Connect with us

crime

ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ವಿಟ್ಲ ಪಟ್ಟಣ ಪಂಚಾಯತ್..ಹಣ ಪಡೆದು ಏಳು ತಿಂಗಳಾದರೂ ಅವ್ಯವಸ್ಥೆ ಸರಿಪಡಿಸದೇ ಬೇಜವಾಬ್ದಾರಿ..ಕಾನೂನು ಹೋರಾಟಕ್ಕೆ ಮುಂದಾದ ಬಳಕೆದಾರರು..

Published

on

ವಿಟ್ಲ : ಯಾವುದೇ ಇಲಾಖೆಗಳಲ್ಲಿ ಕೆಲಸ-ಕಾರ್ಯಗಳು ಜನಪರವಾಗಿ ನಡೆಯುತ್ತಿಲ್ಲ ಎಂದಾದರೆ ಆಡಳಿತದ/ಅಧಿಕಾರಿಗಳ ಬೇಜವಾಬ್ದಾರಿ/ಸೋಮಾರಿತನವನ್ನು ಪ್ರಶ್ನಿಸುವುದಕ್ಕಿಂತಲೂ ಮುಖ್ಯವಾಗಿ ಆಡಳಿತಕ್ಕೆ ಚಿವುಟಬೇಕಾದ ಜವಾಬ್ದಾರಿಯುತ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ಅಡ್ಜೆಸ್ಟ್ ಮೆಂಟ್ ಅಥವಾ ಗಾಢ ನಿದ್ದೆಯಲ್ಲಿವೆ ಎಂದು ಜನ ತಿಳಿಯಬೇಕಾಗಿದೆ.

ವಿಟ್ಲ ಪಟ್ಟಣ ಪಂಚಾಯತ್ ಕೂಡಾ ಅದೇ ಸಾಲಿನಲ್ಲಿದೆ ಎಂದರೆ ತಪ್ಪಾಗಲಾರದು.
ವಿಟ್ಲ ಪಟ್ಟಣ ಪಂಚಾಯತ್ ಒಳ್ಳೆಯ ಆಡಳಿತ ನೀಡುತ್ತಿದೆ ಎಂದು ಹೇಳಬೇಕಾದರೆ ಇಲ್ಲಿ ಹೋರಾಟದ ಮೂಲಕವೇ ಜನಪ್ರತಿನಿಧಿಯಾಗಿ ಗೌರವ, ಉನ್ನತ ಸ್ಥಾನಮಾನವನ್ನು ಪಡೆದ ಒಬ್ಬ ಉತ್ತಮ ಅಧ್ಯಕ್ಷರಿದ್ದಾರೆ. ನೇರ ನಡೆ ನುಡಿಯ ದಕ್ಷ ಚೀಫ್ ಆಫೀಸರಿದ್ದಾರೆ. ಆದರೆ ಇವರಿಗೆ ಚುರುಕು ಮುಟ್ಟಿಸಬೇಕಾದ ಜವಾಬ್ದಾರಿಯುತ ವಿರೋಧ ಪಕ್ಷಗಳು ಅದ್ಯಾಕೋ ತೆಪ್ಪಗಾಗಿರುವುದರಿಂದ ಜನರ ಸಮಸ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದಕ್ಕೆ ಒಂದು ಉತ್ತಮ ಉದಾಹರಣೆಯೊಂದಿಗೆ ಈ ವರದಿಯನ್ನು ಆರಂಭಿಸುತ್ತೇನೆ.

ಕುಡಿಯುವ ನೀರಿನ ವಿಚಾರ ಅಷ್ಟೇ..! ವಿಟ್ಲ ಪಟ್ಟಣ ಪಂಚಾಯತ್ ನ 2ನೇ ವಾರ್ಡಿನ ವಾಣಿಜ್ಯ ಸಂಕೀರ್ಣವೊಂದಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿದೆ. ವಿಟ್ಲದ ಬೊಬ್ಬೆಕೇರಿಯಲ್ಲಿರುವ ಲ್ಯಾಂಪ್ ಸೊಸೈಟಿಯ ವಾಣಿಜ್ಯ ಸಂಕೀರ್ಣ.
ಲ್ಯಾಂಪ್ ಸೊಸೈಟಿ, ಪಡಿತರ ಅಂಗಡಿ, ಎಲೆಕ್ಟ್ರಾನಿಕ್ಸ್ ಮಳಿಗೆ, ಮಾಧ್ಯಮ ಕಛೇರಿ ಸೇರಿದಂತೆ ಐದಾರು ಸಂಸ್ಥೆಗಳಿರುವ ಈ ಸಂಕೀರ್ಣಕ್ಕೆ ವಾಣಿಜ್ಯ ಬಳಕೆಯಡಿಯಲ್ಲಿ ನೀರು ಪಡೆದುಕೊಳ್ಳಲು ಪಟ್ಟಣ ಪಂಚಾಯತ್‌ಗೆ 2025ರ ಮೇ ತಿಂಗಳ 27ರಂದು ಲ್ಯಾಂಪ್ ಸೊಸೈಟಿಯ ಅಧ್ಯಕ್ಷರಾದ ಸುಂದರ ನಾಯ್ಕ ಅವರು ಒಂದು ವರ್ಷದ ಅವಧಿಯ ಮೊತ್ತವಾಗಿ 8400.00 ರೂಪಾಯಿ ನೀಡಿ ರಶೀದಿ ಪಡೆದಿದ್ದಾರೆ. ಸಂಪರ್ಕವಾದ ನಂತರ ಸಮರ್ಪಕವಾಗಿಯೇ ಬರುತ್ತಿದ್ದ ನೀರಿನ ವೇಗದ ಮಿತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಬಂದು ಯಾರ ಹೆದರಿಕೆಯೂ ಇಲ್ಲದೆ ಸೆಪ್ಟೆಂಬರ್ ತಿಂಗಳಿಗೆ ನಿಂತೆೇ ಬಿಟ್ಟಿದೆ. ಸಂಕೀರ್ಣದವರು ನೀರಿಲ್ಲದೆ ಪರದಾಡುತ್ತಿದ್ದಾರೆ. ನೀರಿನ ಬವಣೆಯನ್ನು ಪಂಚಾಯತ್‌ನ ವಾರ್ಡ್ ಸದಸ್ಯರಾದ ಹರೀಶ್ ಅವರಲ್ಲಿ ಮೌಖಿಕವಾಗಿ ಹಲವು ಬಾರಿ ಅಲವತ್ತುಕೊಂಡಾಗ ಇಂದು ನೀರಿನ ಸಮಸ್ಯೆ ಸರಿಯಾಗುತ್ತದೆ, ನಾಳೆ ಬಗೆಹರಿಯಬಹುದು ಎಂದು ಅಜ್ಜಿ ಕಥೆ ಹೇಳುತ್ತಾ ಅಲ್ಲಿಂದ ಇಲ್ಲಿಂದ ಅಂತ ನೀರು ತಂದು ಶೇಖರಿಸಿಕೊಂಡು ದಿನ ಕಳೆಯುತ್ತಿದ್ದಾರೆ. ಆದರೆ ಇವರ ಸಮಸ್ಯೆಗೆ ಸದಸ್ಯರಾಗಲೀ, ಸಿಬ್ಬಂದಿಗಳಾಗಲೀ, ವಿರೋಧ ಪಕ್ಷವಾಗಲೀ ಸ್ಪಂದಿಸದೇ ತಮ್ಮ ಮೌಖಿಕ ನೋವಿಗೆ ಗಾಢ ಮೌನವಾಗಿ ನೀರಿನ ಕೊಳವೆಗಳು ಅದಾಗಲೇ ಒಣಗಿ ಹೋಗಿತ್ತು. ನಂತರ ದಿನಾಂಕ 2025ರ ನವೆಂಬರ್ 11ರಂದು ಲ್ಯಾಂಪ್ ಸೊಸೈಟಿಯ ಅಧ್ಯಕ್ಷರು ಪಂಚಾಯತ್ ಅಧ್ಯಕ್ಷರು / ಮುಖ್ಯಾಧಿಕಾರಿಗಳಿಗೆ ದೂರು ಅರ್ಜಿ ನೀಡಿದರು.


ಈ ದೂರು ಅರ್ಜಿಯಲ್ಲಿ ವಿಟ್ಲ ಪಟ್ಟಣ ಪಂಚಾಯಿತ್ ವ್ಯಾಪ್ತಿಯ ವಾರ್ಡ್ ಸಂಖ್ಯೆ 2ರಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಂಪ್ ಸೊಸೈಟಿಯಲ್ಲಿ ವಾಣಿಜ್ಯ ಬಳಕೆಗೆ ಪಡೆದಿರುವ ನೀರು ಸರಬರಾಜು ಕಳೆದ ಒಂದುವರೆ ತಿಂಗಳಿನಿoದ ವ್ಯತ್ಯಯ ಕಂಡು ಬಂದಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಎರಡನೇ ವಾರ್ಡ್ ಸದಸ್ಯರಿಗೆ ಮತ್ತು ಸಿಬ್ಬಂದಿಯ ಗಮನಕ್ಕೆ ತಂದರೂ ಈ ಬಗ್ಗೆ ಯಾವುದೇ ರೀತಿಯ ದುರಸ್ತಿ ಕಾರ್ಯ ಕೈಗೊಂಡಿರುವುದಿಲ್ಲ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳ ಬಗ್ಗೆ ತಾವು ಗಮನಹರಿಸಿ ಶೀಘ್ರವಾಗಿ ಪರಿಹರಿಸಿ ಕೊಡುವಂತೆ ವಿನಂತಿಸಿಕೊoಡಿದ್ದರು.
ಈಗ ದೂರು ನೀಡಿ 2 ತಿಂಗಳುಗಳೇ ಕಳೆದರೂ ಕಾಟಾಚಾರಕ್ಕಾದರೂ ಒಮ್ಮೆಯೂ ನೀರು ಭರ್ತಿಯಾಗಿಲ್ಲ. ಹನಿಹನಿ ತೊಟ್ಟಿಕ್ಕುವ ನೀರು ಯಾವ ಕಾಲಕ್ಕೂ ಟ್ಯಾಂಕಿ ತುಂಬಬಹುದೇ ?ಅಂತೂ ನೀರು ಬಂದೇ ಇಲ್ಲ ಅನ್ನಬಹುದು. ಆದರೆ ಈವರೆಗೂ ಈ ಬಗ್ಗೆ ಯಾವುದೇ ತನಿಖೆ ಅಥವಾ ಸರಿಪಡಿಸುವ ಕ್ರಮಗಳು ನಡೆದಿಲ್ಲ. ಇದರಿಂದಾಗಿ ವಾಣಿಜ್ಯ ಬಳಕೆಗೆ ನೀರಿಲ್ಲದೆ ಸಂಕೀರ್ಣದ ದೈನಂದಿನ ಚಟುವಟಿಕೆಗಳಿಗೆ ತುಂಬಾ ತೊಂದರೆಯಾಗಿದೆ.

ಮೂಲಭೂತ ಸೌಕರ್ಯವಾದ ನೀರಿನ ವ್ಯವಸ್ಥೆಯನ್ನು ಇಪ್ಪತ್ತನಾಲ್ಕು ಗಂಟೆಯೊಳಗೆ ಸ್ಥಳೀಯ ಆಡಳಿತ ಸಂಸ್ಥೆಗಳು ಕಲ್ಪಿಸಬೇಕೆಂಬ ಉಚ್ಚ ನ್ಯಾಯಾಲಯದ ಆದೇಶಗಳನ್ನೂ ಈವರೆಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು/ಆಡಳಿತ ತಿಳಿದಿಲ್ಲವೇ.?
ಮೂರು ದಿನಗಳೊಳಗೆ ಪಟ್ಟಣ ಪಂಚಾಯತ್ ಕಡೆಯಿಂದ ನೀರಿನ ಸಮಸ್ಯೆ ಪರಿಹಾರವಾಗಿಲ್ಲ ಎಂದರೆ ಪಂಚಾಯತ್ ಮಟ್ಟದಲ್ಲಿ ಸ್ಪಂದನೆ ಸಿಗದಿದ್ದರೆ, ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಅಥವಾ ಆನ್‌ಲೈನ್ ಮೂಲಕ ‘ಜನಸೇವಕ’ ಅಥವಾ ‘ಇ-ಸ್ಪಂದನ’ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದು ಎಂಬ ಮಾಹಿತಿಯೂ ಇದೆ.
ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಈ ರೀತಿಯಾಗಿ ವರ್ತಿಸಿದರೆ ಹೇಗೆ ? ತಾವು ಜನಸೇವಕರಾಗಿ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗೂ ಸ್ಪಂದಿಸಬೇಕೆo ಬ ಕನಿಷ್ಟ ಜ್ಞಾನವು ಇಲ್ಲದಾಯಿತೇ ? ಒಂದು ವರ್ಷದ ಪೂರ್ತಿ ನೀರಿನ ಬಿಲ್ಲ್ 8400 ನ್ನು ಜಮಾ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿರುವುದೆಂದರೆ ಇದೇನಾ ? ನಿಮ್ಮಲ್ಲಿ ಕೆಲಸ ಮಾಡಿಸಿಕೊಳ್ಳಬೇಕಾದರೆ ಯಾರ ಪ್ರಭಾವವನ್ನು ಬಳಸಿಕೊಳ್ಳಬೇಕು ಎಂಬುದನ್ನಾದರೂ ಹೇಳಬಾರದೇ.? ಜನರ ಸಮಸ್ಯೆಗಳ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ , ತಾತ್ಸಾರವೇಕೆ ಎಂಬುದು ಅರ್ಥವಾಗುತ್ತಿಲ್ಲ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಪುಣಚದಲ್ಲಿ ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ; ಇಬ್ಬರ ಬಂಧನ, ಸೊತ್ತು ವಶ!

Published

on

ವಿಟ್ಲ: ಕಾನೂನುಬಾಹಿರವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಪುಣಚ ಗ್ರಾಮದ ಪೆರಿಯಾಲ್ತಡ್ಕ ಎಂಬಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಪುಣಚ ನಿವಾಸಿಗಳಾದ ದಿವಾಕರ ಪೂಜಾರಿ (46) ಮತ್ತು ಯಶ್ವಂತ್ (34) ಬಂಧಿತ ಆರೋಪಿಗಳಾಗಿದ್ದಾರೆ.

ದಾಳಿಯ ವಿವರ:

ಮೇ 30ರಂದು ರಾತ್ರಿ ಪುಣಚ ಗ್ರಾಮದ ಪೆರಿಯಾಲ್ತಡ್ಕ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಕೋಳಿ ಅಂಕ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ವಿಟ್ಲ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ರಾಮಕೃಷ್ಣ ರವರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್ಐ ಮತ್ತು ಠಾಣಾ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಜಂಟಿ ದಾಳಿ ನಡೆಸಿದೆ.

ದಾಳಿಯ ವೇಳೆ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಮುಖವಾಗಿ ಸ್ಥಳದಲ್ಲಿದ್ದ 4 ಅಂಕದ ಕೋಳಿಗಳು, ಜೂಜಾಟಕ್ಕೆ ಬಳಸುತ್ತಿದ್ದ ಕೋಳಿ ಕತ್ತಿ (ಬಾಳು), ಇತರೆ ಪರಿಕರಗಳು ಹಾಗೂ ರೂ. 4,145/- ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 119/2026 ರಂತೆ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ: 87, 93, ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಕಲಂ: 3, 11 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ: 112 ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.




Continue Reading

crime

ಬೆಳ್ಳಾರೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಸವಣೂರು ಬಳಿ ಅಕ್ರಮ ಗೋವಧೆ ಅಡ್ಡೆ ಪತ್ತೆ, ಮೂವರ ಬಂಧನ, ಪ್ರಮುಖ ಆರೋಪಿ ಪರಾರಿ!

Published

on

ಬೆಳ್ಳಾರೆ: ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರು ಸಮೀಪದ ಮಾಂತೂರು ಎಂಬಲ್ಲಿ ಶುಕ್ರವಾರ ಸಂಜೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಗೋವಧೆ ಅಡ್ಡೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತೋಟದ ಮಾಲೀಕ ತಲೆಮರೆಸಿಕೊಂಡಿದ್ದಾನೆ.

ಅಡಿಕೆ ತೋಟದಲ್ಲಿ ನಡೀತಿತ್ತು ಕೃತ್ಯ

ದಿನಾಂಕ 29.05.2026ರಂದು ಸಂಜೆ, ಕಡಬ ತಾಲೂಕಿನ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕ ನಿವಾಸಿ ನಝೀರ್ ಎಂಬಾತನಿಗೆ ಸೇರಿದ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗೋವಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾಳಿ ನಡೆಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ತೋಟವೊಂದರಲ್ಲಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿ ಒಂದು ಕೋಣ ಮತ್ತು ಎರಡು ದನಗಳು ಸೇರಿದಂತೆ ಒಟ್ಟು ಮೂರು ಮೂಕಪ್ರಾಣಿಗಳನ್ನು ವಧೆ ಮಾಡಿ, ಮಾಂಸ ಮಾಡಲು ಸಿದ್ಧಪಡಿಸುತ್ತಿದ್ದ ದೃಶ್ಯ ಕಂಡುಬಂದಿದ್ದು, ಮೂರು ಗೋವುಗಳ ಕಳೆಬರಹಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಮೂವರ ಬಂಧನ – ಪ್ರಮುಖ ಆರೋಪಿ ಪರಾರಿ

ಪೊಲೀಸರು ಧಾಳಿ ನಡೆಸಿದ ವೇಳೆ ಸ್ಥಳದಲ್ಲಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಂಧಿತರನ್ನು:

  • ಕೆ. ಅಬ್ದುಲ್ ರಫೀಕ್ (37 ವರ್ಷ)
  • ಅದ್ರಾಮ ಮಂತೂರು (41 ವರ್ಷ)
  • ಅಬ್ದುಲ್ ಖಾದರ್ ಪಣೆಮಜಲು (57 ವರ್ಷ) ಎಂದು ಗುರುತಿಸಲಾಗಿದೆ.

ವಿಚಾರಣೆಯ ವೇಳೆ ಇವರು ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ಮಾಡುತ್ತಿರುವುದು ದೃಢಪಟ್ಟಿದೆ. ಆದರೆ, ಈ ಅಕ್ರಮ ಗೋವಧೆ ಅಡ್ಡೆಯ ಪ್ರಮುಖ ಆರೋಪಿ ಹಾಗೂ ಸ್ಥಳದ ಮಾಲೀಕನಾದ ನಝೀರ್ ಧಾಳಿಯ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೆಳ್ಳಾರೆ ಎಸ್‌ಐ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ

ಬೆಳ್ಳಾರೆ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಬಿ.ಪಿ. ಅವರ ನೇತೃತ್ವದಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸತೀಶ್, ಶ್ರೀಧರ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಪ್ರಕರಣ ದಾಖಲು: ಸ್ಥಳದಲ್ಲಿದ್ದ ಜಾನುವಾರು ಮಾಂಸ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 36/2026, ಕಲಂ 4, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2023 ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.

ಸಾರ್ವಜನಿಕರಿಂದ ಮುಕ್ತ ಕಂಠದ ಶ್ಲಾಘನೆ: ಸವಣೂರು ಮತ್ತು ಮಾಂತೂರು ಪರಿಸರದಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಗೋವಧೆ ದಂಧೆಕೋರರಿಗೆ ಈ ದಾಳಿಯ ಮೂಲಕ ಬೆಳ್ಳಾರೆ ಪೊಲೀಸರು ಸಿಂಹಸ್ವಪ್ನವಾಗಿದ್ದಾರೆ. ಪೊಲೀಸರ ಈ ಸಮಯಪ್ರಜ್ಞೆ ಮತ್ತು ತತ್‌ಕ್ಷಣದ ಭರ್ಜರಿ ಕಾರ್ಯಾಚರಣೆಯನ್ನು ಪರಿಸರದ ಸಾರ್ವಜನಿಕರು ಹಾಗೂ ನಾಗರಿಕರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.

Continue Reading

Bantawala

ಬಂಟ್ವಾಳ: ಅಕ್ರಮ ಜಾನುವಾರು ವಧೆ ಅಡ್ಡೆಗೆ ಪೊಲೀಸರ ದಿಢೀರ್ ದಾಳಿ; ಇಬ್ಬರು ಆರೋಪಿಗಳ ಬಂಧನ, 6 ದನಗಳ ರಕ್ಷಣೆ!

Published

on

ಬಂಟ್ವಾಳ: ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಜಾನುವಾರು ವಧೆ ಅಡ್ಡೆಯೊಂದಕ್ಕೆ ಬಂಟ್ವಾಳ ನಗರ ಪೊಲೀಸರು ಬುಧವಾರ ತಡರಾತ್ರಿ ದಿಢೀರ್ ದಾಳಿ ನಡೆಸಿದ್ದಾರೆ. ಕೃತ್ಯದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಧೆಗಾಗಿ ಕಟ್ಟಿ ಹಾಕಲಾಗಿದ್ದ 6 ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಂಟ್ವಾಳ ಸಜಿಪಮೂಡ ನಿವಾಸಿ ಮುಸ್ತಾಪ (33) ಹಾಗೂ ಬಂಟ್ವಾಳ ಬಿ ಕಸಬಾ ನಿವಾಸಿ ಮಹಮ್ಮದ್‌ ಸಾದೀಕ್‌ (30) ಎಂದು ಗುರುತಿಸಲಾಗಿದೆ.

ನಡೆದದ್ದೇನು?

ಮೇ 27ರ ಬುಧವಾರ ತಡರಾತ್ರಿ ಸಜಿಪಮೂಡ ಗ್ರಾಮದ ಪಂಜಾಜೆ ಎಂಬಲ್ಲಿ ಮನೆಯೊಂದರ ಹಿಂಭಾಗದ ಕೊಟ್ಟಿಗೆಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂದೀಪ್‌ ಕುಮಾರ್‌ ಶೆಟ್ಟಿರವರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್‌ಐ ಮತ್ತು ಸಿಬ್ಬಂದಿಗಳ ತಂಡ ಸ್ಥಳಕ್ಕೆ ಜಂಟಿ ದಾಳಿ ನಡೆಸಿದೆ.

ಪೊಲೀಸರು ಸ್ಥಳಕ್ಕೆ ತಲುಪಿದಾಗ ಆರೋಪಿಗಳು ಜಾನುವಾರೊಂದನ್ನು ವಧೆ ಮಾಡಿ ಮಾಂಸ ಕತ್ತರಿಸುತ್ತಿರುವುದು ಕಂಡುಬಂದಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ದನಗಳನ್ನು ವಧೆ ಮಾಡುವ ಉದ್ದೇಶದಿಂದ ಅಲ್ಲಿ ಕಟ್ಟಿಹಾಕಲಾಗಿತ್ತು. ಆದರೆ ಅವುಗಳನ್ನು ಕೊಲ್ಲುವ ಮೊದಲೇ ಪೊಲೀಸರು ಎಂಟ್ರಿ ಕೊಟ್ಟು ಆರೋಪಿಗಳ ಸ್ಕೆಚ್ ಉಲ್ಟಾ ಮಾಡಿದ್ದಾರೆ.

ಸ್ವಾಧೀನಪಡಿಸಿಕೊಂಡ ಸೊತ್ತುಗಳು:

ಸ್ಥಳದಲ್ಲಿ ವಧೆ ಮಾಡಲಾಗಿದ್ದ ಒಂದು ಜಾನುವಾರಿನ ಮಾಂಸ

ವಧೆಯಿಂದ ಪಾರುಗಾಣಿಸಿ ರಕ್ಷಿಸಲಾದ 06 ಜೀವಂತ ಜಾನುವಾರುಗಳು

ಕೃತ್ಯಕ್ಕೆ ಬಳಸಲಾದ ಒಂದು ಕಾರು ಹಾಗೂ ಮಾರಕಾಸ್ತ್ರ/ಸಾಮಾಗ್ರಿಗಳು

ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಈ ದಂಧೆ ನಡೆಸುತ್ತಿರುವುದು ವಿಚಾರಣೆ ವೇಳೆ ದೃಢಪಟ್ಟಿದೆ. ಪೊಲೀಸರು ಕೃತ್ಯದ ಸ್ಥಳದಲ್ಲಿದ್ದ ಮಾಂಸ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ

ಪ್ರಕರಣ ದಾಖಲು:

ಬಂಧಿತ ಆರೋಪಿಗಳು, ರಕ್ಷಿಸಲಾದ ಜಾನುವಾರುಗಳು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದಿರುವ ಬಂಟ್ವಾಳ ನಗರ ಠಾಣೆಯ ಪೊಲೀಸರು, ಅ crime ಸಂಖ್ಯೆ 68/2026 ರಂತೆ “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020” ರ ಕಲಂ: 4, 7, 12 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.






Continue Reading

Trending

Copyright © 2025 Deevatige

error: Content is protected !!