Bantawala
ಬೆಳಕು ಚಾರಿಟೇಬಲ್ ಟ್ರಸ್ಟ್‌ನ ನೂತನ ಆಂಬುಲೆನ್ಸ್ ಸಾಲೆತ್ತೂರು ಮೈದಾನದಲ್ಲಿ ಲೋಕಾರ್ಪಣೆ..
ವಿಟ್ಲ : ಬೆಳಕು ಚಾರಿಟೇಬಲ್ ಟ್ರಸ್ಟ್ (ರಿ.) ಕೊಳ್ನಾಡು–ಸಾಲೆತ್ತೂರು ಇದರ ವತಿಯಿಂದ ನೂತನ ಆಂಬುಲೆನ್ಸ್ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 28-12-2025 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಕು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಅಬ್ದುಲ್ ಖಾದರ್ ಸಾಲೆತ್ತೂರು ವಹಿಸಿದ್ದರು. ನೂತನ ಆಂಬುಲೆನ್ಸ್ ವಾಹನವನ್ನು ಅಸ್ಸಯ್ಯದ್ ಶಿಹಾಬುದ್ದೀನ್ ತಂಙಲ್ ಮದಕ, ಫಾ. ರೇ. ಮಾರಿಯಾ ರೆಬೆಲ್ಲೊ (ನಿತ್ಯಾಧರ್ ಚರ್ಚ್, ಸಾಲೆತ್ತೂರು), ಹಿರಿಯರಾದ ಹಾಜಿ ಬಾಪುಕುಂಞ ಸಾಲೆತ್ತೂರು, ಡಾ. ಗಣೇಶ್ ಪ್ರಸಾದ್ (MBBS, MD – ದಿವ್ಯ ಕ್ಲಿನಿಕ್, ಸಾಲೆತ್ತೂರು) ಹಾಗೂ ಡಾ. ಸುರೇಶ್ (ಸಮುದಾಯ ಆರೋಗ್ಯ ಅಧಿಕಾರಿ, ಕೊಳ್ನಾಡು) ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಹಾಜಿ ಎ.ಬಿ. ಅಬ್ದುಲ್ಲಾ ಹಾಗೂ ಮಹಮ್ಮದ್ ಮಂಚಿ (ಸದಸ್ಯರು, ಕೊಳ್ನಾಡು ಗ್ರಾಮ ಪಂಚಾಯತ್), ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಶೆಟ್ಟಿ (ಪೆರ್ಲದಬೈಲು) ಹಾಗೂ ಜನಾರ್ಧನ ಪೂಜಾರಿ (ಸಾಲೆತ್ತೂರು) ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಲ್ ಮದಕ ಅವರು, ಬೆಳಕು ಚಾರಿಟೇಬಲ್ ಟ್ರಸ್ಟ್ ಜಾತಿ–ಧರ್ಮ ಭೇದಭಾವವಿಲ್ಲದೆ ಸಮಾಜಸೇವೆಯಲ್ಲಿ ತೊಡಗಿರುವ ಎಲ್ಲರ ಸಹಕಾರವನ್ನು ಸ್ಮರಿಸಿ ದುವಾ ಹಾಗೂ ಆಶೀರ್ವಚನ ನೀಡಿದರು.
ನಿತ್ಯಾಧರ್ ಚರ್ಚ್‌ನ ಧರ್ಮಗುರು ಫಾ. ಮಾರಿಯಾ ರೆಬೆಲ್ಲೊ ಅವರು, ಮಾನವಸೇವೆಯೇ ಮಹತ್ತರ ಧರ್ಮವೆಂದು ತಿಳಿಸಿ ಟ್ರಸ್ಟ್‌ನ ಸೇವಾಕಾರ್ಯವನ್ನು ಶ್ಲಾಘಿಸಿದರು.

ಡಾ. ಗಣೇಶ್ ಪ್ರಸಾದ್ ಅವರು ಟ್ರಸ್ಟ್‌ಗೆ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು. ಡಾ. ಸುರೇಶ್ ಅವರು ಮಾತನಾಡಿ, ತುರ್ತು ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜುಗಳಿಗೆ ರೋಗಿಗಳನ್ನು ಕರೆದೊಯ್ಯುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಗಮನಿಸಿ, ಈ ಆಂಬುಲೆನ್ಸ್ ಸೇವೆ ಸಾರ್ವಜನಿಕರಿಗೆ ಮಹತ್ತರ ನೆರವಾಗಲಿದೆ ಎಂದರು.

ಗ್ರಾಮ ಪಂಚಾಯತ್ ಸದಸ್ಯ ಹಾಜಿ ಎ.ಬಿ. ಅಬ್ದುಲ್ಲಾ ಅವರು, ಟ್ರಸ್ಟ್ ಸದಸ್ಯರ ಕನಸು ನನಸಾದ ದಿನವಿದು ಎಂದು ಶುಭ ಹಾರೈಸಿದರು. ಪಂಚಾಯತ್ ಸದಸ್ಯ ಮಹಮ್ಮದ್ ಮಂಚಿ ಅವರು ರೋಗನಿವಾರಣೆಯ ಜೊತೆಗೆ ಆರೋಗ್ಯ ಜಾಗೃತಿಯ ಅಗತ್ಯವನ್ನು ಒತ್ತಿ ಹೇಳಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ನಾಟಕ ಕಲಾವಿದ ವಿಶ್ವನಾಥ ಪೆರ್ಲದಬೈಲು ಅವರು ಮಾತನಾಡಿ, ಬೆಳಕು ಚಾರಿಟೇಬಲ್ ಟ್ರಸ್ಟ್ ನಂಬಿದವನಿಗೂ ನಂಬದವನಿಗೂ ಆಪತ್ಭಾಂದವನಾಗುವ ಸೇವಾ ಮನೋಭಾವ” ಹೊಂದಿದೆ ಎಂದು ಹೇಳಿದರು.
ನೌಫಾಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Bantawala
ವಿಟ್ಲದಲ್ಲಿ ಬಡಕಾರ್ಮಿಕೆ ರಾಜೇಶ್ವರಿಯವರ ಮನೆ ಬೆಂಕಿಗಾಹುತಿ
ವಿಟ್ಲ ಸಮೀಪದ ವೀರಕಂಬ ಗ್ರಾಮದ ಗಣೇಶ್ ಕೋಡಿ ನಿವಾಸಿ ಕಾರ್ಮಿಕೆಯಾಗಿರುವ ರಾಜೇಶ್ವರಿ ಎಂಬವರ ಮನೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಹೊತ್ತಿ ಉರಿದ ಘಟನೆಯೊಂದು ಪೆ.10ರಂದು ಸಂಭವಿಸಿದ್ದು, ಬಡ ನಿರ್ಗತಿಕ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ಮನೆಯೊಡತಿ ರಾಜೇಶ್ವರಿ ಅವರು ಎಂದಿನಂತೆ ಬೆಳಗ್ಗೆ ಬೀಗ ಹಾಕಿ ಅಡಿಕೆ ಗಾರ್ಬನ್ ಕೆಲಸಕ್ಕೆ ಹೋಗಿದ್ದರೆ ಮಕ್ಕಳಿಬ್ಬರು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಮನೆಯನ್ನು ಭಸ್ಮ ಮಾಡಿದೆ.

ಮನೆಯಿಂದ ವಿಪರೀತ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಜಮಾಯಿಸಿ ಬೆಂಕಿಯನ್ನು ನಂದಿಸುವಷ್ಟರಲ್ಲಿಯೇ ಮನೆಯೊಳಗಿದ್ದ ಮಕ್ಕಳ ಬಟ್ಟೆಬರೆ ಶಾಲಾ ಪುಸ್ತಕಗಳು, ಮನೆಯ ದಾಖಲೆಪತ್ರಗಳು ಸೇರಿದಂತೆ ಮನೆಯೊಳಗಿದ್ದ ವಸ್ತುಗಳು ಕರಟಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಡ ಕಾರ್ಮಿಕೆ ಗಾರ್ಬಲ್ ಕೆಲಸಕ್ಕೆ ಹೋಗಿ ದುಡಿದು ಜೀವನ ಸಾಗಿಸುತ್ತಿದ್ದು, ಮನೆ ಬೆಂಕಿಗಾಹುತಿಯಾದ ಘಟನೆಯಿಂದ ತೀವ್ರ ಅಸ್ವಸ್ಥರಾಗಿದ್ದು, ಅವರ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
accident
ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ದುರ್ಮರಣ..
ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ನಿಧನರಾಗಿದ್ದಾರೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗದಲ್ಲಿದ್ದ ನಿಶಿತ್ ಊರಿಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು ತಡರಾತ್ರಿ 2-30ರ ಸುಮಾರಿಗೆ ಚೆನ್ನರಾಯಪಟ್ಟಣ ಹೊರವಲಯದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ನಿಶಿತ್ ನಾಯ್ಕ್ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.

ಪುಣಚ ಗ್ರಾಮದ ಬುಡಲೆ ನಿವಾಸಿ, ಮಾಜಿ ಸೈನಿಕರಾಗಿರುವ ಕುಂಞಣ್ಣ ನಾಯ್ಕ್ ಪುತ್ರ ನಿಧನದ ಸುದ್ದಿ ಗ್ರಾಮಸ್ಥರ ಅತೀವ ದು:ಖಕ್ಕೆ ಕಾರಣವಾಗಿದೆ. ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಓರ್ವ ಸಹೋದರಿ ನಿಶಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೀಗ ಹಾಸನದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಪ್ರಾರ್ಥಿವ ಶರೀರ ಪುಣಚ ಗ್ರಾಮ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
Bantawala
ಕುಟುಂಬದ ಯಜಮಾನರಾಗಿ ಪೂಂಜರಬೆಟ್ಟು ಕೇಶವ ಭಂಡಾರಿ; ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್ ರಚನಾ ಸಭೆ
ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಕುದ್ರಿಯ ತರವಾಡಿನ ನೂತನ ಯಜಮಾನರಾಗಿ ಹಿರಿಯ ದೈವ ಚಾಕಿರಿಯವರಾದ ಪೂಂಜರಬೆಟ್ಟು ಕೇಶವ ಭಂಡಾರಿ ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳು ಮತ್ತು ಕುಟುಂಬಿಕರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್ ರಚನೆಯ ಸಭೆ ನಡೆಯಿತು.
ಹಿಂದಿನ ಟ್ರಸ್ಟಿಗಳ ಮರಣ, ರಾಜೀನಾಮೆ, ಹಾಗೂ ವಜಾಗೊಂಡ ಸದಸ್ಯರ ಸ್ಥಾನಕ್ಕೆ ನೂತನ ಟ್ರಸ್ಟಿಗಳನ್ನು ಆಯ್ಕೆ ಮಾಡಲಾಯಿತು. ಕುದ್ರಿಯ ಗುತ್ತು ಟ್ರಸ್ಟಿನ ನೂತನ ಗೌರವಾಧ್ಯಕ್ಷರಾಗಿ ವಿಠಲ ಮೋನಪ್ಪ ಶೆಟ್ಟಿ ನಾಂದೇಡ್, ಅಧ್ಯಕ್ಷರಾಗಿ ಚಂದ್ರಹಾಸ ಎಂ ಶೆಟ್ಟಿ ಅಳಕೆಮಜಲು, ಉಪಾಧ್ಯಕ್ಷರಾಗಿ ರೋಹಿಣಿ ರೈ ನೇರಳಕಟ್ಟೆ, ಹಾಗೂ ಚಂದ್ರಹಾಸ ರೈ ಮುಲ್ಕಾಜೆ ಮಾ ಡ, ಕಾರ್ಯದರ್ಶಿಯಾಗಿ ಗಣೇಶ್ ರೈ, ಕೋಶಾಧಿಕಾರಿಯಾಗಿ ಧನಂಜಯ ಶೆಟ್ಟಿ ಮುತ್ತೂರು, ಇವರನ್ನು ಟ್ರಸ್ಟಿಗಳ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರನ್ನು ಕುಟುಂಬಿಕರ ಮತ್ತು ಟ್ರಸ್ಟಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
-
crime7 days agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala1 month agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada2 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala1 month agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
crime3 weeks agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
-
Bantawala2 months agoಕೇಪು ಅಕ್ರಮ ಕೋಳಿ ಅಂಕಕ್ಕೆ ಧಾಳಿ; 16ಜನ, 22ಹುಂಜಗಳ ಸಹಿತ ಬಾಳು ಕತ್ತಿ ವಶಕ್ಕೆ ಪಡೆದ ವಿಟ್ಲ ಪೊಲೀಸರು.. ಪುತ್ತೂರು ಶಾಸಕರ ಸಹಿತ ಜಾಗ ನೀಡಿದ ಮಾಲಿಕನ ಮೇಲೂ ಬಿತ್ತು ಕೇಸು.
-
DEATH2 weeks agoವಿಟ್ಲದ ಜನಪ್ರಿಯ ಚಾಲಕ ಕುಮಾರಣ್ಣ ಹೃದಯಾಘಾತಕ್ಕೆ ಬಲಿ
-
Bantawala4 weeks agoನಿನ್ನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ತಲೆಕ್ಕಿ ಮಹಮ್ಮದ್ ಹಾಜಿ.. ; ಇಂದು ಸಂಜೆ ನೇತ್ರಾವತಿ ನದಿಯಲ್ಲಿ ಪತ್ತೆ.. ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ..

