Connect with us

Bantawala

ವಿಟ್ಲದಲ್ಲಿ ಪತ್ತೆಯಾಗಿದೆ ರೋಗ ಪ್ರಸರಣದ ಉತ್ಪತ್ತಿ ಕೇಂದ್ರ

Published

on

ವಿಟ್ಲ : ವಿಟ್ಲದಲ್ಲಿ ದಿನಂಪ್ರತಿ ಪ್ರಜ್ಞೆ ತಪ್ಪುವ ವಿಪರೀತ ದುರ್ವಾಸನೆಯ ಗಬ್ಬು ಕಲುಷಿತ ನೀರು ಮಾರ್ಗದ ಇಕ್ಕೆಡೆಗಳಲ್ಲಿ ಹರಿದು ಹೋಗುತ್ತಿದ್ದು, ಒಂದು ನಿಮಿಷ ಅದನ್ನು ಉಸಿರಾಡಿದರೆ ರೋಗ ಬರುವುದಂತೂ ಗ್ಯಾರಂಟಿ. ಆದರೆ ಆ ದುರ್ವಾಸನೆಯ ನೀರು ಎಲ್ಲಿಂದ ಬರುತ್ತಿತ್ತು ಎಂಬುವುದನ್ನು ಪತ್ತೆ ಹಚ್ಚಿದಾಗ ಕೊನೆಗೂ ರೋಗ ಪ್ರಸರಣದ ಉತ್ಪತ್ತಿ ಕೇಂದ್ರ ವಿಟ್ಲದಲ್ಲಿ ಪತ್ತೆಯಾಗಿದೆ.


ವಿಟ್ಲ ಸಂತೆ ಮಾರ್ಕೇಟ್ ಎದುರಾಗಿರುವ ಸ್ಮಾರ್ಟ್ ಬಿಲ್ಡಿಂಗ್‌ನ ಕೆಳ ಫ್ಲೋರ್‌ನ ಬದಿಯಲ್ಲಿ ನಿರ್ಮಿಸಲಾದ ಟ್ಯಾಂಕಿಗೆ ಇಡೀ ಬಿಲ್ಡಿಂಗ್‌ನ ಕಲುಷಿತ ನೀರು ಬಂದು ಶೇಖರಣೆಯಾಗುತ್ತಿದ್ದು, ಹುಳಗಳು ಆಗಿ ಅದು ತುಂಬಿ ತುಳುಕುವಾಗ ಅದರೊಳಗೆ ಅಳವಡಿಸಲಾದ ಪಂಪಿನ ಮೂಲಕ ವಿಟ್ಲ ರಸ್ತೆಯ ಚರಂಡಿಗೆ ಬಿಡುವುದು ಕಂಡು ಬಂದಿದೆ. ಇದು ಪ್ರತೀ ದಿನವೂ ನಡೆಯುತ್ತಿರುವ ಪ್ರಕ್ರಿಯೆಯಾಗಿ ಕಾಣುತ್ತಿದ್ದು, ವಿಟ್ಲ ಪರಿಸರದೆಲ್ಲೆಡೆ ಮೂಗು ಮುಚ್ಚಿಕೊಂಡೇ ವ್ಯವಹರಿಸಬೇಕಾದ ದುಸ್ಥಿತಿಗೆ ಯಾರು ಹೊಣೆ ಎಂದು ಕೇಳುವವರೇ ಇಲ್ಲವಾಗಿದೆ.

ರೋಗ ಪ್ರಸರಣದ ಉತ್ಪತ್ತಿ ಟ್ಯಾಂಕಿಯ ಕಲುಷಿತ ನೀರನ್ನು ಪಂಪಿನಿoದ ಮೇಲೆತ್ತಿ ಮಾರ್ಗದ ಚರಂಡಿಗೆ ಬಿಡುವ ವಿಡಿಯೋ

ಇಡೀ ವಿಟ್ಲ ಪೇಟೆಯೆಂಬುದೇ ತ್ಯಾಜ್ಯ ಗುಂಡಿಗಿoತಲೂ ಕಡೆಯದಾಗಿದೆ. ಪ್ರತೀ ವರ್ಷ ಸ್ವಚ್ಚತೆ, ಕಸ ವಿಲೇವಾರಿಯ ನೆಪದಲ್ಲಿ ಸಾರ್ವಜನಿಕರ ಹಣ ಲಕ್ಷಕ್ಕೂ ಹೆಚ್ಚು ವ್ಯವಹಿಸುವ ಪಂಚಾಯತ್‌ಗೆ ಅದರಲ್ಲಿ ಒಂದಿಷ್ಟಾದರೂ ಸದ್ವಿನಿಯೋಗ ಆಗಬೇಕೆಂಬ ಆತ್ಮಸಾಕ್ಷಿ ಇಲ್ಲದಿರುವುದು ವಿಟ್ಲದ ನಾಗರಿಕರ ದೌರ್ಭಾಗ್ಯವೆಂದೇ ಹೇಳಬೇಕಾಗಿದೆ.
ಜನಪ್ರತಿನಿಧಿಗಳ ನಿತ್ಯ ಜನಸೇವೆ ಇದಾದರೆ ಇಲ್ಲಿನ ಆರೋಗ್ಯಾಧಿಕಾರಿಗಳು ಕೂಡಾ ತನ್ನ ಪರಿಸರದ ಸ್ವಚ್ಛತೆಯ ಬಗ್ಗೆ ಚಕಾರವೆತ್ತುತ್ತಿಲ್ಲ. ಎಲ್ಲರೂ ಮೌನವಾದರೆ ಸಾಂಕ್ರಾಮಿಕ ರೋಗಗಳು ವಿಟ್ಲವನ್ನು ಬಾಧಿಸುವ ದಿನಗಳು ದೂರವಿಲ್ಲ.


ಯಾವ ಇಂಜಿನಿಯರ್ ಈ ಪ್ಲಾನ್ ಹೇಳಿಕೊಟ್ಟರೋ ? ಅಥವಾ ವಿಟ್ಲದ ಜನತೆಗೆ ಮೂಗು ಮುಚ್ಚಿಕೊಂಡು ವ್ಯವಹರಿಸುವುದು ಸಲೀಸಾಗಿದೆ ಎಂಬ ದುರಹಂಕಾರದಿoದಲೋ, ಅಥವಾ ಆರೋಗ್ಯ ಇಲಾಖೆಯ ಗಾಢ ನಿದ್ರೆಗೆ ರೋಗದಿಂದ ಜನರ ಬಲಿಯಾಗಲಿ ಎಂದೋ ಮಾದ್ಯಮದವರು, ಅಧಿಕಾರಿಗಳು, ಇಲಾಖೆಗಳು ಕೇಳುವವರೇ ಇಲ್ಲವಾಗಿದ್ದಾರೆ ಎಂದೋ ಆ ಕಲುಷಿತ ನೀರು ದುರ್ವಾಸನೆಯನ್ನು ಬೀರುತ್ತಾ, ವಿಟ್ಲದ ಪ್ರಮುಖ ಬೀದಿ ಬಸ್ಸು ನಿಲ್ದಾಣವನ್ನು ದಾಟಿ ಹಿರ ಟರ‍್ಸ್ನ ಹಿಂಬದಿಯಿoದ ಕ್ಯಾಂಪ್ಕೊ ಬದಿಯಲ್ಲಿ ಸಾಗಿ ಹೊಳೆ ಸೇರುವವವರೆಗೆ ಯಾರು ಕೂಡಾ ದುರ್ನಾತದ ಬಗ್ಗೆ ಪ್ರಶ್ನಿಸುವುದಿಲ್ಲ ಎಂದರೆ ಪಟ್ಟಣ ಪಂಚಾಯತ್, ಆರೋಗ್ಯ ಇಲಾಖೆ ಇನ್ನಾದರೂ ತಕ್ಷಣ ಎಚ್ಚೆತ್ತು ಕೊಳ್ಳಬೇಕೆಂದು ಆಕ್ರೋಶಿತರಾದ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮುಂದೆನಾಗುತ್ತೋ ಕಾದು ನೋಡೋಣ !

ವಿಟ್ಲ ಗ್ರಾಮ ಪಂಚಾಯತು ಸಾರ್ವಜನಿಕರ ಬದುಕನ್ನು ನಿರ್ಲಕ್ಷಿಸದೆ ಸ್ವಚ್ಛತೆಗೆ ಗಮನ ನೀಡಿ ಪರಿಸರವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ

Continue Reading
Advertisement

Bantawala

ವಿಟ್ಲದಲ್ಲಿ ಬಡಕಾರ್ಮಿಕೆ ರಾಜೇಶ್ವರಿಯವರ ಮನೆ ಬೆಂಕಿಗಾಹುತಿ

Published

on

ವಿಟ್ಲ ಸಮೀಪದ ವೀರಕಂಬ ಗ್ರಾಮದ ಗಣೇಶ್ ಕೋಡಿ ನಿವಾಸಿ ಕಾರ್ಮಿಕೆಯಾಗಿರುವ ರಾಜೇಶ್ವರಿ ಎಂಬವರ ಮನೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಹೊತ್ತಿ ಉರಿದ ಘಟನೆಯೊಂದು ಪೆ.10ರಂದು ಸಂಭವಿಸಿದ್ದು, ಬಡ ನಿರ್ಗತಿಕ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.


ಮನೆಯೊಡತಿ ರಾಜೇಶ್ವರಿ ಅವರು ಎಂದಿನಂತೆ ಬೆಳಗ್ಗೆ ಬೀಗ ಹಾಕಿ ಅಡಿಕೆ ಗಾರ್ಬನ್ ಕೆಲಸಕ್ಕೆ ಹೋಗಿದ್ದರೆ ಮಕ್ಕಳಿಬ್ಬರು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಮನೆಯನ್ನು ಭಸ್ಮ ಮಾಡಿದೆ.

ಮನೆಯಿಂದ ವಿಪರೀತ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಜಮಾಯಿಸಿ ಬೆಂಕಿಯನ್ನು ನಂದಿಸುವಷ್ಟರಲ್ಲಿಯೇ ಮನೆಯೊಳಗಿದ್ದ ಮಕ್ಕಳ ಬಟ್ಟೆಬರೆ ಶಾಲಾ ಪುಸ್ತಕಗಳು, ಮನೆಯ ದಾಖಲೆಪತ್ರಗಳು ಸೇರಿದಂತೆ ಮನೆಯೊಳಗಿದ್ದ ವಸ್ತುಗಳು ಕರಟಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಬಡ ಕಾರ್ಮಿಕೆ ಗಾರ್ಬಲ್‌ ಕೆಲಸಕ್ಕೆ ಹೋಗಿ ದುಡಿದು ಜೀವನ ಸಾಗಿಸುತ್ತಿದ್ದು, ಮನೆ ಬೆಂಕಿಗಾಹುತಿಯಾದ ಘಟನೆಯಿಂದ ತೀವ್ರ ಅಸ್ವಸ್ಥರಾಗಿದ್ದು, ಅವರ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

Continue Reading

accident

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ದುರ್ಮರಣ..

Published

on

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ನಿಧನರಾಗಿದ್ದಾರೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗದಲ್ಲಿದ್ದ ನಿಶಿತ್ ಊರಿಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು ತಡರಾತ್ರಿ 2-30ರ ಸುಮಾರಿಗೆ ಚೆನ್ನರಾಯಪಟ್ಟಣ ಹೊರವಲಯದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ನಿಶಿತ್ ನಾಯ್ಕ್ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.


ಪುಣಚ ಗ್ರಾಮದ ಬುಡಲೆ ನಿವಾಸಿ, ಮಾಜಿ ಸೈನಿಕರಾಗಿರುವ ಕುಂಞಣ್ಣ ನಾಯ್ಕ್ ಪುತ್ರ ನಿಧನದ ಸುದ್ದಿ ಗ್ರಾಮಸ್ಥರ ಅತೀವ ದು:ಖಕ್ಕೆ ಕಾರಣವಾಗಿದೆ. ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಓರ್ವ ಸಹೋದರಿ ನಿಶಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೀಗ ಹಾಸನದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಪ್ರಾರ್ಥಿವ ಶರೀರ ಪುಣಚ ಗ್ರಾಮ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Continue Reading

Bantawala

ಕುಟುಂಬದ ಯಜಮಾನರಾಗಿ ಪೂಂಜರಬೆಟ್ಟು ಕೇಶವ ಭಂಡಾರಿ; ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನಾ ಸಭೆ

Published

on

ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಕುದ್ರಿಯ ತರವಾಡಿನ ನೂತನ ಯಜಮಾನರಾಗಿ ಹಿರಿಯ ದೈವ ಚಾಕಿರಿಯವರಾದ ಪೂಂಜರಬೆಟ್ಟು ಕೇಶವ ಭಂಡಾರಿ ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳು ಮತ್ತು ಕುಟುಂಬಿಕರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನೆಯ ಸಭೆ ನಡೆಯಿತು.

ಹಿಂದಿನ ಟ್ರಸ್ಟಿಗಳ ಮರಣ, ರಾಜೀನಾಮೆ, ಹಾಗೂ ವಜಾಗೊಂಡ ಸದಸ್ಯರ ಸ್ಥಾನಕ್ಕೆ ನೂತನ ಟ್ರಸ್ಟಿಗಳನ್ನು ಆಯ್ಕೆ ಮಾಡಲಾಯಿತು. ಕುದ್ರಿಯ ಗುತ್ತು ಟ್ರಸ್ಟಿನ ನೂತನ ಗೌರವಾಧ್ಯಕ್ಷರಾಗಿ ವಿಠಲ ಮೋನಪ್ಪ ಶೆಟ್ಟಿ ನಾಂದೇಡ್, ಅಧ್ಯಕ್ಷರಾಗಿ ಚಂದ್ರಹಾಸ ಎಂ ಶೆಟ್ಟಿ ಅಳಕೆಮಜಲು, ಉಪಾಧ್ಯಕ್ಷರಾಗಿ ರೋಹಿಣಿ ರೈ ನೇರಳಕಟ್ಟೆ, ಹಾಗೂ ಚಂದ್ರಹಾಸ ರೈ ಮುಲ್ಕಾಜೆ ಮಾ ಡ, ಕಾರ್ಯದರ್ಶಿಯಾಗಿ ಗಣೇಶ್‌ ರೈ, ಕೋಶಾಧಿಕಾರಿಯಾಗಿ ಧನಂಜಯ ಶೆಟ್ಟಿ ಮುತ್ತೂರು, ಇವರನ್ನು ಟ್ರಸ್ಟಿಗಳ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರನ್ನು ಕುಟುಂಬಿಕರ ಮತ್ತು ಟ್ರಸ್ಟಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

Continue Reading

Trending

Copyright © 2025 Deevatige