Bantawala
ಸಂಪಾಜೆಯಲ್ಲಿ ಮಾವ ಮತ್ತು ಪತಿಯಿಂದ ದೌರ್ಜನ್ಯಕ್ಕೀಡಾದ ಪ್ರಕರಣ ಸುಳ್ಯ ಠಾಣೆಯಲ್ಲಿ ಮಾವ ಮತ್ತು ಪತಿಯ ಮೇಲೆ ಪ್ರಕರಣ ದಾಖಲು
ಸುಳ್ಯ: ತನ್ನ ಪತಿ ಮನೆಯಲ್ಲಿ ತನ್ನ ಮಾವ ಮತ್ತು ಪತಿಯಿಂದ ದೌರ್ಜನ್ಯಕ್ಕೀಡಾದ ಮಹಿಳೆ ಸಾಹಿತ್ಯ ರೈಯವರು ನೀಡಿದ ದೂರಿನಂತೆ ಸಂಪಾಜೆ ಕಲ್ಲುಗುಂಡಿಯಲ್ಲಿ ಸೊಸೆಯ ಮಾನಭಂಗಕ್ಕೆ ಯತ್ನಿಸಿದ ಮಾವ ಸಂಪಾಜೆ ಕಲ್ಲುಗುಂಡಿ ನಿವಾಸಿ ನಿತ್ಯಾನಂದ ರೈ ಮತ್ತು ತಂದೆಯ ಹೇಯ ಕೃತ್ಯವನ್ನು ಬೆಂಬಲಿಸಿದ ಮಗ ಯಶಸ್ವಿ ಎನ್. ರೈ ಮೇಲೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಹಿತ್ಯ ರೈಯವರು ಫೆ. 3ರಂದು ರಾತ್ರಿ ಪ್ರಕರಣದ ಬಗ್ಗೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ZERO FIR NO 01/2026 ಕಲಂ: 85, 74, 115(2), 117(2), 351(2) ಜೊತೆಗೆ 3(5)BNS ನಂತೆ ಪ್ರಕರಣ ದಾಖಲಿಸಿಕೊಂಡು, ಘಟಣಾ ಸ್ಥಳದ ಆಧಾರದಲ್ಲಿ ಸುಳ್ಯ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದರು.
ಪತಿ ಇಲ್ಲದ ಸಮಯಕ್ಕೆ ಬೆಡ್ ರೂಮ್‌ಗೆ ನುಗ್ಗಿ ಹಿಂದಿನಿಂದ ಗಟ್ಟಿಯಾಗಿ ತಬ್ಬಿಕೊಂಡು ಮಾನಭಂಗ ನಡೆಸಲು ಮಂಚದ ಮೇಲೆ ದೂಡಿ ವಿರೋಧಿಸಿದ್ದಕ್ಕೆ ಮುಖದ ಮೇಲೆ ಪರಚಿ ಮೂಗು ಕಚ್ಚಿ, ಗಂಟಲಿನಲ್ಲಿ ಅದುಮಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ರಕ್ತಸಿಕ್ತವಾದ ಪತ್ನಿಯು ತನ್ನ ಸಂಕಷ್ಟವನ್ನು ಹೇಳಿಕೊಂಡಾಗ ತಂದೆಗೆ ಸಾಥ್ ನೀಡಿದ ಪತಿಯ ಕ್ರೌರ್ಯದಿಂದ ಬೇಸತ್ತ ಸಾಹಿತ್ಯರವರು ತನ್ನ ಪತಿಯ ತಂದೆಯೇ ಮಾಡಿದ ಘೋರ ಕೃತ್ಯವನ್ನು ತನ್ನ ಪೋಷಕರಿಗೆ ಹೇಳಿಕೊಂಡಿದ್ದರು. ಗಂಭೀರ ಹಲ್ಲೆಗೊಳಗಾಗಿದ್ದ ಪತ್ನಿಯನ್ನು ತನ್ನ ಪತಿ ಆಸ್ಪತ್ರೆಗೆ ಸೇರಿಸಲು ನಿರಾಕರಿಸಿದ ಬೆನ್ನಲ್ಲೇ ರಾತ್ರಿ 11.30ಕ್ಕೆ ಕಾರಿನಲ್ಲಿ ಬಂದ ತಂದೆ ತಾಯಿ ರಕ್ತಸಿಕ್ತರಾಗಿ ಬಿದ್ದಿದ್ದ ಸಾಹಿತ್ಯರನ್ನು ತಕ್ಷಣ ಕರೆದುಕೊಂಡು ಹೋಗಿ ಸಂಪಾಜೆ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಂಟ್ವಾಳದ ಮಂಚಿಗೆ ಹೋಗುವ ದಾರಿ ಮದ್ಯೆ ಮನೆ ಸಮೀಪ ತಲುಪುತ್ತಲೇ ಉಸಿರಾಟಕ್ಕೆ ತೊಂದರೆಯಾಗಿ ತಕ್ಷಣ ನೇರವಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪೊಲೀಸರಿಗೆ ದೂರು ನೀಡಿದ್ದರು.

ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳು ಸಾಹಿತ್ಯ ಅವರು ವಿಡಿಯೋ ಕಾಲ್ ಮಾಡಿ ಜಿಲ್ಲಾ ಎಸ್. ಪಿ. ಯವರಿಗೆ ನಡೆದ ಘಟನೆಗಳ ಬಗ್ಗೆ ಸವಿವರವಾಗಿ ತಿಳಿಸಿ ತನಗೆ ಮತ್ತು ಮಗುವಿಗೆ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ವಿನಂತಿಸಿದ್ದರು. ಅವರ ನಿರ್ದೇಶನದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ZERO FIR NO 01/2026 ಕಲಂ:85, 74, 115(2), 117(2), 351(2) ಜೊತೆಗೆ 3(5)BNS ನಂತೆ ಪ್ರಕರಣ ದಾಖಲಿಸಿಕೊಂಡು, ಘಟಣಾ ಸ್ಥಳದ ಆಧಾರದಲ್ಲಿ ಸುಳ್ಯ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದರು.
ಈ ಸೂಚನೆಯ ಪ್ರಕಾರ ತಕ್ಷಣ ಕಾರ್ಯ ಪ್ರವೃತ್ತರಾದ ಸುಳ್ಯ ಪೊಲೀಸರು ರಾತ್ರೋ ರಾತ್ರಿಯೇ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳು ಸಾಹಿತ್ಯ ರೈಯವರ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಪ್ರಕರಣದ ಪ್ರಾಥಮಿಕ ತನಿಖೆಯನ್ನು ನಡೆಸಿದ ಸುಳ್ಯ ಪೊಲೀಸರು ಒಂದನೇ ಆರೋಪಿಯಾಗಿ ಮಾವ ನಿತ್ಯಾನಂದ ರೈ ಮತ್ತು ಎರಡನೇ ಆರೋಪಿಯಾಗಿ ಪತಿ ಯಶಸ್ವಿ ಎನ್ ರೈ ವಿರುದ್ದ Section 74 : ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ ಮಾಡಿ ಆಕೆಯ ಮಾನಭಂಗ ಮಾಡುವ ಉದ್ದೇಶ ಹೊಂದಿರುವುದು. Section 85 : ವಿವಾಹಿತ ಮಹಿಳೆಯ ಮೇಲೆ ಆಕೆಯ ಗಂಡ ಅಥವಾ ಗಂಡನ ಸಂಬಂಧಿಕರು ದೈಹಿಕ ಅಥವಾ ಮಾನಸಿಕ ಕ್ರೌರ್ಯ ಎಸಗುವುದು. Section 115(2) : ಉದ್ದೇಶಪೂರ್ವಕವಾಗಿ ಮತ್ತೊಬ್ಬರಿಗೆ ದೈಹಿಕ ನೋವು ಅಥವಾ ಗಾಯವನ್ನು ಉಂಟುಮಾಡುವುದು. Section 117(2) : ಮಾರಕಾಸ್ತ್ರಗಳಿಂದ ಅಥವಾ ಅಪಾಯಕಾರಿ ರೀತಿಯಲ್ಲಿ ಮತ್ತೊಬ್ಬರಿಗೆ ತೀವ್ರ ಸ್ವರೂಪದ ಗಾಯ (Grievous hurt) ಮಾಡುವುದು. Section 351(2) : (Criminal Intimidation): ಒಬ್ಬ ವ್ಯಕ್ತಿಗೆ ಅಥವಾ ಅವರ ಆಸ್ತಿಗೆ ಹಾನಿ ಮಾಡುವ ಉದ್ದೇಶದಿಂದ ಕ್ರಿಮಿನಲ್ ಬೆದರಿಕೆ ಹಾಕುವುದು. Section 3(5) : ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಸಮಾನ ಉದ್ದೇಶದಿಂದ (Common Intention) ಅಪರಾಧ ಎಸಗಿದಾಗ ಪ್ರತಿಯೊಬ್ಬರೂ ಸಮಾನವಾಗಿ ಹೊಣೆಗಾರರಾಗುವ ಸೆಕ್ಷನ್ ಹಾಕಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ
Bantawala
ವಿಟ್ಲದಲ್ಲಿ ಬಡಕಾರ್ಮಿಕೆ ರಾಜೇಶ್ವರಿಯವರ ಮನೆ ಬೆಂಕಿಗಾಹುತಿ
ವಿಟ್ಲ ಸಮೀಪದ ವೀರಕಂಬ ಗ್ರಾಮದ ಗಣೇಶ್ ಕೋಡಿ ನಿವಾಸಿ ಕಾರ್ಮಿಕೆಯಾಗಿರುವ ರಾಜೇಶ್ವರಿ ಎಂಬವರ ಮನೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಹೊತ್ತಿ ಉರಿದ ಘಟನೆಯೊಂದು ಪೆ.10ರಂದು ಸಂಭವಿಸಿದ್ದು, ಬಡ ನಿರ್ಗತಿಕ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ಮನೆಯೊಡತಿ ರಾಜೇಶ್ವರಿ ಅವರು ಎಂದಿನಂತೆ ಬೆಳಗ್ಗೆ ಬೀಗ ಹಾಕಿ ಅಡಿಕೆ ಗಾರ್ಬನ್ ಕೆಲಸಕ್ಕೆ ಹೋಗಿದ್ದರೆ ಮಕ್ಕಳಿಬ್ಬರು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಮನೆಯನ್ನು ಭಸ್ಮ ಮಾಡಿದೆ.

ಮನೆಯಿಂದ ವಿಪರೀತ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಜಮಾಯಿಸಿ ಬೆಂಕಿಯನ್ನು ನಂದಿಸುವಷ್ಟರಲ್ಲಿಯೇ ಮನೆಯೊಳಗಿದ್ದ ಮಕ್ಕಳ ಬಟ್ಟೆಬರೆ ಶಾಲಾ ಪುಸ್ತಕಗಳು, ಮನೆಯ ದಾಖಲೆಪತ್ರಗಳು ಸೇರಿದಂತೆ ಮನೆಯೊಳಗಿದ್ದ ವಸ್ತುಗಳು ಕರಟಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಡ ಕಾರ್ಮಿಕೆ ಗಾರ್ಬಲ್ ಕೆಲಸಕ್ಕೆ ಹೋಗಿ ದುಡಿದು ಜೀವನ ಸಾಗಿಸುತ್ತಿದ್ದು, ಮನೆ ಬೆಂಕಿಗಾಹುತಿಯಾದ ಘಟನೆಯಿಂದ ತೀವ್ರ ಅಸ್ವಸ್ಥರಾಗಿದ್ದು, ಅವರ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
accident
ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ದುರ್ಮರಣ..
ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ನಿಧನರಾಗಿದ್ದಾರೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗದಲ್ಲಿದ್ದ ನಿಶಿತ್ ಊರಿಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು ತಡರಾತ್ರಿ 2-30ರ ಸುಮಾರಿಗೆ ಚೆನ್ನರಾಯಪಟ್ಟಣ ಹೊರವಲಯದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ನಿಶಿತ್ ನಾಯ್ಕ್ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.

ಪುಣಚ ಗ್ರಾಮದ ಬುಡಲೆ ನಿವಾಸಿ, ಮಾಜಿ ಸೈನಿಕರಾಗಿರುವ ಕುಂಞಣ್ಣ ನಾಯ್ಕ್ ಪುತ್ರ ನಿಧನದ ಸುದ್ದಿ ಗ್ರಾಮಸ್ಥರ ಅತೀವ ದು:ಖಕ್ಕೆ ಕಾರಣವಾಗಿದೆ. ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಓರ್ವ ಸಹೋದರಿ ನಿಶಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೀಗ ಹಾಸನದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಪ್ರಾರ್ಥಿವ ಶರೀರ ಪುಣಚ ಗ್ರಾಮ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
Bantawala
ಕುಟುಂಬದ ಯಜಮಾನರಾಗಿ ಪೂಂಜರಬೆಟ್ಟು ಕೇಶವ ಭಂಡಾರಿ; ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್ ರಚನಾ ಸಭೆ
ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಕುದ್ರಿಯ ತರವಾಡಿನ ನೂತನ ಯಜಮಾನರಾಗಿ ಹಿರಿಯ ದೈವ ಚಾಕಿರಿಯವರಾದ ಪೂಂಜರಬೆಟ್ಟು ಕೇಶವ ಭಂಡಾರಿ ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳು ಮತ್ತು ಕುಟುಂಬಿಕರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್ ರಚನೆಯ ಸಭೆ ನಡೆಯಿತು.
ಹಿಂದಿನ ಟ್ರಸ್ಟಿಗಳ ಮರಣ, ರಾಜೀನಾಮೆ, ಹಾಗೂ ವಜಾಗೊಂಡ ಸದಸ್ಯರ ಸ್ಥಾನಕ್ಕೆ ನೂತನ ಟ್ರಸ್ಟಿಗಳನ್ನು ಆಯ್ಕೆ ಮಾಡಲಾಯಿತು. ಕುದ್ರಿಯ ಗುತ್ತು ಟ್ರಸ್ಟಿನ ನೂತನ ಗೌರವಾಧ್ಯಕ್ಷರಾಗಿ ವಿಠಲ ಮೋನಪ್ಪ ಶೆಟ್ಟಿ ನಾಂದೇಡ್, ಅಧ್ಯಕ್ಷರಾಗಿ ಚಂದ್ರಹಾಸ ಎಂ ಶೆಟ್ಟಿ ಅಳಕೆಮಜಲು, ಉಪಾಧ್ಯಕ್ಷರಾಗಿ ರೋಹಿಣಿ ರೈ ನೇರಳಕಟ್ಟೆ, ಹಾಗೂ ಚಂದ್ರಹಾಸ ರೈ ಮುಲ್ಕಾಜೆ ಮಾ ಡ, ಕಾರ್ಯದರ್ಶಿಯಾಗಿ ಗಣೇಶ್ ರೈ, ಕೋಶಾಧಿಕಾರಿಯಾಗಿ ಧನಂಜಯ ಶೆಟ್ಟಿ ಮುತ್ತೂರು, ಇವರನ್ನು ಟ್ರಸ್ಟಿಗಳ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರನ್ನು ಕುಟುಂಬಿಕರ ಮತ್ತು ಟ್ರಸ್ಟಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
-
crime6 days agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala1 month agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada2 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala1 month agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
crime3 weeks agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
-
Bantawala2 months agoಕೇಪು ಅಕ್ರಮ ಕೋಳಿ ಅಂಕಕ್ಕೆ ಧಾಳಿ; 16ಜನ, 22ಹುಂಜಗಳ ಸಹಿತ ಬಾಳು ಕತ್ತಿ ವಶಕ್ಕೆ ಪಡೆದ ವಿಟ್ಲ ಪೊಲೀಸರು.. ಪುತ್ತೂರು ಶಾಸಕರ ಸಹಿತ ಜಾಗ ನೀಡಿದ ಮಾಲಿಕನ ಮೇಲೂ ಬಿತ್ತು ಕೇಸು.
-
DEATH2 weeks agoವಿಟ್ಲದ ಜನಪ್ರಿಯ ಚಾಲಕ ಕುಮಾರಣ್ಣ ಹೃದಯಾಘಾತಕ್ಕೆ ಬಲಿ
-
Bantawala4 weeks agoನಿನ್ನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ತಲೆಕ್ಕಿ ಮಹಮ್ಮದ್ ಹಾಜಿ.. ; ಇಂದು ಸಂಜೆ ನೇತ್ರಾವತಿ ನದಿಯಲ್ಲಿ ಪತ್ತೆ.. ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ..

