complaint
ಪುತ್ತೂರು ಚಲೋ: ದ್ವೇಷ ಭಾಷಣ, ಪೊಲೀಸ್ ನಿಂದನೆ ಆರೋಪ; ಶ್ರೀಕಾಂತ್ ಶೆಟ್ಟಿ, ಸಂಘಟಕರ ವಿರುದ್ಧ ದೂರು
ಪುತ್ತೂರು: ಇತ್ತೀಚೆಗೆ ನಡೆದ ‘ಪುತ್ತೂರು ಚಲೋ’ ಕಾರ್ಯಕ್ರಮದಲ್ಲಿ ದ್ವೇಷಪೂರಿತ ಘೋಷಣೆ ಕೂಗಿದ ಕಾರ್ಯಕರ್ತರು, ಪ್ರಚೋದನಾಕಾರಿ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ಕಾರ್ಯಕ್ರಮದ ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪುತ್ತೂರು ಮಾನವ ಬಂಧುತ್ವ ವೇದಿಕೆಯ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಅವರು ಈ ದೂರನ್ನು ಸಲ್ಲಿಸಿದ್ದು, ಪುತ್ತೂರು ನಗರ ಪೊಲೀಸರು ದೂರು ಸ್ವೀಕರಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ದೂರಿನಲ್ಲೇನಿದೆ? ಆಗಸ್ಟ್ 31ರಂದು ದರ್ಬೆಯ ಜಿರಾಕ್ಸ್ ಅಂಗಡಿಯ ಗಲಾಟೆಯನ್ನು ಮುಂದಿಟ್ಟುಕೊಂಡು ನಡೆಸಲಾದ ‘ಪುತ್ತೂರು ಚಲೋ’ ಮೆರವಣಿಗೆಯಲ್ಲಿ ಕೆಲವು ಕಾರ್ಯಕರ್ತರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು “ಪಾಕಿಸ್ತಾನದ ನಾಯಿಗಳು”, “ಬಾಂಗ್ಲಾದೇಶದ ಕನ್ನಿಗಳು” ಎಂಬ ದ್ವೇಷಪೂರಿತ ಘೋಷಣೆಗಳನ್ನು ಕೂಗಿದ್ದಾರೆ. ಸಂಘಟಕರ ಕುಮ್ಮಕ್ಕಿನಿಂದ ಸಮಾಜದಲ್ಲಿ ಕೋಮು ವೈಮನಸ್ಯ ಮೂಡಿಸಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವರ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. “ಪೊಲೀಸ್ ಇಲಾಖೆಯಲ್ಲಿ ಗಂಡಸುತನ ಇರುವ ಯಾವ ಅಧಿಕಾರಿಯೂ ಇಲ್ಲ, ಹಿಂದೂ ಸಂಘಟನೆಗಳನ್ನು ದಮನ ಮಾಡಲು ಪೊಲೀಸರು ಕಾಂಟ್ರಾಕ್ಟ್ ಪಡೆದಿದ್ದಾರೆ. ಪೊಲೀಸರು ವರದಕ್ಷಿಣೆ, ಉಯಿಲು ತಕರಾರು ಕೇಸ್ಗಳಲ್ಲಿ ಬೆದರಿಸಿ ಡೀಲ್ ಕುದುರಿಸುತ್ತಿದ್ದಾರೆ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ರೌಡಿಶೀಟ್ ತೆರೆಯುವ ಪೊಲೀಸರು ನಾಲಾಯಕ್ ನಪುಂಸಕರು” ಎಂದು ನಿಂದಿಸಿ, ಸಾರ್ವಜನಿಕರಲ್ಲಿ ಇಲಾಖೆಯ ಬಗ್ಗೆ ಕೀಳು ಅಭಿಪ್ರಾಯ ಮೂಡಿಸಲು ಯತ್ನಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ಶ್ರೀಕಾಂತ್ ಶೆಟ್ಟಿ ಅವರು ಈ ಹಿಂದೆಯೂ ಇಂತಹ ಪ್ರಚೋದನಾಕಾರಿ ಭಾಷಣಗಳ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಹಿನ್ನೆಲೆ ಹೊಂದಿದ್ದಾರೆ. ಆದ್ದರಿಂದ ದ್ವೇಷ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ, ಪ್ರಚೋದನಾಕಾರಿ ಘೋಷಣೆ ಕೂಗಿದ ಕಾರ್ಯಕರ್ತರು ಹಾಗೂ ಸಂಘಟಕರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆ ಹಾಗೂ ಐಪಿಸಿ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅಮಳ ರಾಮಚಂದ್ರ ಆಗ್ರಹಿಸಿದ್ದಾರೆ
complaint
ಮಂಗಳೂರಿನ ಜಿ.ಆರ್. ಮೆಡಿಕಲ್ ಕಾಲೇಜಿನ MBBS ಸೀಟು ರದ್ದತಿಗೆ KEAಗೆ ಮನವಿ: ‘ನವ ಭಾರತ ಶಿಕ್ಷಾ ಪ್ರತಿಷ್ಠಾನ’ ಒತ್ತಾಯ
ಬೆಂಗಳೂರು: ಮಂಗಳೂರಿನ ‘ಜಿ.ಆರ್. ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್’ (GRMCHRC) ನಲ್ಲಿರುವ 150 MBBS ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕೌನ್ಸೆಲಿಂಗ್ ಸೀಟ್ ಮ್ಯಾಟ್ರಿಕ್ಸ್ನಿಂದ ತಕ್ಷಣವೇ ರದ್ದುಗೊಳಿಸಬೇಕು ಅಥವಾ ತಡೆಹಿಡಿಯಬೇಕು ಎಂದು ‘ನವ ಭಾರತ ಶಿಕ್ಷಾ ಪ್ರತಿಷ್ಠಾನ’ದ ರಾಜ್ಯ ಸಂಯೋಜಕ ಡಾ. ಗೋವಿಂದರಾಜು ಕೆ. ಅವರು KEA ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಮುಖ ಆರೋಪಗಳು ಮತ್ತು ಮನವಿಯ ಮುಖ್ಯಾಂಶಗಳು:
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ: ಈ ಹಿಂದೆ ಕಾಲೇಜಿನಲ್ಲಿ ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯ ಹಾಗೂ ಸೂಕ್ತ ಬೋಧಕರ ಕೊರತೆ ಇದ್ದ ಕಾರಣ ಹೈಕೋರ್ಟ್ ಮಧ್ಯಪ್ರವೇಶಿಸಿ, ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಿಗೆ ವರ್ಗಾಯಿಸಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ನಷ್ಟ, ಮಾನಸಿಕ ಶ್ರಮ ಮತ್ತು ಆರ್ಥಿಕ ನಷ್ಟ ಉಂಟಾಗಿದೆ.
NMC ನಿಯಮಗಳ ಉಲ್ಲಂಘನೆ: ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಮಾರ್ಗದರ್ಶಿ ಸೂತ್ರಗಳನ್ನು ಕಾಲೇಜು ಉಲ್ಲಂಘಿಸಿದೆ. ಆಸ್ಪತ್ರೆಯಲ್ಲಿ ಹೊರರೋಗಿಗಳ (OPD) ಸಂಖ್ಯೆ, ಹಾಸಿಗೆಗಳ ಭರ್ತಿ (Bed Occupancy), ಶಸ್ತ್ರಚಿಕಿತ್ಸಾ ಕೊಠಡಿಗಳ (OT) ಕಾರ್ಯನಿರ್ವಹಣೆ ಮತ್ತು ಚಿಕಿತ್ಸಾ ಸೌಲಭ್ಯಗಳು NMC ಮಾನದಂಡಗಳಿಗೆ ತಕ್ಕಂತೆ ಇಲ್ಲದಿರುವುದು ಕಂಡುಬಂದಿದೆ.
ಬೋಧಕರ ಕೊರತೆ: ಕಾಲೇಜು ಅತ್ಯಂತ ಗ್ರಾಮೀಣ ಭಾಗದಲ್ಲಿದ್ದು, ಉತ್ತಮ ವೈದ್ಯರು ಹಾಗೂ ಬೋಧಕರನ್ನು ನಿಯಮಿತ ಪ್ರಮಾಣದಲ್ಲಿ ಉಳಿಸಿಕೊಳ್ಳಲು ಸಂಸ್ಥೆ ಸಂಪೂರ್ಣ ವಿಫಲವಾಗಿದೆ.

ಪ್ರಮುಖ ಆಗ್ರಹಗಳು:
ಸೀಟುಗಳ ರದ್ದು: ಸಂಸ್ಥೆಯು NMC ಯಿಂದ ಸಂಪೂರ್ಣ ಅನುಮತಿ ಪಡೆಯುವವರೆಗೆ KEA ನಡೆಸುವ NEET UG ಕೌನ್ಸೆಲಿಂಗ್ನಲ್ಲಿ GRMCHRC ಯ MBBS ಸೀಟುಗಳನ್ನು ಸೇರಿಸಬಾರದು.
ಉನ್ನತ ಮಟ್ಟದ ತನಿಖೆ: ಹೈಕೋರ್ಟ್ನ ಹಾಲಿ ನ್ಯಾಯಾಧೀಶರು ಮತ್ತು ತಜ್ಞರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಿ, ಕಾಲೇಜು ಮತ್ತು ಆಸ್ಪತ್ರೆಗೆ ದಿಢೀರ್ ಪರಿಶೀಲನೆ (Surprise Inspection) ನಡೆಸಬೇಕು.
ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ರಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (RGUHS) ಪ್ರತಿಯನ್ನು ರವಾನಿಸಲಾಗಿದ್ದು, ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳ ಹಿತರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ
Bantawala
ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಅವ್ಯವಸ್ಥೆ: ಮಣ್ಣಿನೊಳಗೆ ಹೂತುಹಾಕುವ ಕಳ್ಳ ವ್ಯವಹಾರ ಬಯಲು!
ಬಂಟ್ವಾಳ/ಉಳ್ಳಾಲ: ಉಳ್ಳಾಲ ವಿಧಾನಸಭಾ ಕ್ಷೇತ್ರದ ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕವು ನಿರ್ವಹಣೆಯಿಲ್ಲದೆ ಭಾರಿ ಅವ್ಯವಸ್ಥೆಯ ಗಂಟಾಗಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಿಂದ ತರಲಾಗುವ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಿ ಸಂಸ್ಕರಿಸಬೇಕಾದ ಸಂಸ್ಥೆ, ಯಾವುದೇ ನಿಯಮ ಪಾಲಿಸದೆ ಎಲ್ಲೆಂದರಲ್ಲಿ ಲೋಡುಗಟ್ಟಲೆ ಕಸವನ್ನು ರಾಶಿ ಹಾಕಿ ಪರಿಸರವನ್ನು ದುರ್ನಾತಮಯಗೊಳಿಸಿದೆ.

ನರಕಸದೃಶ ವಾತಾವರಣ, ಜಲಮೂಲ ಕಲಿಷಿತ: ತ್ಯಾಜ್ಯದ ರಾಶಿಯಿಂದಾಗಿ ಸುತ್ತಮುತ್ತಲಿನ ಪರಿಸರದಲ್ಲಿ ತೀವ್ರ ದುರ್ನಾತ ಬೀರುತ್ತಿದ್ದು, ಮಂಚಿ ಹಾಗೂ ಕುಕ್ಕಾಜೆ-ಸಜಿಪ ಸಂಪರ್ಕ ರಸ್ತೆಯಲ್ಲಿ ಸಂಚರಿಸುವುದೇ ನರಕಸದೃಶವಾಗಿದೆ. ಹಕ್ಕಿಗಳು, ನಾಯಿ-ನರಿಗಳು ತ್ಯಾಜ್ಯವನ್ನು ಹೆಕ್ಕಿ ತಂದು ಸ್ಥಳೀಯ ನಾಗರಿಕರ ಕುಡಿಯುವ ನೀರಿನ ಬಾವಿ ಹಾಗೂ ಟ್ಯಾಂಕ್ಗಳಿಗೆ ಎಸೆಯುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
https://deevatigenews.com/wp-content/uploads/2026/08/WhatsApp-Video-2026-08-19-at-16.06.21-1.mp4
ಹಿಟಾಚಿ ಮೂಲಕ ತ್ಯಾಜ್ಯ ಹೂತುಹಾಕುವ ಕಳ್ಳ ವ್ಯವಹಾರ! ಲಕ್ಷಾಂತರ ರೂಪಾಯಿ ಸರ್ಕಾರಿ ಅನುದಾನ ವೆಚ್ಚ ಮಾಡಿ ನಿರ್ಮಿಸಿದ ಈ ಘಟಕದಲ್ಲಿ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಬದಲಿಗೆ, ಹಿಟಾಚಿ ಯಂತ್ರ ಬಳಸಿ ಭಾರಿ ಗಾತ್ರದ ಗುಂಡಿ ತೋಡಿ ಕಸವನ್ನು ಮಣ್ಣಿನ ಅಡಿಯಲ್ಲಿ ಹೂತುಹಾಕಲಾಗುತ್ತಿದೆ. ಸ್ಥಳೀಯರು ನೀಡಿದ ದೂರಿನನ್ವಯ ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ, ಪುರಸಭಾ ಅಧಿಕಾರಿಗಳ ಈ ಬೇಜವಾಬ್ದಾರಿ ಹಾಗೂ ವೈಫಲ್ಯ ಬಹಿರಂಗಗೊಂಡಿದೆ.

ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆ: ಸರ್ಕಾರದ ಹಣ ಪೋಲು ಮಾಡಿ, ಪರಿಸರ ನಾಶಕ್ಕೆ ಕಾರಣರಾಗಿರುವ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ
Bantawala
ಗ್ಯಾಸ್ ವಿತರಣೆಯಲ್ಲಿ ತಾರತಮ್ಯ, ಸಿಬ್ಬಂದಿಯ ಉದ್ಧಟತನ: ಬಂಟ್ವಾಳ ತಹಶೀಲ್ದಾರ್, ಜಿಲ್ಲಾಧಿಕಾರಿಗೆ ದೂರು; ವೀಡಿಯೋ ವೈರಲ್
ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ನಿವಾಸಿಗಳಿಗೆ ಅಡುಗೆ ಅನಿಲ (LPG) ವಿತರಣೆಯಲ್ಲಿ ವಿಪರೀತ ತಾರತಮ್ಯ ಎಸಗಲಾಗುತ್ತಿದ್ದು, ಸಿಲಿಂಡರ್ ಪೂರೈಕೆಯಲ್ಲಿ ವಿಳಂಬ ಹಾಗೂ ಏಜೆನ್ಸಿ ಸಿಬ್ಬಂದಿಗಳ ಉದ್ಧಟತನದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಬಂಟ್ವಾಳ ತಾಲೂಕು ತಹಶೀಲ್ದಾರ್ / ಆಹಾರ ಇಲಾಖೆಯ ಅಧಿಕಾರಿಗೆ ಸಾಕ್ಷಿ ಸಮೇತ ದೂರು ಸಲ್ಲಿಸಲಾಗಿದೆ.
ನರಿಕೊಂಬು ಗ್ರಾಮದ ಎಸ್ಎಮ್ಪಿ ನಿವಾಸಿ ಯಶೋಧರ ಕುಲಾಲ್ (ತಂದೆ: ಗಂಗಯ್ಯ ಮೂಲ್ಯ) ಎಂಬವರು ಬಂಟ್ವಾಳದ ‘ಭಾರತ್ ಗ್ಯಾಸ್’ ವಿತರಕರಾದ ‘ಭದ್ರಾ ಗ್ಯಾಸ್ ಎಲ್.ಪಿ.ಜಿ ಏಜೆನ್ಸಿ’ ವಿರುದ್ಧ ದಿನಾಂಕ 19/08/2026 ರಂದು ಈ ದೂರು ನೀಡಿದ್ದಾರೆ.
ದೂರಿನಲ್ಲಿರುವ ಪ್ರಮುಖ ಅಂಶಗಳು:
ಬುಕಿಂಗ್ ವಿಳಂಬ: ಸಾಮಾನ್ಯ ನಿಯಮಗಳಂತೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ 25 ರಿಂದ 30 ದಿನಗಳ ನಂತರವಷ್ಟೇ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ.
ತಾರತಮ್ಯದ ನಡವಳಿಕೆ: ಸಿಲಿಂಡರ್ ಬುಕ್ ಮಾಡಿದ 5-6 ದಿನಗಳಲ್ಲೇ ಏಜೆನ್ಸಿಯ ವಿತರಣಾ ವಾಹನವು ಮನೆ ಬಳಿಗೆ ಬಂದರೂ, ದೂರುದಾರರಿಗೆ ಸಿಲಿಂಡರ್ ನೀಡದೆ ವಾಪಸ್ ಕರೆದೊಯ್ಯಲಾಗುತ್ತಿದೆ.
ಆಫೀಸ್ನಲ್ಲಿ ಸಾರ್ವಜನಿಕರಿಗೆ ಕಿರುಕುಳ ಹಾಗೂ ಉದ್ಧಟತನ: ಈ ಬಗ್ಗೆ ಏಜೆನ್ಸಿ ಕಚೇರಿಗೆ ತೆರಳಿ ಖುದ್ದಾಗಿ ಪ್ರಶ್ನಿಸಿದರೆ, ಅಲ್ಲಿದ್ದ ಸಿಬ್ಬಂದಿಗಳು ಉದ್ಧಟತನ ಹಾಗೂ ಉಡಾಫೆಯ ಮಾತುಗಳನ್ನಾಡಿ ಗ್ಯಾಸ್ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ದೂರಲಾಗಿದೆ.
ಗ್ಯಾಸ್ ಕೌಂಟರ್ನಲ್ಲಿ ನಡೆದ ಮಾತುಕತೆಯ ವೀಡಿಯೋ ವೈರಲ್!
ಗ್ರಾಹಕರು ಏಜೆನ್ಸಿ ಕಚೇರಿಗೆ ತೆರಳಿ ತಮ್ಮ ಸಮಸ್ಯೆಯನ್ನು ತಿಳಿಸಿದಾಗ, ಸಿಬ್ಬಂದಿ ನೀಡಿದ ನಿಷ್ಕಾಳಜಿಯ ಉತ್ತರ ಹಾಗೂ ಉಡಾಫೆಯ ನಡವಳಿಕೆಯನ್ನು ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ.
“ಇತರ ಏಜೆನ್ಸಿಗಳಲ್ಲಿ ಬುಕ್ ಮಾಡಿದ ತಕ್ಷಣ ಗ್ಯಾಸ್ ನೀಡುತ್ತಾರೆ, ನಿಮ್ಮಲ್ಲಿ ಯಾಕೆ ಕೊಡುವುದಿಲ್ಲ?” ಎಂದು ಗ್ರಾಹಕರು ಪ್ರಶ್ನಿಸಿದಾಗ, “ನಮ್ಮ ಲೈನ್ಗೆ ಬಂದಾಗ ಮಾತ್ರ ತಲುಪಿಸುತ್ತೇವೆ” ಎಂದು ಸಿಬ್ಬಂದಿ ಹಾರಿಕೆ ಉತ್ತರ ನೀಡಿದ್ದಾರೆ.
“ಮನೆಯಲ್ಲಿ ಒಂದೇ ಸಿಲಿಂಡರ್ ಇರುವುದು, 25-30 ದಿನ ಗ್ಯಾಸ್ ಇಲ್ಲದೆ ಏನು ಮಾಡಬೇಕು?” ಹಾಗೂ “ಶುಕ್ರವಾರವೇ ಬುಕ್ ಮಾಡಿದ್ದು, ಇಲ್ಲಿಂದಲೇ ಪಡೆದುಕೊಂಡು ಹೋಗುತ್ತೇನೆ ಎಂದರೆ ಕೊಡುವುದಿಲ್ಲವೇ?” ಎಂದು ಗ್ರಾಹಕರು ವಿನಂತಿಸಿದರೂ, ಸಿಬ್ಬಂದಿ ಗ್ಯಾಸ್ ನೀಡಲು ನೆಪ ಹೇಳಿ ನಿರಾಕರಿಸುವ ದೃಶ್ಯಗಳು ವೀಡಿಯೋದಲ್ಲಿ ದಾಖಲಾಗಿವೆ.

ಸೂಕ್ತ ತನಿಖೆಗೆ ಒತ್ತಾಯ:
ಗ್ಯಾಸ್ ಏಜೆನ್ಸಿಯ ಈ ರೀತಿಯ ತಾರತಮ್ಯ, ನಿರ್ಲಕ್ಷ್ಯ ಹಾಗೂ ಸಾರ್ವಜನಿಕರ ಮೇಲಿನ ಉದ್ಧಟತನದಿಂದ ಗ್ರಾಹಕರು ಪ್ರತಿದಿನ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ತಕ್ಷಣವೇ ಭದ್ರಾ ಗ್ಯಾಸ್ ಏಜೆನ್ಸಿಯ ವಿರುದ್ಧ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಅಡುಗೆ ಅನಿಲ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.
-
accident1 month agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
