Bantawala
ಜಿಲ್ಲೆಯ ಜನರ ಶಾಂತಿಯುತ ಬದುಕಿಗೆ ಅಪೂರ್ವ ಕೊಡುಗೆ ನೀಡಿದ ಇಬ್ಬರು ದಕ್ಷ ಅಧಿಕಾರಿಗಳು..
ಕೋಮುಗಲಬೆಗಳಿಗೆ ಬ್ರೇಕ್ ಬಿದ್ದಿದೆ. ರೌಡಿಗಳು ಕ್ರಿಮಿನಲ್‌ಗಳು ಬಿಲ ಸೇರಿದ್ದಾರೆ, ಅಕ್ರಮ ಜೂಜಾಟಗಳು ನಡೆಯುವುದೇ ಇಲ್ಲ, ಅಕ್ರಮ ವ್ಯವಹಾರಗಳ ಕುಳಗಳು ತಲೆಮರೆಸಿಕೊಂಡಿದ್ದಾರೆ, ಮಸಾಜ್ ಪಾರ್ಲರ್ ಅಡ್ಡೆಗಳಿಗೆ ಬೀಗ ಬಿದ್ದಿದೆ, ಅಕ್ರಮ ಕಲ್ಲಿನ ಕೋರೆಗಳ ಸದ್ದು ನಿಂತೇ ಹೋಗಿದೆ, ಕಿವಿತಮಟೆಯನ್ನೇ ಹರಿದುಹಾಕುವ ಡಿಜೆ ಸದ್ದುಗಳು ಇಲ್ಲವೇ ಇಲ್ಲ. ದ್ವೇಷ ಭಾಷಣಕ್ಕೆ ಮೈಕ್ರೋಪೋನೇ ಬೆದರಿದೆ. ಸಾಮಾಜಿಕ ಜಾಲತಾಣಗಳಿಂದ ವ್ಯಕ್ತಿ ನಿಂದಕ, ಗಲಭೆ ಪ್ರಚೋದಕ, ಸುಳ್ಳುವಿವಾದಕ ಪೋಸ್ಟ್ಗಳು ಇಲ್ಲದಾಗಿವೆ, ಅಕ್ರಮ ದನ ಸಾಗಾಟಕ್ಕೆ ಅವಕಾಶವೇ ಇಲ್ಲ. ಅದೆಷ್ಟೋ ಸಂಸಾರವನ್ನು ಬಲಿ ಪಡೆದ ಮಾದಕ ಜಾಲದ ಒಂದೊoದೆ ಡ್ರಗ್ಗ್ ಪೆಡ್ಲರ್ ಗಳು ಬೆಳಕಿಗೆ ಬರುತ್ತಿದ್ದಾರೆ. ಇಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಎಂಬ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿ ಈಗ ಸ್ವಚ್ಛವಾಗುತ್ತಿದೆ. ಕೋಮು ದಳ್ಳುರಿಯಿಂದ ದಗದಗನೆ ಉರಿಯುತ್ತಿದ್ದ ಕರಾವಳಿಯನ್ನು ಕೇವಲ 6 ತಿಂಗಳಿನಲ್ಲಿಯೇ ಒಂದು ಮಾದರಿ ಶ್ರದ್ದಾಕೆಂದ್ರವಾಗಿ ಮಾಡುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾದ ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ. ಅರುಣ್ ಅವರಿಗೊಂದು ಸಲಾಂ, ಜಿಲ್ಲೆಯ ಜನತೆ ಅವರ ಕಾರ್ಯವೈಖರಿಗೆ ತಲೆಬಾಗಲೇಬೇಕು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಅದೆಷ್ಟೋ ಕಮಿಷನರುಗಳಾಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಐಪಿಎಸ್ ಅಧಿಕಾರಿಗಳು ಸೇವೆ ಸಲ್ಲಿಸಿದ್ದರು. ಆದರೆ ಈ ಬಾರಿ ಬಂದಿದ್ದ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಎಸ್ಪಿ ಡಾ.ಅರುಣ್ ಕುಮಾರ್ ಅವರ ಖಡಕ್ ಕರ್ತವ್ಯದಿಂದಾಗಿ ಜನ ಸಾಮಾನ್ಯರಿಗೆ ಯಾವುದು ಅಕ್ರಮ..ಯಾವುದೆಲ್ಲ ಕಾನೂನು ಚೌಕಟ್ಟಿನೊಳಗೆ ನಡೆಯುವ ಕಾರ್ಯಗಳು ಎಂಬುದು ಮನವರಿಕೆಯಾಗಿದೆ. ಈವರೆಗೆ ಮೈಕ್ ಮುಂದೆ ಭಾಷಣ ಬಿಗಿಯುವುದೆಲ್ಲವೂ ಕಾನೂನು ಚೌಕಟ್ಟಿನೊಳಗೆ ಎಂಬ ಮಾತು ನಂಬಿದ್ದ ಜನಸಾಮಾನ್ಯರ ಪಾಲಿಗೆ ಇಂದಿನ ಇಬ್ಬರು ಅಧಿಕಾರಿಗಳು ಹೀರೋ ಎನಿಸಿಕೊಂಡಿರುವುದು ಅತಿಶಯೋಕ್ತಿಯಲ್ಲ .
ಕರಾವಳಿಯ ಜನತೆ ನೆಮ್ಮದಿಯ ನಿಟ್ಟಿಸಿರು ಬಿಡುತ್ತಿರುವಾಗಲೇ ಅಕ್ರಮ ದಂಧೆಕೋರರು ಮಾಫಿಯಾಗಳು ಕೆಲವೊಂದು ಉದ್ಯಮಿಗಳು ಈಗ ನೀರಿನಿಂದ ಮೇಲೆ ಬಿದ್ದ ಮೀನಿನಂತೆ ಚಡಪಡಿಸುತ್ತಾ ವರ್ಗಾವಣೆ ಮಾಡಿಸಲು ಇಲ್ಲಸಲ್ಲದ ಪ್ರಯತ್ನಕ್ಕೆ ಕೈಹಾಕಿ ಇದೀಗ ಕೈಸುಟ್ಟುಕೊಂಡು ಈ ಅಧಿಕಾರಿಗಳ ವರ್ಗಾವಣೆ ಸಮಯಕ್ಕೆ ದಿನ ಎಣಿಸುತ್ತಿದ್ದಾರೆ,

ಕರಾವಳಿ ದ್ವೇಷದ ದಳ್ಳುರಿಗೆ ಕರಟಿ ಹೋಗಿತ್ತು. ಎಲ್ಲಿ ಏನಾಗುವುದೋ ಎಂಬ ಭೀತಿಯಲ್ಲಿ ಜನ ಭಯಭೀತರಾಗಿದ್ದರು.ವಾಟ್ಸಾಪ್ ಸಂದೇಶಗಳೇ ದೇವರ ಆದೇಶವೆಂಬoತೆ ಪರಿಪಾಲನೆಯಾಗಿ ಅಮಾಯಕರ ಬಲಿದಾನವಾಗುತ್ತಿತ್ತು. ಧರ್ಮ ಧರ್ಮಗಳ ಮದ್ಯೆ ಬೆಂಕಿ ಹೊಗೆಯಾಡಿ ದ್ವೇಷ ಸಾಧನೆ ಪ್ರತಿಫಲಿಸುತ್ತಿತ್ತು. ಮನುಕುಲವೇ ನಾಚಿಸುವಂತಹ ಅಘೋರ ಕೃತ್ಯಗಳು, ಪ್ರತಿಕಾರಕ್ಕೆ ಪ್ರತಿಕಾರ ನಡೆದೇ ಹೋಗುತ್ತಿತ್ತು. ಭೀಬತ್ಸ ಘಟನೆಗಳು ನಡೆದಾಗ ಅವರವರ ಧರ್ಮಕ್ಕೆ ಆಚಾರಗಳಿಗೆ ಬೆಂಬಲವಾಗಿ ಅವರವರ ಜನಪ್ರತಿನಿಧಿಗಳು ಓಡಿಬಂದು ಸಾಂತ್ವಾನ ನುಡಿಯುವುದು, ಪ್ರತಿಕಾರವನ್ನು ಘೋಷಿಸುವುದು ಆ ಮೂಲಕ ತಮ್ಮ ಪಕ್ಷವನ್ನು ಬಲಪಡಿಸುವುದು ನಡೆಯುತ್ತಲೇ ಇತ್ತು. ಸಾಮರಸ್ಯದ ಮಾತು ಶಾಂತಿ ಸಭೆಯಲ್ಲಿಯೂ ಇಲ್ಲದಾಗಿತ್ತು. ಕರಾವಳಿಯಲ್ಲಿ ಹಿಂದೆ ತಾವು ನಡೆದದ್ದೇ ದಾರಿ ಎಂದು ಜನಪ್ರತಿನಿಧಿಗಳು ಆಡಿದ ಆಟಕ್ಕೆ ಅದೆಷ್ಟೋ ಬಡಪಾಯಿ ಸಂಸಾರಗಳು ಜೈಲುಪಾಲಾಗಿದ್ದರು. ಧರ್ಮಾಂಧತೆಯ ಕಪಿಮುಷ್ಠಿಯಲ್ಲಿ ನಲುಗಿ ಪ್ರಾಣ ಕಳೆದುಕೊಂಡವರೆಷ್ಟೋ? ಜೈಲುಪಾಲಾದವರೆಷ್ಠೋ ? ಬಡಜೀವಗಳು ಲೆಕ್ಕ ಹಾಕುತ್ತಲೇ ಜೀವನ ಕಳೆಯುವಂತಾಯಿತು. ಇದರ ನಿಯಂತ್ರಣ ದಾರಿ ಇಲ್ಲವೇ ಎಂದಾಗ ದೈವದೇವರಿಗೂ ಇಲ್ಲಿನ ಅರಾಜಕತೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಲೇ ಇಲ್ಲ. 2006ರ ಸುರತ್ಕಲ್ ಸುಖಾನಂದ ಶೆಟ್ಟಿ ಕೊಲೆಯಿಂದ 2025ರ ಕೊಳ್ತಮಜಲು ರಹಿಮಾನ್ ಕೊಲೆತನಕ ಧರ್ಮದ ನಾಡಿನಲ್ಲಿ ಪ್ರತಿಕಾರದ ಪರ್ವ ಮುಂದುವರಿಯುತ್ತಲೇ ಇತ್ತು.

ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಶಾಂತಿ ಸೌಹಾರ್ದತೆಯನ್ನು ಮತ್ತೆ ಕರಾವಳಿಯಲ್ಲಿ ಸ್ಥಾಪಿಸಲು ಪಣ ತೊಟ್ಟ ಖಾಕಿಗಳಿಬ್ಬರು ಕಾನೂನಿನ ಪರಿಚಯವನ್ನು ಜನಸಾಮಾನ್ಯರಿಗೂ ತಲುಪಿಸುವ ಆ ಮೂಲಕ ನೆಮ್ಮದಿಯ ಜೀವನಕ್ಕೆ ಶ್ರೀ ರಕ್ಷೆಯಾಗಿ ನಿಂತಿರುವುದು ಕರಾವಳಿ ಜನತೆಯ ಸೌಭಾಗ್ಯವೇ ಸರಿ, ಆದರೆ ಅಧಿಕಾರಿಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕು, ನಾವು ಹೇಳಿದಂತೆ ತಲೆಯಾಡಿಸಬೇಕು ಕೇಳದಿದ್ದರೆ ಎತ್ತಂಗಡಿ ಮಾಡಲೇ ಬೇಕಾಗಿರುವುದು. ಅದು ನಮ್ಮ ಮಾರ್ಯಾದೆಯ ಪ್ರಶ್ನೆ ಎಂದೆಲ್ಲ ಯೋಚಿಸುತ್ತಿರುವವರಿಗೆ ಆಘಾತ ಎದುರಾಗಿದೆ. ಆಡಳಿತ ಪಕ್ಷದವರಿಂದ ಮೊದಲಾಗಿ ವಿರೋಧ ಪಕ್ಷದವರು ಕೂಡಾ ಜೊತೆಯಾಗಿ ಅವರ ವರ್ಗಾವಣೆಯ ವಿಚಾರಕ್ಕೆ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಸಿಎಂ, ಉಸ್ತುವಾರಿ ಮತ್ತು ಡಿಜಿಯವರು ಕರಾವಳಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಗರಂ ಆಗಿರುವುದರಿಂದ ‘ವರ್ಗಾವಣೆ ನವೆಂಬರ್‌ನಲ್ಲಿ ಆಗುತ್ತದೆ,, ಡಿಸೆಂಬರ್‌ನಲ್ಲಿ ಪಕ್ಕಾ… ಈಗ ಜನವರಿ ಕೊನೆಗೆ ಗ್ಯಾರಂಟಿ ಎಂಬಲ್ಲಿಗೆ ಬಂದು ನಿಂತಿದೆ. ಯಾವಾಗ ಎಂಬ ಅವರ ಹಿಂಬಾಲಕರ ಪ್ರಶ್ನೆಗೆ ದಿನಾಂಕ ಮುಂದುವರಿಯುತ್ತಲೇ ಇದೆ.

ಈಗ ಹೇಗಾದರೂ ಮಾಡಿ ಅಧಿಕಾರಿಗಳನ್ನು ಎತ್ತಂಗಡಿ ಮಾಡಲೇ ಬೇಕು ಎನ್ನುವ ಸಂಧರ್ಭಕ್ಕೆ ಧಾರ್ಮಿಕ ಅಸ್ತçವೊಂದು ದುಷ್ಕರ್ಮಿಗಳಿಗೆ ಸಿಕ್ಕಿಯೇ ಬಿಟ್ಟಿದೆ. ಇದು ಅಂತಿoತಹ ಅಸ್ತçವಲ್ಲ. ಇದು ಧರ್ಮಾಸ್ತçವಂತೆ ! ಇದರ ಪ್ರಯೋಗದಿಂದ ಅಧಿಕಾರಿಗಳು ಇಲ್ಲಿಂದ ಹೋಗಲೇ ಬೇಕು. ಕಾನೂನು ಪಾಲನೆಯನ್ನು ಜನತಾ ಸೇವೆಯೆಂದು ಪರಿಗಣಿಸಿ ಅಕ್ರಮ ಕೋಳಿ ಕಾದಾಟಕ್ಕೆ ಬ್ರೇಕ್ ಹಾಕಿದ್ದನ್ನು ದೈವ ದೇವರ ಸಂಪ್ರದಾಯಕ್ಕೆ ಅಡ್ಡಿಪಡಿಸಿದರೆಂದು ಆರಂಭವಾದ ತೆರೆಮರೆಯ ಹೋರಾಟ ಕರಾವಳಿಯಾದ್ಯಂತ ಪಸರಿಸಿದೆ. ಕಂಕನಾಡಿ ಬೈದ್ಯರುಗಳ ನೇಮೋತ್ಸವದ ಬಳಿಕ ಼ಶರತ್ತುಬದ್ದ ಅಂಕಕ್ಕೆ ಬದ್ದರಾಗದೆ ದೈವಗಳ ಮುಂದೆ ಪ್ರಾರ್ಥನೆಯೂ ನಡೆದಿದೆ. ಮುಂದೆ ಎಲ್ಲಾ ಕಡೆಯಲ್ಲಿಯೂ ಪ್ರಾರ್ಥನೆಗಳು ನಡೆಯಬಹುದು ಅಂದರೆ ಒಂದು ರೀತಿಯ ಧಾರ್ಮಿಕ ಕ್ರಾಂತಿ ಕಾನೂನನ್ನು ಮೀರಿ ನಡೆಯುವ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆಯಿಂದಾಗಿ ಅಧಿಕಾರಿಗಳ ತಲೆದಂಡವಾಗಬಹುದು ಎಂಬುವುದು ಜನಸಾಮಾನ್ಯರ ತಲೆಗೆ ಹೊಕ್ಕಿದೆ.. ಇದರ ಹಿಂದೆ ಇರುವ ದುಷ್ಕರ್ಮಿಗಳ ಮೀಸೆ ಮುಂದಕ್ಕೆ ಚಾಚುತ್ತಲೇ ಇರುವುದನ್ನು ಅಡಳಿತ ಗಮನಿಸುತ್ತಲೇ ಇದೆ. ಸಂಪ್ರದಾಯದ ಬದ್ದತೆಗಾಗಿ ಇಲಾಖೆ ಸಹಕಾರವನ್ನು ನೀಡಿದಾಗಲೂ ತಿರಸ್ಕಾರ ಮಾಡುವ ಮೂಲಕ ಶ್ರದ್ಧಾಕೇಂದ್ರವನ್ನು ಎತ್ತಿಕಟ್ಟಿ ಜಿಲ್ಲೆಯ ಸುವ್ಯವಸ್ಥೆಗೆ ಭಂಗ ತರುವ ಹುನ್ನಾರ ಯಾರದು ಎಂಬುವುದರ ಜಾಡನ್ನು ಹಿಡಿಯಲೇ ಬೇಕು. ಮತ್ತೆ ಹಿಂದಿನ ಕಾಲಾವಧಿಯ ಅಧಿಕಾರಿಗಳ ಎಂಟ್ರಿಗೆ ಚಾಪೆ ಹಾಸಲು ಸಿದ್ಧತೆ ನಡೆಸುತ್ತಿರುವವರು ಯಾರು? ನಮ್ಮ ಕರಾವಳಿಗೆ ಧಕ್ಷ ಅಧಿಕಾರಿಗಳ ಸೇವೆ ಬೇಕಾದರೆ ಅವರನ್ನು ಉಳಿಸಿ ಕೊಳ್ಳುವ ಕೆಲಸವೂ ನಮ್ಮಿಂದಲೇ ಆಗಬೇಕಾಗಿದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಸುಧೀರ್ ಕುಮಾರ್ ರೆಡ್ಡಿ ಮಂಗಳೂರು ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕವೂ ಗುರುತಿಸಿಕೊಂಡಿದ್ದಾರೆ. ಯಾವುದೇ ಕಾಲೇಜು ಕ್ಯಾಂಪಸ್ ಗಳಲ್ಲೂ ಮಾದಕ ವಸ್ತುಗಳು ಪೂರೈಕೆಯಾಗದ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಡ್ರಗ್ಗ್ ಪೆಡ್ಲರ್‌ಗಳ ಹೆಡೆಮುರಿಕಟ್ಟುವ ಮೂಲಕ ಡ್ರಗ್ಗ್ ಸಾಗಾಣಿಕೆಗೆ ಕಡಿವಾಣ ಹಾಕಿದ್ದಾರೆ.ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಕಳ್ಳತನ ದೊಂಬಿ ಯಾವುದೇ ಅಪರಾಧಿಕ ಕೃತ್ಯಗಳಿಗೆ ಮಾದಕ ಸೇವನೆಯೇ ಪ್ರಮುಖ ಕಾರಣವೆಂದು ಕಂಡುಕೊAಡ ಆಧಿಕಾರಿಗಳು ಆ ಜಾಲದ ಹಿಂದೆ ಬಿದ್ದಿದ್ದಾರೆ. ಪ್ರಮುಖ ಕುಳಗಳ ಅಡ್ಡೆಯನ್ನು, ಸಾಗಿ ಬರುವ ದಾರಿಯನ್ನೂ ಪತ್ತೆಹಚ್ಚಿ ವ್ಯಸನಕ್ಕೆ ಬಲಿ ಬೀಳುವ ಯುವಜನತೆಗೆ ದೈರ್ಯ ಮತ್ತು ಸಂದೇಶದ ಮೂಲಕ ಜಾಗೃತಿಯನ್ನು ನೀಡುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದೆ ಕಮಿಷನರ್ ಅವರು ವ್ಯಸನ ವಿರೋಧಿ ಜಾಗೃತಿ ಸಂದೇಶವನ್ನು ಕನ್ನಡದಲ್ಲಿ ಮಾಡದೆ ತುಳು ಭಾಷೆಯಲ್ಲಿ ನೀಡುವುದರ ಮೂಲಕ ತುಳುವರ ಮನಸ್ಸನ್ನು ಮುಟ್ಟುವ ಉತ್ತಮವಾದ ಕೆಲಸ ಮಾಡಿ ಅದರಿಂದ ಉತ್ತಮವಾದ ನಿರೀಕ್ಷೆಯಲ್ಲಿದ್ದಾರೆ.
ವ್ಯಸನ ಆಶ್ರಯಿತ ಕೋಮುದಳ್ಳುರಿಯಿಂದ ಧಗಧಗಿಸುತ್ತಿದ್ದ ಕರಾವಳಿಯನ್ನು ಸೌಹಾರ್ದತೆಯ ಶ್ರದ್ಧಾಕೇಂದ್ರವಾಗಿ ನಿರ್ಮಿಸಲು ತಮ್ಮ ಕರ್ತವ್ಯದ ಅವಧಿಯನ್ನೂ ಮೀರಿ ಶ್ರಮಿಸುತ್ತಿರುವ ಅಧಿಕಾರಿಗಳ ದಕ್ಷತೆಗೆ ನಮ್ಮ ನಿಮ್ಮೆಲ್ಲರ ಸಹಕಾರ ಬೇಕಾಗಿದೆ.
accident
ಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ – ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ನಡೆದಿದೆ.
ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ನಿವಾಸಿ ಭಾರತಿ (48) ಅಪಘಾತಕ್ಕೀಡಾದ ಮಹಿಳೆ. ಇವರು ತನ್ನ ಮಗಳು ದೀಪ್ತಿ ಅವರೊಂದಿಗೆ ಸಜಿಪಮುನ್ನೂರಿನ ಗುಳಿಗಜ್ಜನ ಕಟ್ಟೆಗೆ ಕಾಣಿಕೆ ಹಾಕಲು ಬಂದಿದ್ದರು. ಕಾಣಿಕೆ ಮುಗಿಸಿ ವಾಪಸ್ಸಾಗುವಾಗ ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಅತೀ ವೇಗವಾಗಿ ಬಂದ ಬಿಳಿ ಬಣ್ಣದ ಕಾರು ಮಹಿಳೆಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ: ಡಿಕ್ಕಿಯ ರಭಸಕ್ಕೆ ಭಾರತಿ ಅವರು ಗಾಳಿಯಲ್ಲಿ ಹಾರಿ ರಸ್ತೆಯ ಬದಿಗೆ ಬಿದ್ದಿದ್ದಾರೆ. ಅಪಘಾತದ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ವಾಹನ ಸವಾರರು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಭಾರತಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
award
ಮಂಗಳೂರು ವಿಶ್ವವಿದ್ಯಾಲಯ: ಸುಶ್ಮಿತ ಸಿ.ಎಚ್. ಅವರಿಗೆ ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪ್ರದಾನ
ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಶ್ಮಿತ ಸಿ.ಎಚ್. ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.

ಅವರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೃಷ್ಣಕುಮಾರ್ ಜಿ. ಅವರ ಮಾರ್ಗದರ್ಶನದಲ್ಲಿ “Antidiabetic activities of Syzygium hemisphericum (Wight) Alston and Syzygium kanarense (Talbot) Raizada” (ಸಿಜಿಜಿಯಂ ಹೆಮಿಸ್ಫೆರಿಕಂ ಮತ್ತು ಸಿಜಿಜಿಯಂ ಕೆನರೆನ್ಸ್ ಸಸ್ಯಗಳ ಮಧುಮೇಹ ವಿರೋಧಿ ಚಟುವಟಿಕೆಗಳು) ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದರು.

2025ರ ಅಕ್ಟೋಬರ್‌ನಲ್ಲಿ ತಮ್ಮ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಇವರಿಗೆ, 2026ರ ಮಾರ್ಚ್ 28ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ 44ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಅಧಿಕೃತವಾಗಿ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಯಿತು.
ಡಾ. ಸುಶ್ಮಿತ ಅವರು ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಕಣಿಯೂರು ಸೂರ್ಯನಾರಾಯಣ ಭಟ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲದ ಉದ್ಯೋಗಿ ಶ್ರೀಮತಿ ಆಶಾಪಾರ್ವತಿ ದಂಪತಿಯ ಪುತ್ರಿ. ಇವರು ಯುವ ಉದ್ಯಮಿ ಶ್ರೀ ಕೃಷ್ಣ ವಿಕಾಸ್ ಅವರ ಪತ್ನಿಯಾಗಿದ್ದಾರೆ.

ತಮ್ಮ ಈ ಶೈಕ್ಷಣಿಕ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ-ತಾಯಿ, ಸಹೋದರಿ ಹಾಗೂ ಪತಿಯವರ ನಿರಂತರ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಡಾ. ಸುಶ್ಮಿತ ಅವರು ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದಲ್ಲೇ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Bantawala
ಘನತ್ಯಾಜ್ಯ ವಿಲೇವಾರಿಯಲ್ಲಿ ಗೋಲ್ಮಾಲ್..ಸ್ಮಶಾನದಂತಾದ ವಿಟ್ಲದ ಘನತ್ಯಾಜ್ಯ ಘಟಕ..ಬೆಂಕಿ ಇಟ್ಟು ಸುಡುವ ಮೂಲಕ ಜನರ ಆರೋಗ್ಯದಲ್ಲಿ ಚೆಲ್ಲಾಟ..ಸಾಮಾಜಿಕ ಹೋರಾಟಗಾರನಿಂದ ಪೊಲೀಸ್ ಠಾಣೆಗೆ ದೂರು..
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಘನತ್ಯಾಜ್ಯ ವಿಲೇವಾರಿ ಮಾಡಬೇಕಾಗಿದ್ದ ಜವಾಬ್ದಾರಿಯುತ ಅಧಿಕಾರಿ, ಸಿಬ್ಬಂದಿಗಳು ತ್ಯಾಜ್ಯಗಳ ರಾಶಿಗೆ ಘಟಕದ ಆವರಣದಲ್ಲೇ ಬೆಂಕಿಹಾಕಿ ಸುಡುವ ಮೂಲಕ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ.

ವಿಟ್ಲದ ಬೊಬ್ಬೆಕೇರಿ ಎಂಬಲ್ಲಿ ಕಳೆದ ಮೂರು ತಿಂಗಳಿಂದ ಘನತ್ಯಾಜ್ಯ ವಿಲೇವಾರಿಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಸಾಮಾಜಿಕ ಹೋರಾಟಗಾರ ಧನಂಜಯ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಸೇರಿದಂತೆ ಇತರ ಘನತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗಿತ್ತು. ಅದಕ್ಕಾಗಿಯೇ ಅಂಗಡಿ ಮಾಲಿಕರಿಂದ, ಜನ ಸಾಮಾನ್ಯರಿಂದ ಹಣ ವಸೂಲಿ ಕೂಡಾ ಮಾಡುತ್ತಿದ್ದಾರೆ. ಆದರೆ ಮೂಟೆ ಮೂಟೆ ಘನತ್ಯಾಜ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಘಟಕದ ಆವರಣದಲ್ಲೇ ಸ್ಮಶಾನದಲ್ಲಿ ಹೆಣಗಳನ್ನು ಸುಡುವ ರೀತಿಯಲ್ಲಿ ಸುಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಏಳುತ್ತಿರುವ ವಿಷಕಾರಿ ಹೊಗೆಯು ಪರಿಸರಕ್ಕೆ, ಪರಿಸರ ನಿವಾಸಿಗಳ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೇ, ಸುಮಾರು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ವೈಜ್ಞಾನಿಕವಾಗಿ ಸಂಶೋಧನೆಯಲ್ಲಿ ಸಾಬೀತಾಗಿದೆ.

ಈ ಅಕ್ರಮ ಚಟುವಟಿಕೆಯು ಪರಿಸರ ಸಂರಕ್ಷಣಾ ಕಾಯ್ದೆ 1986 (Environment Protection Act 1986), ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 (Air Pollution Act 1981) ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ 2016 ರ (Plastic Waste Management Rules 2016) ನೇರ ಉಲ್ಲಂಘನೆಯಾಗಿದೆ. ಸರ್ಕಾರದ ಅನುದಾನವನ್ನು ಘನತ್ಯಾಜ್ಯ ವಿಲೇವಾರಿಗೆ ಬಳಸದೆ ದುರ್ಬಳಕೆ ಮಾಡಲಾಗುತ್ತಿದೆ ಪಟ್ಟಣ ಪಂಚಾಯತಿನಲ್ಲಿ ಪ್ಲಾಸ್ಟಿಕ್ ವಿಲೇವಾರಿಗೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದರೂ ಅದನ್ನು ಸರಿಯಾಗಿ ಬಳಕೆ ಮಾಡದೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಆರೋಗ್ಯಾಧಿಕಾರಿ, ಸುಪರ್‌ವೈಸರ್ ಮತ್ತು ಕೌನ್ಸಿಲರ್ ಇವರೆಲ್ಲರೂ ಸೇರಿ ಸರಕಾರದಿಂದ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡು ಪ್ಲಾಸ್ಟಿಕನ್ನು ಸುಟ್ಟು ಶಿಕ್ಷಾರ್ಹ ಅಪರಾಧವನ್ನೆಸಗುತ್ತಿದ್ದಾರೆ ಎಂದು ದೂರುದಾರರು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಅಕ್ರಮ ಹಾಗೂ ಅವೈಜ್ಞಾನಿಕ ವಿಲೇವಾರಿಯು ಪರಿಸರ ಸಂರಕ್ಷಣಾ ಕಾಯ್ದೆ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಗಳ ನೇರ ಉಲ್ಲಂಘನೆಯಾಗಿದೆ. ಸರ್ಕಾರದ ಅನುದಾನವನ್ನು ಸರಿಯಾಗಿ ಬಳಸದೆ ಗೋಲ್ಮಾಲ್ ನಡೆಸುವ ಮೂಲಕ ಸ್ಪಷ್ಟವಾಗಿ ದುರ್ಬಳಕೆ ಮಾಡಲಾಗುತ್ತಿದೆ ಮತ್ತು ಈ ಬಗ್ಗೆ ಪ್ರಶ್ನಿಸಿದರೆ ಸಂಬಂಧಿಸಿದ ಅಧಿಕಾರಿ ಚೇತನ್ ಎಂಬವರು ಬೇಜವಾಬ್ದಾರಿ ಹಾಗೂ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ದೂರುದಾರರು ವಿವರಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಸದ್ಯ ವಿಟ್ಲ ಪೊಲೀಸರು ಈ ದೂರಿನ ಕುರಿತು ಎನ್‌ಸಿಆರ್ (NCR) ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
-
crime3 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
