Connect with us

Dakshina Kannada

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೈವೀ ಕಾರ್ಯಗಳಲ್ಲಿ ಕಳಂಕರಹಿತರಿಗೆ ಮಾತ್ರ ಅವಕಾಶ ನೀಡಿ; ಅನಧಿಕೃತ ವ್ಯಕ್ತಿಗಳ ಹಸ್ತಕ್ಷೇಪ ನಿಲ್ಲಿಸಿ; ವ್ಯವಸ್ಥಾಪನಾ ಸಮಿತಿಗೆ ಮನವಿ

Published

on

ಪುತ್ತೂರು : ಇಲ್ಲಿಯ ಹೃದಯಭಾಗದಲ್ಲಿರುವ ಶ್ರೀ ಮಹಾಲಿಂಗೇಶ್ವರನ ಮಹಿಮೆ ಇತಿಹಾಸ ಪ್ರಸಿದ್ದವಾದುದು ಬಹಳ ಜನಾದರಣೀಯವಾದುದು. ಹಾಗೂ ವಿಶೇಷ ದೈವಿಕ ಶಕ್ತಿ ಸಂಪನ್ಮೂಲವಾದುದು. ಹಲವರ ಜೀವನದ ಘಟನೆಗಳಲ್ಲಿ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವರ ವಿಶೇಷ ಶಕ್ತಿಯ ಸಂಚಯನವಾಗಿದೆ. ದುಷ್ಟರಿಗೆ ಶಿಕ್ಷೆ ನೀಡಿ ಶಿಷ್ಟರ ಪರಿಪಾಲನೆಯಾದ ಅಸಂಖ್ಯಾತ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇಂತಹ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೈವೀ ಕಾರ್ಯಗಳಲ್ಲಿ ಅನಧಿಕೃತ ವ್ಯಕ್ತಿಗಳ ಹಸ್ತಕ್ಷೇಪದ ಬಗ್ಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಗೊಂದು ದೂರು ಮನವಿ ಹೋಗಿದೆ.


ಕರ್ನಾಟಕ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಒಳಪಟ್ಟ ದೇವಾಲಯ ಇದಾಗಿದ್ದು, ಇಲ್ಲಿ ಧಾರ್ಮಿಕ ದೈವೀ ಕಾರ್ಯಗಳಲ್ಲಿ ಶಿಷ್ಠಾಚಾರ ಉಲ್ಲಂಘನೆಯಾಗುತ್ತಿರುವುದು ನಡೆದಿದೆ. ಇಲ್ಲಿನ ಜಾತ್ರೋತ್ಸವದ ಧ್ವಜಾರೋಹಣ ಮತ್ತು ಧ್ವಜ-ಅವರೋಹಣ ದೈವೀ ಕಾರ್ಯದಲ್ಲಿ ಈವರೆಗೆ ಅಧಿಕಾರ ಮತ್ತು ಅರ್ಹತೆಯಿಲ್ಲದ ಇಷ್ಟ ಬಂದವರೆಲ್ಲರೂ ಅವಕಾಶ ಪಡೆದುಕೊಂಡು ಫೋಸ್ ನೀಡುತ್ತಿರುವುದು ಕಂಡುಬಂದಿದ್ದು, ಮುಂದೆ ದೇವಸ್ಥಾನದ ಅಧಿಕೃತ ಖಾಯಂ ಪದಾರ್ಥಿ ನೌಕರರಿಗೆ ಮತ್ತು ಯಾವುದೇ ಕಳಂಕ ಇಲ್ಲದ ಅರ್ಹರಿಗೆ ಮಾತ್ರ ಅವಕಾಶ ಕೊಟ್ಟು ದೇವಸ್ಥಾನದ ಘನತೆ, ಗೌರವ, ಶಿಸ್ತು ನಿಯಮ ಕಾಪಾಡುವಂತೆ ಮಹಾಲಿಂಗೇಶ್ವರ ದೇವರ ಭಕ್ತ ಶಶಿಧರ ವಿ,ಎನ್ ಮನವಿ ಮಾಡಿದ್ದಾರೆ.

ಶ್ರೀ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತನ್ನದೇ ಆದ ಶಿಸ್ತು ನಿಯಮ ಶಿಷ್ಟಾಚಾರ ಹೊಂದಿರುವ ಕರ್ನಾಟಕ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಪ್ರಾಚೀನ ಸಾರ್ವಜನಿಕ ದೇವಸ್ಥಾನ. ಇಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಅಧಿಕೃತ ಸಿಬ್ಬಂದಿಗಳ ನೇಮಕ ನಿಯೋಜನೆ ಆಗಿರುತ್ತದೆ. ಅದಾಗಿಯೂ ಸದ್ರಿ ದೇವಸ್ಥಾನದಲ್ಲಿ ಕೆಲವೊಂದು ಪ್ರಮುಖ ಧಾರ್ಮಿಕ ಕಾರ್ಯಗಳಲ್ಲಿ ನೌಕರರೇ ಅಲ್ಲದ ಯಾವುದೇ ಅಧಿಕಾರ ಹಕ್ಕು ಆದೇಶ ಇಲ್ಲದ ವ್ಯಕ್ತಿಗಳು ತೀರಾ ಅನಧಿಕೃತವಾಗಿ ಪಾಲ್ಗೊಳ್ಳುವುದು, ತಾವೇ ಮುಖ್ಯರಂತೆ ಬಿಂಬಿಸಿಕೊಳ್ಳುವುದು ದೇವಸ್ಥಾನದ ಘನತೆ, ಗೌರವ ಮತ್ತು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ.


ಶ್ರೀ ದೇವಸ್ಥಾನದ ಅಧಿಕೃತ ಮಾಹಿತಿ ತಿಳಿಸುವಂತೆ, ಇಂತಹ ಅನಧಿಕೃತ ವ್ಯಕ್ತಿಗಳ ಚಟುವಟಿಕೆ ದೇವಸ್ಥಾನದ ಶಿಸ್ತು, ನಿಯಮ ಮತ್ತು ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ಸದರಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಜಾತ್ರೋತ್ಸವದ ಧ್ವಜಾರೋಹಣ ಮತ್ತು ಅವರೋಹಣವನ್ನು ನಡೆಸಲು ಶ್ರೀ ದೇವಾಲಯದ ಖಾಯಂ ಪದಾರ್ಥಿ ಹುದ್ದೆಯಲ್ಲಿರುವ ನೌಕರರಿಗೆ ಜವಾಬ್ದಾರಿ ನೀಡಲಾಗಿರುತ್ತದೆ. ಅದಾಗ್ಯೂ ಜಾತ್ರೋತ್ಸವದ ಧ್ವಜಾರೋಹಣ ಅವರೋಹಣವನ್ನು ದೇವಸ್ಥಾನದ ಖಾಯಂ ಪದಾರ್ಥಿ ಅಲ್ಲದ ಯಾವುದೇ ಅಧಿಕಾರ, ಆದೇಶ, ಹಕ್ಕು, ಅರ್ಹತೆ ನೈತಿಕತೆಗಳಿಲ್ಲದ ಕಳಂಕಿತ ವ್ಯಕ್ತಿಗಳು ನಡೆಸಿದರೆ ಅದು ದೇವಸ್ಥಾನದ ಘನತೆ ಗೌರವ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ಹಿಂದಿನ ವರ್ಷದ ಜಾತ್ರೋತ್ಸವದ ಸಂದರ್ಭದಲ್ಲಿ ಇಂತಹ ಅರ್ಹತೆಯಲ್ಲದವರಿಂದ ಅಧಿಕಾರ ಚಲಾವಣೆಯಾಗಿರುವ ಬಹಳಷ್ಟು ಘಟನೆಗಳ ಸರಮಾಲೆಯೇ ನಡೆದಿರುವುದು ಶ್ರೀ ದೇವಳದ ಸಿ.ಸಿ. ಫೂಟೇಜಿಗಳಲ್ಲಿ ಅಲ್ಲದೆ ವಿವಿಧ ಮಾಧ್ಯಮಗಳ ವಿಡಿಯೋಗಳಿಂದ ಸಾಕ್ಷವಾಗಿ ಕಾಣಬಹುದು.
ಈ ದೂರಿನ ಯಥಾರ್ಥತೆಯನ್ನು ದೃಢೀಕರಿಸುವ ನಿಟ್ಟಿನಲ್ಲಿ ಅವೆಲ್ಲವುಗಳ ನೇರ ಪುನರ್ ಪರಿಶೀಲನೆ ನಡೆಸಲು ದೂರುದಾರರು ಮನವಿ ಮಾಡಿಕೊಳ್ಳುತ್ತಿದ್ದು, ಅವಶ್ಯ ಕಂಡುಬಂದಲ್ಲಿ ತಾನು ಹಾಜರಾಗಿ ಇನ್ನಷ್ಟು ಸ್ಪಷ್ಟತೆಯನ್ನು ನೀಡುವುದಕ್ಕೆ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.


ದೇವಾಲಯದ ಧಾರ್ಮಿಕ ಕಾರ್ಯಗಳಲ್ಲಿ ಒಂದಾದ ಜಾತ್ರೋತ್ಸವ ಸಂದರ್ಭ ಕೆಲವೊಂದು ಅನಧಿಕೃತ ವ್ಯಕ್ತಿಗಳು, ಸಾರ್ವಜನಿಕರು ನೇರ ಹಸ್ತಕ್ಷೇಪ ನಡೆಸುವುದು, ತಾವೇ ಮುಂದಾಗುವುದು, ಅಥವಾ ಆ ಕೆಲಸಕ್ಕೆ ಅಧಿಕೃತವಾಗಿ ನಿಯೋಜಿಸಲ್ಪಟ್ಟವರನ್ನೇ ನೇರ ಬದಿಗೆ ಸರಿಸುವುದು ಕಂಡುಬಂದಿದ್ದು, ಮುಂದೆ ದೇವಸ್ಥಾನದ ಪ್ರಸಕ್ತ ಖಾಯಂ ಪದಾರ್ಥಿಗಳಾಗಿರುವ ಶ್ರೀ ನಾಗೇಶ್ ಮತ್ತು ಶ್ರೀ ಬಾಲಕೃಷ್ಣರವರಿಗೆ ಆಡಳಿತ ಮಂಡಳಿ ಜವಾಬ್ದಾರಿ ವಹಿಸಿಕೊಟ್ಟು ಆದೇಶ ಹೊರಡಿಸುವಂತೆ ಹಾಗೂ ಸೂಕ್ತ ಮುಂಜಾಗರೂಕತಾ ವ್ಯವಸ್ಥೆಗಳನ್ನು ಕೈಗೊಳ್ಳಬೇಕಾಗಿ ಮತ್ತು ಸೂಕ್ತ್ತ ನಿಗಾ ವಹಿಸಬೇಕೆಂದು ಮನವಿ ಮಾಡಿದ್ದಾರೆ. ಮತ್ತು ತಾವು ಕೈಗೊಂಡ ಕ್ರಮಗಳ ಕುರಿತು ಮರು ಟಪಾಲಿನಲ್ಲಿ ತಿಳಿಸಲು ದೂರುದಾರರು ವಿನಂತಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು: ಮಾದಕ ವಸ್ತು ಮಾರಾಟ ದಂಧೆಕೋರರ ಜಾಲಕ್ಕೆ ಪೊಲೀಸ್ ಲಗಾಮು; ಮೂವರ ಬಂಧನ!

Published

on

ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲದ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೀವ್ರ ನಿಗಾ ಇರಿಸಿದ್ದು, ಪ್ರತ್ಯೇಕ ದಾಳಿಗಳ ಮೂಲಕ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.

ಪ್ರಕರಣ 1: ಗೂಡ್ ಶೆಡ್ಡೆ ಬಳಿ ಎಂಡಿಎಂಎ ಮಾರಾಟ ಯತ್ನ – ಇಬ್ಬರ ಬಂಧನ

ದಿನಾಂಕ 08-06-2026 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಗೂಡ್ ಶೆಡ್ಡೆ ಪರಿಸರದಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA) ಯನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜಂಟಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಬಂಧಿತ ಆರೋಪಿಗಳು: 1. ಜನನ್ ಜಗನ್ನಾಥ್ (29 ವರ್ಷ), ತಂದೆ: ಜಗನ್ನಾಥ್, ವಾಸ: ಸಿಲ್ವ‌ರ್ ಗೇಟ್, ಕುಲಶೇಖರ, ಮಂಗಳೂರು. 2. ಪರೀಕ್ಷಿತ್ (33 ವರ್ಷ), ತಂದೆ: ಲೇ. ಜಯರಾಮ ಶೆಟ್ಟಿ, ವಾಸ: ಬೋಳಾರ, ಮಂಗಳೂರು.

ಸ್ವಾಧೀನಪಡಿಸಿಕೊಂಡ ಸೊತ್ತುಗಳು: ದಾಳಿಯ ವೇಳೆ ಪೊಲೀಸರು ಒಟ್ಟು 11.68 ಗ್ರಾಂ ಎಂಡಿಎಂಎ ಮಾದಕ ವಸ್ತು, ₹1,110 ನಗದು ಹಣ, 3 ಮೊಬೈಲ್ ಫೋನ್‌ಗಳು ಹಾಗೂ ಮಾದಕ ವಸ್ತು ತೂಕ ಮಾಡಲು ಬಳಸುತ್ತಿದ್ದ 1 ತೂಕ ಮಾಪನವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ (ಪ್ರಕರಣ ಸಂಖ್ಯೆ 122/2026) ಮೊಕದ್ದಮೆ ದಾಖಲಾಗಿದೆ.

ಪ್ರಕರಣ 2: ಡ್ರಗ್ಸ್ ಜಾಲದ ಮತ್ತೊಬ್ಬ ಆರೋಪಿ ಸುಶಾನ್ ಪೂಜಾರಿ ವಶಕ್ಕೆ

ದಿನಾಂಕ 06-06-2026 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಎನ್.ಡಿ.ಪಿ.ಎಸ್ ಪ್ರಕರಣಕ್ಕೆ (ಕ್ರೈಂ ಸಂಖ್ಯೆ 116/2026) ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ ಪೊಲೀಸರು, ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ: ಸುಶಾನ್ ಪೂಜಾರಿ (27 ವರ್ಷ), ತಂದೆ: ಲೋಹಿತಾಶ್ವ, ವಾಸ: ನಳಂದ ಶಾಲೆ ಹತ್ತಿರ, ಕಾರ್ ಸ್ಟ್ರೀಟ್, ಮಂಗಳೂರು.

ಹಿನ್ನೆಲೆ: ಈ ಪ್ರಕರಣದಲ್ಲಿ ಈಗಾಗಲೇ ಪ್ರಣಮ್ ಕೋಟ್ಯಾನ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಇದೀಗ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಶಾನ್ ಪೂಜಾರಿಯನ್ನು ದಿನಾಂಕ 09-06-2026 ರಂದು ಪೊಲೀಸರು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.

ಮುಂದಿನ ಪೊಲೀಸ್ ಕ್ರಮ:

ಬಂಧಿತ ಎಲ್ಲಾ ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ಮಾದಕ ವಸ್ತು ಜಾಲದ ಮೂಲ ಹಾಗೂ ಇದರ ಹಿಂದೆ ಇರುವ ಇತರ ಕಿಂಗ್‌ಪಿನ್‌ಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.




Continue Reading

crime

ಕೋಟಿಗಟ್ಟಲೆ ಹನಿಟ್ರ್ಯಾಪ್ ಆರೋಪ: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಉಚ್ಚಾಟನೆ

Published

on

ಮಂಗಳೂರು: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಕೋಟಿಗಟ್ಟಲೆ ಹಣ ಸುಲಿಗೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ನವಾಝ್ ಅವರು ಈ ಕುರಿತು ಅಧಿಕೃತ ಉಚ್ಚಾಟನಾ ಆದೇಶ ಹೊರಡಿಸಿದ್ದಾರೆ.

ಉಚ್ಚಾಟನೆಗೆ ಕಾರಣಗಳೇನು?

ಸಮಾಜ ವಿರೋಧಿ ಚಟುವಟಿಕೆ: ನಿಝಾಮ್ ವಿರುದ್ಧ ಕೇಳಿಬಂದಿರುವ ಸಮಾಜ ವಿರೋಧಿ ಚಟುವಟಿಕೆಯ ಆರೋಪಗಳು ಪಕ್ಷದ ಗಮನಕ್ಕೆ ಬಂದಿವೆ.

ಪಕ್ಷದ ಗೌರವಕ್ಕೆ ಧಕ್ಕೆ: ಈ ಆರೋಪಗಳು ಪಕ್ಷದ ಶಿಸ್ತು ಮತ್ತು ಗೌರವಕ್ಕೆ ತೀವ್ರ ಧಕ್ಕೆ ಉಂಟುಮಾಡಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಿಸ್ತು ಕ್ರಮ: ಪಕ್ಷದ ಹಿತಾಸಕ್ತಿ ಹಾಗೂ ಶಿಸ್ತನ್ನು ಕಾಪಾಡುವ ದೃಷ್ಟಿಯಿಂದ ಅವರನ್ನು ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮತ್ತು ಯುವ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದಲೇ ಉಚ್ಚಾಟನೆ ಮಾಡಲಾಗಿದೆ.

ಪಕ್ಷದ ಕಡಕ್ ಸಂದೇಶ: > “ಪಕ್ಷದ ಸಿದ್ಧಾಂತ, ಮೌಲ್ಯಗಳು ಮತ್ತು ಸಂಘಟನೆಯ ಹಿತಾಸಕ್ತಿಗೆ ವಿರುದ್ಧವಾಗಿ ಯಾವುದೇ ಚಟುವಟಿಕೆಗಳನ್ನು ಸಹಿಸಲಾಗುವುದಿಲ್ಲ. ಪಕ್ಷದ ಶಿಸ್ತು ಉಲ್ಲಂಘಿಸುವವರ ವಿರುದ್ಧ ಮುಂದೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:

ಮಂಗಳೂರಿನ ಉದ್ಯಮಿಯೊಬ್ಬರಿಗೆ ಯುವತಿಯನ್ನು ಪರಿಚಯಿಸಿ, ಬಳಿಕ ಖಾಸಗಿ ದೃಶ್ಯಗಳನ್ನು ಮುಂದಿಟ್ಟುಕೊಂಡು ಬರೋಬ್ಬರಿ 2.77 ಕೋಟಿ ರೂ. ಹಣವನ್ನು ಸುಲಿಗೆ ಮಾಡಲಾದ ಗಂಭೀರ ಪ್ರಕರಣ ದಾಖಲಾಗಿದೆ. ಈ ಹನಿಟ್ರ್ಯಾಪ್ ಜಾಲದಲ್ಲಿ ನಿಝಾಮ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಕಾಂಗ್ರೆಸ್ ವಲಯದಲ್ಲಿ ತೀವ್ರ ಮುಖಭಂಗ ಉಂಟಾಗಿತ್ತು. ಮುಜುಗರದಿಂದ ಪಾರಾಗಲು ಜಿಲ್ಲಾ ಯುವ ಕಾಂಗ್ರೆಸ್ ಘಟಕವು ಆರೋಪಿ ವಿರುದ್ಧ ಈ ಕಠಿಣ ಕ್ರಮ ಜರುಗಿಸಿದೆ.




Continue Reading

Dakshina Kannada

ಮಾನವೀಯತೆಯ ಸಾಕಾರ: ಕುಂಬ್ರದ ಖ್ಯಾತ ವೈದ್ಯ ಡಾ. ವಿಘ್ನೇಶ್ವರ ಭಟ್‌ ಚಿಕಿತ್ಸೆಗೆ ಹರಿದುಬಂದ ನೆರವು; ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ

Published

on

ಪುತ್ತೂರು: ಪುತ್ತೂರು ತಾಲೂಕಿನ ಕುಂಬ್ರದ ‘ಅಮೃತ ಕ್ಲಿನಿಕ್’ನಲ್ಲಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ನಿರಂತರವಾಗಿ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಾ, ಅಪಾರ ಜನಮನ್ನಣೆ ಗಳಿಸಿರುವ ಪಾರಂಪರಿಕ ಶೈಲಿಯ ಜನಪ್ರಿಯ ಕುಟುಂಬ ವೈದ್ಯ ಡಾ. ವಿಘ್ನೇಶ್ವರ ಭಟ್ ಅವರು ಸದ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕರ ನೆರವಿನ ಹಸ್ತ ಚಾಚಿದ್ದಾರೆ.

ಕಳೆದ 2-3 ತಿಂಗಳುಗಳಿಂದ ದೈಹಿಕ ಅನಾರೋಗ್ಯ ಎದುರಿಸುತ್ತಿದ್ದ ಅವರಿಗೆ ವೈದ್ಯಕೀಯ ಪರೀಕ್ಷೆಗಳ ನಂತರ ತೀವ್ರತರದ ರಕ್ತದ ಕ್ಯಾನ್ಸರ್ (T-Cell Lymphoma) ಇರುವುದು ಪತ್ತೆಯಾಗಿದೆ. ಸದ್ಯ ಮಂಗಳೂರಿನ ಎಂ.ಐ.ಓ (Mangalore Institute of Oncology) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಈಗಾಗಲೇ ಸುಮಾರು 20 ಲಕ್ಷ ರೂ. ವೆಚ್ಚವಾಗಿದೆ. ಮುಂದಿನ ಹಂತದ ಅಸ್ಥಿಮಜ್ಜೆ ಕಸಿ (Bone Marrow Transplant) ಹಾಗೂ ಇತರ ತುರ್ತು ಚಿಕಿತ್ಸೆಗಳಿಗಾಗಿ ಇನ್ನೂ ಅಂದಾಜು 20 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ. ವೈದ್ಯಕೀಯ ವೃತ್ತಿಯನ್ನೇ ನಂಬಿಕೊಂಡಿದ್ದ ಅವರಿಗೆ ಈ ಬೃಹತ್ ಮೊತ್ತವನ್ನು ಹೊಂದಿಸುವುದು ಕಷ್ಟಸಾಧ್ಯವಾಗಿರುವುದರಿಂದ ಸಹೃದಯಿ ಜನರಲ್ಲಿ ಧನಸಹಾಯಕ್ಕಾಗಿ ವಿನಂತಿಸಿಕೊಂಡಿದ್ದರು.

ಕೋಮು ಸೌಹಾರ್ದತೆ ಮೆರೆದ ಶೇಕಮಲೆ ಮಸೀದಿ ಸಮಿತಿ: ಡಾ. ವಿಘ್ನೇಶ್ವರ ಭಟ್ ಅವರ ಕಷ್ಟಕ್ಕೆ ಸ್ಪಂದಿಸಿ ಇತ್ತೀಚೆಗೆ ಶೇಕಮಲೆ ಮಸೀದಿ ಕಮಿಟಿಯವರು “ಮಾನವೀಯತೆಯ ಬಕ್ರೀದ್” ಎಂಬ ಆಶಯದೊಂದಿಗೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ ಕೋಮು ಸೌಹಾರ್ದತೆ ಮತ್ತು ಜಾತಿಗೆ ತೀತವಾದ ಮಾನವೀಯ ಗುಣವನ್ನು ಸಾರಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ವಿದೇಶಿ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ನೆರವು: ಇದೀಗ ಡಾಕ್ಟರ್ ಅವರ ಚಿಕಿತ್ಸೆಗೆ ಮತ್ತೊಂದು ಆಸರೆಯಾಗಿ ಹೊರದೇಶದ ಖ್ಯಾತ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ಅವರು 50,000 ರೂ. ಆರ್ಥಿಕ ಸಹಾಯ ಹಸ್ತ ಚಾಚುವ ಮೂಲಕ ತಮ್ಮ ಉದಾರಿ ಗುಣವನ್ನು ಮೆರೆದಿದ್ದಾರೆ. ಇವರೊಂದಿಗೆ ಹಲವಾರು ಸಹೃದಯಿ ಸಾರ್ವಜನಿಕರು ಕೂಡ ಈಗಾಗಲೇ ತಮ್ಮ ಕೈಲಾದ ಧನಸಹಾಯವನ್ನು ಒದಗಿಸಿದ್ದಾರೆ.

ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ: ಬಡವರ, ಸಾರ್ವಜನಿಕರ ಕಣ್ಣೊರೆಸುತ್ತಿದ್ದ ವೈದ್ಯರೊಬ್ಬರು ಇಂದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆ ಸುಗಮವಾಗಿ ಸಾಗಲು ಇನ್ನು ಕೂಡ ಭಾರಿ ಮೊತ್ತದ ನೆರವಿನ ಅಗತ್ಯವಿದೆ. ಹೀಗಾಗಿ ದೇಶ-ವಿದೇಶಗಳಲ್ಲಿರುವ ದಾನಿಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಉದಾರವಾಗಿ ಧನಸಹಾಯ ಮಾಡುವ ಮೂಲಕ ಡಾ. ವಿಘ್ನೇಶ್ವರ ಭಟ್ ಅವರು ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳುವಂತೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಧನಸಹಾಯ ಮಾಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು:

  • ಬ್ಯಾಂಕ್ ಹೆಸರು: ಕರ್ಣಾಟಕ ಬ್ಯಾಂಕ್ (Karnatāka Bank)
  • ಶಾಖೆ: ದರ್ಬೆ, ಪುತ್ತೂರು
  • ಖಾತೆ ಸಂಖ್ಯೆ (A/c No): 1023202500000601
  • ಐಎಫ್‌ಎಸ್‌ಸಿ ಕೋಡ್ (IFSC): KARB0001023
  • ಗೂಗಲ್ ಪೇ ಸಂಖ್ಯೆ (G-Pay): 961163784



Continue Reading

Trending

Copyright © 2025 Deevatige

error: Content is protected !!