Connect with us

education

ಅಪ್ರಾಪ್ತರಿಗೆ ಸೋಶಿಯಲ್ ಮೀಡಿಯಾ ಬಳಕೆ ನಿಷೇಧ ಆಗುತ್ತದೆಯೇ ? ಮಕ್ಕಳ ಸುರಕ್ಷತೆಗಾಗಿ ಪರಿಶೀಲಿಸಲು ಕೇಂದ್ರಕ್ಕೆ ನ್ಯಾಯಾಲಯ ಸೂಚನೆ

Published

on

ಚೆನ್ನೈ: ಇಂದಿನ ಡಿಜಿಟಲ್ ಯುಗದಲ್ಲಿ ಅಪ್ರಾಪ್ತ ವಯಸ್ಕರು ಸ್ಮಾರ್ಟ್ಫೋನ್ ಮತ್ತು ಸೋಶಿಯಲ್ ಮೀಡಿಯಾ ಬಳಕೆಯನ್ನು ಅಪರಿಮಿತವಾಗಿ ಮಾಡುತ್ತಿದ್ದಾರೆ. ಅವರನ್ನು ಸಾಮಾಜಿಕ ಜಾಲತಾಣಗಳಿಂದ ದೂರ ಮಾಡಲು ಪೋಷಕರಿಗೂ ಸಾಧ್ಯವಾಗುತ್ತಿಲ್ಲ. ಅವರಿಗೆ ಮೊಬೈಲ್ ಅನಿವಾರ್ಯ ಎಂಬoತಾಗಿದೆ. ಆದರೆ, ಇದು ಅಪ್ರಾಪ್ತ ವಯಸ್ಕರ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿದೆ, ಮತ್ತು ಅದರಿಂದ ಮಕ್ಕಳ ಭವಷ್ಯವೇ ಇಲ್ಲದಂತಾಗಿ ಅದೆಷ್ಟೋ ಕುಟುಂಬಗಳು ಆತಂಕದಲ್ಲಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆಯಿಂದ ಅಪ್ರಾಪ್ತರ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮದ್ರಾಸ್ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಆಸ್ಟ್ರೇಲಿಯಾದಲ್ಲಿ ಜಾರಿಗೆ ಬಂದಿರುವAತೆ, ಭಾರತದಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ. ನ್ಯಾಯಾಲಯದ ಈ ಸಲಹೆಯು ಡಿಜಿಟಲ್ ಜಗತ್ತಿನಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಹೊಸ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.
ಆಸ್ಟ್ರೇಲಿಯಾ ಸರ್ಕಾರವು ಇತ್ತೀಚೆಗಷ್ಟೇ (ಡಿಸೆಂಬರ್ 10 ರಿಂದ ಜಾರಿಗೆ ಬರುವಂತೆ) ಜಗತ್ತಿನಲ್ಲೇ ಅತ್ಯಂತ ಕಠಿಣವಾದ ಕಾನೂನನ್ನು ಜಾರಿಗೆ ತಂದಿದೆ. ಇದರ ಅನ್ವಯ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ನಂತಹ ವೇದಿಕೆಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸೈಬರ್ ಸುರಕ್ಷತೆಯನ್ನು ಕಾಪಾಡುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ.

ಹೈಕೋರ್ಟ್ ವ್ಯಕ್ತಪಡಿಸಿದ ಆತಂಕಗಳು:

ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರಿದ್ದ ವಿಭಾಗೀಯ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸುವಾಗ ಈ ಕೆಳಗಿನ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದೆ:

ಅಶ್ಲೀಲತೆಯ ಆತಂಕ: ಅಪ್ರಾಪ್ತರು ಸೋಷಿಯಲ್ ಮೀಡಿಯಾದಲ್ಲಿ ಸುಲಭವಾಗಿ ಅಶ್ಲೀಲ ಕಂಟೆAಟ್‌ಗಳನ್ನ ನೋಡುತ್ತಾರೆ ಇದರಿಂದ ಅವರ ವ್ಯಕ್ತಿತ್ವ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳು ಪೋಷಕ ನಿಯಂತ್ರಣ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು. ಆದರೆ, ತಂತ್ರಜ್ಞಾನದಷ್ಟೇ ಪೋಷಕರ ಜವಾಬ್ದಾರಿಯೂ ಇಲ್ಲಿ ಮುಖ್ಯವಾಗಿದೆ ಎಂದು ಕೋರ್ಟ್ ಹೇಳಿದೆ.

ಕಾನೂನಿನ ಅಗತ್ಯತೆ: ಇಂದಿನ ಪರಿಸ್ಥಿತಿಯಲ್ಲಿ ಕೇವಲ ಸಲಹೆಗಳು ಸಾಲದು, ಬದಲಿಗೆ ಬಲವಾದ ಕಾನೂನಿನ ಚೌಕಟ್ಟು ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿದೆ.

ಭಾರತದಲ್ಲಿ ಜಾರಿಯಾಗುವ ಸಾಧ್ಯತೆ:

ಭಾರತವು ವಿಶ್ವದ ಅತಿ ದೊಡ್ಡ ಸೋಷಿಯಲ್ ಮೀಡಿಯಾ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿ ಇಂತಹ ಕಾನೂನು ಜಾರಿಗೆ ತರುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾದರೂ, ಮಕ್ಕಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ನಡೆಸಬೇಕಿದೆ. ವಯಸ್ಸಿನ ದೃಢೀಕರಣ ಪ್ರಕ್ರಿಯೆಯನ್ನು ಕಟ್ಟುನಿಟ್ಟುಗೊಳಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಮಕ್ಕಳ ಸುರಕ್ಷತೆಯ ಹಿತದೃಷ್ಠಿಯಿಂದ ಆಸ್ಟ್ರೇಲಿಯಾ ಸರ್ಕಾರವು ಇತ್ತೀಚೆಗಷ್ಟೇ ಜಾರಿಗೊಳಿಸಿದ ಅತ್ಯಂತ ಕಠಿಣವಾದ ಕಾನೂನು ಭಾರತದಲ್ಲಿ ಜಾರಿಯಾಗುವ ಸಾಧ್ಯತೆ ಇದೆ,

ಮಕ್ಕಳ ಕೈಗೆ ಮೊಬೈಲ್ ನೀಡುವ ಪೋಷಕರು, ಮಕ್ಕಳು ಏನು ನೋಡುತ್ತಿದ್ದಾರೆ ಮತ್ತು ಎಷ್ಟು ಸಮಯ ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡುವುದು ಕೂಡಾ ಅನಿವಾರ್ಯವಾಗಿದೆ. ನ್ಯಾಯಾಲಯದ ಈ ಸಲಹೆಯು ಡಿಜಿಟಲ್ ಜಗತ್ತಿನಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಹೊಸ ಸಂಚಲನ ಮೂಡಿಸಿದೆ. ಕೊನೆಗೂ ಮಕ್ಕಳ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ಯಾರಿಗೆ ಸಾಧ್ಯ ? ಎಂಬುವುದಕ್ಕೆ ಕಾನೂನೇ ಉತ್ತರ ನೀಡಬೇಕಾಗಿದೆ.

2025 ರಲ್ಲಿ ಜಾಗತಿಕ ಪ್ರವೃತ್ತಿಗಳಂತೆ ಆಸ್ಟ್ರೇಲಿಯಾದ ಮಾದರಿಯನ್ನು ಅನುಸರಿಸಿ, ಇತರ ಹಲವಾರು ದೇಶಗಳು ಇದೇ ರೀತಿಯ ನಿಷೇಧಗಳು ಅಥವಾ ಕಠಿಣ ವಯಸ್ಸಿನ ಮಿತಿಗಳತ್ತ ಸಾಗಿವೆ. ನಾರ್ವೆ ದೇಶವು 15 ವರ್ಷದೊಳಗಿನವರನ್ನು ದೃಢೀಕರಿಸಿದ್ದು, ಒಪ್ಪಿಗೆಯ ವಯಸ್ಸನ್ನು 13 ರಿಂದ 15 ವರ್ಷಕ್ಕೆ ಏರಿಸುವುದು ಸಂಪೂರ್ಣ ನಿಷೇಧ ಪ್ರಗತಿಯಲ್ಲಿದೆ. ಡೆನ್ಮಾರ್ಕ್ ದೇಶವು 15 ವರ್ಷದೊಳಗಿನವರನ್ನು ಪ್ರಸ್ತಾಪಿಸಿದ್ದು, 13-14 ವರ್ಷ ವಯಸ್ಸಿನವರಿಗೆ ಸೀಮಿತ ಪೋಷಕರ ಆಯ್ಕೆಗಳೊಂದಿಗೆ ನಿಷೇಧಕ್ಕಾಗಿ ಯೋಜನೆಗಳು ಪ್ರಗತಿಯಲ್ಲಿದೆ. 15 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಒಪ್ಪಿಗೆ ಅಗತ್ಯವಿದೆ; ಫ್ರಾನ್ಸ್ ದೇಶ ಪ್ರಸ್ತುತ ಸಂಪೂರ್ಣ ನಿಷೇಧದ ಬಗ್ಗೆ ಚರ್ಚಿಸುತ್ತಿದ್ದು, 15 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಒಪ್ಪಿಗೆ ಅಗತ್ಯವಿದೆ ಮಲೇಷ್ಯಾ 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮವನ್ನು ಪ್ರವೇಶಿಸಲು (ಡಿಜಿಟಲ್ ಗುರುತು) ಪರಿಶೀಲನೆಯ ಅಗತ್ಯವಿದೆ ಎಂಬ ಯೋಜನೆ ಪ್ರಗತಿಯಲ್ಲಿದೆ. ಯುನೈಟೆಡ್ ಸ್ಟೇಟ್ಸ್ 13–16 ವರ್ಷದೊಳಗಿನವರನ್ನು ನಿಷೇಧಿಸಲು ಮತ್ತು 17 ವರ್ಷದೊಳಗಿನವರಿಗೆ ಅಲ್ಗಾರಿದಮ್‌ಗಳನ್ನು ನಿಲ್ಲಿಸಲು ಕಿಡ್ಸ್ ಆಫ್ ಸೋಶಿಯಲ್ ಮೀಡಿಯಾ ಕಾಯ್ದೆಯನ್ನು ಫೆಡರಲ್ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಬಂಟ್ವಾಳದ ಏಮಾಜೆ ಸರ್ಕಾರಿ ಶಾಲೆ: ಗ್ರಾಮೀಣ ಶಿಕ್ಷಣ ರಂಗದ ವಿಶಿಷ್ಟ ಯಶೋಗಾಥೆ

Published

on

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದಲ್ಲಿರುವ ಏಮಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇಂದು ಕೇವಲ ಒಂದು ಶಿಕ್ಷಣ ಸಂಸ್ಥೆಯಷ್ಟೇ ಅಲ್ಲ, ಬದಲಿಗೆ ರಾಜ್ಯದ ಇಡೀ ಸರ್ಕಾರಿ ಶಾಲಾ ವ್ಯವಸ್ಥೆಗೆ ದಾರಿದೀಪವಾಗಿರುವ ಒಂದು ಅದ್ಭುತ ಮಾದರಿಯಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳೆಂದರೆ ಮೂಲಸೌಕರ್ಯಗಳ ಕೊರತೆ ಮತ್ತು ಮಕ್ಕಳ ಸಂಖ್ಯೆ ಇಳಿಕೆ ಎಂಬ ನಕಾರಾತ್ಮಕ ಧೋರಣೆಯನ್ನು ಈ ಶಾಲೆ ತನ್ನ ಸೃಜನಶೀಲ ಹೆಜ್ಜೆಗಳಿಂದ ಸುಳ್ಳಾಗಿಸಿದೆ.

ಶಾಲೆಯ ಪ್ರಮುಖ ಮೈಲುಗಲ್ಲುಗಳು ಮತ್ತು ವಿಶೇಷತೆಗಳು

ಭದ್ರವಾದ ಬುನಾದಿ: 1982-83ರಲ್ಲಿ ಸ್ಥಾಪನೆಗೊಂಡ ಈ ಶಾಲೆ, ಇಂದು ಎಲ್‌ಕೆಜಿಯಿಂದ (LKG) 5ನೇ ತರಗತಿಯವರೆಗೆ ಒಟ್ಟು 104 ವಿದ್ಯಾರ್ಥಿಗಳನ್ನು ಒಳಗೊಂಡು ಹೆಮ್ಮೆಯಿಂದ ಬೆಳೆದು ನಿಂತಿದೆ.

ಗುಣಮಟ್ಟದ ಬೋಧನೆ: ಇಲ್ಲಿ 2 ಜನ ಸಮರ್ಪಿತ ಸರ್ಕಾರಿ ಶಿಕ್ಷಕರು ಹಾಗೂ 3 ಜನ ಗೌರವ ಶಿಕ್ಷಕಿಯರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.

ಉಚಿತ ಆಟೋ ಸಾರಿಗೆ ಸೇವೆ: ದೂರದ ಊರುಗಳಿಂದ ಬರುವ ಪುಟಾಣಿ ಮಕ್ಕಳ ಅನುಕೂಲಕ್ಕಾಗಿ 2013-14ನೇ ಸಾಲಿನಿಂದಲೇ ಸ್ವಂತ ಶಾಲಾ ಆಟೋ ಮೂಲಕ ಸಂಪೂರ್ಣ ಉಚಿತ ಸಾರಿಗೆ ವ್ಯವ ಕಲ್ಪಿಸಲಾಗಿದೆ. ಇದು ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಕೃಷಿ ಮತ್ತು ಪರಿಸರ ಪಾಠ: ಶಾಲೆಯ ಹೆಸರಿನಲ್ಲಿ 2 ಎಕರೆ ಕೃಷಿ ಜಮೀನಿದ್ದು, ನೂರಕ್ಕೂ ಅಧಿಕ ತೆಂಗಿನ ಮರಗಳು, ಔಷಧೀಯ ಗಿಡಗಳು, ಹಣ್ಣು-ಹಂಪಲು ಮತ್ತು ತರಕಾರಿಗಳನ್ನು ಬೆಳೆಸಲಾಗಿದೆ. ಇದು ಮಕ್ಕಳಿಗೆ ಪ್ರಾಯೋಗಿಕ ಕೃಷಿ ಜ್ಞಾನ ನೀಡುತ್ತದೆ.

ತಂತ್ರಜ್ಞಾನ ಮತ್ತು ನಾವೀನ್ಯತೆ: ಇನ್ಫೋಸಿಸ್ ಸಂಸ್ಥೆಯ ಕೊಡುಗೆಯಾದ ಕಂಪ್ಯೂಟರ್‌ಗಳ ಮೂಲಕ 1ನೇ ತರಗತಿಯಿಂದಲೇ ಗಣಕಯಂತ್ರ ಶಿಕ್ಷಣ ನೀಡಲಾಗುತ್ತಿದೆ. ಜತೆಗೆ ಮಳೆ ಕೊಯ್ಲು, ಇಂಗು ಗುಂಡಿ ಮತ್ತು ಎರೆಹುಳ ಗೊಬ್ಬರ ಘಟಕಗಳನ್ನು ಅಳವಡಿಸಲಾಗಿದೆ.

ಪ್ರಶಸ್ತಿ ಹಾಗೂ ಗೌರವಗಳ ಗರಿ

ಶಾಲೆ ಮತ್ತು ಸಮಿತಿಯ ನಿರಂತರ ಪರಿಶ್ರಮಕ್ಕೆ ಸರಕಾರ ಹಾಗೂ ಪ್ರತಿಷ್ಠಿತ ಸಂಸ್ಥೆಗಳಿಂದ ಹಲವು ಪ್ರಮುಖ ಪ್ರಶಸ್ತಿಗಳು ಒಲಿದುಬಂದಿವೆ:

  1. ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ: ಮುಖ್ಯ ಶಿಕ್ಷಕಿ ಶ್ರೀಮತಿ ತ್ರಿವೇಣಿ ಅವರಿಗೆ 2019-20ರಲ್ಲಿ ಲಭಿಸಿದೆ.
  2. ರಾಜ್ಯ ಮಟ್ಟದ ಉತ್ತಮ SDMC ಪ್ರಶಸ್ತಿ: ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗೆ 2024-25ರಲ್ಲಿ ಸಂದಿದೆ.
  3. ಹಸಿರು ನೈರ್ಮಲ್ಯ ಶಾಲಾ ಪ್ರಶಸ್ತಿ: 2024ರಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನಿಂದ ಇದು ಲಭಿಸಿದೆ.

ಮುಂದಿನ ಕನಸುಗಳು ಮತ್ತು ದಾನಿಗಳ ಸಹಕಾರದ ಅಪೇಕ್ಷೆ

ಹಳೆ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ (SDMC), ಪೋಷಕರು ಹಾಗೂ ನೇರಳಕಟ್ಟೆ ಸಹಕಾರಿ ಸಂಘದ ಜಂಟಿ ಸಹಕಾರದಿಂದ ಮುನ್ನಡೆಯುತ್ತಿರುವ ಈ ಶಾಲೆಗೆ ಪ್ರಸ್ತುತ ಕೆಲವು ತುರ್ತು ಅವಶ್ಯಕತೆಗಳಿವೆ. ಮಕ್ಕಳ ಸುರಕ್ಷಿತ ಪ್ರಯಾಣಕ್ಕಾಗಿ ಒಂದು ಶಾಲಾ ವಾಹನ ಹಾಗೂ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಂದು ಸುಸಜ್ಜಿತ ಸಭಾಂಗಣದ (Auditorium) ಕೊರತೆ ಇದೆ.

ಗ್ರಾಮೀಣ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಈ ಮಾದರಿ ಶಾಲೆಗೆ ಸಹೃದಯಿ ದಾನಿಗಳು ಹಾಗೂ ವಿದ್ಯಾಭಿಮಾನಿಗಳು ಕೈಜೋಡಿಸಿ, ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಹಕರಿಸಬೇಕಾಗಿ ವಿನಂತಿ.

Continue Reading

Dakshina Kannada

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ: ಜುಲೈ 24ರಂದು ಶಾಲೆ, ಪಿಯು ಮತ್ತು ಐಟಿಐ ಕಾಲೇಜುಗಳಿಗೆ ರಜೆ ಘೋಷಣೆ!

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಮುನ್ಸೂಚನೆಯಂತೆ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜುಲೈ 24, 2026 (ಶುಕ್ರವಾರ) ರಂದು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದೆ.

ಯಾವುದಕ್ಕೆಲ್ಲಾ ರಜೆ?

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹೊರಡಿಸಿರುವ ಪ್ರಕಟಣೆಯಂತೆ ಈ ಕೆಳಗಿನ ಸಂಸ್ಥೆಗಳಿಗೆ ರಜೆ ಅನ್ವಯವಾಗಲಿದೆ:

  • ಎಲ್ಲಾ ಅಂಗನವಾಡಿ ಕೇಂದ್ರಗಳು
  • ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು (ಎಲ್ಲಾ ವಸತಿ ಶಾಲೆಗಳೂ ಸೇರಿದಂತೆ)
  • ಎಲ್ಲಾ ಪದವಿ ಪೂರ್ವ ಕಾಲೇಜುಗಳು / 12ನೇ ತರಗತಿವರೆಗೆ (ಎಲ್ಲಾ ವಸತಿ ಕಾಲೇಜುಗಳೂ ಸೇರಿದಂತೆ)
  • ಎಲ್ಲಾ ITI ಮತ್ತು ಡಿಪ್ಲೊಮಾ ಕಾಲೇಜುಗಳು (ಎಲ್ಲಾ ವಸತಿ ಕಾಲೇಜುಗಳೂ ಸೇರಿದಂತೆ)

ಸೂಚನೆ: ಈ ರಜೆ ಆದೇಶವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ನಿಯಮ ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಜಿಲ್ಲಾಡಳಿತ ನೀಡಿದ ಮುನ್ನೆಚ್ಚರಿಕೆಗಳು:

  1. ಪಾಲಕರಿಗೆ ಜಾಗ್ರತೆ: ನೀರಿರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಮತ್ತು ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸಬೇಕು.
  2. ಮೀನುಗಾರರಿಗೆ ಎಚ್ಚರಿಕೆ: ಮೀನುಗಾರರು ಈ ಸಮಯದಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದು ಸೂಚಿಸಲಾಗಿದೆ.
  3. ಪ್ರವಾಸಿಗರಿಗೆ ನಿರ್ಬಂಧ: ಪ್ರವಾಸಿಗರು ಮತ್ತು ಸಾರ್ವಜನಿಕರು ನದಿ ತೀರ ಹಾಗೂ ಸಮುದ್ರ ತೀರಕ್ಕೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
  4. ಕಾಳಜಿ ಕೇಂದ್ರಗಳು ಸಜ್ಜು: ತಾಲೂಕು ಮಟ್ಟದಲ್ಲಿ ಪ್ರಕೃತಿ ವಿಕೋಪ ಎದುರಿಸಲು ಕಾಲೇಜು / ಕಾಳಜಿ ಕೇಂದ್ರಗಳನ್ನು ಸಜ್ಜಾಗಿಡಲು ಸೂಚಿಸಲಾಗಿದೆ.

ತುರ್ತು ಸಹಾಯವಾಣಿ (Helpline Numbers):

ಮಳೆಯಿಂದ ಉಂಟಾಗುವ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾಡಳಿತದ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:

  • ಟೋಲ್ ಫ್ರೀ ಸಂಖ್ಯೆ (Toll-Free No): 1077
  • ದೂರವಾಣಿ ಸಂಖ್ಯೆ: 0824-2442590
Continue Reading

Bantawala

ಕನ್ಯಾನ ಸರ್ಕಾರಿ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಕಾರ್ಯಾಗಾರ

Published

on

ಕನ್ಯಾನ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ (IQAC) ಹಾಗೂ ಪ್ಲೇಸ್‌ಮೆಂಟ್ ಸೆಲ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ‘ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಅವಕಾಶಗಳು’ ಎಂಬ ವಿಷಯದ ಕುರಿತು ಇತ್ತೀಚೆಗೆ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಕಾಲೇಜಿನ ನಿಕಟಪೂರ್ವ ಉಪನ್ಯಾಸಕ ಕಿರಣ್ ಪ್ರಸಾದ್ ಅವರು, “ನಮ್ಮ ಬದುಕಿನ ಪಥವನ್ನು ರೂಪಿಸಿಕೊಳ್ಳಬೇಕಾದವರು ನಾವೇ. ಆದ್ದರಿಂದ ನಮಗೆ ಸಿಗುವ ಪ್ರತಿಯೊಂದು ಸಣ್ಣ ಅವಕಾಶವನ್ನೂ ಸದುಪಯೋಗ ಪಡಿಸಿಕೊಳ್ಳಬೇಕು,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಲ್ಲದೆ, ವಿವಿಧ ಉದ್ಯೋಗಾವಕಾಶಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸವಿತಾ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಚೈತ್ರಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿದ್ಯಾರ್ಥಿ ಖಲೀಲ್ ಇಬ್ರಾಹಿಂ ಸ್ವಾಗತಿಸಿ, ಸ್ನೇಹಾ ಎನ್. ವಂದಿಸಿದರು. ಶರಣ್ಯ ಕಾರ್ಯಕ್ರಮ ನಿರೂಪಿಸಿದರೆ, ಇಶ್ಮಿತಾ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು.

Continue Reading

Trending

Copyright © 2025 Deevatige

error: Content is protected !!