Connect with us

Dakshina Kannada

ಧಾರ್ಮಿಕ ಸಂಪ್ರದಾಯದ ಮೇಲೆ ಸವಾರಿ ಮಾಡಿದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ- ಸತೀಶ್ ಕುಂಪಲ

Published

on

ಕೇಪು : ಜಿಲ್ಲೆಯಲ್ಲಿ ಯಾವ ರೀತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಸಹಕಾರ ಕೊಡಬೇಕೋ ಅದನ್ನು ಭಾರತೀಯ ಜನತಾ ಪಾರ್ಟಿ ಪೂರ್ತಿಯಾಗಿ ನೀಡಿದೆ. ಆದರೆ, ಹಿಂದೂ ಧರ್ಮದ ಆಧಾರದ ಮೇಲೆ ನಡೆಯುವ ಈ ಧಾರ್ಮಿಕ ಸಂಪ್ರದಾಯದ ಮೇಲೆ ಸವಾರಿ ಮಾಡಿದರೆ ಮುಂದಿನ ದಿನಗಳಲ್ಲಿ ನೀವು ಅನುಭವಿಸುತ್ತೀರಿ. ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು

ಅವರು ಬಂಟ್ವಾಳ ತಾಲೂಕು ಕೇಪು ಗ್ರಾಮದ ಶ್ರೀ ಉಳ್ಳಾಲ್ತಿ ಅಮ್ಮನವರ ಕಾರಣಿಕ ಕ್ಷೇತ್ರಕ್ಕೆ ಆಗಮಿಸಿ ನಮ್ಮ ಹಿರಿಯರಿಂದಲೇ ಬಂದಿರುವ ಸಾಂಪ್ರದಾಯಿಕ ಆಚರಣೆಗಳಿಗೆ ತಡೆಯಾಗುತ್ತಿರುವ ಬಗ್ಗೆ ಮಾತನಾಡುತ್ತಾ, ಹಿಂದೂ ಸಂಪ್ರದಾಯಗಳ ಮೇಲೆ ಸರಕಾರ ಸವಾರಿ ಮಾಡಬೇಡಿ, ದಬ್ಬಾಳಿಕೆ ಮಾಡಬೇಡಿ, ಸಂಪ್ರದಾಯವನ್ನು ನಡೆಸಲು ಮುಕ್ತ ಅವಕಾಶವನ್ನು ನೀಡಿ, ನೀವು ಸಂಪ್ರದಾಯಿಕವಾಗಿ ನಡೆಯುವ ಕೋಳಿ ಅಂಕವನ್ನು ಜೂಜು ಎಂದು ಏಕೆ ಕರೆಯುತ್ತೀರಿ ? ಜೂಜು ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ ಸಂಪ್ರದಾಯದ ಮೇಲೆ ಕ್ರಮ ಏಕೆ ? ನಾಳೆ ದೇವಸ್ಥಾನದಲ್ಲಿ ಪೂಜೆ ಮಾಡಬೇಡಿ, ದೈವಸ್ಥಾನದಲ್ಲಿ ಸೇವೆ ನಿಲ್ಲಿಸಿ ಹೇಳುತ್ತೀರಿ ನಿಮ್ಮ ಸರಕಾರ ಬಂದ ತಕ್ಷಣ ಸರಕಾರ ಹೇಳಿದ ಹಾಗೆ, ಮಂತ್ರಿಗಳು ಹೇಳಿದ ಹಾಗೆ ಶಾಸಕರು ಹೇಳಿದ ಹಾಗೆ ಜನ ಕೇಳ ಬೇಕಾ ? ಪಾಪದವರ ಮೇಲೆ ಕೇಸು ಹಾಕಿ ಏನು ಸಾಧಿಸುತ್ತೀರಿ ? ಪೊಲೀಸರು ಮಾಡುತ್ತಾರೆಂದರೆ ಆಡಳಿತ ಕಣ್ಣುಮುಚ್ಚಿ ಕುಳಿತುಕೊಂಡಿದೆಯಾ ? ಕೋಳಿಅಂಕಕ್ಕೆ ಬಂದು ಶಾಸಕರು ಹೋರಾಟ ಮಾಡಬೇಕಾ ? ಕಾಂಗ್ರೇಸ್ ಸರಕಾರವಿದ್ದು, ಕಾಂಗ್ರೇಸ್ ಶಾಸಕರು ಇಲ್ಲಿಗೆ ಬಂದು ಕೋಳಿಅಂಕ ಮಾಡ್ಲಿಕ್ಕೆ ನಾನು ನಿಮ್ಮೊಂದಿಗಿದ್ದೇನೆ ಎಂದರೆ ಏನು ? ಉಸ್ತುವಾರಿ ಸಚಿವರ ಮೂಲಕ ಸರಪಡಿಸಲಿಕ್ಕೆ ಆಗಲಿಲ್ಲವಾ ? ಈ ರೀತಿ ಅತ್ಯಂತ ಕೆಟ್ಟ ಸಂಪ್ರದಾಯವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರ ಮೂಲಕ ಕಾಂಗ್ರೇಸ್ ಸರಕಾರ ಮಾಡಿಸುತ್ತಿದೆ. ಪ್ರಜಾತಂತ್ರ ವ್ಯವಸ್ಥೇಯಲ್ಲಿ ಸಂವಿದಾನ ಅಂತ ಹೇಳುತ್ತಾ ಸಂವಿದಾನದ ಎಲ್ಲಾ ವ್ಯವಸ್ಥೆಗಳನ್ನು ಮುಟ್ಟುಗೋಲು ಹಾಕುವ ರೀತಿಯಲ್ಲಿ ವರ್ತಿಸುತ್ತಿರುವ ಕಾಂಗ್ರೇಸ್ ಸರಕಾರದ ನಿಲುವನ್ನು ಈ ಸಂದರ್ಭದಲ್ಲಿ ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದರು.


ಇವತ್ತು ಮಲರಾಯ ದೈವದ ಸಮ್ಮುಖದಲ್ಲಿ ಕೋಳಿ ಹರಿಕೆ ಸೇವೆ ನಡೆಯಲಿದ್ದು, ಅವರಿಗೆ ಧಾರ್ಮಿಕ ಸೇವೆ ನಡೆಸಲು ಪೊಲೀಸ್ ಇಲಾಖೆ ಮತ್ತು ಸರಕಾರ ಮುಕ್ತವಾಗಿ ಸಹಕಾರವನ್ನು ನೀಡಬೇಕು ಎಂದು ವಿನಂತಿಸುವುದಕ್ಕಾಗಿ ನಾವು ಜನರ ಪರವಾಗಿ ಜವಾಬ್ಧಾರಿಯಿಂದ ಇಲ್ಲಿಗೆ ಬಂದಿದ್ದೇವೆ ಎಂದರು. ಈ ಜಿಲ್ಲೆಯಲ್ಲಿ ನಡೆಯುವಂತಹ ಸಂಪ್ರದಾಯಿಕ ಆಚರಣೆಗಳಿಗೆ ಆಡಳಿತ ವ್ಯವಸ್ಥೆ ವಿರುದ್ಧವಾಗಿ ಹೋದರೆ ಬಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರೊಂದಿಗೆ ನಾವು ಯಾವತ್ತೂ ನಿಲ್ಲುತ್ತೇವೆ. ಜನರ ಮದ್ಯೆ ನಿಂತು ಸಹಕಾರ ಮಾಡುತ್ತೇವೆ ಎಂದರು. ಕಾನೂನನ್ನು ಗೌರವಿಸಿಕೊಂಡು ಸಂಪ್ರದಾಯ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡಿ ನಾನೂ ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆಯನ್ನು ನೀಡಿದರು.
ಜಿಲ್ಲಾಧ್ಯಕ್ಷರ ಜೊತೆಗೆ ಮಾಜಿ ಶಾಸಕರಾದ ಸಂಜೀವ ಮಠಂದೂರು,ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಉಜಿರೆಮಾರು, ವಿಟ್ಲ ಪಟ್ಟಣ ಪಂಚಾಯತ್ ಅದ್ಯಕ್ಷರಾದ ಕರುಣಾಕರ ನಾಯ್ತೊಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶೋಕ್ ಕುಮಾರ್ ಶೆಟ್ಟಿ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಳೆದ ಹಲವಾರು ವರ್ಷಗಳಿಂದ ಕೋಮು ಸಂಘರ್ಷಗಳಿoದ ತತ್ತರಿಸುತ್ತಿದ್ದ ಕರಾವಳಿಯನ್ನು ಹತೋಟಿಗೆ ತರಲು ಪ್ರತಿಯೊಬ್ಬರಿಗೂ ಸಾಮರಸ್ಯದ ಜೀವನ ಮತ್ತು ನ್ಯಾಯ ಸಮ್ಮತವಾದ ಬದುಕು ನೀಡಲು ಆಡಳಿತ ವ್ಯವಸ್ಥೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಿದ ಬಳಿಕ ಬಹುತೇಕ ಅಕ್ರಮ ಚಟುವಟಿಕೆಗಳು ಸೇರಿದಂತೆ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿತ್ತು. ಅದರಂತೆ ಜೂಜು, ಕೋಳಿಅಂಕ ಸೇರಿದಂತೆ ತಡರಾತ್ರಿಗಳಲ್ಲಿ ನಡೆಯುವ ಮೋಜಿನ ಕಾರ್ಯಕ್ರಮಗಳಿಗೂ ಬ್ರೇಕ್ ನೀಡಲಾಗಿತ್ತು. ಆದರೆ ಕೇಪು ಉಳ್ಳಾಲ್ತಿ ಕ್ಷೇತ್ರದಲ್ಲಿ ಧಾರ್ಮಿಕ ನಂಟು ಹೊಂದಿರುವ ಜೂಜುರಹಿತವಾಗಿ ನಡೆಯುವ ಕೋಳಿ ಅಂಕಕ್ಕೆ ಕೋಳಿ ಅಂಕ ಪ್ರಿಯರು, ದೈವಾಭಿಮಾನಿಗಳು ಕೊನೆಯ ಘಳಿಗೆವರೆಗೂ ಪರವಾನಿಗೆಯ ನಿರೀಕ್ಷೆಯಲ್ಲಿದ್ದರು. ಆದರೆ ಕೋಳಿ ಅಂಕಕ್ಕೆ ಪರ್ಮಿಷನ್ ಸಿಗಲಿಲ್ಲ ಎಂದರೆ ನಾವು ಜೂಜುರಹಿತವಾಗಿ ಕೋಳಿಅಂಕವನ್ನು ಸಾಂಪ್ರದಾಯಿಕವಾಗಿ ಮಾಡಲೇಬೇಕು ಎಂಬುವುದು ಭಕ್ತರ ನಿಲುವು ಆಗಿತ್ತು. ಇದೀಗ ಸಂಪ್ರದಾಯ ಮತ್ತು ಕಾನೂನು ವ್ಯವಸ್ಥೆಗಳ ಮದ್ಯೆ ರಾಜಕೀಯ ನುಸುಳಿದೆ. ಮುಂದೆ ಏನಾಗುವುದೋ ಕಾದುನೋಡಬೇಕು.

Continue Reading
Advertisement

award

ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಡಾ. ಅರುಣ್ ಕೆ. ಮತ್ತು ಎಸಿಪಿ ನಜ್ಮಾ ಫಾರೂಕಿ ಸೇರಿದಂತೆ ಜಿಲ್ಲೆಯ ಹಲವು ಪೊಲೀಸರಿಗೆ ಮುಖ್ಯಮಂತ್ರಿ ಚಿನ್ನದ ಪದಕದ ಗೌರವ

Published

on

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ (SP) ಡಾ. ಅರುಣ್ ಕೆ. ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ. ಅವರೊಂದಿಗೆ ಮಂಗಳೂರು ನಗರದ ಸಂಚಾರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ನಜ್ಮಾ ಫಾರೂಕಿ ಅವರಿಗೂ ಚಿನ್ನದ ಪದಕ ಪ್ರಕಟಗೊಂಡಿದೆ.


ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಗೆ 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕದ ಗರಿ ಪ್ರಕಟಗೊಂಡಿದ್ದು, ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಈ ಗೌರವವನ್ನು ಘೋಷಿಸಿದೆ.
ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸ್ಪೆಷಲ್ ಎಆರ್‌ಎಸ್‌ಐ, 7ನೇ ಪಡೆ ಕೆಎಸ್‌ಆರ್‌ಪಿಯ ಕೆ.ಎಂ. ಶಿವಶೇಖರ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಡಿಎಆರ್ ವಿಭಾಗದ ಎಎಸ್‌ಐ ತಿಲಕ್ ರಾಜ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಲ್ಲದೆ, ಬಂಟ್ವಾಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಇರ್ಷಾದ್ ಪಿ. , ಮಂಗಳೂರು ನಗರದ ಊರ್ವ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಲಲಿತಾಲಕ್ಷ್ಮಿ , ಬೆಳ್ತಂಗಡಿ ಗ್ರಾಮಾಂತರ ಠಾಣೆಯ ವಿಜಯ ಕುಮಾರ್ ರೈ , ಕಂಕನಾಡಿ ನಗರ ಠಾಣೆಯ ಜಯಾನಂದ ಎನ್., ಮತ್ತು ಮಂಗಳೂರು ಸೈಬರ್ ಕ್ರೈಂ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗಳಾದ ಮಣಿ ಎಂ.ಎನ್. ಹಾಗೂ ಸತೀಶ್ ಅವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಈ ಪದಕ ಪ್ರದಾನ ಸಮಾರಂಭವು ಏಪ್ರಿಲ್ 02, 2026 ರಂದು ಬೆಂಗಳೂರಿನಲ್ಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಪದಕ ವಿಜೇತ ಅಧಿಕಾರಿಗಳು ಮಾರ್ಚ್ 29 ರಿಂದಲೇ ಬೆಂಗಳೂರಿನ ಕೆಎಸ್‌ಆರ್‌ಪಿ 3ನೇ ಪಡೆಯಲ್ಲಿ ನಡೆಯುವ ಪೂರ್ವಾಭ್ಯಾಸದಲ್ಲಿ ಭಾಗವಹಿಸಲಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕರ ಕಚೇರಿ ತಿಳಿಸಿದೆ.

Continue Reading

accident

ತೊಕ್ಕೊಟ್ಟು ಫ್ಲೈಓವರ್ ಮೇಲೆ ರೌಡಿಶೀಟರ್ ಆರಿಫ್ ಭೀಕರ ಹತ್ಯೆ: ಸಿನಿಮೀಯ ಶೈಲಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ

Published

on

ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲೆ ಶುಕ್ರವಾರ ಮುಂಜಾನೆ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಕೊಲೆಯಾದ ವ್ಯಕ್ತಿಯನ್ನು ತಲಪಾಡಿಯ ಮುಳ್ಳುಗುಡ್ಡೆ ಹೌಸ್ ನಿವಾಸಿ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ (46) ಎಂದು ಗುರುತಿಸಲಾಗಿದೆ. ಧಕ್ಕೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದ ಆರಿಫ್, ಪ್ರತಿದಿನದಂತೆ ಇಂದು ಮುಂಜಾನೆ ತನ್ನ ಬೈಕ್‌ನಲ್ಲಿ ಮಂಗಳೂರಿನತ್ತ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಇಂದು ದುಷ್ಕರ್ಮಿಗಳು ಆರಿಫ್ ಗಾಗಿ ಫೈಓವರ್‌ ಮೇಲೆಯೇ ಕಾಯುತ್ತ ಕುಳಿತಿದ್ದು, ಆರಿಫ್‌ ಪ್ರಯಾಣಿಸುತ್ತಿದ್ದ ಬೈಕ್ ಅನ್ನು ಅಡ್ಡಗಟ್ಟಿ, ಬಳಿಕ ತಲೆ ಭಾಗಕ್ಕೆ ಗಂಭೀರವಾಗಿ ಕಡಿದು ಕೊಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್ ಬೈಕ್‌ನಲ್ಲಿ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದಾಗ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅತಿ ವೇಗವಾಗಿ ಬಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಆರಿಫ್ ರಸ್ತೆಗೆ ಬೀಳುತ್ತಿದ್ದಂತೆ, ಕಾರಿನಿಂದ ಇಳಿದು ಬಂದ ತಂಡವು ತಲವಾರ್ ಸೇರಿದಂತೆ ಮಾರಕಾಸ್ತ್ರಗಳಿಂದ ತಲೆ ಮತ್ತು ದೇಹದ ಭಾಗಕ್ಕೆ ಮನಬಂದಂತೆ ಕಡಿದು ಸಿನಿಮೀಯ ರೀತಿಯಲ್ಲಿ ಕೊಲೆಗೈದು ಪರಾರಿಯಾಗಿದೆ. ತೀವ್ರ ರಕ್ತಸ್ರಾವದಿಂದಾಗಿ ಆರಿಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪರಾಧ ಪ್ರಕರಣಗಳಲ್ಲಿ ತೊಡಗಿಸಿ ಕೊಂಡಿದ್ದ ಆರಿಫ್ ನನ್ನು ವೈಯಕ್ತಿಕ ದ್ವೇಷ ದಿಂದ ಹತ್ಯೆ ಗೈದಿರುವ ಶಂಕೆ ವ್ಯಕ್ತ ಪಡಿಸಿದ್ದಾರೆ.ಆರಿಫ್ ವಿರುದ್ಧ 2008ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನಂತರ ದೀರ್ಘಕಾಲ ಯಾವುದೇ ಪ್ರಕರಣಗಳಿರಲಿಲ್ಲ.


2022ರಲ್ಲಿ ಉಚ್ಚಿಲ ಸೇತುವೆ ಸಮೀಪ ಆತನ ಮೇಲೆ ಒಮ್ಮೆ ಕೊಲೆ ಯತ್ನ ನಡೆದಿತ್ತು, ಆ ಪ್ರಕರಣದಲ್ಲಿ ನೌಫಾಲ್ ಹಾಗೂ ತಂಡವನ್ನು ಪೊಲೀಸರು ಬಂಧಿಸಿದ್ದರು. ಹಳೆಯ ವೈಯಕ್ತಿಕ ದ್ವೇಷವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.’ ಹತ್ಯೆಗೆ ಸ್ಪಷ್ಟ ಕಾರಣ ಏನೆಂಬುದು ಪೊಲೀಸರ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಸದ್ಯಕ್ಕೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Continue Reading

cyber crime

AI ತಂತ್ರಜ್ಞಾನ ಬಳಸಿ ಕೋಮುದ್ವೇಷ ಹರಡುವ ವಿಡಿಯೋ ಹಂಚಿಕೆ: ಮಂಗಳೂರಿನ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

Published

on

ಮಂಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ವಿಡಿಯೋ ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಟ್ವಾಳ ಮೂಲದ ವ್ಯಕ್ತಿಯೊಬ್ಬನನ್ನು ಕಂಕನಾಡಿ ನಗರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕುಡೆಲ್ ಹೌಸ್ ನಿವಾಸಿ ಮಹಮ್ಮದ್ ರಫೀಕ್ (38) ಎಂದು ಗುರುತಿಸಲಾಗಿದೆ. ಈತ ಫೇಸ್‌ಬುಕ್‌ನಲ್ಲಿ “ನಝೀರ ಮಂಗಳೂರು” ಎಂಬ ಹೆಸರಿನ ಖಾತೆಯ ಮೂಲಕ ವಿವಾದಾತ್ಮಕ ಕೃತ್ಯ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

2025ರ ಅಕ್ಟೋಬರ್‌ನಲ್ಲಿ ಆರೋಪಿಯು ತನ್ನ ಫೇಸ್‌ಬುಕ್ ಖಾತೆಯಲ್ಲಿ AI ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದನು. ಇದು ಸಮಾಜದಲ್ಲಿ ಶಾಂತಿ ಕದಡುವ ಮತ್ತು ಕೋಮು ಸಂಘರ್ಷಕ್ಕೆ ಪ್ರಚೋದಿಸುವ ಉದ್ದೇಶ ಹೊಂದಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಮಂಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196, 353(1), ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 22, 2026 ರಂದು ಬೆಂಗಳೂರಿನಲ್ಲಿ ಆತನನ್ನು ದಸ್ತಗಿರಿ ಮಾಡಿದ್ದಾರೆ. ಬಳಿಕ ಆತನನ್ನು ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Continue Reading

Trending

Copyright © 2025 Deevatige