Agriculture
ಕೊಳ್ನಾಡು ಅಭಿವೃದ್ಧಿಗೆ ಮತ್ತೊಂದು ಕೊಡುಗೆ;36 ಲಕ್ಷ ರೂ ವೆಚ್ಚದಲ್ಲಿ ಆಣೆಕಟ್ಟು ನವೀಕರಣ; ಶಾಸಕ ಮಂಜುನಾಥ ಭಂಡಾರಿ ಶಿಪಾರಸ್ಸು
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/04/120-1000x600.jpg&description=ಕೊಳ್ನಾಡು ಅಭಿವೃದ್ಧಿಗೆ ಮತ್ತೊಂದು ಕೊಡುಗೆ;36 ಲಕ್ಷ ರೂ ವೆಚ್ಚದಲ್ಲಿ ಆಣೆಕಟ್ಟು ನವೀಕರಣ; ಶಾಸಕ ಮಂಜುನಾಥ ಭಂಡಾರಿ ಶಿಪಾರಸ್ಸು', 'pinterestShare', 'width=750,height=350'); return false;" title="Pin This Post">
ವಿಟ್ಲ: ಕೊಳ್ನಾಡು ಗ್ರಾಮದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಕೊಡುಗೆಯಾಗಿ ಕಾಡುಮಠ ಬಸ್ತಿಗುಂಡಿಯ ಹಳೆಯ ಕಿಂಡಿ ಆಣೆಕಟ್ಟನ್ನು 36 ಲಕ್ಷ ರೂ ವೆಚ್ಚದಲ್ಲಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿ ಸ್ಥಳೀಯ ಜನರ ದೀರ್ಘಕಾಲದ ಬೇಡಿಕೆಯಾಗಿದ್ದು, ಇದೀಗ ಅನುಷ್ಠಾನದ ಹಂತಕ್ಕೆ ಬಂದಿರುವುದು ಸಂತಸದ ಸಂಗತಿಯಾಗಿದೆ.

ಕಾಡುಮಠ–ಕುಡ್ತಮುಗೇರು–ಕುದ್ರಿಯಾ ಭಾಗದ ರೈತರಿಗೆ ಅನುಕೂಲವಾಗುವಂತೆ ಹಳೆಯ ಮರದ ಹಲಗೆಯನ್ನು ಬದಲಾಯಿಸಿ, ಆಧುನಿಕ ತಂತ್ರಜ್ಞಾನದೊಂದಿಗೆ ಕಬ್ಬಿಣ ಹಾಗೂ ಪೈಬರ್ ಹಲಗೆಯನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ನೀರಿನ ನಿಯಂತ್ರಣ ಸುಧಾರಿಸಿ, ಕೃಷಿಗೆ ಅಗತ್ಯವಾದ ನೀರಾವರಿ ವ್ಯವಸ್ಥೆ ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ಮೂಲಕ ಕೊಳ್ನಾಡು ಕಾಂಗ್ರೆಸ್ ವಲಯಾಧ್ಯಕ್ಷರಾದ ಪವಿತ್ರ ಪೂಂಜಾ ಅವರ ಕೋರಿಕೆಯಂತೆ ಶಾಸಕ ಮಂಜುನಾಥ ಭಂಡಾರಿಯವರಿಗೆ ಸಣ್ಣ ನೀರಾವರಿ ಯೋಜನೆಯ ಹಲವು ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಅವುಗಳಲ್ಲಿ ಮೊದಲ ಹಂತವಾಗಿ ಕಾಡುಮಠ ಬಸ್ತಿಗುಂಡಿ ಕಿಂಡಿ ಆಣೆಕಟ್ಟು ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆಯಲಾಗಿದ್ದು, ಉಳಿದ ಕಾಮಗಾರಿಗಳನ್ನು ಹಂತಹಂತವಾಗಿ ಪೂರ್ಣಗೊಳಿಸುವುದಾಗಿ ಶಾಸಕರು ತಿಳಿಸಿದ್ದಾರೆ.
ಅನಾಥ ಪ್ರಜ್ಞೆ ದೂರ ಮಾಡಿ ಅಭಿವೃದ್ಧಿ ಕಾರ್ಯಗಳು: ನಾಯಕರಿಗೆ ನಾಗರೀಕರಿಂದ ಪ್ರಶಂಸೆ
ಕಳೆದ ಎಂಟು ವರ್ಷಗಳಿಂದ ಕಾಂಗ್ರೆಸ್ ಶಾಸಕರು ಇಲ್ಲದ ಪರಿಸ್ಥಿತಿಯಲ್ಲಿಯೂ, ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿವೃದ್ಧಿಯ ಕೊರತೆ ಉಂಟಾಗದಂತೆ ರಸ್ತೆ, ನೀರು, ದಾರಿದೀಪ, ಆರೋಗ್ಯ, ಶಿಕ್ಷಣ ಹಾಗೂ ನೀರಾವರಿ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಇಚ್ಚಾಶಕ್ತಿಯಿಂದ ಈಡೇರಿಸುತ್ತಿರುವ ನಾಯಕರ ಕಾರ್ಯವೈಖರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಯೋಜನೆಗೆ ಕೊಳ್ನಾಡು ಪ್ರದೇಶದ ರೈತ ಬಂಧುಗಳು ಸೇರಿದಂತೆ ನೀರಿನ ಫಲಾನುಭವಿಗಳು ಹಾಗೂ ನಾಗರಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ

Agriculture
ಕರಾವಳಿಯಲ್ಲಿ ರೇಷ್ಮೆ ಕೃಷಿ ಪುನರುಜ್ಜೀವನ: ವಿಟ್ಲದ ಎಫ್‌ಪಿಸಿಯಿಂದ ಮಹತ್ವದ ಹೆಜ್ಜೆ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲವನ್ನು ಕೇಂದ್ರವಾಗಿಸಿಕೊಂಡು ಕಾರ್ಯಾಚರಿಸುತ್ತಿರುವ ಕರಾವಳಿ ಜಿಲ್ಲೆಗಳ ರೈತ ಉತ್ಪಾದಕ ಸಂಸ್ಥೆ (ಭಾರತ್ ಅಗ್ರಿ ಡೆವಲಪ್‌ಮೆಂಟ್ ಎಫ್‌ಪಿಸಿಎಲ್) ಕರಾವಳಿ ಭಾಗದಲ್ಲಿ ನಶಿಸಿಹೋಗುತ್ತಿದ್ದ ರೇಷ್ಮೆ ಕೃಷಿಯನ್ನು ಪುನರುಜ್ಜೀವನಗೊಳಿಸಲು ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿದೆ.
ಇತ್ತೀಚೆಗೆ ರಾಜ್ಯ ರೇಷ್ಮೆ, ಪಶುಸಂಗೋಪನೆ ಹಾಗೂ ರೇಷ್ಮೆ ಕೃಷಿ ಸಚಿವರಾದ ಕೆ. ವೆಂಕಟೇಶ್ ಅವರು ಕರಾವಳಿ ಭಾಗದಲ್ಲಿ ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕರಾವಳಿಯ ರೈತರು ಅಡಿಕೆಗೆ ಪರ್ಯಾಯವಾಗಿ ರೇಷ್ಮೆ ಕೃಷಿಯತ್ತ ಗಮನ ಹರಿಸಬೇಕು ಎಂದು ಕರೆ ನೀಡಿದ್ದಾರೆ.

ಮೊದಲ ಹಂತದಲ್ಲಿ 50 ಎಕರೆ ರೇಷ್ಮೆ ತೋಟ ಸ್ಥಾಪನೆ
ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕರಾವಳಿಯಲ್ಲಿ ರೇಷ್ಮೆ ಕೃಷಿ ಸಂಪೂರ್ಣ ಕುಸಿದಿತ್ತು. ಆದರೆ, ಪ್ರಸ್ತುತ ಭಾರತ್ ಅಗ್ರಿ ಡೆವಲಪ್‌ಮೆಂಟ್ ಸಂಸ್ಥೆಯು ಮೊದಲ ಹಂತದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ರೇಷ್ಮೆ ಹುಳು ಸಾಕಾಣಿಕೆಯನ್ನು ಆರಂಭಿಸುವ ಗುರಿ ಹೊಂದಿದ್ದು, ಈಗಾಗಲೇ ವಿಟ್ಲದ ಸುತ್ತಮುತ್ತ ಮೂರು ಎಕರೆ ಪ್ರದೇಶದಲ್ಲಿ ಮುಲ್ಬೆರಿ (ಹಿಪ್ಪುನೇರಳೆ) ತೋಟಗಳನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಅಡಿಕೆ ಬೆಳೆಗೆ ಕನಿಷ್ಠ ಮೂರು ವರ್ಷ ಕಾಯಬೇಕಾಗಿರುವ ಹಿನ್ನೆಲೆಯಲ್ಲಿ, ಪ್ರತಿ ತಿಂಗಳು ಆದಾಯ ತಂದುಕೊಡುವ ರೇಷ್ಮೆ ಕೃಷಿ ಕರಾವಳಿ ರೈತರಿಗೆ ಅತ್ಯುತ್ತಮ ಪರ್ಯಾಯ ಬೆಳೆಯಾಗಲಿದೆ.
ಮುಲ್ಬೆರಿ ಸೊಪ್ಪಿನ ಕೊರತೆ ನೀಗಿಸಲು ನೂತನ ಯೋಜನೆ
ರೇಷ್ಮೆ ಕೃಷಿಗೆ ಪ್ರಮುಖವಾಗಿ ಬೇಕಾಗುವ ಮುಲ್ಬೆರಿ ಸೊಪ್ಪಿನ ಕೊರತೆಯನ್ನು ನೀಗಿಸಲು ವಿಟ್ಲ ಸುತ್ತಮುತ್ತ ಮೂರು ನರ್ಸರಿಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ತಾಲೂಕಿನಲ್ಲೂ ಸುಮಾರು 20 ಎಕರೆ ಜಾಗವನ್ನು ಗುತ್ತಿಗೆಗೆ ಪಡೆದು ಮುಲ್ಬೆರಿ ಬೆಳೆಸಲು ಸಂಸ್ಥೆ ಮುಂದಾಗಿದೆ. ಸ್ಥಳಾವಕಾಶದ ಕೊರತೆ ಇರುವ ಸಣ್ಣ ರೈತರಿಗೆ ಎಲೆಗಳನ್ನು ಪೂರೈಸುವ ವಿನೂತನ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಕಡಿಮೆ ಜಾಗ ಹೊಂದಿರುವ ರೈತರು ತಮ್ಮ ಖಾಲಿ ಜಾಗದಲ್ಲಿ ಸಣ್ಣ ಶೆಡ್ ನಿರ್ಮಿಸಿ ರೇಷ್ಮೆ ಹುಳು ಸಾಕಾಣಿಕೆ ಮಾಡಬಹುದಾಗಿದೆ. ಈಗಾಗಲೇ ಮುಲ್ಬೆರಿ ಕೃಷಿಗಾಗಿ ವಿಟ್ಲದಲ್ಲಿ 10 ಎಕರೆ ಹಾಗೂ ಸುಳ್ಯದಲ್ಲಿ 2 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ.

ವಿಜ್ಞಾನಿಗಳ ನೇಮಕ ಮತ್ತು ತರಬೇತಿ
ಗ್ರಾಮ ಪಂಚಾಯತ್ ಮಟ್ಟದಲ್ಲಿ ಮುಲ್ಬೆರಿ ಬೆಳೆಯ ಉಸ್ತುವಾರಿ ಮತ್ತು ನಿರ್ವಹಣೆಗಾಗಿ ಇಬ್ಬರು ತಜ್ಞ ವಿಜ್ಞಾನಿಗಳನ್ನು ಹಾಗೂ ರೇಷ್ಮೆ ಸಖಿಯರನ್ನು ನೇಮಿಸುವ ಯೋಜನೆ ಜಾರಿಯಲ್ಲಿದೆ. ರೇಷ್ಮೆ ಹುಳುಗಳ ರೋಗ ನಿಯಂತ್ರಣ ಹಾಗೂ ಉತ್ತಮ ಇಳುವರಿಗಾಗಿ ರೈತರಿಗೆ ತರಬೇತಿ ನೀಡಲು ರೇಷ್ಮೆ ತರಬೇತಿ ಕೇಂದ್ರವನ್ನು ತೆರೆಯುವ ಪ್ರಸ್ತಾವನೆಯೂ ಸರಕಾರದ ಮುಂದಿದೆ. ಬೆಳ್ತಂಗಡಿಯ ಗೇರುಕಟ್ಟೆಯಲ್ಲಿರುವ ಇಲಾಖೆಯ ರೇಷ್ಮೆ ಕೇಂದ್ರವನ್ನು ವಾರ್ಷಿಕ 30,000 ಕೆ.ಜಿ. ರೇಷ್ಮೆ ಗೂಡು ಉತ್ಪಾದಿಸುವ ಅತ್ಯಾಧುನಿಕ ಘಟಕವನ್ನಾಗಿ ಪರಿವರ್ತಿಸಿ ರೈತರಿಗೆ ಪೂರೈಸಲಾಗುತ್ತಿದೆ.
ಮಾರುಕಟ್ಟೆ ಕೊರತೆಗೆ ಶಾಶ್ವತ ಪರಿಹಾರ
ಈ ಹಿಂದೆ ಕರಾವಳಿ ಭಾಗದಲ್ಲಿ ಸಮೀಪದ ಮಾರುಕಟ್ಟೆ ಇಲ್ಲದ ಕಾರಣ ರೈತರು ರೇಷ್ಮೆ ಗೂಡುಗಳನ್ನು ಮಾರಾಟ ಮಾಡಲು ಹಾಸನ ಅಥವಾ ರಾಮನಗರದವರೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಕಾರ್ಮಿಕರ ಕೊರತೆ ಮತ್ತು ಭಾರೀ ಮಳೆಯಿಂದಾಗಿ ರೈತರು ನಷ್ಟ ಅನುಭವಿಸಿದ್ದರು. ಈ ಸಮಸ್ಯೆಗೆ ಪರಿಹಾರವಾಗಿ, 2020 ರಿಂದ ನಿಷ್ಕ್ರಿಯವಾಗಿದ್ದ ದಕ್ಷಿಣ ಕನ್ನಡ-ಉಡುಪಿ ರೇಷ್ಮೆ ರೈತರ ಸಂಘವನ್ನು ಪುನರುಜ್ಜೀವನಗೊಳಿಸಲು ತೀರ್ಮಾನಿಸಲಾಗಿದೆ. ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಕರಾವಳಿಯ ರೇಷ್ಮೆ ಬೆಳೆಗಾರರಿಗೆ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

ಭಾರತ್ ಅಗ್ರಿ ಡೆವಲಪ್‌ಮೆಂಟ್ ಎಫ್‌ಪಿಸಿಎಲ್ (Bharath Agri Development Farmers Producer Company Limited – FPCL) ಎನ್ನುವುದು ರೈತರ ಕಲ್ಯಾಣ ಮತ್ತು ಕೃಷಿ ಅಭಿವೃದ್ಧಿಗಾಗಿ ಸ್ಥಾಪಿಸಲಾದ ಒಂದು ರೈತ ಉತ್ಪಾದಕ ಕಂಪನಿ (Farmers Producer Company) ಆಗಿದೆ.
ಇದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (MCA) ಅಡಿಯಲ್ಲಿ ಜೂನ್ 13, 2024 ರಂದು ಅಧಿಕೃತವಾಗಿ ನೋಂದಣಿಯಾಗಿದೆ.
ಈ ಸಂಸ್ಥೆಯ ಪ್ರಮುಖ ವಿವರಗಳು ಈ ಕೆಳಗಿನಂತಿವೆ:
1. ಮುಖ್ಯ ಕಚೇರಿ ಮತ್ತು ಕಾರ್ಯಾಚರಣೆ
ನೋಂದಾಯಿತ ಕಚೇರಿ: ಲಕ್ಷ್ಮಿ ಕೃಷ್ಣ ಟವರ್, ಬಲ್ಮಠ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ (ಪಿನ್: 575002).
ಸ್ಥಳೀಯ ಶಾಖೆ/ಕಚೇರಿ: ಇದರ ಜಿಎಸ್‌ಟಿ (GST) ನೋಂದಣಿಯ ಪ್ರಕಾರ, ವಿಟ್ಲ-ಪುತ್ತೂರು ರಸ್ತೆಯ ವಿಟ್ಲದ ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣದಲ್ಲೂ ಇದು ತನ್ನ ವ್ಯವಹಾರದ ಸ್ಥಳವನ್ನು ಹೊಂದಿದೆ.
2. ಪ್ರಮುಖ ಉದ್ದೇಶಗಳು (FPO/FPC ಗಳ ಕೆಲಸ)
ಒಂದು ರೈತ ಉತ್ಪಾದಕ ಕಂಪನಿಯಾಗಿ (FPC), ಇದು ಪ್ರಮುಖವಾಗಿ ಈ ಕೆಳಗಿನ ಉದ್ದೇಶಗಳನ್ನು ಹೊಂದಿರುತ್ತದೆ:
ರೈತರ ಒಕ್ಕೂಟ: ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಂದೆಡೆ ಸೇರಿಸಿ, ಅವರಿಗೆ ಕೃಷಿಯಲ್ಲಿ ಮಾರುಕಟ್ಟೆ ಶಕ್ತಿಯನ್ನು ಒದಗಿಸುವುದು.
ಕೃಷಿ ಪರಿಕರಗಳ ಪೂರೈಕೆ: ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು, ರಸಗೊಬ್ಬರಗಳು, ಜೈವಿಕ ಪೋಷಕಾಂಶಗಳು ಮತ್ತು ಆಧುನಿಕ ಕೃಷಿ ಉಪಕರಣಗಳನ್ನು ರೈತರಿಗೆ ನ್ಯಾಯಯುತ ಬೆಲೆಯಲ್ಲಿ ತಲುಪಿಸುವುದು.
ಮಾರುಕಟ್ಟೆ ವ್ಯವಸ್ಥೆ: ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಯೋಗ್ಯ ಬೆಲೆ ಸಿಗುವಂತೆ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು.
ಈ ಆಡಳಿತ ಮಂಡಳಿಯಲ್ಲಿ ಎಂ ಪ್ರಸಾದ್ ಶೆಟ್ಟಿ ನೇತೃತ್ವದ ನಿರ್ದೇಶಕರ ಮತ್ತು ಸಲಹಾ ಸಮಿತಿಗಳನ್ನು ರಾಜ್ಯಮಟ್ಟದಲ್ಲಿ ಜವಾಬ್ದಾರಿತವಾಗಿ ಮಾಡಲು ಸಂಸ್ಥೆಯಿಂದ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಣ್ಣ ಹಿಡುವಳಿದಾರರಾದ ಸ್ಥಳೀಯ ರೈತರಿಗೆ ತಾಂತ್ರಿಕತೆ, ಸೌಲಭ್ಯ ಹಾಗೂ ಮಾರುಕಟ್ಟೆ ಬೆಂಬಲ ನೀಡಿ ಅವರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.



Agriculture
ಮಾನವೀಯತೆ ಮೆರೆದ ಜೆಸಿಬಿ ಕಾರ್ಯಾಚರಣೆ: ನಿವೃತ್ತ ಸೈನಿಕನ ಜಮೀನಿನಲ್ಲಿ 26 ನಾಗರಹಾವಿನ ಮರಿಗಳ ರಕ್ಷಣೆ!
ಪುತ್ತೂರು: ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಜೆಸಿಬಿ ಕಾಮಗಾರಿ ವೇಳೆ ಮಣ್ಣಿನಡಿಯಲ್ಲಿ ಸಿಲುಕಿದ್ದ ಬರೋಬ್ಬರಿ 26 ನಾಗರಹಾವಿನ ಮರಿಗಳನ್ನು ಪುತ್ತೂರಿನ ಪ್ರಸಿದ್ಧ ಉರಗ ರಕ್ಷಕ ತೇಜಸ್ ಅವರು ಯಶಸ್ವಿಯಾಗಿ ರಕ್ಷಿಸಿ, ಮಾನವೀಯತೆ ಮೆರೆದಿದ್ದಾರೆ.
ಪೆರಾಜೆ ಗ್ರಾಮದ ನಿವೃತ್ತ ಸೈನಿಕ (EX ಆರ್ಮಿ) ಕೆ.ಟಿ. ನಾಯ್ಕ್ ಅವರ ಜಮೀನಿನಲ್ಲಿ ಭೂಮಿ ಸಮತಟ್ಟು ಮಾಡುವ (ಲೆವೆಲಿಂಗ್) ಕೆಲಸ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜೆಸಿಬಿ ಕಾರ್ಯಾಚರಣೆ ವೇಳೆ ಮಣ್ಣಿನಡಿಯಲ್ಲಿ ಸಿಲುಕಿ ತಾಯಿ ನಾಗರಹಾವು ದುರದೃಷ್ಟವಶಾತ್ ಸಾವನ್ನಪ್ಪಿತ್ತು. ತಾಯಿ ಹಾವಿನ ಸಾವಿನಿಂದ ಕಂಗಾಲಾಗಿದ್ದ ಸ್ಥಳೀಯರು ತಕ್ಷಣವೇ ಉರಗ ರಕ್ಷಕ ತೇಜಸ್ ಅವರಿಗೆ ಮಾಹಿತಿ ನೀಡಿದರು.
ಅನಾಥವಾಗಿದ್ದ 26 ಮರಿಗಳ ಪತ್ತೆ!
ಸ್ಥಳಕ್ಕೆ ಧಾವಿಸಿದ ತೇಜಸ್ ಅವರು ಮಣ್ಣಿನ ರಾಶಿಯನ್ನು ಅತ್ಯಂತ ಜಾಗರೂಕತೆಯಿಂದ ಆಳವಾಗಿ ಪರಿಶೀಲಿಸಿದಾಗ, ಅಲ್ಲಿ ಅನಾಥವಾಗಿದ್ದ 26 ನಾಗರಹಾವಿನ ಮರಿಗಳು ಪತ್ತೆಯಾದವು. ತಾಯಿ ಕಳೆದುಕೊಂಡು ಅಪಾಯದಲ್ಲಿದ್ದ ಎಲ್ಲಾ ಮರಿಗಳನ್ನು ಯಾವುದೇ ಗಾಯಗಳಾಗದಂತೆ ಸುರಕ್ಷಿತವಾಗಿ ರಕ್ಷಿಸಲಾಯಿತು.
ಅರಣ್ಯ ಇಲಾಖೆ ಸಹಕಾರ: ರಕ್ಷಿಸಲಾದ ಮರಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಈ ಕಾರ್ಯಾಚರಣೆಗೆ ವಲಯ ಅರಣ್ಯಾಧಿಕಾರಿ (RFO) ಸುನೀಲ್ ಡಿಸೋಜಾ, ಉಪ ವಲಯ ಅರಣ್ಯಾಧಿಕಾರಿ (DYFO) ರವಿ, ಅರಣ್ಯ ರಕ್ಷಕರಾದ (FG) ದಯಾನಂದ್, ರಾಘವ ಹಾಗೂ ವರ ಮಹತಿ ಅವರು ಮಾರ್ಗದರ್ಶನ ಮತ್ತು ಸಂಪೂರ್ಣ ಸಹಕಾರ ನೀಡಿದರು.
ಅದೇ ಜಮೀನಿನಲ್ಲಿ ಸಿಕ್ಕವು ಹೆಬ್ಬಾವಿನ ಮೊಟ್ಟೆಗಳು!

ವಿಶೇಷವೆಂದರೆ, ಇದೇ ಜಮೀನಿನ ಸುಮಾರು 50 ಮೀಟರ್ ದೂರದಲ್ಲಿ ಜೆಸಿಬಿ ಕೆಲಸ ಮುಂದುವರಿದಾಗ ಹೆಬ್ಬಾವಿನ ಮೊಟ್ಟೆಗಳೂ ಸಹ ಪತ್ತೆಯಾಗಿವೆ. ಪ್ರಸ್ತುತ ತೀವ್ರ ಬಿಸಿಲು ಇರುವುದರಿಂದ ಮೊಟ್ಟೆಗಳು ನಾಶವಾಗದಂತೆ ತಡೆಯಲು ಅವುಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಸದ್ಯ ಈ ಮೊಟ್ಟೆಗಳಿಗೆ ಕೃತಕವಾಗಿ ಶಾಖ (Artificial Incubation) ನೀಡಿ ಸಂರಕ್ಷಿಸಲಾಗುತ್ತಿದ್ದು, ಮರಿಗಳಾದ ಬಳಿಕ ಕಾಡಿಗೆ ಬಿಡಲಾಗುವುದು ಎಂದು ತಿಳಿದುಬಂದಿದೆ.
ಈ ಇಡೀ ರಕ್ಷಣಾ ಕಾರ್ಯಾಚರಣೆಗೆ ಜೆಸಿಬಿ ಮಾಲೀಕರಾದ ಜನಾರ್ಧನ ಕುಪ್ಪೆಪದವು ಅವರು ಪೂರ್ಣ ಪ್ರಮಾಣದ ಸಹಕಾರ ನೀಡುವ ಮೂಲಕ ವನ್ಯಜೀವಿ ಪ್ರೇಮ ಮೆರೆದಿದ್ದಾರೆ. ಇವರ ಮತ್ತು ಉರಗ ರಕ್ಷಕರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.



Agriculture
ವಿಟ್ಲದಲ್ಲಿ ರೇಷ್ಮೆ ಕೃಷಿ ಮೇಳ: ಅಡಿಕೆಗೆ ಪರ್ಯಾಯವಾಗಿ ರೇಷ್ಮೆ ಬೆಳೆಯಲು ಸಚಿವ ಕೆ. ವೆಂಕಟೇಶ್ ಕರೆ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ರೇಷ್ಮೆ ಇಲಾಖೆ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳವು ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
“ಅಡಿಕೆಗೆ ಅತ್ಯುತ್ತಮ ಪರ್ಯಾಯ ರೇಷ್ಮೆ ಕೃಷಿ” – ಸಚಿವ ಕೆ. ವೆಂಕಟೇಶ್

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೇಷ್ಮೆ ಇಲಾಖೆಯ ಸಚಿವ ಕೆ. ವೆಂಕಟೇಶ್ ಅವರು, “ಸುಮಾರು 30 ವರ್ಷಗಳ ಹಿಂದೆ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಶೇ. 70ರಷ್ಟು ರೇಷ್ಮೆ ಕೃಷಿಯಿತ್ತು. ಪ್ರಸ್ತುತ ದಿನಗಳಲ್ಲಿ ಅಡಿಕೆ ಬೆಳೆಗೆ ಅತ್ಯುತ್ತಮ ಪರ್ಯಾಯವಾಗಿ ರೇಷ್ಮೆಯನ್ನು ಅಭಿವೃದ್ಧಿಪಡಿಸಲು ಹೇರಳ ಅವಕಾಶಗಳಿವೆ. ಅಂದಿನ ಸಾಂಪ್ರದಾಯಿಕ ಕೃಷಿಗೂ, ಇಂದಿನ ಆಧುನಿಕ ರೇಷ್ಮೆ ಬೆಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಕರಾವಳಿ ಭಾಗದಲ್ಲಿ ರೇಷ್ಮೆ ಕೃಷಿಗೆ ಮರುಜೀವ ನೀಡಿ, ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಮೇಳಗಳನ್ನು ಆಯೋಜಿಸಲಾಗಿದೆ,” ಎಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನದಿಂದ ಆದಾಯ ವೃದ್ಧಿ: ಜೆ.ಡಿ. ಪ್ರತಿಭಾ
ಮೈಸೂರು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕಿ ಪ್ರತಿಭಾ ಮಾತನಾಡಿ, “ಜಾಗತಿಕ ಹಾಗೂ ರಾಷ್ಟ್ರೀಯ ಮಾರುಕಟ್ಟೆಯ ಪೈಪೋಟಿಯನ್ನು ಎದುರಿಸಲು ರೈತರು ರೇಷ್ಮೆ ಕೃಷಿಯತ್ತ ಹೆಚ್ಚಿನ ಗಮನ ಹರಿಸಬೇಕಿದೆ. ರೇಷ್ಮೆ ಕೃಷಿಯಲ್ಲಿ ಈಗ ಸಾಕಷ್ಟು ಆಧುನಿಕ ತಂತ್ರಜ್ಞಾನಗಳು ಬಂದಿದ್ದು, ಇವುಗಳ ಅಳವಡಿಕೆಯಿಂದ ರೈತರು ತಮ್ಮ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಇಲಾಖೆಯು ಸಮಗ್ರ ಮತ್ತು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹೊಸದಾಗಿ ರೇಷ್ಮೆ ಘಟಕ ನಿರ್ಮಾಣ ಮಾಡುವ ಆಸಕ್ತ ರೈತರಿಗೆ ಇಲಾಖೆಯಿಂದ ಅಗತ್ಯ ಆರ್ಥಿಕ ನೆರವು ನೀಡಲಾಗುವುದು,” ಎಂದು ಭರವಸೆ ನೀಡಿದರು.

ಸಾಧಕ ಕೃಷಿಕರಿಗೆ ಗೌರವ ಸನ್ಮಾನ
ರೇಷ್ಮೆ ಹಾಗೂ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರಮುಖರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು:
ಮುರುವ ಮಹಾಬಲ ಭಟ್ (ಹಿರಿಯ ಕೃಷಿಕರು)
ಮಮತಾ ರೈ ದೇವಸ್ಯ (ರೇಷ್ಮೆ ಕೃಷಿ ಅನುಭವಿಗಳು)
ನವೀನ್ ಚಾಕಬಾಯ್ ಸುಳ್ಯ (ಮಿಶ್ರ ಕೃಷಿಕರು)
ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಉದ್ಯಮಿ ಸುರೇಶ್ ಶೆಟ್ಟಿ, ಸುದ್ದಿ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ಶಿವಾನಂದ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅರುಣ್‌ಕುಮಾರ್ ಶೆಟ್ಟಿ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಕೃಷಿ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪನಾ ನಿರ್ದೇಶಕ ಎಂ. ಪ್ರಸಾದ್ ಶೆಟ್ಟಿ ಹಾಗೂ ಪ್ರೀತಮ್ ಸೀಕ್ವೇರಾ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಸುಮಿತ್ ಮಸ್ಕರೇನಿಯಸ್ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಮೋಹಿನಿ ವಿಶ್ವನಾಥ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ನಾಗರಾಜ ಬನ್ನೂರು ಧನ್ಯವಾದ ಸಮರ್ಪಿಸಿದರು.



-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
