Connect with us

celebration

ನಾಳೆ (ಜು.23) ವಿಟ್ಲದಲ್ಲಿ ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಪುತ್ತೂರು ಘಟಕ ವತಿಯಿಂದ ಪತ್ರಿಕಾ ದಿನಾಚರಣೆ: ಹಿರಿಯ ಪತ್ರಕರ್ತ ಯಶವಂತ ವಿಟ್ಲರಿಗೆ ಗೌರವ ಸನ್ಮಾನ

Published

on

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ಆರ್.) ಪುತ್ತೂರು ತಾಲೂಕು ಸಮಿತಿಯ ವತಿಯಿಂದ ‘ಪತ್ರಿಕಾ ದಿನಾಚರಣೆ’ ಹಾಗೂ ಹಿರಿಯ ಪತ್ರಕರ್ತ, ಸಾಹಿತಿ ಯಶು ವಿಟ್ಲ ಅವರಿಗೆ ‘ಗೌರವ ಸಮರ್ಪಣೆ’ ಕಾರ್ಯಕ್ರಮವು ಜುಲೈ 23 ರಂದು (ನಾಳೆ) ನಡೆಯಲಿದೆ.

ಇತ್ತೀಚೆಗೆ ಜುಲೈ 1ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರಿನಲ್ಲಿ ಡಾ. ಹರ್ಮನ್ ಮೊಗ್ಲಿಂಗ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ನಾಳೆ ಪುತ್ತೂರು ತಾಲೂಕು ಘಟಕದ ವತಿಯಿಂದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಅರ್ಥಪೂರ್ಣ ಕಾರ್ಯಕ್ರಮವು ಹಿರಿಯ ಪತ್ರಕರ್ತ ಯಶು ವಿಟ್ಲ ಅವರ ವಿಟ್ಲದ ಪಾಣೆಮಜಲು ಎಂಬಲ್ಲಿರುವ ಮನೆ ʼಶ್ರವಣʼ ದಲ್ಲಿ ನಡೆಯಲಿದೆ. ಈ ಅಪೂರ್ವವಾದ ಕಾರ್ಯಕ್ರಮಕ್ಕೆ ಪತ್ರಿಕಾರಂಗದ ಬಂಧುಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ರಾಮದಾಸ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊರಾಸ್ ಅವರು ಪ್ರಕಟಣೆಯಲ್ಲಿ ಪ್ರೀತಿಯ ಆಹ್ವಾನ ನೀಡಿದ್ದಾರೆ.

ಸನ್ಮಾನಿತರ ಪರಿಚಯ: ಹಿರಿಯ ಪತ್ರಕರ್ತ ಯಶವಂತ ವಿಟ್ಲ (ಯಶು ವಿಟ್ಲ)

ಪರಿಚಯ: ಮಾರ್ಚ್ 9, 1953 ರಲ್ಲಿ ಜನಿಸಿದ ಯಶವಂತ ವಿಟ್ಲ ( ಬಿ.ಕಾಂ. ಡಿ.ಇ.ಜೆ) ಅವರು 3 ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾರಂಗದಲ್ಲಿ ತನ್ನ ಬರಹಗಳಿಂದ ಬಹಳಷ್ಟು ಪ್ರಸಿದ್ದಿ ಪಡೆದವರು. ಅದರಂತೆ ಅದರ ಜೊತೆಯಾಗಿ , ಸಾಹಿತ್ಯ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.

ಪತ್ರಿಕೋದ್ಯಮ ಸೇವೆ: ಸುಮಾರು 33 ವರ್ಷಗಳ ಕಾಲ ‘ಉದಯವಾಣಿ’ ದಿನಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿರುವ ಇವರು, ಗ್ರಾಮೀಣ ಬದುಕಿನ ನೋವು-ನಲಿವುಗಳು, ಸಾರ್ವಜನಿಕ ಸಮಸ್ಯೆಗಳು ಹಾಗೂ ಅಭಿವೃದ್ಧಿ ಪರ ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ ಸಮಾಜದ ಮುಂದಿಟ್ಟಿದ್ದಾರೆ.

ಸಾಹಿತ್ಯ ಕ್ಷೇತ್ರ: ಸಾಹಿತ್ಯ ಕ್ಷೇತ್ರದಲ್ಲೂ ಗಮನಾರ್ಹ ಕೃಷಿ ಮಾಡಿರುವ ಇವರು ಹಲವು ಕೃತಿಗಳ ರಚನೆಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ.‌‌

📚 ಸ್ಮರಣ ಸಂಚಿಕೆ ಸಂಪಾದಕತ್ವ:

  1. ‘ಅಕ್ಷರ ಸಂಪದ’ – 2005
    • ವಿಟ್ಲ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಬೆಳ್ಳಿ ಹಬ್ಬದ ಸಂಪುಟ.
  2. ‘ಕನಕ ಸಂಪದ’ – 2005
    • ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸುವರ್ಣ ಮಹೋತ್ಸವ ಸಂಪುಟ.
  3. ‘ತ್ರಿದಳ’ – 2004
    • ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ‘ದಶಮಾನೋತ್ಸವ ಸಂಚಿಕೆ’.

📖 ಸಹ ಸಂಪಾದಕತ್ವ:

  1. ‘ಚಾಮರ’ – 1986
    • ರವಿವರ್ಮ ಕೃಷ್ಣರಾಜ ಅರಸರ ಸನ್ಮಾನ ಗ್ರಂಥ.
  2. ‘ಕಣಜ’ – 2001
    • ವಿಠಲ ವಿದ್ಯಾಸಂಘದ ಸುವರ್ಣ ಮಹೋತ್ಸವ ಗ್ರಂಥ.
  3. ‘ಒಡಿಯೂರ ತುಡರ್’ – 2001
    • ಒಡಿಯೂರು ತುಳು ಸಾಹಿತ್ಯ ಸಮ್ಮೇಳನ ನೆನಪಿನ ಸಂಚಿಕೆ.
  4. ‘ಸಂಪನ್ನ’ – 2004
    • ಬೆಳ್ಳಪ್ಪಾಡಿ ರಮಾನಾಥ ರೈ – ಜೀವನ ಸಾಧನೆ – ಅವಲೋಕನ ಸಂಪುಟ.
  5. ‘ವಜ್ರಜ್ಯೋತಿ’ – 2011
    • ವಿಠಲ ವಿದ್ಯಾ ಸಂಘದ ವಜ್ರಮಹೋತ್ಸವ ಸಂಪುಟ.
  6. ‘ರುದ್ರಾಕ್ಷಿ’ – 2013
    • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಗ್ರಂಥ.
  7. ‘ಪಂಚಾಕ್ಷರಿ’ – 2013
    • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪುಟ.
  8. ‘ದತ್ತಪ್ರಕಾಶ್’ ಆರಂಭ – 1999
    • ಆಧ್ಯಾತ್ಮಿಕ ದ್ವೈಮಾಸಿಕ ಶ್ರೀ ಗುರುದೇವ ಪ್ರಕಾಶನ, ಶ್ರೀ ಗುರುದೇವದತ್ತ ಸಂಸ್ಥಾನಮ್, ಒಡಿಯೂರು.

ಪ್ರಕಟಿತ ಪುಸ್ತಕ:

ಬಿಂಬ-ಪ್ರತಿಬಿಂಬ – ಅಂಕಣ ಬರಹಗಳ ಸಂಗ್ರಹ.

ಸಾಧನೆಗಳು:

ಸಮಾಚಾರ ಡೈರಿ: ‘ಉದಯವಾಣಿ’ ದಿನಪತ್ರಿಕೆಯಲ್ಲಿ ‘ಸಮಾಚಾರ ಡೈರಿ’ ವರದಿಗಾರನ ಡೈರಿ ಎಂಬ 350ಕ್ಕೂ ಹೆಚ್ಚಿನ ಅಂಕಣ ಬರಹಗಳನ್ನು ಬರೆದಿದ್ದಾರೆ.

ಮೂಲಿಕೆ-ಮಾಲಿಕೆ: ಔಷಧೀಯ ಸಸ್ಯಗಳ ಪರಿಚಯದ ‘ಮೂಲಿಕೆ-ಮಾಲಿಕೆ’ ಚಿತ್ರ ಮಾಹಿತಿ – ಸುಮಾರು 250 ಲೇಖನಗಳನ್ನು ಪ್ರಕಟಿಸಿದ್ದಾರೆ.

ಸಂಘಟನೆ & ಸಮಾಜ ಸೇವೆ: ಪತ್ರಕರ್ತರ ಹಕ್ಕುಗಳ ರಕ್ಷಣೆಗಾಗಿ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ನಿರಂತರವಾಗಿ ಶ್ರಮಿಸಿರುವ ಇವರ ಅತ್ಯಮೂಲ್ಯ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಈಗಾಗಲೇ ವಿವಿಧ ಪ್ರಶಸ್ತಿ-ಸನ್ಮಾನ ನೀಡಿ ಗೌರವಿಸಿವೆ.

ಸೇವೆಗಳು ಮತ್ತು ಹುದ್ದೆಗಳ ವಿವರ:

ವರದಿಗಾರ: 33 ವರ್ಷಗಳ ಕಾಲ ‘ಉದಯವಾಣಿ’ ದಿನಪತ್ರಿಕೆಯ ವರದಿಗಾರ.

ಕಾರ್ಯದರ್ಶಿ: ವಿಠಲ ವಿದ್ಯಾಸಂಸ್ಥೆ, ವಿಟ್ಲ – ಇದರ ಕಾರ್ಯದರ್ಶಿಯಾಗಿ ಕಳೆದ 15 ವರ್ಷಗಳಿಂದ ಸೇವೆ.

ನಿರ್ದೇಶಕ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ನಿರ್ದೇಶಕ (14 ವರ್ಷಗಳಿಂದ).

ಉಪಾಧ್ಯಕ್ಷ: ವಿಟ್ಲ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ.

ಆಡಳಿತ ಸಮಿತಿ ಸದಸ್ಯ: ವಿಠಲ ಸುಪ್ರಜೀತ್ ಐ.ಟಿ.ಐ. ಆಡಳಿತ ಸಮಿತಿಯ ಸದಸ್ಯ.

ಜಿರ್ಣೋದ್ಧಾರ ಸಮಿತಿ ಕಾರ್ಯದರ್ಶಿ: ವಿಟ್ಲ ಸೀಮೆ ದೇಗುಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ.

ಸ್ಥಾಪಕ ಅಧ್ಯಕ್ಷ: ವಿಟ್ಲ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ.

ಇವರ ಸರಳ ವ್ಯಕ್ತಿತ್ವ, ವೃತ್ತಿನಿಷ್ಠೆ ಹಾಗೂ ಮಾನವೀಯ ಮೌಲ್ಯಗಳನ್ನು ಗೌರವಿಸಿ ನಾಳೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ವತಿಯಿಂದ ‘ಗೌರವ ಸನ್ಮಾನ ಪತ್ರ’ ನೀಡಿ ಶ್ರದ್ಧಾಪೂರ್ವಕವಾಗಿ ಗೌರವಿಸಲಾಗುತ್ತಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಮಂಕುಡೆ-ಕುಡ್ತಮುಗೇರು: ಸಾರ್ವಜನಿಕ ಶ್ರೀ ಗಣೇಶೋತ್ಸವದ 50ನೇ ವರ್ಷದ ‘ಸುವರ್ಣ ಮಹೋತ್ಸವ’ ಹಾಗೂ ಸುವರ್ಣ ಮಂಟಪ ಲೋಕಾರ್ಪಣೆ

Published

on

ಮಂಕುಡೆ (ಬಂಟ್ವಾಳ): ಮಂಕುಡೆ-ಕುಡ್ತಮುಗೇರು ಪರಿಸರದಲ್ಲಿ 1977ರಲ್ಲಿ ಆರಂಭಗೊಂಡ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಈ ಬಾರಿ 50ನೇ ವರ್ಷದ ‘ಸುವರ್ಣ ಮಹೋತ್ಸವ’ದ ಸಂಭ್ರಮದಲ್ಲಿದ್ದು, ಈ ಸವಿನೆನಪಿನ ಸುಂದರ ‘ಮುಖ ಮಂಟಪ’ದ ಲೋಕಾರ್ಪಣೆ ಹಾಗೂ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 14-09-2026 ರಿಂದ 18-09-2026ರವರೆಗೆ ಅತ್ಯಂತ ವಿಜೃಂಭಣೆಯಿಂದ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದ ಕಲಾ ಮಂಟಪದಲ್ಲಿ ಜರುಗಲಿವೆ.

ದಿನನಿತ್ಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:

  • 13-09-2026 (ಆದಿತ್ಯವಾರ):
    • ಅಪರಾಹ್ನ 3.30ಕ್ಕೆ: ವಿಟ್ಲ ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ಕುಡ್ತಮುಗೇರಿನಿಂದ ಬೃಹತ್ ಹಸಿರುವಾಣಿ ಮೆರವಣಿಗೆ ಚಾಲನೆಗೊಳ್ಳಲಿದೆ.
  • 14-09-2026 (ಸೋಮವಾರ):
    • ಪೂರ್ವಾಹ್ನ 8.00ಕ್ಕೆ: ಶ್ರೀ ಗಣಪತಿ ಹವನ.
    • ಪೂರ್ವಾಹ್ನ 9.00ಕ್ಕೆ: ಶ್ರೀ ಗಣೇಶ ಪ್ರತಿಷ್ಠೆ.
    • ಪೂರ್ವಾಹ್ನ 9.30 ರಿಂದ: ಭಜನಾ ಕಾರ್ಯಕ್ರಮಗಳು (ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಮಂಕುಡೆ-ಕುಡ್ತಮುಗೇರು ಹಾಗೂ ಶ್ರೀ ಮಹಮ್ಮಾಯಿ ಭಜನಾ ಮಂಡಳಿ, ನಾಗವನ).
    • ಮಧ್ಯಾಹ್ನ 12.30ಕ್ಕೆ: ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ.
    • ಸಂಜೆ 7.00ಕ್ಕೆ: ಧಾರ್ಮಿಕ ಸಭಾ ಕಾರ್ಯಕ್ರಮ – ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರಿಂದ ಆಶೀರ್ವಚನ.
    • ರಾತ್ರಿ 8.30ಕ್ಕೆ: ಶಿವ ಗಣೇಶ ಸಂಗೀತ ನೃತ್ಯ ವಿದ್ಯಾಲಯ ಕಾಡುಮಠ ಹಾಗೂ ಶಿವಮ್ ನೃತ್ಯ ಕಲಾ ಕೇಂದ್ರ ಮಂಜೇಶ್ವರ ಇವರಿಂದ “ನಾದ ನೃತ್ಯ ನಮನ” ಸಾಂಸ್ಕೃತಿಕ ಕಾರ್ಯಕ್ರಮ.
  • 15-09-2026 (ಮಂಗಳವಾರ):
    • ದಿನಪೂರ್ತಿ: ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ.
    • ಮಧ್ಯಾಹ್ನ 12.30 ಹಾಗೂ ಸಂಜೆ 6.30ಕ್ಕೆ: ಮಹಾಪೂಜೆ ಮತ್ತು ಅನ್ನಸಂತರ್ಪಣೆ.
    • ರಾತ್ರಿ 7.00ಕ್ಕೆ: ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕು| ಧ್ರೇಿಯಾ ಮಂಕುಡೆ-ನೆಡ್ಯಾಳು ಅವರಿಂದ ಹರಿಕಥೆ.
    • ರಾತ್ರಿ 8.30ಕ್ಕೆ: ಗಯಾಪದ ಕಲಾವಿದಿರ್ ಉಬಾರ್ ಅಭಿನಯಿಸುವ ತುಳು ಸಾಮಾಜಿಕ ಹಾಸ್ಯಮಯ ನಾಟಕ “ನಾಗ್ಮೋಣಿಕ್ಯ” ಪ್ರದರ್ಶನ.
  • 16-09-2026 (ಬುಧವಾರ):
    • ಪೂರ್ವಾಹ್ನ 6.00ರಿಂದ: ವೇದಮೂರ್ತಿ ಶ್ರೀ ಭಾರ್ಗವ ಉಡುಪ ಅವರ ನೇತೃತ್ವದಲ್ಲಿ 108 ಕಾಯಿಗಳ ಗಣಪತಿ ಹವನ.
    • ಪೂರ್ವಾಹ್ನ 11.00ಕ್ಕೆ: ಸುವರ್ಣ ಮಹೋತ್ಸವದ ಮುಖ ಮಂಟಪ ಲೋಕಾರ್ಪಣಾ ಸಮಾರಂಭ.
    • ಆಶೀರ್ವಚನ: ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು (ಶ್ರೀ ಕ್ಷೇತ್ರ ಒಡಿಯೂರು).
    • ಮುಖ್ಯ ಅತಿಥಿಗಳು: ದಕ್ಷಿಣ ಕನ್ನಡ ಲೋಕಸಭಾ ಸಂಸದರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಶಾಸಕರಾದ ಶ್ರೀ ಮಂಜುನಾಥ ಭಂಡಾರಿ, ಶ್ರೀ ಕಿಶೋರ್ ಕುಮಾರ್ ಪುತ್ತೂರು ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
    • ರಾತ್ರಿ 7.30ಕ್ಕೆ: ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ “ಲಕ್ಷ್ಮಿ ಸ್ವಯಂವರ – ಶ್ರೀನಿವಾಸ ಕಲ್ಯಾಣ”.
  • 17-09-2026 (ಗುರುವಾರ):
    • ಪೂರ್ವಾಹ್ನ: ಭಜನಾ ಸಂಕೀರ್ತನೆ ಹಾಗೂ ಮಹಾಪೂಜೆ.
    • ರಾತ್ರಿ 7.00ರಿಂದ: ವೇದಮೂರ್ತಿ ಭಾರ್ಗವ ಉಡುಪ ಅವರ ನೇತೃತ್ವದಲ್ಲಿ ಮೂಡಪ್ಪ ಸೇವೆಯ ಧಾರ್ಮಿಕ ವಿಧಿವಿಧಾನಗಳು ಹಾಗೂ ಮಹಾಪೂಜೆ.
    • ರಾತ್ರಿ 8.30ರಿಂದ: ಕಲಾವಿದೆರ್ ಉಡಲ್ ಜೋಡುಕಲ್ಲು ಅಭಿನಯಿಸುವ ತುಳು ಹಾಸ್ಯಮಯ ನಾಟಕ “ಡೆನ್ನ ಡೆನ್ನಾನ” ಪ್ರದರ್ಶನ.
  • 18-09-2026 (ಶುಕ್ರವಾರ – ಸಮಾರೋಪ ಸಮಾರಂಭ):
    • ಪೂರ್ವಾಹ್ನ 8.00ಕ್ಕೆ: ಮೂಡಪ್ಪ ಸೇವೆಯ ಪ್ರಸಾದ ವಿತರಣೆ.
    • ಪೂರ್ವಾಹ್ನ 10.00ಕ್ಕೆ: ಮಂಕುಡೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
    • ಪೂರ್ವಾಹ್ನ 11.30ಕ್ಕೆ: ಸಮಾರೋಪ ಸಮಾರಂಭ – ಒಡಿಯೂರು ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಶ್ರೀ ಮಾತಾನಂದಮಯಿ ಅವರ ಸಾನ್ನಿಧ್ಯದಲ್ಲಿ ನೆರವೇರಲಿದೆ.
    • ಅಪರಾಹ್ನ 3.00ರಿಂದ: ಶ್ರೀ ದೇವರ ದಿಗ್ವಿಜಯ ಮೆರವಣಿಗೆ ಹಾಗೂ ಜಲಸ್ತಂಭನ. ಮೆರವಣಿಗೆಯು ಮಂಕುಡೆ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದಿಂದ ಹೊರಟು ಕಾಡುಮಠ, ಸಾಲೆತ್ತೂರಿನವರೆಗೆ ಸಾಗಲಿದೆ.

ಈ ಸಮಸ್ತ ಸುಖ-ಸಂತೋಷದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸುವರ್ಣ ಮಹೋತ್ಸವ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿ, ಹಳೆ ವಿದ್ಯಾರ್ಥಿ ಯುವಕ ಮಂಡಲ ಹಾಗೂ ಭಜನಾ ಮಂದಿರದ ಪದಾಧಿಕಾರಿಗಳು ವಿನಂತಿಸಿದ್ದಾರೆ.

Continue Reading

celebration

ವಿಟ್ಲ: ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಉದ್ಘಾಟನೆ

Published

on

ವಿಟ್ಲ: ಬೆಳೆಯುತ್ತಿರುವ ವಿಟ್ಲಕ್ಕೆ ಇಂತಹ ಸಂಸ್ಥೆಯ ಅಗತ್ಯ ಅತೀ ಇತ್ತು. ಸಂಸ್ಥೆ ಬೆಳೆಯಲು ಶ್ರಮ ಹಾಗೂ ಪ್ರಾಮಾಣಿಕತೆ ಅಗತ್ಯ. ಪ್ರಾಮಾಣಿಕತೆಯಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ. ಈಗಾಗಲೇ ನೇರಳಕಟ್ಟೆಯಲ್ಲಿ ಸಂಸ್ಥೆ ಸ್ಥಾಪಿಸಿ ಯಶಸ್ವಿಯಾಗಿರುವ ಭಾರತ್ ಗ್ರೂಪ್ ಸಂಸ್ಥೆ, ವಿಟ್ಲದಲ್ಲೂ ಅದೇ ರೀತಿ ಯಶಸ್ಸು ಕಾಣಲಿ ಎಂದು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟು ಶುಭಹಾರೈಸಿದರು.

ಅವರು ನೇರಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ‘ಭಾರತ್ ವಹಿಕಲ್ ಬಜಾರ್’ನ ಸಹಸಂಸ್ಥೆಯಾಗಿ ವಿಟ್ಲ ಮೇಗಿನಪೇಟೆಯಲ್ಲಿ ನೂತನವಾಗಿ ಆರಂಭಗೊಂಡ ‘ಭಾರತ್ ಡಿಜಿಟಲ್ ಸೇವಾ ಕೇಂದ್ರ’ ಹಾಗೂ ‘ವಾಯು ಮಾಲಿನ್ಯ ತಪಾಸಣಾ ಕೇಂದ್ರ’ವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಡಾಜೆ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಜ್ ದಾರಿಮಿ, “ಇಂಡಿಯಾವನ್ನು ಡಿಜಿಟಲ್ ಮಾಡಲು ಸರಕಾರ ಪ್ರಯತ್ನಿಸುತ್ತಿದೆ. ಡಿಜಿಟಲ್ ಇಂಡಿಯಾ ದೇಶದ ಬೆಳವಣಿಗೆಯ ಪ್ರಮುಖ ಭಾಗವಾಗಿದ್ದು, ಈ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳು ಅತ್ಯಗತ್ಯ. ಸೇವೆ ಎಂದರೆ ಅದು ವಿಶ್ವಾಸದಿಂದ ಕೂಡಿರಬೇಕು. ಒಮ್ಮೆ ಬಂದ ಗ್ರಾಹಕರು ಮತ್ತೊಮ್ಮೆ ಬರುವಂತೆ ಉತ್ತಮ ಸೇವೆ ನೀಡಬೇಕು. ಜಾತಿ-ಮತ ಮರೆತು ಸೇವೆ ನೀಡುವ ಕೆಲಸ ನಮ್ಮದಾಗಬೇಕು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಗ್ರೂಪ್‌ನ ಪಾಲುದಾರರಾದ ಹರೀಶ್ ಎಂ. ಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಟ್ಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ, ಹೊರೈಝನ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಅಝೀಝ್ ಸನ, ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಆರಿಸ್ ಭಾಖವಿ, ಸಾಮಾಜಿಕ ಮುಖಂಡ ಶಾಕೀರ್ ಅಳಕೆಮಜಲು, ಐಕ್ಯ ವೇದಿಕೆ ಅಧ್ಯಕ್ಷ ಹನೀಫ್ ಬಗ್ಗುಮೂಲೆ, ವೈ ಫ್ರೆಂಡ್ಸ್‌ನ ಸಿದ್ದಿಕ್ ಸೂರ್ಯ ಹಾಗೂ ಪಂತಡ್ಕ ಮದರಸದ ಅಧ್ಯಾಪಕರಾದ ಜಾಫರ್ ಸಾದಿಕ್ ಪೈಝಿ ಸೇರಿದಂತೆ ಹಲವು ಪ್ರಮುಖರು ಆಗಮಿಸಿ ಶುಭಹಾರೈಸಿದರು.

ಪತ್ರಕರ್ತ ಲತೀಪ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಭಾರತ್ ಧನ್ಯವಾದ ಸಮರ್ಪಿಸಿದರು.

ಎಲ್ಲವೂ ಒಂದೇ ಸೂರಿನಲ್ಲಿ: ಈ ನೂತನ ಸಂಸ್ಥೆಯಲ್ಲಿ ಎಲ್ಲಾ ವಿಧದ ಆನ್‌ಲೈನ್ ಸೇವೆಗಳು, ವಾಹನಗಳ ವಾಯುಮಾಲಿನ್ಯ ತಪಾಸಣೆ (Pollution Test), ವಾಹನ ಇನ್ಶೂರೆನ್ಸ್ ಹಾಗೂ ಬಸ್, ವಿಮಾನ ಮತ್ತು ರೈಲು ಟಿಕೆಟ್‌ಗಳ ಬುಕಿಂಗ್ ಸೇವೆಗಳು ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ 8951271449, 6360943710 ಸಂಪರ್ಕಿಸಬಹುದಾಗಿದೆ.

ವಿಶೇಷ ಕೊಡುಗೆ – ಉಚಿತ ಟೀ-ಶರ್ಟ್: ಸಂಸ್ಥೆಯ ಶುಭಾರಂಭದ ಪ್ರಯುಕ್ತ ಸೆಪ್ಟೆಂಬರ್ 3ರಿಂದ ಸೆಪ್ಟೆಂಬರ್ 5ರ ವರೆಗೆ ಸಂಸ್ಥೆಯಲ್ಲಿ ವಾಹನಗಳ ಇನ್ಶೂರೆನ್ಸ್ ಅಥವಾ ವಾಯುಮಾಲಿನ್ಯ ತಪಾಸಣೆ (PUC) ಮಾಡಿಸುವ ಗ್ರಾಹಕರಿಗೆ ಉಚಿತವಾಗಿ ಟೀ-ಶರ್ಟ್ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Continue Reading

celebration

ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ

Published

on

ವಿಟ್ಲ: “ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಉನ್ನತ ತತ್ವದೊಂದಿಗೆ ಹಿಂದುಳಿದ ಹಾಗೂ ಶೋಷಿತ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಮಾನವತಾವಾದಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸದೆ, ಅವರ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಮತ್ತು ಸಾರ್ಥಕತೆ ಸಿಗುತ್ತದೆ” ಎಂದು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಡಾ. ಕೆ. ಬಿ. ರಾಜಾರಾಂ ಹೇಳಿದರು.

ಸೋಮವಾರ (ಆಗಸ್ಟ್ 31) ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

“ಸಮಾಜ ಪರಿವರ್ತನೆಯ ಹರಿಕಾರರಾಗಿದ್ದ ನಾರಾಯಣ ಗುರುಗಳು ಎಂದಿಗೂ ಸಂಘರ್ಷದ ಹಾದಿ ತುಳಿದವರಲ್ಲ. ಅವರ ಆದರ್ಶಗಳ ಅಡಿಯಲ್ಲಿ ಸತ್‌ಚಿಂತನೆ ನಡೆಸುತ್ತಾ, ಮೌಲ್ಯಾಧಾರಿತ ಶಿಕ್ಷಣವನ್ನು ಪಡೆದು ಮಾನವೀಯ ಮೌಲ್ಯಗಳನ್ನು ರಕ್ಷಿಸುವ ಪ್ರತಿಯೊಂದು ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಿದೆ” ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಎಂ. ಎಸ್. ಮಹಮ್ಮದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ ವಿಟ್ಲ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ ಗುರ್ಜಿನಡ್ಕ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ರೈ ಪೆರ್ನೆ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುಲ್ ರಹಿಮಾನ್, ಹಸೈನಾರ್ ನೆಲ್ಲಿಗುಡ್ಡೆ, ಪದ್ಮಿನಿ, ಸುನಿತಾ ಹಾಗೂ ಹಾನೆಸ್ಟ್ ಇಕ್ಬಾಲ್ ಉಪಸ್ಥಿತರಿದ್ದರು.

ಅಲ್ಲದೆ, ಮಾಣಿಲ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಪ್ರಮುಖರಾದ ವಿ. ಕೆ. ಹಂಸ, ನಾಸೀರ್ ಕೋಲ್ಪೆ, ಅಬ್ಬು, ಎಲ್ಯಣ ಪೂಜಾರಿ, ರಾಮಣ್ಣ ಪಿಲಿಂಜ, ಚೇತನ್ ಕಂಬಳದಡ್ಡ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಯೋಜನೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ ಗುರ್ಜಿನಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Continue Reading

Trending

Copyright © 2025 Deevatige

error: Content is protected !!