community
ಬಡ ಜನರ ಭೂ ಕಬಳಿಕೆ : ಬುಡಾ ಮಾಜಿ ಅಧ್ಯಕ್ಷನ ವಿರುದ್ಧ ಗಂಭೀರ ಆರೋಪ
ಬಡ ಜನರಿಗೆ ಇನಾಂ ರದ್ದತಿಯ ಬಳಿಕ ನೀಡಲಾಗಿದ್ದ ಭೂಮಿಯನ್ನು ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ)ದ ಮಾಜಿ ಅಧ್ಯಕ್ಷ ಎನ್. ಪ್ರತಾಪ್ ರೆಡ್ಡಿ ಪ್ರಭಾವ ಬಳಸಿ, ಬೆದರಿಕೆ ಹಾಕಿ ಕಿತ್ತುಕೊಂಡಿರುವ ಬಗ್ಗೆ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪತ್ರಿಕಾ ಗೋಷ್ಠಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿದೆ.
ಶುಕ್ರವಾರ (ಡಿ.26) ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಪ್ರತಾಪ್ ರೆಡ್ಡಿ ವಿರುದ್ದ ಬಳ್ಳಾರಿ ನಗರಕ್ಕೆ ಹೊಂದಿಕೊoಡಿರುವ ಕೌಲ್ ಬಜಾರಿನ ದಾನಪ್ಪಬೀದಿ ಮತ್ತು ಬಂಡಿಹಟ್ಟಿ ಏರಿಯಾಗಳ ಬಡಜನತೆಯ ಭೂಮಿಯನ್ನು ಕಿತ್ತುಕೊಂಡಿರುವುದಾಗಿ ಆರೋಪಿಸಿ ಈ ವಿಚಾರವಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶ ಮಾಡಿ ಪ್ರತಾಪ್ರೆಡ್ಡಿ ನಡೆಸುತ್ತಿರುವ ಉಪಟಳ ಮತ್ತು ಬಡ ಜನರ ಭೂಮಿಯ ವಂಚನೆ ನಡೆಸುತ್ತಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದೆ.
1970ರ ದಶಕದಲ್ಲಿ ಇನಾಂ ರದ್ದತಿಯ ಬಳಿಕ ಸರ್ವೆ ನಂಬರ್ 715ಎ ಕೌಲ್ ಬಜಾರಿನ 1080 ಎಕರೆ ಇನಾಂ ಭೂಮಿಯಲ್ಲಿ 134 ಎಕರೆ ಭೂಮಿಯನ್ನು, 7 ಮಾದಿಗ, 4 ಕುರುಬ, 5 ಮಡಿವಾಳ ಹಾಗೂ 1 ಈಡಿಗ ಸೇರಿ 17 ಕುಟುಂಬಗಳಿಗೆ ಆಗಿನ ಭೂ ನ್ಯಾಯ ಮಂಡಳಿ ಹಂಚಿಕೆ ಮಾಡಿತ್ತು. ಈ ಎಲ್ಲಾ ಕುಟುಂಬಗಳಿಗೆ ಮಂಡಳಿ ಫಾರಂ ನಂಬರ್ 10 ನೀಡಿತ್ತು, ಅಲ್ಲದೆ ಫಲಾನುಭವಿಗಳ ಹೆಸರಿಗೆ ಹಕ್ಕು ಬದಲಾಯಿಸಿತ್ತು. ಅಂದಿನಿoದ ಈ ಎಲ್ಲಾ ಕುಟುಂಬಗಳು ತಮಗೆ ದೊರೆತ ಭೂಮಿಯನ್ನು ನಂಬಿ ಬದುಕುತ್ತಿದ್ದವು ಎಂದು ಸಮಿತಿ ಹೇಳಿದೆ.

ಮುಂದುವರಿದು, 2006ರಿಂದ ಪ್ರತಾಪ್ ರೆಡ್ಡಿಯ ಕಣ್ಣು ಈ ಭೂಮಿಯ ಮೇಲೆ ಬಿದ್ದಿದೆ. ಆ ಬಳಿಕ ಅವರು ಗೂಂಡಾಗಿರಿ ಮಾಡುತ್ತಾ, ಬೆದರಿಕೆ ಹಾಕುತ್ತಾ ಬಂದಿದ್ದಾರೆ. ಇವರ ಕಿರುಕುಳಕ್ಕೆ ಬಡ ಜನರ ಬದುಕು ದಿವಾಳಿಯಾಗುತ್ತಾ ಸಾಗಿದೆ. ಭೂ ಒಡೆಯರಾಗಿದ್ದ ಮಾದಿಗ ಸಮುದಾಯದ ಕುಟುಂಬಗಳು ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಪೌರಕಾರ್ಮಿರಾಗಿ ಜೀವನ ಸಾಗಿಸುವಂತಾಗಿದೆ. ಮಡಿವಾಳರು ಜೀವ ಭಯದಿಂದ ಊರು ಬಿಟ್ಟಿದ್ದರೆ, ಈ ಭೂಮಿಯ ಸಹವಾಸವೇ ಬೇಡವೆಂದು ಜೀವ ಉಳಿಸಿಕೊಂಡು ಬದುಕುವ ಪರಿಸ್ಥಿತಿ ಕೆಲವರದ್ದಾಗಿದೆ. ಇನ್ನೂ ಕೆಲವರು ಜೀವ ಹೋದರೂ ಪರವಾಗಿಲ್ಲ, ನ್ಯಾಯ ಪಡೆದೇ ತೀರುತ್ತೇವೆಂದು ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೀದಿಗಿಳಿದು ಹಲವಾರು ಬಾರಿ ಹೋರಾಟ ನಡೆಸಿದ್ದಾರೆ ಎಂದು ಸಮಿತಿ ವಿವರಿಸಿದೆ.
ಇನಾಂ ರದ್ದತಿಗೂ ಮೊದಲು ಈ ಭೂಮಿ ದಿವಂಗತ ರಾಜರಾಜೇಶ್ವರಿಶಾಸ್ತ್ರಿ ಮತ್ತು ಅವರ ಮಗ ಬ್ರಹ್ಮಶಾಸ್ತ್ರಿ ಅವರಿಗೆ ಸೇರಿತ್ತು. ಇದೇ ಭೂಮಿಯಲ್ಲಿ ಈಗಿನವರ ಎರಡು-ಮೂರು ತಲೆಮಾರುಗಳು ದುಡಿಯುತ್ತಾ ಬಂದಿದೆ. ಭೂಮಿಯ ಮಾಲೀಕರಾಗಿದ್ದ ಬ್ರಹ್ಮಶಾಸ್ತ್ರಿಯೇ ಈ ಭೂಮಿಯಲ್ಲಿ ದುಡಿಯುತ್ತಿದ್ದವರ ಕೂಲಿ, ಕೆಲಸ ಗೇಣಿ ಮಾಡುತ್ತಿದ್ದವರ ವಿವರಗಳನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಅದರ ಪ್ರಕಾರವೇ ನ್ಯಾಯ ಮಂಡಳಿ 134 ಎಕರೆ ಸೇರಿದಂತೆ ನೂರಾರು ಎಕರೆ ಭೂಮಿಯನ್ನು ಹಂಚಿದೆ. ಫಾರಂ ನಂಬರ್ 10, ಮ್ಯೂಟೇಷನ್, ಪಹಣಿ ಎಲ್ಲವೂ ವರ್ಗಾವಣೆಯಾಗಿ ಇಂದಿನವರೆಗೂ ಕಂದಾಯ ಕಟ್ಟುತ್ತಾ ಬರುತ್ತಿದ್ದಾರೆ. ಭೂಮಿಯ ಮೇಲೆ ಬ್ಯಾಂಕ್ ಸಾಲ, ಬೆಳೆ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಕುಟುಂಬಗಳು ಬೆಳದಂತೆ ಭೂಮಿಯು ವಿಭಾಗಗಳಾಗಿ ಹಂಚಿಹೋಗಿವೆ. ಜನರು ಭಾವಿ, ಬೋರ್ವೆಲ್ ಕೊರೆದು, ವಿದ್ಯುತ್ ಸಂಪರ್ಕ ಪಡೆದು ತರಕಾರಿ ಹಾಗೂ ಇನ್ನಿತರೆ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ. ಗಮನಾರ್ಹವಾಗಿ, ಈ ಭೂಮಿಯಲ್ಲಿ ಜೀವ ಸವೆಸಿದ್ದ ಅವರ ತಾತ-ಮುತ್ತಾಂದಿರ ಸಮಾಧಿಗಳು ಕೂಡ ಇದೇ ಎಂದು ಸಮಿತಿ ತಿಳಿಸಿದೆ.

ಮಡಿವಾಳರು ಈ ಜಮೀನಿನಲ್ಲಿ ಅವರ ಕುಲ ಕಸುಬು ಮಾಡಿಕೊಂಡು ಬಂದಿರುವುದಕ್ಕೆ ಅವರವರ ಹೊಲಗಳಲ್ಲಿ ಕಟ್ಟಿರುವ ನೀರಿನ ಕಟ್ಟೆಗಳು, ಚಿಕ್ಕ ಚಿಕ್ಕ ಬಾವಿಗಳು ಪುರಾವೆಯಾಗಿವೆ. ಈಗ 2006ರಿಂದ ಪ್ರತಾಪ್ ರೆಡ್ಡಿ ಆ ಭೂಮಿ ನನ್ನದು ಎಂದು ಹೇಳುತ್ತಿದ್ದಾರೆ ಎಂದಿದೆ.
ಪ್ರತಾಪ್ ರೆಡ್ಡಿ ಮತ್ತು ಅವರ ಹೆಂಡತಿ ಶೈಲಜಾ ರೆಡ್ಡಿ ಹೆಸರಿಗೆ ಸರ್ವೆ ನಂಬರ್ 715ಎನಲ್ಲಿ 134 ಎಕರೆ ಭೂಮಿಯನ್ನು 2005-06ರಲ್ಲಿ ಟಿಎಸ್ ನಂಬರ್ (ಟೌನ್ ಸರ್ವೆ) ನೋಂದಣಿ ಮಾಡಿಕೊಂಡಿದ್ದಾರೆ. ಇದಾದ ನಂತರ ಸರ್ವೆ ನಂಬರ್ 715ಎನಲ್ಲಿ ಉಳುಮೆ ಮಾಡುತ್ತಿದ್ದ ಕುಟುಂಬಗಳನ್ನು ಒಕ್ಕಲೇಳುವಂತೆ ಮಾಡಿದ್ದಾರೆ. ಈ ವ್ಯಾಜ್ಯ ಪೊಲೀಸ್, ಕಂದಾಯ ಇಲಾಖೆ ಮತ್ತು ನ್ಯಾಯಾಲಯದ ಮೆಟ್ಟಿಲೇರಿದೆ. ಕೆಲ ಪೊಲೀಸ್ ಅಧಿಕಾರಿಗಳು ಪ್ರತಾಪ್ ರೆಡ್ಡಿಪರ ವಕಾಲತ್ ವಹಿಸಿ ಕೋರ್ಟ್ ವ್ಯಾಜ್ಯ ಇತ್ಯರ್ಥಪಡಿಸುವವರೆಗೆ ಯಾರೂ ಜಮೀನಿಗೆ ಹೋಗದಂತೆ ಫರ್ಮಾನು ಹೊರಡಿಸಿದ್ದಾರೆ. ಇದರಿಂದ ಭೂಮಿ ಉಳುಮೆ ಮಾಡದೆ ಬೀಳು ಬೀಳುವಂತಾಗಿದೆ. ಪ್ರತಾಪ್ ರೆಡ್ಡಿ ವಿರುದ್ದ ಧ್ವನಿ ಎತ್ತಿದ್ದಕ್ಕಾಗಿ ಫಲಾನುಭವಿಗಳ ಮೇಲೆ ಸುಳ್ಳು ಕೇಸ್ ದಾಖಲಿಸಿ ಕೋರ್ಟ್-ಕಚೇರಿ ಅಲೆಯುವಂತೆ ಮಾಡಲಾಗಿದೆ ಎಂದು ಸಮಿತಿ ಹೇಳಿದೆ.
ಪ್ರತಾಪ್ ರೆಡ್ಡಿ ತನ್ನ ಹೆಸರಿಗೆ 61.23 ಎಕರೆ ಭೂಮಿಗೆ 13,50,000 ರೂಪಾಯಿಗಳನ್ನು ಕೊಟ್ಟಿದ್ದರೆ, ಅವರ ಹೆಂಡತಿ ಶೈಲಜಾರೆಡ್ಡಿ 73 ಎಕರೆ ಭೂಮಿಗೆ 13,50,000 ರೂಪಾಯಿಗಳನ್ನು ಕೊಟ್ಟು ದಿನಾಂಕ : 17-10-2005 ನೋಂದಣಿ ಮಾಡಿಸಿಕೊಂಡಿದ್ದಾರೆoದು ದಾಖಲೆಗಳು ಹೇಳುತ್ತಿವೆ. ಅಂದರೆ ಎಕರೆಗೆ ಕೇವಲ 20 ಸಾವಿರ ರೂಪಾಯಿ ಕೊಟ್ಟಂತಾಗಿದೆ. 134 ಎಕರೆ ಗಂಡ ಹೆಂಡತಿ ಹೆಸರಲ್ಲಿ ಒಂದೇ ದಿನ ನೋಂದಣಿ ಆಗಿರುವ ಈ ಭೂಮಿ ಬಳ್ಳಾರಿ ನಗರದಲ್ಲಿ ಇಷ್ಟು ಕಡಿಮೆ ದರದಲ್ಲಿ, ಅದೂ ಅವರ ಪ್ರಕಾರವೇ ಟೌನ್ ವ್ಯಾಪ್ತಿಗೊಳಪಟ್ಟ ಭೂಮಿ ಸಿಗುತ್ತದೆಂದರೆ ನಂಬಲು ಸಾಧ್ಯವೇ? ಎಂದು ಸಮಿತಿ ಪ್ರಶ್ನಿಸಿದೆ.
ಈ ರೀತಿಯ ದೊಡ್ಡ ಮಟ್ಟದ ಭೂಮಿಯ ನೋಂದಣಿ ಮಾಡಿರುವುದು ಕೂಡ ಕಾನೂನಿಗೆ ವಿರುದ್ಧವಾಗಿದೆ.
ಭೂಮಿಯು ಮೂಲತಃ ದಿವಂಗತ ರಾಜರಾಜೇಶ್ವರಿಶಾಸ್ತ್ರಿಯವರಿಗೆ ಸೇರಿದ್ದು ಇವರಿಗೆ ಬ್ರಹ್ಮಶಾಸ್ತ್ರಿ ಮತ್ತು ತಿಪ್ಪಾಶಾಸ್ತ್ರಿ ಇಬ್ಬರು ಮಕ್ಕಳು, ಬೃಹ್ಮಶಾಸ್ತ್ರಿಗೆ ಮಕ್ಕಳಿಲ್ಲ. ತಿಪ್ಪಶಾಸ್ತ್ರಿಗೆ 3 ಜನ ಮಕ್ಕಳೆಂದರೆ ವೆಂಕಟರಮಣಶಾಸ್ತ್ರಿ, ಕೃಷ್ಣಶಾಸ್ತ್ರಿ, ಮತ್ತು ದಕ್ಷಿಣಾಮೂರ್ತಿ, ಉಳಿದ ಭೂಮಿಯೆಲ್ಲವೂ ದಿವಂಗತವಾಗಿರುವ ವೆಂಕಟರಮಣಶಾಸ್ತ್ರಿಯ ಹೆಸರಿನಲ್ಲಿದೆ. ಕೃಷ್ಣಶಾಸ್ತ್ರಿ ಹೆಂಡತಿ ಲಲಿತಮ್ಮ ಮತ್ತು ಇವರ ಮಕ್ಕಳಿಂದ ಪ್ರತಾಪ್ರೆಡ್ಡಿಯವರು 27 ಲಕ್ಷ ಹಣ ಕೊಟ್ಟು ಭೂಮಿಯನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಪ್ರತಾಪ್ರೆಡ್ಡಿಗೆ ಮಾರಾಟ ಮಾಡಿರುವ ವ್ಯಕ್ತಿಗಳ ಹೆಸರಿನಲ್ಲಿ ಭೂಮಿಯ ಹಕ್ಕು ಬದಲಾಗಿರುವ ಯಾವುದೇ ದಾಖಲೆಗಳಿಲ್ಲ. ಇದಕ್ಕೆ ಸಂಬoಧಿಸಿದ ಲಿಂಕ್ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಕೇಳಿದರೆ, ಲಿಂಕ್ ದಾಖಲೆ ಪತ್ರಗಳನ್ನು ಸುಟ್ಟು ಹಾಕಲಾಗಿದೆ ಎಂದು ಲಿಖಿತವಾದ ಉತ್ತರವನ್ನು ಅಧಿಕಾರಿಗಳು ನೀಡಿದ್ದಾರೆ. ದಾಖಲೆಗಳನ್ನು ಸುಟ್ಟು ಹಾಕಲಾಗಿದೆ ಎಂದರೆ ವಾಸ್ತವವನ್ನು ಮರೆಮಾಚಿದಂತೆ ಆಗುವುದಿಲ್ಲವೇ? ಎಂದು ಸಮಿತಿ ಕೇಳಿದೆ. ಇದರ ಹಿಂದೆ ಭ್ರಷ್ಟ ಅಧಿಕಾರಿಗಳ ಕೈವಾಡ ಇರುವ ಇದೆ ಎನ್ನುವುದರಲ್ಲಿ ಸಂಶಯವಿಲ್ಲವೆoದು ಹೇಳಬಹುದಾಗಿದೆ ಎಂದಿದೆ.

ಸರ್ಕಾರವೇ ಕೊಟ್ಟ ಎಲ್ಲಾ ದಾಖಲೆ ಪತ್ರಗಳು ಇದ್ದರೂ, ಜಿಲ್ಲಾಡಳಿತ ಬಡವರ ಪರವಾಗಿ ನಿಂತು ಗೊಂದಲವನ್ನು ಬಗೆ ಹರಿಸಬಹುದಾದ ವಿಷಯವಾಗಿದ್ದರೂ, ಕೆಲ ಅಧಿಕಾರಿಗಳು ಮಾಡಿದ ತಪ್ಪು ಮತ್ತು ಬೇಜವಾಬ್ದಾರಿತನಗಳು ವಿಷಯ ಕಗ್ಗಂಟಾಗಲು ಕಾರಣವಾಗಿದೆ. ಇದಕ್ಕೆ ಎನ್.ಪ್ರತಾಪ್ರೆಡ್ಡಿಯವರ ಅಧಿಕಾರ-ಹಣ ಕೆಲಸ ಮಾಡಿದೆ ಎಂದು ಯಾವುದೇ ಸಂಶಯವಿಲ್ಲದೇ ಹೇಳಬಹುದು ಎಂದು ಸಮಿತಿ ತಿಳಿಸಿದೆ.
ಭೂ ಫಲಾನುಭವಿಗಳು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ ಸಂದರ್ಭದಲ್ಲಿ ಇವರ ಬೆನ್ನಿಗೆ ನಿಲ್ಲಬೇಕಾಗಿದ್ದ ಕಾನೂನು ಪಾಲಕರು, ಕಂದಾಯ ಇಲಾಖೆಯಯವರು ಸರಿಯಾಗಿ ಮಾರ್ಗದರ್ಶನ ಕೂಡ ಮಾಡಿರುವುದಿಲ್ಲ. ಈ ಜನರಿಗೆ ಸರ್ಕಾರವೇ ಕೊಟ್ಟಿರುವ ಭೂಮಿಯ ದಾಖಲೆಗಳ ಬಗ್ಗೆ ಒಬ್ಬೊಬ್ಬರು ಒಂದೊoದು ರೀತಿಯಲ್ಲಿ ವರ್ತಿಸುತ್ತಾ ಬಂದಿರುವುದರಿoದ ಪ್ರತಾಪ್ರೆಡ್ಡಿ ತೋಡಿದ ಮೋಸದ ಖೆಡ್ಡಾಕ್ಕೆ ಜಿಲ್ಲಾಡಳಿತವನ್ನು ಮತ್ತು ಶೋಷಿತ ಬಡ ಜನರನ್ನು ಬೀಳಿಸಿಕೊಂಡು, ಕಾನೂನು-ನ್ಯಾಯ, ನನ್ನ ಹಣ-ರಾಜಕೀಯ ಬಲಕ್ಕಿಂತ ದೊಡ್ಡದೇ? ಎಂದು ಸೆಡ್ಡು ಹೊಡೆದಿದ್ದಾರೆ ಎಂದಿದೆ.

ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವೇ ಆಗಿದೆ. ತಾಲ್ಲೂಕು ಸರ್ವೆಯರ್ ಹನುಮಂತಪ್ಪ ಎಂಬ ಅಧಿಕಾರಿಯನ್ನು ಕೋರ್ಟ್ ಕಮಿಷನ್ ವಾರಂಟ್ ಪ್ರಕಾರ ನೇಮಿಸಲಾಗಿದ್ದು, ಈ ಅಧಿಕಾರಿ ಕಾನೂನು ಪ್ರಕಾರ ಸರ್ವೆ ಮಾಡದೆ ರೈತರ ವಿರುದ್ಧ ಇರುವ ವಕೀಲರ ಮಾತಿನಂತೆ ಕೆಲಸ ಮಾಡುತ್ತೇನೆಂದು ಹೇಳಿ ಬಲಾಡ್ಯರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವ ಎನ್. ಪ್ರತಾಪ್ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಹೈಕೋರ್ಟ್ನಲ್ಲಿ
ಪ್ರಕರಣ ಬಾಕಿಯಿದ್ದರೂ, ಪ್ರತಾಪ್ರೆಡ್ಡಿ ಬಡವರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.
ಈ ವಿಚಾರವಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಬಡ ಜನರ ಭೂಮಿಯ ವಂಚನೆ ನಡೆಸುತ್ತಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮುಖಂಡರುಗಳಾದ ಕುಮಾರ್ ಸಮತಳ, ಮರಿಯಪ್ಪ, ಕಾವೇರಿ ಹಾಗೂ ಭೂಮಿಯಿಂದ ವಂಚನೆಗೊಳಗಾಗುತ್ತಿರುವ ಕೆ.ಮೋಹನ್ , ಕೆ.ಎಸ್ ರಘು, ಈ.ಈರೇಶ್ ಇದ್ದರು
community
ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂವೇ ಅಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದನೆ
ನ್ಯೂಯಾರ್ಕ್: “ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವ ಯಾವುದೇ ವ್ಯಕ್ತಿ ಎಂದಿಗೂ ಹಿಂದೂವಾಗಿ ಉಳಿಯಲು ಸಾಧ್ಯವಿಲ್ಲ” ಎಂದು ಆರೆಸ್ಸೆಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.

ಅಮೆರಿಕದ ನ್ಯೂಯಾರ್ಕ್ನಲ್ಲಿ ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್ಮೆಂಟ್ ಅಂಡ್ ಡೈಲಾಗ್’ (AHEAD) ಸಂಘಟನೆಯು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಆಯೋಜಿಸಿದ್ದ ‘ಯುನಿವರ್ಸಲ್ ಯೂನಿಟಿ ಸೆಲೆಬ್ರೇಷನ್’ (ಜಾಗತಿಕ ಏಕತಾ ಸಮಾವೇಶ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಸೇರಿದಂತೆ ವಿವಿಧ ಧರ್ಮಗಳ ಪ್ರಮುಖ ನಾಯಕರು ಭಾಗವಹಿಸಿದ್ದರು.
ಹಿಂದುತ್ವ ಮತ್ತು ಬಹುತ್ವದ ಕುರಿತು ಭಾಗವತ್ ಹೇಳಿದ್ದೇನು?
ಸಂವಾದದಲ್ಲಿ ಹಿಂದುತ್ವದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಭಾಗವತ್, ಹಿಂದುತ್ವದ ನೈಜ ಅರ್ಥವನ್ನು ವಿವರಿಸಿದರು:
ಸಮಾನತೆ ಮತ್ತು ಗೌರವ: “ನೀವು ನಿಮ್ಮನ್ನು ‘ಹಿಂದೂ’ ಎಂದು ಕರೆದುಕೊಳ್ಳಬೇಕಾದರೆ, ವಿಶ್ವದ ಎಲ್ಲಾ ಮಾರ್ಗಗಳೂ ಅಂತಿಮವಾಗಿ ಒಂದೇ ಗುರಿಯತ್ತ ಸಾಗುತ್ತವೆ ಎಂಬುದನ್ನು ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಘನತೆ ಇದೆ ಎಂಬುದನ್ನು ಧೃಢವಾಗಿ ನಂಬಬೇಕು. ಮನುಷ್ಯರ ನಡುವೆ ಯಾವುದೇ ರೀತಿಯ ಭೇದಭಾವವಿಲ್ಲ.”
ಏಕತೆ ಮತ್ತು ವೈವಿಧ್ಯತೆ: “ಅಮೆರಿಕದ ಸಂದರ್ಭದಲ್ಲಿ ‘ಬಹುತ್ವ’ (Pluralism) ಎಂಬ ಪದವನ್ನು ಬಳಸಿದರೆ, ಭಾರತದ ಸಂದರ್ಭದಲ್ಲಿ ‘ವೈವಿಧ್ಯತೆಯಲ್ಲಿ ಏಕತೆ’ ಎನ್ನಲಾಗುತ್ತದೆ. ಆದರೆ, ಈ ಏಕತೆ ಮತ್ತು ವೈವಿಧ್ಯತೆಗಳೆರಡೂ ಭಾರತ ಹಾಗೂ ಅಮೆರಿಕ—ಎರಡೂ ದೇಶಗಳ ಡಿಎನ್ಎಯಲ್ಲೇ ಇವೆ.”
ಜಾಗತಿಕ ಕರ್ತವ್ಯ: ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಉಲ್ಲೇಖಿಸಿದ ಅವರು, “ರಾಷ್ಟ್ರಗಳು ಕೇವಲ ಭೌಗೋಳಿಕ ಗಡಿಗಳಲ್ಲ. ಪ್ರತಿಯೊಂದು ದೇಶಕ್ಕೂ ಜಗತ್ತಿನಲ್ಲಿ ನಿರ್ದಿಷ್ಟ ಕರ್ತವ್ಯವಿದೆ. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ತಾನು ಅರಿತು, ಅದನ್ನು ಇಡೀ ಜಗತ್ತಿಗೆ ತೋರಿಸಿಕೊಡುವ ಮಹತ್ವದ ಪಾತ್ರವನ್ನು ವಹಿಸಬೇಕಿದೆ.”

1996ರ ಚರ್ಖಿ ದಾದ್ರಿ ವಿಮಾನ ದುರಂತದ ಉದಾಹರಣೆ
ನೆರವು ನೀಡುವಾಗ ಧರ್ಮ ಮುಖ್ಯವಲ್ಲ ಎಂಬುದಕ್ಕೆ 1996ರ ಜುಲೈ 12ರಂದು ಹರಿಯಾಣದ ಚರ್ಖಿ ದಾದ್ರಿ ಬಳಿ ನಡೆದ ಭೀಕರ ವಿಮಾನ ದುರಂತದ ನೆನಪನ್ನು ಅವರು ಹಂಚಿಕೊಂಡರು. (ಸೌದಿ ಅರೇಬಿಯನ್ ಹಾಗೂ ಕಝಾಕಿಸ್ತಾನ್ ವಿಮಾನಗಳು ಆಗಸದಲ್ಲೇ ಡಿಕ್ಕಿಯಾಗಿ 349 ಮಂದಿ ಮೃತಪಟ್ಟಿದ್ದರು.)
“ಅಂದು ಎರಡು ಅರಬ್ ದೇಶಗಳ ವಿಮಾನಗಳು ಡಿಕ್ಕಿಯಾಗಿದ್ದವು ಮತ್ತು ಪ್ರಯಾಣಿಕರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು. ಘಟನಾ ಸ್ಥಳಕ್ಕೆ ನಮ್ಮ ಆರೆಸ್ಸೆಸ್ ಸ್ವಯಂಸೇವಕರು ಮೊದಲು ತಲುಪಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದರು. ಮೃತದೇಹಗಳನ್ನು ಹೊರತೆಗೆದು, ಗುರುತು ಹಿಡಿದು, ಸಂಬಂಧಿಕರು ಬಂದಾಗ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲು ಶ್ರಮಿಸಿದರು. ಆ ಸಂದರ್ಭದಲ್ಲಿ ನಾವು ಸಂತ್ರಸ್ತರು ‘ಮುಸ್ಲಿಮರು’ ಎಂದು ಎಂದಿಗೂ ಭಾವಿಸಿರಲಿಲ್ಲ.”
ಮಾನವ ಚಿಂತನೆ ಮತ್ತು ರಾಜಕೀಯ ವ್ಯವಸ್ಥೆ
ಉತ್ತಮ ಚಿಂತನೆಯೇ ದೇವತ್ವ: ಪ್ರಾಣಿಗಳು ಕೇವಲ ಆಹಾರ ಮತ್ತು ದೈಹಿಕ ಅಗತ್ಯಗಳಿಗಾಗಿ ಜೀವಿಸುತ್ತವೆ. ಆದರೆ ಮನುಷ್ಯನಿಗೆ ನಾಳೆಯ ಅಗತ್ಯವನ್ನು ಊಹಿಸಿ ಯೋಚಿಸುವ ಸಾಮರ್ಥ್ಯವಿದೆ. “ಉತ್ತಮ ಮತ್ತು ಸರಿಯಾದ ಚಿಂತನೆ ಮನುಷ್ಯನನ್ನು ದೇವರ ಸಮೀಪಕ್ಕೆ ಕರೆದೊಯ್ಯುತ್ತದೆ; ತಪ್ಪು ಚಿಂತನೆ ಆತನನ್ನು ಪ್ರಾಣಿಗಳ ಮಟ್ಟಕ್ಕೆ ಇಳಿಸುತ್ತದೆ” ಎಂದರು.
ರಾಜಕೀಯ ಸ್ವಾರ್ಥದ ಆಟ: ಪ್ರಸ್ತುತ ರಾಜಕೀಯವು ಸ್ವಾರ್ಥದ ಆಟವಾಗಿದೆ ಎಂದ ಅವರು, ಆರೆಸ್ಸೆಸ್ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜಕ್ಕಾಗಿ ಕೆಲಸ ಮಾಡುತ್ತದೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಅಭಿಪ್ರಾಯ ಬಲವಾಗಿದ್ದಾಗ ರಾಜಕಾರಣಿಗಳು ಅದರ ವಿರುದ್ಧ ಹೋಗಲು ಸಾಧ್ಯವಿಲ್ಲ, ಆದ್ದರಿಂದ ಸ್ಥಳೀಯ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು.

ಮೇಯರ್ ಝೊಹ್ರಾನ್ ಮಮ್ದಾನಿ ವಿರೋಧ
ಮೋಹನ್ ಭಾಗವತ್ ಅವರ ಈ ಕಾರ್ಯಕ್ರಮಕ್ಕೂ ಮುನ್ನ ನಡೆದ ಮತ್ತೊಂದು ಸಭೆಯಲ್ಲಿ ಮಾತನಾಡಿದ್ದ ಮೇಯರ್ ಝೊಹ್ರಾನ್ ಮಮ್ದಾನಿ, RSS ವಿರುದ್ಧ ಕಳವಳ ವ್ಯಕ್ತಪಡಿಸಿದ್ದರು.
ಭಾರತದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು RSS ನಡುವೆ ಸೈದ್ಧಾಂತಿಕ ನಂಟಿದೆ ಎಂದು ಹೇಳಿದ್ದ ಮಮ್ದಾನಿ, RSS ಅನ್ನು ‘ಕೋಮು ಸಂಘಟನೆ’ ಎಂದು ಕರೆದಿದ್ದರು. ಅಲ್ಲದೆ, ತಮ್ಮ ಕುಟುಂಬದಿಂದ ತಾವು ಕಲಿತ ಭಾರತವು ಬಹುತ್ವ ಮತ್ತು ಜಾತ್ಯತೀತತೆಯ ಸಂಕೇತವಾಗಿದೆ, ಆದರೆ ಇಂತಹ ಚಳವಳಿಗಳು ಬೆಳೆಯುತ್ತಿರುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದ್ದರು.
community
ಪುತ್ತೂರು ದರ್ಬೆ ಹಲ್ಲೆ ಪ್ರಕರಣ: “ರಾಜಕೀಯ, ಕೋಮು ಗಲಭೆ ಬೇಡ, ಕೇಸ್ ವಾಪಸ್ ಪಡೆಯಲು ಸಿದ್ಧ” – ಸಂತ್ರಸ್ತೆ ಮುಬಾಶಿರಾ ಮನವಿ
ಪುತ್ತೂರು: ದರ್ಬೆಯ ಜೆರಾಕ್ಸ್ ಅಂಗಡಿಯಲ್ಲಿ ಜನನ ಪ್ರಮಾಣಪತ್ರ ಲ್ಯಾಮಿನೇಷನ್ ಮಾಡುವ ವೇಳೆ ಉಂಟಾದ ಸಣ್ಣ ತಾಂತ್ರಿಕ ಸಮಸ್ಯೆಯಿoದ ಆರಂಭವಾದ ಗಲಾಟೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮುಬಾಶಿರಾ ಅವರು ಸ್ಪಷ್ಟನೆ ನೀಡಿದ್ದು, ಈ ವಿಚಾರದಲ್ಲಿ ಯಾರೂ ರಾಜಕೀಯ ಲಾಭ ಪಡೆಯುವುದು ಬೇಡ ಹಾಗೂ ಕೋಮು ಬಣ್ಣ ಬಳಿಯುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ಮುಬಾಶಿರಾ ಕುಟುಂಬದವರು ಜನನ ಪ್ರಮಾಣಪತ್ರವನ್ನು ಲ್ಯಾಮಿನೇಷನ್ ಮಾಡಿಸಲು ದರ್ಬೆಯ ಜೆರಾಕ್ಸ್ ಅಂಗಡಿಗೆ ನೀಡಿದ್ದರು. ಈ ವೇಳೆ ಯಂತ್ರದಲ್ಲಾದ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಮಾಣಪತ್ರ ಸುಟ್ಟುಹೋಗಿತ್ತು. ಕೇವಲ ₹300 ಹಣದ ವಿಚಾರವಾಗಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ಕೊನೆಗೆ ಹಲ್ಲೆಯಲ್ಲಿ ಅಂತ್ಯಗೊಂಡಿತ್ತು. ಆದರೆ, ಪ್ರಸ್ತುತ ಈ ಸಣ್ಣ ಘಟನೆ ಕೋಮು ವೈಷಮ್ಯ ಹಾಗೂ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿರುವುದಕ್ಕೆ ಸಂತ್ರಸ್ತೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತೆ ಮುಬಾಶಿರಾ ಅವರ ಹೇಳಿಕೆಯ ಪ್ರಮುಖ ಮುಖ್ಯಾಂಶಗಳು:
ರಾಜಕೀಯ, ಗಲಭೆ ಬೇಡ: “ನಮ್ಮ ವಿಚಾರವನ್ನು ಮುಂದಿಟ್ಟುಕೊಂಡು ಯಾರೂ ರಾಜಕೀಯ ಲಾಭ ಪಡೆಯುವುದು ಬೇಡ. ಬೇಕಿದ್ದರೆ ನಾವು ನೀಡಿದ ದೂರನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ನಮಗೆ ಯಾವುದೇ ರೀತಿಯ ಗಲಭೆ ಅಥವಾ ಕೋಮು ಸಂಘರ್ಷ ಬೇಕಾಗಿಲ್ಲ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಧರ್ಮ-ಪಕ್ಷಗಳ ಹೆಸರಿನಲ್ಲಿ ವಿಭಜಿಸಬೇಡಿ: “ಹಿಂದೂ-ಮುಸ್ಲಿಂ, ಕಾಂಗ್ರೆಸ್, ಬಿಜೆಪಿ, ಎಸ್ಡಿಪಿಐ ಎಂದು ಪ್ರಕರಣವನ್ನು ವಿಭಜಿಸುವುದು ನಮಗೆ ಬೇಕಿಲ್ಲ. ಇಷ್ಟು ಸಣ್ಣ ವಿಚಾರ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದು ನಾವು ಊಹಿಸಿರಲಿಲ್ಲ. ಈ ಪ್ರಕರಣವನ್ನು ಇಲ್ಲಗೇ ಕೈಬಿಡಿ” ಎಂದು ವಿನಂತಿಸಿದ್ದಾರೆ.
ಘಟನೆಯ ವಿವರಣೆ: “ಘಟನೆ ನಡೆದಾಗ ಅಂಗಡಿಯವರೇ ನಮಗೆ ಹೊಡೆದರು, ನಾವು ಅಲ್ಲಿ ಏನೂ ಮಾಡಿಲ್ಲ. ಘಟನೆಯ ಬಳಿಕ ನಾವು ನೇರವಾಗಿ ಆಸ್ಪತ್ರೆಗೆ ದಾಖಲಾದೆವು. ಆ ನಂತರ ಅಂಗಡಿಯ ಬಳಿ ಗಲಾಟೆ ನಡೆಸಿದವರು ನಮ್ಮ ಪರಿಚಯದವರೂ ಅಲ್ಲ, ನಮ್ಮ ಊರಿನವರೂ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆ ವೆಚ್ಚ ನೀಡಿದರೆ ಸಾಕು: “ನಮಗೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮಗೆ ಉಂಟಾಗಿರುವ ಆಸ್ಪತ್ರೆಯ ಖರ್ಚು-ವೆಚ್ಚವನ್ನು ನೀಡಿದರೆ ಅಷ್ಟೇ ಸಾಕು, ನಮಗೆ ಬೇರೇನೂ ಬೇಡ” ಎಂದು ಮುಬಾಶಿರಾ ಹೇಳಿದ್ದಾರೆ.
ಸಣ್ಣ ಕಾರಣಕ್ಕೆ ಆರಂಭವಾದ ಗಲಾಟೆ ಇದೀಗ ಪ್ರದೇಶದಲ್ಲಿ ಕೋಮು ಸಂಘರ್ಷದ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಸೌಹಾರ್ದತೆ ಮತ್ತು ಶಾಂತಿಯನ್ನು ಬಯಸಿ ಸಂತ್ರಸ್ತೆ ಮುಬಾಶಿರಾ ಅವರು ನೀಡಿರುವ ಈ ಮನವಿ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಮಹತ್ವವನ್ನು ಪಡೆದುಕೊಂಡಿದೆ
community
ಪುತ್ತೂರಿನಲ್ಲಿ ಪ್ರತಿಭಟನೆಗೆ ಸೂಕ್ತ ಅನುಮತಿ ಕಡ್ಡಾಯ: ನಿಯಮ ಪಾಲನೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಎಚ್ಚರಿಕೆ
ಪುತ್ತೂರು: ಆಗಸ್ಟ್ 31 ರಂದು ಪುತ್ತೂರಿನಲ್ಲಿ ಸಂಘ ಪರಿವಾರವು ‘ಪುತ್ತೂರು ಚಲೋ’ ಹಾಗೂ ಮುಸ್ಲಿಂ ಯುವಜನ ಪರಿಷತ್ ‘ಸೌಹಾರ್ದ ಚಲೋ’ ಕಾರ್ಯಕ್ರಮಗಳಿಗೆ ಕರೆ ನೀಡಿರುವ ಬೆನ್ನಲ್ಲೇ, ತಾಲೂಕಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅವರು ಪ್ರಮುಖ ಸ್ಪಷ್ಟನೆ ಮತ್ತು ಸೂಚನೆಗಳನ್ನು ನೀಡಿದ್ದಾರೆ.
ಪೋಲಿಸ್ ಇಲಾಖೆಯ ಮುಖ್ಯ ಸೂಚನೆಗಳು:
ಸಲ್ಲಿಕೆಯಾದ ಅರ್ಜಿಯ ಮರುಪರಿಶೀಲನೆ: ಆ.31ರಂದು ಪ್ರತಿಭಟನಾ ಸಭೆ ನಡೆಸಲು ಒಂದು ಸಂಘಟನೆಯು ಆ.27ರ ಬೆಳಿಗ್ಗೆ ಅರ್ಜಿ ಸಲ್ಲಿಸಿರುತ್ತದೆ. ಆದರೆ ಅರ್ಜಿಯಲ್ಲಿ ಉಲ್ಲೇಖಿಸಲಾದ ಪ್ರತಿಭಟನಾ ಸ್ಥಳವು ಸರ್ಕಾರದ ಮಾರ್ಗಸೂಚಿಗಳ (Guidelines) ಪ್ರಕಾರ ಇಲ್ಲದಿರುವುದರಿಂದ, ಸೂಕ್ತ ಸ್ಥಳವನ್ನು ಗುರುತಿಸಿ ಮರುಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಲಾಗಿದೆ ಹಾಗೂ ಮಾರ್ಗಸೂಚಿಯ ಪ್ರತಿಯನ್ನು ನೀಡಲಾಗಿದೆ.
ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ: ಅದೇ ದಿನ (ಆ.31) ಮತ್ತೊಂದು ಸಂಘಟನೆಯು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಈವರೆಗೆ ಆ ಸಂಘಟನೆಯಿಂದ ಅಧಿಕೃತ ಅರ್ಜಿ ಸಲ್ಲಿಕೆಯಾಗಿಲ್ಲ. ಒಂದು ವೇಳೆ ಅರ್ಜಿ ಸಲ್ಲಿಸಿದಲ್ಲಿ, ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಬೇರೊಂದು ದಿನಾಂಕವನ್ನು ನಿಗದಿಪಡಿಸಿ ಅನುಮತಿ ಪಡೆಯಲು ಸೂಚಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ವಿನಂತಿ: ಸಾರ್ವಜನಿಕರು ಯಾವುದೇ ಪ್ರತಿಭಟನೆ ಅಥವಾ ಸಮಾವೇಶಗಳಲ್ಲಿ ಭಾಗವಹಿಸುವ ಮೊದಲು, ಆಯೋಜಕರು ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಕಾನೂನಾತ್ಮಕ ಅನುಮತಿಯನ್ನು ಪಡೆದುಕೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
