Connect with us

government

ನಿವೇಶನ ರಹಿತರಿಗೆ ಯಾವುದೇ ಗ್ರಾಮದಲ್ಲಿಯೂ ಅರ್ಜಿ ಸಲ್ಲಿಸಬಹುದು; ರಾಜೀವ ಗಾಂಧಿ ವಸತಿ ನಿಗಮದಿಂದ ಸುತ್ತೋಲೆ; ಪುತ್ತೂರು ಶಾಸಕ ಅಶೋಕ್ ರೈ ನಿವೇಶನ ಹಂಚಿಕೆ ಕಾರ್ಯಕ್ಕೆ ಸರಕಾರದಿಂದ ಪೂರ್ಣ ಬೆಂಬಲ

Published

on

ಪುತ್ತೂರು: ಮನೆ ನಿವೇಶನ ಇಲ್ಲದ ಅರ್ಹ ಬಡ ಫಲಾನುಭವಿಗಳು ಇನ್ನು ಮುಂದಕ್ಕೆ ಯಾವುದೇ ಗ್ರಾಮದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಗಳು ನಿವೇಶನಕ್ಕೆ ಆಯಾ ಗ್ರಾಮದಲ್ಲಿ ಅರ್ಜಿ ಸಲ್ಲಿಸಿದ್ದು ಅಲ್ಲಿ ನಿವೇಶನದ ಕೊರತೆಯಿದ್ದಲ್ಲಿ ಪಕ್ಕದ ಗ್ರಾಮ ಅಥವಾ ನಿವೇಶನ ಪಡೆದುಕೊಳ್ಳಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಿ ಎಂದು ಕರ್ನಾಟಕ ಸರಕಾರ ರಾಜೀವ ಗಾಂಧಿ ವಸತಿ ನಿಗಮದಿಂದ ಸುತ್ತೋಲೆ ಹೊರಡಿಸಲಾಗಿದ್ದು ಇದರಿಂದ ಪುತ್ತೂರು ಶಾಸಕ ಅಶೋಕ್ ರೈ ಅವರ ಬಡವರಿ ನಿವೇಶನ ಹಂಚಿಕೆ ಕನಸಿಗೆ ಸರಕಾರದಿಂದ ಪೂರ್ಣ ಬೆಂಬಲ ಸಿಕ್ಕಂತಾಗಿದೆ.

ಅಶೋಕ್ ರೈ ಶಾಸಕರಾದ ಬಳಿಕ ನಿವೇಶನ ರಹಿತ ಅರ್ಹ ಬಡ ಫಲಾನುಭವಿಗಳಿಗೆ ಸೈಟ್ ಹಂಚಿಕೆ ಮಾಡಲು ಈಗಾಗಲೇ 18 ಗ್ರಾಮಗಳಲ್ಲಿ380 ಕ್ಕೂ ಮಿಕ್ಕಿ ಎಕ್ರೆ ಜಾಗವನ್ನು ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕಾಯ್ದಿರಿಸಲಾಗಿದೆ. ಪುತ್ತೂರು ನಗರಸಭಾ ವ್ಯಾಪ್ತಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ನಿವೇಶನಕ್ಕೆ ಸರಕಾರಿ ಜಾಗ ದೊರೆತಿಲ್ಲ. ನಿವೇಶನ ರಹಿತ ಗ್ರಾಮದ ಫಲಾನುಭವಿಗಳಿಗೆ ಬೇರೆ ಗ್ರಾಮಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ. ಆಯಾ ಗ್ರಾಮದವರು ಆಯಾ ಗ್ರಾಮದಲ್ಲಿ ಮಾತ್ರ ನಿವೇಶನಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ತಕರಾರು ಇತ್ತು. ಈ ಬಗ್ಗೆ ಮಂಗಳವಾರದಂದು ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮ ಅಧಿಕಾರಿಯನ್ನು ಭೇಟಿಯದ ಶಾಸಕರು ನಿವೇಶನ ರಹಿತರಿಗೆ ಯಾವುದೇ ಗ್ರಾಮದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದರು. ಶಾಸಕರ ಕೋರಿಕೆ ಯನ್ನು ಮನ್ನಿಸಿದ ಇಲಾಖೆ ಬುಧವಾರ ಸುತ್ತೋಲೆಯನ್ನು ಹೊರಡಿಸಿದ್ದು ಯಾವುದೇ ಫಲಾನುಭವಿಗಳು ನಿವೇಶನ ಹೊಂದಿರುವ ಯಾವುದೇ ಗ್ರಾಮದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಜಿಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಸುತ್ತೋಲೆಯನ್ನು ಹೊರಡಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವಂತೆ ಆದೇಶವನ್ನು ಹೊರಡಿಸಿದೆ.

ಸುತ್ತೋಲೆಯಲ್ಲಿ ಏನಿದೆ:

ಪುತ್ತೂರು ತಾಲ್ಲೂಕಿನ ಅರ್ಹ ನಿವೇಶನರಹಿತರಿಗೆ ನಿವೇಶನ ಹಂಚಿಕೆಗೆ ಕೆಲವು ಗ್ರಾಮ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಮೀನಿನ ಲಭ್ಯತೆ ಇಲ್ಲದ ಕಾರಣ ಜಮೀನು ಲಭ್ಯವಿರುವ ಬೇರೆ ಗ್ರಾಮ ಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸುವ ಕುರಿತು ನಿರ್ದೇಶನ ನೀಡಲು ಕೋರಿ ಉಲ್ಲೇಖ(1&2)ರಲ್ಲಿ ಕೋರಲಾಗಿದೆ.

ಉಲ್ಲೇಖ(3)ರ ಪತ್ರದಲ್ಲಿ ಕಾರ್ಯನಿರ್ವಾಹಣಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಇವರು ಸರ್ಕಾರದ ಸುತ್ತೋಲೆ ಪ್ರಕಾರ ಫಲಾನುಭವಿ ಸಂಬಂಧಪಟ್ಟ ಗ್ರಾಮದರಾಗಿರಬೇಕು ಎಂಬುದಾಗಿದ್ದು, ಕೆಲವು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಿಂದ ಬೇರೆ ಗ್ರಾಮದವರಿಗೆ ನಿವೇಶನ ನೀಡುವ ಕುರಿತು ಅಕ್ಷೇಪ ವ್ಯಕ್ತಪಡಿಸಿದ್ದು, ಬೇರೆ ಗ್ರಾಮದ ನಿವೇಶನ ರಹಿತ ಫಲಾನುಭವಿಗಳನ್ನು ಲಾಗಿನ್ ನಲ್ಲಿ ನಮೂದಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ.

ಸರ್ಕಾರದ ಮನೆ ಮಾರ್ಗಸೂಚಿಗಳನ್ವಯ ನಿವೇಶನರಹಿತರು ಸಂಬಂಧಪಟ್ಟ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು. ಆದರೆ ಸದರಿ ಪ್ರಕರಣದಲ್ಲಿ ನಿವೇಶನರಹಿತರು ವಾಸವಿರುವ ಗ್ರಾಮ ಪಂಚಾಯತಿ/ಗ್ರಾಮ/ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯನ್ನು ಹೊರುತಪಡಿಸಿ, ಬೇರೆ ಸ್ಥಳಗಳಲ್ಲಿ ನಿವೇಶನ ಹಂಚಿಕೆಗೆ ಅವಕಾಶ ಕಲ್ಪಿಸುವಂತೆ ಕೋರಿದ್ದು, ಈ ಕೆಳಕಂಡಂತೆ ಕ್ರಮವಹಿಸಲು ಕೋರಿದೆ.

1. ಮೂಲ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ನಿವೇಶನರಹಿತರಿಗೆ ಬೇರೆ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಹಂಚಿಕೆಗೆ ಕ್ರಮವಹಿಸುವ ಮೊದಲು ನಿವೇಶನರಹಿತರು ವಾಸವಿದ್ದ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಂಚಿಕೆಗೆ ಜಮೀನು/ನಿವೇಶನ ಲಭ್ಯವಿಲ್ಲದಿರುವ ಖಚಿತಪಡಿಸಿಕೊಳ್ಳುವುದು.

2.ಮೂಲ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ನಿವೇಶನರಹಿತರು ಬೇರೆ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿವೇಶನ ಪಡೆಯಲು ಹಾಗೂ ಆ ಸ್ಥಳದಲ್ಲಿ ವಾಸಿಸಲು ಫಲಾನುಭವಿಗಳು ಒಪ್ಪಿಗೆ ನೀಡಿರುವ ಲಿಖಿತ ದಾಖಲೆಗಳೊಂದಿಗೆ

ಗ್ರಾಮಸಭೆ/ನಗರ ಆಶ್ರಯ ಸಮಿತಿಯಲ್ಲಿ ಚರ್ಚಿಸಿ, ಜಮೀನು/ನಿವೇಶನ ಲಭ್ಯವಿರುವ ಸ್ಥಳದಲ್ಲಿ ನಿವೇಶನ ಹಂಚಿಕೆಗೆ ತೀರ್ಮಾನಿಸಿ ಠರಾವು ಹೊರಡಿಸುವುದು.

3.ಜಮೀನು ಲಭ್ಯವಿರುವ ಯಾವುದೇ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಅರ್ಹ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡಿ ಹೆಚ್ಚುವರಿಯಾಗಿ ಉಳಿದಿರುವ ನಿವೇಶನಗಳಲ್ಲಿಮಾತ್ರ ಸದರಿ ನಿವೇಶನರಹಿತರನ್ನು ಪರಿಗಣಿಸಬಹುದಾಗಿದೆ.

Continue Reading
Advertisement

government

ಸುಳ್ಯ ಕೇಂದ್ರಿತ ‘ಆನೆ ಕಾರ್ಯಪಡೆ’ಗೆ ಚಾಲನೆ: ಕಾಡಾನೆ ಹಾವಳಿಗೆ ಅಂಕುಶ; ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ರೈತರಿಗೆ ಸಿಹಿ ಸುದ್ದಿ!

Published

on

ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿ ಹಾಗೂ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಭರ್ಜರಿ ಕ್ರಮ ಕೈಗೊಂಡಿದೆ. ಜಿಲ್ಲೆಯ ಕೃಷಿಕರ (Farmers) ಬಹು ಕಾಲದ ಸಮಸ್ಯೆ ಮತ್ತು ತಲೆನೋವಾಗಿದ್ದ ಕಾಡಾನೆ ಹಾವಳಿ ತಡೆಗಟ್ಟಲು ಸುಳ್ಯ ಕೇಂದ್ರಸ್ಥಾನವಾಗಿಸಿ (Center) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗಕ್ಕೆ 28 ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡ ಆನೆ ಕಾರ್ಯಪಡೆ ರಚಿಸಿ ಸರಕಾರ ಆದೇಶ ಹೊರಡಿಸಿದೆ. ಈ ಕ್ರಮಕ್ಕೆ ಅರಣ್ಯ ಭಾಗದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಮಂಗಳೂರು/ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿ ಹಾಗೂ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಭರ್ಜರಿ ಕ್ರಮ ಕೈಗೊಂಡಿದೆ. ಸುಳ್ಯದಲ್ಲಿ ಕೇಂದ್ರ ಕಚೇರಿಯನ್ನು ಹೊಂದಲಿರುವ ನೂತನ ಆನೆ ಕಾರ್ಯಪಡೆಗೆ ಒಟ್ಟು 28 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ವಿಶೇಷ ತಂಡವು ಅತ್ಯಾಧುನಿಕ ಉಪಕರಣಗಳು ಮತ್ತು ವಾಹನಗಳೊಂದಿಗೆ ಸಜ್ಜಿತವಾಗಲಿದ್ದು, ಆನೆಗಳ ಚಲನವಲನದ ಮೇಲೆ ನಿರಂತರ ನಿಗಾ ಇರಿಸಲಿದೆ. ತಂಡದಲ್ಲಿ 4 ಉಪ ವಲಯ ಅರಣ್ಯಾಧಿಕಾರಿಗಳು (DRFO) 8 ಅರಣ್ಯ ರಕ್ಷಕರು (Forest Guards) 16 ಮಂದಿ ಹೊರಗುತ್ತಿಗೆ ಸಿಬ್ಬಂದಿ (DRM) (ಆನೆ ಓಡಿಸುವ ನೈಪುಣ್ಯತೆ ಹೊಂದಿರುವವರು) ಇರುತ್ತಾರೆ.

ತಂಡದ ಕಾರ್ಯಚಟುವಟಿಕೆಗಳು:
ಆನೆಗಳು ನಾಡಿಗೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ಅವುಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯವನ್ನು ತ್ವರಿತವಾಗಿ ಮಾಡುವುದು, ಕಾಡಂಚಿನ ಗ್ರಾಮಗಳಲ್ಲಿ 24×7 ಗಸ್ತು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವುದು.ಸ್ಥಳೀಯ ರೈತರು ಮತ್ತು ಅರಣ್ಯ ಇಲಾಖೆಯ ನಡುವೆ ಕೊಂಡಿಯಾಗಿ ಕೆಲಸ ಮಾಡುವುದು. ಆನೆಗಳಿಗೆ ಅಳವಡಿಸಲಾದ ರೇಡಿಯೋ ಕಾಲರ್ ಸಿಗ್ನಲ್‌ಗಳನ್ನು ಗಮನಿಸಿ ಮುನ್ನೆಚ್ಚರಿಕೆ ನೀಡುವುದು. ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಜನವಸತಿ ಪ್ರದೇಶ, ಕೃಷಿ ಪ್ರದೇಶ ಹಾಗೂ ಕಾಫಿ ಎಸ್ಟೇಟ್‌ ಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸುವುದು ಹಾಗೂ ಹಿಮ್ಮೆಟ್ಟಿಸುವುದು, ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದು ಇತ್ಯಾದಿ ಕೆಲಸಗಳನ್ನು ಕಾರ್ಯಪಡೆ ಮಾಡಲಿದೆ.

ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಈ ಹಿಂದೆ ಅವುಗಳನ್ನು ಹಿಮ್ಮೆಟ್ಟಿಸಲು ಮಡಿಕೇರಿ ವಿಭಾಗದಿಂದ ಆನೆ ಕಾರ್ಯಪಡೆಯನ್ನು ಕರೆಸಬೇಕಾಗಿತ್ತು. ಇದರಿಂದ ತುಂಬಾ ವಿಳಂಬ ಆಗುತ್ತಿರುವ ಮಂಗಳೂರು ವಿಭಾಗಕ್ಕೆ ಹೊಸದಾಗಿ ಆನೆ ಕಾರ್ಯಪಡೆಯನ್ನು ರಚಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಅರಣ್ಯ ಮತ್ತು ಪರಿಸರ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆನೆ ಕಾರ್ಯಪಡೆ ರಚಿಸಿ ಆದೇಶಿಸಿದ್ದಾರೆ. ಕೇಂದ್ರಸ್ಥಾನದಲ್ಲಿ ಕಂಟ್ರೋಲ್ ರೂಂ (ನಿಯಂತ್ರಣ ಕಾರ್ಯಕೊಠಡಿ) ಕಾರ್ಯನಿರ್ವಹಿಸಲಿದೆ. ಇಲಾಖೆಯ ಈ ಕ್ರಮಕ್ಕೆ ಜಿಲ್ಲೆಯ ಅರಣ್ಯ ಭಾಗದಲ್ಲಿರುವ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಪಡೆಯಿಂದಲಾದರೂ ತಮ್ಮ ಸಮಸ್ಯೆಗೆ ಮುಕ್ತಿ ದೊರಕಲಿದೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸುಳ್ಯ ಮತ್ತು ಕಡಬ ಭಾಗದಲ್ಲಿ ಆನೆ ದಾಳಿಯಿಂದಾಗಿ ಪ್ರಾಣಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಕಾರ್ಯಪಡೆ ಬೇಕೆಂಬ ಸಾರ್ವಜನಿಕರ ಒತ್ತಾಯಕ್ಕೆ ಸರ್ಕಾರ ಈಗ ಸ್ಪಂದಿಸಿದೆ.

Continue Reading

Bantawala

ಬಾಕ್ಸೆಟ್ ಸಾಗಾಟದ ಲಾರಿಗಳಿಗೆ ಪರವಾನಿಗೆ ಇದೆಯಲ್ಲ ಓಕೆ ! ಮತ್ತೆ ಜನರಿಗೆ ಆಕ್ರೋಶ ಯಾಕೆ ?

Published

on

ಕರಾವಳಿ ಪ್ರದೇಶದಿಂದ ಹೊರ ರಾಜ್ಯಗಳಿಗೆ ಕಳೆದ ಹಲವು ಸಮಯಗಳಿಂದ ಬಾಕ್ಸೆಟ್ ಸಾಗಾಟದ ಲಾರಿಗಳ ಘರ್ಜನೆ ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದು ಹಲವು ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅತಿಯಾದ ಭಾರ ಹೊತ್ತ ಬಾಕ್ಸೈಟ್ ಲಾರಿಗಳಿಂದಾಗಿ ಕರಾವಳಿಯ ಪ್ರಮುಖ ಹೆದ್ದಾರಿಗಳು ಮತ್ತು ಒಳರಸ್ತೆಗಳು ಗುಂಡಿಬಿದ್ದು ಹಾಳಾಗಿ ಹೋಗಿದೆ. ಲಾರಿಗಳ ಅತಿ ವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಸಣ್ಣ ವಾಹನ ಸವಾರರು ಹಾಗೂ ಪಾದಚಾರಿಗಳು ಜೀವಭಯದಲ್ಲಿ ಸಂಚರಿಸುವಂತಾಗಿದೆ. ಸಾಗಾಟದ ವೇಳೆ ಲಾರಿಗಳಿಂದ ಹಾರುವ ಬಾಕ್ಸೈಟ್ ಪುಡಿ ರಸ್ತೆಯ ಪಕ್ಕದ ಮನೆಗಳು, ಅಂಗಡಿಗಳು ಮತ್ತು ಕೃಷಿ ಭೂಮಿಯ ಮೇಲೆ ಕುಳಿತು ಆರೋಗ್ಯ ಸಮಸ್ಯೆಗಳನ್ನು (ಶ್ವಾಸಕೋಶದ ತೊಂದರೆ) ಉಂಟುಮಾಡುವ ಭಯವಿದೆ. ರಾತ್ರಿ ಎನ್ನದೆ ಸಂಚರಿಸುವ ಈ ಬೃಹತ್ ಲಾರಿಗಳ ಶಬ್ದದಿಂದಾಗಿ ಸ್ಥಳೀಯ ನಿವಾಸಿಗಳ ನೆಮ್ಮದಿಗೆ ಭಂಗ ಬಂದಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಅದಿರನ್ನು ಸಾಗಿಸುವುದು ಇಲ್ಲಿ ಸಾಮಾನ್ಯವಾಗಿದ್ದು, ಹಲವು ಬಾರಿ ಈ ಸಾಗಾಟವು ಅಕ್ರಮ ಗಣಿಗಾರಿಕೆಯ ಭಾಗವಾಗಿರುತ್ತದೆಯೇ ಅಥವಾ ಸರಿಯಾದ ಪರವಾನಗಿ ಹೊಂದಿದೆಯೇ ಎಂಬ ಸಂಶಯ ಸ್ಥಳೀಯರಲ್ಲಿ ಬಂದಾಗ ಬಾಕ್ಸೆಟ್ ಸಾಗಾಟದ ಲಾರಿಗಳ ಘರ್ಜನೆಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದೂ ಆಯಿತು. ಆವರದೇ ಆದ ಸಾಮ್ರಾಜ್ಯದಂತೆ ಅಪಘಾತಗಳನ್ನೂ ನಡೆಸಿದಾಗಲೂ ಬಾಕ್ಸೆಟ್ ಸಾಗಾಟದ ಲಾರಿಗಳದೇ ಮೇಲುಗೈ ಆಯಿತು. ನಂತರ ನಡೆದಿರುವುದು ಪ್ರತಿಭಟನೆ …

ರಸ್ತೆಯಲ್ಲಿ ಓಡಾಡುವ ನಾಗರಿಕರ ಮತ್ತು ವಾಹನ ಸವಾರರ ಪಾಲಿಗೆ ಅಕ್ರಮ ಹಾಗೂ ಸಾರಿಗೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿರುವ ಬಾಕ್ಸೈಟ್ ಸಾಗಾಟದ ಯಮದೂತ ಲಾರಿಗಳು ಸಂಕಷ್ಟ ತಂದೊಡ್ಡಿದೆಯೆಂದು ಈ ಬಗ್ಗೆ ಎಚ್ಚೆತ್ತುಕೊಂಡು ಬಾಕ್ಸೈಟ್ ಲಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲವು ಬಾರಿ ಮನವಿ ನೀಡಿದ್ದರೂ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾರಣ ಕನ್ಯಾನ ನೆಲ್ಲಿಕಟ್ಟೆ ಜಂಕ್ಷನಲ್ಲಿ ಪ್ರತಿಭಟನೆಯೂ ನಡೆಯಿತು. ಎಲ್ಲದಕ್ಕೂ ಉತ್ತರ ಒಂದೇ ಆಗಿತ್ತು. ಅದು ಪರವಾನಿಗೆ ಇದ್ದು ಆಗುತ್ತಿರುವ ಸಾಗಾಟ..ಎಷ್ಟೋ ವರ್ಷಗಳ ಪರವಾನಿಗೆಯಡಿಯಲ್ಲಿ ಮಂತ್ರಿಗಳ ಕೃಪಾ ಕಟಾಕ್ಷದಲ್ಲಿಯೇ ನಡೆಯುತ್ತಿರುವ ಬಾಕ್ಸೆಟ್ ಸಾಗಾಟ. ಹೌದು ! ಈಗ ಹೋರಾಟಗಾರರು, ಮಾದ್ಯಮದವರು, ನಾಗರೀಕರು ಇದರ ಎದುರು ಹೋರಾಟ ಮಾಡುವುದು ಕಷ್ಟ ಸಾಧ್ಯ ಎಂದು ಮೌನವಾಗಿದ್ದಾರೆ.
ಈಗಲೂ ಬಾಕ್ಸೆಟ್ ಸಾಗಾಟದ ಲಾರಿಗಳ ಘರ್ಜನೆ ಕೇಳಿಸುತ್ತಲೇ ಇದೆ. 6ಅಲ್ಲ 8ಅಲ್ಲ 14 ಅಲ್ಲ 18ರಿಂದಲೂ ಹೆಚ್ಚು ಚಕ್ರದ ಲಾರಿಗಳು…ಅದು ಸಾಗುವ ವೇಳೆಗೆ ರಾಜ ಮರ್ಯಾದೆಯನ್ನು ನೀಡಲೇ ಬೇಕು ಇಲ್ಲವಾದರೆ ಅನುಭವಿಸಬೇಕು ಎಂತಾಗಿದೆ ಸ್ಥಿತಿ.


ಸಾಗಾಟವನ್ನು ನಿಲ್ಲಿಸಿ ಪ್ರಶ್ನಿಸಿ ಆಯ್ತು, ಸಾರಿಗೆ ಇಲಾಖೆಗೆ ತಿಳಿಸಿ ಆಯ್ತು, ಜನ ಸೇರಿ ಪ್ರತಿಭಟನೆ ಮಾಡಿ ಆಯ್ತು, ಈಗ ಜನ ಕೇಳುವುದು ಮಾದ್ಯಮವೇಕೆ ಮೌನವಾಗಿದೆ ? ಎಂದು. ಅದು ಸಹಜವೇ ಕೇಳಲೇ ಬೇಕು, ಜನರ ಸಮಸ್ಯೆಗಳಿಗೆ ಕಟ್ಟ ಕಡೆಗೆ ಪರಿಹಾರ ಸಿಗುವುದು ಮಾದ್ಯಮಗಳಿಂದ ಎಂಬುವುದು ಜನರಿಗೂ ಗೊತ್ತು.


ವಿಟ್ಲದ ಮಾದ್ಯಮ ವರದಿಗಾರ ರಾಮ್‌ದಾಸ್‌ ವಿಟ್ಲ ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿಗಳಲ್ಲಿ ಈ ಬಗ್ಗೆ ಕೇಳಿಯೇ ಬಿಟ್ಟಿದ್ದಾರೆ. ರಾತ್ರಿ ಹೊತ್ತು ಸಾಗಾಟವಾಗುತ್ತಿರುವ ಬಾಕ್ಸೈಟ್‌ ಲಾರಿಗಳ ವಿಡಿಯೋವನ್ನು ಕಳುಹಿಸಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಮರ್ಪಕವಾದ ಉತ್ತರವನ್ನು ಮಾಹಿತಿ ರೂಪದಲ್ಲಿ ಎಸ್. ಪಿ. ಯವರು ನೀಡಿದ್ದಾರೆ. ಅದು ಈ ರೀತಿ ಇದೆ.


ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಪಾದೇಕಲ್ಲು ಎಂಬಲ್ಲಿ ದಾಖಲಾತಿ ಮತ್ತು ಪರವಾನಿಗೆಯಲ್ಲಿ ( MDP No.252617431T003662), (Lease No.DSKN5413) ಬಾಕ್ಸೆಟ್ ಮಣ್ಣು ಲಾರಿಗಳ ಮುಖಾಂತರ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದು. ಸದ್ರಿ ಬಾಕ್ಸೆಟ್ ಸಾಗಾಟ ಮಾಡುತ್ತಿದ್ದ ಬಗ್ಗೆ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಿ ಬರುವಾಗ ತೊಂದರೆಯಾಗುತ್ತಿರುವ ಬಗ್ಗೆ ದಿನಾಂಕ 30-12-2026 ರಂದು ಸ್ಥಳೀಯರು ಪ್ರತಿಭಟನೆ ಮಾಡಿದ್ದು. ಅದರಂತೆ ಶಾಲಾ ಮಕ್ಕಳು ಬೆಳಗ್ಗೆ ಶಾಲೆಗೆ ಹೋಗುವ ಸಮಯ ಮತ್ತು ಶಾಲೆ ಬಿಡುವ ಸಮಯ ಲಾರಿಗಳನ್ನು ಸಂಚಾರ ಮಾಡದಂತೆ ಬಾಕ್ಸೇಟ್ ಸರಕು ಸಾಗಾಣಿಕೆ ಮಾಡುವವರಿಗೆ ತಿಳುವಳಿಕೆ ನೀಡಲಾಗಿದೆ ಎಂಬುವುದಾಗಿದೆ.

ಬಾಕ್ಸೈಟ್‌ ಸಾಗಾಟದ ಸಮಸ್ಯೆಗಳ ವಿರುದ್ಧ ಡಿಜಿಟಲ್‌ ಮಾದ್ಯಮದಲ್ಲಿ ಪ್ರಸಾರವಾದ ವಿಡಿಯೋ ಸ್ಟೇಟಸ್


ಮಾನ್ಯ ಪೊಲೀಸ್‌ ವರಿಷ್ಠಾಧಿಕಾರಿಗಳು ಹೇಳಿರುವಂತೆಯೇ ಈಗ ರಾತ್ರಿ ವೇಳೆಯಲ್ಲಿಯೇ ಸಾಗಾಟ ನಡೆಯುತ್ತಿದೆ. ಆದರೆ ಒಳ ರಸ್ತೆಯಲ್ಲಿ ಮಿತಿಮೀರಿ ಸಾಗಾಟ ನಡೆಯುತ್ತಿರುವುದು, ವೇಗದಿಂದ ದೂಳು ಹಾರಿ ರಸ್ತೆ ದೂಳುಮಯವಾಗಿರುವುದು, ರಸ್ತೆಯುದ್ದಕ್ಕೂ ಮಣ್ಣು ಚೆಲ್ಲುತ್ತಿರುವುದು, ವೇಗ ನಿಯಂತ್ರಣ ಇಲ್ಲದಿರುವುದು ಈಗಲೂ ಕಂಡುಬರುತ್ತಿದೆ. ಆದುದರಿಂದ ಜನರ ಪ್ರಬಲ ಒತ್ತಾಯದಂತೆ ಸ್ಥಳೀಯ ಆಡಳಿತ ಮತ್ತು ಸಾರಿಗೆ ಇಲಾಖೆ (RTO) ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಲಾರಿಗಳಿಗೆ ವೇಗ ನಿಯಂತ್ರಕ ಅಳವಡಿಸಬೇಕು ಮತ್ತು ಸಾಗಾಟದ ವೇಳೆ ಅದಿರು ಚೆಲ್ಲದಂತೆ ಟಾರ್ಪಾಲಿನ್ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂಬುದಾಗಿದೆ. ಸಂಬಂದ ಪಟ್ಟವರು ಕ್ರಮ ಕೈಗೊಳ್ಳುವಿರಾಗಿ ಜನ ನಂಬಿದ್ದಾರೆ.

Continue Reading

cyber crime

ಫೇಕ್ ನ್ಯೂಸ್ ತಡೆಗೆ ಎಐ ಸಾಫ್ಟ್ವೇರ್; ಕರ್ನಾಟಕ ಸಚಿವ ಸಂಪುಟ ಅನುಮೋದನೆ

Published

on

ಬೆಂಗಳೂರು: ನಕಲಿ ಸುದ್ದಿ ಹಾಗೂ ಸಮಾಜ ವಿರೋಧಿ ಡಿಜಿಟಲ್ ಕಂಟೆಟ್‌ಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಾಫ್ಟ್ವೇರ್ ಜಾರಿಗೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಸುಮಾರು 67.26 ಕೋಟಿ ರೂ ವೆಚ್ಚದಲ್ಲಿ `ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸೊಲ್ಯೂಷನ್ಸ್’ ಯೋಜನೆ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಜಾರಿಯಾಗಲಿದೆ.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆ, 2025 ಬಾಕಿ ಉಳಿದಿರುವುದರಿಂದ, ದ್ವೇಷ ಭಾಷಣ, ನಕಲಿ ಸುದ್ದಿ ಮತ್ತು ಸಂಘಟಿತ ಆನ್‌ಲೈನ್ ತಪ್ಪು ಮಾಹಿತಿಯ ಹೆಚ್ಚಳವನ್ನು ನಿಭಾಯಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ವೇದಿಕೆಗಳಲ್ಲಿ ವಿಷಯವನ್ನು ಟ್ರ್ಯಾಕ್ ಮಾಡಲು AI-ಚಾಲಿತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸಂಪುಟ ಅನುಮೋದಿಸಿದೆ.


ಮಾನ್ಯತೆ ಪಡೆದ ಮಾಧ್ಯಮಗಳನ್ನು ಹೊರತುಪಡಿಸಿ, ಗೃಹ ಇಲಾಖೆಯು ವಿಶಾಲವಾದ ಡಿಜಿಟಲ್ ಸುದ್ದಿ ಪರಿಸರ ವ್ಯವಸ್ಥೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು AI-ಚಾಲಿತ ಮೇಲ್ವಿಚಾರಣಾ ಚೌಕಟ್ಟಿನ ಅಡಿಯಲ್ಲಿ ತರುತ್ತದೆ.
ಫೆಬ್ರವರಿ 5 ರಂದು, ಸಚಿವ ಸಂಪುಟವು 67.26 ಕೋಟಿ ರೂ.ಗಳ ಸಾಮಾಜಿಕ ಮಾಧ್ಯಮ ವಿಶ್ಲೇಷಣಾ ಪರಿಹಾರದ ನಿಯೋಜನೆಯನ್ನು ಅನುಮೋದಿಸಿತು, ಇದು ದುರುದ್ದೇಶಪೂರಿತ ವಿಷಯವನ್ನು ಪತ್ತೆಹಚ್ಚಲು ಮತ್ತು ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. AI ಪರಿಕರಗಳು ರಾಜ್ಯವು ನೈಜ ಸಮಯದಲ್ಲಿ ಡಿಜಿಟಲ್ ಬೆದರಿಕೆಗಳನ್ನು ಗುರುತಿಸಲು ಮತ್ತು ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ. “ಸಾಫ್ಟ್‌ವೇರ್ ಸತ್ಯ-ಪರಿಶೀಲನೆ ಮಾಡುವುದಲ್ಲದೆ, ಅಪರಾಧ ಉದ್ದೇಶದೊಂದಿಗೆ ಮಾಹಿತಿಯನ್ನು ಹೇಗೆ ಕುಶಲತೆಯಿಂದ ಮತ್ತು ಪ್ರಸಾರ ಮಾಡಲಾಗುತ್ತದೆ ಎಂಬುದನ್ನು ವಿಶ್ಲೇಷಿಸುತ್ತದೆ, ವಿಶೇಷವಾಗಿ ಮಕ್ಕಳ ಕಳ್ಳಸಾಗಣೆ, ಭಯೋತ್ಪಾದಕ ದಾಳಿಗಳು, ದ್ವೇಷ ಭಾಷಣ ಮತ್ತು ನಕಲಿ ಸುದ್ದಿಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ಅಂತಿಮವಾಗಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಎಚ್ಚರಿಸುತ್ತದೆ” ಎಂದು ಅವರು ಹೇಳಿದ್ದು, ಭವಿಷ್ಯದಲ್ಲಿ ಮೀಸಲಾದ ಶಾಸನದ ಸಾಧ್ಯತೆಯೊಂದಿಗೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಕಲಿ ಸುದ್ದಿ, ತಪ್ಪು ಮಾಹಿತಿ ಮತ್ತು ಉದಯೋನ್ಮುಖ ಡಿಜಿಟಲ್ ಬೆದರಿಕೆಗಳನ್ನು ನಿಭಾಯಿಸುವ ಪ್ರಯತ್ನದಲ್ಲಿ, ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ಶೀಘ್ರದಲ್ಲೇ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವನ್ನು ನಿಯೋಜಿಸಲಿದೆ. AI-ಚಾಲಿತ ಸಾಮಾಜಿಕ ಮಾಧ್ಯಮ ವಿಶ್ಲೇಷಣಾ ಪರಿಹಾರ (SMAS) ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.


“ಇನ್ನು ಮುಂದೆ ಸರ್ಕಾರವು SMAS ಮೂಲಕ ಸಾಮಾಜಿಕ ಮಾಧ್ಯಮ ವಿಷಯವನ್ನು ಸ್ಕ್ಯಾನ್ ಮಾಡುತ್ತದೆ” ಎಂದು ಸಚಿವ ಎಚ್‌ಕೆ ಪಾಟೀಲ್ ಸಂಪುಟ ಸಭೆಯ ನಂತರ ಹೇಳಿದರು, ಈ ವ್ಯವಸ್ಥೆಯು ಭಯೋತ್ಪಾದಕ ಸಂಘಟನೆಗಳ ಆನ್‌ಲೈನ್ ನೇಮಕಾತಿ ಪ್ರಯತ್ನಗಳನ್ನು ಸಹ ಟ್ರ್ಯಾಕ್ ಮಾಡುತ್ತದೆ ಎಂದು ಹೇಳಿದ್ದಾರೆ.
ಈ ಎಐ ತಂತ್ರಜ್ಞಾನ ಫೇಸ್‌ಬುಕ್, ಯೂಟ್ಯೂಬ್, ಎಕ್ಸ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಕಲಿ ಸುದ್ದಿ, ದ್ವೇಷ ಭಾಷಣ, ಕೋಮು ಹಿಂಸೆಗೆ ಪ್ರಚೋದನೆ, ಭಯೋತ್ಪಾದನೆ ಮತ್ತು ಮಕ್ಕಳ ಅಪಹರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಗುರುತಿಸಲಿದೆ. ಸಂಶಯಾಸ್ಪದ ಪೋಸ್ಟ್ಗಳು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ನೋಟಿಫಿಕೇಶನ್ ಹೋಗಲಿದೆ. ಇದರೊಂದಿಗೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.

Continue Reading

Trending

Copyright © 2025 Deevatige