Connect with us

crime

ಸೊಸೆಯ ಮೇಲೆ ಮಾವ, ಪತಿಯಿಂದ ದೌರ್ಜನ್ಯ ಎಸಗಿದ ಪ್ರಕರಣ; ದೂರು ದಾಖಲಾಗುತ್ತಿದ್ದಂತೆ ಸೊಸೆ ಮೇಲೆಯೇ ಪ್ರತಿದೂರು ದಾಖಲಿಸಿದ ಮಾವ ನಿತ್ಯಾನಂದ

Published

on

ಸುಳ್ಯ: ಮಾವ ಮತ್ತು ಪತಿಯ ವಿರುದ್ಧ ಹಲ್ಲೆ, ದೌರ್ಜನ್ಯ, ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಿಸಿದ ಬೆನ್ನಿಗೇ ಸೊಸೆ ಸಾಹಿತ್ಯಾ ರೈಯ ವಿರುದ್ಧ ಮಾವ ಕಲ್ಲುಗುಂಡಿ ನಿತ್ಯಾನಂದ ರೈ ಪ್ರತಿದೂರು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ನಿತ್ಯಾನಂದ ರೈ ದಿನಾಂಕ: 02.02.2026 ರಂದು ಸಂಜೆ 07.30 ಗಂಟೆಗೆ ಕಾರ್ಯನಿಮಿತ್ತ ಸುಳ್ಯಕ್ಕೆ ಬರುವವರಿದ್ದು ಆ ಸಮಯದಲ್ಲಿ ಮೊಮ್ಮಗ ಜಿಯನ್‌ ರೈ ಪಿರ್ಯಾದಿದಾರರೊಂದಿಗೆ ಬರುತ್ತೇನೆಂದು ಹಠ ಹಿಡಿದಿದ್ದನಂತೆ. ಆಗ ಸೊಸೆ ಸಾಹಿತ್ಯಾ ರೈ ಮೊಮ್ಮಗನನ್ನು ಬಲತ್ಕಾರವಾಗಿ ಎಳೆದುಕೊಳ್ಳಲು ಪ್ರಯತ್ನಿಸಿದಾಗ ಮೊಮ್ಮಗನನ್ನು ನಿತ್ಯಾನಂದ ರೈ ಗಟ್ಟಿಯಾಗಿ ಹಿಡಿದುಕೊಂಡು ಹೊರಟಿದ್ದಾರಂತೆ. ಅಷ್ಟರಲ್ಲಿ ಸೊಸೆ ಮಾವನನ್ನು ತಡೆದು ಎಡ ಕೈ ಹೆಬ್ಬರಳಿಗೆ ಕಚ್ಚಿ ಮುಖ ಹಾಗೂ ಕುತ್ತಿಗೆ ಬಾಗಕ್ಕೆ ಕೈ ಬೆರಳ ಉಗುರಿನಿಂದ ಪರಚಿ ಗಾಯ ಮಾಡಿರುವುದಾಗಿದೆ. ಮತ್ತು ಮದುವೆ ಸಮಯದಲ್ಲಿ ಹಾಕಿದ 55 ಪವನ್‌ ಚಿನ್ನಾಭರಣವನ್ನು ತೆಗೆದುಕೊಂಡು ಹೋಗುತ್ತಿರುವಾಗ ನನ್ನನ್ನು ತಡೆಯಲು ಬಂದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿದ್ದಾಳೆಂದು ಸೊಸೆಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿತ್ಯಾನಂದ ರೈ ಪ್ರತಿದೂರು ನೀಡಿದ್ದಾರೆ‌. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 17/2026 ಕಲಂ 126(2),115(2), 351(2) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸದ್ರಿ ಪ್ರಕರಣದಲ್ಲಿ ದೂರು ಹಾಗೂ ಪ್ರತಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿರುತ್ತದೆ ಎಂದು ಜಿಲ್ಲಾ ಎಸ್ಪಿಯವರು ಮಾಹಿತಿ ನೀಡಿದ್ದಾರೆ.

ಸುಳ್ಯ ಠಾಣೆಯಲ್ಲಿ ದಾಖಲಾದ 17/2026 ಪ್ರಕರಣದಲ್ಲಿ ದೂರುದಾರರಾದ ಮಾವ ನಿತ್ಯಾನಂದರು ಫೆ.2 ರಂದು ಸಂಜೆ ಸೊಸೆಯು ತನ್ನನ್ನು ತಡೆದು ಎಡ ಕೈ ಹೆಬ್ಬರಳಿಗೆ ಕಚ್ಚಿ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಕೈ ಬೆರಳ ಉಗುರಿನಿಂದ ಪರಚಿ ಗಾಯ ಮಾಡಿರುವುದಾಗಿ ಹೇಳಿಕೆಯಿದ್ದು, ಅದೇ ದಿವಸ ಅಥವಾ ಮರುದಿವಸ ಈ ಬಗ್ಗೆ ಪೊಲೀಸರಿಗೆ ದೂರು ನೀಡಬಹುದಿತ್ತಲ್ಲವೇ ? ಅಥವಾ ಈ ಬಗ್ಗೆ ಆಕೆಯ ಮನೆ ಮಂದಿಗೆ ವಿಚಾರವನ್ನು ತಿಳಿಸಬಹುದಿತ್ತಲ್ಲವೇ ? ಅದು ಬಿಟ್ಟು ಮರುದಿವಸ ಅಂದರೆ ಫೆ. 3ರಂದು ರಾತ್ರಿ ಸೊಸೆಯ ಬೆಡ್‌ ರೂಮಿಗೆ ಹೋಗಿ ಸೊಸೆಯಿಂದ ಪ್ರಕರಣ ದಾಖಲಾದ ನಂತರ ಪ್ರತಿದೂರು ನೀಡಿರುವುದು ಯಾಕಾಗಿ ಎಂದು ಸಾರ್ವಜನಿಕವಾಗಿ ಚರ್ಚಿತವಾಗುತ್ತಿದೆ.

Continue Reading
Advertisement

crime

ಹಣ ಒಡವೆಯೊಂದಿಗೆ ಪರಾರಿಯಾಗುತ್ತಿದ್ದ ವಧುವಂಚಕನ ಹೆಡೆಮುರಿ ಕಟ್ಟಿದ ಪೊಲೀಸರು

Published

on

ಆನ್‌ ಲೈನ್‌ ಪ್ಲಾಟ್‌ ಫಾರಂ ಮ್ಯಾಟ್ರಮೋನಿ ಮೂಲಕ ಹಲವಾರು ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಒಡವೆಯೊಂದಿಗೆ ಪರಾರಿಯಾಗುತ್ತಿದ್ದ ವಧುವಂಚಕನ ಹೆಡೆಮುರಿ ಕಟ್ಟಿದ ಪೊಲೀಸರು. ಆರೋಪಿತನಾದ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ದಿನಾಂಕ:05/02/2026 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಆಪಾದಿತನು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯಮಾಡಿಕೊಂಡು ಇಬ್ಬರನ್ನು ಮದುವೇಯಾಗಿ ವಂಚಿಸಿ ಪರಾರಿಯಾಗಿದ್ದರೆ, 5 ಜನ ಮಹಿಳೆಯರನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿರುವುದಾಗಿ ತನಿಖೆಯಲ್ಲಿ ಬೇಳಕಿಗೆ ಬಂದಿದೆ. ಈತನ ವಂಚನಾ ಮದುವೆ ವ್ಯವಹಾರಕ್ಕೆ ಮುಲ್ಕಿ ನಿವಾಸಿ ಭಾಸ್ಕರ್‌ ಎಂಬಾತನೂ ಸಹಕರಿಸುತ್ತಿದ್ದು, ಸದ್ರಿ ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.
ಆರೋಪಿತ ಸುಶಾಂತ್ ಪೂಜಾರಿ ವಿರುದ್ದ ಮಂಗಳೂರು ಊರ್ವಾ ಪೊಲೀಸ್ ಠಾಣಾಅ.ಕ್ರ: 202/2017 ಕಲಂ: 406, 420 ಐಪಿಸಿ, ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣಾ ಅ.ಕ್ರ: 132/2022 ಕಲಂ: 379 ಐಪಿಸಿ ಮತ್ತು ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೊಲೀಸ್ ಠಾಣಾ ಅ.ಕ್ರ:354/2022 ಕಲಂ:336(ಎ), 370, 370(4), 376(2),(ಎನ್) 342, ಜೊತೆಗೆ 34 ಐಪಿಸಿ ಕಲಂ:3,4,5 ಇಮ್ಮೋರಲ್ ಟ್ರಾಫಿಕಿಂಗ್ ಆ್ಯಕ್ಟ್, ಕಲಂ:4,8,12 ಪೋಕ್ಸೋ ಕಾಯ್ದೆ ರಂತೆ ಪ್ರಕರಣಗಳು ದಾಖಲಾಗಿರುತ್ತದೆ.
ನೊಂದ ಮಹಿಳೆಗೆ ಸುಶಾಂತ್ ಪೂಜಾರಿ ಎಂಬ ವ್ಯಕ್ತಿಯು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈ ನಲ್ಲಿ 02/02/2025 ರಲ್ಲಿ ಮದುವೆಯಾಗಿದ್ದಲ್ಲದೆ ನಂಬಿಸಿ ಹಂತ ಹಂತವಾಗಿ 6,60,000/- ಹಣವನ್ನು ಪಡೆದುಕೊಂಡು ಮೋಸ ಮಾಡುವ ಉದ್ದೇಶದಿಂದ ದಿನಾಂಕ 15/11/2025 ರಂದು ನಾಪತ್ತೆ ಯಾಗಿರುತ್ತಾನೆ. ನಂತರದ ದಿನಗಳಲ್ಲಿ ಪಿರ್ಯಾದುದಾರರು ಅನುಮಾನಗೊಂಡ ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಸುಮಾರು ಕಡೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಮೋಸ ಮಾಡಿರುವ ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದ ಮೇರೆಗೆ ಪಿ ನೊಂದ ಮಹಿಳೆಯು ಕಾವೂರು ಪೊಲೀಸು ಠಾಣಾ ಅಕ್ರ: 184/2025 ಕಲಂ: 318(4), 316(2), 316(1), 336(3), 340(1) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ.
ಸದ್ರಿ ಪ್ರಕರಣದಲ್ಲಿನ ಆರೋಪಿತನಾದ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ದಿನಾಂಕ:05/02/2026 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಆಪಾದಿತನು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯಮಾಡಿಕೊಂಡು ಈ ಮೊದಲು 2021 ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುತ್ತಾನೆ. ಹಾಗೂ ಉಡುಪಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದುಕೊಂಡಿರುತ್ತಾನೆ, ಮುಂಬೈನ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುತ್ತಾನೆ. ಬೆಂಗಳೂರಿನಲ್ಲಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುತ್ತಾನೆ ಕಾರ್ಕಳದ ಒಂದು ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ಮೊಸ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ನಂತರ ಸದ್ರಿ ಪ್ರಕರಣದಲ್ಲಿ ಆರೋಪಿತ ಸುಶಾಂತ್ ಪೂಜಾರಿ ಯವನೊಂದಿಗೆ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತನು ಪಿರ್ಯಾದಿದಾರರಿಗೆ ಮತ್ತು ಕುಟುಂಬದವರಿಗೆ ನಂಬಿಸುವ ಉದ್ದೇಶದಿಂದ ಆರೋಪಿತ ಸುಶಾಂತ್ ನನ್ನ ಅಳಿಯ ಎಂದು ಹೇಳಿಕೊಂಡು ನಂಬಿಸಿ ಆರೋಪಿತ ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬೈನಲ್ಲಿ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡು ಮದುವೆ ನಡೆಸಿದವರಾಗಿರುತ್ತಾನೆ.

Continue Reading

Belthangady

ಬೆಳ್ತಂಗಡಿ ವಿದ್ಯಾರ್ಥಿನಿಯ ಅಪಹರಣಯತ್ನ ಪ್ರಕರಣ ; ಬಯಲಾದ ನಿಜಾಂಶ

Published

on

ಬೆಳ್ತಂಗಡಿ ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣಯತ್ನ ಪ್ರಕರಣದ ನಿಜಾಂಶ ಕೊನೆಗೂ ಬಯಲಾಗಿದೆ.
ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿನಿಯ ಅಪಹರಣ, ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ CCTV ದೃಶ್ಯಗಳನ್ನು ಪರಿಶೀಲಿಸಿದ ಬಳಿಕ, ದೂರಿನಲ್ಲಿ ಉಲ್ಲೇಖಿಸಿದಂತೆ ಯಾವುದೇ ವಾಹನ ಕಂಡುಬಂದಿಲ್ಲ. ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮವಾಗಿ ಇದು ಸ್ವಯಂ ಉಂಟುಮಾಡಿಕೊಂಡ ಗಾಯ (Self inflicted wound) ಎಂದು ತಿಳಿಸಲಾಗಿದ್ದು, ನಂತರ ಬಾಲಕಿಯ ಹೇಳಿಕೆಯನ್ನು ಮತ್ತೊಮ್ಮೆ ದಾಖಲಿಸಲಾಗಿದ್ದು, ಈ ಘಟನೆ ಕುರಿತು ತಾನು ಸುಳ್ಳು ಹೇಳಿಕೆ ನೀಡಿದ್ದೆನೆಂದು ತಿಳಿಸಿರುವುದರ ಮೂಲಕ ಪ್ರಕರಣದ ನಿಜಾಂಶ ಬಯಲಾಗಿದೆ. ಬಾಲಕಿಯು ಅಪ್ರಾಪ್ತೆಯಾಗಿರುವುದರಿಂದ ಆಕೆಯ ಹಿತದೃಷ್ಠಿಯಿಂದ ಸದ್ರಿ ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (CDPO) ಅವರಿಂದ ಬಾಲಕಿಗೆ ಕೌನ್ಸೆಲಿಂಗ್ ನೀಡಲಾಗುವುದು ಹಾಗೂ ಮುಂದಿನ ಕಾನೂನು ಕ್ರಮವನ್ನು ನಿರ್ಧರಿಸಲಾಗುವುದು ಎಂದು ಪೊಲೀಸ್‌ ವರಿಷ್ಠರು ಮಾಹಿತಿ ನೀಡಿದ್ದು, ಅಪ್ರಾಪ್ತೆಗೆ ಚಲಾಯಿಸಲು ವಾಹನ ನೀಡಿರುವ ಕುರುತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಶಾಲೆಗೆ ಹೋಗಲು ಮನಸ್ಸಿಲ್ಲದೆ ಕಿಡ್ನಾಪ್‌ ನಾಟಕ ಸೃಷ್ಟಿಸುವ ಕಿಡಿಗೇಡಿತನದ ಪ್ರಕರಣಗಳು ಆಗಾಗ ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಶಾಲಾ ಮಕ್ಕಳು ಶಾಲೆಗೆ ಹೋಗುವುದನ್ನು ತಪ್ಪಿಸಲು ಅಥವಾ ಪೋಷಕರಿಂದ ತಪ್ಪಿಸಿಕೊಳ್ಳಲು ತಮ್ಮನ್ನು ತಾವೇ ಕಿಡ್ನಾಪ್ ಮಾಡಿಕೊಳ್ಳಲಾಗಿದೆ ಎಂದು ನಾಟಕವಾಡುತ್ತಿರುವ ಘಟನೆಗಳು ನಡೆಯುತ್ತಲೇ ಇದೆ. ಇಂತಹುದೆ ಒಂದು ಘಟನೆ ಫೆ.9 ರಂದು ಬೆಳಿಗ್ಗೆ ಬೆಳ್ತಂಗಡಿಯಲ್ಲಿ ನಡೆದಿದೆ. ಈ ಗಂಭೀರ ಘಟನೆಗೆ ರಾಜಕೀಯ ಪ್ರವೇಶ ಮಾಡುವ ಮುನ್ನವೇ ಪೊಲೀಸರು ತನಿಖೆ ನಡೆಸಿ ವಿದ್ಯಾರ್ಥಿನಿಯ ಸುಳ್ಳು ಕಥೆಯನ್ನು ಬಯಲುಗೊಳಿಸಿದ್ದಾರೆ ಎಂಬ ಮಾಹಿತಿಯೊಂದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ

ದಿನಾಂಕ 09-02-20206 ರ ಬೆಳಿಗ್ಗೆ ಸುಮಾರು 8.30 ಗಂಟೆಗೆ 16 ವರ್ಷದ ಶಾಲಾ ಬಾಲಕಿ ಕಾಲೇಜಿಗೆ ಸ್ಕೂಟಿಯಲ್ಲಿ ತೆರಳಿದ್ದಾಳೆ. ಕಾಲೇಜಿಗೆ ತೆರಳುತ್ತಿದ್ದ ವೇಳೆ, ತನ್ನ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿ ಮಾರುತಿ ಒಮ್ನಿ ಬಂದಿದೆ. ಮಾರುತಿ ಒಮ್ನಿಯ ನಂಬರ್‌ ಪ್ಲೇಟ್‌ ಮುಚ್ಚಲಾಗಿತ್ತು, ಮಾರುತಿ ಓಮ್ನಿ ವಾಹನದಲ್ಲಿ ಬಂದ ಮೂವರು ಮುಖ ಮುಚ್ಚಿಕೊಂಡಿದ್ದ ಮುಸುಕುದಾರಿ ವ್ಯಕ್ತಿಗಳು ಇದ್ದರು, ಸ್ಕೂಟಿಗೆ ಅಡ್ಡ ಇಟ್ಟು ಮೂವರು ಮುಸುಕುದಾರಿಗಳು ವಿದ್ಯಾರ್ಥಿನಿಯನ್ನು ತಡೆದು ಅಪಹರಿಸಲು ಪ್ರಯತ್ನಿಸಿದ್ದಾರೆ, ಅವರು ಒಮ್ನಿಯಲ್ಲಿ ವಿದ್ಯಾರ್ಥಿನಿಯನ್ನು ಹಾಕಿಕೊಂಡು ಅಪಹರಿಸಲು ಯತ್ನಿಸಿದಾಗ ಅವಳು ಪ್ರತಿರೋಧಿಸಿ ಬೊಬ್ಬೆ ಹೊಡೆದಿದ್ದಾಳೆ. ಹಿಂದಿನಿಂದ ಒಂದು ದ್ವಿಚಕ್ರ ವಾಹನವೂ ಬಂದಿದೆ. ಇದರಿಂದ ಬೆದರಿದ ಅಪಹರಣಕಾರರು ತಮ್ಮಲ್ಲಿದ್ದ ಚಾಕುವಿನಿಂದ ಅವಳ ಎಡ ಕೈಗೆ ನಾಲ್ಕು ಬಾರಿ ಇರಿದಿದ್ದಾರೆ. ಅಪಹರಣಕಾರರು ಬೆದರಿ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ಇದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ವಿವರಣೆಯ ವಿದ್ಯಾರ್ಥಿನಿಯ ಹೇಳಿಕೆ.

ಈ ಬಗ್ಗೆ ಬಾಲಕಿಯು ತನ್ನ ಪೋಷಕರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಬೆಳ್ತಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತರು ಅಪಹರಿಸಲು ಯತ್ನಿಸಿದ ಆತಂಕಕಾರಿ ಘಟನೆ ಸೋಮವಾರ ಬೆಳಿಗ್ಗೆ ತಾಲೂಕಿನ ಸುದೇಮುಗೇರು ಎಂಬಲ್ಲಿ ನಡೆದಿದ್ದು, ವಿದ್ಯಾರ್ಥಿನಿಯ ಸಮಯಪ್ರಜ್ಞೆ ಹಾಗೂ ಪ್ರತಿರೋಧದಿಂದಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ ಎಂಬ ಸುದ್ದಿಯಿಂದ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಬೆನ್ನಲ್ಲೇ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿದ್ದಾರೆ. ಘಟನೆಯ ಬಗ್ಗೆ ಸರಕಾರ ಮತ್ತು ಗೃಹ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು ಆಯ್ತು. ಮದ್ಯಾಹ್ನ ನಂತರ ಘಟನೆಯ ಸತ್ಯಾಂಶ ಒಂದೊಂದಾಗಿ ಹೊರಬರುತ್ತಲೇ ಆತಂಕದ ವಾತಾವರಣ ಕಡಿಮೆಯಾಗುತ್ತಾ ಬಂದಿದೆ. ಈವರೆಗೆ ಅಪಹರಣಕಾರರ ಪತ್ತೆಯಾಗಿಲ್ಲ, ಮಾರುತಿ ಒಮ್ನಿ ಯಾವ ಸಿಸಿ ಕ್ಯಾಮಾರದಲ್ಲೂ ಕಂಡುಬರಲೇ ಇಲ್ಲ. ಅಂದರೆ ವಿದ್ಯಾರ್ಥಿನಿಯ ಸುತ್ತಲೇ ಅಪಹರಣದ ಕಥೆ ಕಂಡುಬರುತ್ತಿತ್ತು.ಕೊನೆಗೂ ಬೆಳ್ತಂಗಡಿ ವಿದ್ಯಾರ್ಥಿನಿಯ ಅಪಹರಣಯತ್ನ ಪ್ರಕರಣದ ನಿಜಾಂಶ ಬಯಲಾಗಿದೆ.

Continue Reading

Belthangady

ಬೆಳ್ತಂಗಡಿ ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣಯತ್ನ ಪ್ರಕರಣ ಏನಾಗಿದೆ ?

Published

on

ಶಾಲೆಗೆ ಹೋಗಲು ಮನಸ್ಸಿಲ್ಲದೆ ಕಿಡ್ನಾಪ್‌ ನಾಟಕ ಸೃಷ್ಟಿಸುವ ಕಿಡಿಗೇಡಿತನದ ಪ್ರಕರಣಗಳು ಆಗಾಗ ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಶಾಲಾ ಮಕ್ಕಳು ಶಾಲೆಗೆ ಹೋಗುವುದನ್ನು ತಪ್ಪಿಸಲು ಅಥವಾ ಪೋಷಕರಿಂದ ತಪ್ಪಿಸಿಕೊಳ್ಳಲು ತಮ್ಮನ್ನು ತಾವೇ ಕಿಡ್ನಾಪ್ ಮಾಡಿಕೊಳ್ಳಲಾಗಿದೆ ಎಂದು ನಾಟಕವಾಡುತ್ತಿರುವ ಘಟನೆಗಳು ನಡೆಯುತ್ತಲೇ ಇದೆ. ಇಂತಹುದೆ ಒಂದು ಘಟನೆ ಫೆ.9 ರಂದು ಬೆಳಿಗ್ಗೆ ಬೆಳ್ತಂಗಡಿಯಲ್ಲಿ ನಡೆದಿದೆ. ಈ ಗಂಭೀರ ಘಟನೆಗೆ ರಾಜಕೀಯ ಪ್ರವೇಶ ಮಾಡುವ ಮುನ್ನವೇ ಪೊಲೀಸರು ತನಿಖೆ ನಡೆಸಿ ವಿದ್ಯಾರ್ಥಿನಿಯ ಸುಳ್ಳು ಕಥೆಯನ್ನು ಬಯಲುಗೊಳಿಸಿದ್ದಾರೆ ಎಂಬ ಮಾಹಿತಿಯೊಂದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರಂತೆ !


ದಿನಾಂಕ 09-02-20206 ರ ಬೆಳಿಗ್ಗೆ ಸುಮಾರು 8.30 ಗಂಟೆಗೆ 16 ವರ್ಷದ ಶಾಲಾ ಬಾಲಕಿ ಕಾಲೇಜಿಗೆ ಸ್ಕೂಟಿಯಲ್ಲಿ ತೆರಳಿದ್ದಾಳೆ. ಕಾಲೇಜಿಗೆ ತೆರಳುತ್ತಿದ್ದ ವೇಳೆ, ತನ್ನ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿ ಮಾರುತಿ ಒಮ್ನಿ ಬಂದಿದೆ. ಮಾರುತಿ ಒಮ್ನಿಯ ನಂಬರ್‌ ಪ್ಲೇಟ್‌ ಮುಚ್ಚಲಾಗಿತ್ತು, ಮಾರುತಿ ಓಮ್ನಿ ವಾಹನದಲ್ಲಿ ಬಂದ ಮೂವರು ಮುಖ ಮುಚ್ಚಿಕೊಂಡಿದ್ದ ಮುಸುಕುದಾರಿ ವ್ಯಕ್ತಿಗಳು ಇದ್ದರು, ಸ್ಕೂಟಿಗೆ ಅಡ್ಡ ಇಟ್ಟು ಮೂವರು ಮುಸುಕುದಾರಿಗಳು ವಿದ್ಯಾರ್ಥಿನಿಯನ್ನು ತಡೆದು ಅಪಹರಿಸಲು ಪ್ರಯತ್ನಿಸಿದ್ದಾರೆ, ಅವರು ಒಮ್ನಿಯಲ್ಲಿ ವಿದ್ಯಾರ್ಥಿನಿಯನ್ನು ಹಾಕಿಕೊಂಡು ಅಪಹರಿಸಲು ಯತ್ನಿಸಿದಾಗ ಅವಳು ಪ್ರತಿರೋಧಿಸಿ ಬೊಬ್ಬೆ ಹೊಡೆದಿದ್ದಾಳೆ. ಹಿಂದಿನಿಂದ ಒಂದು ದ್ವಿಚಕ್ರ ವಾಹನವೂ ಬಂದಿದೆ. ಇದರಿಂದ ಬೆದರಿದ ಅಪಹರಣಕಾರರು ತಮ್ಮಲ್ಲಿದ್ದ ಚಾಕುವಿನಿಂದ ಅವಳ ಎಡ ಕೈಗೆ ನಾಲ್ಕು ಬಾರಿ ಇರಿದಿದ್ದಾರೆ. ಅಪಹರಣಕಾರರು ಬೆದರಿ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ.

ಇದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ವಿವರಣೆಯ ವಿದ್ಯಾರ್ಥಿನಿಯ ಹೇಳಿಕೆ. ಈ ಬಗ್ಗೆ ಬಾಲಕಿಯು ತನ್ನ ಪೋಷಕರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಬೆಳ್ತಂಗಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತರು ಅಪಹರಿಸಲು ಯತ್ನಿಸಿದ ಆತಂಕಕಾರಿ ಘಟನೆ ಸೋಮವಾರ ಬೆಳಿಗ್ಗೆ ತಾಲೂಕಿನ ಸುದೇಮುಗೇರು ಎಂಬಲ್ಲಿ ನಡೆದಿದ್ದು, ವಿದ್ಯಾರ್ಥಿನಿಯ ಸಮಯಪ್ರಜ್ಞೆ ಹಾಗೂ ಪ್ರತಿರೋಧದಿಂದಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ ಎಂಬ ಸುದ್ದಿಯಿಂದ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಬೆನ್ನಲ್ಲೇ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿದ್ದಾರೆ. ಘಟನೆಯ ಬಗ್ಗೆ ಸರಕಾರ ಮತ್ತು ಗೃಹ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು ಆಯ್ತು. ಮದ್ಯಾಹ್ನ ನಂತರ ಘಟನೆಯ ಸತ್ಯಾಂಶ ಒಂದೊಂದಾಗಿ ಹೊರಬರುತ್ತಲೇ ಆತಂಕದ ವಾತಾವರಣ ಕಡಿಮೆಯಾಗುತ್ತಾ ಬಂದಿದೆ. ಈವರೆಗೆ ಅಪಹರಣಕಾರರ ಪತ್ತೆಯಾಗಿಲ್ಲ, ಮಾರುತಿ ಒಮ್ನಿ ಯಾವ ಸಿಸಿ ಕ್ಯಾಮಾರದಲ್ಲೂ ಕಂಡುಬರಲೇ ಇಲ್ಲ. ಅಂದರೆ ವಿದ್ಯಾರ್ಥಿನಿಯ ಸುತ್ತಲೇ ಅಪಹರಣದ ಕಥೆ ಕಂಡುಬರುತ್ತಿದೆ.

ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಬೆನ್ನಲ್ಲೇ ಜನತೆಗೆ ಸತ್ಯಾಂಶ ತಿಳಿಸಿ ಆತಂಕ ದೂರ ಮಾಡುವ ಉದ್ದೇಶಕ್ಕಾಗಿ ಮಾಧ್ಯಮ ಪ್ರತಿನಿಧಿಗಳು ಜಿಲ್ಲಾ ಎಸ್ಪಿಯವರ ಅಧಿಕೃತ ಹೇಳಿಕೆಗಾಗಿ ಕಾಯುತ್ತಿದ್ದಾರೆ.

ರಾಜಸ್ಥಾನದ ಘಟನೆ: ರಾಜಸ್ಥಾನದ ಬಿಕನೇರ್‌ನಲ್ಲಿ 10ನೇ ತರಗತಿಯ ಹುಡುಗಿಯೊಬ್ಬಳು ಶಾಲೆಗೆ ಹೋಗಲು ಇಷ್ಟವಿಲ್ಲದೆ ತನ್ನನ್ನು ಅಪಹರಿಸಲಾಗಿದೆ ಎಂದು ಸುಳ್ಳು ಕಥೆ ಸೃಷ್ಟಿಸಿದ್ದಳು. ಪೊಲೀಸರು ತನಿಖೆ ನಡೆಸಿದಾಗ ಆಕೆ ಸುಳ್ಳು ಹೇಳುತ್ತಿರುವುದು ಬಯಲಾಗಿತ್ತು.
ಬೆಂಗಳೂರು ಅಥವಾ ಇತರ ನಗರಗಳಲ್ಲಿ ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಮಕ್ಕಳು ತಮ್ಮ ಕೈ-ಕಾಲುಗಳನ್ನು ತಾವೇ ಕಟ್ಟಿಕೊಂಡು ಅಥವಾ ಬಾಯಿಗೆ ಪಟ್ಟಿ ಅಂಟಿಸಿಕೊಂಡು ಪೋಷಕರನ್ನು ಭಯಪಡಿಸುತ್ತಾರೆ.

ಇಂತಹ ಘಟನೆಗಳು ಬಹುತೇಕ ಪರೀಕ್ಷಾ ಸಮಯ ಹತ್ತಿರಕ್ಕೆ ಬರುವ ಸಂದರ್ಭಗಳಲ್ಲಿಯೇ ನಡೆಯುತ್ತಿದ್ದು, ಪರೀಕ್ಷೆ ಅಥವಾ ಹೋಮ್ ವರ್ಕ್ ಪೂರ್ಣಗೊಳಿಸದಿದ್ದಾಗ ಶಿಕ್ಷಕರಿಗೆ ಹೆದರಿ ಹೀಗೆ ಮಾಡುತ್ತಾರೆ. ಶಾಲೆಯಲ್ಲಿ ಕಿರುಕುಳ (Bullying): ಶಾಲೆಯಲ್ಲಿ ಬೇರೆ ವಿದ್ಯಾರ್ಥಿಗಳು ತೊಂದರೆ ನೀಡುತ್ತಿದ್ದರೆ ಅಲ್ಲಿಗೆ ಹೋಗದಿರಲು ಇಂತಹ ದಾರಿ ಹುಡುಕುತ್ತಾರೆ. ತಮ್ಮ ಮಕ್ಕಳು ಅತೀ ಹೆಚ್ಚು ಅಂಕಗಳನ್ನು ಪಡೆಯಬೇಕೆಂದು ಮಕ್ಕಳ ಮೇಲೆ ಪೋಷಕರು ನಿರಂತರವಾಗಿ ಒತ್ತಡ ಹೇರುತ್ತಿರುವಾಗ ಪೋಷಕರ ಅತಿಯಾದ ನಿರೀಕ್ಷೆಗಳು ಮಕ್ಕಳನ್ನು ಇಂತಹ ಹಂತಕ್ಕೆ ತಳ್ಳಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯ ತನಿಖೆ ನಡೆಯಬೇಕಾಗಿದೆ.

Continue Reading

Trending

Copyright © 2025 Deevatige