Entertainment
ಬಿಗ್ ಬಾಸ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ: ಕರಾವಳಿಯ ರಕ್ಷಿತಾ ಗೆದ್ದಿದ್ದು ಟ್ರೋಫಿಯನ್ನಲ್ಲ, ಕೋಟ್ಯಾಂತರ ಕನ್ನಡಿಗರ ಮನಸ್ಸುಗಳನ್ನು…
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇವತ್ತು ಅದ್ಧೂರಿಯಾಗಿ ತೆರೆ ಬಿದ್ದಿದೆ. 112 ದಿನಗಳ ಕಾಲ ನಡೆದ ಮನರಂಜನೆಯ ಈ ಮಹಾಮೇಳ, ಪ್ರತಿ ದಿನವೂ ವೀಕ್ಷಕರನ್ನು ಟಿವಿ ಮುಂದೆ ಕೂರಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಅನೇಕ ತಿರುವು-ಮುರುವು, ಭಾವುಕ ಕ್ಷಣಗಳು, ಜಗಳ, ಸ್ನೇಹ, ನಗು-ಅಳು ಎಲ್ಲವನ್ನೂ ಒಟ್ಟಿಗೆ ಹೊತ್ತುಕೊಂಡು ಸೀಸನ್ 12 ತನ್ನ ಅಂತಿಮ ಘಟ್ಟ ತಲುಪಿದೆ. ಕೊನೆಗೂ ಕರ್ನಾಟಕದ ಜನರು ತಮ್ಮ ತೀರ್ಪು ನೀಡಿದ್ದಾರೆ. ಗಿಲ್ಲಿ ಬಿಗ್ ಬಾಸ್ 12ರ ವಿನ್ನರ್ ಆಗಿ ಹೊರಹೊಮ್ಮಿದರೆ, ಮಾತಿನ ಮಲ್ಲಿ ಎಂದೇ ಫೇಮಸ್ ಆಗಿದ್ದ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಸೀಸನ್ ಆರಂಭದಿAದಲೇ ರಕ್ಷಿತಾ ಶೆಟ್ಟಿ ವೀಕ್ಷಕರ ಗಮನ ಸೆಳೆದವರು. ಪಟ ಪಟ ಪಟಾಕಿ ಟಾಕಿಂಗ್ ಪೋರಿ ಅಂತಲೇ ಫೇಮಸ್ ಆಗಿರುವ ರಕ್ಷಿತಾ, ಸಾದಾ-ಸೀದಾ ಮನಸ್ಸಿನ ಹುಡುಗಿ. ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ, ಮುಚ್ಚುಮರೆ ಇಲ್ಲದೆ ಹೇಳುವ ಗುಣವೇ ರಕ್ಷಿತಾರ ದೊಡ್ಡ ಪ್ಲಸ್ ಪಾಯಿಂಟ್. ಬಿಗ್ ಬಾಸ್ ಮನೆಯೊಳಗೆ ಅನೇಕ ಬಾರಿ ತಮ್ಮ ನಿಲುವಿಗಾಗಿ ನಿಂತು, ಕೆಲವೊಮ್ಮೆ ಟೀಕೆಗೆ ಗುರಿಯಾದರೂ, ಅದೇ ರೀತಿ ಅಭಿಮಾನಿಗಳ ಅಪಾರ ಬೆಂಬಲವೂ ರಕ್ಷಿತಾಗೆ ಸಿಕ್ಕಿತ್ತು.
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು. ಮೂಲತಃ ಮಂಗಳೂರಿನವರು, ಪಡುಬಿದ್ರೆಯಲ್ಲಿ ಜನನ. ಬಾಲ್ಯ ಹಾಗೂ ಶಿಕ್ಷಣದ ಬಹುಪಾಲು ಮುಂಬೈನಲ್ಲಿ ಕಳೆದಿದೆ. ಮನೆಯೊಳಗೆ ತುಳು ಮಾತನಾಡುವ ರಕ್ಷಿತಾಗೆ ಆರಂಭದಲ್ಲಿ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಆದರೆ, ಭಾಷೆಯೇ ಅಡ್ಡಿ ಆಗಲಿಲ್ಲ ಎಂಬುದನ್ನು ಅವರು ತಮ್ಮ ಆಟದ ಮೂಲಕ ಸಾಬೀತುಪಡಿಸಿದರು.
ಸೋಶಿಯಲ್ ಮೀಡಿಯಾ ಯೂಟ್ಯೂಬರ್ ಆಗಿ ಈಗಾಗಲೇ ಹೆಸರು ಮಾಡಿದ್ದ ರಕ್ಷಿತಾ, ಕನ್ನಡ, ತುಳು, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ವ್ಲಾಗ್ಸ್ ಹಾಗೂ ರೀಲ್ಸ್ ಮೂಲಕ ಅಭಿಮಾನಿಗಳ ಬಳಗ ಕಟ್ಟಿಕೊಂಡಿದ್ದರು. ಆನ್ಲೈನ್ ಜಗತ್ತಿನಲ್ಲಿ ಹವಾ ಎಬ್ಬಿಸಿದ್ದ ಈ ಪಟಾಕಿ ಪೋರಿ, ಬಿಗ್ ಬಾಸ್ ವೇದಿಕೆಗೆ ಕಾಲಿಟ್ಟ ಬಳಿಕ ಕರ್ನಾಟಕದ ಮೂಲೆ ಮೂಲೆಗೂ ಪರಿಚಿತರಾದರು. ಪ್ರತಿದಿನದ ಎಪಿಸೋಡ್ಗಳಲ್ಲಿ ಅವರ ಮಾತು, ಪ್ರತಿಕ್ರಿಯೆ, ನಗುವಿನ ಸ್ಟೈಲ್, ಕೆಲವೊಮ್ಮೆ ಕಣ್ಣೀರಿನ ಕ್ಷಣಗಳು ಎಲ್ಲವೂ ಪ್ರೇಕ್ಷಕರಿಗೆ ತಮ್ಮದೇ ಮನೆಯ ಸದಸ್ಯೆಯಂತೆ ಅನಿಸಿತು.

ಟ್ರೋಫಿ ಗೆಲ್ಲಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಕನಸಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ‘ರಕ್ಷಿತಾ ವಿನ್ನರ್’ ಅನ್ನೋ ಟ್ರೆಂಡ್ ಕೂಡ ಹಲವು ಬಾರಿ ಓಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಬಿಗ್ ಬಾಸ್ ಟೈಟಲ್ ಕೈ ತಪ್ಪಿದೆ. ಆದರೂ, ಈ ಸೋಲು ರಕ್ಷಿತಾಗೆ ಸೋಲಾಗಲೇ ಇಲ್ಲ. ಕಾರಣ, ಅವರು ಗೆದ್ದಿದ್ದು ಟ್ರೋಫಿಯನ್ನಲ್ಲ, ಕೋಟ್ಯಾಂತರ ಕನ್ನಡಿಗರ ಮನಸ್ಸುಗಳನ್ನು. ಆದರೆ ಬಿಗ್ ಬಾಸ್ ವೇದಿಕೆ ರಕ್ಷಿತಾ ಶೆಟ್ಟಿಗೆ ಹೊಸ ಬದುಕಿನ ದಾರಿಯನ್ನು ತೆರೆದಿದೆ
Dakshina Kannada
ಪಿಲಿಕುಳಕ್ಕೆ ಈಗ ಸಂಕಷ್ಟ, ಅವ್ಯವಸ್ಥೆಯಿಂದ ನರಳುತ್ತಿವೆ ಪ್ರಾಣಿಗಳು! ಸಂಕಷ್ಟದಲ್ಲಿ ಕರ್ನಾಟಕದ ಅತ್ಯಂತ ಸುಂದರ ಮೃಗಾಲಯ ಪಿಲಿಕುಳ
ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಮೃಗಾಲಯವನ್ನು ತಕ್ಷಣವೇ ಮುಚ್ಚಿಬಿಡಿ” ಪಿಲಿಕುಳದಲ್ಲಿ ಪ್ರಾಣಿಗಳ ದಯಾನೀಯ ಸ್ಥಿತಿ ಕಂಡು ಶಾಕ್ ಆದ ನ್ಯಾಯಾದೀಶರು
ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯದ ಬಗ್ಗೆ ದೂರು. ಪ್ರವಾಸಿಗರ ಮೊದಲ ಆಯ್ಕೆ ಆಗಿದ್ದ ಈ ಜಾಗಕ್ಕೆ ಈಗ ಸಂಕಷ್ಟ, ಅವ್ಯವಸ್ಥೆಯಿಂದ ನರಳುತ್ತಿವೆ ಪ್ರಾಣಿಗಳು!
ಈಗ ಅವ್ಯವಸ್ಥೆಯಿಂದ ಸಂಕಷ್ಟ ಅನುಭವಿಸುತ್ತಿದೆ. ತುಕ್ಕುಪಂಜರ, ಅಶುಚಿ ನೀರು, ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಣೆ, ಪ್ರಾಣಿಗಳ ದಯನೀಯ ಸ್ಥಿತಿ ಹೈಕೋರ್ಟ್ ನ್ಯಾಯಾಧೀಶರನ್ನು ಶಾಕ್ ಮಾಡಿದೆ.

ಮಂಗಳೂರು: ಅರಬ್ಬಿ ಸಮುದ್ರದ ತಡಿಯ ಮಂಗಳೂರಿನಲ್ಲಿರೋ (Mangaluru) ಈ ಪಿಲಿಕುಳ ದೇಶದ ಅತ್ಯಂತ ನೈಸರ್ಗಿಕವಾದ ಮೃಗಾಲಯಗಳಲ್ಲಿ ಒಂದು ಅಂತಲೇ ಹೆಸರುವಾಸಿ. ಮಂಗಳೂರು ಪಿಲಿಕುಳ ಪಾರ್ಕ್,270 ಎಕರೆಗಳಲ್ಲಿ ಹಬ್ಬಿದ್ದು, ‘ಪಿಲಿ’ ಅಂದ್ರೆ ಹುಲಿ, ‘ಕುಳ’ ಅಂದ್ರೆ ಕೆರೆ. ಒಂದು ಕಾಲದಲ್ಲಿ ಹುಲಿಗಳು (Tigers) ಬಂದು ನೀರು ಕುಡಿಯುತ್ತಿದ್ದ ಈ ಜಾಗವನ್ನ ಇಂದು ಅಂತರಾಷ್ಟ್ರೀಯ ಮಟ್ಟದ ಜೈವಿಕ ಉದ್ಯಾನವನವಾಗಿ ರೂಪಿಸಲಾಗಿದೆ. ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರೋ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರೋ ಪಿಲಿಕುಳ, ಕರಾವಳಿಗೆ ಬರೋ ಪ್ರವಾಸಿಗರ ಮೊದಲ ಆಯ್ಕೆ. ಅಂತಹ ಸುಂದರ ತಾಣ ಇಂದು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ಪಿಲಿಕುಳದ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅಂದ್ರೆ, ಇಲ್ಲಿನ ಅವ್ಯವಸ್ಥೆ, ಪ್ರಾಣಿಗಳ ದಯಾನೀಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಧೀಶರೇ ಶಾಕ್ ಆಗಿದ್ದಾರೆ. ಮಂಗಳೂರಿನ ಪ್ರವಾಸಿಗರ ಹಾಟ್ ಫೇವರೆಟ್ ಪಿಲಿಕುಳ ಮೃಗಾಲಯಕ್ಕೀಗ ಇಂತಹದೊಂದು ಸಂಕಷ್ಟ ಎದುರಾಗಿದೆ. ಇದು ಇಲ್ಲಿರೋ ಮೂಕ ಪ್ರಾಣಿಗಳಿಂದಾದ ತಪ್ಪಲ್ಲ. ಬದಲಾಗಿ ಇಲ್ಲಿನ ಆಡಳಿತ ವ್ಯವಸ್ಥೆಯಿಂದ ಸ್ವಯಂ ಕೃತ ಅಪರಾಧ. ತುಕ್ಕು ಹಿಡಿದ ಪಂಜರ, ತುಕ್ಕು ಹಿಡಿದ ಪಂಜರ, ಕಲುಷಿತ ನೀರು ಅಶುಚಿ ವಾತಾವರಣ ಇದು ಪಿಲಿಕುಳ ಮೃಗಾಲಯದ ಸದ್ಯದ ಸ್ಥಿತಿ.

ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ವನ್ಯಜೀವಿ ಸಂರಕ್ಷಕ ಭುವನ್ ದೇವಾಡಿಗ ಅವರು ಕೇವಲ ದೂರು ನೀಡದೆ, ಮೃಗಾಲಯದ ಒಳಗಿನ ಭೀಕರ ಸ್ಥಿತಿಯನ್ನು ಎತ್ತಿ ತೋರಿಸುವ ಭದ್ರ ಸಾಕ್ಷ್ಯಗಳನ್ನು ಹೈಕೋರ್ಟ್ಗೆ ನೀಡಿದ್ದಾರೆ. ಸೊರಗಿದ ಪ್ರಾಣಿಗಳ ಫೋಟೋಗಳು: ಸರಿಯಾದ ಆಹಾರವಿಲ್ಲದೆ ಎಲುಬು ಕಾಣುವಂತಾಗಿರುವ ಚಿರತೆ ಮತ್ತು ಹುಲಿಗಳ ಫೋಟೋಗಳು. ಅಸುರಕ್ಷಿತ ಪಂಜರಗಳು, ತುಕ್ಕು ಹಿಡಿದು ಕಿತ್ತುಹೋಗಿರುವ ಕಬ್ಬಿಣದ ಸರಳುಗಳು, ಇದರಿಂದ ಪ್ರಾಣಿಗಳು ಹೊರಬರುವ ಅಥವಾ ಗಾಯ ಮಾಡಿಕೊಳ್ಳುವ ಅಪಾಯವಿದೆ ಎಂದು ತೋರಿಸಿದ್ದಾರೆ. ಪ್ರಾಣಿಗಳ ಕುಡಿಯುವ ನೀರಿನ ತೊಟ್ಟಿಗಳಲ್ಲಿ ಪಾಚಿ ಕಟ್ಟಿರುವುದು ಮತ್ತು ಪ್ರಾಣಿಗಳ ಮಲ-ಮೂತ್ರ ವಿಲೇವಾರಿ ಆಗದೆ ಪಂಜರದಲ್ಲೇ ಕೊಳೆಯುತ್ತಿರುವುದು. ಅನಾರೋಗ್ಯಕ್ಕೀಡಾದ ಪ್ರಾಣಿಗಳಿಗೆ ಸರಿಯಾದ ಸಮಯದಲ್ಲಿ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂಬುದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಅವರು ಸಂಗ್ರಹಿಸಿ ದಾಖಲೆಯಾಗಿ ನೀಡಿದ್ದಾರೆ.

ಪಿಲಿಕುಳ ಮೃಗಾಲಯದ ಕರ್ಮ ಕಾಂಡಗಳು ಹೈಕೋರ್ಟ್ನಲ್ಲಿ ಹೊರಬಿದ್ದಿವೆ. ಪ್ರಾಣಿಗಳನ್ನು ಇರಿಸಿರುವ ಪಂಜರಗಳು ಸಂಪೂರ್ಣ ತುಕ್ಕು ಹಿಡಿದಿವೆ, ಅಲ್ಲಿ ಸರಿಯಾದ ಭದ್ರತೆಯೇ ಇಲ್ಲ. ಅಶುಚಿಯಾದ ಪರಿಸರದಲ್ಲಿ ಪ್ರಾಣಿಗಳು ನರಳುತ್ತಿರೋ ಫೋಟೋಗಳನ್ನು ನೋಡಿ ನ್ಯಾಯಪೀಠ ಕೆಂಡಾಮಂಡಲವಾಗಿದೆ. ಇಲ್ಲಿ ಮತ್ತೊಂದು ದುರಂತ ಅಂದ್ರೆ ಜನಮನ್ನಣೆ ಪಡೆದ ಈ ಪಾರ್ಕ್ನ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೇ ಮುಕ್ತಾಯವಾಗಿದೆ. ಅಂದ್ರೆ ಸದ್ಯ ಯಾವುದೇ ಪರವಾನಗಿ ಇಲ್ಲದೇ ಪಿಲಿಕುಳ ಮೃಗಾಲಯ ನಡೀತಿದೆ. ಇಷ್ಟೆಲ್ಲಾ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ರೂ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ. ಮಲೀನಗೊಂಡ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿವೆ ಅನ್ನೋದು ಅರ್ಜಿದಾರರ ಗಂಭೀರ ಆರೋಪಕ್ಕೆ ಹೈಕೋರ್ಟ್ ಗರಂ ಆಗಿದೆ. ಇವುಗಳನ್ನು ನೋಡಿದ ನ್ಯಾಯಾಧೀಶರು ಆಘಾತ ಮತ್ತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಮೃಗಾಲಯವನ್ನು ತಕ್ಷಣವೇ ಮುಚ್ಚಿ” ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದ್ದು, ಮೃಗಾಲಯದ ಆಡಳಿತವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಅಥವಾ ವ್ಯವಸ್ಥಿತವಾಗಿ ಸುಧಾರಿಸುವಂತೆ ಸೂಚಿಸಿದೆ. ಕರ್ನಾಟಕ ಹೈಕೋರ್ಟ್ ಫೆಬ್ರವರಿ ಮೊದಲ ವಾರದಲ್ಲಿ ಪಿಲಿಕುಳ ಮೃಗಾಲಯದ ಬಗ್ಗೆ ಅತ್ಯಂತ ಕಠಿಣವಾದ ನಿಲುವನ್ನು ತಳೆದಿದೆ.

ಹೈಕೋರ್ಟ್ ಸರ್ಕಾರಕ್ಕೆ ಈ ಮೂರು ಪ್ರಶ್ನೆಗಳನ್ನು ಕೇಳಿದ್ದು, ಪರವಾನಗಿ ಇಲ್ಲದೆ ಇಷ್ಟು ದಿನ ಮೃಗಾಲಯವನ್ನು ಹೇಗೆ ನಡೆಸಲು ಬಿಟ್ಟಿದ್ದೀರಿ? ಪ್ರಾಣಿಗಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟ ಪರೀಕ್ಷೆಯ ವರದಿ ಎಲ್ಲಿದೆ? ಪ್ರಾಣಿಗಳ ಅಸಹಜ ಸಾವುಗಳ ಬಗ್ಗೆ ಪೋಸ್ಟ್ ಮಾರ್ಟಂ (Post-mortem) ವರದಿಯನ್ನು ತಕ್ಷಣ ಸಲ್ಲಿಸಿ. ಎಂದು ಉತ್ತರ ನೀಡಲು ತಿಳಿಸಿದೆ. ಮೃಗಾಲಯದ ನಿರ್ದೇಶಕರು ಮತ್ತು ಅಧಿಕಾರಿಗಳು ಇತ್ತೀಚೆಗೆ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಅಧಿಕ ಮಳೆಯಿಂದಾಗಿ ತಡೆಗೋಡೆ ಕುಸಿದು ಸಮಸ್ಯೆ ಉಂಟಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ಆದರೆ, ನ್ಯಾಯಾಲಯವು ಇದನ್ನು “ಆಡಳಿತಾತ್ಮಕ ವೈಫಲ್ಯ” ಎಂದು ಕರೆದಿದೆ. ಸರಿಯಾದ ಹಣಕಾಸಿನ ಹಂಚಿಕೆ ಇಲ್ಲದಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಮಾಜಿ ನಿರ್ದೇಶಕರು (ಜಯಪ್ರಕಾಶ್ ಭಂಡಾರಿ) ಈ ಹಿಂದೆ ರಾಜೀನಾಮೆ ನೀಡುವಾಗ ತಿಳಿಸಿದ್ದರು.

ಮುಂದಿನ ಕ್ರಮ ಏನಾಗಬಹುದು?
ನ್ಯಾಯಾಲಯದ ಸೂಚನೆಯಂತೆ ಸರ್ಕಾರವು ಮೃಗಾಲಯದ ನಿರ್ವಹಣೆಯನ್ನು ಸಂಪೂರ್ಣವಾಗಿ ಅರಣ್ಯ ಇಲಾಖೆ ಅಥವಾ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ (KZA) ಹಸ್ತಾಂತರಿಸುವ ಸಾಧ್ಯತೆಯಿದೆ. ಇಲ್ಲದಿದ್ದರೆ ಪ್ರಾಣಿಗಳನ್ನು ಬೇರೆ ಸುರಕ್ಷಿತ ಮೃಗಾಲಯಗಳಿಗೆ ವರ್ಗಾಯಿಸುವ ಆದೇಶ ಹೊರಬರುವ ಸಾಧ್ಯತೆಯಿದೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು (PIL) ಅತ್ಯಂತ ತುರ್ತು ವಿಷಯವೆಂದು ಪರಿಗಣಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ ತಿಂಗಳ ಮೂರನೇ ವಾರದಲ್ಲಿ ನಡೆಸಲು ನ್ಯಾಯಾಲಯ ನಿಗದಿಪಡಿಸಿದೆ. ಅಲ್ಲಿಯವರೆಗೆ ಪ್ರಾಣಿಗಳ ಪರಿಸ್ಥಿತಿಯ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ (CZA) ಸೂಚಿಸಿದೆ ಒಂದು ವೇಳೆ ಮೃಗಾಲಯದ ಪರವಾನಗಿಯನ್ನು ನವೀಕರಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ ನಿರಾಕರಿಸಿದರೆ, ಅಲ್ಲಿರುವ ಪ್ರಾಣಿಗಳನ್ನು ಶ್ರೀ ಚಾಮರಾಜೇಂದ್ರ ಮೃಗಾಲಯ (ಮೈಸೂರು) ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ ಅಥವಾ ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬೆಂಗಳೂರು) ಕ್ಕೆ ವರ್ಗಾಯಿಸುವ ಸಾಧ್ಯತೆಯಿದೆ

ಪಿಲಿಕುಳ ಒಂದು ಕಾಲದಲ್ಲಿ ಜಿಲ್ಲಾಡಳಿತದ ಅಡಿಯಲ್ಲಿದ್ದ ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರ (PNDA) ಮೂಲಕ ನಿರ್ವಹಿಸಲ್ಪಡುತ್ತಿತ್ತು. ಆದರೆ ಈಗ ಉಂಟಾಗಿರುವ ಅವ್ಯವಸ್ಥೆಯಿಂದಾಗಿ, ಇದನ್ನು ಸಂಪೂರ್ಣವಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ (KZA) ಸುಪರ್ದಿಗೆ ಪಡೆಯುವಂತೆ ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಕೆ.ಜೆಡ್.ಎ ಅಡಿಯಲ್ಲಿ ಬಂದರೆ ಪ್ರಾಣಿಗಳಿಗೆ ನಿರಂತರ ಅನುದಾನ ಮತ್ತು ಪರಿಣಿತ ವೈದ್ಯರ ಸೇವೆ ಸಿಗಲಿದೆ.

ಪಿಲಿಕುಳ ಮೃಗಾಲಯ ಒಂದು ಕಾಲದಲ್ಲಿ ಇದು ಕರ್ನಾಟಕದ ಅತ್ಯಂತ ಸುಂದರ ಮೃಗಾಲಯಗಳಲ್ಲಿ ಒಂದಾಗಿತ್ತು ಇದನ್ನು 1990ರ ದಶಕದ ಉತ್ತರಾರ್ಧದಲ್ಲಿ ಮಂಗಳೂರಿನ ವಾಮಂಜೂರಿನಲ್ಲಿ ಸ್ಥಾಪಿಸಲಾಯಿತು. ‘ಪಿಲಿಕುಳ’ ಎಂದರೆ ತುಳು ಭಾಷೆಯಲ್ಲಿ “ಹುಲಿಗಳ ಕೆರೆ” ಎಂದರ್ಥ. ಇಲ್ಲಿ ಅಪರೂಪದ ರಾಜನಾಗ (King Cobra) ಸಂತಾನೋತ್ಪತ್ತಿ ಕೇಂದ್ರವಿದ್ದು, ಇದು ಏಷ್ಯಾದಲ್ಲೇ ಪ್ರಸಿದ್ಧವಾಗಿದೆ. ಸುಮಾರು 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನವನವು ಕರಾವಳಿಯ ಜೀವವೈವಿಧ್ಯದ ಕೇಂದ್ರವಾಗಿತ್ತು.
ಪಿಲಿಕುಳ ರೀಜನಲ್ ಸೈನ್ಸ್ ಸೆಂಟರ್ ಮೃಗಾಲಯಕ್ಕೆ ಹೋಲಿಸಿದರೆ ವಿಜ್ಞಾನ ಕೇಂದ್ರದ ಸ್ಥಿತಿ ಉತ್ತಮವಾಗಿದೆ. ಈಗ ಹೈಕೋರ್ಟ್ನ ಫೆಬ್ರವರಿ 3ನೇ ವಾರದ ವಿಚಾರಣೆಯ ಮೇಲೆ ಎಲ್ಲರ ಕಣ್ಣಿದೆ. ಅಲ್ಲಿ ಹೊರಬರುವ ತೀರ್ಪು ಪಿಲಿಕುಳದ ಪ್ರಾಣಿಗಳ ಭವಿಷ್ಯವನ್ನು ನಿರ್ಧರಿಸಲಿದೆ.
Entertainment
ಮಾಯವಾದ ಬಿಸಿಲಿಗಿಟ್ಟ ಸೋಫಾ ಸೆಟ್ : ಸಿಸಿಟಿವಿ ಪರಿಶೀಲಿಸಿದಾಗ ಏನಾಯ್ತು ನೋಡಿ !
ಮನೆಯಲ್ಲಿ ಹಾಸಿಗೆ ತಲೆದಿಂಬು ಸೋಫಾಗಳನ್ನು ಬಿಸಿಲಿಗಿಡುವುದು ಸರ್ವೇ ಸಾಮಾನ್ಯ ಏಕೆಂದರೆ ಫಂಗಸ್, ತಿಗಣೆಗಳ ಕಾಟ ಜಿರಲೆ ಕಾಟ ತಪ್ಪಿಸಲು ಮತ್ತು ಬೆಚ್ಚಗಿರಲೆಂದು ಬಹುತೇಕ ಮನೆಯವರು ಬಟ್ಟೆ-ಬರೆ ಕಂಬಳಿಗಳನ್ನು ಹೊರಗಿಟ್ಟು ಬಿಸಿಲು ಕಾಯಿಸುವುದು ಎಲ್ಲರ ಅಭ್ಯಾಸ. ಆದರೆ ಇದೇ ಅಭ್ಯಾಸ ಪೇಟೆ ಬದಿಯ ಮನೆಯಲ್ಲಿದ್ದ ಮಹಿಳೆಯೊಬ್ಬರಿಗೆ ದೊಡ್ಡ ಆಘಾತವನ್ನು ತಂದುಕೊಟ್ಟಿದೆ. ತನ್ನ ಬೆಲೆ ಬಾಳುವ ಸೋಫಾವನ್ನು ಬಿಸಿಲಿಗಿಟ್ಟು ಒಳಗೆ ಹೋದವಳು ಹಿಂದಿರುಗಿ ಬಂದಾಗ ಸೋಫಾವೇ ಇಲ್ಲದಾಗಿತ್ತು..
ನಗರದಲ್ಲಿ ವಿಶಾಲವಾದ ಅಂಗಳವಿಲ್ಲದ ಮನೆಯೊಂದರಲ್ಲಿ ಗೃಹಿಣಿಯೊಬ್ಬರು ತಮ್ಮ ಸೋಫಾವನ್ನು ಸ್ವಚ್ಛಗೊಳಿಸಿ, ಬಿಸಿಲು ತಾಗಲಿ ಎಂದು ಮನೆಯ ಮುಂದಿನ ರಸ್ತೆಯ ಬದಿಯಲ್ಲಿಯೇ ಇಟ್ಟರು. ಆದರೆ ಅವರು ಒಳಗೆ ಹೋಗಿ ಕೆಲವೇ ನಿಮಿಷಗಳಲ್ಲಿ ಹೊರಗೆ ಬಂದಾಗ ಸೋಫಾ ಇರಲಿಲ್ಲ. ಇಷ್ಟು ದೊಡ್ಡ ಸೋಫಾವನ್ನು ಯಾವ ಕಳ್ಳರು ಹೊತ್ತೊಯ್ದರು ಎಂದು ಗಾಬರಿಗೊಂಡು ಆಕೆ ಮನೆಯ ಸಿಸಿಟಿವಿ ಫುಟೇಜ್ ಪರಿಶೀಲಿಸಿದಾಗ ತಾನು ಯೋಚಿಸಲಾರದ ಘಟನೆಯೊಂದು ಕ್ಷಣಮಾತ್ರದಲ್ಲಿ ನಡೆದುಹೋಗಿ ಸೋಫಾ ಇನ್ನೆಂದೂ ಬಾರದ ಲೋಕಕ್ಕೆ ಹೋಗಿ ಬಿಟ್ಟಿತ್ತು.
ಸಿಸಿಟಿವಿಯಲ್ಲಿ ಕಂಡಿದ್ದು ಈ ರೀತಿ ಇತ್ತು. ಪೌರಸಭೆಯ ಕಸ ತೆಗೆಯುವ ಲಾರಿ ಬಂದಿತು. ಕಾರ್ಮಿಕರು ರಸ್ತೆಯಲ್ಲಿ ಇಟ್ಟಿದ್ದ ಸೋಫಾವನ್ನು ಎಸೆಯಲು ಇಟ್ಟ ವಸ್ತು ಎಂದು ಭಾವಿಸಿ, ಸುಲಭವಾಗಿ ಲಾರಿಗೆ ತುಂಬಿಸಿ ಕೊಂಡೊಯ್ದರು. ಮಹಿಳೆ ಒಳಗೆ ಹೋಗುತ್ತಿದ್ದಂತೆಯೇ ಈ ಘಟನೆ ನಡೆದಿತ್ತು. ಯಾರೂ ದುರುದ್ದೇಶಪೂರ್ವಕವಾಗಿ ಮಾಡಿರಲಿಲ್ಲ ಕೇವಲ ತಪ್ಪು ತಿಳಿವಳಿಕೆಯಿಂದ ಆಗಿದ್ದ ಅನಾಹುತವೊಂದು ನಡೆದುಹೋಗಿತ್ತು.
ನಗರಗಳಲ್ಲಿ ಮನೆಯ ಮುಂದೆ ರಸ್ತೆಯಲ್ಲೇ ಕಸ, ಹಳೆಯ ವಸ್ತುಗಳನ್ನು ಇಡುವುದು ಸಾಮಾನ್ಯ. ಮುಂಜಾನೆ ಪೌರ ಕಾರ್ಮಿಕರು ಬಂದಾಗ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಸೋಫಾ ಸಹ ಅದೇ ರೀತಿ ಅವರಿಗೆ ರಿಜೆಕ್ಟೆಡ್ ಆಗಿ ಕಾಣಿಸಿತು. ಅವಸರವಸರವಾಗಿ ಬರುವ ಪೌರಕಾರ್ಮಿಕರು ಮಾರ್ಗದ ಬದಿಯಲ್ಲಿ ಇಟ್ಟಿದ್ದೆಲ್ಲಾ ಕಸದ ಪಟ್ಟಿಗೆ ಸೇರಿಸಿಕೊಂಡು ವಿಲೇವಾರಿ ಮಾಡುತ್ತಾರೆ.
ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಇನ್ನು ಮುಂದೆ ಸೋಫಾ ಹೊರಗಿಡುವ ಮೊದಲು ಬೋರ್ಡ್ ಹಾಕಬೇಕು, ‘ಇದು ಎಸೆಯಲು ಅಲ್ಲ’ ಅಂತ!” ಎಂದು ಜನರು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸೋಫಾವನ್ನು ಕದ್ದೊಯ್ಯಲು ಯಾವತ್ತೂ ಕಳ್ಳರಿಗೆ ಸಾಧ್ಯವಿರಲಿಲ್ಲ ಆದರೆ ಸಣ್ಣ ಅಜಾಗ್ರತೆಯಿಂದ ದೊಡ್ಡ ನಷ್ಟವನ್ನು ಅನುಭವಿಸಿದ್ದಾರೆ ಸೋಪಾದ ಮಾಲಕಿ

Dakshina Kannada
ರಂಗ ವಿಧಾತ ಭರತ್ ಎಸ್ ಕರ್ಕೇರರಿಗೆ ರಾಷ್ಟ್ರ ಮಟ್ಟದ “ಕಲಾವಿಭೂಷಣ” ಗೌರವ ಪ್ರಶಸ್ತಿ
ಮಂಗಳೂರು ತಾಲೂಕು ಕಂದಾವರ ಪದವು ನಿವಾಸಿ ಖ್ಯಾತ ನಾಟಕಕಾರರು, ಕಲಾವಿದರು, ಸಾಮಾಜಿಕ ಕಾರ್ಯಕರ್ತರಾದ ಶ್ರೀ ಭರತ್ ಎಸ್. ಕರ್ಕೇರ ಇವರು ಭಾರತದ ಅತ್ಯಂತ ಪ್ರಸಿದ್ದ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ “ರಾಷ್ಟ್ರೀಯ ಯುವ ದಿನಾಚರಣೆ”ಯ ನಿಮಿತ್ತ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ.) ನಾಗರಮುನ್ನೋಳಿ ವತಿಯಿಂದ ಕೊಡಲ್ಪಡುವ ರಾಷ್ಟ್ರ ಮಟ್ಟದ ಗೌರವ ಪ್ರಶಸ್ತಿ”ಕಲಾ ವಿಭೂಷಣ ಪ್ರಶಸ್ತಿ – 2026 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಲಾ ಕ್ಷೇತ್ರದಲ್ಲಿ ಮತ್ತು ಸಮಾಜ ಸೇವಾ ಕಾರ್ಯದಲ್ಲಿ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಶೈಲಿ ಹಾಗೂ ಪ್ರತೀಯೊಂದು ಸಾಹಿತ್ಯದಲ್ಲೂ ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡು, ಸಮಾಜಮುಖಿ ಬರಹಗಳನ್ನು ನೀಡಿದ ಹಿರಿಮೆ ಇವರದ್ದು.
ಜೊತೆಗೆ ಬೀದಿನಾಟಕ , ರಂಗ ನಾಟಕ, ಆಪ್ತ ರಂಗಭೂಮಿಯಲ್ಲಿಯೂ ಕಲಾವಿದರಾಗಿ ಕಲಾಮಾತೆಯ ಸೇವಗೈದು ಕಲಾಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಶ್ರೀ ಭರತ್ ಎಸ್. ಕರ್ಕೇರ ಅವರು ಕಲಾವಿದರುಗಳಿಗೆ ಪ್ರೇರಣೆಯಾಗಿದ್ದು, ಕಲಾಸಂಸ್ಕೃತಿಯ ಉಳಿವಿಗೆ ತಮ್ಮ ಸೇವೆಯನ್ನು ಸಮರ್ಪಿಸಿದ್ದಾರೆ. ಅವರ ಈ ಸಾಧನೆಯನ್ನು ಗುರುತಿಸಿ ನೀಡಲಾಗುತ್ತಿರುವ ಕಲಾ ವಿಭೂಷಣ ಪ್ರಶಸ್ತಿ – 2026 ಕಲಾ ವಲಯದಲ್ಲಿ ಸಂತಸ ಮತ್ತು ಹೆಮ್ಮೆಗೆ ಕಾರಣವಾಗಿದೆ.
ಇವರು ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ , ಈ ಗೌರವ ಪ್ರಶಸ್ತಿಯನ್ನು ನೀಡುತ್ತಿದ್ದು ಜನವರಿ 25 ರಂದು ಬೆಳಗಾವಿ ಜಿಲ್ಲೆಯ ನಾಗರಮುನ್ನೋಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಪೂರ್ವಕವಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಗೌರವಕ್ಕಾಗಿ ವಿವಿಧ ಸಂಘ–ಸಂಸ್ಥೆಗಳು, ಕಲಾಭಿಮಾನಿಗಳು ಹಾಗೂ ಬಂಧು–ಮಿತ್ರರು ಶ್ರೀ ಕರ್ಕೇರ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಧರ್ಮಶ್ರೀ ಧರ್ಮಸ್ಥಳ
-
crime7 days agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala1 month agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada2 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala1 month agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
crime3 weeks agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
-
Bantawala2 months agoಕೇಪು ಅಕ್ರಮ ಕೋಳಿ ಅಂಕಕ್ಕೆ ಧಾಳಿ; 16ಜನ, 22ಹುಂಜಗಳ ಸಹಿತ ಬಾಳು ಕತ್ತಿ ವಶಕ್ಕೆ ಪಡೆದ ವಿಟ್ಲ ಪೊಲೀಸರು.. ಪುತ್ತೂರು ಶಾಸಕರ ಸಹಿತ ಜಾಗ ನೀಡಿದ ಮಾಲಿಕನ ಮೇಲೂ ಬಿತ್ತು ಕೇಸು.
-
DEATH2 weeks agoವಿಟ್ಲದ ಜನಪ್ರಿಯ ಚಾಲಕ ಕುಮಾರಣ್ಣ ಹೃದಯಾಘಾತಕ್ಕೆ ಬಲಿ
-
Bantawala4 weeks agoನಿನ್ನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ತಲೆಕ್ಕಿ ಮಹಮ್ಮದ್ ಹಾಜಿ.. ; ಇಂದು ಸಂಜೆ ನೇತ್ರಾವತಿ ನದಿಯಲ್ಲಿ ಪತ್ತೆ.. ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ..

