Connect with us

Mangaluru

ಮಂಗಳೂರು: ಪ್ರೇಯಸಿ ದೂರವಾದ ಹಿನ್ನೆಲೆ ಮನನೊಂದು ಯುವಕ ಆತ್ಮಹತ್ಯೆ; ಯುವತಿಯ ವಿರುದ್ಧ ಪ್ರಚೋದನೆಯ ಆರೋಪ

Published

on

ಮಂಗಳೂರು: ಪ್ರೀತಿಸಿದ ಯುವತಿ ತನ್ನಿಂದ ದೂರವಾಗುತ್ತಿದ್ದಾಳೆ ಎಂಬ ಕಾರಣಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡುಶೆಡ್ಡೆಯ ಎದುರುಪದವು ಎಂಬಲ್ಲಿ ನಡೆದಿದೆ.

ಮೂಡುಶೆಡ್ಡೆ ಎದುರುಪದವು ನಿವಾಸಿ ಮಹಮ್ಮದ್ ಆಶಿಕ್ (22) ಮೃತಪಟ್ಟ ಯುವಕ. ಆಶಿಕ್ ಕಾಲೇಜಿನಲ್ಲಿ ತನ್ನ ಸಹಪಾಠಿಯಾಗಿದ್ದ ಉಳ್ಳಾಲ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಪದವಿ ಶಿಕ್ಷಣ ಮುಗಿದ ನಂತರ ಆಶಿಕ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಈ ಯುವತಿ ಆಶಿಕ್‌ನಿಂದ ದೂರವಾಗಲು ಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದ್ದು, ತೀವ್ರವಾಗಿ ಮನನೊಂದ ಆಶಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಶಿಕ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯುವತಿಗೆ ವಿಡಿಯೋ ಕರೆ ಮಾಡಿದ್ದು, ಮೊಬೈಲ್ ಚಾಟಿಂಗ್ ಕೂಡ ನಡೆಸಿದ್ದಾರೆ. ಈ ಚಾಟಿಂಗ್ ವೇಳೆ ಯುವತಿಯು ಆಶಿಕ್ ಜೊತೆಗೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, “ಸಾಯುವಂತೆ” ಪ್ರಚೋದನೆ ನೀಡಿದ್ದಾರೆ ಎಂದು ಆಶಿಕ್ ಮನೆಯವರು ಗಂಭೀರವಾಗಿ ಆರೋಪಿಸಿದ್ದಾರೆ. ಯುವತಿಯ ಮಾತುಗಳಿಂದ ಮನನೊಂದು ಆಶಿಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಸದ್ಯ ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

F.I.R.

ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಪ್ರಕರಣ ದಾಖಲು; ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

Published

on

ಮಂಗಳೂರು ತಾಲೂಕಿನ ಗಂಜಿಮಠದ ಮುಚ್ಚೂರು ಕ್ರಾಸ್ ಬಳಿ ಮದುವೆ ಸಮಾರಂಭಕ್ಕೆ ಬಂದ ವಾಹನಗಳ ಅವ್ಯವಸ್ಥಿತ ಪಾರ್ಕಿಂಗ್‌ನಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ, ಎರಡು ಕಲ್ಯಾಣ ಮಂಟಪಗಳ ಮಾಲೀಕರು ಮತ್ತು ಆಯೋಜಕರ ಮೇಲೆ ಬಜಪೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿವರ: ದಿನಾಂಕ 12-04-2026ರಂದು ಮಧ್ಯಾಹ್ನ 12:00 ರಿಂದ 2:00 ಗಂಟೆಯ ನಡುವೆ ಗಂಜಿಮಠದ ‘ರಾಯಲ್ ಪ್ಯಾಲೇಸ್’ ಮತ್ತು’ಒಂಡೆಲಾ ಹಾಲ್‘ನಲ್ಲಿ ಮದುವೆ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಮಾರಂಭಕ್ಕೆ ಆಗಮಿಸಿದ ನೂರಾರು ವಾಹನಗಳಿಗೆ ಕಲ್ಯಾಣ ಮಂಟಪದ ಆವರಣದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡದ ಕಾರಣ, ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಸಾಲು ಸಾಲಾಗಿ ನಿಲ್ಲಿಸಲಾಗಿತ್ತು.

ಸಾರ್ವಜನಿಕರಿಗೆ ತೊಂದರೆ: ಹೆದ್ದಾರಿಯಲ್ಲೇ ವಾಹನಗಳನ್ನು ನಿಲ್ಲಿಸಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಮತ್ತು ತುರ್ತು ವಾಹನಗಳಿಗೆ ತೀವ್ರ ತೊಂದರೆಯಾಗಿದ್ದು, ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪೊಲೀಸ್ ಕ್ರಮ: ನಿಯಮ ಮೀರಿ ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡಿದ ಮತ್ತು ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಜಪೆ ಪೊಲೀಸರು ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ಮಾಲೀಕರು ಹಾಗೂ ಆಯೋಜಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ದಾಖಲಾದ ಪ್ರಕರಣ: ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 73/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 285, 292 ಮತ್ತು ಐ.ಎಂ.ವಿ ಆಕ್ಟ್ (IMV Act) ಕಲಂ 122 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ತನಿಖೆ ಪ್ರಗತಿಯಲ್ಲಿದೆ.

ಸಾರ್ವಜನಿಕ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಇಂತಹ ಬೇಜವಾಬ್ದಾರಿ ವರ್ತನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸರು ಈ ಮೂಲಕ ಎಚ್ಚರಿಸಿದ್ದಾರೆ.

Continue Reading

INCIDENT

ಗುರುಪುರ ಸೇತುವೆಯಿಂದ ನದಿಗೆ ಹಾರಿದ ಯುವಕ: ಕಜೆಪದವಿನ ಕೌಶಿಕ್ ನಾಪತ್ತೆ

Published

on

ಮಂಗಳೂರು: ಗುರುಪುರ ಸೇತುವೆಯಿಂದ ಯುವಕನೊಬ್ಬ ನದಿಗೆ ಹಾರಿದ ಆಘಾತಕಾರಿ ಘಟನೆ ಬುಧವಾರ ಸಂಜೆ ನಡೆದಿದೆ. ನದಿಗೆ ಹಾರಿದ ಯುವಕನನ್ನು ಕಜೆಪದವು ನಿವಾಸಿ ಕೌಶಿಕ್ ಎಂದು ಗುರುತಿಸಲಾಗಿದೆ.

ಬುಧವಾರ ಸಂಜೆ ಸುಮಾರು 6:30ರ ವೇಳೆಗೆ ಕೌಶಿಕ್ ತನ್ನ ಡಿಯೋ ಸ್ಕೂಟರ್‌ನಲ್ಲಿ ಗುರುಪುರ ಸೇತುವೆ ಬಳಿ ಬಂದಿದ್ದಾರೆ. ಸೇತುವೆಯ ಮೇಲೆ ವಾಹನ ನಿಲ್ಲಿಸಿದ ಅವರು, ಏಕಾಏಕಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಸ್ಥಳದಲ್ಲಿ ಜಮಾಯಿಸಿದ್ದಾರೆ.

ಸ್ಥಳದಲ್ಲಿ ಸಿಕ್ಕ ಪುರಾವೆಗಳು:

ಸಾರ್ವಜನಿಕರು ಸೇತುವೆಯ ಮೇಲಿದ್ದ ಸ್ಕೂಟರ್ ಅನ್ನು ಪರಿಶೀಲಿಸಿದಾಗ, ಒಂದು ಮೊಬೈಲ್ ಫೋನ್, ಸ್ವಲ್ಪ ನಗದು ಮತ್ತು ವೈದ್ಯರು ನೀಡಿದ ಔಷಧಿ ಚೀಟಿ (Prescription) ಅದರ ಸೀಟಿನ ಅಡಿಯಲ್ಲಿ ಪತ್ತೆಯಾಗಿವೆ: ಔಷಧಿ ಚೀಟಿಯಲ್ಲಿ “ಕೌಶಿಕ್, ಕಜೆಪದವು” ಎಂಬ ಹೆಸರಿರುವುದು ಕಂಡುಬಂದಿದ್ದು, ಇದರ ಆಧಾರದ ಮೇಲೆ ಯುವಕನ ಗುರುತು ಪತ್ತೆಹಚ್ಚಲಾಗಿದೆ.

ಪೊಲೀಸ್ ತನಿಖೆ ಮತ್ತು ಶೋಧ ಕಾರ್ಯ:

ಮಾಹಿತಿ ತಿಳಿಯುತ್ತಿದ್ದಂತೆ ಬಜ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಸ್ಥಳೀಯ ಈಜುಗಾರರು ಮತ್ತು ರಕ್ಷಣಾ ತಂಡದ ನೆರವಿನೊಂದಿಗೆ ನದಿಯಲ್ಲಿ ಯುವಕನಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಲಾಗಿದೆ. ಕೌಶಿಕ್ ಅವರು ಈ ನಿರ್ಧಾರ ತೆಗೆದುಕೊಳ್ಳಲು ನಿಖರವಾದ ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

Continue Reading

Mangaluru

ಮಂಗಳೂರು: ‘ಧಕ್ಕೆ ನಾಸೀರ್’ ಸಾವು ಕೊಲೆ ಪ್ರಕರಣವಾಗಿ ದಾಖಲು; ಉರ್ವಾ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತನಿಖೆ

Published

on

ಮಂಗಳೂರು: ನಗರದ ಮೀನುಗಾರಿಕಾ ಧಕ್ಕೆಯ ಬಳಿ ನಾಸೀರ್ ಅಲಿಯಾಸ್ ‘ಧಕ್ಕೆ ನಾಸೀರ್’ ಮೃತದೇಹ ಪತ್ತೆಯಾದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಅವರು ಮಾಹಿತಿ ನೀಡಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಘಟನೆಯ ವಿವರ: ಮೃತ ನಾಸೀರ್ ಮೇಲೆ ಈ ಹಿಂದೆ ಹಲವಾರು ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ. ಧಕ್ಕೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪಕ್ಕದ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ (South) ಪೊಲೀಸ್ ಠಾಣೆಯಲ್ಲಿ ಕೊಲೆ (Section 103 BNS/302 IPC) ಪ್ರಕರಣ ದಾಖಲಾಗಿದೆ.

ಪ್ರಸ್ತುತ ಉರ್ವಾ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಈ ಪ್ರಕರಣದ ತನಿಖಾ ಉಸ್ತುವಾರಿಯನ್ನು (In-charge) ವಹಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಶಂಕಿತರ ವಿಡಿಯೋಗಳು ಲಭ್ಯವಾಗಿವೆ. ಅಲ್ಲದೆ, ಉತ್ತರ ಕರ್ನಾಟಕ ಮೂಲದ ಕೆಲವು ವ್ಯಕ್ತಿಗಳು ಮೊಬೈಲ್ ಕಾಣೆಯಾದ ಬಗ್ಗೆ ವಿಚಾರಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಪೊಲೀಸರು ಆ ಆಯಾಮದಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ.

ಕಮಿಷನರ್ ಹೇಳಿಕೆ: ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಮಿಷನರ್ ಅವರು, ಶಂಕಿತರ ಬಗ್ಗೆ ಮಾಹಿತಿ ಲಭ್ಯವಿದ್ದರೂ ತನಿಖೆ ಪೂರ್ಣಗೊಂಡ ನಂತರವಷ್ಟೇ ನಿಖರವಾದ ಕಾರಣಗಳು ತಿಳಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಹತ್ತು ದಿನಗಳಲ್ಲಿ ಮಂಗಳೂರಿನಲ್ಲಿ ನಡೆದ ಎರಡನೇ ಕೊಲೆ ಪ್ರಕರಣ ಇದಾಗಿದ್ದು, ಸಾರ್ವಜನಿಕರಲ್ಲಿ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ. ಉರ್ವಾ ಪೊಲೀಸರು ಶಂಕಿತರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!