲ್ಪಡುವ ವಂಚನೆಯು 2022ರ ಕೊನೆಯಲ್ಲಿ ಅಥವಾ 2023ರ ಆರಂಭದಲ್ಲಿ ಬಿಹಾರದ ನವಾಡಾ ಜಿಲ್ಲೆಯಲ್ಲಿ ಹುಟ್ಟಿಕೊಂಡಿತು ಎಂದು ಬಹಿರಂಗಪಡಿಸಿವೆ. ವಂಚಕರು ಫೇಸ್ಬುಕ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ನಂತಹ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ನಿರುದ್ಯೋಗಿ ಅಥವಾ ನಿರ್ದಿಷ್ಟ ಪುರುಷರನ್ನು ಗುರಿಯಾಗಿಸಿಕೊಳ್ಳುತ್ತಾರೆ. ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯಾಗಿಸುವ ಮೂಲಕ 5 ರಿಂದ 25 ಲಕ್ಷ ರೂ.ಗಳವರೆಗೆ ಹಣ ಗಳಿಸಬಹುದು ಎಂದು ಹೇಳಿಕೊಳ್ಳುತ್ತಾರೆ.ಬ ಇಂತಹ ವಂಚನೆಗಳಿಗೆ ಬಲಿಯಾಗುವ ಜನರು ಪಾನ್, ಆಧಾರ್ ಮತ್ತು ಸೆಲ್ಫಿಗಳಂತಹ ವೈಯಕ್ತಿಕ ವಿವರಗಳನ್ನು ಸಲ್ಲಿಸಲು ಕೇಳಲಾಗುತ್ತದೆ. ನಂತರ ನೋಂದಣಿ, ಭದ್ರತಾ ಠೇವಣಿ, ತೆರಿಗೆಗಳು ಮತ್ತು ಹೋಟೆಲ್ ಬುಕಿಂಗ್ಗಳಂತಹ ಹಲವಾರು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ವಂಚಕರು ನಕಲಿ ಕಾನೂನು ದಾಖಲೆಗಳು, ಮಗುವಿನ ಜನನ ಒಪ್ಪಂದಗಳು ಮತ್ತು ನಕಲಿ ಸಹಿಗಳನ್ನು ಸಹ ಹಾಕಿ ವಿಶ್ವಾಸಾರ್ಹವೆಂದು ತೋರಿಸಿಕೊಳ್ಳುತ್ತಾರೆ. ನಂತರ, ಪೊಲೀಸ್ ಕ್ರಮದ ಮೂಲಕ ಹೆಚ್ಚಿನ ಹಣವನ್ನು ಸುಲಿಗೆ ಮಾಡಲು ಪ್ರಾರಂಭಿಸುತ್ತಾರೆ.
ಭಾರತದಾದ್ಯಂತ ನೂರಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ವಂಚನೆಗೊಳಗಾದ ಹಲವಾರು ಮಂದಿ ಮುಜುಗರದಿಂದ ದೂರು ನೀಡಲು ಹಿಂದೇಟು ಹಾಕುತ್ತಾರೆ. ಪೊಲೀಸ್ ಮೂಲಗಳು ಹೇಳುವಂತೆ ಈ ದಂಧೆಯು ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದೆ.
cyber crime
ಶಾಸಕ ಅಶೋಕ್ ರೈ ಹೆಸರು ಹೇಳಿ ಮಹಿಳೆಗೆ ವಂಚನೆ; ಕಳೆದುಕೊಂಡ ಹಣ ಭರಿಸಿ ಮಾನವೀಯತೆ ಮೆರೆದ ಶಾಸಕರು
₹22,500 ಕಳೆದುಕೊಂಡ ಮಹಿಳೆಗೆ ಹೆಚ್ಚುವರಿಯಾಗಿ ₹7,500 ಸೇರಿಸಿ ಒಟ್ಟು ₹30 ಸಾವಿರ ನೆರವು • “ನನ್ನ ಹೆಸರು ಹೇಳಿ ವಂಚಿಸಿದ್ದು ನೋವಿನ ಸಂಗತಿ” ಎಂದ ಶಾಸಕ
ಪುತ್ತೂರು, ಜು. 29: ಪುತ್ತೂರು ಶಾಸಕ ಅಶೋಕ್ ರೈ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಸುಳ್ಯ ತಾಲೂಕಿನ ಮಹಿಳೆಯೊಬ್ಬರಿಗೆ ವಂಚನೆ ಎಸಗಿದ ಪ್ರಕರಣದಲ್ಲಿ, ಮಹಿಳೆ ಕಳೆದುಕೊಂಡ ಹಣವನ್ನು ಸ್ವತಃ ಭರಿಸುವ ಮೂಲಕ ಶಾಸಕ ಅಶೋಕ್ ರೈ ಮಾನವೀಯತೆ ಮೆರೆದಿದ್ದಾರೆ.
ಸುಳ್ಯ ಕಸಬಾ ದಕ್ಷಿಣ ಬೀರಮಂಗಲ ನಿವಾಸಿ, ಗಣೇಶ್ ಅವರ ಪತ್ನಿ ಪುಷ್ಪಾವತಿ ವಂಚನೆಗೆ ಒಳಗಾದ ಮಹಿಳೆ. ಪುಷ್ಪಾವತಿಯವರ ಪತಿ ಗಣೇಶ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನೆರವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ದಾನಿಗಳು ಒಟ್ಟು ₹22,500 ಹಣವನ್ನು ಪುಷ್ಪಾವತಿಯವರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.
ಜು. 27ರಂದು ಸಂಜೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ, “ಪುತ್ತೂರು ಶಾಸಕ ಅಶೋಕ್ ರೈ ಅವರು ನಿಮಗೆ ₹3 ಲಕ್ಷ ಆರ್ಥಿಕ ನೆರವು ನೀಡಲು ಒಪ್ಪಿದ್ದಾರೆ. ಆದರೆ ಹಣ ಬಿಡುಗಡೆ ಮಾಡಲು ಮೊದಲು ₹25 ಸಾವಿರ ತೆರಿಗೆ ಪಾವತಿಸಬೇಕು” ಎಂದು ನಂಬಿಸಿದ್ದಾನೆ.
ಶಾಸಕರ ಹೆಸರಿನ ಮೇಲಿನ ವಿಶ್ವಾಸದಿಂದ ಪುಷ್ಪಾವತಿ ತಮ್ಮ ಖಾತೆಯಲ್ಲಿದ್ದ ₹22,500 ಅನ್ನು ಫೋನ್ಪೇ ಮೂಲಕ ಆರೋಪಿಗೆ ವರ್ಗಾಯಿಸಿದ್ದಾರೆ. ಬಳಿಕ ಆರೋಪಿಯ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದ್ದು, ತಾವು ವಂಚನೆಗೆ ಒಳಗಾಗಿರುವುದು ತಿಳಿದು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಷಯ ತಿಳಿದು ಸ್ಪಂದಿಸಿದ ಶಾಸಕ
ಈ ಘಟನೆ ಬಗ್ಗೆ ಮಾಹಿತಿ ಪಡೆದ ಶಾಸಕ ಅಶೋಕ್ ರೈ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಸರು ಬಳಸಿಕೊಂಡು ಸಂಕಷ್ಟದಲ್ಲಿದ್ದ ಮಹಿಳೆಯನ್ನು ವಂಚಿಸಿರುವುದು ಅಮಾನವೀಯ ಕೃತ್ಯ ಎಂದು ಅವರು ಹೇಳಿದ್ದಾರೆ.
ಪತ್ರಕರ್ತರ ಮೂಲಕ ವಿಷಯ ತಿಳಿದ ಬಳಿಕ, “ನನ್ನ ಹೆಸರಿನ ಮೇಲಿನ ನಂಬಿಕೆಯಿಂದ ಮಹಿಳೆ ಹಣ ಕಳುಹಿಸಿದ್ದಾರೆ. ಅವರು ಕಳೆದುಕೊಂಡ ಹಣವನ್ನು ನಾನು ಭರಿಸುತ್ತೇನೆ” ಎಂದು ಭರವಸೆ ನೀಡಿದರು.
ಅದರಂತೆ ಮಹಿಳೆ ಕಳೆದುಕೊಂಡ ₹22,500 ಜೊತೆಗೆ ಹೆಚ್ಚುವರಿಯಾಗಿ ₹7,500 ಸೇರಿಸಿ ಒಟ್ಟು ₹30,000 ಅನ್ನು ಅವರ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಶಾಸಕರ ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಮಯೋಚಿತ ನೆರವು ನೀಡಿದ ಕಾರ್ಯ ಶ್ಲಾಘನೀಯವಾಗಿದೆ.
arrest
ನೀಟ್ ಪ್ರತಿಭಟನೆಗೆ ಧಾರ್ಮಿಕ ಬಣ್ಣ, ಅವಹೇಳನಕಾರಿ ಪೋಸ್ಟ್: ಬಂಟ್ವಾಳದ ಕೇಪು ನಿವಾಸಿ ಬಂಧನ
ವಿಟ್ಲ: ನೀಟ್ (NEET) ಪರೀಕ್ಷೆ ವಿರುದ್ಧ ನಡೆಯುತ್ತಿದ್ದ ಹೋರಾಟವನ್ನು ಧಾರ್ಮಿಕ ವಿಚಾರಗಳಿಗೆ ಥಳುಕು ಹಾಕಿ, ಜಾಲತಾಣಗಳಲ್ಲಿ ಸೌಹಾರ್ದತೆಗೆ ಧಕ್ಕೆ ತರುವಂತಹ ಅವಹೇಳನಕಾರಿ ಬರಹ ಪ್ರಸಾರ ಮಾಡಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಕೇಪು ನಿವಾಸಿ ಭರತ್ (36) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ದೂರುದಾರರು ‘KFC KHANDIGA’ ಎಂಬ ವಾಟ್ಸಾಪ್ ಗ್ರೂಪ್ನ ಸದಸ್ಯರಾಗಿದ್ದು, ಜುಲೈ 23ರಂದು ಸದ್ರಿ ಗ್ರೂಪ್ನಲ್ಲಿ ಹರಿಫೋಡಲಾಗಿದ್ದ ಸ್ಕ್ರೀನ್ಶಾಟ್ ಒಂದನ್ನು ವೀಕ್ಷಿಸಿದ್ದರು. ಅದರಲ್ಲಿ ಎರಡು ಸಮುದಾಯಗಳ ನಡುವೆ ವೈಮನಸ್ಸು ಮೂಡಿಸುವ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಹ ಕೋಮು ಪ್ರಚೋದನಾತ್ಮಕ ಬರಹಗಳಿದ್ದವು. ಈ ಕುರಿತು ಪರಿಶೀಲನೆ ನಡೆಸಿದಾಗ, ಆರೋಪಿ ಭರತ್ ಎಂಬಾತ ಈ ಅವಹೇಳನಕಾರಿ ಪೋಸ್ಟ್ ಅನ್ನು ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ದೊರೆತ ದೂರಿನನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 160/2026, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 197(1)(a), 197(1)(c) ಹಾಗೂ 353(2) ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿದೆ.
Bantawala
ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯತ್ನ: ಬಂಟ್ವಾಳದಲ್ಲಿ ಎಕ್ಸ್ (ಟ್ವಿಟ್ಟರ್) ಖಾತೆದಾರನ ವಿರುದ್ಧ FIR ದಾಖಲು
ಬಂಟ್ವಾಳ: ಇತ್ತೀಚೆಗೆ ಬಿಸಿ ರೋಡಿನಲ್ಲಿ ನಡೆದ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟ್ಟರ್) ನಲ್ಲಿ ಆರೋಪಿಯ ಗುರುತಿನ ಬಗ್ಗೆ ತಪ್ಪು ಕಲ್ಪನೆ ಮೂಡಿಸಿ, ಕೋಮು ಬಣ್ಣ ಬಳಿಯಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಮದಕ ನಿವಾಸಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಸಿರಾಜ್ ಎಂ.ಯು. (29) ಅವರು ನೀಡಿದ ಲಿಖಿತ ದೂರಿನ ಮೇರೆಗೆ ಕಿರಣ್ ಆರಾಧ್ಯ (@KiranAradhyaadv) ಎಂಬ ಎಕ್ಸ್ ಖಾತೆದಾರನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ದಿನಾಂಕ 16-07-2026 ರಂದು ಕಕ್ಕೆಪದವಿನ ಲಾವಣ್ಯ ಎಂಬ ಯುವತಿಯನ್ನು ಚೇತನ್ ಎಂಬಾತನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದನು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಚಿತ್ರಣವನ್ನು ಆರೋಪಿ ಕಿರಣ್ ಆರಾಧ್ಯ ತನ್ನ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಲ್ಲದೆ, ಇಂಗ್ಲಿಷ್ನಲ್ಲಿ “Monster with wrist watch on his left hand, pants above his ankles, killed a girl at Bantwal bus stand, Karnataka…” ಎಂದು ಬರೆದುಕೊಂಡಿದ್ದನು.

ದೂರಿನಲ್ಲಿ ಏನಿದೆ?: ಕೊಲೆ ಪ್ರಕರಣದ ಆರೋಪಿಯನ್ನು ಈಗಾಗಲೇ ಪೊಲೀಸರು ಗುರುತಿಸಿದ್ದರೂ ಸಹ, ದೂರುದಾರರ ಪ್ರಕಾರ ಆರೋಪಿ ಕಿರಣ್ ಆರಾಧ್ಯ ತನ್ನ ಪೋಸ್ಟ್ನಲ್ಲಿ ಆರೋಪಿಯ ಉಡುಪು ಮತ್ತು ಬಾಹ್ಯ ರೂಪವನ್ನು ಉಲ್ಲೇಖಿಸಿ, ಆತ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬ ತಪ್ಪು ಭಾವನೆಯನ್ನು ಸಮಾಜದಲ್ಲಿ ಮೂಡಿಸಲು ಪ್ರಯತ್ನಿಸಿದ್ದಾನೆ. ಈ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಯತ್ನಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸ್ ಕ್ರಮ: ದೂರುದಾರರಾದ ಮೊಹಮ್ಮದ್ ಸಿರಾಜ್ ಅವರು ಜುಲೈ 17ರಂದು ರಾತ್ರಿ ನೀಡಿರುವ ದೂರನ್ನು ಸ್ವೀಕರಿಸಿರುವ ಬಂಟ್ವಾಳ ನಗರ ಪೊಲೀಸರು, ಆರೋಪಿ ಕಿರಣ್ ಆರಾಧ್ಯ ವಿರುದ್ಧ ಅಪರಾಧ ಸಂಖ್ಯೆ: 100/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 353(2) (ಸಾರ್ವಜನಿಕರಲ್ಲಿ ದ್ವೇಷ, ಅಸೂಯೆ ಅಥವಾ ಕೋಮು ಭಾವನೆ ಕೆರಳಿಸುವ ವರದಿ/ಹೇಳಿಕೆ ಪ್ರಕಟಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
