Connect with us

Dakshina Kannada

ಜೇನು ಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ; ಉಪ್ಪಿನಂಗಡಿ ಪೊಲೀಸರಿಂದ ಪೋಕ್ಸೋ ಆರೋಪಿ ಬಂಧನ.

Published

on

ಉಪ್ಪಿನಂಗಡಿ: ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿಯನ್ನು ಕಾಮುಕನೊಬ್ಬ ಜೇನು ಕೃಷಿ ಕಲಿಸುವ ನೆಪದಲ್ಲಿ ಎರಡು ವಾರಕ್ಕಿಂತಲೂ ಹೆಚ್ಚು ಸಮಯ ನಿರಂತರವಾಗಿ ಅತ್ಯಾಚಾರ ಮಾಡಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಮಹಿಳೆಯು ತನ್ನ ಗಂಡ ಹಾಗೂ ಅಪ್ರಾಪ್ತ ಪ್ರಾಯದ ಮಗಳೊಂದಿಗೆ ಕೆಲಸದ ನಿಮಿತ್ತ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಸ್ಥಳೀಯ ನಿವಾಸಿ ಅಬ್ದುಲ್ ಗಫೂರ್ ಎಂಬಾತ ಅಪ್ರಾಪ್ತ ಮಗಳಿಗೆ ಜೇನು ಕೃಷಿ ಕಲಿಸುವ ಭರವಸೆ ನೀಡಿದ್ದಾನೆ. ಈತನ ಮಾತು ನಂಬಿದ ದಂಪತಿ ತಮ್ಮ ಅಪ್ರಾಪ್ತ ಪುತ್ರಿಯನ್ನು ಅಬ್ದುಲ್ ಗಫೂರ್ ಮನೆಯಲ್ಲಿ ಬಿಟ್ಟು ತಮ್ಮ ಊರಿಗೆ ತೆರಳಿದ್ದಾರೆ. 2025 ಡಿಸೆಂಬರ್25 ರಂದು ಊರಿನಿಂದ ಮರಳಿ ಬಂದ ದಂಪತಿ ಜೊತೆ ಅಪ್ರಾಪ್ತ ಪುತ್ರಿ ತನ್ನ ಮೇಲಿನ ದೌರ್ಜನ್ಯ ಬಗ್ಗೆ ಕಣ್ಣೀರಿಟ್ಟು ವಿವರಿಸಿದ್ದಾಳೆಂದು ದೂರಿನಲ್ಲಿ ವಿವರಿಸಲಾಗಿದೆ. 2025 ಡಿಸೆಂಬರ್2 ರಿಂದ ಆರೋಪಿ ಅಬ್ದುಲ್ ಗಫೂರ್ ಅಪ್ರಾಪ್ತೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಬಗ್ಗೆ ಪೋಷಕರು ದೂರು ನೀಡಿದ್ದಾರೆ. ದೂರಿಗೆ ಸಂಬoಧಿಸಿದo118ತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಅ. ಕ್ರ 118/2025, ಕಲಂ: 115(2),351(2),65(1) BNS-2023 4,6 ಪೋಕ್ಸೋ ಕಾಯ್ದೆ 2012 ಪ್ರಕರಣ ದಾಖಲಾಗಿದೆ . ಆರೋಪಿ ಅಬ್ದುಲ್ ಗಫೂರ್‌ನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Continue Reading
Advertisement

crime

ಹಣ ಒಡವೆಯೊಂದಿಗೆ ಪರಾರಿಯಾಗುತ್ತಿದ್ದ ವಧುವಂಚಕನ ಹೆಡೆಮುರಿ ಕಟ್ಟಿದ ಪೊಲೀಸರು

Published

on

ಆನ್‌ ಲೈನ್‌ ಪ್ಲಾಟ್‌ ಫಾರಂ ಮ್ಯಾಟ್ರಮೋನಿ ಮೂಲಕ ಹಲವಾರು ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಒಡವೆಯೊಂದಿಗೆ ಪರಾರಿಯಾಗುತ್ತಿದ್ದ ವಧುವಂಚಕನ ಹೆಡೆಮುರಿ ಕಟ್ಟಿದ ಪೊಲೀಸರು. ಆರೋಪಿತನಾದ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ದಿನಾಂಕ:05/02/2026 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಆಪಾದಿತನು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯಮಾಡಿಕೊಂಡು ಇಬ್ಬರನ್ನು ಮದುವೇಯಾಗಿ ವಂಚಿಸಿ ಪರಾರಿಯಾಗಿದ್ದರೆ, 5 ಜನ ಮಹಿಳೆಯರನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿರುವುದಾಗಿ ತನಿಖೆಯಲ್ಲಿ ಬೇಳಕಿಗೆ ಬಂದಿದೆ. ಈತನ ವಂಚನಾ ಮದುವೆ ವ್ಯವಹಾರಕ್ಕೆ ಮುಲ್ಕಿ ನಿವಾಸಿ ಭಾಸ್ಕರ್‌ ಎಂಬಾತನೂ ಸಹಕರಿಸುತ್ತಿದ್ದು, ಸದ್ರಿ ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.
ಆರೋಪಿತ ಸುಶಾಂತ್ ಪೂಜಾರಿ ವಿರುದ್ದ ಮಂಗಳೂರು ಊರ್ವಾ ಪೊಲೀಸ್ ಠಾಣಾಅ.ಕ್ರ: 202/2017 ಕಲಂ: 406, 420 ಐಪಿಸಿ, ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣಾ ಅ.ಕ್ರ: 132/2022 ಕಲಂ: 379 ಐಪಿಸಿ ಮತ್ತು ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೊಲೀಸ್ ಠಾಣಾ ಅ.ಕ್ರ:354/2022 ಕಲಂ:336(ಎ), 370, 370(4), 376(2),(ಎನ್) 342, ಜೊತೆಗೆ 34 ಐಪಿಸಿ ಕಲಂ:3,4,5 ಇಮ್ಮೋರಲ್ ಟ್ರಾಫಿಕಿಂಗ್ ಆ್ಯಕ್ಟ್, ಕಲಂ:4,8,12 ಪೋಕ್ಸೋ ಕಾಯ್ದೆ ರಂತೆ ಪ್ರಕರಣಗಳು ದಾಖಲಾಗಿರುತ್ತದೆ.
ನೊಂದ ಮಹಿಳೆಗೆ ಸುಶಾಂತ್ ಪೂಜಾರಿ ಎಂಬ ವ್ಯಕ್ತಿಯು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈ ನಲ್ಲಿ 02/02/2025 ರಲ್ಲಿ ಮದುವೆಯಾಗಿದ್ದಲ್ಲದೆ ನಂಬಿಸಿ ಹಂತ ಹಂತವಾಗಿ 6,60,000/- ಹಣವನ್ನು ಪಡೆದುಕೊಂಡು ಮೋಸ ಮಾಡುವ ಉದ್ದೇಶದಿಂದ ದಿನಾಂಕ 15/11/2025 ರಂದು ನಾಪತ್ತೆ ಯಾಗಿರುತ್ತಾನೆ. ನಂತರದ ದಿನಗಳಲ್ಲಿ ಪಿರ್ಯಾದುದಾರರು ಅನುಮಾನಗೊಂಡ ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಸುಮಾರು ಕಡೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಮೋಸ ಮಾಡಿರುವ ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದ ಮೇರೆಗೆ ಪಿ ನೊಂದ ಮಹಿಳೆಯು ಕಾವೂರು ಪೊಲೀಸು ಠಾಣಾ ಅಕ್ರ: 184/2025 ಕಲಂ: 318(4), 316(2), 316(1), 336(3), 340(1) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ.
ಸದ್ರಿ ಪ್ರಕರಣದಲ್ಲಿನ ಆರೋಪಿತನಾದ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ದಿನಾಂಕ:05/02/2026 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಆಪಾದಿತನು ಮ್ಯಾಟ್ರಮೋನಿ ಆನ್ ಲೈನ್ ಪ್ಲಾಟ್ ಫಾರಂ ಮೂಲಕ ಪರಿಚಯಮಾಡಿಕೊಂಡು ಈ ಮೊದಲು 2021 ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುತ್ತಾನೆ. ಹಾಗೂ ಉಡುಪಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದುಕೊಂಡಿರುತ್ತಾನೆ, ಮುಂಬೈನ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುತ್ತಾನೆ. ಬೆಂಗಳೂರಿನಲ್ಲಿ 2 ಜನ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುತ್ತಾನೆ ಕಾರ್ಕಳದ ಒಂದು ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ಮೊಸ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ನಂತರ ಸದ್ರಿ ಪ್ರಕರಣದಲ್ಲಿ ಆರೋಪಿತ ಸುಶಾಂತ್ ಪೂಜಾರಿ ಯವನೊಂದಿಗೆ ಮುಲ್ಕಿ ನಿವಾಸಿ ಭಾಸ್ಕರ್ ಎಂಬಾತನು ಪಿರ್ಯಾದಿದಾರರಿಗೆ ಮತ್ತು ಕುಟುಂಬದವರಿಗೆ ನಂಬಿಸುವ ಉದ್ದೇಶದಿಂದ ಆರೋಪಿತ ಸುಶಾಂತ್ ನನ್ನ ಅಳಿಯ ಎಂದು ಹೇಳಿಕೊಂಡು ನಂಬಿಸಿ ಆರೋಪಿತ ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬೈನಲ್ಲಿ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡು ಮದುವೆ ನಡೆಸಿದವರಾಗಿರುತ್ತಾನೆ.

Continue Reading

crime

ಬಜ್ಪೆ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣ..ಮೆಹಂದಿಗೆ ಹೋಗಿದ್ದಾಗ ಮನೆಗೆ ನುಗ್ಗಿ 23ಲಕ್ಷದ ಚಿನ್ನಾಭರಣ, 1,25,000ನಗದು ಹಣ ಎಗರಿಸಿದ ಖದೀಮರಿಬ್ಬರು ಅಂದರ್.

Published

on

.

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಷರೀಫ್ ಎಂಬವರು ತನ್ನ ಸಂಬಂಧಿಕರ ಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಕಳವಾರಿಗೆ ಹೋಗಿದ್ದ ಸಂದರ್ಭ ರಾತ್ರಿ ಮನೆಗೆ ನುಗ್ಗಿ 23 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 1,25,000/- ರೂಪಾಯಿ ನಗದು ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಖದೀಮರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 176/2025 ಕಲಂ ಕಲಂ 331(3), 331(4), 305 BNS 2023 ರಂತೆ ಪ್ರಕರಣ ದಾಖಲಾಗಿತ್ತು.

ಬಜ್ಪೆ ಪೊಲೀಸರು ಆರೋಪಿತರ ಪತ್ತೆಗಾಗಿ ಬಲೆ ಬೀಸಿದಾಗ ಮೂಲತಃ ಕಳವಾರು ಚರ್ಚ್ ಬಳಿ ನಿವಾಸಿ, ಪ್ರಸ್ತುತ ಬಜ್ಪೆ ಗ್ರಾಮದ ಜರಿನಗರ ಬಾಡಿಗೆ ಮನೆಯಲ್ಲಿರುವ ಯೂಸುಫ್ ಪುತ್ರ ಅಬ್ದುಲ್ ನಾಸಿರ್@ಸಾಸಿರ್@ನಾಚಿ(31)ಎಂಬಾತ ಕಳ್ಳತನ ಮಾಡಿ ಬಳಿಕ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು.
ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಿದ ಪೊಲೀಸರು LOC ಹೊರಡಿಸಿದ್ದರು. ಅಬ್ದುಲ್ ನಾಸೀರ್ @ ನಾಚಿ ಎಂಬಾತನನ್ನು LOC ಯಲ್ಲಿ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಪ್ರಕರಣದ ಪಿರ್ಯಾದಿದಾರರಾದ ಮೊಹಮ್ಮದ್ ಷರೀಫ್ ಎಂಬವರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಮತ್ತು ತಾನು ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದನು.
ಆರೋಪಿತರಿಂದ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ 222 ಗ್ರಾಂ ತೂಕದ ಚಿನ್ನವನ್ನು, 20,000/- ರೂಪಾಯಿ ನಗದು ಹಣ, ಸುಮಾರು 50,000/- ರೂಪಾಯಿ ಮೌಲ್ಯದ ಸ್ಕೂಟರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ .

ಆರೋಪಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Continue Reading

Bantawala

ಬಾಕ್ಸೆಟ್ ಸಾಗಾಟದ ಲಾರಿಗಳಿಗೆ ಪರವಾನಿಗೆ ಇದೆಯಲ್ಲ ಓಕೆ ! ಮತ್ತೆ ಜನರಿಗೆ ಆಕ್ರೋಶ ಯಾಕೆ ?

Published

on

ಕರಾವಳಿ ಪ್ರದೇಶದಿಂದ ಹೊರ ರಾಜ್ಯಗಳಿಗೆ ಕಳೆದ ಹಲವು ಸಮಯಗಳಿಂದ ಬಾಕ್ಸೆಟ್ ಸಾಗಾಟದ ಲಾರಿಗಳ ಘರ್ಜನೆ ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದು ಹಲವು ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅತಿಯಾದ ಭಾರ ಹೊತ್ತ ಬಾಕ್ಸೈಟ್ ಲಾರಿಗಳಿಂದಾಗಿ ಕರಾವಳಿಯ ಪ್ರಮುಖ ಹೆದ್ದಾರಿಗಳು ಮತ್ತು ಒಳರಸ್ತೆಗಳು ಗುಂಡಿಬಿದ್ದು ಹಾಳಾಗಿ ಹೋಗಿದೆ. ಲಾರಿಗಳ ಅತಿ ವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಸಣ್ಣ ವಾಹನ ಸವಾರರು ಹಾಗೂ ಪಾದಚಾರಿಗಳು ಜೀವಭಯದಲ್ಲಿ ಸಂಚರಿಸುವಂತಾಗಿದೆ. ಸಾಗಾಟದ ವೇಳೆ ಲಾರಿಗಳಿಂದ ಹಾರುವ ಬಾಕ್ಸೈಟ್ ಪುಡಿ ರಸ್ತೆಯ ಪಕ್ಕದ ಮನೆಗಳು, ಅಂಗಡಿಗಳು ಮತ್ತು ಕೃಷಿ ಭೂಮಿಯ ಮೇಲೆ ಕುಳಿತು ಆರೋಗ್ಯ ಸಮಸ್ಯೆಗಳನ್ನು (ಶ್ವಾಸಕೋಶದ ತೊಂದರೆ) ಉಂಟುಮಾಡುವ ಭಯವಿದೆ. ರಾತ್ರಿ ಎನ್ನದೆ ಸಂಚರಿಸುವ ಈ ಬೃಹತ್ ಲಾರಿಗಳ ಶಬ್ದದಿಂದಾಗಿ ಸ್ಥಳೀಯ ನಿವಾಸಿಗಳ ನೆಮ್ಮದಿಗೆ ಭಂಗ ಬಂದಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಅದಿರನ್ನು ಸಾಗಿಸುವುದು ಇಲ್ಲಿ ಸಾಮಾನ್ಯವಾಗಿದ್ದು, ಹಲವು ಬಾರಿ ಈ ಸಾಗಾಟವು ಅಕ್ರಮ ಗಣಿಗಾರಿಕೆಯ ಭಾಗವಾಗಿರುತ್ತದೆಯೇ ಅಥವಾ ಸರಿಯಾದ ಪರವಾನಗಿ ಹೊಂದಿದೆಯೇ ಎಂಬ ಸಂಶಯ ಸ್ಥಳೀಯರಲ್ಲಿ ಬಂದಾಗ ಬಾಕ್ಸೆಟ್ ಸಾಗಾಟದ ಲಾರಿಗಳ ಘರ್ಜನೆಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದೂ ಆಯಿತು. ಆವರದೇ ಆದ ಸಾಮ್ರಾಜ್ಯದಂತೆ ಅಪಘಾತಗಳನ್ನೂ ನಡೆಸಿದಾಗಲೂ ಬಾಕ್ಸೆಟ್ ಸಾಗಾಟದ ಲಾರಿಗಳದೇ ಮೇಲುಗೈ ಆಯಿತು. ನಂತರ ನಡೆದಿರುವುದು ಪ್ರತಿಭಟನೆ …

ರಸ್ತೆಯಲ್ಲಿ ಓಡಾಡುವ ನಾಗರಿಕರ ಮತ್ತು ವಾಹನ ಸವಾರರ ಪಾಲಿಗೆ ಅಕ್ರಮ ಹಾಗೂ ಸಾರಿಗೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿರುವ ಬಾಕ್ಸೈಟ್ ಸಾಗಾಟದ ಯಮದೂತ ಲಾರಿಗಳು ಸಂಕಷ್ಟ ತಂದೊಡ್ಡಿದೆಯೆಂದು ಈ ಬಗ್ಗೆ ಎಚ್ಚೆತ್ತುಕೊಂಡು ಬಾಕ್ಸೈಟ್ ಲಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲವು ಬಾರಿ ಮನವಿ ನೀಡಿದ್ದರೂ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾರಣ ಕನ್ಯಾನ ನೆಲ್ಲಿಕಟ್ಟೆ ಜಂಕ್ಷನಲ್ಲಿ ಪ್ರತಿಭಟನೆಯೂ ನಡೆಯಿತು. ಎಲ್ಲದಕ್ಕೂ ಉತ್ತರ ಒಂದೇ ಆಗಿತ್ತು. ಅದು ಪರವಾನಿಗೆ ಇದ್ದು ಆಗುತ್ತಿರುವ ಸಾಗಾಟ..ಎಷ್ಟೋ ವರ್ಷಗಳ ಪರವಾನಿಗೆಯಡಿಯಲ್ಲಿ ಮಂತ್ರಿಗಳ ಕೃಪಾ ಕಟಾಕ್ಷದಲ್ಲಿಯೇ ನಡೆಯುತ್ತಿರುವ ಬಾಕ್ಸೆಟ್ ಸಾಗಾಟ. ಹೌದು ! ಈಗ ಹೋರಾಟಗಾರರು, ಮಾದ್ಯಮದವರು, ನಾಗರೀಕರು ಇದರ ಎದುರು ಹೋರಾಟ ಮಾಡುವುದು ಕಷ್ಟ ಸಾಧ್ಯ ಎಂದು ಮೌನವಾಗಿದ್ದಾರೆ.
ಈಗಲೂ ಬಾಕ್ಸೆಟ್ ಸಾಗಾಟದ ಲಾರಿಗಳ ಘರ್ಜನೆ ಕೇಳಿಸುತ್ತಲೇ ಇದೆ. 6ಅಲ್ಲ 8ಅಲ್ಲ 14 ಅಲ್ಲ 18ರಿಂದಲೂ ಹೆಚ್ಚು ಚಕ್ರದ ಲಾರಿಗಳು…ಅದು ಸಾಗುವ ವೇಳೆಗೆ ರಾಜ ಮರ್ಯಾದೆಯನ್ನು ನೀಡಲೇ ಬೇಕು ಇಲ್ಲವಾದರೆ ಅನುಭವಿಸಬೇಕು ಎಂತಾಗಿದೆ ಸ್ಥಿತಿ.


ಸಾಗಾಟವನ್ನು ನಿಲ್ಲಿಸಿ ಪ್ರಶ್ನಿಸಿ ಆಯ್ತು, ಸಾರಿಗೆ ಇಲಾಖೆಗೆ ತಿಳಿಸಿ ಆಯ್ತು, ಜನ ಸೇರಿ ಪ್ರತಿಭಟನೆ ಮಾಡಿ ಆಯ್ತು, ಈಗ ಜನ ಕೇಳುವುದು ಮಾದ್ಯಮವೇಕೆ ಮೌನವಾಗಿದೆ ? ಎಂದು. ಅದು ಸಹಜವೇ ಕೇಳಲೇ ಬೇಕು, ಜನರ ಸಮಸ್ಯೆಗಳಿಗೆ ಕಟ್ಟ ಕಡೆಗೆ ಪರಿಹಾರ ಸಿಗುವುದು ಮಾದ್ಯಮಗಳಿಂದ ಎಂಬುವುದು ಜನರಿಗೂ ಗೊತ್ತು.


ವಿಟ್ಲದ ಮಾದ್ಯಮ ವರದಿಗಾರ ರಾಮ್‌ದಾಸ್‌ ವಿಟ್ಲ ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿಗಳಲ್ಲಿ ಈ ಬಗ್ಗೆ ಕೇಳಿಯೇ ಬಿಟ್ಟಿದ್ದಾರೆ. ರಾತ್ರಿ ಹೊತ್ತು ಸಾಗಾಟವಾಗುತ್ತಿರುವ ಬಾಕ್ಸೈಟ್‌ ಲಾರಿಗಳ ವಿಡಿಯೋವನ್ನು ಕಳುಹಿಸಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಮರ್ಪಕವಾದ ಉತ್ತರವನ್ನು ಮಾಹಿತಿ ರೂಪದಲ್ಲಿ ಎಸ್. ಪಿ. ಯವರು ನೀಡಿದ್ದಾರೆ. ಅದು ಈ ರೀತಿ ಇದೆ.


ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಪಾದೇಕಲ್ಲು ಎಂಬಲ್ಲಿ ದಾಖಲಾತಿ ಮತ್ತು ಪರವಾನಿಗೆಯಲ್ಲಿ ( MDP No.252617431T003662), (Lease No.DSKN5413) ಬಾಕ್ಸೆಟ್ ಮಣ್ಣು ಲಾರಿಗಳ ಮುಖಾಂತರ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದು. ಸದ್ರಿ ಬಾಕ್ಸೆಟ್ ಸಾಗಾಟ ಮಾಡುತ್ತಿದ್ದ ಬಗ್ಗೆ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಿ ಬರುವಾಗ ತೊಂದರೆಯಾಗುತ್ತಿರುವ ಬಗ್ಗೆ ದಿನಾಂಕ 30-12-2026 ರಂದು ಸ್ಥಳೀಯರು ಪ್ರತಿಭಟನೆ ಮಾಡಿದ್ದು. ಅದರಂತೆ ಶಾಲಾ ಮಕ್ಕಳು ಬೆಳಗ್ಗೆ ಶಾಲೆಗೆ ಹೋಗುವ ಸಮಯ ಮತ್ತು ಶಾಲೆ ಬಿಡುವ ಸಮಯ ಲಾರಿಗಳನ್ನು ಸಂಚಾರ ಮಾಡದಂತೆ ಬಾಕ್ಸೇಟ್ ಸರಕು ಸಾಗಾಣಿಕೆ ಮಾಡುವವರಿಗೆ ತಿಳುವಳಿಕೆ ನೀಡಲಾಗಿದೆ ಎಂಬುವುದಾಗಿದೆ.

ಬಾಕ್ಸೈಟ್‌ ಸಾಗಾಟದ ಸಮಸ್ಯೆಗಳ ವಿರುದ್ಧ ಡಿಜಿಟಲ್‌ ಮಾದ್ಯಮದಲ್ಲಿ ಪ್ರಸಾರವಾದ ವಿಡಿಯೋ ಸ್ಟೇಟಸ್


ಮಾನ್ಯ ಪೊಲೀಸ್‌ ವರಿಷ್ಠಾಧಿಕಾರಿಗಳು ಹೇಳಿರುವಂತೆಯೇ ಈಗ ರಾತ್ರಿ ವೇಳೆಯಲ್ಲಿಯೇ ಸಾಗಾಟ ನಡೆಯುತ್ತಿದೆ. ಆದರೆ ಒಳ ರಸ್ತೆಯಲ್ಲಿ ಮಿತಿಮೀರಿ ಸಾಗಾಟ ನಡೆಯುತ್ತಿರುವುದು, ವೇಗದಿಂದ ದೂಳು ಹಾರಿ ರಸ್ತೆ ದೂಳುಮಯವಾಗಿರುವುದು, ರಸ್ತೆಯುದ್ದಕ್ಕೂ ಮಣ್ಣು ಚೆಲ್ಲುತ್ತಿರುವುದು, ವೇಗ ನಿಯಂತ್ರಣ ಇಲ್ಲದಿರುವುದು ಈಗಲೂ ಕಂಡುಬರುತ್ತಿದೆ. ಆದುದರಿಂದ ಜನರ ಪ್ರಬಲ ಒತ್ತಾಯದಂತೆ ಸ್ಥಳೀಯ ಆಡಳಿತ ಮತ್ತು ಸಾರಿಗೆ ಇಲಾಖೆ (RTO) ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಲಾರಿಗಳಿಗೆ ವೇಗ ನಿಯಂತ್ರಕ ಅಳವಡಿಸಬೇಕು ಮತ್ತು ಸಾಗಾಟದ ವೇಳೆ ಅದಿರು ಚೆಲ್ಲದಂತೆ ಟಾರ್ಪಾಲಿನ್ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂಬುದಾಗಿದೆ. ಸಂಬಂದ ಪಟ್ಟವರು ಕ್ರಮ ಕೈಗೊಳ್ಳುವಿರಾಗಿ ಜನ ನಂಬಿದ್ದಾರೆ.

Continue Reading

Trending

Copyright © 2025 Deevatige