Connect with us

accident

ಮಕರ ಸಂಕ್ರಮಣ ಪೂಜೆಗೆ ದೇವಸ್ಥಾನಕ್ಕೆ ಹೋಗಿದ್ದ ಕುಟುಂಬ..ಮರಳಿ ಬರುವಷ್ಟರಲ್ಲಿ ಮನೆ ಬೆಂಕಿಗಾಹುತಿ.

Published

on

ಪೆರ್ಲ ಬೆದ್ರಂಪಳ್ಳ ಸಮೀಪದ ನಡುಬೈಲು ಎಂಬಲ್ಲಿನ ರಮೇಶ್ಚಂದ್ರ ರೈ ಅವರ ಹಂಚಿನ ಮನೆ ಶಾರ್ಟ್ ಸರ್ಕ್ಯೂಟ್ ಕಾರಣ ಉರಿದು ಸಂಪೂರ್ಣ ಬೂದಿಯಾದ ಘಟನೆ ಜ.14ರ ಸಂಜೆ 4 ಗಂಟೆಗೆ ನಡೆದಿರುವುದಾಗಿ ವರದಿಯಾಗಿದೆ


ಪೆರ್ಲ ಪೇಟೆಯಲ್ಲಿ ವಾಹನ ಚಾಲಕರಾಗಿ ದುಡಿಯುತ್ತಿರುವ ಬಡ ಕುಟುಂಬದ ರಮೇಶ್ಚಂದ್ರ ರೈಯವರು ವಿಟ್ಲ ಹೊರವಲಯದ ಪೆರುವಾಯಿ ಗ್ರಾಮದ ಕುಟುಂಬದ (ತರವಾಡು)ದೇವಸ್ಥಾನಕ್ಕೆ ಮಕರ ಸಂಕ್ರಮಣ ಪೂಜೆಗಾಗಿ ಹೋಗಿದ್ದರು. ಪತ್ನಿ ಕೆಲಸಕ್ಕೆ ಹೋಗಿದ್ದರು. ಮಕ್ಕಳು ಶಾಲೆಗೆ ತೆರಳಿದ ಕಾರಣ ಮನೆಯಲ್ಲಿ ಯಾರೂ ಇಲ್ಲವಾದುದರಿಂದ ಘಟನೆ ಅರಿವಿಗೆ ಬರಲಿಲ್ಲ. ಮರಳಿ ಹೋಗುವಷ್ಟರಲ್ಲಿ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಫ್ರಿಜ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ದುರಂತ ಸಂಭವಿಸಿದೆ ಎಂಬುದು ತಿಳಿದುಬಂದಿದೆ.


ಕಾಸರಗೋಡಿನಿಂದ ಅಗ್ನಿಶಾಮಕ ದಳದವರು ಆಗಮಿಸಿ ಊರವರೊಂದಿಗೆ ಸೇರಿ ಬೆಂಕಿ ನಂದಿಸಿದರೂ ಮನೆಯೊಳಗೆ ಇದ್ದ ಬೆಲೆಬಾಳುವ ವಸ್ತು ಸಹಿತ ಬಟ್ಟೆ ಬರೆಗಳು ಬೆಂಕಿಗಾಹುತಿಯಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಗಳು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮತ್ತಷ್ಟು ಅನಾಹುತ ಸಂಭವಿಸುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading
Advertisement

accident

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ದುರ್ಮರಣ..

Published

on

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ನಿಧನರಾಗಿದ್ದಾರೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗದಲ್ಲಿದ್ದ ನಿಶಿತ್ ಊರಿಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು ತಡರಾತ್ರಿ 2-30ರ ಸುಮಾರಿಗೆ ಚೆನ್ನರಾಯಪಟ್ಟಣ ಹೊರವಲಯದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ನಿಶಿತ್ ನಾಯ್ಕ್ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.


ಪುಣಚ ಗ್ರಾಮದ ಬುಡಲೆ ನಿವಾಸಿ, ಮಾಜಿ ಸೈನಿಕರಾಗಿರುವ ಕುಂಞಣ್ಣ ನಾಯ್ಕ್ ಪುತ್ರ ನಿಧನದ ಸುದ್ದಿ ಗ್ರಾಮಸ್ಥರ ಅತೀವ ದು:ಖಕ್ಕೆ ಕಾರಣವಾಗಿದೆ. ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಓರ್ವ ಸಹೋದರಿ ನಿಶಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೀಗ ಹಾಸನದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಪ್ರಾರ್ಥಿವ ಶರೀರ ಪುಣಚ ಗ್ರಾಮ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Continue Reading

accident

ಕನ್ಯಾನದ ಹೋಟೆಲ್ ಕಾರ್ಮಿಕ ಮುನೀರ್ ದುರ್ಮರಣ.. ಕುಂಬಳೆ ಆರಿಕ್ಕಾಡಿಯಲ್ಲಿ ಕಾರು-ದ್ವಿಚಕ್ರ ವಾಹನ ಮಧ್ಯೆ ಭೀಕರ ಅಪಘಾತ..

Published

on

ರಾಷ್ಟ್ರೀಯ ಹೆದ್ದಾರಿಯ ಕುಂಬಳೆ-ಆರಿಕ್ಕಾಡಿಯಲ್ಲಿ ಕಾರು ಮತ್ತು ಡಿಯೋ ಸ್ಕೂಟರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಡಿಯೋ ಸವಾರ ಮುನೀರ್(40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲತಃ ಕೇರಳದ ಪಚ್ಚಂಬಳ ನಿವಾಸಿಯಾಗಿರುವ ಮುನೀರ್ ಕನ್ಯಾನ ಪರಿಸರದ ಯುವತಿಯನ್ನು ವಿವಾಹವಾಗಿದ್ದು ಬಳಿಕ ಇಲ್ಲೇ ವಾಸವಾಗಿದ್ದರು. ಕನ್ಯಾನ ಪೇಟೆಯಲ್ಲಿರುವ ಹೋಟೆಲಲ್ಲಿ ಕಾರ್ಮಿಕರಾಗಿರುವ ಮುನೀರ್ ಸಂಜೆ ಮಾಲಿಕನ KA19 EW 9003ಸಂಖ್ಯೆಯ ಡಿಯೋ ಸ್ಕೂಟರ್ ಪಡೆದು ಕುಂಬಳೆ ಕಡೆ ಹೋಗಿದ್ದರೆನ್ನಲಾಗಿದೆ.

ಮರಳಿ ಬರುವ ಸಂದರ್ಭ ಆರಿಕ್ಕಾಡಿಯಲ್ಲಿ ಮಿತಿಮೀರಿದ ವೇಗದಲ್ಲಿ ಬಂದ ಕಾರು ಡಿಯೋಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Continue Reading

accident

ಮಿತಿಮೀರಿದ ವೇಗ, ನಿರ್ಲಕ್ಷ್ಯದ ಚಾಲನೆ..ಬೈಕ್ ಸವಾರನ ಹುಚ್ಚಾಟಕ್ಕೆ ವೃದ್ಧೆ ಬಲಿ..ವಿಟ್ಲದಲ್ಲಿ ಬೆಳ್ಳಂಬೆಳಗ್ಗೆ ವೃದ್ಧೆಗೆ ಡಿಕ್ಕಿ ಹೊಡೆದ ಬೈಕ್..

Published

on

ವಿಟ್ಲ: ವಿಟ್ಲದ ಖಾಸಗಿ ಬಸ್ಟ್ಯಾಂಡ್ ಮುಂದಿನ ಮುಖ್ಯರಸ್ತೆಯಲ್ಲಿ ಬೈಕ್ ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.


ವಿಟ್ಲ ಬಸ್‌ಸ್ಟ್ಯಾಂಡ್ ಸಮೀಪ ಪುತ್ತೂರು ಕಡೆಗಿಂದ ಅತೀ ವೇಗವಾಗಿ ಬರುತ್ತಿದ್ದ ಬೈಕ್ ಪಾದಾಚಾರಿ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.


ವಿಟ್ಲ ಮುಡ್ನೂರು ಗ್ರಾಮದ ಮರುವಾಳ ಸೀತಾ ಶೆಟ್ಟಿ (65) ಮೃತಪಟ್ಟ ವೃದ್ಧೆಯಾಗಿದ್ದಾರೆ. ಅಪಘಾತದ ತೀವ್ರತೆಗೆ ವೃದ್ಧೆಗೆ ಡಿಕ್ಕಿ ಹೊಡೆದ ಬೈಕ್ 50ಮೀಟರ್ ದೂರದವರೆಗೆ ಸವಾರನನ್ನು ಎಳೆದುಕೊಂಡು ಹೋಗಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬೈಕ್‌ ಸವಾರನು ಪುತ್ತೂರು ಮೂಲದವರು ಎಂದು ತಿಳಿದು ಬಂದಿದೆ.
ಅಪಘಾತದ ನಂತರ ಬೈಕ್ ಸುಮಾರು 50 ಮೀಟರ್ ದೂರ ರಸ್ತೆಯಲ್ಲಿ ಎಳೆಯುತ್ತ ಹೋಗಿ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ವೃದ್ಧೆ, ಗಂಭೀರ ಗಾಯಗೊಂಡ ಬೈಕ್ ಸವಾರನ ಆಸ್ಪತ್ರೆಗೆ ಕರೆದೊಯ್ಯಲು ಅಂಗಲಾಚಿದರೂ ಯಾವೊಬ್ಬ ಆಟೋ ಚಾಲಕರೂ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡು ಬಿದ್ದಿದ್ದ ಬೈಕ್ ಸವಾರನನ್ನು ಯಾರೂ ಮುಟ್ಟದೆ ಇದ್ದ ಸಂದರ್ಭ ಕಾಶಿಮಠ ನಿವಾಸಿ ಪ್ರತಾಪ್ ಅವರು ಮಾನವೀಯತೆ ಮೆರೆದಿದ್ದು, ತಮ್ಮ ದ್ವಿಚಕ್ರ ವಾಹನದಲ್ಲಿ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.
ಮೃತ ಸೀತಾ ಶೆಟ್ಟಿ ಅವರು ಓರ್ವ ಪುತ್ರ ರೂಪೇಶ್‌ ಹಾಗೂ ಪುತ್ರಿ ರೂಪಿತ ರನ್ನು ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

ವಿಟ್ಲ ಬಸ್ಸು ನಿಲ್ದಾಣದ ಎದುರು ಮಾರ್ಗದ ಎರಡೂ ಬದಿಯೂ ವೇಗ ನಿಯಂತ್ರಕ ಹಂಪ್ಸ್‌ ಅಳವಡಿಸಬೇಕೆಂದು ಸಾರ್ವಜನಿಕರು ಅಗ್ರಹಿಸುತ್ತಲೇ ಇದ್ದರೂ ಆಗಾಗ ಅತೀ ವೇಗವಾಗಿ ಬರುವ ಗಾಡಿಗಳು ಮಾರ್ಗ ದಾಟುವ ಪಾದಾಚಾರಿಗಳಿಗೆ ಸಂಕಷ್ಟವನ್ನು ಒಡ್ಡುತ್ತಲೇ ಇದ್ದಾರೆ. ತಿಂಗಳಿನ ಹಿಂದೆ ಕೂಡಾ ಓರ್ವ ಬೈಕ್‌ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಬಸ್ಸು ನಿಲ್ದಾಣದ ಆ ಬದಿಯಿಂದ ಮತ್ತು ಈ ಬದಿಯಿಂದ ನಿರಂತರವಾಗಿ ಪಾದಾಚಾರಿಗಳು ರಸ್ತೆ ದಾಟುತ್ತಲೇ ಇದ್ದರೂ ವಾಹನಗಳು ತಮ್ಮ ವೇಗದ ಮಿತಿಯನ್ನು ಕಡಿಮೆ ಮಾಡದೆ ಸಂಕಷ್ಟವನ್ನು ತರುತ್ತಿರುವುದು ದಿನಂಪ್ರತಿ ಕಂಡುಬರುತ್ತಿದೆ.

ಬಸ್‌ ಸ್ಟ್ಯಾಂಡ್‌ , ಶಿಕ್ಷಣ ಸಂಸ್ಥೆ , ಮಾರ್ಕೇಟ್‌ ಮೊದಲಾದ ಜನನಿಬಿಡ ಪ್ರದೇಶಗಳಲ್ಲಿ ವೇಗದ ಮಿತಿಯನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಪರಿಜ್ಞಾನ ಸವಾರರಿಗಿಲ್ಲವಾದರೂ ಹಂಪ್ಸ್‌ ನಿರ್ಮಿಸುವ ಮೂಲಕ ಮುಂದೆ ನಡೆಯಬಹುದಾದ ದುರ್ಘಟನೆಗಳಿಗೆ ಅಂತ್ಯ ಆಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Continue Reading

Trending

Copyright © 2025 Deevatige