Problems
ಕುಸಿಯುವ ಹಂತದಲ್ಲಿದೆ ಮೈರ ಅಂಗನವಾಡಿ – ಪುಟಾಣಿಗಳ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟ!
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/05/9999999-1000x600.jpg&description=ಕುಸಿಯುವ ಹಂತದಲ್ಲಿದೆ ಮೈರ ಅಂಗನವಾಡಿ – ಪುಟಾಣಿಗಳ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟ!', 'pinterestShare', 'width=750,height=350'); return false;" title="Pin This Post">
ಬಂಟ್ವಾಳ: ಪುಟ್ಟ ಮಕ್ಕಳ ಭವಿಷ್ಯ ರೂಪಿಸಬೇಕಾದ ಅಂಗನವಾಡಿ ಕೇಂದ್ರವೊಂದು ಇಂದು ಅಪಾಯದ ಮನೆಯಂತಾಗಿದೆ. ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮೈರ ಅಂಗನವಾಡಿ ಕೇಂದ್ರವು ಕಳೆದ ಹತ್ತು ತಿಂಗಳಿಂದ ಕುಸಿಯುವ ಹಂತದಲ್ಲಿದ್ದರೂ, ಸಂಬಂಧಪಟ್ಟ ಶಿಶು ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಮಾತ್ರ ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ.
ಬಂಟ್ವಾಳ: ತಾಲೂಕಿನ ಕೇಪು ಗ್ರಾಮದ ಮೈರ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಕುಸಿಯುವ ಹಂತದಲ್ಲಿದ್ದರೂ ಶಿಶು ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಹತ್ತು ತಿಂಗಳಿಂದ ಸೂರ್ಯದರ್ಶನ ನೀಡುವ ಮೇಲ್ಚಾವಣಿ!
ಕಳೆದ 10 ತಿಂಗಳಿನಿಂದ ಈ ಅಂಗನವಾಡಿಯ ಮೇಲ್ಚಾವಣಿಯ ಹೆಂಚುಗಳು ಉದುರಿ ಬೀಳುತ್ತಿವೆ. ಚಾವಣಿ ಸಂಪೂರ್ಣ ಹಾನಿಗೊಳಗಾಗಿದ್ದು, ಕೇಂದ್ರದ ಒಳಗೆ ನೇರವಾಗಿ ಬಿಸಿಲು ಬೀಳುತ್ತಿದೆ. ಮಳೆಗಾಲ ಹತ್ತಿರ ಬರುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ತಲೆ ಮೇಲೆ ಹೆಂಚು ಬೀಳುವ ಭೀತಿಯಲ್ಲೇ ಮಕ್ಕಳು ಪಾಠ ಕೇಳುವಂತಾಗಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯರು ಹಲವು ಬಾರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೂ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ 10 ತಿಂಗಳು ಕಳೆದರೂ ದುರಸ್ತಿ ಕಾರ್ಯ ಆರಂಭವಾಗಿಲ್ಲ.

ತಾತ್ಕಾಲಿಕ ವ್ಯವಸ್ಥೆಯಿಂದಲೂ ಪ್ರಯೋಜನವಿಲ್ಲ:
ಕೇಂದ್ರದ ಅವ್ಯವಸ್ಥೆಯಿಂದಾಗಿ ಒಂದೆರಡು ತಿಂಗಳ ಕಾಲ ಸ್ಥಳೀಯ ಯುವಕ ಸಂಘದ ಕಾರ್ಯಾಲಯದಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ನಡೆಸಲಾಗಿತ್ತು. ಈಗ ಮತ್ತೆ ಕುಸಿಯುವ ಹಂತದಲ್ಲಿರುವ ಅದೇ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪೋಷಕರು-ಗ್ರಾಮಸ್ಥರ ಆಕ್ರೋಶ:
ಮೈರ ಅಂಗನವಾಡಿ ಕೇಂದ್ರದ ದುಸ್ಥಿತಿಯ ಬಗ್ಗೆ ಸ್ಪಂದಿಸದ ಕೇಪು ಗ್ರಾಮ ಪಂಚಾಯತ್ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ ವಿರುದ್ಧ ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪುಟಾಣಿಗಳ ಬದುಕಿನ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಮಳೆಗಾಲ ಬಂದರೆ ಏನಾಗುತ್ತೋ ಗೊತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿ ಮಾಡಬೇಕು” ಎಂದು ಪೋಷಕರು ಒತ್ತಾಯಿಸಿದ್ದಾರೆ.
ಇನ್ನಾದರೂ ಜವಾಬ್ದಾರಿಯುತ ಅಧಿಕಾರಿಗಳು ಎಚ್ಚೆತ್ತುಕೊಂಡು, ಯಾವುದೇ ಅನಾಹುತ ಸಂಭವಿಸುವ ಮುನ್ನ ಮೈರ ಅಂಗನವಾಡಿಯ ಹಣೆಬರಹವನ್ನು ಬದಲಿಸುತ್ತಾರೋ ಎಂದು ಕಾದು ನೋಡಬೇಕಿದೆ.



accident
ಮಂಗಳೂರು: ಕುಂಟಿಕಾನ್-ಕೊಟ್ಟಾರ ಸರ್ವಿಸ್ ರಸ್ತೆಯ ಚರಂಡಿ ಸ್ಲ್ಯಾಬ್ ಕುಸಿತ; ವಾಹನ ಸವಾರರ ಜೀವಕ್ಕೆ ಸಂಚಕಾರ!
ಮಂಗಳೂರು: ನಗರದ ಕುಂಟಿಕಾನ್ ಜಂಕ್ಷನ್‌ನಿಂದ ಕೊಟ್ಟಾರ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಮಧ್ಯೆ ಸಾರ್ವಜನಿಕರ ಜೀವಕ್ಕೆ ಆಪತ್ತು ತಂದೊಡ್ಡುವ ಘಟನೆಯೊಂದು ನಡೆದಿದೆ. ಇಲ್ಲಿನ ನೀರು ಹರಿದು ಹೋಗುವ ಚರಂಡಿ ಮೇಲೆ ಹಾಕಲಾಗಿದ್ದ ಸಿಮೆಂಟ್ ಸ್ಲ್ಯಾಬ್‌ಗಳು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಮಧ್ಯಾಹ್ನದ ವೇಳೆಗೆ ಸಂಪೂರ್ಣ ಕುಸಿತ:
ಕುಂಟಿಕಾನ್ ಡಿ-ಮಾರ್ಟ್ ಹಾಗೂ ಬಿ.ಎಂ.ಎಸ್ ಹೋಟೆಲ್ ಮುಂಭಾಗದ ಸರ್ವಿಸ್ ರಸ್ತೆಯ ಅಂಡರ್‌ಪಾಸ್ ತಿರುವಿನಲ್ಲೇ ಈ ಅಪಾಯಕಾರಿ ಕಂದಕ ಸೃಷ್ಟಿಯಾಗಿದೆ. ಇಂದು (ಮೇ 29) ಮುಂಜಾನೆ ಸ್ವಲ್ಪ ಪ್ರಮಾಣದಲ್ಲಿ ಕುಸಿದಿದ್ದ ಈ ಸ್ಲ್ಯಾಬ್, ಮಧ್ಯಾಹ್ನದ ವೇಳೆಗೆ ವಾಹನಗಳ ಸಂಚಾರದ ಒತ್ತಡಕ್ಕೆ ಸಿಲುಕಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪರಿಣಾಮ ರಸ್ತೆಯ ಮಧ್ಯದಲ್ಲೇ ದೊಡ್ಡದೊಂದು ಕಂದಕ ನಿರ್ಮಾಣವಾಗಿದೆ.

ಸ್ಥಳೀಯರಿಂದ ಹಳೆ ಟೈರ್ ಇಟ್ಟು ಎಚ್ಚರಿಕೆ:
ಯಾವುದೇ ಕ್ಷಣದಲ್ಲೂ ದ್ವಿಚಕ್ರ ವಾಹನಗಳು ಅಥವಾ ಇತರ ವಾಹನಗಳು ಈ ಕಂದಕಕ್ಕೆ ಬಿದ್ದು ಭೀಕರ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಸವಾರರ ಗಮನಕ್ಕೆ ಬರಲೆಂದು ಸ್ಥಳೀಯರೇ ಕಂದಕದ ಮೇಲೆ ಹಳೇ ಟೈರ್ ಒಂದನ್ನು ಇಟ್ಟು ತಾತ್ಕಾಲಿಕ ಎಚ್ಚರಿಕೆ ಫಲಕದಂತೆ ರೂಪಿಸಿದ್ದಾರೆ. ಆದರೂ ರಾತ್ರಿ ವೇಳೆಯಲ್ಲಿ ಅಥವಾ ಅತಿ ವೇಗವಾಗಿ ಬರುವ ವಾಹನಗಳಿಗೆ ಇದು ಕಾಣಿಸದೆ ದೊಡ್ಡ ಅನಾಹುತ ಸಂಭವಿಸುವ ಭೀತಿ ದಟ್ಟವಾಗಿದೆ.

ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ:
ಕುಂಟಿಕಾನ್ ಮತ್ತು ಕೊಟ್ಟಾರ ಭಾಗವು ಅತ್ಯಂತ ಬ್ಯುಸಿ ರಸ್ತೆಯಾಗಿದ್ದು, ನಿರಂತರವಾಗಿ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ರಸ್ತೆ ಇಷ್ಟೊಂದು ಅಪಾಯಕಾರಿಯಾಗಿದ್ದರೂ ಸಂಬಂಧಪಟ್ಟ ಇಲಾಖೆಯಾಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಇತ್ತ ತಲೆಹಾಕದಿರುವುದು ಸ್ಥಳೀಯರ ಹಾಗೂ ವಾಹನ ಸವಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
“ಯಾವುದೋ ದೊಡ್ಡ ಜೀವಹಾನಿ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸ್ಲ್ಯಾಬ್‌ಗಳನ್ನು ದುರಸ್ತಿಗೊಳಿಸಬೇಕು. ವಾಹನ ಸವಾರರ ಜೀವ ರಕ್ಷಿಸಬೇಕು” ಎಂದು ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರು ಬಲವಾಗಿ ಆಗ್ರಹಿಸಿದ್ದಾರೆ.
ಮಾಹಿತಿ ನೀಡಿದವರು : ಸತೀಶ್ ಕಾಪಿಕಾಡು, ಹಿರಿಯ ವರದಿಗಾರರು



Mangaluru
ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಮುಂದೆ ಡ್ರೈನೇಜ್ ಕೊಳಚೆ ನೀರಿನ “ಈಜುಕೊಳ” – ಸ್ಮಾರ್ಟ್ ಸಿಟಿ ಹೊಗಳಿಕೆಗೆ ಜನರ ಹಿಡಿಶಾಪ
ಮಂಗಳೂರು: ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡುವ ಹೆಸರಿನಲ್ಲಿ ಕೋಟಿ ಕೋಟಿ ಖರ್ಚು ಮಾಡುತ್ತಿರುವ ಆಡಳಿತ ವ್ಯವಸ್ಥೆಗೆ, ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಮುಂದಿನ ರಾಜ್ಯ ಹೆದ್ದಾರಿ ಬದಿಯ ಅವ್ಯವಸ್ಥೆ ಕಣ್ಣಿಗೆ ಕಾಣುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರ ಬಾಯಲ್ಲಿ ಕೇಳಿಬರುತ್ತಿದೆ.
ಆಸ್ಪತ್ರೆಯ ಪಕ್ಕದಲ್ಲೇ ಡ್ರೈನೇಜ್ ಕೊಳಚೆ ನೀರು ಶೇಖರಣೆಯಾಗಿ ದೊಡ್ಡ ಈಜುಕೊಳದಂತಾಗಿದೆ. ನೊರೆ, ಕಸ, ದುರ್ವಾಸನೆ ಹೊರಸೂಸುವ ಈ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗುತ್ತಿದ್ದು, ರೋಗ ಹರಡುವ ಆತಂಕವೂ ಹೆಚ್ಚಾಗಿದೆ.

ರೋಗಿಗಳೇ ಮೂಗು ಮುಚ್ಚಿ ಸಂಚರಿಸುವ ಪರಿಸ್ಥಿತಿ
ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು, ಆಸ್ಪತ್ರೆ ಮುಂಭಾಗದ ವಾಣಿಜ್ಯ ಸಂಕೀರ್ಣಗಳಲ್ಲಿನ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ದಿನನಿತ್ಯ ಮೂಗು ಮುಚ್ಚಿ ಬದುಕುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆಗಾಗಿ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ಆಸ್ಪತ್ರೆ ಮುಂದೆಯೇ ಈ ಕೊಳಚೆ ನೀರಿನ ದುರ್ವಾಸನೆಯನ್ನು ಸಹಿಸಿಕೊಂಡು ನಡೆದಾಡುವ ದುಃಸ್ಥಿತಿ ಇದೆ.
“ಆಸ್ಪತ್ರೆ ಎಂದರೆ ಸ್ವಚ್ಛತೆ, ಆರೋಗ್ಯದ ಪ್ರತೀಕ. ಆದರೆ ಇಲ್ಲಿಯೇ ಡ್ರೈನೇಜ್ ನೀರು ನಿಂತು ಈಜುಕೊಳವಾಗಿದ್ದರೆ ರೋಗ ಗುಣವಾಗೋದಾ, ಇಲ್ಲಾ ಹೊಸ ರೋಗ ತಗುಲುತ್ತಾ?” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಮಾರ್ಟ್ ಸಿಟಿಗೆ ವ್ಯಂಗ್ಯ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ, ಡ್ರೈನೇಜ್ ಸುಧಾರಣೆ ಆಗುತ್ತದೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮುಂದೆಯೇ ಇಂಥ ನರಕಯಾತನೆ ಇದ್ದರೆ, ಸ್ಮಾರ್ಟ್ ಸಿಟಿ ಎಂಬುದು ಕೇವಲ ಕಾಗದ ಮೇಲಷ್ಟೇ ಎಂಬುದು ಸಾಬೀತಾಗಿದೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ತಕ್ಷಣ ಡ್ರೈನೇಜ್ ನೀರು ಹರಿದು ಹೋಗಲು ಕ್ರಮ ಕೈಗೊಂಡು, ಶುಚಿಗೊಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.



Article
ಮೈನಿಂಗ್ ಮಾಫಿಯಾದ ಅಟ್ಟಹಾಸಕ್ಕೆ ಬಲಿಯಾಗುತ್ತಿದೆಯೇ ವಿಟ್ಲದ 35 ವರ್ಷ ಹಳೆಯ ಸೇತುವೆ? ಸಾವಿರಾರು ಜನರಿಗೆ ತಪ್ಪದ ನರಕಯಾತನೆ!
ವಿಟ್ಲ: ಜನಪ್ರತಿನಿಧಿಗಳ ಉದಾಸೀನತೆ, ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಮೈನಿಂಗ್ ಮಾಫಿಯಾದ ದಾಂಧಲೆಗೆ ವಿಟ್ಲ ಹೋಬಳಿಯ ಪ್ರಮುಖ ಸಂಪರ್ಕ ರಸ್ತೆ ಮತ್ತು ಸೇತುವೆ ಸಂಪೂರ್ಣ ಹದಗೆಟ್ಟಿದ್ದು, ಸಾವಿರಾರು ಜನರ ಜೀವನಾಡಿ ಕಿತ್ತುಹೋಗಿದೆ. ವಿಟ್ಲ-ಚಂದಳಿಕೆ-ಮಾಡತ್ತಾರು-ಅಜ್ಜಿನಡ್ಕ ಸಂಪರ್ಕ ರಸ್ತೆಯ ಕಾಯರ್ ಮಾರ್ ಕೂಟೇಲು ಎಂಬಲ್ಲಿನ ಏಕೈಕ ಸಂಪರ್ಕ ಸೇತುವೆ ಕ್ವಾರಿ ಲಾರಿಗಳ ಅಟ್ಟಹಾಸಕ್ಕೆ ಸಂಪೂರ್ಣ ಬಿರುಕು ಬಿಟ್ಟು ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಭೀತಿ ಎದುರಾಗಿದೆ.

35 ವರ್ಷಗಳ ಇತಿಹಾಸದ ಸೇತುವೆ ಈಗ “ಅಸ್ಥಿಪಂಜರ”!
ಸುಮಾರು 35 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ನಿರ್ಮಾಣವಾಗಿದ್ದ ಈ ಕಾಯರ್ ಮಾರ್ ಕೂಟೇಲು ಸೇತುವೆ ಈ ಭಾಗದ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳ ಏಕೈಕ ಜೀವನಾಡಿಯಾಗಿದೆ. ಆದರೆ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾನೂನು ಗಾಳಿಗೆ ತೂರಿ ನಡೆಯುತ್ತಿರುವ ಅಧಿಕೃತ ಹಾಗೂ ಅನಧಿಕೃತ ಕಲ್ಲಿನ ಕ್ವಾರಿಗಳ ಟಿಪ್ಪರ್ ಲಾರಿಗಳ ಅತಿಭಾರದಿಂದಾಗಿ ಸೇತುವೆಯ ಅಡಿಭಾಗ ಸಂಪೂರ್ಣ ಬಿರುಕು ಬಿಟ್ಟಿದೆ. ಒಳಗಿನ ಕಬ್ಬಿಣದ ಸರಳುಗಳು ತುಂಡಾಗಿ ಹೋಗಿದ್ದು, ಸೇತುವೆ ಈಗ *”ಅನಾಥ ಶವದ ಅಸ್ಥಿಪಂಜರ”*ದಂತಾಗಿದೆ.

ಮಳೆ ಬಂದರೆ ಜಲಾವೃತ! ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ಯಾವುದೇ ಚರಂಡಿಗಳ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆಗಾಲ ಬಂತೆಂದರೆ ಸಾಕು, ಇಡೀ ಸೇತುವೆಯ ಮೇಲೆ ಎರಡು ಅಡಿಗಳಷ್ಟು ನೀರು ಶೇಖರಣೆಯಾಗಿ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ದುಸ್ಥಿತಿ ಇದೆ.
ಎಕ್ಕುಟ್ಟು ಹೋದ 7 ಕಿ.ಮೀ ರಸ್ತೆ: ನರಕಯಾತನೆ!
ವಿಟ್ಲ ಕಸಬಾ ಮತ್ತು ವಿಟ್ಲ ಮುಡ್ನೂರು ಗ್ರಾಮದ ಮೂಲಕ ಹಾದು ಹೋಗುವ, ಚಂದಳಿಕೆಯಿಂದ ಮಾಡತ್ತಡ್ಕ, ಪೈಸಾರಿ, ಅಜ್ಜಿನಡ್ಕ ಸಂಪರ್ಕಿಸುವ ಸುಮಾರು 7 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಸಂಚಾರ ಬಿಡಿ, ಕನಿಷ್ಠ ಜನಸಾಮಾನ್ಯರು ನಡೆದಾಡಲೂ ಅಸಾಧ್ಯವಾದ “ನರಕಯಾತನೆ”ಯನ್ನು ಸ್ಥಳೀಯರು ಅನುಭವಿಸುತ್ತಿದ್ದಾರೆ. ಈ ರಸ್ತೆಯ ದುಸ್ಥಿತಿಗೆ ಗ್ರಾಮ ಪಂಚಾಯತ್, ಕಂದಾಯ ಮತ್ತು ಗಣಿ ಇಲಾಖೆಯ ಭ್ರಷ್ಟ ವ್ಯವಸ್ಥೆಯೇ ನೇರ ಕಾರಣ ಎಂಬುದು ಸ್ಥಳೀಯರ ಗಂಭೀರ ಆರೋಪವಾಗಿದೆ.

ಕ್ವಾರಿ-ಕ್ರಷರ್ ಮಾಫಿಯಾದ ದಾಂಧಲೆ
ವಿಟ್ಲ ಮುಡ್ನೂರು ಗ್ರಾಮವೊಂದರಲ್ಲೇ ಪ್ರಸ್ತುತ 8 ಕಪ್ಪು ಕಲ್ಲಿನ ಕ್ವಾರಿಗಳು ಮತ್ತು 4 ಕ್ರಷರ್‌ಗಳು ಎಗ್ಗಿಲ್ಲದೇ ಅಟ್ಟಹಾಸ ಮೆರೆಯುತ್ತಿವೆ. ದಿನಂಪ್ರತಿ ಜಲ್ಲಿ, ಎಂ-ಸ್ಯಾಂಡ್ ಸಾಗಿಸುವ ನೂರಕ್ಕೂ ಹೆಚ್ಚು ಭಾರಿ ಗಾತ್ರದ ಟಿಪ್ಪರ್‌ಗಳು ದಿನವಿಡೀ ಈ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ರಸ್ತೆಗಳು ಹೊಂಡ-ಗುಂಡಿಗಳಾಗಿ ಮಾರ್ಪಟ್ಟಿವೆ.
ಸ್ಫೋಟದ ಭೀತಿಯ ಬೆನ್ನಲ್ಲೇ ಈಗ ಸೇತುವೆ ಕುಸಿತದ ಆತಂಕ!
ವರ್ಷದ ಹಿಂದೆ ಇದೇ ಭಾಗದ ಗುಡ್ಡವೊಂದರಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಭಾರಿ ಪ್ರಮಾಣದ ಸ್ಫೋಟಕಗಳು ಉರಿ ಬಿಸಿಲಿಗೆ ಸ್ಫೋಟಗೊಂಡು ಹಲವು ಮನೆಗಳು ಛಿದ್ರಗೊಂಡಿದ್ದವು. ಗುಡ್ಡದಲ್ಲಿ ಸ್ಫೋಟ ಸಂಭವಿಸಿದ್ದರಿಂದ ಅದೃಷ್ಟವಶಾತ್ ಸಾವು-ನೋವು ತಪ್ಪಿತ್ತು. ದಿನಂಪ್ರತಿ ಇಲ್ಲಿ ಯುದ್ಧಭೂಮಿಯ ಭಯಾನಕ ಸದ್ದು ಬೆಚ್ಚಿ ಬೀಳಿಸುತ್ತಲೇ ಇದೆ. ಇಲ್ಲಿನ ಸುತ್ತು ಮುತ್ತು ಕ್ವಾರಿ ಸ್ಫೋಟದ ಸದ್ದಿಗೆ ಮನೆಗಳೆಲ್ಲವೂ ಬಿರುಕು ಬಿಟ್ಟಿದೆ. ಆದರೂ ಎಚ್ಚೆತ್ತುಕೊಳ್ಳದ ಗಣಿ ಇಲಾಖೆ ಮತ್ತು ಪಂಚಾಯತ್, ಮಾಫಿಯಾಗೆ ಮಣೆ ಹಾಕುತ್ತಲೇ ಇದೆ. ಈಗ ಅದೇ ಮಾಫಿಯಾದ ಟಿಪ್ಪರ್ ಲಾರಿಗಳ ಅತಿಭಾರದಿಂದ ಸೇತುವೆ ಕುಸಿಯುವ ಹಂತಕ್ಕೆ ತಲುಪಿದ್ದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು,ಹೋರಾಟಗಾರರು ಪಕ್ಷಭೇದವಿಲ್ಲದೆ ಇಲ್ಲಿ ಬಡ ಜನತೆಗೆ ಸಮಸ್ಯೆ ನೀಡುತ್ತಿರುವುದು ನಡೆಯುತ್ತಲೇ ಇದೆ.
ಸ್ಥಳೀಯರ ಆಕ್ರೋಶ – ಉಗ್ರ ಹೋರಾಟದ ಎಚ್ಚರಿಕೆ
“ಕ್ವಾರಿ ಮಾಫಿಯಾದಿಂದ ನಮ್ಮ ರಸ್ತೆ, ಸೇತುವೆ ಸಂಪೂರ್ಣ ನಾಶವಾಗಿದೆ. ದೂರು ನೀಡಿದರೂ ಗಣಿ ಇಲಾಖೆಯಾಗಲಿ, ಪಂಚಾಯತ್ ಆಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾಳೆ ಸೇತುವೆ ಕುಸಿದು ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಜವಾಬ್ದಾರರು? ನಮ್ಮ ಜೀವಕ್ಕೆ ಬೆಲೆಯೇ ಇಲ್ಲವೇ?” – ಸ್ಥಳೀಯ ಗ್ರಾಮಸ್ಥರು
ಗ್ರಾಮಸ್ಥರ ಪ್ರಮುಖ ಬೇಡಿಕೆಗಳು:
ತಕ್ಷಣವೇ ಹದಗೆಟ್ಟ 7 ಕಿ.ಮೀ ರಸ್ತೆಯನ್ನು ದುರಸ್ತಿಗೊಳಿಸಬೇಕು.
ಕುಸಿಯುವ ಹಂತದಲ್ಲಿರುವ ಕಾಯರ್ ಮಾರ್ ಕೂಟೇಲು ಸೇತುವೆಯನ್ನು ತುರ್ತಾಗಿ ಬಲಪಡಿಸಬೇಕು.
ನಿಯಮ ಬಾಹಿರವಾಗಿ ಕಾರ್ಯಾಚರಿಸುತ್ತಿರುವ ಅಕ್ರಮ ಕ್ವಾರಿ ಹಾಗೂ ಕ್ರಷರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ರಸ್ತೆ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ತಕ್ಷಣ ಚರಂಡಿ ನಿರ್ಮಿಸಬೇಕು.
ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಭಾಗದ ನೂರಾರು ಕುಟುಂಬಗಳ ರಕ್ಷಣೆಗೆ ಧಾವಿಸುತ್ತಾರಾ ಅಥವಾ ದೊಡ್ಡ ದುರಂತವೊಂದು ಸಂಭವಿಸುವವರೆಗೆ ಕಾಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ



-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada5 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
