Mangaluru
ಎಸ್ ಎಲ್ ವಿ ಬುಕ್ ಹೌಸ್ ಗೆ ಟೈಮ್ಸ್ ಬ್ಯುಸಿನೆಸ್ ಅವಾರ್ಡ್ಸ್“; ವಿಶ್ವಾಸಾರ್ಹ ಶಾಲಾ ಸಾಮಗ್ರಿಗಳ ಬ್ರ್ಯಾಂಡ್” ವಿಭಾಗದಲ್ಲಿ ಪ್ರಶಸ್ತಿ ; ಮಂಗಳೂರಿನಲ್ಲಿ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ ; ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ದಿವಾಕರ್ ದಾಸ್ ನೇರ್ಲಾಜೆ
ಪುಸ್ತಕ ಮಾರಾಟ ಮಳಿಗೆಯಲ್ಲಿ ರಾಜ್ಯದ್ಯಂತ ಹೆಸರುವಾಸಿಯಾದ SLV ಬುಕ್ ಹೌಸ್‌ಗೆ ಟೈಮ್ಸ್ ಬಿಸಿನೆಸ್ ಆವಾರ್ಡ್ ಲಭಿಸಿದೆ. .ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಸಂಸ್ಥೆಗಳು ಮತ್ತು ಉದ್ಯಮಿಗಳನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡುವ ಕಾರ್ಯಕ್ರಮವನ್ನು ದ ಟೈಮ್ಸ್ ಆಫ್ ಇಂಡಿಯಾ ಆಯೋಜಿಸಿತ್ತು. SLV ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ದಿವಾಕರ್ ದಾಸ್ ನೇರ್ಲಾಜೆಯವರ ಎಸ್‌ಎಲ್‌ವಿ ಬುಕ್ ಹೌಸ್ ಸಂಸ್ಥೆಗೆ ಮಂಗಳೂರಿನ ಅವತಾರ್ ಹೋಟೆಲ್‌ನಲ್ಲಿ ನಡೆದ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ & ಕಾಂಕ್ಲೇವ್ 2026 ಕಾರ್ಯಕ್ರಮದಲ್ಲಿ “ವಿಶ್ವಾಸಾರ್ಹ ಶಾಲಾ ಸಾಮಗ್ರಿಗಳ ಬ್ರ್ಯಾಂಡ್” ವಿಭಾಗದಲ್ಲಿ ಪ್ರಶಸ್ತಿ ಲಭಿಸಿತು.

ದ ಟೈಮ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ & ಕಾಂಕ್ಲೇವ್ 2026 ಕಾರ್ಯಕ್ರಮವು ಮಂಗಳೂರಿನ ಅವತಾರ್ ಹೋಟೆಲ್‌ನಲ್ಲಿ ನಡೆಯಿತು. ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಭಾಗಗಳ ವಿವಿಧ ಕ್ಷೇತ್ರಗಳ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುಸ್ತಕ ಮಾರಾಟ ಮಳಿಗೆಯಲ್ಲಿ ರಾಜ್ಯದ್ಯಂತ ಹೆಸರುವಾಸಿಯಾದ SLV ಬುಕ್ ಹೌಸ್‌ಗೆ ಟೈಮ್ಸ್ ಬಿಸಿನೆಸ್ ಎವಾರ್ಡ್ ನೀಡಿ ಗೌರವಿಸಲಾಯಿತು.ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಸಂಸ್ಥೆಗಳು ಮತ್ತು ಉದ್ಯಮಿಗಳನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಲಾಯಿತು.
ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಪ್ರದಾನಿಸಿದರು.
ಎಸ್‌ಎಲ್‌ವಿ ಬುಕ್ ಹೌಸ್ ಸಂಸ್ಥೆಗೆ “ವಿಶ್ವಾಸಾರ್ಹ ಶಾಲಾ ಸಾಮಗ್ರಿಗಳ ಬ್ರ್ಯಾಂಡ್” ವಿಭಾಗದಲ್ಲಿ ಪ್ರಶಸ್ತಿ ಲಭಿಸಿತು. ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ದಿವಾಕರ್ ದಾಸ್ ನೇರ್ಲಾಜೆಯವರು ಮತ್ತು ಎಸ್ ಎಲ್ ವಿ ಬುಕ್ ಹೌಸ್ ನ ಪ್ರಧಾನ ವ್ಯವಸ್ಥಾಪಕರಾದ ರಾಜಾ ಅಂಚನ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಚಂದ್ರಕಾಂತ್ ಬೆಂಗಳೂರು, ರಾಮ್ ದಾಸ್ ಶೆಟ್ಟಿ ವಿಟ್ಲ, ಯೋಗೀಶ್ ನೇರ್ಲಾಜೆ, ಅಮಿತ್ ಮೈಸೂರು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ದಿವಾಕರ್ ದಾಸ್ ರವರು ಈ ಪ್ರಶಸ್ತಿಯನ್ನು ನಾವು ಗ್ರಾಹಕರಿಗೆ ನೀಡಿದ ಉತ್ತಮ ಸೇವೆಯಿಂದ ಈ ಪ್ರಶಸ್ತಿ ಲಭಿಸಿದೆ. ಹಾಗಾಗಿ ಈ ಪ್ರಶಸ್ತಿಯನ್ನು ನಮ್ಮ ಗ್ರಾಹಕರಿಗೆ ಮತ್ತು ಗ್ರಾಹಕಾರೊಂದಿಗೆ ವಿಶೇಷ ಸೇವೆಯನ್ನು ನೀಡಿದ ನಮ್ಮ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ ಎಂದರು.
ರಾಜ್ಯಾದ್ಯಂತ ಪುಸ್ತಕ ಮಾರಾಟ ಮಳಿಗೆಯಲ್ಲಿ ಹೆಸರುವಾಸಿಯಾದ SLV ಬುಕ್ ಹೌಸ್ ಬೆಂಗಳೂರು, ಮೈಸೂರು, ಚಾಮರಾಜನಗರ, ಪುತ್ತೂರು, ಮೂಡಬಿದ್ರೆ, ಮಂಗಳೂರಿನ ಬಿಜೈ, ಮೇರಿಹಿಲ್, ಮಾರ್ನೆಮಿ ಕಟ್ಟೆ, ಕೊಡಿಯಾಲ್ ಬೈಲ್ ನಲ್ಲಿ ಕಾರ್ಯಾಚರಿಸುತ್ತಿರುತ್ತಿದ್ದು , ಇದೀಗ ಕೊಡಗಿನ ಕುಶಾಲನಗರದಲ್ಲಿ ಕೆಲವೇ ದಿನಗಳಲ್ಲಿ ಹೊಸ ಶಾಖೆ ಶುಭಾರಂಭಗೊಳ್ಳಲಿದೆ.
crime
9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಕೊಣಾಜೆ ಪೊಲೀಸರಿಂದ ಆರೋಪಿಯ ಬಂಧನ
ಮಂಗಳೂರು: ಬಾಲಕನಿಗೆ ಹಣ ಮತ್ತು ತಿಂಡಿಯ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಕೊಣಾಜೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಡ್ಯಾರ್ ನಿವಾಸಿ, 33 ವರ್ಷದ ಆಶೀಶ್ ಪೂಜಾರಿ ಬಂಧಿತ ಆರೋಪಿ. ಈತ ಬಿಜೈನಲ್ಲಿರುವ ಎಂ.ಎಸ್.ಸಿ (MSC) ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ದಿನಾಂಕ 18-03-2026 ರಂದು ದಾಖಲಾದ ದೂರಿನ ಪ್ರಕಾರ, ಆರೋಪಿಯು 9 ವರ್ಷದ ಬಾಲಕನಿಗೆ ಹಣ ಮತ್ತು ತಿಂಡಿ ನೀಡುವುದಾಗಿ ನಂಬಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಬಾಲಕನಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅಸಭ್ಯ ಕೃತ್ಯಗಳಲ್ಲಿ ತೊಡಗುವಂತೆ ಪ್ರೇರೇಪಿಸಿರುವುದು ತನಿಖೆಯ ವೇಳೆ ದೃಢಪಟ್ಟಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯ ಸೆಕ್ಷನ್ 4, 6, 12 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಸೆಕ್ಷನ್ 75ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
crime
ತಂದೆ-ಮಗ ಅಂದರ್..ಹಲ್ಲೆ ನಡೆಸಿ ವೀಡಿಯೋ ಮಾಡಿ ಅನೈತಿಕ ಪೊಲೀಸ್ ಗಿರಿ..ರೈಲ್ವೆ ಟ್ರ್ಯಾಕ್ ಬಳಿ ಕುಳಿತು ಅಪ್ರಾಪ್ತ ಶಾಲಾ ಬಾಲಕ-ಬಾಲಕಿ ಟೈಂಪಾಸ್..
ಮಂಗಳೂರು ನಗರದ ಅತ್ತಾವರ ಬಾಬುಗುಡ್ಡೆ ಎಂಬಲ್ಲಿ ರೈಲ್ವೆ ಟ್ರ್ಯಾಕ್ ಬಳಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿ ಕುಳಿತು ಟೈಂಪಾಸ್ ಮಾಡುತ್ತಿದ್ದ ಸ್ಥಳಕ್ಕೆ ಬಂದ ಇಬ್ಬರು ವಿಚಾರಣೆ ನಡೆಸಿ ವಿದ್ಯಾರ್ಥಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆಗೈದು ಹಲ್ಲೆ ನಡೆಸಿ ವೀಡಿಯೋ ಮಾಡಿದ್ದಲ್ಲದೇ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ.
ಅಪ್ರಾಪ್ತ ಬಾಲಕನ ತಂದೆ ನೀಡಿದ ದೂರಿನಂತೆ ಅತ್ತಾವರ ನಿವಾಸಿ ಸಂತೋಷ್ @ಸ್ಟೀವನ್ ಮೊಂತೆರೋ ಮತ್ತು ಆತನ ಮಗ ಅನಿಲ್ ಮೊಂತೆರೋ ನ ಬಂಧಿಸಿದ್ದು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ-ಬಾಲಕಿ ಕುಳಿತಲ್ಲಿಗೆ ಮೊಬೈಲ್ ಜೊತೆ ವೀಡಿಯೋ ಮಾಡುತ್ತಾ ಬಂದ ಸ್ಟೀವನ್ ಮತ್ತು ಆತನ ಮಗ ಅನಿಲ್ ಬಾಲಕಿಯನ್ನು ವಿಚಾರಣೆ ನಡೆಸಿದ್ದಾರೆ. ಬಳಿಕ ಜೊತೆಯಲ್ಲಿದ್ದ ಬಾಲಕನ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡುತ್ತಾ ಹಲ್ಲೆ ನಡೆಸಿ ಮಹಾ ಸಂಸ್ಕಾರವಂತನಂತೆ ವರ್ತಿಸಿದ್ದಾನೆ. ಸಾಮಾಜಿಕ ತಾಣಗಳಲ್ಲಿ ಈತನ ದುಷ್ಕೃತ್ಯದ ವೀಡಿಯೋ ಸಾಕಷ್ಟು ಹರಿದಾಡುತ್ತಿದೆ.

ಈ ಬಗ್ಗೆ ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತ ಬಾಲಕನ ತಂದೆ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ತಂದೆ ಮತ್ತು ಮಗನ ವಿರುದ್ಧ ಅ ಕ್ರ: 126(2), 115(2), 352, 351(1), 79, SC & ST Act1989ರಂತೆ ಅ ಕ್ರ: 3(1), (r)(s)BNS 2023ರಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಸಂತೋಷ್ @ಸ್ಟೀವನ್ ಮೊಂತೆರೋ ಪುತ್ತೂರು ಹೊರವಲಯದಲ್ಲಿ ಈ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿಯೆಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
crime
ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧನ 22 ಕೆ.ಜಿ 250 ಗ್ರಾಂ ತೂಕದ ಅಕ್ರಮ ಗಾಂಜಾ ವಶ
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಉತ್ತರ ವಿಭಾಗದ ಎಸಿಪಿ ನೇತ್ರತ್ವದ ಪೊಲೀಸ್ ತಂಡ ನಾಲ್ಕು ಜನ ಕುಖ್ಯಾತ ಆರೋಪಿಗಳನ್ನು ಬಂಧಿಸಿ ಸುಮಾರು 22 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಿನಾಂಕ:21-02-2026 ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಗಾಂಜಾವನ್ನು ಮಾರಾಟ ಮಾಡಲು ಹೊರ ರಾಜ್ಯ ದಿಂದ ತಂದಿರುವ ಬಗ್ಗೆ ಮಾಹಿತಿ ಪಡೆದು ಉತ್ತರ ಉಪ ವಿಭಾಗದ ಎ.ಸಿ.ಪಿ. ರವರು ಮತ್ತು ಅವರ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಪಣಂಬೂರು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿ 1].ಕರಣ್ ಬಾಬು ರಾಂ ಜಾದವ್ ಪ್ರಾಯ 27 ವರ್ಷ ತಂದೆ:ಬಾಬು ರಾಂ ನೀಲಕಂಠ ಜಾದವ್ ವಾಸ:ಸಮತಾ ನಗರ, ಚೊಪ್ಪಡ ತಾಲೂಕು, ಜಲಗಾಂ ಜಿಲ್ಲೆ, ಮಹಾರಾಷ್ಟ್ರ 2]. ಸಮೀರ್ ಶಾ ಪ್ರಾಯ 19 ವರ್ಷ ತಂದೆ:ಮುನ್ಶಿ ಶಾ ವಾಸ:ಮಕಾನ್.ಎನ್ 1057, ವಾರ್ಡ್-16, ತಾಶಿಲ್ ಬಗಳಿ, ಚಪಡ ಅಂಚೆ, ದೇವಾಸ್ ಜಿಲ್ಲೆ, ಮಧ್ಯಪ್ರದೇಶ 3]. ಎಂ.ಹೆಚ್. ಮಯ್ಯದಿ ಪ್ರಾಯ 48 ವರ್ಷ ತಂದೆ:ಎಂ.ಹಸನ್ ಬ್ಯಾರಿ ವಾಸ: ಮನೆ ನಂ:7-129 ನ್ಯೂ ಹೌಸ್ ಹೆಜಮಾಡಿ ಕೋಡಿ, ಹೆಜಮಾಡಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ 4]. ಇಬ್ರಾಹಿಂ ಕಲೀಲ್ ಪ್ರಾಯ 47 ವರ್ಷ ತಂದೆ:ದಿ:ಅಬ್ದುಲ್ ರಹಿಮಾನ್ ವಾಸ:ಕರ್ಬಾಲ ರೋಡ್, ನಡುಪಳ್ಳಿ ಮಸೀದಿ ಹತ್ತಿರ, ಕುದ್ರೋಳಿ,ಮಂಗಳೂರು ಹಾಲಿವಾಸ: ದಿಲ್ಕುಶ್ ಅಪಾರ್ಟ್ಮೆಂಟ್, 1ನೇ ಮಹಡಿ, ರಾಜಧಾನಿ ಹೊಟೇಲ್ ಎದುರು, ಕಾವೂರು, ಮಂಗಳೂರು ಎಂಬವರನ್ನು ದಸ್ತಗಿರಿ ಮಾಡಿ, ಅವರ ವಶದಲ್ಲಿದ್ದ 22 ಕೆ.ಜಿ 250 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 11,12,500) ಮತ್ತು 6 ಮೊಬೈಲ್ ಪೋನ್ (ಅಂದಾಜು ಮೌಲ್ಯ ರೂ. 18,000) ನ್ನು ಹಾಗೂ ಗಾಂಜಾ ಸಾಗಿಸಲು ಬಳಸಿದ KA 20 H.E. 2915 ಮತ್ತು K.A 19 H.P 6021 ಸ್ಕೂಟರ್ ಗಳನ್ನು (ಅಂದಾಜು ಮೌಲ್ಯ ರೂ. 1,00,000) ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.

ಆರೋಪಿತರ ಪೈಕಿ ಕರಣ್ ಬಾಬು ರಾಂ ಜಾದವ್ ಮತ್ತು ಸಮೀರ್ ಶಾ ಎಂಬವರು ಗಾಂಜಾವನ್ನು ಮಹಾರಾಷ್ಟ್ರ ಮಯ್ಯದಿ ಹಾಗೂ ಮಧ್ಯ ಪ್ರದೇಶ ಶಾರೂಕ್ ಎಂಬವರಿಂದ ಪಡೆದು ತಂದು ಉಡುಪಿ ಹೆಜಮಾಡಿ ಕೋಡಿಯ ಎಂ.ಹೆಚ್. ಮಯ್ಯದಿ ಮತ್ತು ಮಂಗಳೂರಿನ ಇಬ್ರಾಹಿಂ ಕಲೀಲ್ ರವರಿಗೆ ನೀಡುತ್ತಿದ್ದು, ಈ ಇಬ್ಬರು ಗಾಂಜಾವನ್ನು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು, ಹಾಗೂ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದುದಾಗಿ ತಿಳಿದು ಬಂದಿದ್ದು, ಈ ಹಿಂದೆ ಕೂಡಾ ಹಲವು ಭಾರಿ ಗಾಂಜಾವನ್ನು ಅಕ್ರಮವಾಗಿ ತಂದು ಉಡುಪಿ ಜಿಲ್ಲೆ ಮತ್ತು ಮಂಗಳೂರು ನಗರದಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ.
ಸದ್ರಿ ಆರೋಪಿತರುಗಳಿಂದ ಸ್ವಾಧೀನಪಡಿಸಿಕೊಳ್ಳಲಾದ ಗಾಂಜಾ, ಮೊಬೈಲ್ ಮತ್ತು ಸ್ಕೂಟರ್ ಗಳ ಒಟ್ಟು ಮೌಲ್ಯ 12,30,500 ರೂಗಳಾಗಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.21/2026 ಕಲಂ:8(C), 20(b),(ii)(C) NDPS Act ನಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದ
-
crime1 day agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
