Connect with us

Bantawala

ವಿಟ್ಲ ದೇಗುಲ ಪರಿಸರದಲ್ಲಿ ದುರ್ನಾತ; ತಕ್ಷಣ ಸ್ಪಂದಿಸಿದ ವಿಟ್ಲ ಪಟ್ಟಣ ಪಂಚಾಯತ್; ತ್ಯಾಜ್ಯ ವಿಲೇವರಿಯ ಟ್ಯಾಂಕರ್ ಮೂಲಕ ಶೌಚಾಲಯದ ಗುಂಡಿ ಸ್ವಚ್ಛ; ದೀವಟಿಗೆ ನ್ಯೂಸ್ ಮಿಡಿಯಾ ಫಲಶ್ರುತಿ

Published

on

ಶ್ರೀ ಪಂಚಲಿoಗೇಶ್ವರ ದೇವರ ಜಾತ್ರೋತ್ಸವದ ನಡೆಯುತ್ತಿರುವ ಈ ಸಂದರ್ಭದಲ್ಲಿ ಭಕ್ತಜನ ದಟ್ಟಣೆಯಲ್ಲಿ ಸಾರ್ವಜನಿಕ ಉಪಯೋಗದ ಶೌಚಾಲಯವು ತ್ಯಾಜ್ಯದಿಂದ ತುಂಬಿ ಹೊರಬಂದಿದ್ದು ಇಡೀ ಪರಿಸರ ದುರ್ನಾತದಿಂದ ಮೂಗು ಮುಚ್ಚಿ ವ್ಯವಹರಿಸಬೇಕಾದ ಸಂದಿಗ್ಧತೆಯಲ್ಲಿ ಸಾರ್ವಜನಿಕ ದೂರನ್ನು ಆಧರಿಸಿ ದೀವಟಿಗೆ ನ್ಯೂಸ್ ಡಿಜಿಟಲ್ ಮಿಡಿಯಾ ಬಿತ್ತರಿಸಿದ ವಿಡಿಯೋ ವರದಿಗೆ ತಕ್ಷಣ ಸ್ಪಂದಿಸಿದ ವಿಟ್ಲ ಪಟ್ಟಣ ಪಂಚಾಯತ್ ತ್ಯಾಜ್ಯ ವಿಲೇವರಿಯ ಟ್ಯಾಂಕರ್ ಮೂಲಕ ಶೌಚಾಲಯದ ಗುಂಡಿ ಸ್ವಚ್ಛ ಮಾಡಿ ಭಕ್ತರಲ್ಲಿ ನೆಮ್ಮದಿ ಮೂಡಿಸಿದೆ.


ಜ.21ರಂದು ವಿಟ್ಲ ಪಂಚಲಿoಗೇಶ್ವರ ದೇವರ ಮಹಾ ರಥೋತ್ಸವ ನಡೆದು ಜ.22ರಂದು ಸಂಜೆ ದೇವರು ಅವಭೃತ ಸ್ಥಾನಕ್ಕೆ ತೆರಳುವ ದೈವೀ ಸವಾರಿ ಕಾರ್ಯ ನಂತರ ವಿಟ್ಲದ ಪಂಚಶ್ರೀ ಗ್ರೂಫ್ ನಿಂದ ಅದ್ಧೂರಿಯ ಸ್ಟಾರ್ ನೈಟ್ ನಡೆಯಲಿದೆ. ಭಕ್ತರು ದೇಗುಲ ದರ್ಶನಕ್ಕೆ ಸಂತೆ ತಿರುಗಾಟಕ್ಕೆ ಸಾಗರೋಪಾದಿಯಲ್ಲಿ ಬರುತ್ತಲೇ ಇದ್ದಾರೆ. ಈ ಮದ್ಯೆ ಶೌಚಾಲಯದ ದುರ್ವಾಸನೆ ಇಡೀ ದೇಗುಲದ ಪರಿಸರವನ್ನೇ ಪಸರಿಸಿ ಭಕ್ತಾದಿಗಳ ಹಿಡಿಶಾಪವನ್ನು ಮತ್ತು ಗೋಳನ್ನು ಪರಿಹರಿಸುವಂತೆ ಮಿಡಿಯಾದ ಪ್ರಸಾರ ಮಾಡಿದಾಗ ಸಂಬoಧಪಟ್ಟವರು ಎಚ್ಚೆತ್ತು ಕೊಂಡರು.
ಭಕ್ತಾದಿಗಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಇಂದು ನಿನ್ನೆಯ ಅವ್ಯವಸ್ಥೆಯಲ್ಲ. ವಿಟ್ಲ ಅಯ್ಯಪ್ಪ ದೇಗುಲದ ಎದುರಿಗೆ ಅಂದಿನ ಪಂಚಾಯತ್ ಆಡಳಿತ ಕಾಟಾಚಾರಕ್ಕೊಂದು ಶೌಚಾಲಯ ನಿರ್ಮಿಸಿ ಕೊಟ್ಟು ವಿಟ್ಲ ಅಯ್ಯಪ್ಪ ದೇಗುಲ ಮುಂದೆ ಸಾರ್ವಜನಿಕ ಶೌಚಾಲಯದ ತ್ಯಾಜ್ಯದ ವಾಸನೆ ನಿರಂತರವಾಗಿ ಹರಿಯುವಂತೆ ಮಾಡಿರುವುದು ಯಾವ ಅಸ್ತಿಕನಿಗೂ ಸರಿ ಎಣಿಸಲಿಲ್ಲ.
ಪಂಚಾಯತ್ ಜಾತ್ರಾ ಅಂಗಡಿ ಏಲಂನಲ್ಲಿ ತೋರುವ ಮುತುವರ್ಜಿಯನ್ನು ಸಾರ್ವಜನಿಕ ಸೌಕರ್ಯಗಳ ಬಗ್ಗೆ ಯಾಕೆ ತೋರುತ್ತಿಲ್ಲ ಎಂದು ಭಕ್ತರು ಪ್ರಶ್ನೆ ಎತ್ತಲು ಆರಂಭಿಸುತ್ತಿರುವoತೆಯೇ ಅದಾಗಲೇ ಪರಿಸರವಿಡೀ ದುರ್ನಾತದಿಂದ ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಬಂದಿತ್ತು.
ಜನ ಜಾತ್ರೆಯ ಮದ್ಯೆ ಗಬ್ಬೆದ್ದಿರುವ ದುರ್ನಾತಕ್ಕೆ ನಾವು ಹಿಡಿಶಾಪ ಹಾಕುವುದು ಬಿಟ್ಟೆರೆ ಪರಿಣಾಮ ಏನು ಆಗುವುದಿಲ್ಲ! ಆದರೆ ಈ ಅವ್ಯವಸ್ಥೆಯ ಪರಮಾವಧಿಗೆ ವಿಟ್ಲ ಪಟ್ಟಣ ಪಂಚಾಯತ್ ಹೊಣೆಯಲ್ಲವೇ ? ಇದಕ್ಕೆ ವಿಟ್ಲ ಪಟ್ಟಣ ಪಂಚಾಯತ್ ತಕ್ಷಣ ಸ್ಪಂದಿಸಬೇಕಾಗಿದೆ ಶೌಚಾಲಯದ ಹೊಲಸು ಮೆಟ್ಟಿಕೊಂಡೇ ಅಯ್ಯಪ್ಪ ದೇಗುಲ ಪ್ರವೇಶ ಮಾಡಬೇಕೇ ? ಎಂದು ಸಾರ್ವಜನಿಕವಾಗಿ ಸಮಸ್ಯೆಯನ್ನು ಹರಿಯಬಿಟ್ಟಿತ್ತು,
ಶೌಚಾಲಯ ನಿರ್ಮಾಣ ಸಂದರ್ಭ ಕಡಿಮೆ ಸ್ಥಳಾವಕಾಶದ ತ್ಯಾಜ್ಯ ಗುಂಡಿ ನಿರ್ಮಾಣ ಮಾಡಿರುವುದೇ ಅನಾಹುತಕ್ಕೆ ಕಾರಣ ಎಂದು ಪಂಚಾಯತ್‌ಗೆ ತಿಳಿದೇ ಇದ್ದರೂ ತಕ್ಷಣದ ಕ್ರಮವಾಗಿ ತ್ಯಾಜ್ಯ ತೆರವುಗೊಳಿಸಿ ಪರಿಹಾರ ಮಾಡಿದುದಕ್ಕೆ ಅಭಿನಂದನೆಗಳನ್ನು ಭಕ್ತರ ಪರವಾಗಿ ಮೀಡಿಯಾವು ಸಲ್ಲಿಸುತ್ತಿದೆ.
ಮುಂದೆ ಸಮಸ್ಯೆ ಮರುಕಳಿಸದಂತೆ ಸಮರ್ಪಕವಾದ ಶೌಚಾಲಯದ ನಿರ್ಮಾಣವೇ ಶಾಶ್ವತ ಪರಿಹಾರವೆಂಬುವುದನ್ನು ಪಂಚಾಯತ್ ತಿಳಿದುಕೊಂಡು ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.

ದೀವಟಿಗೆ ನ್ಯೂಸ್ ಇಂದು ಬೆಳಿಗ್ಗೆ ಪ್ರಸಾರ ಮಾಡಿದ ವಿಡಿಯೋ ವರದಿ

🔺 ವಿಟ್ಲ ಅಯ್ಯಪ್ಪ ದೇಗುಲ ಮುಂದೆ ಹರಿಯುತ್ತಿದೆ ಸಾರ್ವಜನಿಕ ಶೌಚಾಲಯದ ತ್ಯಾಜ್ಯ..
🔺 ಪರಿಸರವಿಡೀ ದುರ್ನಾತದಿಂದ ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ..
🔺 ಜನ ಜಾತ್ರೆಯ ಮದ್ಯೆ ದುರ್ನಾತಕ್ಕೆ ಜನರ ಹಿಡಿಶಾಪ ಆಕ್ರೋಶಿತರಾದ ಭಕ್ತರು !
🔺 ಅವ್ಯವಸ್ಥೆಯ ಪರಮಾವಧಿಗೆ ವಿಟ್ಲ ಪಟ್ಟಣ ಪಂಚಾಯತ್ ಹೊಣೆಯಲ್ಲವೇ ?
🔺 ವಿಟ್ಲ ಪಟ್ಟಣ ಪಂಚಾಯತ್ ತಕ್ಷಣ ಸ್ಪಂದಿಸಬೇಕಾಗಿದೆ
🔺 ಶೌಚಾಲಯದ ಹೊಲಸು ಮೆಟ್ಟಿಕೊಂಡೇ ಅಯ್ಯಪ್ಪ ದೇಗುಲ ಪ್ರವೇಶ
🔺 ಭಕ್ತರ ಪಾಲಿಗೆ ಸಂಕಟ ತಂದ ಶೌಚಾಲಯದ ಗುಂಡಿ
🔺 ಶೌಚಾಲಯ ನಿರ್ಮಾಣ ಸಂದರ್ಭ ಕಡಿಮೆ ಸ್ಥಳಾವಕಾಶದ ತ್ಯಾಜ್ಯ ಗುಂಡಿ ನಿರ್ಮಾಣ
🔺 ಅನಾಹುತಕ್ಕೆ ಕಡಿಮೆ ಸ್ಥಳಾವಕಾಶದ ತ್ಯಾಜ್ಯ ಗುಂಡಿ ಕಾರಣ

ದೀವಟಿಗೆ ನ್ಯೂಸ್ ಇಂದು ಬೆಳಿಗ್ಗೆ ಪ್ರಸಾರ ಮಾಡಿದ ವಿಡಿಯೋ ವರದಿ

Continue Reading
Advertisement

Bantawala

ವಿಟ್ಲದಲ್ಲಿ ಬಡಕಾರ್ಮಿಕೆ ರಾಜೇಶ್ವರಿಯವರ ಮನೆ ಬೆಂಕಿಗಾಹುತಿ

Published

on

ವಿಟ್ಲ ಸಮೀಪದ ವೀರಕಂಬ ಗ್ರಾಮದ ಗಣೇಶ್ ಕೋಡಿ ನಿವಾಸಿ ಕಾರ್ಮಿಕೆಯಾಗಿರುವ ರಾಜೇಶ್ವರಿ ಎಂಬವರ ಮನೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಹೊತ್ತಿ ಉರಿದ ಘಟನೆಯೊಂದು ಪೆ.10ರಂದು ಸಂಭವಿಸಿದ್ದು, ಬಡ ನಿರ್ಗತಿಕ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.


ಮನೆಯೊಡತಿ ರಾಜೇಶ್ವರಿ ಅವರು ಎಂದಿನಂತೆ ಬೆಳಗ್ಗೆ ಬೀಗ ಹಾಕಿ ಅಡಿಕೆ ಗಾರ್ಬನ್ ಕೆಲಸಕ್ಕೆ ಹೋಗಿದ್ದರೆ ಮಕ್ಕಳಿಬ್ಬರು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಮನೆಯನ್ನು ಭಸ್ಮ ಮಾಡಿದೆ.

ಮನೆಯಿಂದ ವಿಪರೀತ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಜಮಾಯಿಸಿ ಬೆಂಕಿಯನ್ನು ನಂದಿಸುವಷ್ಟರಲ್ಲಿಯೇ ಮನೆಯೊಳಗಿದ್ದ ಮಕ್ಕಳ ಬಟ್ಟೆಬರೆ ಶಾಲಾ ಪುಸ್ತಕಗಳು, ಮನೆಯ ದಾಖಲೆಪತ್ರಗಳು ಸೇರಿದಂತೆ ಮನೆಯೊಳಗಿದ್ದ ವಸ್ತುಗಳು ಕರಟಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಬಡ ಕಾರ್ಮಿಕೆ ಗಾರ್ಬಲ್‌ ಕೆಲಸಕ್ಕೆ ಹೋಗಿ ದುಡಿದು ಜೀವನ ಸಾಗಿಸುತ್ತಿದ್ದು, ಮನೆ ಬೆಂಕಿಗಾಹುತಿಯಾದ ಘಟನೆಯಿಂದ ತೀವ್ರ ಅಸ್ವಸ್ಥರಾಗಿದ್ದು, ಅವರ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

Continue Reading

accident

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ದುರ್ಮರಣ..

Published

on

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ನಿಧನರಾಗಿದ್ದಾರೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗದಲ್ಲಿದ್ದ ನಿಶಿತ್ ಊರಿಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು ತಡರಾತ್ರಿ 2-30ರ ಸುಮಾರಿಗೆ ಚೆನ್ನರಾಯಪಟ್ಟಣ ಹೊರವಲಯದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ನಿಶಿತ್ ನಾಯ್ಕ್ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.


ಪುಣಚ ಗ್ರಾಮದ ಬುಡಲೆ ನಿವಾಸಿ, ಮಾಜಿ ಸೈನಿಕರಾಗಿರುವ ಕುಂಞಣ್ಣ ನಾಯ್ಕ್ ಪುತ್ರ ನಿಧನದ ಸುದ್ದಿ ಗ್ರಾಮಸ್ಥರ ಅತೀವ ದು:ಖಕ್ಕೆ ಕಾರಣವಾಗಿದೆ. ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಓರ್ವ ಸಹೋದರಿ ನಿಶಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೀಗ ಹಾಸನದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಪ್ರಾರ್ಥಿವ ಶರೀರ ಪುಣಚ ಗ್ರಾಮ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Continue Reading

Bantawala

ಕುಟುಂಬದ ಯಜಮಾನರಾಗಿ ಪೂಂಜರಬೆಟ್ಟು ಕೇಶವ ಭಂಡಾರಿ; ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನಾ ಸಭೆ

Published

on

ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಕುದ್ರಿಯ ತರವಾಡಿನ ನೂತನ ಯಜಮಾನರಾಗಿ ಹಿರಿಯ ದೈವ ಚಾಕಿರಿಯವರಾದ ಪೂಂಜರಬೆಟ್ಟು ಕೇಶವ ಭಂಡಾರಿ ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳು ಮತ್ತು ಕುಟುಂಬಿಕರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನೆಯ ಸಭೆ ನಡೆಯಿತು.

ಹಿಂದಿನ ಟ್ರಸ್ಟಿಗಳ ಮರಣ, ರಾಜೀನಾಮೆ, ಹಾಗೂ ವಜಾಗೊಂಡ ಸದಸ್ಯರ ಸ್ಥಾನಕ್ಕೆ ನೂತನ ಟ್ರಸ್ಟಿಗಳನ್ನು ಆಯ್ಕೆ ಮಾಡಲಾಯಿತು. ಕುದ್ರಿಯ ಗುತ್ತು ಟ್ರಸ್ಟಿನ ನೂತನ ಗೌರವಾಧ್ಯಕ್ಷರಾಗಿ ವಿಠಲ ಮೋನಪ್ಪ ಶೆಟ್ಟಿ ನಾಂದೇಡ್, ಅಧ್ಯಕ್ಷರಾಗಿ ಚಂದ್ರಹಾಸ ಎಂ ಶೆಟ್ಟಿ ಅಳಕೆಮಜಲು, ಉಪಾಧ್ಯಕ್ಷರಾಗಿ ರೋಹಿಣಿ ರೈ ನೇರಳಕಟ್ಟೆ, ಹಾಗೂ ಚಂದ್ರಹಾಸ ರೈ ಮುಲ್ಕಾಜೆ ಮಾ ಡ, ಕಾರ್ಯದರ್ಶಿಯಾಗಿ ಗಣೇಶ್‌ ರೈ, ಕೋಶಾಧಿಕಾರಿಯಾಗಿ ಧನಂಜಯ ಶೆಟ್ಟಿ ಮುತ್ತೂರು, ಇವರನ್ನು ಟ್ರಸ್ಟಿಗಳ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರನ್ನು ಕುಟುಂಬಿಕರ ಮತ್ತು ಟ್ರಸ್ಟಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

Continue Reading

Trending

Copyright © 2025 Deevatige