award
ಶೈಕ್ಷಣಿಕ ಕ್ಷೇತ್ರದಲ್ಲಿ ಮಿಂಚಿದ ಪೆರ್ಲದ ಪ್ರತಿಭೆ: ಎಂ.ಸಿ.ಎ ಪದವಿಯಲ್ಲಿ ಅನನ್ಯ ಬಿ.ಎಸ್. ಅವರಿಗೆ ದ್ವಿತೀಯ ರ‍್ಯಾಂಕ್
ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ 2023-25ನೇ ಸಾಲಿನ ಎಂ.ಸಿ.ಎ (MCA – Master of Computer Application) ಸ್ನಾತಕೋತ್ತರ ಪದವಿಯಲ್ಲಿ ಅನನ್ಯ ಬಿ.ಎಸ್. ಅವರು ದ್ವಿತೀಯ ರ‍್ಯಾಂಕ್ ಮೂಲಕ ಅನನ್ಯ ಸಾಧನೆ ಮಾಡಿದ್ದಾರೆ.

ಇವರು ಕಾಸರಗೋಡು ಜಿಲ್ಲೆಯ ಪೆರ್ಲದವರಾಗಿದ್ದು, ಭಾಸ್ಕರ್ ಬನಾರಿ ಹಾಗೂ ಸುಜಾತಾ ಸೇರಾಜೆ ದಂಪತಿಯ ಪುತ್ರಿ. ಇವರು ಕೇರಳ ರಾಜ್ಯದಲ್ಲಿಯೇ ಪ್ರಸಿದ್ದಿ ಪಡೆದ ಖ್ಯಾತ ವ್ಯಕ್ತಿ ಸಿಪಿಎಂ ಪಕ್ಷದ ನೇತಾರನಾಗಿದ್ದ ದಿ. ಕೆ.ಪಿ. ಮದನ್ ಮಾಸ್ಟರ್ ಸೇರಾಜೆ ಅವರ ಮರಿಮೊಮ್ಮಗಳು ಎಂಬುದು ಗಮನಾರ್ಹ.

ಅನನ್ಯ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಪೆರ್ಲದ ಶ್ರೀ ಸತ್ಯನಾರಾಯಣ ಹೈಸ್ಕೂಲ್‌ನಲ್ಲಿ ಮುಗಿಸಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 90 ಅಂಕ ಗಳಿಸಿದ್ದರು. ನಂತರ ಬಡಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪಿಯುಸಿ (ವಿಜ್ಞಾನ ವಿಭಾಗ) ಶಿಕ್ಷಣ ಪೂರೈಸಿದರು.
ಉನ್ನತ ಶಿಕ್ಷಣಕ್ಕಾಗಿ ಪುತ್ತೂರಿನ ವಿವೇಕಾನಂದ ಕಾಲೇಜನ್ನು ಸೇರಿ ಬಿ.ಸಿ.ಎ (BCA) ಪದವಿಯಲ್ಲಿ ಶೇ. 93 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದರು. ಇದೀಗ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಎಂ.ಸಿ.ಎ ಪದವಿಯಲ್ಲಿ ಶೇ. 94 ಅಂಕಗಳನ್ನು ಪಡೆಯುವ ಮೂಲಕ ಇಡೀ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಅನನ್ಯ ಅವರ ಈ ಸಾಧನೆಗೆ ಪೆರ್ಲ ಹಾಗೂ ಸುತ್ತಮುತ್ತಲಿನ ಭಾಗದ ಸಾರ್ವಜನಿಕರು ಮತ್ತು ಶಿಕ್ಷಣ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
award
ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಡಾ. ಅರುಣ್ ಕೆ. ಮತ್ತು ಎಸಿಪಿ ನಜ್ಮಾ ಫಾರೂಕಿ ಸೇರಿದಂತೆ ಜಿಲ್ಲೆಯ ಹಲವು ಪೊಲೀಸರಿಗೆ ಮುಖ್ಯಮಂತ್ರಿ ಚಿನ್ನದ ಪದಕದ ಗೌರವ
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ (SP) ಡಾ. ಅರುಣ್ ಕೆ. ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ. ಅವರೊಂದಿಗೆ ಮಂಗಳೂರು ನಗರದ ಸಂಚಾರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ನಜ್ಮಾ ಫಾರೂಕಿ ಅವರಿಗೂ ಚಿನ್ನದ ಪದಕ ಪ್ರಕಟಗೊಂಡಿದೆ.

ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಗೆ 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕದ ಗರಿ ಪ್ರಕಟಗೊಂಡಿದ್ದು, ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಈ ಗೌರವವನ್ನು ಘೋಷಿಸಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸ್ಪೆಷಲ್ ಎಆರ್‌ಎಸ್‌ಐ, 7ನೇ ಪಡೆ ಕೆಎಸ್‌ಆರ್‌ಪಿಯ ಕೆ.ಎಂ. ಶಿವಶೇಖರ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಡಿಎಆರ್ ವಿಭಾಗದ ಎಎಸ್‌ಐ ತಿಲಕ್ ರಾಜ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಲ್ಲದೆ, ಬಂಟ್ವಾಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಇರ್ಷಾದ್ ಪಿ. , ಮಂಗಳೂರು ನಗರದ ಊರ್ವ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಲಲಿತಾಲಕ್ಷ್ಮಿ , ಬೆಳ್ತಂಗಡಿ ಗ್ರಾಮಾಂತರ ಠಾಣೆಯ ವಿಜಯ ಕುಮಾರ್ ರೈ , ಕಂಕನಾಡಿ ನಗರ ಠಾಣೆಯ ಜಯಾನಂದ ಎನ್., ಮತ್ತು ಮಂಗಳೂರು ಸೈಬರ್ ಕ್ರೈಂ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗಳಾದ ಮಣಿ ಎಂ.ಎನ್. ಹಾಗೂ ಸತೀಶ್ ಅವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಈ ಪದಕ ಪ್ರದಾನ ಸಮಾರಂಭವು ಏಪ್ರಿಲ್ 02, 2026 ರಂದು ಬೆಂಗಳೂರಿನಲ್ಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಪದಕ ವಿಜೇತ ಅಧಿಕಾರಿಗಳು ಮಾರ್ಚ್ 29 ರಿಂದಲೇ ಬೆಂಗಳೂರಿನ ಕೆಎಸ್‌ಆರ್‌ಪಿ 3ನೇ ಪಡೆಯಲ್ಲಿ ನಡೆಯುವ ಪೂರ್ವಾಭ್ಯಾಸದಲ್ಲಿ ಭಾಗವಹಿಸಲಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕರ ಕಚೇರಿ ತಿಳಿಸಿದೆ.
award
ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನ ಮಹಿಮಾ ಆರ್. ಕೆ.ಗೆ ರಾಷ್ಟ್ರಮಟ್ಟದ ಪ್ರಥಮ ಬಹುಮಾನ
ಧಾರವಾಡ: ಇಲ್ಲಿನ ಸೆಂಟರ್ ಫಾರ್ ಮಲ್ಟಿ-ಡಿಸಿಪ್ಲಿನರಿ ಡೆವಲಪ್ಮೆಂಟ್ ರಿಸರ್ಚ್ (CMDR) ಸಂಸ್ಥೆಯು ಭಾರತ ಮತ್ತು ವಿದೇಶಗಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಇಂದಿನ ಬದುಕಿಗೆ ಭಾರತೀಯ ಜ್ಞಾನ ಪರಂಪರೆ’ (IKS 2.0) ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ಮಹಿಮಾ ಆರ್. ಕೆ. ಪ್ರಥಮ ಸ್ಥಾನ ಗಳಿಸಿದ್ದಾರೆ.
‘ಭಾರತೀಯ ಜ್ಞಾನ ಪರಂಪರೆ ಎಂಬ ಬೆಳಕ ದೀವಟಿಗೆ: ಅವಲೋಕನ’ ಎಂಬ ಶೀರ್ಷಿಕೆಯಡಿ ಮಹಿಮಾ ಅವರು ಮಂಡಿಸಿದ ಪ್ರಬಂಧವು ಒಟ್ಟು 71.33 ಅಂಕಗಳನ್ನು ಪಡೆಯುವ ಮೂಲಕ 10,000 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಏಕೈಕ ಕನ್ನಡ ಪ್ರಬಂಧ ಎಂಬ ಹೆಗ್ಗಳಿಕೆಗೆ ಈ ಬರಹ ಪಾತ್ರವಾಗಿರುವುದು ವಿಶೇಷ. ಭಾರತೀಯ ಪರಂಪರೆಯ ಜ್ಞಾನವು ಇಂದಿನ ಆಧುನಿಕ ಬದುಕಿಗೆ ಹೇಗೆ ದೀವಟಿಗೆಯಂತೆ ದಾರಿದೀಪವಾಗಿದೆ ಎಂಬುದನ್ನು ಇವರು ತಮ್ಮ ಪ್ರಬಂಧದಲ್ಲಿ ಸವಿವರವಾಗಿ ವಿಶ್ಲೇಷಿಸಿದ್ದಾರೆ. ಭಾರತೀಯ ಜ್ಞಾನ ಪರಂಪರೆಯ ಮಹತ್ವವನ್ನು ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ವಿಶ್ಲೇಷಿಸಿದ ಇವರ ಬರಹವು ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ವಿಟ್ಲದ ರವಿಶಂಕರ ಕುಳಮರ್ವ ಹಾಗೂ ಇತ್ತಿಚೆಗೆ ಸಾಹಿತ್ಯ ಕ್ಷೇತ್ರದ ಗಣನೀಯ ಸಾಧನೆಗಾಗಿ ಪ್ರತಿಷ್ಠಿತ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಪಡೆದ ಡಾ. ಮೈತ್ರಿ ಭಟ್ ದಂಪತಿಯ ಪುತ್ರಿಯಾಗಿರುವ ಮಹಿಮಾ, ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
award
“ಗಿರಿಜಾ ರತ್ನ” ರಾಜ್ಯ ಪ್ರಶಸ್ತಿಗೆ ವೀರಕಂಭ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮಾ ಪಿ.ಜಿ. ಆಯ್ಕೆ.. ವಾಸ್ತಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯಿಂದ ಆಯ್ಕೆ..
ಬಂಟ್ವಾಳ: ವಾಸ್ತಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ.) ಬಾಳ್ತಿಲ, ಬಂಟ್ವಾಳ ತಾಲೂಕು ಇದರಿಂದ ಸಾಧಕ ಮಹಿಳೆಯರಿಗೆ ನೀಡುವ “ಗಿರಿಜಾ ರತ್ನ” ರಾಜ್ಯ ಪ್ರಶಸ್ತಿಗೆ ವೀರಕಂಭ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ಆಯ್ಕೆಯಾಗಿದ್ದಾರೆ.

ಸಂಗೀತ ಶರ್ಮ ಪಿ.ಜಿ. ಅವರು ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ಶಾಲಾ ಶಿಕ್ಷಣ ಹಾಗೂ ಶಾಲಾ ಭೌತಿಕ ಅಭಿವೃದ್ಧಿಯಲ್ಲಿ ವಿಶೇಷ ಸಾಧನೆಯನ್ನು ಗುರುತಿಸಿ ಈಗಾಗಲೇ “ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ” ಪ್ರಶಸ್ತಿ, ರಾಜ್ಯಮಟ್ಟದ “ಶಿಕ್ಷಕ ರತ್ನ” ಪ್ರಶಸ್ತಿ, ಹಾಗೂ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೆ ಸಿ ಐ ಸೇರಿದಂತೆ ಇನ್ನಿತರ ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದ್ದಾರೆ.
ಸಂಗೀತ ಶರ್ಮಾ ಅವರ ವಿಶಿಷ್ಟ ಸೇವೆಯನ್ನು ಗುರುತಿಸಿ ವಾಸ್ತಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ.) ಬಾಳ್ತಿಲ ಈ ವರ್ಷದ ಸಾಧಕ ಮಹಿಳೆಯರಿಗೆ ನೀಡುವ “ಗಿರಿಜಾ ರತ್ನ ರಾಜ್ಯ ಪ್ರಶಸ್ತಿಗೆ” ಆಯ್ಕೆ ಮಾಡಿರುತ್ತಾರೆ.
ಫೆಬ್ರವರಿ 3 ರಂದು ಬಿ.ಸಿ.ರೋಡ್ ಸ್ಪರ್ಶಕಲಾ ಮಂದಿರದಲ್ಲಿ ನಡೆಯುವ ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಉಪಸ್ಥಿತಿಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಪ್ರಶಸ್ತಿ ಪ್ರಧಾನ ಮಾಡಲಿರುವರು ಎಂದು ವಾಸ್ತಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ, ನ್ಯಾಯವಾದಿ ಶೈಲಜಾ ರಾಜೇಶ್ ತಿಳಿಸಿರುತ್ತಾರೆ.
-
crime1 day agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
