Bantawala
ವಿಟ್ಲದಲ್ಲಿ ಅನಧಿಕೃತ ರಕ್ಷಾ ಕ್ಲಿನಿಕ್ ಅಂಡ್ ಲ್ಯಾಬೋರೇಟರಿಗೆ ಬೀಗ ಜಡಿದ ಅಧಿಕಾರಿಗಳು; ವೈದ್ಯರೊಬ್ಬರ ರಕ್ತ ಪರೀಕ್ಷೆಯ ಗೋಲ್ಮಾಲ್ ವರದಿಗೆ ಕ್ಲಿನಿಕ್ ಬಂದ್
ವಿಟ್ಲದಲ್ಲಿ ಅನಧಿಕೃತ ರಕ್ತ ಪರೀಕ್ಷಾ ಪ್ರಯೋಗಾಲಯಕ್ಕೆ ಬೀಗ ಜಡಿದಿದ್ದಾರೆ. ತಪಾಸಣೆಯ ಸಮಯದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ (ಕೆಪಿಎಂಇಎ) ಅಡಿಯಲ್ಲಿ ಕಡ್ಡಾಯ ನೋಂದಣಿ ಇಲ್ಲದೆ ಕ್ಲಿನಿಕ್ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದೆ ಕಾರ್ಯನಿರ್ವಹಿಸುತ್ತಿದ್ದ ಅನಧಿಕೃತ ಪರೀಕ್ಷಾ ಪ್ರಯೋಗಾಲಯದ ಪರೀಕ್ಷಾ ಫಲಿತಾಂಶಗಳಲ್ಲಿ ಅಕ್ರಮಗಳು ಕಂಡು ಬಂದ ನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಹಾಕಿದರು.

ಬಂಟ್ವಾಳ ತಾಲೂಕು ಬದನಾಜೆ ಸಮೀಪದ ನಿವಾಸಿ, ಕಿಯಾನ್ಸ್ ಹರ್ಬಲ್ ಸೆಂಟರ್ ಕಂಪೆನಿಯ ಮಾಲೀಕರಾಗಿರುವ ಡಾ.ಶರತ್ ಶೆಟ್ಟಿ ಅವರು ವಿಟ್ಲ ಚಂದಳಿಕೆಯಲ್ಲಿ ಕೆಲ ಸಮಯದ ಹಿಂದೆ ಆರಂಭಗೊಂಡ ರಕ್ಷಾ ಕ್ಲಿನಿಕ್ ಎಂಡ್ ಲ್ಯಾಬೋರೇಟರಿ ವಿರುದ್ಧ ದೂರು ನೀಡಿದ್ದರು. ಶರತ್ ಶೆಟ್ಟಿ ಅವರು ಈ ಲ್ಯಾಬೋರೇಟರಿನಲ್ಲಿ ಸಿಬಿಸಿ ರಕ್ತ ಪರೀಕ್ಷೆಯನ್ನು ಮಾಡಿಸಿದ್ದರು. ಆದರೆ ಆ ವರದಿಯಲ್ಲಿ ಹಿಮೋಗ್ಲೋಬಿನ್, ಪ್ಲೇಟೈಟ್ ನಲ್ಲಿ ಅತೀ ಹೆಚ್ಚು ವ್ಯತ್ಯಾಸ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ತಾಲೂಕು ಆರೋಗ್ಯ ಕೇಂದ್ರ ಅಧಿಕಾರಿಗೆ ಈ ಬಗ್ಗೆ ದೂರು ನೀಡಿ, ಈ ಲ್ಯಾಬೋರೇಟರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ರಕ್ತ ಪರೀಕ್ಷೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ, ರಕ್ತದ ಪೇಟ್ಲೇಟ್ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ತಾಲೂಕು ಆರೋಗ್ಯ ಅಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಪೊಲೀಸ್ ಬಂದೋಬಸ್ತ್ ನಲ್ಲಿ ಚಂದಳಿಕೆಯ ರಕ್ಷಾ ಕ್ಲಿನಿಕ್ ಅಂಡ್ ಲ್ಯಾಬೋರೇಟರಿಗೆ ದಾಳಿ ನಡೆಸಿದಾಗ, ವಿಟ್ಲ ಚಂದಳಿಕೆಯಲ್ಲಿ ಕಾರ್ಯಾಚರಿಸುತ್ತಿರುವ ಕ್ಲಿನಿಕ್ ಅನಧಿಕೃತವಾಗಿ ನಡೆಸಲಾಗುತ್ತಿರುವುದನ್ನು ದೃಢಪಡಿಸಿ ರಕ್ತ ಪರೀಕ್ಷಾ ಕೇಂದ್ರಕ್ಕೆ ಬೀಗ ಜಡಿದ ಘಟನೆ ನಡೆದಿದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಅನಧಿಕೃತ ವೈದ್ಯಕೀಯ ಸಂಸ್ಥೆಗಳು ಕಂಡುಬಂದರೆ ಅವುಗಳ ವಿರುದ್ಧ ಕೆಪಿಎಂಇಎ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್‌ಒ ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲೆಯಾದ್ಯಂತ ಅನಧಿಕೃತವಾಗಿ ನಡೆಯುವ ಕೆಲವು ಮೆಡಿಕಲ್ ಶಾಪ್‌ಗಳು ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ನಡೆಯುತ್ತಿವೆ ಎಂಬ ಬಗ್ಗೆ ಗುಸು ಗುಸು ಸುದ್ದಿಗಳು ಹರಿದಾಡುತ್ತಿದ್ದು, ಪರವಾನಿಗೆಯಿರುವ ಮೆಡಿಕಲ್ ಶಾಪ್ ಮಾಲೀಕರು ಪರವಾನಿಗೆರಹಿತ ಮೆಡಿಕಲ್‌ಗಳ ವಿರುದ್ದ ದೂರು ನೀಡಲು ಮುಂದೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ವಿಟ್ಲದ ಕ್ಲಿನಿಕ್ ನಲ್ಲಿ ರಕ್ತ ಪರೀಕ್ಷೆಗೆ ಒಳಗಾಗಿದ್ದ ಡಾ. ಶರತ್ ಶೆಟ್ಟಿ ಎಂಬವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ತಾಲೂಕು ಆರೋಗ್ಯ ಅಧಿಕಾರಿ ಮತ್ತು ಬಂಟ್ವಾಳ ತಾಲೂಕು ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಯನ್ನು ಜಂಟಿ ತನಿಖೆಗೆ ಆದೇಶಿಸಲಾಯಿತು. ಅಧಿಕಾರಿಗಳು ತನಿಖೆ ನಡೆಸಿ ತಮ್ಮ ವರದಿಯನ್ನು ಸಲ್ಲಿಸಿದರು. ಈ ವರದಿಯ ಆಧಾರದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಯವರ ಆದೇಶದಂತೆ ಜಿಲ್ಲಾ ಜಾರಿ ಅನುಷ್ಠಾನಾಧಿಕಾರಿ ಡಾ. ದೀಪಾ ಪ್ರಭು ಮತ್ತು ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ್ ಕುಮಾರ್ ರೈ ಮತ್ತು ತಮ್ಮ ತಂಡದೊಂದಿಗೆ ಶನಿವಾರ ವಿಟ್ಲದ ಚಂದಳಿಕೆ ಕಲ್ಲಕಟ್ಟದಲ್ಲಿರುವ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿಯನ್ನು ಪರಿಶೀಲಿಸಿದರು.
ತಪಾಸಣೆ ಸಮಯದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ (ಕೆಪಿಎಂಇಎ) ಅಡಿಯಲ್ಲಿ ಕಡ್ಡಾಯ ನೋಂದಣಿ ಇಲ್ಲದೆ ಕ್ಲಿನಿಕ್ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಕೆಪಿಎಂಇಎ ಕಾಯ್ದೆ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಕೂಡಲೇ ಕ್ಲಿನಿಕ್‌ಗೆ ಬೀಗ ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳ ತಂಡ ಹೇಳಿದೆ. ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಅನಧಿಕೃತ ಪರೀಕ್ಷಾ ಪ್ರಯೋಗಾಲಯದ ಪರೀಕ್ಷಾ ಪಲಿತಾಂಶಗಳಲ್ಲಿ ಅಕ್ರಮಗಳು ಕಂಡು ಬಂದ ನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಹಾಕಿದ್ದಾರೆ. ಕಾರ್ಯಾಚರಣೆಯಲ್ಲಿ ವಿಟ್ಲ ಪೊಲೀಸರು ಪಾಲ್ಗೊಂಡಿದ್ದರು.

ಘಟನೆಯ ವಿವರ :
ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆ ಬಳಿಯಲ್ಲಿರುವ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿಗೆ ಫೆ.15ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಡಾ.ಶರತ್ ಬಂದಿದ್ದರು. ರಕ್ತದ ಮಾದರಿ ಪಡೆದ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಸಿಬ್ಬಂದಿಗಳು ಕೆಲ ಕ್ಷಣಗಳ ಬಳಿಕ ಡಾ.ಶರತ್ ಶೆಟ್ಟಿಯವರ ವಾಟ್ಸಾಪ್ ಗೆ ರಕ್ತ ಪರೀಕ್ಷೆಯ ವರದಿ ಕಳುಹಿಸಿದ್ದಾರೆ. ವರದಿಯಲ್ಲಿ ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆ ಕೇವಲ 18,000ಎಂದು ದಾಖಲಾಗಿದೆ ಸ್ವತಃ ವೈದ್ಯರಾಗಿದ್ದಾರೂ ಡಾ.ಶರತ್ ಅವರು ರಕ್ತ ಪರೀಕ್ಷಾ ವರದಿಯಿಂದ ಬೆಚ್ಚಿ ಬಿದ್ದಿದ್ದಾರೆ. ತಕ್ಷಣವೇ ವಿಟ್ಲದಲ್ಲಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಅಲ್ಲಿನ ವರದಿಯಲ್ಲಿ ಪ್ಲೇಟ್ಲೆಟ್ ಸಂಖ್ಯೆ 1ಲಕ್ಷದ 13ಸಾವಿರ ಎಂದು ದಾಖಲಾಗಿದೆ. ಮತ್ತೂ ಖಚಿತಪಡಿಸುವ ಸಲುವಾಗಿ ವಿ ಕೇರ್ ಲ್ಯಾಬೋರೇಟರಿಗೆ ತೆರಳಿದ ಡಾ.ಶರತ್ ಶೆಟ್ಟಿಯವರು ಅಲ್ಲೂ ಮಾದರಿ ರಕ್ತ ನೀಡಿ ಪರೀಕ್ಷೆ ನಡೆಸಿದ್ದಾರೆ. ಅಲ್ಲಿನ ವರದಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ಲೇಟ್ಲೆಟ್ ಇರುವುದು ಖಚಿತಗೊಂಡಿದೆ.

ಪುತ್ತೂರು ನಗರದಲ್ಲಿ ಕ್ಲಿನಿಕ್ ಹೊಂದಿರುವ ಡಾ.ಶರತ್ ಶೆಟ್ಟಿಯವರು ಸ್ವತಃ ವೈದ್ಯರಾಗಿದ್ದ ಕಾರಣ ಆತಂಕಗೊಳ್ಳದೇ ಮೂರು ಕಡೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಜನಸಾಮಾನ್ಯರಾಗಿದ್ಜರೆ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಯ ಕೇವಲ 18,000ದ ವರದಿ ಕಂಡಾಕ್ಷಣ ಭಯಭೀತರಾಗುತ್ತಿದ್ದರು. ಸ್ವತಃ ಶರತ್ ಶೆಟ್ಟಿಯವರು ವೈದ್ಯರಾಗಿದ್ದ ಕಾರಣ ಕಾನೂನುಗಳ ಬಗ್ಗೆ ಅರಿವು ಉಳ್ಳವರಾಗಿದ್ದರು..ಅದಕ್ಕಾಗಿಯೇ ನಿಮ್ಮ ವರದಿ ಸರಿಯಾಗಿ ಇದ್ದರೆ ಧನ್ವಂತರಿ ಲ್ಯಾಬ್ ಮತ್ತು ವಿ ಕೇರ್ ಲ್ಯಾಬ್ ವರದಿಗಳಲ್ಲಿ ಸಿಬ್ಬಂದಿಗಳು ಸಹಿ ಯಾವ ರೀತಿ ಮಾಡಿದ್ದಾರೋ ಅದೇ ರೀತಿ ನಿಮ್ಮ ಪರೀಕ್ಷಾ ವರದಿಗೂ ಸಹಿ ಮಾಡಿಕೊಡಿ ಎಂದು ಕೇಳಿದ್ದಾರೆ.
ಆದರೆ ರಕ್ಷಾ ಕ್ಲಿನಿಕ್ ಲ್ಯಾಬೋರೇಟರಿ ಸಿಬ್ಬಂದಿಗಳು ನಾವು ಯಾವುದೇ ಕಾರಣಕ್ಕೂ ಸಹಿ ಮಾಡುವುದಿಲ್ಲ ಎಂದು ವೈದ್ಯರನ್ನೇ ಏಮಾರಿಸಲು ಯತ್ನಿಸಿದ್ದಾರೆ. ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಯ ಸಿಬ್ಬಂದಿಗಳ ಉದ್ಧಟತನ ಮತ್ತು ಉಡಾಫೆ ವರ್ತನೆಯಿಂದ ಬೇಸರಗೊಂಡ ವೈದ್ಯ ಡಾ.ಶರತ್ ಶೆಟ್ಟಿಯವರು ದೂರು ನೀಡುವ ಮೂಲಕ ಕಾನೂನು ಹೋರಾಟಕ್ಕಾಗಿ ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದರು.

ಒಟ್ಟಿನಲ್ಲಿ ಸ್ವತಃ ವೈದ್ಯರಿಗೇ ರಕ್ತಪರೀಕ್ಷೆ ವರದಿಯಲ್ಲಿ ಗೋಲ್ಮಾಲ್ ವರದಿ ಬರೆದು ಕೊಟ್ಟ ರಕ್ಷಾ ಕ್ಲಿನಿಕ್ ಲ್ಯಾಬೋರೇಟರಿಯ ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ರಾಜಕೀಯ ಪ್ರಭಾವದಿಂದ ತನಗಾದ ಅನ್ಯಾಯ ಮುಚ್ಚಿ ಹೋಗಿ ಜನಸಾಮಾನ್ಯರಿಗೆ ನನ್ನಂತಹ ಸ್ಥಿತಿ ಮುಂದೆ ಬರಬಾರದೆಂಬ ಹಿತದೃಷ್ಠಿಯಿಂದ ದೂರುದಾರರು ಮಂಗಳೂರಿನಲ್ಲಿ ಪ್ರೆಸ್ ಮೀಟ್ ನಡೆಸಿ ತನಗಾದ ಮೋಸವನ್ನು ವಿವರವಾಗಿ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿ ಅನಧಿಕೃತ ರಕ್ತ ಪರೀಕ್ಷಾ ಕೇಂದ್ರವನ್ನು ಬಂದ್ ಮಾಡಬೇಕು ಇಲ್ಲವಾದರೆ ಈ ಅನಧಿಕೃತ ಕೇಂದ್ರವನ್ನು ಶಿಫಾರಸ್ಸು ಮಾಡಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದರು.
Bantawala
ಮಾಣಿಲ ಶಿರಿಯಾ ನದಿಗೆ ಸೇತುವೆ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಸ್ಥಳ ಪರಿಶೀಲನೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಣಿಲ ಗ್ರಾಮದ ಶಿರಿಯಾ ನದಿಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಿಸಬೇಕೆಂಬ ದಶಕಗಳ ಕಾಲದ ಬೇಡಿಕೆಗೆ ಕೊನೆಗೂ ಜೀವಕಳೆ ಬಂದಿದೆ. ಈ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಶಕಗಳ ಬೇಡಿಕೆಗೆ ಸ್ಪಂದನೆ
ಮಾಣಿಲ ಭಾಗದ ಜನರು ಕೇರಳದ ಪ್ರದೇಶಗಳಿಗೆ ತೆರಳಲು ಮತ್ತು ಗಡಿ ಭಾಗದ ಸಂಪರ್ಕ ಸುಗಮಗೊಳಿಸಲು ಈ ಸೇತುವೆಯ ನಿರ್ಮಾಣ ಅತ್ಯಂತ ಅವಶ್ಯಕವಾಗಿದೆ.

ಪ್ರಸ್ತುತ ಮಳೆಗಾಲದಲ್ಲಿ ಹಾಗೂ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಜನರು ನದಿ ದಾಟಲು ಹರಸಾಹಸ ಪಡುತ್ತಿದ್ದಾರೆ. ಈ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದ ಸ್ಥಳೀಯರು, ಕೂಡಲೇ ಸುಸಜ್ಜಿತ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.
ತಾಂತ್ರಿಕ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ
ಸ್ಥಳ ಪರಿಶೀಲನೆಯ ನಂತರ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು:”ಈ ಭಾಗದ ಜನರ ದಶಕಗಳ ಬೇಡಿಕೆಯ ಬಗ್ಗೆ ಗಂಭೀರವಾಗಿ ಗಮನ ಹರಿಸಲಾಗುವುದು. ಸೇತುವೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವರದಿ ಹಾಗೂ ಅಂದಾಜು ಪಟ್ಟಿಯನ್ನು (Estimation) ಸಿದ್ಧಪಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಮನವರಿಕೆ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸಚಿವರಿಗೆ ಈ ಯೋಜನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಗಡಿ ಭಾಗದ ಅಭಿವೃದ್ಧಿ ಹಾಗೂ ಜನರ ಸಂಕಷ್ಟ ನಿವಾರಣೆಗೆ ಈ ಸೇತುವೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಶ್ರೀಧರ್ ಬಾಳೆಕಲ್ಲು , ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು

accident
ಮುಳಿಯದಲ್ಲಿ ಕೆಎಸ್ಆರ್‌ಟಿಸಿ ಬಸ್ ಮತ್ತು ಟಿಪ್ಪರ್ ಮುಖಾಮುಖಿ ಡಿಕ್ಕಿ: ಪರಸ್ಪರ ದೂರು ದಾಖಲು
ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಮಾರ್ಚ್ 24ರಂದು ಬೆಳಿಗ್ಗೆ ಕೆಎಸ್ಆರ್‌ಟಿಸಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಅಪಘಾತವು ಪರಸ್ಪರ ಹಲ್ಲೆ ಮತ್ತು ದೂರು-ಪ್ರತಿದೂರುಗಳಿಗೆ ಕಾರಣವಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್.ಐ.ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ 1: ಬಸ್ ಕಂಡಕ್ಟರ್ ಪ್ರಶಾಂತ್ ನೀಡಿದ ದೂರು (ಕ್ರೈಂ ನಂ: 0072/2026)
ಬಸ್ ನಿರ್ವಾಹಕ ಪ್ರಶಾಂತ್ ಅವರು ನೀಡಿದ ದೂರಿನಲ್ಲಿ (ಕ್ರೈಂ ನಂ: 0072/2026), ಟಿಪ್ಪರ್ ಚಾಲಕ ಬಿಲಾಲ್ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿಸಿದ್ದಾರೆ. ಅಪಘಾತದ ಫೋಟೋ ತೆಗೆಯಲು ಹೋದಾಗ ಚಾಲಕನು ಅವಾಚ್ಯವಾಗಿ ಬೈದು, ಪ್ರಶಾಂತ್ ಅವರ ಎದೆ ಮತ್ತು ಕುತ್ತಿಗೆಗೆ ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಶರ್ಟ್ ಜೇಬಿನಲ್ಲಿದ್ದ 3,000 ರೂ. ಸಾರಿಗೆ ಆದಾಯದ ಹಣವನ್ನು ದೋಚಿದ್ದು, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿರುತ್ತಾರೆ. ಈ ಸಂಬಂಧ ಆರೋಪಿ ಬಿಲಾಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281 (ಅಜಾಗರೂಕ ಚಾಲನೆ), 352 (ಅಪಮಾನ), 115(2) (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 132 (ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ 2: ಲಾರಿ ಚಾಲಕ ಸೈಯ್ಯದ್ ಬಿಲಾಲ್ ನೀಡಿದ ದೂರು (ಕ್ರೈಂ ನಂ: 0073/2026)
ಮತ್ತೊಂದೆಡೆ, ಟಿಪ್ಪರ್ ಚಾಲಕ ಸೈಯ್ಯದ್ ಬಿಲಾಲ್ ಅವರು ನೀಡಿದ ಪ್ರತಿದೂರಿನಲ್ಲಿ (ಕ್ರೈಂ ನಂ: 0073/2026), ಬಸ್ ಚಾಲಕ ಗಣೇಶ್ ಅವರ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ. ಅಪಘಾತದ ನಂತರ ಬಸ್ ನಿರ್ವಾಹಕ ಪ್ರಶಾಂತ್ ಅವರು ಮರದ ಕೋಲಿನಿಂದ ತಮ್ಮ ಬೆನ್ನಿಗೆ ಹೊಡೆದಿದ್ದಾರೆ ಮತ್ತು ಬಸ್ ಚಾಲಕ ಕೂಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ನಿರ್ವಾಹಕರು ಶರ್ಟ್ ಹಿಡಿದು ಎಳೆದಾಡಿ “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ದೂರಿನನ್ವಯ ಬಸ್ ಚಾಲಕ ಮತ್ತು ನಿರ್ವಾಹಕರ ವಿರುದ್ಧ BNS ಸೆಕ್ಷನ್ 281, 352, 118(1) (ಅಪಾಯಕಾರಿ ಆಯುಧದಿಂದ ಗಾಯಗೊಳಿಸುವುದು), 115(2), 351(2) (ಕ್ರಿಮಿನಲ್ ಬೆದರಿಕೆ) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಪ್ರಸ್ತುತ ಎರಡೂ ಪ್ರಕರಣಗಳ ಕುರಿತು ವಿಟ್ಲ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Bantawala
ಬೊಬ್ಬೆಕೇರಿ ರಸ್ತೆ ಕಾಂಕ್ರೀಟೀಕರಣಕ್ಕೆ 60 ಲಕ್ಷ ಮಂಜೂರು: ಶಾಸಕ ಅಶೋಕ್ ರೈ ಕೊಟ್ಟ ಮಾತು ಈಡೇರಿಕೆ
ಪುತ್ತೂರು: ಬಂಟ್ವಾಳ ತಾಲೂಕು ವ್ಯಾಪ್ತಿಯ ಕಾಂಞoಗಾಡು-ಕಡೂರು ರಾಜ್ಯ ಹೆದ್ದಾರಿಯ ಬೊಬ್ಬೆಕೇರಿ ಎಂಬಲ್ಲಿನ ರಸ್ತೆ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಹಲವು ವರ್ಷಗಳ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿರುವ ಪುತ್ತೂರು ಶಾಸಕ ಅಶೋಕ್ ರೈ, ರಸ್ತೆ ಕಾಂಕ್ರೀಟೀಕರಣ ಮತ್ತು ಅಭಿವೃದ್ಧಿಗಾಗಿ 60 ಲಕ್ಷ ರೂಪಾಯಿ ಅನುದಾನ ಮಂಜೂರುಗೊಳಿಸಿದ್ದಾರೆ.
ಸಮಸ್ಯೆಯ ಹಿನ್ನೆಲೆ:
ಅಂತರರಾಜ್ಯ ಸಂಪರ್ಕಿಸುವ ಈ ಪ್ರಮುಖ ಹೆದ್ದಾರಿಯ ಬೊಬ್ಬೆಕೇರಿ ಭಾಗದಲ್ಲಿ ರಸ್ತೆ ಅತ್ಯಂತ ಕಿರಿದಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದರು. ರಸ್ತೆ ಕಿರಿದಾಗಿದ್ದರಿಂದ ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ನೀರು ನಿಲ್ಲುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಖಾಸಗಿ ಜಮೀನುಗಳಿದ್ದ ಕಾರಣ ರಸ್ತೆ ಅಗಲೀಕರಣ ಸಾಧ್ಯವಾಗಿರಲಿಲ್ಲ, ಇದರಿಂದಾಗಿ ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದವು. ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ನಡೆದಾಡಲು ರಸ್ತೆ ಬದಿಯಲ್ಲಿ ಕನಿಷ್ಠ ಜಾಗವೂ ಇಲ್ಲದಂತಾಗಿತ್ತು.

ಶಾಸಕರ ಇಚ್ಛಾಶಕ್ತಿ:
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅಶೋಕ್ ರೈ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳೊAದಿಗೆ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಖಾಸಗಿ ಜಮೀನು ಮಾಲೀಕರೊಂದಿಗೆ ಮಾತುಕತೆ ನಡೆಸಿ, ಸಾರ್ವಜನಿಕ ಹಿತದೃಷ್ಟಿಯಿಂದ ರಸ್ತೆ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದ್ದರು. ಭರವಸೆ ನೀಡಿದ ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡುವ ಮೂಲಕ ಶಾಸಕರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
“ಬೊಬ್ಬೆಕೇರಿಯಲ್ಲಿ ರಸ್ತೆ ಕಿರಿದಾಗಿದ್ದರಿಂದ ಶಾಲಾ ಮಕ್ಕಳಿಗೆ ಹಾಗೂ ವಾಹನ ಸವಾರರಿಗೆ ಜೀವಭಯವಿತ್ತು. ಈ ಸಮಸ್ಯೆಯನ್ನು ಮನಗಂಡು ಖಾಸಗಿ ಜಮೀನು ಮಾಲೀಕರೊಂದಿಗೆ ಚರ್ಚಿಸಿದ್ದೇನೆ. ಸಾರ್ವಜನಿಕರ ಅನುಕೂಲಕ್ಕಾಗಿ ಯಾರೇ ಅಡ್ಡಿಪಡಿಸಿದರೂ ಇಲ್ಲಿ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುವುದು ಖಚಿತ.”
— ಅಶೋಕ್ ರೈ, ಶಾಸಕರು, ಪುತ್ತೂರು
-
crime1 day agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
