health
ಮಂಜೇಶ್ವರ: ಅನಾಥ, ವೃದ್ಧ, ಅಸ್ವಸ್ಥರ ಪಾಲಿನ ಆಶಾಕಿರಣ – ಸಾಯಿ ನಿಕೇತನದ ‘ಸಾಕೇತ’ ನೂತನ ಕಟ್ಟಡ ನಾಳೆ ಲೋಕಾರ್ಪಣೆ
ದೈಗೋಳಿ, ಮಂಜೇಶ್ವರ: ಕಳೆದ ಹಲವು ವರ್ಷಗಳಿಂದ ನೊಂದವರ, ಮಾನಸಿಕ ಅಸ್ವಸ್ಥರ ಮತ್ತು ಅನಾಥರಾಗಿ ಬೀದಿ ಅಲೆಯುತ್ತಿದ್ದ ನೂರಾರು ಜೀವಗಳಿಗೆ ಮರುಜನ್ಮ ನೀಡುತ್ತಿರುವ ಮಂಜೇಶ್ವರ ತಾಲೂಕಿನ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮದ ನೂತನ ಕಟ್ಟಡ ‘ಸಾಕೇತ’ ನಾಳೆ, ಶುಕ್ರವಾರ 24 ಏಪ್ರಿಲ್ 2026ರಂದು ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ.

ಭಗವಾನ್ ಸತ್ಯ ಸಾಯಿ ಬಾಬಾ ಜನ್ಮಶತಾಬ್ದಿ ಸಂದರ್ಭ: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮಶತಾಬ್ದಿ ಸಂದರ್ಭದಲ್ಲಿ ದಾನಿಗಳ ಹಾಗೂ ಹೃದಯವಂತರ ಸಹಕಾರದಿಂದ ನಿರ್ಮಾಣಗೊಂಡಿರುವ ‘ಸಾಕೇತ’ ಕಟ್ಟಡವು ಅನಾಥರು, ವೃದ್ಧರು ಹಾಗೂ ಅಸ್ವಸ್ಥರ ಬದುಕಿಗೆ ಬೆಳಕಾಗಲಿದೆ.

ದಿವ್ಯ ಸಾನಿಧ್ಯ: ರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ‘ಸಾಕೇತ’ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಸಭಾಧ್ಯಕ್ಷತೆ: ಭಟ್ ಬಯೋಟೆಕ್ ಇಂಡಿಯಾ ಪ್ರೈ. ಲಿ. ಸ್ಥಾಪಕರು ಹಾಗೂ ಅಧ್ಯಕ್ಷರು, ನವಚೇತನ ಹಿರಿಯರ ಬಡಾವಣೆ ಪುತ್ತೂರಿನ ಸ್ಥಾಪಕ ಡಾ. ಶಾಮ ಭಟ್ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಗಣ್ಯರ ದಂಡು:
ವಿಶೇಷ ಆಹ್ವಾನಿತರು: ಸಿಂಗಾಪುರದ ಸೆಂಗ್ಕಾಂಗ್ ಜನರಲ್ ಆಸ್ಪತ್ರೆಯ ಹಿರಿಯ ನೆಫ್ರಾಲಜಿಸ್ಟ್ ಡಾ. ಶಶಿಧರ್ ಬೈಕುಂಜೆ, ಹಿರಿಯ ರೇಡಿಯಾಲಜಿಸ್ಟ್ ಡಾ. ವಿದ್ಯಾ ಉಪಾಧ್ಯಾಯ, ಕರ್ನಾಟಕ ಬ್ಯಾಂಕ್ ಸಿಇಒ ಬಿ. ಎಸ್. ರಾಜ್, ಎಮ್.ಆರ್.ಪಿ.ಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಬಾಳಿಗ, ನಿವೃತ್ತ ಐಎಎಸ್ ಅಧಿಕಾರಿ ಡಾ. ಟಿ. ಶಾಮ ಭಟ್, ಹೇರಂಬ ಇಂಡಸ್ಟ್ರೀಸ್ ಅಧ್ಯಕ್ಷ ಡಾ. ಕನ್ಯಾನ ಸದಾಶಿವ ಶೆಟ್ಟಿ ಸೇರಿದಂತೆ ಹಲವು ಗಣ್ಯರು.
ಮುಖ್ಯ ಅತಿಥಿಗಳು: ವರ್ಕಾಡಿ ಸೇಕ್ರೆಡ್ ಹಾರ್ಟ್ ಚರ್ಚ್‌ನ ಫಾದರ್ ಬೇಸಿಲ್ ವಾಸ್, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡಾ. ವಿಕ್ರಮ್ ಶೆಟ್ಟಿ, SCDCC ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್, ವರ್ಕಾಡಿ ಪಂಚಾಯತ್ ಅಧ್ಯಕ್ಷ ಉಮ್ಮರ್ ಬೋರ್ಕಳ ಮೊದಲಾದವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ವಿವರ:
ಬೆಳಿಗ್ಗೆ 6:14: ದೀಪ ಪ್ರಜ್ವಲನ
ಬೆಳಿಗ್ಗೆ 10:00: ಸಾಯಿ ಸಂಗೀತ್ ಮೆಲೊಡೀಸ್ ಕಾಸರಗೋಡು ತಂಡದಿಂದ ‘ಭಕ್ತಿ ಭಾವ ರಾಗ ಸಂಗಮ’

ಬೆಳಿಗ್ಗೆ 11:00: ಸಭಾ ಕಾರ್ಯಕ್ರಮ
ಅಪರಾಹ್ನ 3:00: ಕು. ಸಾನ್ವಿ ಜಿ. ಮತ್ತು ಕು. ಸಮನ್ವಿ ಜಿ. ಅವರಿಂದ ಭರತನಾಟ್ಯ
ಸಂಜೆ 3:30: ಶ್ರೀ ಗಿರೀಶ್ ಕಕ್ಕೆಪದವು ಮತ್ತು ಬಳಗದಿಂದ ಯಕ್ಷಗಾನ ‘ಪುಣ್ಯಕೋಟಿ’

ಸಾರ್ವಜನಿಕರಿಗೆ ಆಹ್ವಾನ: “ಬನ್ನಿ, ನೊಂದ ಜೀವಕ್ಕೆ ಸಾಂತ್ವನ ನೀಡುವ ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಗಳಾಗೋಣ” ಎಂದು ಶ್ರೀ ಸಾಯಿ ಸೇವಾ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಆತ್ಮೀಯವಾಗಿ ಆಮಂತ್ರಿಸಿದ್ದಾರೆ. ಹೂವು, ಹಣ್ಣು, ತರಕಾರಿ, ಅಕ್ಕಿ ಹಾಗೂ ಧನ ಸಹಾಯವನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.
ಸ್ಥಳ: ಸಾಯಿ ನಿಕೇತನ ಸೇವಾಶ್ರಮ ವಠಾರ, ದೈಗೋಳಿ, ಮಂಜೇಶ್ವರ ತಾಲೂಕು.
ದೂರವಾಣಿ: 9645126739, 9449966209
Bantawala
3 ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧ ತೋಟದ ಚರಂಡಿಯಲ್ಲಿ ಪತ್ತೆ: ಆಸ್ಪತ್ರೆಗೆ ದಾಖಲು
ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಎಂಬವರು ಕಳೆದ ಮೂರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಇಂದು ಬೆಳಿಗ್ಗೆ ಅಡಿಕೆ ತೋಟದ ಚರಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕಳೆದ ಮೂರು ದಿನಗಳಿಂದ ವೃದ್ಧ ಕಾಣೆಯಾಗಿದ್ದರಿಂದ ಅವರ ಸಂಬಂಧಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಇಂದು ಬೆಳಿಗ್ಗೆ ಕುಕ್ಕಿಲದ ಪುರಂದರ ಭಟ್ ಎಂಬವರ ಅಡಿಕೆ ತೋಟದ ನೀರು ಹರಿಯುವ ಚರಂಡಿಯಲ್ಲಿ ವೃದ್ಧ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಿದ್ದಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅವರಿಗೆ ಪ್ರಾಥಮಿಕ ಶುಶ್ರೂಷೆ ನೀಡಿ, ವಿಟ್ಲದ ಆಪದ್ಬಾಂಧವ ಮುರಳಿ ವಿಟ್ಲ ಅವರಿಗೆ ಮಾಹಿತಿ ತಲುಪಿಸಿದ್ದಾರೆ. ಬಳಿಕ ಅಂಬ್ಯುಲೆನ್ಸ್ ಮೂಲಕ ಅವರನ್ನು ವಿಟ್ಲಕ್ಕೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ವೃದ್ಧರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕರಲ್ಲಿ ಮೂಡಿದ ಹಲವು ಅನುಮಾನಗಳು: ಆರ್ಥಿಕವಾಗಿ ಸದೃಢವಾಗಿದ್ದ ಗಿರಿಯಪ್ಪ ಸಪಲ್ಯ ಅವರು ಈ ಭಾರಿ ಮಳೆಯ ನಡುವೆ ಬೇರೆಯವರ ತೋಟಕ್ಕೆ ಯಾಕೆ ಹೋದರು? ಅವರನ್ನು ಯಾರಾದರೂ ಅಲ್ಲಿಗೆ ಕರೆದುಕೊಂಡು ಹೋದರೇ? ಅಥವಾ ದಾರಿ ತಪ್ಪಿ ಬಿದ್ದರಾ? ಎಂಬ ಹಲವಾರು ಪ್ರಶ್ನೆಗಳು ಸ್ಥಳೀಯವಾಗಿ ಕಾಡುತ್ತಿವೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧರು ಚೇತರಿಸಿಕೊಂಡ ನಂತರವಷ್ಟೇ ಈ ಎಲ್ಲಾ ಅನುಮಾನಗಳಿಗೆ ಹಾಗೂ ಘಟನೆಯ ನೈಜತೆಗೆ ಸ್ಪಷ್ಟ ಉತ್ತರ ಸಿಗಬೇಕಿದೆ.
Dakshina Kannada
ಮಾನವೀಯತೆಯ ಸಾಕಾರ: ಕುಂಬ್ರದ ಖ್ಯಾತ ವೈದ್ಯ ಡಾ. ವಿಘ್ನೇಶ್ವರ ಭಟ್ ಚಿಕಿತ್ಸೆಗೆ ಹರಿದುಬಂದ ನೆರವು; ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ
ಪುತ್ತೂರು: ಪುತ್ತೂರು ತಾಲೂಕಿನ ಕುಂಬ್ರದ ‘ಅಮೃತ ಕ್ಲಿನಿಕ್’ನಲ್ಲಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ನಿರಂತರವಾಗಿ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಾ, ಅಪಾರ ಜನಮನ್ನಣೆ ಗಳಿಸಿರುವ ಪಾರಂಪರಿಕ ಶೈಲಿಯ ಜನಪ್ರಿಯ ಕುಟುಂಬ ವೈದ್ಯ ಡಾ. ವಿಘ್ನೇಶ್ವರ ಭಟ್ ಅವರು ಸದ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕರ ನೆರವಿನ ಹಸ್ತ ಚಾಚಿದ್ದಾರೆ.
ಕಳೆದ 2-3 ತಿಂಗಳುಗಳಿಂದ ದೈಹಿಕ ಅನಾರೋಗ್ಯ ಎದುರಿಸುತ್ತಿದ್ದ ಅವರಿಗೆ ವೈದ್ಯಕೀಯ ಪರೀಕ್ಷೆಗಳ ನಂತರ ತೀವ್ರತರದ ರಕ್ತದ ಕ್ಯಾನ್ಸರ್ (T-Cell Lymphoma) ಇರುವುದು ಪತ್ತೆಯಾಗಿದೆ. ಸದ್ಯ ಮಂಗಳೂರಿನ ಎಂ.ಐ.ಓ (Mangalore Institute of Oncology) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಈಗಾಗಲೇ ಸುಮಾರು 20 ಲಕ್ಷ ರೂ. ವೆಚ್ಚವಾಗಿದೆ. ಮುಂದಿನ ಹಂತದ ಅಸ್ಥಿಮಜ್ಜೆ ಕಸಿ (Bone Marrow Transplant) ಹಾಗೂ ಇತರ ತುರ್ತು ಚಿಕಿತ್ಸೆಗಳಿಗಾಗಿ ಇನ್ನೂ ಅಂದಾಜು 20 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ. ವೈದ್ಯಕೀಯ ವೃತ್ತಿಯನ್ನೇ ನಂಬಿಕೊಂಡಿದ್ದ ಅವರಿಗೆ ಈ ಬೃಹತ್ ಮೊತ್ತವನ್ನು ಹೊಂದಿಸುವುದು ಕಷ್ಟಸಾಧ್ಯವಾಗಿರುವುದರಿಂದ ಸಹೃದಯಿ ಜನರಲ್ಲಿ ಧನಸಹಾಯಕ್ಕಾಗಿ ವಿನಂತಿಸಿಕೊಂಡಿದ್ದರು.

ಕೋಮು ಸೌಹಾರ್ದತೆ ಮೆರೆದ ಶೇಕಮಲೆ ಮಸೀದಿ ಸಮಿತಿ: ಡಾ. ವಿಘ್ನೇಶ್ವರ ಭಟ್ ಅವರ ಕಷ್ಟಕ್ಕೆ ಸ್ಪಂದಿಸಿ ಇತ್ತೀಚೆಗೆ ಶೇಕಮಲೆ ಮಸೀದಿ ಕಮಿಟಿಯವರು “ಮಾನವೀಯತೆಯ ಬಕ್ರೀದ್” ಎಂಬ ಆಶಯದೊಂದಿಗೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ ಕೋಮು ಸೌಹಾರ್ದತೆ ಮತ್ತು ಜಾತಿಗೆ ತೀತವಾದ ಮಾನವೀಯ ಗುಣವನ್ನು ಸಾರಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ವಿದೇಶಿ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ನೆರವು: ಇದೀಗ ಡಾಕ್ಟರ್ ಅವರ ಚಿಕಿತ್ಸೆಗೆ ಮತ್ತೊಂದು ಆಸರೆಯಾಗಿ ಹೊರದೇಶದ ಖ್ಯಾತ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ಅವರು 50,000 ರೂ. ಆರ್ಥಿಕ ಸಹಾಯ ಹಸ್ತ ಚಾಚುವ ಮೂಲಕ ತಮ್ಮ ಉದಾರಿ ಗುಣವನ್ನು ಮೆರೆದಿದ್ದಾರೆ. ಇವರೊಂದಿಗೆ ಹಲವಾರು ಸಹೃದಯಿ ಸಾರ್ವಜನಿಕರು ಕೂಡ ಈಗಾಗಲೇ ತಮ್ಮ ಕೈಲಾದ ಧನಸಹಾಯವನ್ನು ಒದಗಿಸಿದ್ದಾರೆ.
ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ: ಬಡವರ, ಸಾರ್ವಜನಿಕರ ಕಣ್ಣೊರೆಸುತ್ತಿದ್ದ ವೈದ್ಯರೊಬ್ಬರು ಇಂದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆ ಸುಗಮವಾಗಿ ಸಾಗಲು ಇನ್ನು ಕೂಡ ಭಾರಿ ಮೊತ್ತದ ನೆರವಿನ ಅಗತ್ಯವಿದೆ. ಹೀಗಾಗಿ ದೇಶ-ವಿದೇಶಗಳಲ್ಲಿರುವ ದಾನಿಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಉದಾರವಾಗಿ ಧನಸಹಾಯ ಮಾಡುವ ಮೂಲಕ ಡಾ. ವಿಘ್ನೇಶ್ವರ ಭಟ್ ಅವರು ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳುವಂತೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಧನಸಹಾಯ ಮಾಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು:
- ಬ್ಯಾಂಕ್ ಹೆಸರು: ಕರ್ಣಾಟಕ ಬ್ಯಾಂಕ್ (Karnatāka Bank)
- ಶಾಖೆ: ದರ್ಬೆ, ಪುತ್ತೂರು
- ಖಾತೆ ಸಂಖ್ಯೆ (A/c No): 1023202500000601
- ಐಎಫ್‌ಎಸ್‌ಸಿ ಕೋಡ್ (IFSC): KARB0001023
- ಗೂಗಲ್ ಪೇ ಸಂಖ್ಯೆ (G-Pay): 961163784



accident
ವೈದ್ಯ ಲೋಕದ ವಿಸ್ಮಯ: ಸಾವು ಗೆದ್ದು ಬಂದ ಯುವಕ – ಹಾಸನದ ಜನಪ್ರಿಯ ಆಸ್ಪತ್ರೆ ವೈದ್ಯರಿಂದ ದಾಖಲೆಯ ಶಸ್ತ್ರಚಿಕಿತ್ಸೆ!
ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನಿಗೆ ಪುನರ್ಜನ್ಮ ನೀಡುವ ಮೂಲಕ ಹಾಸನದ ಹೆಸರಾಂತ ‘ಜನಪ್ರಿಯ ಆಸ್ಪತ್ರೆ’ಯು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ತಲೆಬುರುಡೆ ಪುಡಿಯಾಗಿ, ಮೆದುಳು ಹೊರಬಂದಿದ್ದ ಸ್ಥಿತಿಯಲ್ಲಿದ್ದ ಯುವಕನನ್ನು ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಮೂಲಕ ಉಳಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.

ಘಟನೆಯ ಹಿನ್ನೆಲೆ:
ಇತ್ತೀಚೆಗೆ ಕೊಣನೂರು ಸಮೀಪ ಮದುವೆ ಸಮಾರಂಭ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ಯುವಕನಿಗೆ ಭೀಕರ ಅಪಘಾತ ಸಂಭವಿಸಿತ್ತು. ತೀವ್ರ ರಕ್ತಸ್ರಾವದಿಂದಾಗಿ ಯುವಕ ಸಾಯುವ ಹಂತ ತಲುಪಿದ್ದ. ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಬದುಕುವ ಸಾಧ್ಯತೆ ಇಲ್ಲ ಎಂದು ಅಲ್ಲಿನ ವೈದ್ಯರು ಕೈಚೆಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದು ಎಂಬ ಆತಂಕದ ನಡುವೆಯೂ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದರು.

ಜೀವ ಉಳಿಸಿದ ‘ಜನಪ್ರಿಯ’ ವೈದ್ಯರ ಚಾಕಚಕ್ಯತೆ:
ಆಸ್ಪತ್ರೆಗೆ ದಾಖಲಾದಾಗ ಗಾಯಾಳುವಿನ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ತಲೆಬುರುಡೆ ಪುಡಿಪುಡಿಯಾಗಿ ಮೆದುಳು ಹೊರಬಂದಿತ್ತು ಅಷ್ಟೇ ಅಲ್ಲದೆ, ಮೆದುಳಿನ ಪದರಗಳ ಒಳಗೆ ಕಲ್ಲು ಮತ್ತು ಮಣ್ಣು ಸೇರಿಕೊಂಡಿತ್ತು. ಕೈ ಮತ್ತು ಕಾಲುಗಳ ಮೂಳೆಗಳು ಕೂಡ ಮುರಿದಿದ್ದವು.

ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಮೂಳೆ ಮತ್ತು ಕೀಲು ತಜ್ಞರಾದ ಡಾ. ವಿ.ಕೆ. ಅಬ್ದುಲ್ ಬಶೀರ್ ಈ ಕುರಿತು ಮಾಹಿತಿ ನೀಡುತ್ತಾ, “ಗಾಯಾಳು ಆಸ್ಪತ್ರೆಗೆ ಬಂದಾಗ ಹೃದಯ ಬಡಿತ ಮತ್ತು ನಾಡಿ ಮಿಡಿತ ಸಂಪೂರ್ಣ ನಿಂತಿತ್ತು. ತಕ್ಷಣವೇ ಡಿ-ಫಿಬ್ರಿಲೇಟರ್ ಯಂತ್ರದ ಮೂಲಕ ಹೃದಯಕ್ಕೆ ವಿದ್ಯುತ್ ಚಾಲನೆ ನೀಡಿ ಬಡಿತ ಬರುವಂತೆ ಮಾಡಲಾಯಿತು. ಸುಮಾರು 8 ರಿಂದ 10 ಬಾಟಲ್ ರಕ್ತವನ್ನು ನೇರವಾಗಿ ಪೈಪ್ ಮೂಲಕ ಹೃದಯಕ್ಕೆ ನೀಡಿ ರಕ್ತದ ಒತ್ತಡವನ್ನು ಸರಿಪಡಿಸಲಾಯಿತು. ಕೇವಲ ಶೇ. 1 ರಷ್ಟು ಮಾತ್ರ ಬದುಕುವ ಭರವಸೆ ಇದ್ದರೂ, ಪೋಷಕರ ಒಪ್ಪಿಗೆ ಪಡೆದು ಸವಾಲಾಗಿ ಸ್ವೀಕರಿಸಿ ಶಸ್ತ್ರಚಿಕಿತ್ಸೆ ಆರಂಭಿಸಿದೆವು” ಎಂದರು.
ಸತತ ಪರಿಶ್ರಮ ಮತ್ತು ಯಶಸ್ಸು:
ಸುಮಾರು ಐದರಿಂದ ಆರು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಯುವಕನಿಗೆ ಮಾಡಲಾಯಿತು. ಮೂರು ವಾರಗಳ ಕಾಲ ಕೃತಕ ಉಸಿರಾಟದ ಯಂತ್ರದಲ್ಲಿ (Ventilator) ಇಟ್ಟು ಚಿಕಿತ್ಸೆ ನೀಡಲಾಯಿತು. ವೈದ್ಯರ ತಂಡ ಮತ್ತು ನರ್ಸಿಂಗ್ ಸಿಬ್ಬಂದಿಯ ಹಗಲಿರುಳಿನ ಶ್ರಮದ ಫಲವಾಗಿ, ಒಂದೂವರೆ ತಿಂಗಳ ನಂತರ ಯುವಕ ಈಗ ಯಾರ ಸಹಾಯವಿಲ್ಲದೆ ನಡೆಯುವಂತಾಗಿದ್ದಾನೆ ಮತ್ತು ಮಾತನಾಡುತ್ತಿದ್ದಾನೆ.

ಪೋಷಕರ ಕೃತಜ್ಞತೆ:
ಯುವಕನ ತಂದೆ ಮಂಜುನಾಥ್ ಮಾತನಾಡಿ, “ನಾವು ನನ್ನ ಮಗನಿಗೆ ಮೊದಲ ಜನ್ಮ ನೀಡಿದ್ದರೆ, ಜನಪ್ರಿಯ ಆಸ್ಪತ್ರೆಯ ವೈದ್ಯರು ಆತನಿಗೆ ಎರಡನೇ ಜನ್ಮ ನೀಡಿದ್ದಾರೆ. ಮಗ ಉಳಿಯುವುದಿಲ್ಲ ಎಂದಿದ್ದ ಪರಿಸ್ಥಿತಿಯಲ್ಲಿ ಶಕ್ತಿ ಮೀರಿ ಪ್ರಯತ್ನಿಸಿ ಇಂದು ನಮ್ಮ ಮಗ ನಮ್ಮ ಜೊತೆ ಮಾತನಾಡುವಂತೆ ಮಾಡಿದ್ದಾರೆ. ಇಡೀ ವೈದ್ಯಕೀಯ ತಂಡಕ್ಕೆ ನಾವು ಸದಾ ಋಣಿಯಾಗಿದ್ದೇವೆ,” ಎಂದು ಭಾವುಕರಾಗಿ ಧನ್ಯವಾದ ತಿಳಿಸಿದರು.
ವೈದ್ಯಕೀಯ ಲೋಕದ ವಿಸ್ಮಯ ಎಂಬಂತಿರುವ ಈ ಸಾಧನೆಯು ಹಾಸನದ ವೈದ್ಯಕೀಯ ಕ್ಷೇತ್ರದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ.



-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
