ayodhya
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಸಿದ್ದವಾಗಿರುವ ಅಪರೂಪದ ಶ್ರೀರಾಮ
ಬೆಂಗಳೂರು: ಚಿನ್ನದ ಎಲೆಯ ಹಾಳೆಗಳಿಂದ ಲೇಪಿತವಾಗಿರುವ, ಮಾಣಿಕ್ಯ, ಪಚ್ಚೆ, ಹವಳ, ಮುತ್ತು ಹಾಗೂ ವಜ್ರಗಳಿಂದ ಅಲಂಕರಿಸಲಾದ 10 ಅಡಿ ಎತ್ತರ, 6 ಅಡಿ ಅಗಲ ಮತ್ತು 2.5 ಅಡಿ ಆಳ ಹೊಂದಿರುವ ರೋಸ್ವುಡ್ ಚೌಕಟ್ಟಿನಲ್ಲಿ ಅಳವಡಿಸಲಾದ ಅಪರೂಪದ ಶ್ರೀರಾಮನ ಕಲಾಕೃತಿಯೊಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಸಜ್ಜಾಗಿದೆ.
ಈ ವಿಶಿಷ್ಟ ಕಲಾಕೃತಿಯನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿಹವ್ಯಾಸಿ ಕಲಾವಿದೆ ಜಯಶ್ರೀ ಫಣೀಶ್ ತಮ್ಮ ಕೈಯ್ಯಾರೆ ನಿರ್ಮಿಸಿದ್ದು, ಇದರ ಸಂಪೂರ್ಣ ಹಣಕಾಸು ಸಹಾಯವನ್ನು ಅವರ ಕುಟುಂಬವೇ ಒದಗಿಸಿದೆ ಎಂದು ಅವರು ತಿಳಿಸಿದ್ದಾರೆ.
ತಂಜಾವೂರು ಚಿತ್ರಕಲೆ ಶೈಲಿಯಿಂದ ಪ್ರೇರಣೆ ಪಡೆದ ಈ ರಾಮ ಕಲಾಕೃತಿಯನ್ನು ಇದರಲ್ಲಿ ರಾಮನ ದೈವಿಕ ರೂಪದೊಂದಿಗೆ ಹನುಮಾನ್, ಗರುಡ ಹಾಗೂ ದಶಾವತಾರದ ಚಿತ್ರಣಗಳನ್ನು ಒಳಗೊಂಡಿರುವುದು ವಿಶೇಷ. ಕಲಾಕೃತಿಯು ವಿಗ್ರಹದಂತೆ ಕಾಣುವ ತ್ರಿಮಿತೀಯ ವಿನ್ಯಾಸವನ್ನು ಹೊಂದಿದೆ.

ಡಿಸೆoಬರ್ 11ರಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಿಂದ ದೃಢೀಕರಣ ಪತ್ರವನ್ನು ಸ್ವೀಕರಿಸಿದ ನಂತರ, ಜಯಶ್ರೀ ಫಣೀಶ್ ಅವರ ಮನೆಗೆ ಕಲಾಕೃತಿಯನ್ನು ವೀಕ್ಷಿಸಲು ನಿರಂತರವಾಗಿ ಭಕ್ತರು ಮತ್ತು ಕಲಾಭಿಮಾನಿಗಳ ದಂಡೇ ಹರಿದು ಬಂದಿದೆ. ಕಲಾಕೃತಿ ಸ್ವೀಕಾರವಾದ ಸುದ್ದಿ ತಿಳಿದ ಕೂಡಲೇ, ರಾಜಾಜಿನಗರದಲ್ಲಿರುವ ಅವರ ಮನೆ ಭಕ್ತರ ದರ್ಶನ ಕೇಂದ್ರದoತಾಯಿತು. ಕೆಲವರು ಕೇವಲ ದರ್ಶನಕ್ಕಾಗಿ ಬಂದರೆ, ಇನ್ನು ಕೆಲವರು ಭಜನೆ, ನೃತ್ಯ ಮತ್ತು ಇತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
50 ವರ್ಷದ ಜಯಶ್ರೀ ಫಣೀಶ್ ಅವರು ತಂಜಾವೂರು ವರ್ಣಚಿತ್ರಗಳಲ್ಲಿ ಪರಿಣತಿ ಹೊಂದಿದ್ದು, ಕಳೆದ ಹತ್ತು ವರ್ಷಗಳಲ್ಲಿ ತಮ್ಮ 10 ಕಲಾಕೃತಿಗಳನ್ನು ವಿವಿಧ ದೇವಾಲಯಗಳಿಗೆ ದಾನ ಮಾಡಿದ್ದಾರೆ. ಹಾಸನ ಜಿಲ್ಲೆಯ ದೊಡ್ಡಮಗ್ಗೆ ಗ್ರಾಮದ ದೇವಾಲಯವೊಂದರಲ್ಲಿ ವರ್ಣಚಿತ್ರವನ್ನು ಸಮರ್ಪಿಸುವ ಸಂದರ್ಭದಲ್ಲಿ, ಅಯೋಧ್ಯೆಯ ಕೇಂದ್ರ ದೇವತೆಯಾದ ಬಾಲರಾಮನ ಕಲಾಕೃತಿಯನ್ನು ನಿರ್ಮಿಸುವ ಆಸೆಯನ್ನು ಅವರು ಮೊದಲ ಬಾರಿಗೆ ವ್ಯಕ್ತಪಡಿಸಿದ್ದರು. ಈ ಆಲೋಚನೆಯೇ ಮುಂದಾಗಿ, ಬೆಂಗಳೂರಿನ ಉದ್ಯಮಿ ಜಿ.ಕೆ. ಪ್ರಮೋದ್ ಸೇರಿದಂತೆ ಕೆಲವರು ದೇವಾಲಯದ ಅಧಿಕಾರಿಗಳನ್ನು ಸಂಪರ್ಕಿಸಲು ನೆರವಾದರು.

ಈ ಮಹತ್ವಾಕಾಂಕ್ಷಿ ಕಲಾಕೃತಿಯನ್ನು ಪೂರ್ಣಗೊಳಿಸಲು ಜಯಶ್ರೀ ಅವರಿಗೆ ಒಂಬತ್ತು ತಿಂಗಳುಗಳ ಕಾಲ, ಅಂದಾಜು ೨,೮೦೦ ಗಂಟೆಗಳ ಶ್ರಮ ಬೇಕಾಯಿತು. ಥರ್ಮೋಕೋಲ್ನ ಮೂಲ ರಚನೆಯಿಂದ ಆರಂಭಿಸಿ, ಜೇಡಿಮಣ್ಣಿನ ಪದರ ಹಾಕಿ, ನಂತರ ಚಿನ್ನದ ಎಲೆಯ ಹಾಳೆಗಳಿಂದ ಅಂತಿಮ ಸ್ಪರ್ಶ ನೀಡಲಾಗಿದೆ. ಇದು ಜಯಶ್ರೀ ಅವರ ವಿಗ್ರಹದಂತಿರುವ ಕಲಾಕೃತಿಯ ಮೊದಲ ಪ್ರಯತ್ನವಾಗಿದ್ದು, ಅದರಲ್ಲೂ ರಾಮನ ಮುಖವನ್ನು ಕೆತ್ತುವುದು ಅತ್ಯಂತ ಸವಾಲಿನ ಭಾಗವಾಗಿತ್ತು. ಅದಕ್ಕೆ ಐದು ದಿನಗಳ ಕಾಲ ತೀವ್ರ ಪರಿಶ್ರಮ ಬೇಕಾಯಿತು.
ಈ ಕೆಲಸದಲ್ಲಿ ಜಯಶ್ರೀ ಅವರ ಪತಿ, ಶಸ್ತ್ರಚಿಕಿತ್ಸಕ ಡಾ. ಫಣೀಷಾ ಎಂ.ಎಸ್. ಅವರೂ ಮಹತ್ವದ ಪಾತ್ರ ವಹಿಸಿದ್ದಾರೆ. ಮಾನವ ಅಂಗರಚನಾ ಜ್ಞಾನವನ್ನು ಬಳಸಿಕೊಂಡು, ತೋಳು, ಮುಂದೋಳು, ಕಾಲುಗಳ ಅನುಪಾತ, ಕೀಲುಗಳ ಸ್ಥಾನ ಮತ್ತು ಪಾದಗಳ ಕೆತ್ತನೆಗೆ ಅವರು ಮಾರ್ಗದರ್ಶನ ನೀಡಿದರು.

ಡಾ. ಫಣೀಷಾ ಅವರ ಪ್ರಕಾರ, ಕಳೆದ 50 ದಿನಗಳಲ್ಲಿ ಸುಮಾರು 25000ಕ್ಕೂ ಹೆಚ್ಚು ಜನರು ಅವರ ಮನೆಗೆ ಭೇಟಿ ನೀಡಿದ್ದಾರೆ. ಈಗ ಕಲಾಕೃತಿ ವೀಕ್ಷಣೆಯನ್ನು ಮುಚ್ಚಲಾಗಿದೆ. ಕಲಾಕೃತಿಯನ್ನು ಅಯೋಧ್ಯೆಗೆ ಸ್ಥಳಾಂತರಿಸಿದ ಬಳಿಕ, ತಮ್ಮ ಮನೆಯಲ್ಲಿ ಇದ್ದ ಭಕ್ತಿಪೂರ್ಣ ವಾತಾವರಣವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ
-
accident1 month agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
