Connect with us

crime

ಡೆಲ್ಲಿ ಮಹಿಳಾ ಪೊಲೀಸ್‌ ಕಮಾಂಡೋ ಹತ್ಯೆವರದಕ್ಷಿಣೆಗಾಗಿ ತಲೆಹೊಡೆದು ಕೊಲೆ ಮಾಡಿದ ಪತಿ

Published

on

ಮದುವೆಯಾದ ನಂತರ ಬಹುತೇಕ ಹಿಂಸೆಗಳು, ಕೊಲೆಗಳು ವರದಕ್ಷಿಣೆಗಾಗಿ ಬಾಯಿಬಿಡುವ ನರರಾಕ್ಷಸರಿಂದ ನಡೆಯುತ್ತಿರುವುದನ್ನು ಕೇಳುತ್ತಲೇ ಇರುತ್ತೇವೆ. ಆದರೆ ಒಬ್ಬ ಮಹಿಳಾ ಪೊಲೀಸ್‌ ಕೂಡಾ ಈ ವರದಕ್ಷಿಣೆ ಕಿರುಕುಳಕ್ಕೆ ತನ್ನ ಪತಿಯಿಂದಲೇ ಹತ್ಯೆಯಾಗುತ್ತಾರೆಂದರೆ ನಂಬುವುದೇ ಕಷ್ಟ ! ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂತಹುದೊಂದು ಘಟನೆ ನಡೆದಿರುವುದರಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ.

ಕಾಜಲ್‌ ಎಂಬವರೇ ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆಗಳಿಂದ ನಿರಂತರವಾಗಿ ನೋವು ಅನುಭವಿಸುತ್ತಾ ಹತ್ಯೆಯಾದ ಡೆಲ್ಲಿ ಮಹಿಳಾ ಪೊಲೀಸ್ ಕಮಾಂಡೋ, ಪತಿ ಅಂಕುರ್ ಚೌಧರಿ ಎಂಬಾತನೇ ತನ್ನ ಪತ್ನಿಯನ್ನು ಕೊಲೆ ಮಾಡಿದ ಪಾತಕಿ
ಡೆಲ್ಲಿ ಮಹಿಳಾ ಪೊಲೀಸ್ ಕಮಾಂಡೋ ಹತ್ಯೆ ಪ್ರಕರಣ ಕ್ಕೆ ಹೊಸ ತಿರುವು ದೊರೆತಿದ್ದು, ಹತ್ಯೆ ಮಾಡಿದ್ದು ಬೇರೆ ಯಾರು ಅಲ್ಲ ಸ್ವತಃ ಪತಿ ಎಂಬ ರೋಚಕ ಮಾಹಿತಿ ಕೊನೆಯ ಫೋನ್‌ ಕಾಲ್‌ನಲ್ಲಿ ಬಯಲಾಗಿದೆ.
ದೆಹಲಿಯ ಸ್ಪೆಷಲ್ ವೆಪನ್ಸ್ ಆ್ಯಂಡ್ ಟಾಕ್ಟಿಸ್ (SWAT) ಪೊಲೀಸ್ ಕಮಾಂಡೋ ಆಗಿದ್ದ ಕಾಜಲ್ ದುರಂತ ಅಂತ್ಯಕಂಡಿದ್ದು, ಕಾಜಲ್ ಹತ್ಯೆ ಡೆಲ್ಲಿ ಪೊಲೀಸ್ ಕಮಾಂಡೋ ವಿಭಾಗವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪ್ರಕರಣದ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ಈ ಹತ್ಯೆ ಮಾಡಿದ್ದು ಬೇರೆ ಯಾರು ಅಲ್ಲ ಅದು ಸ್ವತಃ ಕಾಜಲ್ ಪತಿ ಅಂಕುರ್ ಚೌಧರಿ ಎಂದು ವರದಿಗಳು ಹೇಳಿದೆ.

ಕಾಜಲ್ ಕತೆ ಮುಗಿಸಿದ ಪತಿ
ಕಾಜಲ್ ದೆಹಲಿ SWAT ವಿಭಾಗದಲ್ಲಿ ದಕ್ಷ ಮಹಿಳಾ ಕಮಾಂಡೋ ಅಧಿಕಾರಿಯಾಗಿದ್ದರು. ಆದರೆ ಮನೆಯಲ್ಲಿ ಗಂಡನ ಟಾರ್ಚರ್‌ಗೆ ಬೇಸತ್ತಿದ್ದಳು. ವರದಕ್ಷಿಣೆ ಕಿರುಕುಳ, ಹಲ್ಲೆಗಳಿಂದ ಪ್ರತಿ ದಿನ ನೋವು ಅನುಭವಿಸುತ್ತಿದ್ದಳು. ಆದರೂ ತಾಳ್ಮೆಯಿಂದ ಸಂಸಾರ ಸರಿದೂಗಿಸಿಕೊಂಡು ಹೋಗುತ್ತಿದ್ದ ಕಾಜಲ್ ಮೇಲೆ ಗಂಡ ವರದಕ್ಷಿಣ ವಿಚಾರದಲ್ಲಿ ಮತ್ತೆ ಜಗಳವಾಡಿದ್ದಾನೆ. ಕಮಾಂಡೋ ಅಧಿಕಾರಿಯಾಗಿದ್ದ ಕಾರಣ ಫಿಸಿಕಲ್ ಫಿಟ್ನೆಸ್‌ಗೆ ಕಾಜಲ್ ಡಂಬೆಲ್ಸ್ ಸೇರಿದಂತೆ ಇತರ ಕೆಲ ವ್ಯಾಯಮಗಳನ್ನು ಮನೆಯಲ್ಲೇ ಮಾಡುತ್ತಿದ್ದರು. ಇದೇ ಡಂಬಲ್ಸ್ ತೆಗೆದು ಕಾಜಲ್ ತಲೆಗೆ ಹಲ್ಲೆ ಮಾಡಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಗಳು ಹೇಳುತ್ತಿದೆ.

ಕಾಜಲ್ ತನ್ನ ಸಹೋದರ ನಿಖಿಲ್‌ಕೆ ಕರೆ ಮಾಡಿ ಗಂಡನ ಕಿರುಕುಳ ಕುರಿತು ಹೇಳಿದ್ದಾಳೆ. ಅಷ್ಟರಲ್ಲೇ ಕಾಜಲ್ ಬಳಿ ಬಂದ ಗಂಡ ಅಂಕುರ್ ಚೌಧರಿ ಡಂಬಲ್ಸ್ ಮೂಲಕ ಹಲ್ಲೆ ಮಾಡಿದ್ದಾನೆ. ಎರಡೇ ಏಟಿಗೆ ಕಾಜಲ್ ನೆಲಕ್ಕುರುಳಿ ಬಿದ್ದಿದ್ದಾಳೆ, ಚೀರಾಟ ಕೇಳಿಸಿದೆ. ಸಹೋದರ ನಿಖಿಲ್ ಆಘಾತಗೊಂಡಿದ್ದಾನೆ. ಏನಾಯಿತು ಏನಾಯಿತು ಎಂದು ಕೇಳುತ್ತಿದ್ದಾನೆ. ಪತ್ನಿಯ ಕೈಯಲ್ಲಿದ್ದ ಫೋನ್ ತೆಗೆದು ಸಹೋದರಿಯನ್ನು ಹತ್ಯೆ ಮಾಡಿದ್ದೇನೆ ಎಂದು ಫೋನ್ ಕಟ್ ಮಾಡಿದ್ದಾನೆ ಎಂದು ನಿಖಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಹೋದರಿ ಕರೆ ಕಡಿತಗೊಳ್ಳುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಬಳಿಕ ನಿಖಿಲ್ ಸ್ಥಳಕ್ಕೆ ಧಾವಿಸಿದ್ದಾನೆ. ಇತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟರಲ್ಲೆ ಸಹೋದರಿ ಕಾಜಲ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇತ್ತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಅಂಕುರ್ ಚೌಧರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತ್ತ ಅಂಕುರ್ ಚೌಧರಿ ತಾಯಿ ಸೇರಿದಂತೆ ಕಟುಂಬಸ್ಥರ ವಿರುದ್ಧ ನಿಖಿಲ್ ದೂರು ದಾಖಲಿಸಿದ್ದಾರೆ. ಅಂಕುರ್ ಚೌಧರಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದರು. ಸಹೋದರಿ ಪೊಲೀಸ್ ಕಮಾಂಡೋ ಆಗಿದ್ದ ಕಾರಣ ಪ್ರತಿ ದಿನ ದುಡ್ಡಿಗಾಗಿ ಕಿರುಕುಳ ನೀಡುತ್ತಿದ್ದರು ಎಂದು ನಿಖಿಲ್ ಆರೋಪಿಸಿದ್ದಾನೆ. ಬಿಟ್ಟು ಬರವಂತೆ ಸಹೋದರಿಗೆ ಸೂಚಿಸಿದ್ದರು. ಆದರೆ ತಾಳ್ಮೆಯಿಂದ ಇರುತ್ತೇನೆ. ಸಂಸಾರ ಹಾಳಾಗುವುದು ಬೇಡ ಎಂದು ಅಲ್ಲೇ ಉಳಿದುಕೊಂಡಿದ್ದಳು ಎಂದು ನಿಖಿಲ್ ಆರೋಪಿಸಿದ್ದಾರೆ. ಸಹೋದರಿ ಕರೆ ಮಾಡಿ ಪತಿಯ ಹಲ್ಲೆ ಕುರಿತು ಹೇಳಿದ್ದಳು. ಪತಿ ಹಲ್ಲೆ ಆರಂಭಿಸಿದ ಕೆಲವೇ ನಿಮಿಷದಲ್ಲಿ ನನಗೆ ಕರೆ ಮಾಡಿ ಮಾಹಿತಿ ನೀಡಿದ್ದಳು. ನಾನು ಸಹೋದರಿ ಜೊತೆ ಮಾತನಾಡುತ್ತಿರುವಾಗಲೇ ಬಲವಾಗಿ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ ಎಂದು ನಿಖಿಲ್ ಕಣ್ಮೀರಿಟ್ಟಿದ್ದಾನೆ.

ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾ, ನಿಖಿಲ್ ಅವರು ಸುಮಾರು ಐದು ತಿಂಗಳ ಹಿಂದೆ ಕಾಜಲ್ ಅವರನ್ನು ತಮ್ಮ ಪತಿ ಕಪಾಳಮೋಕ್ಷ ಮಾಡಿದ್ದರು ಎಂದು ಹೇಳಿದರು. “ನಾನು ಅಲ್ಲಿಗೆ ಹೋಗಿ ನನ್ನೊಂದಿಗೆ ಬರಲು ಕೇಳಿದೆ. ಅಂಕುರ್ ಕ್ಷಮೆಯಾಚಿಸಿದರು ಮತ್ತು ಅದನ್ನು ಪುನರಾವರ್ತಿಸುವುದಿಲ್ಲ ಎಂದು ತನ್ನ ಮಗುವಿನ ಮೇಲೆ ಪ್ರಮಾಣ ಮಾಡಿದರು. ನನ್ನ ಸಹೋದರಿಗೆ ಅವಳು ಬಯಸಿದಾಗ ಮನೆಗೆ ಹಿಂತಿರುಗಬಹುದು ಮತ್ತು ಅಲ್ಲಿ ಇರಬೇಕಾಗಿಲ್ಲ ಎಂದು ನಾನು ಹೇಳಿದೆ” ಎಂದು ಅವರು ಹೇಳಿದರು.

ಆಕೆಯ ತಂದೆ ರಾಕೇಶ್ ನಿರಂತರ ವರದಕ್ಷಿಣೆ ಬೇಡಿಕೆಗಳನ್ನು ಆರೋಪಿಸಿದ್ದಾರೆ. “ನಾವು ಮದುವೆಯಲ್ಲಿ ಅವರಿಗೆ ಬುಲೆಟ್ ಬೈಕ್, ಚಿನ್ನಾಭರಣ ಮತ್ತು ನಗದು ನೀಡಿದ್ದೇವೆ, ಆದರೆ ಅವರು ನಮ್ಮ ಮಗನಿಗೆ ಕಾರು ಸಿಗುತ್ತಿತ್ತು (ಅವನು ಬೇರೆಯವರನ್ನು ಮದುವೆಯಾಗಿದ್ದರೆ) ಎಂದು ಹೇಳಿದರು. ನಂತರ, ನನ್ನ ಮಗಳು ಕಾರನ್ನು ಸಹ ವ್ಯವಸ್ಥೆ ಮಾಡಿದಳು, ಆದರೆ ಅವರು ಅವಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ. ನಾವು ಅವಳೊಂದಿಗೆ ಮುಕ್ತವಾಗಿ ಮಾತನಾಡಲು ಸಹ ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು.
ಆಕೆಯ ತಾಯಿ ಹೇಳುವಂತೆ, ಕುಟುಂಬವು ಮದುವೆಗೆ ಸುಮಾರು ₹20 ಲಕ್ಷ ಖರ್ಚು ಮಾಡಿ ಸಾಲ ಪಡೆದಿತ್ತು. “ಅವನು (ಅಂಕುರ್) ಅವಳಿಂದ ₹5 ಲಕ್ಷ ಪಡೆದಿದ್ದ… ಅವಳು (ಕಾಜಲ್) ತುಂಬಾ ಕಷ್ಟ ಅನುಭವಿಸಿದಳು. ನನಗೆ ನ್ಯಾಯ ಬೇಕು. ಅವನು ಒಬ್ಬ ದೈತ್ಯ,” ಎಂದು ಅವರು ಹೇಳಿದರು.

ದಂಪತಿಗಳು ಪಾಣಿಪತ್‌ನಲ್ಲಿ ಕಾಲೇಜು ದಿನಗಳಿಂದಲೂ ಪರಸ್ಪರ ಪರಿಚಿತರಾಗಿದ್ದರು ಮತ್ತು ನವೆಂಬರ್ 23, 2023 ರಂದು ವಿವಾಹವಾದರು. ಹರಿಯಾಣದ ಗನೌರ್‌ನಲ್ಲಿರುವ ಅವರ ಸ್ಥಳೀಯ ಮನೆಯಲ್ಲಿ ಆಗಾಗ್ಗೆ ಜಗಳಗಳು ಉಂಟಾಗುತ್ತಿದ್ದ ಕಾರಣ, ಅವರು ಡಿಸೆಂಬರ್ 2024 ರಲ್ಲಿ ಪಶ್ಚಿಮ ದೆಹಲಿಯ ಮೋಹನ್ ಗಾರ್ಡನ್‌ನಲ್ಲಿರುವ ಬಾಡಿಗೆ ವಸತಿಗೃಹಕ್ಕೆ ಸ್ಥಳಾಂತರಗೊಂಡರು ಎಂದು ಕುಟುಂಬ ತಿಳಿಸಿದೆ. ಆದಾಗ್ಯೂ, ಉದ್ವಿಗ್ನತೆ ಮುಂದುವರೆದಿದೆ ಎಂದು ವರದಿಯಾಗಿದೆ.

ಆರ್ಥಿಕ ಒತ್ತಡ ಮತ್ತು ದೇಶೀಯ ವಿವಾದಗಳು ಸಹ ಘರ್ಷಣೆಯ ಭಾಗವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. “ದಂಪತಿಗಳು ಕೆಲವು ಸಾಲಗಳನ್ನು ತೆಗೆದುಕೊಂಡಿದ್ದರು ಮತ್ತು ಆಗಾಗ್ಗೆ ಹಣಕಾಸು ಮತ್ತು ಮನೆಯ ವೆಚ್ಚಗಳ ಬಗ್ಗೆ ಜಗಳವಾಡುತ್ತಿದ್ದರು” ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಖಿಲ್ ಅವರ ದೂರಿನ ಆಧಾರದ ಮೇಲೆ ಮೋಹನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. “ಆರಂಭದಲ್ಲಿ ಅವನ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಾಗಿತ್ತು. ಆಕೆಯ ಮರಣದ ನಂತರ, ಆರೋಪಗಳನ್ನು ಕೊಲೆಯಾಗಿ ಪರಿವರ್ತಿಸಲಾಗುತ್ತದೆ” ಎಂದು ಅಧಿಕಾರಿ ಹೇಳಿದರು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಪುಣಚದಲ್ಲಿ ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ; ಇಬ್ಬರ ಬಂಧನ, ಸೊತ್ತು ವಶ!

Published

on

ವಿಟ್ಲ: ಕಾನೂನುಬಾಹಿರವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಪುಣಚ ಗ್ರಾಮದ ಪೆರಿಯಾಲ್ತಡ್ಕ ಎಂಬಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಪುಣಚ ನಿವಾಸಿಗಳಾದ ದಿವಾಕರ ಪೂಜಾರಿ (46) ಮತ್ತು ಯಶ್ವಂತ್ (34) ಬಂಧಿತ ಆರೋಪಿಗಳಾಗಿದ್ದಾರೆ.

ದಾಳಿಯ ವಿವರ:

ಮೇ 30ರಂದು ರಾತ್ರಿ ಪುಣಚ ಗ್ರಾಮದ ಪೆರಿಯಾಲ್ತಡ್ಕ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಕೋಳಿ ಅಂಕ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ವಿಟ್ಲ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ರಾಮಕೃಷ್ಣ ರವರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್ಐ ಮತ್ತು ಠಾಣಾ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಜಂಟಿ ದಾಳಿ ನಡೆಸಿದೆ.

ದಾಳಿಯ ವೇಳೆ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಮುಖವಾಗಿ ಸ್ಥಳದಲ್ಲಿದ್ದ 4 ಅಂಕದ ಕೋಳಿಗಳು, ಜೂಜಾಟಕ್ಕೆ ಬಳಸುತ್ತಿದ್ದ ಕೋಳಿ ಕತ್ತಿ (ಬಾಳು), ಇತರೆ ಪರಿಕರಗಳು ಹಾಗೂ ರೂ. 4,145/- ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 119/2026 ರಂತೆ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ: 87, 93, ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಕಲಂ: 3, 11 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ: 112 ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.




Continue Reading

crime

ಬೆಳ್ಳಾರೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಸವಣೂರು ಬಳಿ ಅಕ್ರಮ ಗೋವಧೆ ಅಡ್ಡೆ ಪತ್ತೆ, ಮೂವರ ಬಂಧನ, ಪ್ರಮುಖ ಆರೋಪಿ ಪರಾರಿ!

Published

on

ಬೆಳ್ಳಾರೆ: ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರು ಸಮೀಪದ ಮಾಂತೂರು ಎಂಬಲ್ಲಿ ಶುಕ್ರವಾರ ಸಂಜೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಗೋವಧೆ ಅಡ್ಡೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತೋಟದ ಮಾಲೀಕ ತಲೆಮರೆಸಿಕೊಂಡಿದ್ದಾನೆ.

ಅಡಿಕೆ ತೋಟದಲ್ಲಿ ನಡೀತಿತ್ತು ಕೃತ್ಯ

ದಿನಾಂಕ 29.05.2026ರಂದು ಸಂಜೆ, ಕಡಬ ತಾಲೂಕಿನ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕ ನಿವಾಸಿ ನಝೀರ್ ಎಂಬಾತನಿಗೆ ಸೇರಿದ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗೋವಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾಳಿ ನಡೆಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ತೋಟವೊಂದರಲ್ಲಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿ ಒಂದು ಕೋಣ ಮತ್ತು ಎರಡು ದನಗಳು ಸೇರಿದಂತೆ ಒಟ್ಟು ಮೂರು ಮೂಕಪ್ರಾಣಿಗಳನ್ನು ವಧೆ ಮಾಡಿ, ಮಾಂಸ ಮಾಡಲು ಸಿದ್ಧಪಡಿಸುತ್ತಿದ್ದ ದೃಶ್ಯ ಕಂಡುಬಂದಿದ್ದು, ಮೂರು ಗೋವುಗಳ ಕಳೆಬರಹಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಮೂವರ ಬಂಧನ – ಪ್ರಮುಖ ಆರೋಪಿ ಪರಾರಿ

ಪೊಲೀಸರು ಧಾಳಿ ನಡೆಸಿದ ವೇಳೆ ಸ್ಥಳದಲ್ಲಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಂಧಿತರನ್ನು:

  • ಕೆ. ಅಬ್ದುಲ್ ರಫೀಕ್ (37 ವರ್ಷ)
  • ಅದ್ರಾಮ ಮಂತೂರು (41 ವರ್ಷ)
  • ಅಬ್ದುಲ್ ಖಾದರ್ ಪಣೆಮಜಲು (57 ವರ್ಷ) ಎಂದು ಗುರುತಿಸಲಾಗಿದೆ.

ವಿಚಾರಣೆಯ ವೇಳೆ ಇವರು ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ಮಾಡುತ್ತಿರುವುದು ದೃಢಪಟ್ಟಿದೆ. ಆದರೆ, ಈ ಅಕ್ರಮ ಗೋವಧೆ ಅಡ್ಡೆಯ ಪ್ರಮುಖ ಆರೋಪಿ ಹಾಗೂ ಸ್ಥಳದ ಮಾಲೀಕನಾದ ನಝೀರ್ ಧಾಳಿಯ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೆಳ್ಳಾರೆ ಎಸ್‌ಐ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ

ಬೆಳ್ಳಾರೆ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಬಿ.ಪಿ. ಅವರ ನೇತೃತ್ವದಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸತೀಶ್, ಶ್ರೀಧರ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಪ್ರಕರಣ ದಾಖಲು: ಸ್ಥಳದಲ್ಲಿದ್ದ ಜಾನುವಾರು ಮಾಂಸ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 36/2026, ಕಲಂ 4, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2023 ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.

ಸಾರ್ವಜನಿಕರಿಂದ ಮುಕ್ತ ಕಂಠದ ಶ್ಲಾಘನೆ: ಸವಣೂರು ಮತ್ತು ಮಾಂತೂರು ಪರಿಸರದಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಗೋವಧೆ ದಂಧೆಕೋರರಿಗೆ ಈ ದಾಳಿಯ ಮೂಲಕ ಬೆಳ್ಳಾರೆ ಪೊಲೀಸರು ಸಿಂಹಸ್ವಪ್ನವಾಗಿದ್ದಾರೆ. ಪೊಲೀಸರ ಈ ಸಮಯಪ್ರಜ್ಞೆ ಮತ್ತು ತತ್‌ಕ್ಷಣದ ಭರ್ಜರಿ ಕಾರ್ಯಾಚರಣೆಯನ್ನು ಪರಿಸರದ ಸಾರ್ವಜನಿಕರು ಹಾಗೂ ನಾಗರಿಕರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.

Continue Reading

Bantawala

ಬಂಟ್ವಾಳ: ಅಕ್ರಮ ಜಾನುವಾರು ವಧೆ ಅಡ್ಡೆಗೆ ಪೊಲೀಸರ ದಿಢೀರ್ ದಾಳಿ; ಇಬ್ಬರು ಆರೋಪಿಗಳ ಬಂಧನ, 6 ದನಗಳ ರಕ್ಷಣೆ!

Published

on

ಬಂಟ್ವಾಳ: ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಜಾನುವಾರು ವಧೆ ಅಡ್ಡೆಯೊಂದಕ್ಕೆ ಬಂಟ್ವಾಳ ನಗರ ಪೊಲೀಸರು ಬುಧವಾರ ತಡರಾತ್ರಿ ದಿಢೀರ್ ದಾಳಿ ನಡೆಸಿದ್ದಾರೆ. ಕೃತ್ಯದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಧೆಗಾಗಿ ಕಟ್ಟಿ ಹಾಕಲಾಗಿದ್ದ 6 ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಂಟ್ವಾಳ ಸಜಿಪಮೂಡ ನಿವಾಸಿ ಮುಸ್ತಾಪ (33) ಹಾಗೂ ಬಂಟ್ವಾಳ ಬಿ ಕಸಬಾ ನಿವಾಸಿ ಮಹಮ್ಮದ್‌ ಸಾದೀಕ್‌ (30) ಎಂದು ಗುರುತಿಸಲಾಗಿದೆ.

ನಡೆದದ್ದೇನು?

ಮೇ 27ರ ಬುಧವಾರ ತಡರಾತ್ರಿ ಸಜಿಪಮೂಡ ಗ್ರಾಮದ ಪಂಜಾಜೆ ಎಂಬಲ್ಲಿ ಮನೆಯೊಂದರ ಹಿಂಭಾಗದ ಕೊಟ್ಟಿಗೆಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂದೀಪ್‌ ಕುಮಾರ್‌ ಶೆಟ್ಟಿರವರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್‌ಐ ಮತ್ತು ಸಿಬ್ಬಂದಿಗಳ ತಂಡ ಸ್ಥಳಕ್ಕೆ ಜಂಟಿ ದಾಳಿ ನಡೆಸಿದೆ.

ಪೊಲೀಸರು ಸ್ಥಳಕ್ಕೆ ತಲುಪಿದಾಗ ಆರೋಪಿಗಳು ಜಾನುವಾರೊಂದನ್ನು ವಧೆ ಮಾಡಿ ಮಾಂಸ ಕತ್ತರಿಸುತ್ತಿರುವುದು ಕಂಡುಬಂದಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ದನಗಳನ್ನು ವಧೆ ಮಾಡುವ ಉದ್ದೇಶದಿಂದ ಅಲ್ಲಿ ಕಟ್ಟಿಹಾಕಲಾಗಿತ್ತು. ಆದರೆ ಅವುಗಳನ್ನು ಕೊಲ್ಲುವ ಮೊದಲೇ ಪೊಲೀಸರು ಎಂಟ್ರಿ ಕೊಟ್ಟು ಆರೋಪಿಗಳ ಸ್ಕೆಚ್ ಉಲ್ಟಾ ಮಾಡಿದ್ದಾರೆ.

ಸ್ವಾಧೀನಪಡಿಸಿಕೊಂಡ ಸೊತ್ತುಗಳು:

ಸ್ಥಳದಲ್ಲಿ ವಧೆ ಮಾಡಲಾಗಿದ್ದ ಒಂದು ಜಾನುವಾರಿನ ಮಾಂಸ

ವಧೆಯಿಂದ ಪಾರುಗಾಣಿಸಿ ರಕ್ಷಿಸಲಾದ 06 ಜೀವಂತ ಜಾನುವಾರುಗಳು

ಕೃತ್ಯಕ್ಕೆ ಬಳಸಲಾದ ಒಂದು ಕಾರು ಹಾಗೂ ಮಾರಕಾಸ್ತ್ರ/ಸಾಮಾಗ್ರಿಗಳು

ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಈ ದಂಧೆ ನಡೆಸುತ್ತಿರುವುದು ವಿಚಾರಣೆ ವೇಳೆ ದೃಢಪಟ್ಟಿದೆ. ಪೊಲೀಸರು ಕೃತ್ಯದ ಸ್ಥಳದಲ್ಲಿದ್ದ ಮಾಂಸ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ

ಪ್ರಕರಣ ದಾಖಲು:

ಬಂಧಿತ ಆರೋಪಿಗಳು, ರಕ್ಷಿಸಲಾದ ಜಾನುವಾರುಗಳು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದಿರುವ ಬಂಟ್ವಾಳ ನಗರ ಠಾಣೆಯ ಪೊಲೀಸರು, ಅ crime ಸಂಖ್ಯೆ 68/2026 ರಂತೆ “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020” ರ ಕಲಂ: 4, 7, 12 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.






Continue Reading

Trending

Copyright © 2025 Deevatige

error: Content is protected !!