Connect with us

national

ಬಿಜೆಪಿ ಅಧಿಕಾರಕ್ಕೆ ಬಂದರೆ, ಅಕ್ರಮ ನುಸುಳುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ತಮ್ಮ ಮೊದಲ ಆದ್ಯತೆ- ಅಮಿತ್ ಶಾ

Published

on

ಪಶ್ಚಿಮ ಬಂಗಾಳದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅಕ್ರಮ ನುಸುಳುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ತಮ್ಮ ಮೊದಲ ಆದ್ಯತೆಯಾಗಿರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
ಮೂರು ದಿನಗಳ ಭೇಟಿಗಾಗಿ ಸೋಮವಾರ ಕೋಲ್ಕತ್ತಾಗೆ ಆಗಮಿಸಿದ್ದ ಅವರು “ನಾವು 2026 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ, ನಮ್ಮ ಮೊದಲ ಕೆಲಸ ಅಕ್ರಮ ನುಸುಳುವಿಕೆಯನ್ನು ತಡೆಯುವುದು ಮಾತ್ರವಲ್ಲದೆ ಪ್ರಸ್ತುತ ರಾಜ್ಯದೊಳಗೆ ಉಳಿದುಕೊಂಡಿರುವ ಅಕ್ರಮ ನುಸುಳುಕೋರರನ್ನು ಓಡಿಸುವುದು” ಎಂದು ಕೇಂದ್ರ ಗೃಹ ಸಚಿವರು ಮಂಗಳವಾರ ಪತ್ರಿಕಾಗೋಷ್ಠಿಯ ಆರಂಭದಲ್ಲಿ ಹೇಳಿದರು.


ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ರಾಜಕೀಯ ರ್ಯಾಲಿಗಳು ಮತ್ತು ಕಾರ್ಯಕ್ರಮಗಳಲ್ಲಿ ಈ ಹೇಳಿಕೆಯನ್ನು ಪದೇ ಪದೇ ಒತ್ತಿ ಹೇಳುತ್ತಿದ್ದಾರೆ. ನುಸುಳುವಿಕೆಯಿಂದಾಗಿ ರಾಜ್ಯದ ಜನಸಂಖ್ಯಾ ಸ್ವರೂಪ ಬದಲಾಗುತ್ತಿದೆ ಮತ್ತು ಇದು ರಾಷ್ಟ್ರೀಯ ಭದ್ರತೆಗೆ ಸವಾಲಾಗಿದೆ ಎಂಬುದು ಅವರ ವಾದ. ನುಸುಳುವಿಕೆಯನ್ನು ತಡೆಯುವ ಜೊತೆಗೆ, ನೆರೆ ರಾಷ್ಟ್ರಗಳಿಂದ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ (ಹಿಂದೂಗಳು, ಸಿಖ್ಖರು, ಇತ್ಯಾದಿ) ಪೌರತ್ವ ನೀಡಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ಪ್ರಸ್ತುತ ಇರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಖಿಒಅ) ಸರ್ಕಾರವು ತನ್ನ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ನುಸುಳುಕೋರರನ್ನು ರಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.


ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹೇಳಿಕೆಯನ್ನು ಪದೇ ಪದೇ ಒತ್ತಿ ಹೇಳುತ್ತಿರುವುದೆಂದರೆ ಗಡಿ ಜಿಲ್ಲೆಗಳಲ್ಲಿ ನುಸುಳುವಿಕೆ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಮತದಾರರನ್ನು ಸೆಳೆಯುವುದು.ನುಸುಳುವಿಕೆ ವಿಷಯವನ್ನು ಮುನ್ನೆಲೆಗೆ ತರುವ ಮೂಲಕ ಚುನಾವಣಾ ಕಣದಲ್ಲಿ ತೀವ್ರ ಪೈಪೋಟಿ ಸೃಷ್ಟಿಸುವುದು. ಬಂಗಾಳದ ಸಮಗ್ರ ಅಭಿವೃದ್ಧಿಗೆ ಶಾಂತಿ ಮತ್ತು ಭದ್ರತೆ ಅಗತ್ಯ, ಅದು ನುಸುಳುವಿಕೆ ಮುಕ್ತವಾದಾಗ ಮಾತ್ರ ಸಾಧ್ಯ ಎಂಬ ಸಂದೇಶ ರವಾನಿಸುವುದೇ ಆಗಿರುತ್ತದೆ.


ಪಶ್ಚಿಮ ಬಂಗಾಳದ ಮುಂಬರುವ ಚುನಾವಣೆಗಳ ಮೇಲೆ ಈ ಹೇಳಿಕೆ ಬಿಜೆಪಿಯನ್ನು ಅಲ್ಲಿನ ಮತದಾರರು ಕೈ ಹಿಡಿಯುವಂತೆ ಮಾಡಬಹುದು ಅಂದರೆ ಯಾವ ರೀತಿಯ ಪ್ರಭಾವ ಬೀರಬಹುದು ಎಂಬ ವಿಶ್ಲೇಷಣೆಯನ್ನು ಮಾಡಿದಾಗ “ನುಸುಳುವಿಕೆ” ವಿಷಯವು ಚುನಾವಣಾ ಕಣವನ್ನು ಎರಡು ಸ್ಪಷ್ಟ ಭಾಗಗಳನ್ನಾಗಿ ಮಾಡುತ್ತದೆ. ಇದು ಬಿಜೆಪಿಗೆ ತನ್ನ ಹಿಂದೂ ಮತಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ವಿಶೇಷವಾಗಿ ಗಡಿ ಭಾಗದ ಜಿಲ್ಲೆಗಳಲ್ಲಿ ಈ ವಿಷಯವು ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊAದಿಗೆ ಸುದೀರ್ಘ ಗಡಿಯನ್ನು ಹಂಚಿಕೊAಡಿದೆ. ನಾರ್ತ್ 24 ಪರಗಣ, ಮಾಲ್ಡಾ, ಮುರ್ಷಿದಾಬಾದ್ ಮತ್ತು ದಿನಾಜ್‌ಪುರದಂತಹ ಜಿಲ್ಲೆಗಳಲ್ಲಿ ನುಸುಳುವಿಕೆ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ. ಅಮಿತ್ ಶಾ ಅವರ ಈ ಭರವಸೆಯು ಈ ಭಾಗದ ಮತದಾರರಲ್ಲಿ ಬಿಜೆಪಿಯ ಬಗ್ಗೆ ಭರವಸೆ ಮೂಡಿಸಬಹುದು.


ನುಸುಳುವಿಕೆಯನ್ನು ತಡೆಯುವುದು ಕೇಂದ್ರದ ಜವಾಬ್ದಾರಿ (ಬಿಎಸ್ಎಫ್ ಮೂಲಕ) ಎಂದು ವಾದಿಸುತ್ತಿರುವ ಟಿಎಂಸಿ ಆದರೆ ಬಿಜೆಪಿ ಇದನ್ನು ರಾಜ್ಯ ಸರ್ಕಾರದ ವೈಫಲ್ಯ ಎಂದು ಬಿಂಬಿಸುತ್ತಿದ್ದು, ಇದು ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಬಿಜೆಪಿಗೆ ಅಸ್ತ್ರವಾಗಲಿದೆ ಅಂತೆಯೇ ಟಿಎಂಸಿಗೆ ದೊಡ್ಡ ಸವಾಲಾಗಿದೆ.
ನುಸುಳುವಿಕೆ ತಡೆಯುವ ಮಾತಿನ ಜೊತೆಗೆ, ಪೌರತ್ವ ತಿದ್ದುಪಡಿ ಕಾಯ್ದೆಯ (CAA) ಜಾರಿಯು ಮತುವಾ ಸಮುದಾಯದಂತಹ ನಿರಾಶ್ರಿತ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಸಹಾಯ ಮಾಡುತ್ತದೆ. ಇದು ಬಂಗಾಳದ ಸುಮಾರು 30-40 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿದೆ.

ಅಮಿತ್ ಶಾ ಅವರ ಈ ತಂತ್ರವು ಪಶ್ಚಿಮ ಬಂಗಾಳದಲ್ಲಿ “ಅಸ್ಮಿತೆ” ಮತ್ತು “ರಾಷ್ಟ್ರೀಯ ಭದ್ರತೆ”ಯ ಸುತ್ತ ಚುನಾವಣೆ ನಡೆಯುವಂತೆ ಮಾಡುತ್ತದೆ. ಇದು ಅಭಿವೃದ್ಧಿ ವಿಷಯಗಳಿಗಿಂತ ಹೆಚ್ಚಾಗಿ ಭಾವನಾತ್ಮಕ ವಿಷಯಗಳ ಮೇಲೆ ಮತದಾನ ನಡೆಯಲು ಪ್ರೇರೇಪಿಸುತ್ತದೆ.
“ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಪಶ್ಚಿಮ ಬಂಗಾಳದ ಮಹಿಳೆಯರ ಸುರಕ್ಷತೆ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಾಗಲಿ ಅಥವಾ ದಕ್ಷಿಣ ಕೋಲ್ಕತ್ತಾ ಕಾನೂನು ಕಾಲೇಜು ಆಗಲಿ, ಅಥವಾ ಸಂದೇಶಖಾಲಿ ಆಗಲಿ, ಪಶ್ಚಿಮ ಬಂಗಾಳದ ಮಹಿಳೆಯರು ಎಲ್ಲಿಯೂಸುರಕ್ಷಿತವಾಗಿಲ್ಲ. ಈ ವಿಷಯಗಳ ಬಗ್ಗೆ ಮಮತಾ ಬ್ಯಾನರ್ಜಿ ರಾಜ್ಯದ ಜನರಿಗೆ ವಿವರಣೆ ನೀಡಬೇಕಾಗಿದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದರು.


ಪಕ್ಷದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಈ ರಾಜ್ಯದವರಾಗಿರುವುದರಿಂದ ಪಶ್ಚಿಮ ಬಂಗಾಳವು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳುತ್ತಾ. 2016 ರಿಂದ ರಾಜ್ಯದಲ್ಲಿ ಬಿಜೆಪಿಯ ಜನಪ್ರಿಯತೆಯ ಏರಿಕೆಯ ಪ್ರವೃತ್ತಿಯನ್ನು ಗಮನಿಸಿದರೆ, 2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ಶಾ ಹೇಳಿದರು.

Continue Reading
Advertisement

Agriculture

ಪುತ್ತೂರಿನ 1,000 ಮಂದಿಗೆ ಉದ್ಯೋಗ ನೀಡಿದರೆ ಕ್ಯಾಂಪ್ಕೋಗೆ 20 ಎಕರೆ ನಿವೇಶನ ಮಂಜೂರು: ಶಾಸಕ ಅಶೋಕ್ ರೈ ಭರವಸೆ

Published

on

ವಿಟ್ಲ: ಕ್ಯಾಂಪ್ಕೋ ಸಂಸ್ಥೆಯು ಪುತ್ತೂರು ಭಾಗದ ಸುಮಾರು ಒಂದು ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಲ್ಲಿ, ಸಂಸ್ಥೆಯ ಅಭಿವೃದ್ಧಿಗಾಗಿ 20 ಎಕರೆ ನಿವೇಶನವನ್ನು ಮಂಜೂರು ಮಾಡಿಸಿಕೊಡುವುದಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಘೋಷಿಸಿದ್ದಾರೆ.

ವಿಟ್ಲದಲ್ಲಿ ಕ್ಯಾಂಪ್ಕೋ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕ್ಯಾಂಪ್ಕೋ ಇಂದು ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದ್ದು, ಜಿಲ್ಲೆಯ ನೂರಾರು ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಕರಾವಳಿಯ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಪಸರಿಸಿದೆ. ಜಿಲ್ಲೆಯ ಕೃಷಿಕರ ಹಿತರಕ್ಷಣೆಗಾಗಿ ಸಂಸ್ಥೆ ಇನ್ನಷ್ಟು ಬಲಗೊಳ್ಳಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಇಂದು ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತಿರುವುದಕ್ಕೆ ಕ್ಯಾಂಪ್ಕೋ ಸಂಸ್ಥೆಯೇ ಮುಖ್ಯ ಕಾರಣವಾಗಿದ್ದು, ಒಂದು ವೇಳೆ ಈ ಸಂಸ್ಥೆ ಇಲ್ಲದಿದ್ದರೆ ಅಡಿಕೆ ಮಾರುಕಟ್ಟೆಯ ಪರಿಸ್ಥಿತಿ ಊಹಿಸಲೂ ಸಾಧ್ಯವಿರಲಿಲ್ಲ. ಸರ್ಕಾರಿ ನಿಬಂಧನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ದರದಲ್ಲಿ ಅಲ್ಪ ವ್ಯತ್ಯಾಸವಿರಬಹುದಾದರೂ, ರೈತರ ಪಾಲಿಗೆ ಕ್ಯಾಂಪ್ಕೋ ಭದ್ರ ಬುನಾದಿಯಾಗಿದೆ.

ಜಿಲ್ಲೆಯಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದ್ದು, ನಮ್ಮ ಯುವಜನತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಬೇಕಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಮನಸ್ಸು ಮಾಡಿದರೆ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಿದ್ದು, ಇದಕ್ಕೆ ಅಗತ್ಯವಿರುವ ಭೂಮಿ ಹಾಗೂ ಎಲ್ಲಾ ಸಹಕಾರವನ್ನು ನೀಡಲು ತಾನು ಸಿದ್ಧ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.

Continue Reading

drugs

ಭಾರತಕ್ಕೂ ಎಂಟ್ರಿ ಕೊಟ್ಟಿತೇ ‘ಜಾಂಬಿ ಡ್ರಗ್’? ಚಂಡೀಗಢದಲ್ಲಿ ಡೆಲಿವರಿ ಬಾಯ್ ವಿಲಕ್ಷಣ ವರ್ತನೆ; ವಿಡಿಯೋ ವೈರಲ್!

Published

on

ಅಮೆರಿಕದಂತಹ ದೇಶಗಳನ್ನು ನಡುಗಿಸಿರುವ ಭೀಕರ ‘ಜಾಂಬಿ ಡ್ರಗ್’ (Zombie Drug) ಈಗ ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಇದಕ್ಕೆ ಪೂರಕವೆಂಬಂತೆ ಚಂಡೀಗಢದಲ್ಲಿ ನಡೆದ ವಿಲಕ್ಷಣ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಚಂಡೀಗಢದ ಸೆಕ್ಟರ್ 33B ವಸತಿ ಪ್ರದೇಶದಲ್ಲಿ ಬ್ಲಿಂಕಿಟ್ (Blinkit) ಸಂಸ್ಥೆಯ ಡೆಲಿವರಿ ಬಾಯ್ ಒಬ್ಬರು ಸುಮಾರು 2 ರಿಂದ 2.5 ಗಂಟೆಗಳ ಕಾಲ ರಸ್ತೆಯಲ್ಲೇ ಯಾವುದೇ ಚಲನೆಯಿಲ್ಲದೆ, ಅರೆಪ್ರಜ್ಞಾವಸ್ಥೆಯಲ್ಲಿ ನಿಂತಿದ್ದ ಘಟನೆ ನಡೆದಿದೆ. ಬೆನ್ನಿನ ಮೇಲೆ ಡೆಲಿವರಿ ಬ್ಯಾಗ್ ಹೊತ್ತು, ಬಾಯಲ್ಲಿ ಬೀಡಿ ಇಟ್ಟುಕೊಂಡಿದ್ದ ಈ ಯುವಕ, ಸುತ್ತಮುತ್ತಲಿನ ಯಾವುದೇ ಅರಿವಿಲ್ಲದೆ ಕಲ್ಲಿನಂತೆ ಜಡವಾಗಿ ನಿಂತಿದ್ದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅನೇಕ ಬಳಕೆದಾರರು ಇದನ್ನು ಅಮೆರಿಕದಲ್ಲಿ ಜನಜೀವನವನ್ನು ನಾಶಪಡಿಸುತ್ತಿರುವ ಫೆಂಟನಿಲ್ (Fentanyl) ಅಥವಾ ಜಾಂಬಿ ಡ್ರಗ್‌ನ ಪರಿಣಾಮ ಎಂದು ಬಣ್ಣಿಸಿದ್ದಾರೆ. “ಭಾರತಕ್ಕೂ ಈ ಮಾರಕ ಡ್ರಗ್ ಎಂಟ್ರಿ ಕೊಟ್ಟಿದೆಯೇ? ಇದು ನಿಜಕ್ಕೂ ಅಪಾಯಕಾರಿ ಮುನ್ಸೂಚನೆ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಯುವಕನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಏನಿದು ‘ಜಾಂಬಿ ಡ್ರಗ್’?
ಸಾಮಾನ್ಯವಾಗಿ ಪ್ರಾಣಿಗಳಿಗೆ ನೋವು ನಿವಾರಕವಾಗಿ ಬಳಸುವ ಕ್ಸೈಲಜಿನ್ (Xylazine) ಎಂಬ ಟ್ರ್ಯಾಂಕ್ವಿಲೈಜರ್ ಅನ್ನು ‘ಜಾಂಬಿ ಡ್ರಗ್’ ಎಂದು ಕರೆಯಲಾಗುತ್ತದೆ. ಇದನ್ನು ಫೆಂಟನಿಲ್, ಮಾರ್ಫಿನ್ ಅಥವಾ ಹೆರಾಯಿನ್‌ನಂತಹ ಮಾದಕ ವಸ್ತುಗಳೊಂದಿಗೆ ಬೆರೆಸಿ ಸೇವಿಸಿದಾಗ ಮನುಷ್ಯರು ತಮ್ಮ ಪ್ರಜ್ಞೆ ಕಳೆದುಕೊಂಡು, ದೇಹದ ಮೇಲೆ ಹತೋಟಿಯಿಲ್ಲದೆ ವಿಚಿತ್ರವಾಗಿ ವರ್ತಿಸುತ್ತಾರೆ. ಅಮೆರಿಕದಲ್ಲಿ ಈ ಡ್ರಗ್‌ನಿಂದಾಗಿ ಸಾವಿರಾರು ಯುವಕರು ಬೀದಿಗಳಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ವರದಿಯಾಗಿದೆ. ಚಂಡೀಗಢದ ಈ ಘಟನೆ ಮಾದಕ ವ್ಯಸನದ ಪರಿಣಾಮವೋ ಅಥವಾ ಆರೋಗ್ಯ ಸಮಸ್ಯೆಯೋ ಎಂಬುದು ವೈದ್ಯಕೀಯ ವರದಿ ಬಂದ ನಂತರವಷ್ಟೇ ತಿಳಿದುಬರಬೇಕಿದೆ. ಆದರೆ, ಈ ವಿಡಿಯೋ ಮಾತ್ರ ಭಾರತೀಯರಲ್ಲಿ ಹೊಸ ಆತಂಕವನ್ನಂತೂ ಸೃಷ್ಟಿಸಿದೆ.

Continue Reading

award

ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನ ಮಹಿಮಾ ಆರ್. ಕೆ.ಗೆ ರಾಷ್ಟ್ರಮಟ್ಟದ ಪ್ರಥಮ ಬಹುಮಾನ

Published

on

ಧಾರವಾಡ: ಇಲ್ಲಿನ ಸೆಂಟರ್ ಫಾರ್ ಮಲ್ಟಿ-ಡಿಸಿಪ್ಲಿನರಿ ಡೆವಲಪ್ಮೆಂಟ್ ರಿಸರ್ಚ್ (CMDR) ಸಂಸ್ಥೆಯು ಭಾರತ ಮತ್ತು ವಿದೇಶಗಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಇಂದಿನ ಬದುಕಿಗೆ ಭಾರತೀಯ ಜ್ಞಾನ ಪರಂಪರೆ’ (IKS 2.0) ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ಮಹಿಮಾ ಆರ್. ಕೆ. ಪ್ರಥಮ ಸ್ಥಾನ ಗಳಿಸಿದ್ದಾರೆ.

‘ಭಾರತೀಯ ಜ್ಞಾನ ಪರಂಪರೆ ಎಂಬ ಬೆಳಕ ದೀವಟಿಗೆ: ಅವಲೋಕನ’ ಎಂಬ ಶೀರ್ಷಿಕೆಯಡಿ ಮಹಿಮಾ ಅವರು ಮಂಡಿಸಿದ ಪ್ರಬಂಧವು ಒಟ್ಟು 71.33 ಅಂಕಗಳನ್ನು ಪಡೆಯುವ ಮೂಲಕ 10,000 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಏಕೈಕ ಕನ್ನಡ ಪ್ರಬಂಧ ಎಂಬ ಹೆಗ್ಗಳಿಕೆಗೆ ಈ ಬರಹ ಪಾತ್ರವಾಗಿರುವುದು ವಿಶೇಷ. ಭಾರತೀಯ ಪರಂಪರೆಯ ಜ್ಞಾನವು ಇಂದಿನ ಆಧುನಿಕ ಬದುಕಿಗೆ ಹೇಗೆ ದೀವಟಿಗೆಯಂತೆ ದಾರಿದೀಪವಾಗಿದೆ ಎಂಬುದನ್ನು ಇವರು ತಮ್ಮ ಪ್ರಬಂಧದಲ್ಲಿ ಸವಿವರವಾಗಿ ವಿಶ್ಲೇಷಿಸಿದ್ದಾರೆ. ಭಾರತೀಯ ಜ್ಞಾನ ಪರಂಪರೆಯ ಮಹತ್ವವನ್ನು ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ವಿಶ್ಲೇಷಿಸಿದ ಇವರ ಬರಹವು ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ವಿಟ್ಲದ ರವಿಶಂಕರ ಕುಳಮರ್ವ ಹಾಗೂ ಇತ್ತಿಚೆಗೆ ಸಾಹಿತ್ಯ ಕ್ಷೇತ್ರದ ಗಣನೀಯ ಸಾಧನೆಗಾಗಿ ಪ್ರತಿಷ್ಠಿತ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಪಡೆದ ಡಾ. ಮೈತ್ರಿ ಭಟ್ ದಂಪತಿಯ ಪುತ್ರಿಯಾಗಿರುವ ಮಹಿಮಾ, ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Continue Reading

Trending

Copyright © 2025 Deevatige