Connect with us

Agriculture

ಅಖಿಲ ಭಾರತ ಗೇರು ಬೆಳೆಗಾರರ ಸಂಘ.(ರಿ ) ಅಧ್ಯಕ್ಷರಾಗಿ ಗಂಗಾಧರ ನಾಯಕ್, ಪ್ರ,ಕಾರ್ಯದರ್ಶಿಯಾಗಿ ವಿಶ್ವಕೇಶವ ಕುರುವೇರಿ, ಕೋಶಾಧಿಕಾರಿ ದೇವಿಪ್ರಸಾದ್ ಕಲ್ಲಾಜೆ

Published

on

ಪುತ್ತೂರು : ಅಖಿಲ ಭಾರತ ಗೇರು ಬೆಳೆಗಾರರ ಸಂಘ.(ರಿ ) ( AICGA ) ಇದರ ಅಧ್ಯಕ್ಷರಾಗಿ ಗಂಗಾಧರ ನಾಯಕ್ ಎಂ, (ನಿವೃತ್ತ) ನಿರ್ದೇಶಕರು ಗೇರು ಸಂಶೋಧನಾ ಕೇಂದ್ರ ಪುತ್ತೂರು ಹಾಗೂ ಜನರಲ್ ಸೆಕ್ರೆಟರಿ ಆಗಿ ವಿಶ್ವ ಕೇಶವ ಕುರುವೇರಿ, ಗೇರು ಬೆಳೆಗಾರರು, ಎಂಟರ್ಪ್ರೋನರ್. ಕೋಶಾಧಿಕಾರಿ ಆಗಿ ದೇವಿಪ್ರಸಾದ್ ಕಲ್ಲಾಜೆ ಇವರು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಸಂಘದ ವತಿಯಿಂದ ಈಗಾಗಲೇ ಸರಕಾರಕ್ಕೆ ಗೇರು ಹಣ್ಣಿನ ಫೆನ್ನಿ ತಯಾರಿಕೆಗೆ ಲೈಸನ್ಸ್ ನೀಡುವಂತೆ ಮನವಿ ಮಾಡಲಾಗಿದೆ.


ಈ ಸಂಬoಧ ಇನ್ನಷ್ಟು ಕಾರ್ಯತಂತ್ರ ರೂಪಿಸಲು ನಿನ್ನೆ ನಡೆದ ಸಭೆಯು ತೀರ್ಮಾನಿಸಿತು.
ಸಂಘದ ಸಭೆಯಲ್ಲಿ ಶಂಕರ ನಾರಾಯಣ ಭಟ್ ಖಂಡಿಗೆ ಮಾಜಿ ಉಪಾಧ್ಯಕ್ಷರು CAMPCO, ಮತ್ತು ಹಿರಿಯ ಗೇರು ಬೆಳೆಗಾರರಾದ ಶುಭಾಶ್ ರೈ ಕಡಮಜಲು ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading
Advertisement

Agriculture

ಪುತ್ತೂರಿನ 1,000 ಮಂದಿಗೆ ಉದ್ಯೋಗ ನೀಡಿದರೆ ಕ್ಯಾಂಪ್ಕೋಗೆ 20 ಎಕರೆ ನಿವೇಶನ ಮಂಜೂರು: ಶಾಸಕ ಅಶೋಕ್ ರೈ ಭರವಸೆ

Published

on

ವಿಟ್ಲ: ಕ್ಯಾಂಪ್ಕೋ ಸಂಸ್ಥೆಯು ಪುತ್ತೂರು ಭಾಗದ ಸುಮಾರು ಒಂದು ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಲ್ಲಿ, ಸಂಸ್ಥೆಯ ಅಭಿವೃದ್ಧಿಗಾಗಿ 20 ಎಕರೆ ನಿವೇಶನವನ್ನು ಮಂಜೂರು ಮಾಡಿಸಿಕೊಡುವುದಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಘೋಷಿಸಿದ್ದಾರೆ.

ವಿಟ್ಲದಲ್ಲಿ ಕ್ಯಾಂಪ್ಕೋ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕ್ಯಾಂಪ್ಕೋ ಇಂದು ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದ್ದು, ಜಿಲ್ಲೆಯ ನೂರಾರು ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಕರಾವಳಿಯ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಪಸರಿಸಿದೆ. ಜಿಲ್ಲೆಯ ಕೃಷಿಕರ ಹಿತರಕ್ಷಣೆಗಾಗಿ ಸಂಸ್ಥೆ ಇನ್ನಷ್ಟು ಬಲಗೊಳ್ಳಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಇಂದು ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತಿರುವುದಕ್ಕೆ ಕ್ಯಾಂಪ್ಕೋ ಸಂಸ್ಥೆಯೇ ಮುಖ್ಯ ಕಾರಣವಾಗಿದ್ದು, ಒಂದು ವೇಳೆ ಈ ಸಂಸ್ಥೆ ಇಲ್ಲದಿದ್ದರೆ ಅಡಿಕೆ ಮಾರುಕಟ್ಟೆಯ ಪರಿಸ್ಥಿತಿ ಊಹಿಸಲೂ ಸಾಧ್ಯವಿರಲಿಲ್ಲ. ಸರ್ಕಾರಿ ನಿಬಂಧನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ದರದಲ್ಲಿ ಅಲ್ಪ ವ್ಯತ್ಯಾಸವಿರಬಹುದಾದರೂ, ರೈತರ ಪಾಲಿಗೆ ಕ್ಯಾಂಪ್ಕೋ ಭದ್ರ ಬುನಾದಿಯಾಗಿದೆ.

ಜಿಲ್ಲೆಯಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದ್ದು, ನಮ್ಮ ಯುವಜನತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಬೇಕಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಮನಸ್ಸು ಮಾಡಿದರೆ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಿದ್ದು, ಇದಕ್ಕೆ ಅಗತ್ಯವಿರುವ ಭೂಮಿ ಹಾಗೂ ಎಲ್ಲಾ ಸಹಕಾರವನ್ನು ನೀಡಲು ತಾನು ಸಿದ್ಧ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.

Continue Reading

Agriculture

ಬೆರಳ ತುದಿಯಲ್ಲಿ ಖಾತೆ ಬದಲಾವಣೆ ; ಕಂದಾಯ ಇಲಾಖೆಯ ಮಹತ್ತರ ಹೆಜ್ಜೆ

Published

on

ಡಿಜಿಟಲ್ ಭೂ ದಾಖಲೆಗಳ ನಿರ್ವಹಣೆಯಲ್ಲಿ ರಾಜ್ಯವು ಮುಂಚೂಣಿಯಲ್ಲಿದ್ದು ಭೂಮಿ ತಂತ್ರಾಂಶದ ಯಶಸ್ವಿನ ಬಳಿಕ ಕಂದಾಯ ಇಲಾಖೆಯು ಈಗ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಆಸ್ತಿಯ ಸ್ವಯಂ ಚಾಲಿತ ಮ್ಯೂಟೇಶನ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಸರಕಾರ ರಾಜ್ಯದಲ್ಲಿ ವಿವಿಧ ಹಾಗೂ ಉತ್ತಮ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಹಲವು ಕಡೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಎಲ್ಲೆಲ್ಲೂ ಲಂಚಾವತಾರವೇ ಇದೆ. ಅದರಲ್ಲೂ ನೋಂದಣಿ ಕಚೇರಿಯಲ್ಲಿ ದೊಡ್ಡಮಟ್ಟದಲ್ಲಿ ಲಂಚ ಸ್ವೀಕಾರ ನಡೆಯುತ್ತದೆ ಎಂದು ಜನರು ಆರೋಪ ಮಾಡುತ್ತಿರುವ ಮದ್ಯೆಯೇ ಕರ್ನಾಟಕದ ಕಂದಾಯ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಜನಪರ ಆಡಳಿತವನ್ನು ತರುವ ನಿಟ್ಟಿನಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಂಗಳವಾರದಂದು ಅತ್ಯಂತ ಮಹತ್ವದ ‘ಸ್ವಯಂ ಚಾಲಿತ ಮ್ಯುಟೇಷನ್‌’ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಈ ನೂತನ ತಂತ್ರಾಂಶದ ಅಳವಡಿಕೆಯಿಂದಾಗಿ ಕೃಷಿ ಭೂಮಿ ಸೇರಿದಂತೆ ಯಾವುದೇ ಆಸ್ತಿಯ ಖಾತೆ ಬದಲಾವಣೆ ಪ್ರಕ್ರಿಯೆಯು ಇನ್ನು ಮುಂದೆ ಸರಳವಾಗಲಿದ್ದು, ಸಾರ್ವಜನಿಕರು ಕಚೇರಿಗಳಿಗೆ ಅಲೆಯುವ ಅನಿವಾರ್ಯತೆ ತಪ್ಪಲಿದೆ.

ಈ ಹೊಸ ವ್ಯವಸ್ಥೆಯ ಅನ್ವಯ, ನೋಟಿಸ್ ಅವಧಿಯಾದ 7 ಅಥವಾ 15 ದಿನಗಳು ಮುಕ್ತಾಯವಾದ ತಕ್ಷಣ, ಯಾವುದೇ ಅಧಿಕಾರಿಯ ಸಹಿ ಅಥವಾ ಅನುಮೋದನೆಗೆ ಕಾಯದೆ ತಂತ್ರಾಂಶವೇ ಮ್ಯುಟೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಈ ಹಿಂದೆ ರಾಜಸ್ವ ನಿರೀಕ್ಷಕರು ಖುದ್ದಾಗಿ ತಾಲ್ಲೂಕು ಕಚೇರಿಗೆ ಬಂದು ಬೆರಳಚ್ಚು ಅಥವಾ ಸಹಿ ನೀಡುವವರೆಗೆ ಮ್ಯುಟೇಷನ್ ಕಾರ್ಯಗಳು ಸ್ಥಗಿತಗೊಳ್ಳುತ್ತಿದ್ದವು. ಆದರೆ ಈಗ ಅಧಿಕಾರಿಗಳಿಗೆ ಪ್ರತ್ಯೇಕ ಲಾಗಿನ್ ನೀಡಲಾಗಿದ್ದು, ಅವರು ಯಾವುದೇ ಸ್ಥಳದಿಂದಲೂ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಸಾರ್ವಜನಿಕರಿಂದ ಅಥವಾ ಅಧಿಕಾರಿಗಳಿಂದ ಯಾವುದೇ ತಕರಾರು ಬಾರದಿದ್ದರೆ, ಸರ್ವರ್ ಸಹಿ ಇರುವ ಮ್ಯುಟೇಷನ್ ಪ್ರತಿಗಳು ಸ್ವಯಂಚಾಲಿತವಾಗಿ ಸಿದ್ಧಗೊಳ್ಳಲಿವೆ.

ಒಂದು ವೇಳೆ ಆಸ್ತಿ ಬದಲಾವಣೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ವ್ಯಕ್ತವಾದಲ್ಲಿ, ಅಂತಹ ಪ್ರಕರಣಗಳನ್ನು ಆರ್‌ಸಿಸಿಎಂಎಸ್‌ ತಂತ್ರಾಂಶದ ಮೂಲಕ ತಹಶೀಲ್ದಾರ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ. ಅಲ್ಲಿ ತಹಶೀಲ್ದಾರರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದ ಈ ಯೋಜನೆಯು ಯಶಸ್ವಿಯಾಗಿದ್ದು, 2024ರ ಏಪ್ರಿಲ್‌ನಿಂದ ಈವರೆಗೆ ಸುಮಾರು 35 ಲಕ್ಷಕ್ಕೂ ಹೆಚ್ಚು ಖಾತೆ ಬದಲಾವಣೆಗಳನ್ನು ಈ ವ್ಯವಸ್ಥೆಯ ಮೂಲಕ ಮಾಡಲಾಗಿದೆ. ಅಲ್ಲದೆ, ಪಹಣಿಯೊಂದಿಗೆ ಆಧಾರ್ ಜೋಡಣೆಯಾದಲ್ಲಿ ಆಸ್ತಿಯಲ್ಲಿ ಯಾವುದೇ ಬದಲಾವಣೆಯಾದರೂ ಮಾಲೀಕರ ಮೊಬೈಲ್‌ಗೆ ತಕ್ಷಣ ಸಂದೇಶ ರವಾನೆಯಾಗುವುದರಿಂದ ಆಸ್ತಿ ಸುರಕ್ಷತೆಗೂ ಇದು ದೊಡ್ಡ ಮಟ್ಟದ ನೆರವು ನೀಡಲಿದೆ.
ಕರ್ನಾಟಕ ಕಂದಾಯ ಇಲಾಖೆಯು ಆನ್‌ಲೈನ್ ಭೂಮಿ ತಂತ್ರಾಂಶ ಮತ್ತು ಆಧಾರ್ ಜೋಡಣೆ ಮೂಲಕ, ಖಾತೆ ಬದಲಾವಣೆಯನ್ನು ಬೆರಳ ತುದಿಗೆ ತಂದಿದೆ. ಅರ್ಜಿ ಸಲ್ಲಿಸಿದ 7-15 ದಿನಗಳಲ್ಲಿ ಸ್ವಯಂಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ. ಇದು ಭ್ರಷ್ಟಾಚಾರ ಕಡಿಮೆ ಮಾಡಲು ಮತ್ತು ಹಳೆಯ ದಾಖಲೆಗಳ ಡಿಜಿಟಲೀಕರಣದ ಮೂಲಕ ಪಾರದರ್ಶಕತೆ ಹೆಚ್ಚಿಸಲು ನೆರವಾಗುತ್ತದೆ.

Continue Reading

Agriculture

50ವರ್ಷಗಳ ಹಿಂದಿನ ಓಬಿರಾಯನ ಕಾಲದ ಕಿಂಡಿ ಅಣೆಕಟ್ಟು.. ಜನನಾಯಕರಿಂದ ನಿರ್ಲಕ್ಷ್ಯಕ್ಕೊಳಗಾದ ಕೃಷಿಕರ ಜೀವನಾಡಿ

Published

on

ಪುತ್ತೂರು : ಒಳಮೊಗ್ರು ಗ್ರಾಮ ಪಂ.ವ್ಯಾಪ್ತಿಯ ಕೈಕಾರ-ಎರ್ಮೆಟ್ಟಿ ಸಂಪರ್ಕದ ಹೊಳೆಯಲ್ಲಿ 1975ರಲ್ಲಿ ಕೃಷಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟು ಜನನಾಯಕರ ನಿರ್ಲಕ್ಷ್ಯದಿಂದಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಕೆಲ ವರ್ಷಗಳ ಕಾಲ ಒಳಮೊಗ್ರು ಗ್ರಾಮ ಪಂಚಾಯತ್ ನಿರ್ವಹಣಾ ಉಸ್ತುವಾರಿ ನೋಡಿಕೊಂಡಿತ್ತು.
1990ರಿಂದ ಪಂಚಾಯತ್ ಕೈ ಚೆಲ್ಲಿದ ಕಾರಣ ಸ್ಥಳೀಯ ಬಡ ಕೃಷಿಕರೇ ಅನಿವಾರ್ಯವಾಗಿ ಮರಳು ಗೋಣಿಗಳ ಬಳಸಿ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುತ್ತಿದ್ದರು.


ಆ ಬಳಿಕ 2006ರ ತನಕ ಕಿಂಡಿ ಅಣೆಕಟ್ಟಿಲ್ಲದೇ ಬಡ ಕೃಷಿಕರು ಬೇಸಿಗೆ ಕಾಲದಲ್ಲಿ ಹೈರಾಣರಾಗಿದ್ದರು.
ಕಳೆದ ಆರು ವರ್ಷಗಳಿಂದ ಮತ್ತೆ ಮರಳು ತುಂಬಿದ ಗೋಣಿಗಳ ಸಹಾಯದಿಂದ ಸ್ಥಳೀಯರೇ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾದರು. ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಮರಳು ಗೋಣಿಗಳ ರೂಢಿ ಮಾಡುವುದೇ ದೊಡ್ಡ ಕೃಷಿಕರಿಗೆ ದೊಡ್ಡ ಸವಾಲಾಗಿತ್ತು.

ಸ್ಪಂದಿಸದ ಜನನಾಯಕರು.
ಅಣೆಕಟ್ಟು ನಿರ್ವಹಣೆ ಮಾಡಿಸುವಂತೆ ಇಪ್ಪತ್ತೈದಕ್ಕೂ ಹೆಚ್ಚು ಬಡ ಕೃಷಿಕರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಪುಢಾರಿಗಳ ಕಿವಿಗೆ ಬಡವರ ನೋವು ಕೇಳಿಸಿಲ್ಲವಾಗಿತ್ತು.

ಚುನಾವಣಾ ಸಂದರ್ಭದಲ್ಲಿ ಮತದಾರರ ಮನೆ ಬಾಗಿಲಿಗೆ ಬಂದು ಕಿಂಡಿ ಅಣೆಕಟ್ಟು ದುರಸ್ತಿ ಮಾಡಿಸುವ ಭರವಸೆ ನೀಡಿದ್ದ ಪುಡಾರಿಗಳು ಚುನಾವಣೆ ಕಳೆದ ಬಳಿಕ ದುರಸ್ತಿ ಮಾಡಿಸುವುದು ಬಿಡಿ ಅತ್ತ ಕಡೆ ಅಪ್ಪಿತಪ್ಪಿಯೂ ತಲೆ ಹಾಕಿ ಮಲಗಿಲ್ಲ ಎಂಬುದು ಬಡ ಕೃಷಿಕರ ನೋವಿನ ಮಾತಾಗಿದೆ.

ಸಡ್ಡು ಹೊಡೆದ ಸ್ವಾವಲಂಬಿ ಕೃಷಿಕರು..
ಜನಪ್ರತಿನಿಧಿಗಳ/ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಮನನೊಂದ ಇಪ್ಪತೈದಕ್ಕೂ ಹೆಚ್ಚು ಅಣೆಕಟ್ಟು ನೀರಿನ ಫಲಾನುಭವಿಗಳು ಸ್ಥಳೀಯ ನಿವಾಸಿ ನೀರ್ಪಾಡಿ ಸತೀಶ್ ರೈ ನೇತೃತ್ವದಲ್ಲಿ ಒಂದೆಡೆ ಸೇರಿ ಮಾತುಕತೆ ನಡೆಸಿದರು.


ಅಣೆಕಟ್ಟು ನೀರಿನ ಫಲಾನುಭವಿ ಕೃಷಿಕರ ಸಹಕಾರದಲ್ಲಿ ಸುಮಾರು 5ಲಕ್ಷ ವೆಚ್ಚದಲ್ಲಿ ಮರದ ಹಲಗೆ ಉಪಯೋಗಿಸಿ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುವುದೆಂದು ತೀರ್ಮಾನಿಸಿದರು. ಅದರಂತೆ ಇದೀಗ ಕಾರ್ಯರೂಪಕ್ಕೆ ತಂದಿದ್ದು ಭರದಿಂದ ಕೆಲಸ-ಕಾರ್ಯಗಳು ನಡೆಯುತ್ತಿವೆ.


ನಿಷ್ಕ್ರಿಯ ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಗೆ ಸಡ್ಡು ಹೊಡೆದ ಕೃಷಿಕರೇ ಇದೀಗ ಜೀವನಾಡಿಯಾದ ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದು ಪೊಳ್ಳು ಭರವಸೆ ನೀಡುವ ಪುಢಾರಿಗಳಿಗೆ, ಬಾಲಂಗೋಚಿಯಾಗಿರುವ ಅಧಿಕಾರಿಗಳಿಗೆ ನಾಚಿಕೆಯಿಲ್ಲವೇ?


ಜನಪ್ರಿಯ ಶಾಸಕರು ಕೃಷಿಕರ ನೋವಿಗೆ ಸ್ಪಂದಿಸಬೇಕಾಗಿದೆ.
ರಾಜಕೀಯಕ್ಕೆ ಪ್ರಥಮ ಬಾರಿಗೆ ಧುಮುಕಿ ಅಲ್ಪ ಅವಧಿಯಲ್ಲೇ ತನ್ನ ಕ್ಷೇತ್ರದ ಜನರ ನೋವು ಅರ್ಥೈಸಿಕೊಂಡು ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಾ ಶಹಬ್ಬಾಸ್ ಗಿಟ್ಟಿಸಿಕೊಳ್ಳುತ್ತಿರುವ ಶಾಸಕ ಅಶೋಕ್ ರೈಯವರು ತಕ್ಷಣವೇ ಕೃಷಿಕರ ಜೀವನಾಡಿಯಾಗಿರುವ ಎರ್ಮೆಟ್ಟಿ ಹೊಳೆಯ ಕಿಂಡಿ ಅಣೆಕಟ್ಟು ಹಾಗೂ ತಡೆಗೋಡೆಗಳ ಬಗ್ಗೆ ಸ್ಪಂದಿಸಬೇಕಾಗಿದೆ.

Continue Reading

Trending

Copyright © 2025 Deevatige