Connect with us

Article

ಪುತ್ತೂರಿನಲ್ಲಿ ಮೊಳಗಿದ ಅಂಕದ ಕೋಳಿಯ ಬಿಂಕದ ಕೂಗು

Published

on

ಜ್ಯೋತಿಪ್ರಕಾಶ್‌ ಪುಣಚ

ದೈವದೇವರ ನೇಮೋತ್ಸವದ ಪ್ರಯುಕ್ತ ನಡೆಸಲಾಗುವ ಸಾಂಪ್ರದಾಯಿಕ ಕೋಳಿ ಅಂಕಗಳಿಗೆ ಪೊಲೀಸ್ ಇಲಾಖೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಪುತ್ತೂರಿನ ತುಳುವರು ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತಡೆದಿದ್ದಾರೆ ಇದೀಗ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ದ.ಕ. ಆರಂಭವಾಗಿದ್ದು, ಸಾಂಪ್ರದಾಯಿಕ ಆಚರಣೆಯನ್ನು ಹತ್ತಿಕ್ಕುವ ಪೊಲೀಸ್ ಕ್ರಮಗಳ ವಿರುದ್ಧ ಇದುವರೆಗೂ ಯಾವುದೇ ತುಳು ಸಂಘಟನೆಗಳು, ತಲೆಯದಿರತಕ್ಕಂತಹ. ಒತ್ತಾಯಿಸಿರದಂತಹ ನಿರ್ಧಾರಕ್ಕೆ ವೇದಿಕೆ ಸಿದ್ಧವಾಗಿದೆ.
ಕೋಳಿ ಅಂಕಕ್ಕೆ ಜೂಜು ಎನ್ನುವ ಹಣೆ ಪಟ್ಟಿ ಕಟ್ಟಿದ್ದರಿಂದ ಪೊಲೀಸ್ ಇಲಾಖೆ ಇದಕ್ಕೆ ನಿರ್ಬಂಧ ಹೇರುತ್ತಿದೆ ಎಂಬುವುದು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿಯ ಪ್ರಮುಖ ಆರೋಪವಾಗಿದೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿಗೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಕರಾವಳಿಗರು ಒಂದೆಡೆ ಸೇರಿದ್ದಾರೆ. ಧಾರ್ಮಿಕ ಹಿನ್ನೆಲೆಯಲ್ಲಿ ಕೋಳಿಅಂಕದ ಮೂಲಕ ಗಣಗಳಿಗೆ ರಕ್ತತರ್ಪಣ ನೀಡುವ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿ ಆಚರಣೆ, ತೆಂಗಿನಕಾಯಿ ಕುಟ್ಟುವುದು ಸೇರಿದಂತೆ ದ ಕ ಜಿಲ್ಲೆಯ ಸಾಂಪ್ರದಾಯಿಕ ಆಚರಣೆಯಾದ ಕೋಳಿ ಅಂಕವನ್ನೂ ಅದರದ್ದೇ ಆದ ಚೌಕಟ್ಟಿನಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ಧಾರ್ಮಿಕ ಪರಂಪರೆಯ ಕೋಳಿ ಅಂಕಕ್ಕೆ ನಿಷೇಧ ಹೇರುವ ಮೂಲಕ ಜನರ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಕೆಲಸ ನಡೆಸಲಾಗಿದೆ ಎಂಬುದು ಸಮಿತಿಯ ಆರೋಪವಾಗಿದೆ. ಕ್ರಿಕೆಟ್‌, ಕುದುರೆ ರೇಸ್ ಕಂಬಳದಂತೆ ಸಾಂಪ್ರದಾಯಿಕ ಮನೋರಂಜನೆ ಮತ್ತು ಕ್ರೀಡೆಯಾದ ಕೋಳಿ ಅಂಕಕ್ಕೆ ಸರಕಾರ ಮಾನ್ಯತೆ ನೀಡಬೇಕೆಂಬುದೇ ಆ ಸಭೆಯ ನಿರ್ಧಾರವಾಗಿತ್ತು.

ನೂತನವಾಗಿ ಅಸ್ಥಿತ್ವಕ್ಕೆ ಬಂದ ವೇದಿಕೆಯ ಪ್ರಶ್ನೆಗಳೇನು ?

ಕೋಳಿ ಅಂಕ ನಡೆಯುವ ಸಂದರ್ಭ ಪೊಲೀಸ್ ದಾಳಿಯ ವೇಳೆಯಲ್ಲಿ ಅಮಾಯಕರು ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸುವಾಗ ಸಾವು ನೋವುಗಳು ನಡೆದಿರುವುದು ಕೂಡಾ ಇದೆ. ಈ ಕದ್ದುಮುಚ್ಚಿ ಕೋಳಿಅಂಕ ಮಾಡುವ ಅನಿವಾರ್ಯವಾದರೂ ನಮಗೆ ಯಾಕಾಗಿ ಬಂದಿದೆ ? ಕಂಬಳ ಮತ್ತು ಜಲ್ಲಿಕಟ್ಟುಗಳಿಗೆ ಕೆಲವು ವಿಶೇಷ ತಿದ್ದುಪಡಿಗಳ ಮೂಲಕ ಭಾರತದಲ್ಲಿ ಅನುಮತಿ ನೀಡಲಾಗಿರುವಾಗ ಕೋಳಿಅಂಕಕ್ಕೆ ಅನುಮತಿ ಸಿಗಲಾರದೇ ? ಯಾವುದೇ ಒಂದು ಕ್ರೀಡೆ ಮೂಲ ಆಶಯದಲ್ಲಿ ಜೂಜು ಆಗಲು ಸಾಧ್ಯವೇ ಇಲ್ಲ ಅದು ಕೇವಲ ಮನರಂಜನೆಯ ಸ್ಪರ್ಧೆಗೆ ಮಾತ್ರ ಸೀಮಿತವಾಗಿರುತ್ತದೆ. ಅದರ ಮೂಲ ಆಶಯ ಮಾತ್ರ ಮನರಂಜನೆ ಮತ್ತು ಸ್ಪೂರ್ತಿ ಹಾಗೂ ಸ್ಪರ್ಧೆ. ಹೀಗಿರುವಾಗ ತುಳುನಾಡಿನ ಪ್ರಾಚೀನ ಕ್ರೀಡೆಯಾದ ಜನಪದದೊಂದಿಗೆ ಹಾಸು ಹೊಕ್ಕಾಗಿರುವ ಅಬಾಲ ವೃದ್ಧರ ಗ್ರಾಮ್ಯ ಮನರಂಜನೆಯ ಮೂಲವಾಗಿರುವ ಕೋಳಿ ಅಂಕಕ್ಕೆ ಜೂಜಿನ ಹಣೆಪಟ್ಟಿ ಕಟ್ಟಿ ನಿಷೇಧಿಸುವುದು ಸರಿಯೇ ಎಂಬುವುದು ವೇದಿಕೆಯ ಪ್ರಶ್ನೆ

ಜೂಜು ಎಲ್ಲಾ ಕ್ರೀಡೆಗಳಲ್ಲಿ ನಡೆಯುತ್ತದೆ; ಕೋಳಿಅಂಕದಲ್ಲಿ ಕಣ್ಣಿಗೆ ರಾಚುತ್ತದೆ ಅಷ್ಟೇ !

ಜೂಜೆಂಬುವುದು ಕ್ರೀಡೆಗಳಿಗೆ ಅಂಟಿಕೊಂಡು ಅದೆಷ್ಠೋ ಸಮಯಗಳೇ ಕಳೆದಿದೆ. ಮಹಾಭಾರತದ ಜ್ಯೂತದಲ್ಲಿ ಸೋತ ಪಾಂಡವರು ಒತ್ತೆಯಿಟ್ಟದ್ದು ದ್ರೌಪದಿಯನ್ನು ಎಂಬುವುದರಿಂದ ಹಿಡಿದು ವಿವಿಧ ಕ್ರೀಡೆಗಳ ಅದರಲ್ಲೂ ಕ್ರಿಕೆಟಿನ ಪ್ರತಿ ಬಾಲು, ಎಸೆತ, ಪ್ರತಿ ಹೊಡೆತಗಳವರೆಗೆ ಜೂಜು ಎಷ್ಟು ಹಾಸು ಹೊಕ್ಕಾಗಿದೆ ಎಂದು ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಾಗಿಲ್ಲ. ಆದರೆ ಜ್ಯೂತ ಅಥವಾ ಕ್ರಿಕೆಟ್ ಎಂಬುದು ಜೂಜು ಅಥವಾ ಜುಗಾರಿಗಿಂತ ಮುಂಚೇನೆ ಹುಟ್ಟಿರುವುದು ಕೂಡಾ ಅಷ್ಟೇ ಸತ್ಯ ! ಯಾವುದೇ ಪಂದ್ಯ, ಆಟ, ಕ್ರೀಡೆಗಳು ರಂಗೇರಲು ಸ್ಪರ್ಧಾಭಾವ ಜೊತೆಗೆ ಗರಿಗೆದರಲು ಪಂಥಾಹ್ವಾನ ಅನಿವಾರ್ಯವೆಂಬುವುದನ್ನು ಹೌದೆಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಕುದುರೆ ರೇಸು, ಕ್ರಿಕೆಟ್‌ ಕಂಬಳದಲ್ಲಿ ನಡೆಯುವಷ್ಟು ಜೂಜು ಕೋಳಿಅಂಕದಲ್ಲಿ ಯಾವತ್ತೂ ನಡೆಯುವುದಿಲ್ಲ. ಆದರೆ ಕುದುರೆ ರೇಸು, ಕ್ರಿಕೆಟ್‌ ಕಂಬಳದಲ್ಲಿ ಇರುವ ವಿಶಾಲವಾದ ವೇದಿಕೆಯಲ್ಲಿ ನಡೆಯುವ ಜೂಜುಗಳು ಅಗೋಚರವಾದರೆ, ಕೋಳಿಅಂಕದಲ್ಲಿ ಇತಿಮಿತಿಯೊಳಗಿನ ಕಳದಲ್ಲಿ ನಡೆಯುವ ಜೂಜು ಕಣ್ಣಿಗೆ ರಾಚುತ್ತದೆ ಅಷ್ಟೆ !

ಎಲ್ಲಾ ತುಳುನಾಡಿನ ಸಂಘಟನೆಗಳು ಜೊತೆಗೂಡಬೇಕು

ಅದೇನೆ ಇರಲಿ ತುಳುನಾಡಿನ ಕೋಳಿ ಅಂಕ ಮತ್ತು ಕಂಬಳವನ್ನು ತುಳುವರಾದ ನಾವು ಕ್ರಿಕೆಟ್ ಕುದುರೆ ರೇಸುಗಳಿಂದಲೂ ಪ್ರತ್ಯೇಕವಾಗಿ ಗುರುತಿಸುವಂತಾಗಬೇಕು. ಅದನ್ನು ಕ್ರೀಡೆ ಎಂಬುದರ ಜೊತೆಗೆ ಮನರಂಜನೆ, ಜನಪದ ಆಚರಣೆ ಎಂಬಿತ್ಯಾದಿ ರೀತಿಯಲ್ಲಿ ಸ್ವೀಕರಿಸುವಂತಾಗಬೇಕು. ಇದಕ್ಕಾಗಿ ಅನೇಕ ಜನಪ್ರತಿನಿಧಿಗಳ ಸಹಿತ ತುಳುವರ ಸಂಘಟನೆಗಳು, ತುಳು ಒಕ್ಕೂಟಗಳು, ಹೊರನಾಡ ತುಳು ಸಂಘಸಂಸ್ಥೆಗಳು, ತುಳು ಜನಪದರು ಪುತ್ತೂರಿನ ಕೋಳಿ ಅಂಕ ಅಭಿಮಾನಿಗಳು ಪ್ರಾರಂಭಿಸಿದ ಹೊಸ ನಿರ್ಧಾರಗಳಿಗೆ ಜೊತೆಗೂಡಬೇಕಾಗಿದೆ ಎಂಬುವುದು ವೇದಿಕೆಯ ಆಶಯವಾಗಿದೆ.

ಕರಾವಳಿಯ ಜನರಿಗೆ ಕೋಳಿಅಂಕ ಸ್ಪರ್ಧೆಯಲ್ಲ; ಒಂದು ಧಾರ್ಮಿಕ ಆಚರಣೆ

ತುಳುನಾಡಿನ ಸಂಸ್ಕೃತಿಯಲ್ಲಿ ದೈವ-ದೇವರು ಮತ್ತು ಕೋಳಿ ಅಂಕಕ್ಕೆ ಅವಿನಾಭಾವ ಸಂಬಂಧವಿದೆ. ಹೊರಗಿನವರಿಗೆ ಇದು ಕೇವಲ ಒಂದು ಸ್ಪರ್ಧೆಯಾಗಿ ಕಂಡರೂ, ಕರಾವಳಿಯ ಜನರಿಗೆ ಇದು ಒಂದು ಧಾರ್ಮಿಕ ಆಚರಣೆ ಮತ್ತು ಭಕ್ತಿಯ ಸೇವೆಯಾಗಿದೆ. ಅನೇಕ ದೈವಸ್ಥಾನಗಳಲ್ಲಿ (ಉದಾಹರಣೆಗೆ: ಜುಮಾದಿ, ಪಂಜುರ್ಲಿ, ಜಾರಂದಾಯ) ವಾರ್ಷಿಕ ನೇಮ ಅಥವಾ ಉತ್ಸವದ ಸಂದರ್ಭದಲ್ಲಿ ಕೋಳಿ ಅಂಕವನ್ನು ನಡೆಸಲೇಬೇಕು ಎಂಬ ನಿಯಮವಿದೆ. ಇದನ್ನು ‘ದೈವದ ಕಳ’ ಅಥವಾ ‘ನೇಮದ ಕೋಳಿ ಅಂಕ’ ಎನ್ನಲಾಗುತ್ತದೆ. ಇದು ದೈವಕ್ಕೆ ಸಲ್ಲಿಸುವ ಒಂದು ಬಗೆಯ “ರಕ್ತ ತರ್ಪಣ” ಅಥವಾ ಹರಕೆ ಎಂದು ನಂಬಲಾಗುತ್ತದೆ. ಕೆಲವು ಕಡೆ ದೈವದ ನೇಮ ನಡೆಯುವ ಮುನ್ನ ಅಥವಾ ನಡೆದ ನಂತರ ಕೋಳಿ ಅಂಕ ನಡೆಯುತ್ತದೆ. ದೈವದ ಪಾತ್ರಿ (ದರ್ಶನ ಪಾತ್ರಿ) ಅಥವಾ ದೈವದ ಚಾಕರಿ ಮಾಡುವವರು ಮೊದಲು ಕೋಳಿಯನ್ನು ಅಂಕಕ್ಕೆ ಬಿಡುವ ಮೂಲಕ ಆಚರಣೆಗೆ ಚಾಲನೆ ನೀಡುತ್ತಾರೆ. ಈ ಸಂದರ್ಭದಲ್ಲಿ ನಡೆಯುವ ಅಂಕದಲ್ಲಿ ಯಾವುದೇ ಹಣದ ಪಣ (ಬೆಟ್ಟಿಂಗ್) ಇರುವುದಿಲ್ಲ, ಇದು ಸಂಪೂರ್ಣವಾಗಿ ಧಾರ್ಮಿಕವಾಗಿರುತ್ತದೆ. ಭಕ್ತರು ತಮ್ಮ ಕಷ್ಟಗಳು ದೂರಾದಾಗ ಅಥವಾ ಕೆಲಸಗಳು ಕೈಗೂಡಿದಾಗ ದೈವಕ್ಕೆ “ಕೋಳಿ ಅಂಕದ ಹರಕೆ” ಹೊರುತ್ತಾರೆ. ಹರಕೆ ತೀರಿಸಲು ನಿರ್ದಿಷ್ಟ ದೈವದ ಸನ್ನಿಧಿಯಲ್ಲಿ ತಮ್ಮ ಹುಂಜವನ್ನು ಅಂಕಕ್ಕೆ ಬಿಡುತ್ತಾರೆ.

ಹಠಕ್ಕೆ ಬಿದ್ದು ಹೋರಾಟ ಮಾಡಿದರೆ ಕೋಳಿ ಅಂಕವನ್ನು ಉಳಿಸಿಕೊಳ್ಳಲು ಸಾಧ್ಯವಿದೆ

ಈ ನಿಟ್ಟಿನಲ್ಲಿ ಪುತ್ತೂರಿನ ತುಳುವರು ಕರಾವಳಿಗರನ್ನು ಜೊತೆ ಸೇರಿಸಿಕೊಂಡು ತಮ್ಮ ಸಾಂಪ್ರದಾಯಿಕ ಆಚರಣೆಯನ್ನು ಉಳಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಮ್ಮ ತುಳುನಾಡ ಸಂಸ್ಕೃತಿ ಕ್ರೀಡೆ ಆಚರಣೆಗಳ ಉಳಿವಿಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ʼಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ದ.ಕ.ʼ ಎಂಬ ಸಮಿತಿಯನ್ನು ಹುಟ್ಟುಹಾಕಿ ಫೆ.1ರಂದು ಪುತ್ತೂರು ಕೊಟೆಚಾ ಸಭಾ ಭವನದಲ್ಲಿ ಸಮಾಲೋಚನಾ ಸಭೆ ನಡೆಸಿದ್ದಾರೆ. ನೂರಾರು ಮಂದಿ ಸೇರಿದ ಈ ಬಿಂಕದ ತುಳುವರ ಸಭೆಯಲ್ಲಿ ತುಳು ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಸದನದಲ್ಲಿ ಧ್ವನಿಯೆತ್ತುತ್ತಲೇ ಬಂದ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಯವರು ಭಾಗವಹಿಸಿದ್ದಾರೆ. ಕೋಳಿ ಅಂಕಕ್ಕೆ ಮಹಿಳೆಯರ ವಿರೋಧವಿದೆ ಎಂಬುವುದು ಗೊತ್ತು, ಅದಾಗ್ಯೂ ಜೂಜು ರಹಿತ ಕೋಳಿ ಅಂಕದ ಬಗ್ಗೆ ಮಾತ್ರ ನಾನು ಮಾತಾನಾಡುತ್ತಿದ್ದೇನೆ ಎಂದು ವೇದಿಕೆಯಲ್ಲಿ ಮಾತು ಪ್ರಾರಂಭಿಸಿದ ರೈಯವರು ಕೋಳಿ‌ ಅಂಕಕ್ಕೆ ಹೋಗುವವರು ರೈತರು… ಎದೆತಟ್ಟಿ ನಾವು ರೈತರೆಂದು ಹೇಳುತ್ತಾ, ಕೋಳಿ ಅಂಕದ ಹೋರಾಟಕ್ಕೆ ಬನ್ನಿ ಎಂದು ಉಭಯ ಜಿಲ್ಲೆಗಳ 12 ಶಾಸಕರ ಮನೆಯ ಕದವನ್ನು ಬಡಿದು ಹೋರಾಟಕ್ಕೆ ಕರೆಯಿರಿ, ಕರಾವಳಿಯ 12 ಶಾಸಕರು ಸದನದಲ್ಲಿ ಪ್ರಶ್ನಿಸಿದರೆ ಖಂಡಿತಾ ನಮ್ಮ ಜೂಜುರಹಿತ ಸಾಂಪ್ರದಾಯಿಕ ಕೋಳಿ ಅಂಕವನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ನಮ್ಮನ್ನು ( ಶಾಸಕರನ್ನು) ಉಪಯೋಗಿಸಿಕೊಂಡು ಹಠ ಬಿದ್ದು ಹೋರಾಟ ಮಾಡಿ ಎಂದು ಹೋರಾಟಗಾರರನ್ನು ಹುರಿದುಂಬಿಸಿದರು. ಶಾಸಕರ ಮಾತುಗಳನ್ನು ಕೇಳಿದ ಕೋಳಿಅಂಕದ ಅಭಿಮಾನಿಗಳ ಮುಖದಲ್ಲಿ ಸಂತಸದೊಂದಿಗೆ ಸಭೆ ಮುಕ್ತಾಯವಾಗಿದೆ.

ಕಾನೂನು ಚೌಕಟ್ಟಿನೊಳಗಡೆ ನಿಷೇಧವಾಗಿದ್ದ ಕೋಳಿ ಅಂಕಕ್ಕೂ ಕಟ್ಟುನಿಟ್ಟಿನ ನಿರ್ಬಂಧ

ಕೋಮು ದಳ್ಳುರಿಯಿಂದ ದಗದಗನೆ ಉರಿಯುತ್ತಿದ್ದ ಕರಾವಳಿಯನ್ನು ಕೇವಲ 6 ತಿಂಗಳಿನಲ್ಲಿಯೇ ಒಂದು ಮಾದರಿ ಶ್ರದ್ದಾಕೆಂದ್ರವಾಗಿ ಮಾಡುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾದ ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ. ಅರುಣ್ ಅವರು ಜಿಲ್ಲೆಯ ಹಲವಾರು ಅನಿಷ್ಟ ಪದ್ದತಿಗಳಿಗೆ ಕಾನೂನು ಕೈಕೋಲವನ್ನು ತೊಡಿಸಿ ನೆನೆಗುದಿಗೆ ಬಿದ್ದಿದ್ದ ಸಂವಿಧಾನದ ಆಡಳಿತಾತ್ಮಕ ಸೂತ್ರಗಳನ್ನು ಜಾರಿ ಗೊಳಿಸುವಾಗ ಕಾನೂನು ಚೌಕಟ್ಟಿನೊಳಗಡೆ ನಿಷೇಧವಾಗಿದ್ದ ಕೋಳಿ ಅಂಕಕ್ಕೂ ಕಟ್ಟುನಿಟ್ಟಿನ ನಿರ್ಬಂಧವಾಗಿದೆ. ಎಂಬುವುದು ಎಲ್ಲರಿಗೂ ಗೊತ್ತು.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960: ಕೋಳಿ ಕಾದಾಟ ಅಪರಾಧವಾಗಿದೆ

ಕೋಳಿ ಅಂಕ (Cockfighting) ಎನ್ನುವುದು ಭಾರತದ ಸಂಪ್ರದಾಯ ಮತ್ತು ಕಾನೂನಿನ ನಡುವೆ ಇರುವ ಒಂದು ಸೂಕ್ಷ್ಮ ವಿಷಯವಾಗಿದ್ದು, ಕಾನೂನಾತ್ಮಕವಾಗಿ ಕೋಳಿ ಅಂಕವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960: ಈ ಕಾಯ್ದೆಯ ಪ್ರಕಾರ ಪ್ರಾಣಿ ಅಥವಾ ಪಕ್ಷಿಗಳನ್ನು ಪರಸ್ಪರ ಕಾದಾಟಕ್ಕೆ ಬಿಡುವುದು, ಅದರಲ್ಲಿ ಬೆಟ್ಟಿಂಗ್ ಕಟ್ಟುವುದು ಅಥವಾ ಅಂತಹ ಪಂದ್ಯಗಳನ್ನು ಆಯೋಜಿಸುವುದು ಅಪರಾಧ. ಸುಪ್ರೀಂ ಕೋರ್ಟ್ ತೀರ್ಪುನ ಪ್ರಕಾರ ಪ್ರಾಣಿಗಳ ಹಕ್ಕುಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಯಾವುದೇ ರೀತಿಯ ಪ್ರಾಣಿ ಕಾದಾಟದ ಕ್ರೀಡೆಗಳು ಕಾನೂನುಬಾಹಿರ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಕರ್ನಾಟಕದ ಕರಾವಳಿ ಭಾಗಗಳಲ್ಲಿ (ದಕ್ಷಿಣ ಕನ್ನಡ, ಉಡುಪಿ) ಮತ್ತು ಗಡಿ ಭಾಗಗಳಲ್ಲಿ ಕೋಳಿ ಅಂಕವು ಸಾಂಪ್ರದಾಯಿಕವಾಗಿ ನಡೆಯುತ್ತಲೇ ಇತ್ತು. ಆದರೆ ಕೋಳಿ ಅಂಕ ನಡೆಸಲು ಸಿದ್ಧತೆ ನಡೆಸಿದರೆ ಪೊಲೀಸರು ಅಂತಹ ಸ್ಥಳಗಳ ಮೇಲೆ ದಾಳಿ ಮಾಡುತ್ತಲೇ ಇದ್ದರು. ಕಾರಣ ಕೋಳಿ ಅಂಕ ಕೇವಲ ಕ್ರೀಡೆಯಾಗಿ ಉಳಿಯದೆ, ಅಲ್ಲಿ ಲಕ್ಷಾಂತರ ರೂಪಾಯಿಗಳ ಜೂಜು ನಡೆಯುವುದರಿಂದ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಕೂಡ ಇದನ್ನು ನಿಷೇಧಿಸಲಾಗಿದೆ.ಕಾನೂನು ಕೋಳಿ ಅಂಕವನ್ನು ಏಕೆ ನಿಷೇಧಿಸಿದೆ ಎಂದರೆ ಒಂದನೆಯದಾಗಿ ಕೋಳಿಗಳ ಕಾಲಿಗೆ ಚೂಪಾದ ಕತ್ತಿ (ಬಾಳ್) ಅಥವಾ ಮುಳ್ಳುಗಳನ್ನು ಕಟ್ಟುವುದು. ಮತ್ತು ಎರಡನೇಯದಾಗಿ ಪಂದ್ಯದಲ್ಲಿ ಒಂದು ಕೋಳಿ ಸಾಯುವವರೆಗೆ ಅಥವಾ ತೀವ್ರವಾಗಿ ಗಾಯಗೊಳ್ಳುವವರೆಗೆ ಹೋರಾಡಿಸುವುದು. ಇದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಪ್ರಕಾರ ಅಪರಾಧವಾಗುತ್ತದೆ.

ಕಂಬಳ ಜಲ್ಲಿಕಟ್ಟುಗಳಿಗೆ ಇಲ್ಲದ ನಿಷೇಧ ಕೋಳಿ ಅಂಕಕ್ಕೆ ಯಾಕೆ ?
ಕೋಳಿ ಅಂಕಕ್ಕೆ ನಿಷೇಧವಿದ್ದರೂ, ಕಂಬಳ ಮತ್ತು ಜಲ್ಲಿಕಟ್ಟುಗಳಿಗೆ ಕೆಲವು ವಿಶೇಷ ತಿದ್ದುಪಡಿಗಳ ಮೂಲಕ ಭಾರತದಲ್ಲಿ ಅನುಮತಿ ನೀಡಲಾಗಿದೆ ಯಾಕೆಂದರೆ ಕಂಬಳ ಮತ್ತು ಜಲ್ಲಿಕಟ್ಟು ಮೂಲತಃ ಕ್ರೀಡೆಗಳಾಗಿವೆ, ಇಲ್ಲಿ ಕೋಳಿ ಅಂಕದಂತೆ ದೊಡ್ಡ ಮಟ್ಟದ ವ್ಯವಸ್ಥಿತ ಜೂಜಾಟ ಕಾನೂನಿನ ಕಣ್ಣಿನಲ್ಲಿ ಅಷ್ಟಾಗಿ ಗೋಚರಿಸುವುದಿಲ್ಲ. ಪ್ರಾಣಿಯ ಸಾವು ಸಂಭವಿಸುವುದಿಲ್ಲ: ಈ ಕ್ರೀಡೆಗಳಲ್ಲಿ ಪ್ರಾಣಿಗಳು ಸಾಯುವ ಉದ್ದೇಶವಿರುವುದಿಲ್ಲ (ಅವುಗಳನ್ನು ಕೇವಲ ಓಡಿಸಲಾಗುತ್ತದೆ ಅಥವಾ ಹಿಡಿಯಲಾಗುತ್ತದೆ). ಈ ಕ್ರೀಡೆಗಳು ಆಯಾ ಪ್ರದೇಶದ ರೈತರ ಸಂಸ್ಕೃತಿ ಮತ್ತು ಪಶುಸಂಗೋಪನೆಯೊಂದಿಗೆ ಬೆಸೆದುಕೊಂಡಿವೆ ಎಂದು ಸರ್ಕಾರಗಳು ವಾದ ಮಂಡಿಸಿವೆ. ಹಾಗೆಂದು ಯಾವುದೇ ಕ್ರೀಡೆಯಲ್ಲಿ ಪ್ರಾಣಿಗಳಿಗೆ ರಕ್ತ ಬರುವಂತಹ ಗಾಯವಾದರೆ ಅಥವಾ ಉದ್ದೇಶಪೂರ್ವಕವಾಗಿ ಹಿಂಸೆ ನೀಡಿದ್ದು ಕಂಡುಬಂದರೆ, ಅಂತಹ ಆಯೋಜಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ಮತ್ತು ಕ್ರೀಡೆಯನ್ನು ತಕ್ಷಣವೇ ನಿಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ.

ಮಂಜೋಟಿ ಏರಿದ ಕಂಬಳವನ್ನು ಗಂತಿಗೆ ತಂದು ನಿಲ್ಲಿಸಿದವರು ಇದೇ ಆಶೋಕಣ್ಣ

2014ರಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿನ ‘ಜಲ್ಲಿಕಟ್ಟು’ ಕ್ರೀಡೆಯನ್ನು ನಿಷೇಧಿಸಿದ ಬೆನ್ನಲ್ಲೇ, ಕರ್ನಾಟಕದಲ್ಲಿ ಕಂಬಳದ ಮೇಲೂ ನಿರ್ಬಂಧಗಳು ಬಂದವು. ಆ ನಂತರ ಕಂಬಳವು ಕರಾವಳಿ ಜನರ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯ ಅವಿಭಾಜ್ಯ ಅಂಗವಾಗಿದ್ದರಿಂದ ನಿಷೇಧದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆದವು. ರಾಜ್ಯ ಸರ್ಕಾರವು ‘ಪ್ರಾಣಿ ಹಿಂಸೆ ತಡೆ ಕಾಯ್ದೆ’ಗೆ ತಿದ್ದುಪಡಿ ತಂದು, ಕಂಬಳವನ್ನು “ಸಾಂಪ್ರದಾಯಿಕ ಕ್ರೀಡೆ” ಎಂದು ಪರಿಗಣಿಸಿ 2017ರಲ್ಲಿ ವಿಶೇಷ ಸುಗ್ರೀವಾಜ್ಞೆ ಹೊರಡಿಸಿತು. ಸುದೀರ್ಘ ವಿಚಾರಣೆಯ ನಂತರ, ಮೇ 18, 2023 ರಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಕಂಬಳಕ್ಕೆ ನೀಡಿದ ರಾಜ್ಯ ಸರ್ಕಾರದ ಅನುಮತಿಯನ್ನು ಎತ್ತಿ ಹಿಡಿಯಿತು ಎಂಬುವುದು ನಮಗೆಲ್ಲಾ ತಿಳಿದಿರುವ ವಿಚಾರ. ಇದರ ಹಿಂದೆ ಮಂಜೋಟಿ ಏರಿದ ಕಂಬಳವನ್ನು ಗಂತಿಗೆ ತಂದು ನಿಲ್ಲಿಸಿದವರು ಇದೇ ಆಶೋಕಣ್ಣ ಎಂಬುವುದು ಈಗ ಜನಜನಿತ.

ಶಾಸಕರ ಮಾರ್ಗದರ್ಶನದಲ್ಲಿ ಮುಂದುವರಿಯುವುದು ಮಾತ್ರ ಹೋರಾಟಗಾರರಿಗೆ ಉಳಿದಿರುವ ಒಂದೇ ಒಂದು ದಾರಿ !

ಸಮಾಲೋಚನಾ ಸಭೆಯಲ್ಲಿ ಶಾಸಕರು ಒಂದು ಮಾತಿನ ಭರವಸೆ ನೀಡಿದ್ದಾರೆ. ಹೋರಾಟಗಾರರು ಉಭಯ ಜಿಲ್ಲೆಗಳ 13 ಶಾಸಕರ ಮನೆಯ ಕದವನ್ನು ತಟ್ಟಿ ಸಾಂಪ್ರಾದಾಯಿಕ ಆಚರಣೆಯನ್ನು ಉಳಿಸಿಕೊಳ್ಳಲು ಧ್ವನಿ ಎತ್ತುವಂತೆ ಮಾಡಿ, ಸದನದಲ್ಲಿ ಪ್ರಶ್ನಿಸೋಣ ಸದನದಲ್ಲಿ ಎಲ್ಲಾ ಶಾಸಕರು ಮಾತನಾಡಿದರೆ ಸಾಂಪ್ರದಾಯಿಕ ಆಚರಣೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ ಅಂದರೆ ಸಾಧ್ಯವಿದೆ ಎಂಬುವುದನ್ನು ರೈಯವರು ವೇದಿಕೆಯವರಿಗೆ ಪರೋಕ್ಷವಾಗಿ ತಿಳಿಸಿದ್ದಾರೆ. ಜೊತೆಗೆ ಬೇಕಾಗಿರುವುದು ಹಠ ಸಾಧನೆ ಎಂಬುವುದನ್ನೂ ಹೇಳುವುದಕ್ಕೆ ಮರೆಯಲಿಲ್ಲ. ಶಾಸಕರ ಮಾರ್ಗದರ್ಶನದಲ್ಲಿ ಮುಂದುವರಿಯುವುದು ಮಾತ್ರ ಹೋರಾಟಗಾರರಿಗೆ ಉಳಿದಿರುವ ಒಂದೇ ಒಂದು ದಾರಿ ! ಇಲ್ಲವಾದರೆ ಕಾನೂನು ಕಟ್ಟಳೆಗಳು ಬಂಟನಾಗಿ ಹೋರಾಟಗಾರರು ಒಟ್ಟೆಯಾಗುತ್ತಾರೆ. ಕೊನೆಯದಾಗಿ ಸಾಂಪ್ರದಾಯಿಕ ಜೂಜುರಹಿತ ಕೋಳಿಅಂಕಕ್ಕೆ ಕಾನೂನಿನಲ್ಲಿ ಅವಕಾಶ ಸಿಗಲಿ ಎಂದು ದೈವ ದೇವರಲ್ಲಿ ಪ್ರಾರ್ಥಿಸುತ್ತಾ ಮತ್ತೆ ಸಿಗೋಣ ಕಳದಲ್ಲಿ.. ಕೋಳಿಅಂಕದ ಕಳದಲ್ಲಿ ?

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಆಕಾಶದ ಕಾಣುತ್ತಿದೆ ಅಚ್ಚರಿ: ಚಂದ್ರನ ಪಕ್ಕ‌ ಇಂದು ಮಿನುಗುತ್ತಿರುವ ‘ಬೆಳ್ಳಿ ಚುಕ್ಕೆ’ ಶುಕ್ರ ಗ್ರಹದ ರಹಸ್ಯ!

Published

on

ಆಕಾಶದಲ್ಲಿ ಚಂದ್ರನ ಸನಿಹದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾಗಿ ಮಿನುಗುತ್ತಿರುವುದು ಯಾವುದೇ ನಕ್ಷತ್ರವಲ್ಲ, ಬದಲಾಗಿ ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ (Venus). ಸಂಜೆಯ ಪಶ್ಚಿಮ ದಿಗಂತದಲ್ಲಿ ಬಾಲಚಂದ್ರ ಹಾಗೂ ಈ ಬೆಳ್ಳಿ ಚುಕ್ಕೆಯು ಪರಸ್ಪರ ಅತ್ಯಂತ ಹತ್ತಿರದಲ್ಲಿ ಗೋಚರಿಸುತ್ತಿರುವುದು ಎಲ್ಲೆಡೆ ಭಾರಿ ಕುತೂಹಲ ಮೂಡಿಸಿದೆ.

ಇದು ನಕ್ಷತ್ರವೇಕಲ್ಲ? ಶುಕ್ರ ಗ್ರಹದ ವಿಶೇಷತೆ

ಸ್ವಂತ ಬೆಳಕಿಲ್ಲದಿದ್ದರೂ ಕಾಂತಿ: ಸಾಮಾನ್ಯ ನಕ್ಷತ್ರಗಳು ತಮ್ಮ ಸ್ವಂತ ಬೆಳಕಿನಿಂದ ಮಿನುಗುತ್ತವೆ. ಆದರೆ ಶುಕ್ರ ಗ್ರಹಕ್ಕೆ ಸ್ವಂತ ಬೆಳಕಿಲ್ಲ. ಇದು ಸೂರ್ಯನ ಬೆಳಕನ್ನು ಅತ್ಯಧಿಕ ಪ್ರಮಾಣದಲ್ಲಿ ಪ್ರತಿಫಲಿಸುವುದರಿಂದ ರಾತ್ರಿ ಆಕಾಶದಲ್ಲಿ ಚಂದ್ರ ಬಿಟ್ಟರೆ ಅತಿ ಹೆಚ್ಚು ಕಾಂತಿಯುತವಾಗಿ ಕಾಣಿಸುತ್ತದೆ. ಈ ಕಾರಣಕ್ಕಾಗಿಯೇ ಇದನ್ನು ‘ಸಂಜೆ ನಕ್ಷತ್ರ’ ಅಥವಾ ‘ಬೆಳ್ಳಿ ಚುಕ್ಕೆ’ ಎಂದು ಕರೆಯಲಾಗುತ್ತದೆ.

ದಟ್ಟ ವಾತಾವರಣ: ಶುಕ್ರ ಗ್ರಹವು ಸೂರ್ಯನಿಗೆ ಹತ್ತಿರವಿರುವ ಗ್ರಹವಾಗಿದ್ದು, ಇದರ ದಟ್ಟವಾದ ವಾತಾವರಣವು ಸೂರ್ಯನ ಬೆಳಕನ್ನು ಬಲವಾಗಿ ಪ್ರತಿಫಲಿಸುತ್ತದೆ.

ಸಂಯೋಗ (Conjunction) ಮತ್ತು ಚಂದ್ರ ಮರೆಮಾಚುವಿಕೆ (Lunar Occultation)

ಗ್ರಹ-ಚಂದ್ರ ಯುತಿ: ಖಗೋಳಶಾಸ್ತ್ರದ ಪ್ರಕಾರ, ಭೂಮಿ, ಚಂದ್ರ ಮತ್ತು ಶುಕ್ರ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ನಿರ್ದಿಷ್ಟ ಸಾಪೇಕ್ಷ ಸ್ಥಾನಕ್ಕೆ ಬಂದಾಗ ಒಂದೇ ನೇರ ಸಾಲಿನಲ್ಲಿ (Conjunction) ಅತಿ ಹತ್ತಿರದಲ್ಲಿ ಕಾಣಿಸಿಕೊಳ್ಳುತ್ತವೆ. ಭೂಮಿಯಿಂದ ನೋಡುವಾಗ ಈ ಎರಡೂ ಆಕಾಶಕಾಯಗಳು ಅಕ್ಕಪಕ್ಕದಲ್ಲಿ ಇದ್ದಂತೆ ಭಾಸವಾಗುತ್ತವೆ.

ಚಂದ್ರ ಮರೆಮಾಚುವಿಕೆ: ಭಾರತದ ಕೆಲ ಭಾಗಗಳಲ್ಲಿ ಚಂದ್ರನು ಶುಕ್ರ ಗ್ರಹದ ಮುಂಭಾಗದಲ್ಲೇ ಹಾದುಹೋಗುವ ಅಪರೂಪದ ‘ಚಂದ್ರ ಮರೆಮಾಚುವಿಕೆ’ (Lunar Occultation) ವಿದ್ಯಮಾನವೂ ಜರಗಿದೆ. ಅಂದರೆ ಕೆಲಕಾಲ ಶುಕ್ರ ಗ್ರಹವು ಚಂದ್ರನ ಹಿಂದೆ ಮರೆಯಾಗಿ, ನಂತರ ಆಚೆ ಬಂದಿದೆ. ಇದು ಬರಿಗಣ್ಣಿಗೂ ಅತ್ಯಂತ ಆಕರ್ಷಕವಾಗಿ ಗೋಚರಿಸುವ ದೃಶ್ಯವಾಗಿದೆ.

ಚೌತಿ ಚಂದ್ರನ ನಂಬಿಕೆ ಮತ್ತು ವೈಜ್ಞಾನಿಕ ಸತ್ಯ

ಪೌರಾಣಿಕ ಹಿನ್ನೆಲೆ: ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ (ಗಣೇಶ ಚತುರ್ಥಿ) ದಿನ ಚಂದ್ರನನ್ನು ನೋಡಿದರೆ ಕಳಂಕ ಅಥವಾ ಅಪವಾದ ಬರುತ್ತದೆ (ಮಣಿಭರಣ ಕಳಂಕ) ಎಂಬುದು ಜನರಲ್ಲಿ ಶತಶತಮಾನಗಳಿಂದ ರೂಢಿಯಲ್ಲಿರುವ ನಂಬಿಕೆಯಾಗಿದೆ.

ವೈಜ್ಞಾನಿಕ ಸತ್ಯ: ಖಗೋಳ ವಿಜ್ಞಾನದ ದೃಷ್ಟಿಯಿಂದ ಚಂದ್ರನನ್ನು ನೋಡುವುದರಿಂದ ಯಾವುದೇ ಶಾಪ, ಅಪವಾದ ಅಥವಾ ಕೆಟ್ಟ ಪರಿಣಾಮಗಳು ಸಂಭವಿಸುವುದಿಲ್ಲ. ಇದು ಕೇವಲ ನೈಸರ್ಗಿಕ ಉಪಗ್ರಹವಾಗಿದ್ದು, ಭೂಮಿಯ ಸುತ್ತ ನಿರಂತರವಾಗಿ ಸುತ್ತುತ್ತದೆ. ಚತುರ್ಥಿಯ ದಿನ ಚಂದ್ರನು ಭೂಮಿಗೆ ಮತ್ತು ಸೂರ್ಯನಿಗೆ ಇರುವ ಸಾಪೇಕ್ಷ ಸ್ಥಾನದಿಂದಾಗಿ ತೆಳುವಾದ ಕಮಾನು ಅಥವಾ ಅರ್ಧಚಂದ್ರಾಕಾರದಲ್ಲಿ ಗೋಚರಿಸುತ್ತಾನೆ.

ವೀಕ್ಷಣೆ ಹೇಗೆ?

ಅಮಾವಾಸ್ಯೆಯ ನಂತರದ ಆರಂಭಿಕ ದಿನಗಳಲ್ಲಿ (ಬಾಲಚಂದ್ರನಿದ್ದಾಗ) ಪಶ್ಚಿಮ ಆಕಾಶದಲ್ಲಿ ಸಂಜೆಯ ಹೊತ್ತು ಈ ಅದ್ಭುತ ದೃಶ್ಯವು ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಕಾರಣದಿಂದ ಜನರು ಇದನ್ನು ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Continue Reading

Article

ಸರ್ವರಲ್ಲೂ ಸಮಭಾವದ ಪ್ರತೀಕ ಗಣೇಶೋತ್ಸವ: ಹಬ್ಬಗಳು ಒಗ್ಗಟ್ಟಿನ ಸೇತುವೆಯಾಗಲಿ

Published

on

✍️ ಜ್ಯೋತಿಪ್ರಕಾಶ್‌ ಪುಣಚ, ಪ್ರಧಾನ ಸಂಪಾದಕರು, ದೀವಟಿಗೆ ಡಿಜಿಟಲ್‌ ಮೀಡಿಯಾ-9448441282

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧ್ರಾಮಿಕ ಆಚರಣೆಗಳಲ್ಲ, ಅವು ಮನುಕುಲವನ್ನು ಬೆಸೆಯುವ ಭಾವನಾತ್ಮಕ ಕೊಂಡಿಗಳು. ಅದರಲ್ಲಿಯೂ ಗಣೇಶ ಚತುರ್ಥಿಯು ವಿಘ್ನಗಳನ್ನು ನಿವಾರಿಸಿ, ಬುದ್ಧಿವಂತಿಕೆ ಹಾಗೂ ಸಮೃದ್ಧಿಯನ್ನು ತರುವ ಹಬ್ಬವಾಗಿ ಮಾತ್ರವಲ್ಲದೆ, ಸಮಾಜದಲ್ಲಿ ಸೌಹಾರ್ದತೆ ಮತ್ತು ಐಕ್ಯತೆಯನ್ನು ಸಾರುವ ಮಹತ್ವದ ಸಂದರ್ಭವಾಗಿದೆ.

ಪ್ರಕೃತಿಯ ವಿಸ್ಮಯವನ್ನು ಗಮನಿಸಿದರೆ ನಮಗೆ ದೊಡ್ಡ ಪಾಠ ಸಿಗುತ್ತದೆ. ಸೂರ್ಯನ ಬೆಳಕು, ಚಂದ್ರನ ತಂಪಾದ ಬೆಳಕು, ಬೀಸುವ ಗಾಳಿ ಮತ್ತು ಹರಿಯುವ ನದಿಗಳು ಎಂದಿಗೂ ಜಾತಿ, ಮತ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಪ್ರಕೃತಿಯು ಇಡೀ ಮಾನವ ಕುಲವನ್ನು ತನ್ನ ಮಕ್ಕಳಂತೆ ಸಮಾನವಾಗಿ ಕಾಣುತ್ತದೆ. ಅದೇ ರೀತಿ, ನಮ್ಮ ಹಬ್ಬಗಳ ಆಚರಣೆಯೂ ಕೂಡ ಭೇದಭಾವಗಳನ್ನು ಮರೆತು ಎಲ್ಲರನ್ನು ಅಪ್ಪಿಕೊಳ್ಳುವಂತಾಗಬೇಕು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಕ್ಕೆ ಮುನ್ನುಡಿ ಬರೆದಾಗ, ಅದರ ಮುಖ್ಯ ಉದ್ದೇಶವೇ ಜಾತಿ-ಮತಗಳ ಗಡಿಯನ್ನು ಮೀರಿ ಇಡೀ ಸಮಾಜವನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯವನ್ನು ಬಿತ್ತುವ ಮಾಧ್ಯಮಗಳಾಗಬೇಕಿದೆ.

ಪ್ರತಿಯೊಬ್ಬರಿಗೂ ಅವರವರ ಧರ್ಮ, ನಂಬಿಕೆಗಳು ಮತ್ತು ಆಚರಣೆಗಳು ಶ್ರೇಷ್ಠವಾಗಿರುವುದು ಸಹಜ ಮತ್ತು ನೈಸರ್ಗಿಕ. ಆದರೆ, ತನ್ನ ಧರ್ಮದಷ್ಟೇ ಇತರರ ಧರ್ಮವನ್ನೂ ಗೌರವಿಸುವುದೇ ನಿಜವಾದ ಮಾನವತೆಯ ಪ್ರತೀಕ. ದ್ವೇಷ ಅಥವಾ ಅಸೂಯೆಗಾಗಿ ಒಗ್ಗೂಡುವುದಕ್ಕಿಂತ, ಸೌಹಾರ್ದತೆ ಮತ್ತು ಮಾನವೀಯತೆಗಾಗಿ ಒಂದಾಗುವುದೇ ಹಬ್ಬಗಳ ಅತಿ ದೊಡ್ಡ ಸಂದೇಶ.

ಈ ಗಣೇಶ ಚತುರ್ಥಿಯಂದು ವಿಘ್ನಹರ್ತನನ್ನು ಆರಾಧಿಸುವಾಗ, ನಮ್ಮ ಮನಸ್ಸಿನಲ್ಲಿರುವ ಅಹಂಕಾರ, ತಾರತಮ್ಯ ಮತ್ತು ದ್ವೇಷದ ಭಾವನೆಗಳನ್ನು ವಿಸರ್ಜಿಸೋಣ. ಪ್ರಕೃತಿಯಂತೆ ವಿಶಾಲವಾದ ಹೃದಯವನ್ನು ರೂಢಿಸಿಕೊಂಡು, ಎಲ್ಲರೊಂದಿಗೆ ಬೆರೆತು ಬಾಳುವ ಸಂಕಲ್ಪ ಮಾಡೋಣ. ಹಬ್ಬಗಳು ನಮ್ಮನ್ನು ವಿಭಜಿಸದೆ, ಸೌಹಾರ್ದತೆಯ ಬಂಧದಲ್ಲಿ ಮತ್ತಷ್ಟು ಗಟ್ಟಿಯಾಗಿ ಬೆಸೆಯಲಿ.

ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು!

Continue Reading

Article

ಚಿತ್ರದಲ್ಲಿ ತಾಯಿಯನ್ನು ಹುಡುಕಿದ ಕರು: ಪ್ರಕೃತಿಯ ಮಮತೆ ಮತ್ತು ಮಾನವನ ಕಠೋರತೆಗೆ ಹಿಡಿದ ಕನ್ನಡಿ

Published

on

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ಸಣ್ಣ ವಿಡಿಯೋ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತರಿಸುವಂತಿದೆ. ತಾಯಿಯ ಪ್ರೀತಿ, ಮಮತೆ ಮತ್ತು ಅಪ್ಪುಗೆಗಾಗಿ ಒಂದು ಜೀವ ಎಷ್ಟು ತವಕಿಸುತ್ತದೆ ಎಂಬುದಕ್ಕೆ ಈ ಸನ್ನಿವೇಶ ಸಾಕ್ಷಿಯಾಗಿದೆ.

ರಸ್ತೆಯ ಬದಿಯಲ್ಲಿ ನಿಂತಿದ್ದ ಹಾಲಿನ ಡೈರಿಯ ಲಾರಿಯೊಂದರ ಹಿಂಭಾಗದಲ್ಲಿ ಹಸುವಿನ ದೊಡ್ಡ ಚಿತ್ರವಿತ್ತು (ಪೋಸ್ಟರ್). ಹಾದಿಯಲ್ಲಿ ಅನಾಥವಾಗಿ ಅಲೆಯುತ್ತಿದ್ದ ಸಣ್ಣ ಕರುವೊಂದು ಆ ಚಿತ್ರವನ್ನು ಕಂಡ ತಕ್ಷಣ, ಅದು ತನ್ನದೇ ಹೆತ್ತ ತಾಯಿ ಎಂದು ಭಾವಿಸಿದೆ. ಓಡೋಡಿ ಬಂದು “ಅಂಬಾ…” ಎಂದು ಕರೆದಿದೆ. ಚಿತ್ರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ, ತಾಯಿಯ ಬಳಿಗೆ ಹೋಗಲು ಹಂಬಲಿಸಿ ಲಾರಿಯ ಹಿಂಭಾಗಕ್ಕೆ ತನ್ನ ಮುಂಗಾಲುಗಳನ್ನಿಟ್ಟು ನಿಂತಿದೆ. ಹಸುವಿನ ಚಿತ್ರದಲ್ಲಿದ್ದ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯಲು ನಿರಂತರ ಪ್ರಯತ್ನ ನಡೆಸಿದೆ.

ಆದರೆ, ಅದು ಕೇವಲ ನಿರ್ಜೀವ ಪೋಸ್ಟರ್ ಎಂಬ ಸತ್ಯ ಆ ಮುಗ್ಧ ಕರುವಿಗೆ ತಿಳಿಯಲಿಲ್ಲ. “ತಾಯಿ ನನ್ನನ್ನು ಏಕೆ ಹತ್ತಿರಕ್ಕೆ ಕರೆದುಕೊಳ್ಳುತ್ತಿಲ್ಲ, ಏಕೆ ಹಾಲು ನೀಡುತ್ತಿಲ್ಲ?” ಎಂದು ಅದು ನಿರಾಶೆಯಿಂದ ಗೋಗರೆಯುವ ದೃಶ್ಯ ಪ್ರತಿಯೊಬ್ಬರ ಕರುಳನ್ನು ಹಿಂಡುವಂತಿದೆ.

ಹೈನುಗಾರಿಕೆ ಮತ್ತು ನಮ್ಮ ನೈತಿಕತೆ:

ಈ ಸನ್ನಿವೇಶವು ಕೇವಲ ಒಂದು ವೈರಲ್ ವಿಡಿಯೋ ಅಲ್ಲ; ಬದಲಿಗೆ ಪ್ರಸ್ತುತ ಸಮಾಜದಲ್ಲಿ ಸಾಗುತ್ತಿರುವ ಹೈನುಗಾರಿಕೆ ಉದ್ಯಮದ ಕಠೋರ ನೈಜತೆಗೆ ಹಿಡಿದ ಕನ್ನಡಿ. ಪ್ರತಿಯೊಂದು ಪ್ರಾಣಿ-ಪಕ್ಷಿಗೂ ತಾಯಿಯ ಮಮತೆ ಅತ್ಯಗತ್ಯ. ಆದರೆ ಮನುಷ್ಯ ತನ್ನ ಸ್ವಾರ್ಥ ಮತ್ತು ಲಾಭಕ್ಕಾಗಿ ಕರು ಕುಡಿಯಬೇಕಾದ ಹಾಲನ್ನು ಸಂಪೂರ್ಣವಾಗಿ ಹಿಂಡಿ ಮಾರಾಟ ಮಾಡುತ್ತಿದ್ದಾನೆ.

ಅದರಲ್ಲೂ ವಿಶೇಷವಾಗಿ ಗಂಡು ಕರು ಹುಟ್ಟಿದರೆ, ಹಾಲು ನೀಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಅದನ್ನು ಬೀದಿಗೆ ತಳ್ಳುವುದು ಅಥವಾ ಅನಾಥವಾಗಿ ಬಿಟ್ಟುಬಿಡುವುದು ಸಮಾಜದಲ್ಲಿ ಸಾಮಾನ್ಯವಾಗಿದೆ. ತಾಯಿಯ ಹಾಲಿನಿಂದಲೂ, ತಾಯಿಯ ಪ್ರೀತಿಯಿಂದಲೂ ವಂಚಿತವಾದ ಇಂತಹ ಮುಗ್ಧ ಜೀವಿಗಳು ರಸ್ತೆ ರಸ್ತೆಗಳಲ್ಲಿ ಅಲೆಯುತ್ತಾ, ನಿರ್ಜೀವ ಚಿತ್ರಗಳಲ್ಲೂ ತಮ್ಮ ತಾಯಿಯನ್ನು ಹುಡುಕುವ ಪರಿಸ್ಥಿತಿ ಬಂದೊದಗಿರುವುದು ಅತ್ಯಂತ ಶೋಚನೀಯ.

ಈ ವಿಡಿಯೋ ನಮಗೆಲ್ಲರಿಗೂ ಒಂದು ಪ್ರಶ್ನೆಯನ್ನು ಎಸೆದಿದೆ — ಮನುಷ್ಯನ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗಳ ಕರುಳ ಬಳ್ಳಿಯ ಬಂಧವನ್ನು ಹೀಗೆ ತುಂಡರಿಸುವುದು ಎಷ್ಟು ಸರಿ? ಪ್ರಾಣಿಗಳ ಮೇಲಿನ ದಯೆ ಮತ್ತು ಕರುಣೆ ಕೇವಲ ಮಾತಿಗೆ ಸೀಮಿತವಾಗದೇ ಕಾರ್ಯಾಚರಣೆಗೆ ಬರಬೇಕಿದೆ

Continue Reading

Trending

Copyright © 2025 Deevatige

error: Content is protected !!