Greetings
ನಿಂತಿಕಲ್ಲಿನಲ್ಲಿ ‘ಶೈನ್ & ಗ್ರಿಪ್ ಟೈಯರ್ & ಆಟೋಮೊಬೈಲ್’ ನೂತನ ಸಂಸ್ಥೆ ಉದ್ಘಾಟನೆ
ಸುಳ್ಯ: ತಾಲೂಕಿನ ಮುರುಳ್ಯ ಗ್ರಾಮದ ನಿಂತಿಕಲ್ಲಿನ ವನದುರ್ಗಾ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಸಜ್ಜುಗೊಂಡಿರುವ ‘ಶೈನ್ & ಗ್ರಿಪ್ ಟೈಯರ್ & ಆಟೋಮೊಬೈಲ್’ ಸಂಸ್ಥೆಯ ಉದ್ಘಾಟನಾ ಸಮಾರಂಭವು ಮಾರ್ಚ್ 15ರ ಭಾನುವಾರದಂದು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ.
ಉದ್ಘಾಟನೆ ಮತ್ತು ಮುಖ್ಯ ಅತಿಥಿಗಳು:
ಈ ನೂತನ ಸಂಸ್ಥೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಣ್ಣೂರು-ಮುರುಳ್ಯ ಪ್ರಾಥಮಿಕ ಕೃ.ಪ.ಸ. ಸಂಘ (ನಿ.) ನಿಂತಿಕಲ್ಲು. ಇದರ ಅಧ್ಯಕ್ಷರಾದ ಶ್ರೀ ವಸಂತ ನಡುಬೈಲು, ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ಇದರ ವ್ಯವಸ್ಥಾಪನಾ ಸಮಿತಿ, ಅಧ್ಯಕ್ಷರಾದ ಶ್ರೀ ಲೋಕನಾಥ ರೈ ಎಣ್ಣೂರು ಪಟ್ಟೆ , ದೈಪಿಲ ಸೇವಾ ಪ್ರತಿಷ್ಠಾನ (ರಿ) ದೈಪಿಲ, ಚಾರ್ವಾಕ.ಇದರ ಗೌರವಾಧ್ಯಕ್ಷರಾದ ಶ್ರೀಮತಿ ಸಿ.ಜೆ. ಚಂದ್ರಕಲಾ ಜಯರಾಮ್ ಅರುವಗುತ್ತು, ಸುಳ್ಯ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಶಾಖಾ ಪ್ರಬಂಧಕರಾದ ಶ್ರೀ ಸಂತೋಷ್ ಕುಮಾರ್ ಎಂ ಇವರು ಭಾಗವಹಿಸಲಿದ್ದಾರೆ.

ಸಂಸ್ಥೆಯ ವಿಶೇಷತೆಗಳು:
ಬೆಳ್ಳಾರೆ ರಸ್ತೆಯ ಕಲ್ಲುಡ ಫ್ಯೂಯೆಲ್ ಸ್ಟೇಷನ್ ಸಮೀಪ ಕಾರ್ಯಾರಂಭ ಮಾಡಲಿರುವ ಈ ಸಂಸ್ಥೆಯಲ್ಲಿ ಗ್ರಾಹಕರಿಗೆ ಹಲವು ಅತ್ಯಾಧುನಿಕ ಸೌಲಭ್ಯಗಳು ದೊರೆಯಲಿವೆ: ಸಿಯೆಟ್, ಮಿಚೆಲಿನ್, ಅಪೊಲೊ, ಎಂಆರ್ಎಫ್, ಜೆಕೆ ಟೈಯರ್, ಟಿವಿಎಸ್ ಯುರೋಗ್ರಿಪ್ ಹಾಗೂ ಮ್ಯಾಕ್ಸಿಸ್ನಂತಹ ಪ್ರಮುಖ ಕಂಪನಿಗಳ ಟೈಯರ್ಗಳ ಮಾರಾಟ ಮತ್ತು ಸೇವೆ ಲಭ್ಯವಿದೆ. ಅತ್ಯಾಧುನಿಕ ತಂತ್ರಜ್ಞಾನದ ಕಾರ್ ಫೋಮ್ ವಾಶ್ ಸೌಲಭ್ಯವು ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ.
ರಸ್ತೆಯಲ್ಲಿ ನಿಮ್ಮ ಸುರಕ್ಷತೆ, ನಮ್ಮ ಟೈಯರ್ಗಳ ಶಕ್ತಿ. ಗುಣಮಟ್ಟದ ಬ್ರ್ಯಾಂಡ್ಗಳೊಂದಿಗೆ ಸುದೀರ್ಘ ಪಯಣ ನಿಮ್ಮದಾಗಲಿ.
ಹಳೆಯ ಕಾರಿಗೂ ಹೊಸ ಕಳೆ! ನಮ್ಮ ಅತ್ಯಾಧುನಿಕ ಫೋಮ್ ವಾಶ್ ಸೇವೆಯ ಮೂಲಕ ನಿಮ್ಮ ವಾಹನಕ್ಕೆ ನೀಡಿ ಫ್ರೆಶ್ ಲುಕ್.
ಅತ್ಯುತ್ತಮ ಬ್ರ್ಯಾಂಡೆಡ್ ಟೈಯರ್ಗಳು ಈಗ ಆಕರ್ಷಕ ದರದಲ್ಲಿ. ಗುಣಮಟ್ಟದಲ್ಲಿ ರಾಜಿ ಇಲ್ಲ, ಸೇವೆಯಲ್ಲಿ ವಿಳಂಬವಿಲ್ಲ.
ನಂಬಿಕೆಯೇ ನಮ್ಮ ಬಂಡವಾಳ, ನಿಮ್ಮ ವಾಹನದ ಆರೈಕೆಯೇ ನಮ್ಮ ಗುರಿ.

ಈ ನೂತನ ಸಂಸ್ಥೆಯ ಮಾಲೀಕರಾದ ದಿಶಾಂತ್ ನಡುಬೈಲು ಮತ್ತು ನಿಶಿಲ್ ಅಲೆಕ್ಕಾಡಿ ಅವರು ಗ್ರಾಹಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ವಿನಂತಿಸಿದ್ದಾರೆ.

Article
ಹೊಸ ಭರವಸೆಯ ಹೊಸ ವರ್ಷ: ‘ದೀವಟಿಗೆ ನ್ಯೂಸ್’ ಕಡೆಯಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಚೈತ್ರ ಮಾಸದ ಆಗಮನ, ಪ್ರಕೃತಿಯಲ್ಲಿ ಹೊಸ ಚಿಗುರು, ಕೋಗಿಲೆಯ ಗಾಯನ… ಇವೆಲ್ಲವೂ ಹೊತ್ತು ತರುವುದು ಸೌರಮಾನ ಯುಗಾದಿಯ ಸಂಭ್ರಮವನ್ನು. ಈ ಶುಭ ಸಂದರ್ಭದಲ್ಲಿ ‘ದೀವಟಿಗೆ ನ್ಯೂಸ್’ ತನ್ನೆಲ್ಲಾ ಪ್ರೀತಿಯ ಓದುಗರಿಗೆ ಹಾಗೂ ಜಾಹೀರಾತುದಾರರಿಗೆ ಕ್ರೋಧಿ ನಾಮ ಸಂವತ್ಸರದ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತದ
ಬೆಳಕಿನ ಹಾದಿಯಲ್ಲಿ ‘ದೀವಟಿಗೆ’ಯ ಪಯಣ
ಹೆಸರೇ ಸೂಚಿಸುವಂತೆ, ಕತ್ತಲೆಯನ್ನು ದೂರಮಾಡಿ ಸತ್ಯದ ಬೆಳಕನ್ನು ಪಸರಿಸುವ ಉದ್ದೇಶದೊಂದಿಗೆ ಆರಂಭವಾದ ನಮ್ಮ ‘ದೀವಟಿಗೆ ನ್ಯೂಸ್’ ಇಂದು ಓದುಗರ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆದು ನಿಂತಿರುವುದು ನಮ್ಮ ಹೆಮ್ಮೆ. ವೇಗವಾಗಿ ಸುದ್ದಿ ನೀಡುವುದರ ಜೊತೆಗೆ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ನಿಮಗೆ ತಲುಪಿಸುತ್ತಿದ್ದೇವೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ನಾವು ಸದಾ ಮುಂದು. ಅಲ್ಪ ಅವಧಿಯಲ್ಲಿಯೇ ಸಾವಿರಾರು ಓದುಗರನ್ನು ತಲುಪಿರುವ ನಮ್ಮ ಈ ಬೆಳವಣಿಗೆಗೆ ನಿಮ್ಮ ಪ್ರೋತ್ಸಾಹವೇ ಅಡಿಪಾಯ.
“ಬೆಲ್ಲದ ಸಿಹಿ, ಬೇವಿನ ಕಹಿ ಎರಡನ್ನೂ ಸಮನಾಗಿ ಸ್ವೀಕರಿಸುವಂತೆ ಪ್ರೇರೇಪಿಸುವ ಯುಗಾದಿಯು, ನಿಮ್ಮ ಜೀವನದಲ್ಲಿ ಬರೀ ಸುಖ-ಸಂತೋಷವನ್ನೇ ತುಂಬಲಿ.”

ಜೀವನವೆಂದರೆ ಸುಖ-ದುಃಖಗಳ ಸಮ್ಮಿಶ್ರಣ. ಈ ಯುಗಾದಿಯು ನಿಮ್ಮ ಬದುಕಿನ ಕಷ್ಟಗಳನ್ನೆಲ್ಲಾ ದೂರ ಮಾಡಿ, ಯಶಸ್ಸಿನ ಸಿಹಿಯನ್ನು ಉಣಿಸಲಿ. ಕೃಷಿ, ವ್ಯಾಪಾರ, ಶಿಕ್ಷಣ ಹಾಗೂ ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿರುವ ನಮ್ಮ ಓದುಗರಿಗೆ ಈ ವರ್ಷ ಅದೃಷ್ಟದ ವರ್ಷವಾಗಲಿ ಎಂದು ಆಶಿಸುತ್ತೇವೆ.
ನಿಮ್ಮ ನೆಚ್ಚಿನ ದೀವಟಿಗೆ ನ್ಯೂಸ್, ಮುಂದಿನ ದಿನಗಳಲ್ಲಿ ಇನ್ನು ಹತ್ತು ಹಲವು ಹೊಸ ಬದಲಾವಣೆಗಳೊಂದಿಗೆ, ತಂತ್ರಜ್ಞಾನದ ಸುಧಾರಣೆಯೊಂದಿಗೆ ನಿಮ್ಮ ಮನೆಮನಗಳನ್ನು ತಲುಪಲು ಸಜ್ಜಾಗಿದೆ. ನಿಮ್ಮ ಪ್ರೀತಿ ಮತ್ತು ವಿಶ್ವಾಸ ಹೀಗೆಯೇ ಮುಂದುವರಿಯಲಿ ಮತ್ತೊಮ್ಮೆ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!
Bantawala
ಇಟ್ಟೆಲಾಯನ ಆರಂಭ ಇತಿಹಾಸ ಪ್ರಸಿದ್ಧ ಶ್ರೀ ಪಂಚಲಿoಗೇಶ್ವರ ದೇವಸ್ಥಾನ ವಿಟ್ಲ ಇದರ ಕಾಲಾವಧಿ ಜಾತ್ರೋತ್ಸವ
ಇತಿಹಾಸ ಪ್ರಸಿದ್ಧ ಶ್ರೀ ಪಂಚಲಿoಗೇಶ್ವರ ದೇವಸ್ಥಾನ ವಿಟ್ಲ ಇದರ ಕಾಲಾವಧಿ ಜಾತ್ರೋತ್ಸವವು ಜನವರಿ 14ನೇ ಬುಧವಾರದಂದು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ 9 ದಿವಸಗಳ ತನಕ ಉತ್ಸವಾದಿಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

ವರ್ಷಂಪ್ರತಿ ನಡೆಯುವ ಅನುಷ್ಠಾನ ಪ್ರಕಾರ ಜನವರಿ 14ರಂದು ಬುಧವಾರ ಬೆಳಗ್ಗೆ 10.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ

ಸಂಜೆ 6:00ಕ್ಕೆ ಅರಸು ಮುಂಡಾಲ್ತಾಯ ದೈವದ ಭಂಡಾರವು ಕ್ಷೇತ್ರಕ್ಕೆ ಆಗಮನವಾಗಲಿದೆ. ರಾತ್ರಿ ಗಂಟೆ 8.30ಕ್ಕೆ ಲಕ್ಷದೀಪೋತ್ಸವ ನಡೆದು ಉತ್ಸವ ಬಲಿ, ಕಟ್ಟೆ ಪೂಜೆ, ಬಳಿಕ ಬಟ್ಟಲು ಕಾಣಿಕೆ ನಡೆಯಲಿದೆ
ಜನವರಿ 15, 16, 17 ರಂದು ಸಂಜೆ ಗಂಟೆ 7.00ಕ್ಕೆ ಸರಿಯಾಗಿ ನಿತ್ಯೋತ್ಸವ ನಡೆಯಲಿದೆ
ಜನವರಿ 18ರಂದು ಬಯ್ಯದ ಬಲಿ.
ಜನವರಿ 18ರಂದು ಬೆಳಿಗ್ಗೆ 9.00ಕ್ಕೆ ಸರಿಯಾಗಿ ಪಂಚಲಿoಗೇಶ್ವರ ದೇವರ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ರುದ್ರಯಾಗ ನಡೆಯಲಿದೆ. ಸಂಜೆ ಗಂಟೆ 8:30ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುವುದು 9.00 ಗಂಟೆಗೆ ಬಯ್ಯದ ಬಲಿ ಉತ್ಸವ ಪ್ರಾರಂಭವಾಗಲಿದೆ
ಜನವರಿ 19ರಂದು ಸೋಮವಾರ ನಡುದೀಪೋತ್ಸವ ಕೆರೆ ಆಯನ
ಬೆಳಿಗ್ಗೆ 9.30ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ಪ್ರಸಾದ ವಿತರಣೆ ರಾತ್ರಿ 8.00 ಗಂಟೆಗೆ ನಡುದೀಪೋತ್ಸವ ನಂತರ ತೆಪ್ಪೋತ್ಸವ ನಡೆಯಲಿದೆ
ಜನವರಿ 20ರಂದು ಮಂಗಳವಾರ ಹೂ ತೇರು
ಪ್ರಾತಕಾಲ 5:00 ಗಂಟೆಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆಯಾಗಲಿದೆ. ರಾತ್ರಿ 7:30ಕ್ಕೆ ಉತ್ಸವದ ನಂತರ ಹೂತೇರು ನಡೆಯಲಿದೆ
ಜನವರಿ 21ರಂದು ಪಂಚಲಿoಗನಿಗೆ ಮಹಾರಥೋತ್ಸವ
ಪಂಚಲಿoಗೇಶ್ವರನ ವೈಭವದ ಮಹಾರಥೋತ್ಸವ ನಡೆಯಲಿದೆ
ಬೆಳಿಗ್ಗೆ 9:30ಕ್ಕೆ ದರ್ಶನ ಬಲಿ, ರಾಜಾಂಗಣದ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಸಂಜೆ 4:30ಕ್ಕೆ ಕಡಂಬುವಿನಿAದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನವಾಗಲಿದೆ. ರಾತ್ರಿ ಗಂಟೆ 9.00 ಮಹಾರಥೋತ್ಸವ ನಡೆದು ನಂತರ ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.
ಜನವರಿ 22ರಂದು ಗುರುವಾರ ಬೆಳಿಗ್ಗೆ ಗಂಟೆ 8:30ಕ್ಕೆ ಕವಾಟೋದ್ಘಾಟನೆ, ಮಹಾಪೂಜೆ, ಕಾಲಾವಧಿ ಬಟ್ಟಲು ಕಾಣಿಕೆ, ತುಲಾಭಾರ ಸೇವೆ ನಡೆಯಲಿದೆ ರಾತ್ರಿ ಗಂಟೆ 7:30ಕ್ಕೆ ಓಕುಳಿ ಕಟ್ಟೆಯಲ್ಲಿ ಕಟ್ಟೆ ಪೂಜೆಯ ನಂತರ ಶ್ರೀ ದೇವರಿಗೆ ಅಷ್ಠಾವಧಾನ ಸೇವೆ ನಂತರ ಅವಭೃತ ಸ್ಥಾನಕ್ಕೆ ಕೊಡಂಗಾಯಿಗೆ ಸವಾರಿ ಧ್ವಜಾವರೋಹಣ, ಸಂಪ್ರೋಕ್ಷಣೆ
ಜನವರಿ 24ರಂದು ಶನಿವಾರ ಮದ್ಯಾಹ್ನ 2.00 ಕ್ಕೆ ಅರಸು ಮುಂಡಾಲ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ದೈವ, ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ ನಡೆಯಲಿದೆ. 25 ರಂದು ಆದಿತ್ಯವಾರ ಮಧ್ಯಾಹ್ನ ಗಂಟೆ 2:00 ಕಾಲಾವಧಿಯಲ್ಲಿ ನಡೆಯುವ ಹಾಗೆ ಅರಮನೆಯಲ್ಲಿ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ಬಳಿಕ ಕೇಪು ಕ್ಷೇತ್ರಕ್ಕೆ ಭಂಡಾರ ಹೊರಡುವುದು
Bantawala
ಪವಿತ್ರ ಉಮ್ರಾ ಯಾತ್ರೆ ; ಪಿ.ಕೆ.ಅಬ್ಬಾಸ್ ಪರ್ಲೊಟ್ಟು ಅವರಿಗೆ ಸನ್ಮಾನ
ಬಂಟ್ವಾಳ : ಪವಿತ್ರ ಉಮ್ರಾ ಯಾತ್ರೆಗೆ ತೆರಳುತ್ತಿರುವ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಕೋಶಾಧಿಕಾರಿ ಪಿ.ಕೆ.ಅಬ್ಬಾಸ್ ಪರ್ಲೊಟ್ಟು ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ಮಸೀದಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ಥಳೀಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಸಂದೇಶ ಬಾಷಣಗೈದರು.
ಈ ಸಂದರ್ಭದಲ್ಲಿ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಸಾಹುಲ್ ಹಮೀದ್ ಪರ್ಲೊಟ್ಟು, ಸದಸ್ಯ ಫಾರೂಕ್ ಗೋಳಿಕಟ್ಟೆ, ಮಾಜಿ ಸದಸ್ಯ ಅತಾವುಲ್ಲಾ ನೇರಳಕಟ್ಟೆ, ಪಂತಡ್ಕ ಮಸೀದಿ ಉಸ್ತುವಾರಿ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಹಾಜಿ ನೆಡ್ಯಾಲ್, ಪ್ರಮುಖರಾದ ಹಾರಿಸ್ ಮುಸ್ಲಿಯಾರ್, ಉಮ್ಮರ್ ಹಾಜಿ ಭಗವಂತಕೋಡಿ, ಇಂಜಿನಿಯರ್ ಫಾರೂಕ್, ಮುನೀರ್ ಕೊಡಾಜೆ, ಅಹ್ಮದ್ ಕೊಡಾಜೆ, ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ನೂತನ ಪ್ರಧಾನ ಕಾರ್ಯದರ್ಶಿ ಸಮದ್ ಪರ್ಲೊಟ್ಟು, ಸದಸ್ಯರಾದ ಪಿ.ಕೆ.ರಶೀದ್, ಮಸೂದ್ ಪರ್ಲೊಟ್ಟು ಮೊದಲಾದವರು ಉಪಸ್ಥಿತರಿದ್ದರು.
-
crime3 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
