Educational
ನ್ಯೂಜಿಲ್ಯಾಂಡ್ ದೇಶದ ಶೈಕ್ಷಣಿಕ ಚಟುವಟಿಕೆಗಳು; ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ವಿನೂತನ ಕಾರ್ಯಾಗಾರ
ಪುತ್ತೂರು : ಇಲ್ಲಿನ ಹೃದಯ ಭಾಗದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಿದ್ಯಾ ದೇಗುಲ ಪ್ರಗತಿ ಸ್ಟಡಿ ಸೆಂಟರ್ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದೊಂದಿಗೆ ಸಾಮಾಜಿಕ ಜ್ಞಾನದ ಜೊತೆಗೆ, ಭವಿಷ್ಯದ ಚಿಂತನೆಗಳನ್ನು ಬೆಳೆಸಿ ಭವ್ಯ ಭಾರತದ ಸತ್ಪçಜೆಯನ್ನಾಗಿ ರೂಪಿಸುವಲ್ಲಿ ಆಗಾಗ ಪೂರಕವಾದ ಪಠ್ಯೇತರ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ.

ಅದರಂತೆ ಈ ವಿನೂತನ ಮಾಹಿತಿ ಕಾರ್ಯಾಗಾರವೊಂದರಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ವಿವಾಹಿತರಾದ ನ್ಯೂಜಿಲ್ಯಾಂಡ್ ನ ಹುಡುಗಿ ಲಿಲ್ಲಿಚೂಅರ್ಜುನ್ ಹಾಗೂ ಅರ್ಜುನ್ ರಮೇಶ್ ಕುಮಾರ್ ದಂಪತಿಗಳು ತಮ್ಮ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭ ಅವರಿಂದ ವಿದ್ಯಾರ್ಥಿಗಳು ನ್ಯೂಜಿಲ್ಯಾಂಡ್ ನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು ಮತ್ತು ಪ್ರಗತಿ ಸ್ಟಡಿ ಸೆಂಟರ್ ಸಂಸ್ಥೆ ನಡೆದುಬಂದ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ದಂಪತಿಗಳು ಮುಕ್ತ ಕಂಠದಿoದ ಶ್ಲಾಘಿಸಿದರು.

ನ್ಯೂಜಿಲ್ಯಾಂಡ್ ನಲ್ಲಿ ಹತ್ತನೇ ತರಗತಿಯ ನಂತರ ಶಿಕ್ಷಣವನ್ನು ವಿಶ್ವವಿದ್ಯಾಲಯದಲ್ಲಿ ನೀಡಲಾಗುತ್ತದೆ ಪ್ರತಿ ವಿದ್ಯಾರ್ಥಿಯ ಖರ್ಚು ವೆಚ್ಚಗಳಿಗಾಗಿ 10000 ಡಾಲರ್ ನಿಂದ 20,000 ಡಾಲರ್ ವರೆಗೆ ಸರಕಾರವೇ ಒದಗಿಸಿಕೊಡುತ್ತದೆ.

ಉನ್ನತ ವ್ಯಾಸಂಗ ಮಾಡುವ ಸಮಯದಲ್ಲಿ ವಿದ್ಯಾರ್ಥಿಯೇ ವಿಷಯವನ್ನು ಅರಿತು ಅದರ ಕುರಿತು ವಿಮರ್ಶಿಸಿ ಮಂಡನೆ ಮಾಡಬೇಕು. ತನ್ನ ವಿಷಯವನ್ನು ತಾನೇ ಆಯ್ಕೆ ಮಾಡಿಕೊಂಡು 5,000 ಪದಗಳ ಪ್ರಬಂಧ ರಚಿಸಿ ಪ್ರಸ್ತುತಪಡಿಸಬೇಕು.

ಉನ್ನತ ವ್ಯಾಸಂಗ ಸಮಯದಲ್ಲಿ ತನ್ನ ದುಡಿಮೆಯ ಪೂರ್ತಿ ಖರ್ಚು ವೆಚ್ಚವನ್ನು ಆತನೇ ಧರಿಸಬೇಕು. ಎಂದು ಅರ್ಜುನ್ ರಮೇಶ್ ಕುಮಾರ್ ಇವರು ಮಂಗಳೂರಿನಿoದ ನ್ಯೂಜಿಲ್ಯಾಂಡ್ ನವರೆಗಿನ ತನ್ನ ಶೈಕ್ಷಣಿಕ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊoಡರು. ಪ್ರಸ್ತುತ ಅರ್ಜುನ್ ರಮೇಶ್ ರವರು Software Engineer Warehouse Company Auckland, Newzealand ಹಾಗೂ ಲಿಲ್ಲಿಚೂ ಅರ್ಜುನ್ ರವರು Post Graduation in Psychology Auckland univercity, Newzealandನಲ್ಲಿ ಉದ್ಯೋಗದಲ್ಲಿದ್ದಾರೆ.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಗೋಕುಲನಾಥ್ ಪಿ.ವಿ. ಇವರು ಗಣ್ಯರನ್ನು ಪರಿಚಯಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಗೀತಾ ರಮೇಶ್ ಕುಮಾರ್, ಅಕ್ಷಯ್ ರಮೇಶ್ ಕುಮಾರ್, ಡಾ. ಮೇಘ ಗೋಕುಲ್ ಅಶ್ವಿನ್ ರಮೇಶ್ ಕುಮಾರ್, ಶ್ರೀಮತಿ ನಮೃತಾ ಅಶ್ವಿನ್ ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಸ್ವಾಗತಿಸಿದರು. ಉಪನ್ಯಾಸಕ ನಾಸಿರ್ ವಂದಿಸಿದರು.
award
ಮಂಗಳೂರು ವಿಶ್ವವಿದ್ಯಾಲಯ: ಸುಶ್ಮಿತ ಸಿ.ಎಚ್. ಅವರಿಗೆ ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪ್ರದಾನ
ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಶ್ಮಿತ ಸಿ.ಎಚ್. ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.

ಅವರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೃಷ್ಣಕುಮಾರ್ ಜಿ. ಅವರ ಮಾರ್ಗದರ್ಶನದಲ್ಲಿ “Antidiabetic activities of Syzygium hemisphericum (Wight) Alston and Syzygium kanarense (Talbot) Raizada” (ಸಿಜಿಜಿಯಂ ಹೆಮಿಸ್ಫೆರಿಕಂ ಮತ್ತು ಸಿಜಿಜಿಯಂ ಕೆನರೆನ್ಸ್ ಸಸ್ಯಗಳ ಮಧುಮೇಹ ವಿರೋಧಿ ಚಟುವಟಿಕೆಗಳು) ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದರು.

2025ರ ಅಕ್ಟೋಬರ್‌ನಲ್ಲಿ ತಮ್ಮ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಇವರಿಗೆ, 2026ರ ಮಾರ್ಚ್ 28ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ 44ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಅಧಿಕೃತವಾಗಿ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಯಿತು.
ಡಾ. ಸುಶ್ಮಿತ ಅವರು ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಕಣಿಯೂರು ಸೂರ್ಯನಾರಾಯಣ ಭಟ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲದ ಉದ್ಯೋಗಿ ಶ್ರೀಮತಿ ಆಶಾಪಾರ್ವತಿ ದಂಪತಿಯ ಪುತ್ರಿ. ಇವರು ಯುವ ಉದ್ಯಮಿ ಶ್ರೀ ಕೃಷ್ಣ ವಿಕಾಸ್ ಅವರ ಪತ್ನಿಯಾಗಿದ್ದಾರೆ.

ತಮ್ಮ ಈ ಶೈಕ್ಷಣಿಕ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ-ತಾಯಿ, ಸಹೋದರಿ ಹಾಗೂ ಪತಿಯವರ ನಿರಂತರ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಡಾ. ಸುಶ್ಮಿತ ಅವರು ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದಲ್ಲೇ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Educational
ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ: ಕಠಿಣ ಪ್ರಶ್ನೆಗಳಿಂದ ಕಂಗಾಲಾದ ವಿದ್ಯಾರ್ಥಿಗಳು; ಕೃಪಾಂಕ ನೀಡಲು ಹೆಚ್ಚಿದ ಒತ್ತಾಯ!
ರಾಜ್ಯಾದ್ಯಂತ ಶನಿವಾರ ನಡೆದ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪಠ್ಯಕ್ರಮದ ಹೊರತಾದ ಮತ್ತು ಅತ್ಯಂತ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೃಪಾಂಕ (Grace Marks) ನೀಡಬೇಕೆಂದು ಗಣಿತ ಶಿಕ್ಷಕರ ಸಂಘ ಹಾಗೂ ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರಿಕೆಯಲ್ಲಿ ಒಟ್ಟು 16 ಅಂಕಗಳ ಪ್ರಶ್ನೆಗಳು ಪಠ್ಯಕ್ರಮದಲ್ಲಿ (Syllabus) ಇರಲಿಲ್ಲ ಮತ್ತು 21 ಅಂಕಗಳ ಪ್ರಶ್ನೆಗಳು ಅತ್ಯಂತ ಕಠಿಣವಾಗಿದ್ದವು ಎಂದು ಶಿಕ್ಷಕರು ಆರೋಪಿಸಿದ್ದಾರೆ. ನಿಯಮದ ಪ್ರಕಾರ ಪ್ರಶ್ನೆಪತ್ರಿಕೆಯಲ್ಲಿ ಶೇ. 20ರಷ್ಟು ಕಠಿಣ, ಶೇ. 20ರಷ್ಟು ಸುಲಭ ಹಾಗೂ ಶೇ. 40ರಷ್ಟು ಮಧ್ಯಮ ಮಟ್ಟದ ಪ್ರಶ್ನೆಗಳಿರಬೇಕು. ಆದರೆ, ಈ ಬಾರಿ 35ಕ್ಕೂ ಹೆಚ್ಚು ಅಂಕಗಳಿಗೆ ಕಠಿಣ ಪ್ರಶ್ನೆಗಳನ್ನು ಕೇಳುವ ಮೂಲಕ ಮಂಡಳಿಯು ನಿಯಮ ಉಲ್ಲಂಘಿಸಿದೆ ಎನ್ನಲಾಗಿದೆ. ಅನ್ವಯಿಕ ಪ್ರಶ್ನೆಗಳು ಹೆಚ್ಚಾಗಿದ್ದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಪಾಸಾಗಲು ಪರದಾಡುವಂತಾಗಿದೆ. ಇನ್ನು 100ಕ್ಕೆ 100 ಅಂಕಗಳ ಗುರಿ ಹೊಂದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ನಿರಾಸೆಗೊಂಡಿದ್ದಾರೆ. ಬಹುವದೋಕ್ತಿ (1 ಅಂಕ), ನಿರ್ದೇಶಾಂಕ ರೇಖಾಗಣಿತ (2 ಅಂಕ), ವೃತ್ತಗಳು (2 ಅಂಕ), ತ್ರಿಭುಜಗಳು (3 ಅಂಕ), ವರ್ಗ ಸಮೀಕರಣಗಳು (1 ಅಂಕ), ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು (5 ಅಂಕ) ಸೇರಿದಂತೆ ಪಠ್ಯದಲ್ಲಿಲ್ಲದ ಒಟ್ಟು 16 ಅಂಕಗಳನ್ನು ಪಡೆಯಲು ವಿದ್ಯಾರ್ಥಿಗಳು ಕೈಚೆಲ್ಲಿದ್ದಾರೆ.
ನಾಳೆ ನಿರ್ಣಾಯಕ ಸಭೆ:
ಈ ಸಮಸ್ಯೆಯ ಕುರಿತು ಈಗಾಗಲೇ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ. ಶಿವಮೊಗ್ಗ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಶಿಕ್ಷಕರ ಸಂಘಗಳು ಶಿಕ್ಷಣ ಸಚಿವರಿಗೆ ಮನವಿ ನೀಡಿವೆ.

ಈ ಹಿನ್ನೆಲೆಯಲ್ಲಿ, ಮಾರ್ಚ್ 31ರ ಮಂಗಳವಾರದಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಹಾಗೂ ಪರೀಕ್ಷಾ ಮಂಡಳಿ ನಿರ್ದೇಶಕರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವ ಬಗ್ಗೆ ಅಥವಾ ಮೌಲ್ಯಮಾಪನದ ವೇಳೆ ರಿಯಾಯಿತಿ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
award
ಶೈಕ್ಷಣಿಕ ಕ್ಷೇತ್ರದಲ್ಲಿ ಮಿಂಚಿದ ಪೆರ್ಲದ ಪ್ರತಿಭೆ: ಎಂ.ಸಿ.ಎ ಪದವಿಯಲ್ಲಿ ಅನನ್ಯ ಬಿ.ಎಸ್. ಅವರಿಗೆ ದ್ವಿತೀಯ ರ‍್ಯಾಂಕ್
ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ 2023-25ನೇ ಸಾಲಿನ ಎಂ.ಸಿ.ಎ (MCA – Master of Computer Application) ಸ್ನಾತಕೋತ್ತರ ಪದವಿಯಲ್ಲಿ ಅನನ್ಯ ಬಿ.ಎಸ್. ಅವರು ದ್ವಿತೀಯ ರ‍್ಯಾಂಕ್ ಮೂಲಕ ಅನನ್ಯ ಸಾಧನೆ ಮಾಡಿದ್ದಾರೆ.

ಇವರು ಕಾಸರಗೋಡು ಜಿಲ್ಲೆಯ ಪೆರ್ಲದವರಾಗಿದ್ದು, ಭಾಸ್ಕರ್ ಬನಾರಿ ಹಾಗೂ ಸುಜಾತಾ ಸೇರಾಜೆ ದಂಪತಿಯ ಪುತ್ರಿ. ಇವರು ಕೇರಳ ರಾಜ್ಯದಲ್ಲಿಯೇ ಪ್ರಸಿದ್ದಿ ಪಡೆದ ಖ್ಯಾತ ವ್ಯಕ್ತಿ ಸಿಪಿಎಂ ಪಕ್ಷದ ನೇತಾರನಾಗಿದ್ದ ದಿ. ಕೆ.ಪಿ. ಮದನ್ ಮಾಸ್ಟರ್ ಸೇರಾಜೆ ಅವರ ಮರಿಮೊಮ್ಮಗಳು ಎಂಬುದು ಗಮನಾರ್ಹ.

ಅನನ್ಯ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಪೆರ್ಲದ ಶ್ರೀ ಸತ್ಯನಾರಾಯಣ ಹೈಸ್ಕೂಲ್‌ನಲ್ಲಿ ಮುಗಿಸಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 90 ಅಂಕ ಗಳಿಸಿದ್ದರು. ನಂತರ ಬಡಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪಿಯುಸಿ (ವಿಜ್ಞಾನ ವಿಭಾಗ) ಶಿಕ್ಷಣ ಪೂರೈಸಿದರು.
ಉನ್ನತ ಶಿಕ್ಷಣಕ್ಕಾಗಿ ಪುತ್ತೂರಿನ ವಿವೇಕಾನಂದ ಕಾಲೇಜನ್ನು ಸೇರಿ ಬಿ.ಸಿ.ಎ (BCA) ಪದವಿಯಲ್ಲಿ ಶೇ. 93 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದರು. ಇದೀಗ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಎಂ.ಸಿ.ಎ ಪದವಿಯಲ್ಲಿ ಶೇ. 94 ಅಂಕಗಳನ್ನು ಪಡೆಯುವ ಮೂಲಕ ಇಡೀ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಅನನ್ಯ ಅವರ ಈ ಸಾಧನೆಗೆ ಪೆರ್ಲ ಹಾಗೂ ಸುತ್ತಮುತ್ತಲಿನ ಭಾಗದ ಸಾರ್ವಜನಿಕರು ಮತ್ತು ಶಿಕ್ಷಣ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
-
crime3 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
