Connect with us

Entertainment

ಮಾಯವಾದ ಬಿಸಿಲಿಗಿಟ್ಟ ಸೋಫಾ ಸೆಟ್ : ಸಿಸಿಟಿವಿ ಪರಿಶೀಲಿಸಿದಾಗ ಏನಾಯ್ತು ನೋಡಿ !

Published

on

ಮನೆಯಲ್ಲಿ ಹಾಸಿಗೆ ತಲೆದಿಂಬು ಸೋಫಾಗಳನ್ನು ಬಿಸಿಲಿಗಿಡುವುದು ಸರ್ವೇ ಸಾಮಾನ್ಯ ಏಕೆಂದರೆ ಫಂಗಸ್, ತಿಗಣೆಗಳ ಕಾಟ ಜಿರಲೆ ಕಾಟ ತಪ್ಪಿಸಲು ಮತ್ತು ಬೆಚ್ಚಗಿರಲೆಂದು ಬಹುತೇಕ ಮನೆಯವರು ಬಟ್ಟೆ-ಬರೆ ಕಂಬಳಿಗಳನ್ನು ಹೊರಗಿಟ್ಟು ಬಿಸಿಲು ಕಾಯಿಸುವುದು ಎಲ್ಲರ ಅಭ್ಯಾಸ. ಆದರೆ ಇದೇ ಅಭ್ಯಾಸ ಪೇಟೆ ಬದಿಯ ಮನೆಯಲ್ಲಿದ್ದ ಮಹಿಳೆಯೊಬ್ಬರಿಗೆ ದೊಡ್ಡ ಆಘಾತವನ್ನು ತಂದುಕೊಟ್ಟಿದೆ. ತನ್ನ ಬೆಲೆ ಬಾಳುವ ಸೋಫಾವನ್ನು ಬಿಸಿಲಿಗಿಟ್ಟು ಒಳಗೆ ಹೋದವಳು ಹಿಂದಿರುಗಿ ಬಂದಾಗ ಸೋಫಾವೇ ಇಲ್ಲದಾಗಿತ್ತು..

ನಗರದಲ್ಲಿ ವಿಶಾಲವಾದ ಅಂಗಳವಿಲ್ಲದ ಮನೆಯೊಂದರಲ್ಲಿ ಗೃಹಿಣಿಯೊಬ್ಬರು ತಮ್ಮ ಸೋಫಾವನ್ನು ಸ್ವಚ್ಛಗೊಳಿಸಿ, ಬಿಸಿಲು ತಾಗಲಿ ಎಂದು ಮನೆಯ ಮುಂದಿನ ರಸ್ತೆಯ ಬದಿಯಲ್ಲಿಯೇ ಇಟ್ಟರು. ಆದರೆ ಅವರು ಒಳಗೆ ಹೋಗಿ ಕೆಲವೇ ನಿಮಿಷಗಳಲ್ಲಿ ಹೊರಗೆ ಬಂದಾಗ ಸೋಫಾ ಇರಲಿಲ್ಲ. ಇಷ್ಟು ದೊಡ್ಡ ಸೋಫಾವನ್ನು ಯಾವ ಕಳ್ಳರು ಹೊತ್ತೊಯ್ದರು ಎಂದು ಗಾಬರಿಗೊಂಡು ಆಕೆ ಮನೆಯ ಸಿಸಿಟಿವಿ ಫುಟೇಜ್ ಪರಿಶೀಲಿಸಿದಾಗ ತಾನು ಯೋಚಿಸಲಾರದ ಘಟನೆಯೊಂದು ಕ್ಷಣಮಾತ್ರದಲ್ಲಿ ನಡೆದುಹೋಗಿ ಸೋಫಾ ಇನ್ನೆಂದೂ ಬಾರದ ಲೋಕಕ್ಕೆ ಹೋಗಿ ಬಿಟ್ಟಿತ್ತು.

ಸಿಸಿಟಿವಿಯಲ್ಲಿ ಕಂಡಿದ್ದು ಈ ರೀತಿ ಇತ್ತು. ಪೌರಸಭೆಯ ಕಸ ತೆಗೆಯುವ ಲಾರಿ ಬಂದಿತು. ಕಾರ್ಮಿಕರು ರಸ್ತೆಯಲ್ಲಿ ಇಟ್ಟಿದ್ದ ಸೋಫಾವನ್ನು ಎಸೆಯಲು ಇಟ್ಟ ವಸ್ತು ಎಂದು ಭಾವಿಸಿ, ಸುಲಭವಾಗಿ ಲಾರಿಗೆ ತುಂಬಿಸಿ ಕೊಂಡೊಯ್ದರು. ಮಹಿಳೆ ಒಳಗೆ ಹೋಗುತ್ತಿದ್ದಂತೆಯೇ ಈ ಘಟನೆ ನಡೆದಿತ್ತು. ಯಾರೂ ದುರುದ್ದೇಶಪೂರ್ವಕವಾಗಿ ಮಾಡಿರಲಿಲ್ಲ ಕೇವಲ ತಪ್ಪು ತಿಳಿವಳಿಕೆಯಿಂದ ಆಗಿದ್ದ ಅನಾಹುತವೊಂದು ನಡೆದುಹೋಗಿತ್ತು.

ನಗರಗಳಲ್ಲಿ ಮನೆಯ ಮುಂದೆ ರಸ್ತೆಯಲ್ಲೇ ಕಸ, ಹಳೆಯ ವಸ್ತುಗಳನ್ನು ಇಡುವುದು ಸಾಮಾನ್ಯ. ಮುಂಜಾನೆ ಪೌರ ಕಾರ್ಮಿಕರು ಬಂದಾಗ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಸೋಫಾ ಸಹ ಅದೇ ರೀತಿ ಅವರಿಗೆ ರಿಜೆಕ್ಟೆಡ್ ಆಗಿ ಕಾಣಿಸಿತು. ಅವಸರವಸರವಾಗಿ ಬರುವ ಪೌರಕಾರ್ಮಿಕರು ಮಾರ್ಗದ ಬದಿಯಲ್ಲಿ ಇಟ್ಟಿದ್ದೆಲ್ಲಾ ಕಸದ ಪಟ್ಟಿಗೆ ಸೇರಿಸಿಕೊಂಡು ವಿಲೇವಾರಿ ಮಾಡುತ್ತಾರೆ.
ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಇನ್ನು ಮುಂದೆ ಸೋಫಾ ಹೊರಗಿಡುವ ಮೊದಲು ಬೋರ್ಡ್ ಹಾಕಬೇಕು, ‘ಇದು ಎಸೆಯಲು ಅಲ್ಲ’ ಅಂತ!” ಎಂದು ಜನರು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸೋಫಾವನ್ನು ಕದ್ದೊಯ್ಯಲು ಯಾವತ್ತೂ ಕಳ್ಳರಿಗೆ ಸಾಧ್ಯವಿರಲಿಲ್ಲ ಆದರೆ ಸಣ್ಣ ಅಜಾಗ್ರತೆಯಿಂದ ದೊಡ್ಡ ನಷ್ಟವನ್ನು ಅನುಭವಿಸಿದ್ದಾರೆ ಸೋಪಾದ ಮಾಲಕಿ

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಪೆರುವಾಯಿಯಲ್ಲಿ ವಿಜೃಂಭಣೆಯ 37ನೇ ವರ್ಷದ ಶ್ರೀ ಗಣೇಶೋತ್ಸವ: ಸಾಧಕರಿಗೆ ಸನ್ಮಾನ ಮತ್ತು ಧಾರ್ಮಿಕ ಕಾರ್ಯಕ್ರಮ ಸಂಪನ್ನ

Published

on

ಪೆರುವಾಯಿ: ಯುವ ಚೇತನ ಕ್ಲಬ್ (ರಿ) ಪೆರುವಾಯಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ಪೆರುವಾಯಿ ಇದರ ವತಿಯಿಂದ 37ನೇ ವರ್ಷದ “ಶ್ರೀ ಗಣೇಶೋತ್ಸವ”ವು ಸೆಪ್ಟೆಂಬರ್ 14 ಮತ್ತು 15 ರಂದು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಲ್ಲಿ ಅತ್ಯಂತ ವಿಜೃಂಭಣೆಯಿಂದ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಧಾರ್ಮಿಕ ಸಭೆ ಮತ್ತು ಗಣ್ಯಾತಿಗಣ್ಯರ ಉಪಸ್ಥಿತಿ

ಉತ್ಸವದ ಎರಡನೇ ದಿನವಾದ ಮಂಗಳವಾರದಂದು (ಸೆ. 15) ಧಾರ್ಮಿಕ ಸಭೆಯು ನಡೆಯಿತು. ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದಿವ್ಯ ಉಪಸ್ಥಿತಿಯನ್ನು ವಹಿಸಿ ಆಶೀರ್ವಚನ ನೀಡಿದರು.

ಸಭಾ ಅಧ್ಯಕ್ಷತೆಯನ್ನು ಸರಕಾರಿ ಪದವಿಪೂರ್ವ ಕಾಲೇಜು (K P S) ಕನ್ಯಾನದ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ರೈ ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಟ್ರಸ್ಟಿ ಶ್ರೀಮತಿ ರೇವತಿ ಪೆರ್ನೆ ಹಾಗೂ ವಿಟ್ಲದ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಶ್ರೀ ರವಿಪ್ರಕಾಶ್ ಉಪಸ್ಥಿತರಿದ್ದರು.

ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ

ಕಾರ್ಯಕ್ರಮದಲ್ಲಿ ಊರಿಗೆ ಕೀರ್ತಿ ತಂದ ವಿವಿಧ ಕ್ಷೇತ್ರದ ಸಾಧಕರನ್ನು ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು:

ವಿದ್ಯಾರ್ಥಿ ಪ್ರತಿಭೆಗಳಿಗೆ ಸನ್ಮಾನ: ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಸಾಧನೆಗೈದ ಊರಿನ 5 ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.

ಚಿನ್ನದ ಪದಕ ವಿಜೇತರಿಗೆ ಸನ್ಮಾನ: ಎಂ.ಎ. ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಹಾಗೂ ಚಿನ್ನದ ಪದಕ ಪಡೆದ ಕು. ದೀಕ್ಷಾ. T ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಪವರ್ ಮೆನ್ ಗಳ ಸೇವಾ ಸನ್ಮಾನ: ಪೆರುವಾಯಿ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಪವರ್ ಮೆನ್ ಗಳಾದ ಶ್ರೀ ಲಕ್ಷಣ್ H N ಮತ್ತು ಶ್ರೀ ಯಲಗುರೇಶ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ವಿಶೇಷ ಸಾಧನೆ – ನಿವೃತ್ತ ಯೋಧರಿಗೆ ಗೌರವ: ಕಾರ್ಯಕ್ರಮದ ವಿಶೇಷ ಮೇರುವಾಗಿ, ಗಣೇಶೋತ್ಸವ ಸಮಿತಿಯ ಸದಸ್ಯರೂ ಆಗಿರುವ, ಬರೋಬ್ಬರಿ 23 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಭಾರತಾಂಬೆಯ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀ ಚಂದ್ರಶೇಖರ್ ಪೂಜಾರಿ ಕಲ್ಲಡ್ಕ ಪೆರುವಾಯಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿದ ಈ ಗಣೇಶೋತ್ಸವವು ಊರಿನ ಭಕ್ತಾದಿಗಳ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

Continue Reading

Entertainment

ಶುಭ ಕಾರ್ಯದಲ್ಲಿ ಭಯಾನಕ/ವಿಪರೀತ ವೇಷಭೂಷಣ – ಸಂಪ್ರದಾಯದ ಹೆಸರಿನಲ್ಲಿ ಅತಿಯಾಯಿತೇ ನವವರನ ಎಂಟ್ರಿ?

Published

on

ಇದು ನೇಮೋತ್ಸವವೂ ಅಲ್ಲ.. ಯಕ್ಷಗಾನವೂ ಅಲ್ಲ… ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಹಾಗೂ ಶಿಸ್ತುಬದ್ಧ ಆಚರಣೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲು ಮತ್ತು ವೈರಲ್ ಆಗಲು ಸಂಪ್ರದಾಯದ ಗಡಿಯನ್ನು ಮೀರಿ ವಿಚಿತ್ರ ಹಾಗೂ ಭಯಾನಕ ರೀತಿಯಲ್ಲಿ ಪ್ರವೇಶ (Groom Entry) ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಇತ್ತೀಚೆಗೆ ಕೇರಳದ ಮತ್ತಿಪರಂಬಿಲ್ ಮೂಲದವರ ಮದುವೆ ಸಮಾರಂಭವೊಂದರಲ್ಲಿ ನವವರ ಹಾಗೂ ಆತನ ಗೆಳೆಯರ ಬಳಗ ರಾಕ್ಷಸಿ, ಅಸ್ಥಿಪಂಜರ ಹಾಗೂ ಬೆಂಕಿಯ ದೀವಟಿಗೆ ಹಿಡಿದು ಭಯಾನಕ ವೇಷಧರಿಸಿ ಆಗಮಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್‌ ಆಗಿದೆ.

ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿಯೂ ಮದುವೆ ಮೆರವಣಿಗೆಯೊಂದರಲ್ಲಿ ಸ್ಥಳೀಯ ಕೊರಗಜ್ಜ ದೈವದ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದು, ಅದರ ವಿರುದ್ಧ ಕಾನೂನು ಕ್ರಮ ಹಾಗೂ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರ ನೆನಪಿನಲ್ಲಿದೆ. ಅಂತಹ ಘಟನೆಗಳಿಂದ ಪಾಠ ಕಲಿಯದೆ, ಈಗ ಮತ್ತೊಮ್ಮೆ ಇಂತಹ ಅತಿರೇಕದ ಸಂಪ್ರದಾಯ/ಪ್ರವೇಶಗಳು ಸಮಾಜದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಣೆಗೆ ಕಾರಣವಾಗುತ್ತಿವೆ.

ಇಂತಹ ಆಚರಣೆಗಳು ಸಮಾಜದ ಶಾಂತಿ, ಸಾಂಪ್ರದಾಯಿಕ ಮೌಲ್ಯಗಳು ಹಾಗೂ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ ಎಂದು ಸ್ಥಳೀಯರು ಹಾಗೂ ಹಿರಿಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

Continue Reading

Entertainment

200 ವರ್ಷಗಳ ಬಳಿಕ ದಹಿಫಲೆ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ: ರಥದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದ ಅಜ್ಜ-ಅಜ್ಜಿ!

Published

on

ಬೀಡ್ (ಮಹಾರಾಷ್ಟ್ರ): ಸಮಾಜದ ಕೆಲವೆಡೆ ಇಂದಿಗೂ ಹೆಣ್ಣು ಮಗು ಹುಟ್ಟಿದರೆ ನಿರಾಸೆ ವ್ಯಕ್ತಪಡಿಸುವ ಜನರ ನಡುವೆ, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅಪರೂಪದ ಹಾಗೂ ಅದ್ಧೂರಿ ಸಂಭ್ರಮವೊಂದು ನಡೆದಿದೆ. ಬರೋಬ್ಬರಿ ನಾಲ್ಕು ತಲೆಮಾರುಗಳ (ಸುಮಾರು 200 ವರ್ಷಗಳ) ದೀರ್ಘ ಕಾಯುವಿಕೆಯ ನಂತರ ಕುಟುಂಬದಲ್ಲಿ ಮೊದಲ ಬಾರಿಗೆ ಹೆಣ್ಣು ಮಗು ಜನಿಸಿದ್ದು, ದಹಿಫಲೆ ಕುಟುಂಬಸ್ಥರು ಮಗುವನ್ನು ರಥದಲ್ಲಿ ಕುಳ್ಳಿರಿಸಿ, ಡೊಳ್ಳು-ಕುಣಿತ ಮತ್ತು ವಾದ್ಯವೃಂದದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಮನೆಗೆ ಬರಮಾಡಿಕೊಂಡಿದ್ದಾರೆ.

‘ಮನೆಗೆ ಬಂದ ಮಹಾಲಕ್ಷ್ಮಿ, ಗಾರ್ಗಿ!’ ಆಸ್ಪತ್ರೆಯಿಂದ ತಾಯಿ ಮತ್ತು ಮಗು ಬಿಡುಗಡೆಯಾಗುತ್ತಿದ್ದಂತೆ, ಕುಟುಂಬಸ್ಥರು ರಥವನ್ನು ತಂದು ಹೂವುಗಳಿಂದ ಶೃಂಗರಿಸಿ ಆಸ್ಪತ್ರೆಯಿಂದಲೇ ಮೆರವಣಿಗೆ ಆರಂಭಿಸಿದರು. ನಾಲ್ಕು ತಲೆಮಾರುಗಳ ಬಳಿಕ ಜನಿಸಿದ ಈ ಮುದ್ದಾದ ಹೆಣ್ಣು ಮಗುವಿಗೆ ‘ಗಾರ್ಗಿ’ ಎಂದು ನಾಮಕರಣ ಮಾಡಲಾಗಿದೆ.

“ನಮ್ಮ ಮನೆಗೆ ಸ್ವತಃ ಮಹಾಲಕ್ಷ್ಮಿಯೇ ಬಂದಿದ್ದಾಳೆ. 200 ವರ್ಷಗಳಿಂದ ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಇರಲಿಲ್ಲ. ಆದ್ದರಿಂದಲೇ ಈ ಕ್ಷಣವನ್ನು ಸಂಭ್ರಮಿಸಲು ಆಕೆಯನ್ನು ಆಸ್ಪತ್ರೆಯಿಂದಲೇ ವಿಜೃಂಭಣೆಯಿಂದ ಕರೆತರಲು ನಿರ್ಧರಿಸಿದೆವು” ಎಂದು ಮಗುವಿನ ಅಜ್ಜಿ ಸುರೇಖಾ ದಹಿಫಲೆ ಆನಂದಬಾಷ್ಪ ಹರಿಸಿದರು.

ಭಾವುಕ ರಾದ ಅಜ್ಜ ಲಿಂಬಾಜಿ ದಹಿಫಲೆ: ಮಗುವಿನ ಅಜ್ಜ ಲಿಂಬಾಜಿ ದಹಿಫಲೆ ಮಾತನಾಡಿ, “ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿರುವುದು ನಮಗೆ ಸಿಕ್ಕ ದೊಡ್ಡ ಭಾಗ್ಯ. ಇಷ್ಟು ವರ್ಷಗಳಿಂದ ನಮಗಿದ್ದ ದೊಡ್ಡ ಕೊರತೆ ಇಂದು ನೀಗಿದೆ. ನನ್ನ ಇಬ್ಬರು ಸೊಸೆಯಂದಿರನ್ನು ನಾನು ಹೆತ್ತ ಮಗಳಂತೆಯೇ ಸಾಕಿ ಬೆಳೆಸಿದ್ದೇನೆ, ಈಗ ಮೊಮ್ಮಗಳನ್ನು ರಥ ಹಾಗೂ ವಾದ್ಯವೃಂದದೊಂದಿಗೆ ಕರೆತರಲು ನಮಗೆ ಅತಿಯಾದ ಸಂತೋಷವಾಗುತ್ತಿದೆ” ಎಂದು ಭಾವುಕರಾಗಿ ತಮ್ಮ ಸಂತಸ ಹಂಚಿಕೊಂಡರು.

‘ಹೂವಿನಂತೆ ಸಾಕಿ ಬೆಳೆಸುತ್ತೇವೆ’: ತಂದೆಯ ಹರ್ಷ “ಸಾಮಾನ್ಯವಾಗಿ ಜನರು ಗಂಡು ಮಗುವನ್ನು ಬಯಸುತ್ತಾರೆ, ಆದರೆ ಹೆಣ್ಣು ಮಗು ಹುಟ್ಟಿದಾಗ ಸಿಗುವ ಆನಂದವೇ ಬೇರೆ. ಹೆಣ್ಣು ಮಕ್ಕಳಿಗೆ ತಂದೆಯ ಮೇಲೆ ಹೆಚ್ಚಿನ ಪ್ರೀತಿ ಇರುತ್ತದೆ. ನಾವು ನಮ್ಮ ಮಗಳನ್ನು ಹೂವಿನಂತೆ ಸಾಕಿ ಬೆಳೆಸುತ್ತೇವೆ” ಎಂದು ಮಗುವಿನ ತಂದೆ ಹೆಮ್ಮೆಯಿಂದ ಹೇಳಿದರು.

ಸಮಾಜಕ್ಕೆ ಮಾದರಿಯಾದ ದಹಿಫಲೆ ಕುಟುಂಬ: ದಹಿಫಲೆ ಕುಟುಂಬದ ಈ ವಿಶೇಷ ಆಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅನಂತ್ ಇಂಗಳೆ, “ಇಂದಿಗೂ ಸಮಾಜದ ಕೆಲವೆಡೆ ಹೆಣ್ಣು ಮಗುವಿನ ಜನನದ ಬಗ್ಗೆ ಕಿರಿದಾದ ಮನಸ್ಥಿತಿ ಇದೆ. ಆದರೆ ದಹಿಫಲೆ ಕುಟುಂಬವು ಹೆಣ್ಣು ಮಗುವನ್ನು ರಥದಲ್ಲಿ ಕರೆತರುವ ಮೂಲಕ ಸಮಾಜಕ್ಕೆ ಉತ್ತಮ ಹಾಗೂ ಪ್ರೇರಣಾದಾಯಿ ಸಂದೇಶ ನೀಡಿದ್ದಾರೆ” ಎಂದು ಶ್ಲಾಘಿಸಿದ್ದಾರೆ.

Continue Reading

Trending

Copyright © 2025 Deevatige