Connect with us

suicide

ವಿಟ್ಲ: ನಾಪತ್ತೆಯಾಗಿದ್ದ ಜೆಸಿಬಿ ಆಪರೇಟರ್ ಶವವಾಗಿ ಪತ್ತೆ; ಆತ್ಮಹತ್ಯೆ ಶಂಕೆ

Published

on

ವಿಟ್ಲ: ಬುಧವಾರ ಸಂಜೆಯಿಂದ ನಾಪತ್ತೆಯಾಗಿದ್ದ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ, ಇಂದು ಸಂಜೆ ಮನೆಯ ಸಮೀಪದ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ರಮೇಶ್ ನಾಯ್ಕ (35) ಮೃತಪಟ್ಟ ದುರ್ದೈವಿ. ಇವರು ಬುಧವಾರ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಮತ್ತು ಸ್ಥಳೀಯರು ಸಾಕಷ್ಟು ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಆದರೆ, ಇಂದು ಸಂಜೆ ಅವರ ಮನೆಯ ಸಮೀಪದ ಗುಡ್ಡ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮೃತ ರಮೇಶ್ ನಾಯ್ಕ ಅವರು ತಂದೆ-ತಾಯಿಯನ್ನು ಕಳೆದುಕೊಂಡಿದ್ದರು.ಇಬ್ಬರು ವಿವಾಹಿತ ಸಹೋದರಿಯರಿದ್ದು, ರಮೇಶ್ ಅವರು ನೆಕ್ಕರೆಕಾಡಿನಲ್ಲಿ ತಮ್ಮ ವೃದ್ಧೆ ಚಿಕ್ಕಮ್ಮನ ಜೊತೆಗೆ ವಾಸವಾಗಿದ್ದರು.ಇವರು ಜೆಸಿಬಿ ಆಪರೇಟರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು.

ರಮೇಶ್ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Belthangady

ಸರ್ಕಾರಿ ಕಾಲೇಜಿನ ಗುಮಾಸ್ತೆ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ – ಅನಾರೋಗ್ಯವೇ ಕಾರಣವೆಂಬ ಶಂಕೆ; ಪುದುವೆಟ್ಟು ಗ್ರಾಮದ ಮಿಯಾರು ಕಲ್ಲಂಡದಲ್ಲಿ ದಾರುಣ ಘಟನೆ

Published

on

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಡ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಗುಮಾಸ್ತೆ (ಕ್ಲರ್ಕ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪುದುವೆಟ್ಟು ಗ್ರಾಮದ ಮಿಯಾರು ಎಂಬಲ್ಲಿ ಸೆಪ್ಟೆಂಬರ್ 9 ರಂದು ಸಂಜೆ ಸಂಭವಿಸಿದೆ.

ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಪುದುವೆಟ್ಟು ಗ್ರಾಮದ ಮಿಯಾರು ಕಲ್ಲಂಡ ಮನೆ ನಿವಾಸಿಗಳಾದ ಅಣ್ಣಿ ಗೌಡ ಮತ್ತು ಮಾಲತಿ ದಂಪತಿಯ ಪುತ್ರಿ ಲಿಶ್ಮಿತಾ ಗೌಡ (20) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಲಿಶ್ಮಿತಾ ಗೌಡ ಅವರು ನಡ ಸರ್ಕಾರಿ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 9 ರಂದು ಸಂಜೆ ವೇಳೆಗೆ ಮನೆಯ ಸಮೀಪವೇ ಇದ್ದ ಕುಡಿಯುವ ನೀರಿನ ಬಾವಿಗೆ ಏಕಾಏಕಿ ಹಾರಿದ್ದಾರೆ.

ವಿಷಯ ಗಮನಕ್ಕೆ ಬಂದ ತಕ್ಷಣ ಸ್ಥಳೀಯರು ಹಾಗೂ ಕುಟುಂಬಸ್ಥರು ಆಕೆಯನ್ನು ರಕ್ಷಿಸಲು ಮುಂದಾದರೂ, ಅಷ್ಟರಲ್ಲಾಗಲೇ ಆಕೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯರ ನೆರವಿನೊಂದಿಗೆ ಮೃತದೇಹವನ್ನು ಬಾವಿಯಿಂದ ಮೇಲೆತ್ತಿ, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಅನಾರೋಗ್ಯದ ಹಿನ್ನೆಲೆ ಶಂಕೆ:

ಪ್ರಾಥಮಿಕ ಮಾಹಿತಿಯ ಪ್ರಕಾರ, ಲಿಶ್ಮಿತಾ ಗೌಡ ಅವರು ಕಳೆದ ಕೆಲವು ಸಮಯದಿಂದ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅನಾರೋಗ್ಯದ ಬಾಧೆ ತಾಳಲಾರದೆ, ಮಾನಸಿಕವಾಗಿ ನೊಂದು ಈ ದುಡುಕಿನ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು:

ವಿಷಯ ತಿಳಿದು ಧರ್ಮಸ್ಥಳ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (UDR / Suicide Case) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಲಾಗಿದೆ.

Continue Reading

Bantawala

ಕೂಲಿ ಕಾರ್ಮಿಕ ಆತ್ಮಹತ್ಯೆ: ವೀರಕಂಬದಲ್ಲಿ ದುರಂತ

Published

on

ವಿಟ್ಲ: ಕೂಲಿ ಕಾರ್ಮಿಕರೊಬ್ಬರು ಮನೆಯ ಸಮೀಪದ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೀರಕಂಬ ಗ್ರಾಮದಲ್ಲಿ ನಡೆದಿದೆ.

ವೀರಕಂಬ ಗ್ರಾಮದ ಶಿಂಗೇರಿ ನಿವಾಸಿ ದಿವಂಗತ ತನಿಯಪ್ಪ ನಾಯ್ಕ ಅವರ ಪುತ್ರ ಹರೀಶ್ ನಾಯ್ಕ (46) ಆತ್ಮಹತ್ಯೆಗೆ ಶರಣಾದವರು.

ದಿವಂಗತ ತನಿಯಪ್ಪ ನಾಯ್ಕ ಅವರ ಆರು ಜನ ಪುತ್ರರು ಹಾಗೂ ಮೂವರು ಪುತ್ರಿಯರ ಪೈಕಿ ಹರೀಶ್ ನಾಯ್ಕ ಅವರು ಅವಿವಾಹಿತರಾಗಿದ್ದರು. ಇಂದು ಬೆಳಿಗ್ಗೆ ತಮ್ಮ ಮನೆಯ ಸಮೀಪದಲ್ಲಿರುವ ತೋಟದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಯಾವುದೇ ದುಶ್ಚಟಗಳಿಲ್ಲದೆ ಶಾಂತ ಸ್ವಭಾವದವರಾಗಿದ್ದ ಹರೀಶ್ ಅವರ ಈ ನಿರ್ಧಾರಕ್ಕೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Continue Reading

Bantawala

ಉಪ್ಪಿನಂಗಡಿ: ಮನೆ ಒಳಗೆ ಮಹಿಳೆಯ ಅನುಮಾನಾಸ್ಪದ ಸಾವು – ಸತ್ಯಾಸತ್ಯತೆ ಹೊರತರಲು ಪೊಲೀಸ್ ತನಿಖೆ ತೀವ್ರ

Published

on

ಉಪ್ಪಿನಂಗಡಿ: ಪರ್ನೆ ಸಮೀಪದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ಮೃತ ಮಹಿಳೆಯನ್ನು ಸೇವಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾವ್ಯ ಎಂದು ಗುರುತಿಸಲಾಗಿದೆ. ಮನೆಯ ಒಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅರ್ಧ ಕಾಲು ನೆಲದ ಮೇಲೆ ಬಿದ್ದಿರುವ ಭಂಗಿಯಲ್ಲಿರುವ ಮೃತದೇಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಮೃತ ಕಾವ್ಯ ಅವರಿಗೆ ಇಬ್ಬರು ಮಕ್ಕಳಿದ್ದು, ಇತ್ತೀಚೆಗಷ್ಟೇ ಹೆಣ್ಣು ಮಗಳ ಮದುವೆ ನೆರವೇರಿಸಿದ್ದರು. ಅಗಲಿದ ಪತಿ, ಮಗ ಹಾಗೂ ಕುಟುಂಬಸ್ಥರನ್ನು ಅವರು ಅಗಲಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದ್ದು, ವಿಷಯ ತಿಳಿಯುತ್ತಿದ್ದಂತೆ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಸಮಗ್ರ ತನಿಖೆಯ ಬಳಿಕವಷ್ಟೇ ಸಾವಿನ ಹಿಂದಿನ ನೈಜ ಕಾರಣ ಬೆಳಕಿಗೆ ಬರಬೇಕಿದೆ

Continue Reading

Trending

Copyright © 2025 Deevatige

error: Content is protected !!