Connect with us

DEATH

ವಿಟ್ಲದ ಜನಪ್ರಿಯ ಚಾಲಕ ಕುಮಾರಣ್ಣ ಹೃದಯಾಘಾತಕ್ಕೆ ಬಲಿ

Published

on

ವಿಟ್ಲದಲ್ಲಿ ಹಲವಾರು ವರ್ಷಗಳಿಂದ ಕುಮಾರಣ್ಣ ಎಂದೇ ಪರಿಚಿತರಾಗಿರುವ ಚಾಲಕರಾಗಿದ್ದ ರೇಣು ಕುಮಾರ (55) ಎಂಬವರು ಹೃದಯ ಖಾಯಿಲೆಗೆ ತುತ್ತಾಗಿ ಮಂಗಳೂರು ಆಸ್ಪತ್ರೆಯಲ್ಲಿ ಜ. 27ರ ಮುಂಜಾನೆ ನಿಧನರಾಗಿದ್ದಾರೆ.

ಹೃದಯ ಸಂಬoಧಿ ಖಾಯಿಲೆಯಿಂದ ಸುಸ್ತಾಗಿದ್ದ ಅವರನ್ನು ಜ22ರಂದು ಮದ್ಯಾಹ್ನ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಚೇತರಿಸಿಕೊಂಡಿದ್ದ ಅವರು ಜ.27ರ ಬೆಳಿಗ್ಗೆ 4 ಗಂಟೆ ಸಮಯಕ್ಕೆ ರಕ್ತದೊತ್ತಡ ಇಳಿಮುಖವಾಗಿ ಹೃದಯಾಘಾತದಿಂದ ಮೃತಪಟ್ಟರೆಂದು ತಿಳಿದುಬಂದಿದೆ.
ಮೃತ ದೇಹವನ್ನು ಮಡಿಕೇರಿ ಮನೆಗೆ ಕೊಂಡೊಯ್ಯಲಾಗಿದ್ದು, ವಿಟ್ಲದಾದ್ಯಂತ ಚಾಲಕರು ಶೋಕ ವ್ಯಕ್ಪಡಿಸಿದ್ದು, ಮೃತರು ಅಪಾರ ಬಂಧುಬಳಗ ಮತ್ತು ಮಿತ್ರರನ್ನು ಅಗಲಿದ್ದಾರೆ.

ಹಲವಾರು ವರ್ಷಗಳಿಂದ ವಿಟ್ಲದಲ್ಲಿ ಮಂಗಳೂರು ವಿಟ್ಲ ಸಿ. ಸಿ. ಬಸ್ಸಿನಲ್ಲಿ ಚಾಲಕರಾಗಿದ್ದ ಕುಮಾರ ಅವರು 5-6 ವರ್ಷಗಳಿಂದ ಗ್ಯಾಸ್ ಲಾರಿಯಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಮಡಿಕೇರಿ ಸೋಮವಾರ ಪೇಟೆ ಮೂಲದ ಇವರು ವಿಟ್ಲದ ನೀರಕಣಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರ ಪತ್ನಿ ಜಯಂತಿ ಅವರು ವಿಟ್ಲದ ಜ್ಯೋತಿ ಲೇಡೀಸ್ ಟೈಲರ್ಸ್ ಶಾಪ್‌ನಲ್ಲಿ ಕಳೆದ 14 ವರ್ಷಗಳಿಂದ ಟೈಲರ್ ಆಗಿ ದುಡಿಯುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳು, ಚೈತ್ರಾ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಸಣ್ಣ ಮಗಳು ದಿಶಾ ಕೋಣಾಜೆ ಕಾಲೇಜಿನಲ್ಲಿ ಎಂಎಸ್ ಡಬ್ಲ್ಯೂ ವ್ಯಾಸಂಗ ಮಾಡುತ್ತಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಮಂತ್ರಾಲಯದ ಬಳಿ ಘೋರ ದುರಂತ: ತುಂಗಭದ್ರಾ ನದಿಗೆ ಸ್ನಾನಕ್ಕಿಳಿದ ಹೈದರಾಬಾದ್ ಮೂಲದ ತಂದೆ-ಮಗ ಸೇರಿ ಐವರು ನೀರುಪಾಲು!

Published

on

ರಾಯಚೂರು/ಮಂತ್ರಾಲಯ: ರಾಯಚೂರು ಜಿಲ್ಲೆಯ ಗಡಿಭಾಗದಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯದ ಬಳಿ ಭೀಕರ ದುರಂತವೊಂದು ಸಂಭವಿಸಿದೆ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಒಂದೇ ಕುಟುಂಬದ ಐವರು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.

ಮೃತರನ್ನು ಹೈದರಾಬಾದ್ ಮೂಲದ ಸತೀಶ್ (35) ಮತ್ತು ಅವರ 5 ವರ್ಷದ ಪುತ್ರ ಯುವನ ಚಂದ್ರ, ಮಂತ್ರಾಲಯ ಗ್ರಾಮದ ರಾಘವೇಂದ್ರ (25) ಹಾಗೂ ಧನುಷ್ (23) ಮತ್ತು ಉರವಕೊಂಡದ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಪರ್ಣಾ ಎಂಬ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸತ್ಯನಾರಾಯಣ ಪೂಜೆಗೆ ಬಂದಿದ್ದಾಗ ದುರಂತ: ಪೊಲೀಸ್ ಮೂಲಗಳ ಪ್ರಕಾರ, ಸುಮಾರು 10 ಜನರಿದ್ದ ಸಂಬಂಧಿಕರ ಗುಂಪೊಂದು ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಆಯೋಜಿಸಲಾಗಿದ್ದ ಕೌಟುಂಬಿಕ ಕಾರ್ಯಕ್ರಮ ಹಾಗೂ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಲು ಬಂದಿತ್ತು. ಪೂಜೆಯ ಬಳಿಕ ನದಿಯ ದಂಡೆಗೆ ತೆರಳಿದ್ದ ಇವರಲ್ಲಿ ಆರು ಜನರು ತುಂಗಭದ್ರಾ ನದಿಗೆ ಈಜಲು ಮತ್ತು ಸ್ನಾನ ಮಾಡಲು ಇಳಿದಿದ್ದಾರೆ. ಆದರೆ, ನೀರಿನ ಆಳದ ಅಂದಾಜು ಸಿಗದೆ ತೀವ್ರ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ನದಿ ದಂಡೆಯಲ್ಲಿದ್ದ ಇತರ ಸಂಬಂಧಿಕರು ತಕ್ಷಣವೇ ಕೂಗಾಡಲು ಆರಂಭಿಸಿದಾಗ, ಸ್ಥಳೀಯ ಮೀನುಗಾರರು ಮತ್ತು ಮಂತ್ರಾಲಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಹೈದರಾಬಾದ್ ಮೂಲದ ತಂದೆ ಸತೀಶ್ ಹಾಗೂ ಮಗ ಯುವನ ಚಂದ್ರ ಸೇರಿದಂತೆ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡದ (SDRF) ಸಹಾಯದೊಂದಿಗೆ ತೀವ್ರ ಶೋಕ ಕಾರ್ಯ ಮುಂದುವರಿದಿದೆ.

ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ನದಿಯಲ್ಲಿ ನೀರುಪಾಲಾದವರ ಹುಡುಕಾಟ ವೇಳೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ಮಂತ್ರಾಲಯಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.

ಪವಿತ್ರ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಹಾಗೂ ಪೂಜೆ ಮುಗಿಸಿದ ತಕ್ಷಣವೇ ಇಡೀ ಕುಟುಂಬ ದುರಂತಕ್ಕೀಡಾಗಿರುವುದು ಸ್ಥಳದಲ್ಲಿ ಜಮಾಯಿಸಿರುವ ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ




Continue Reading

DEATH

ವಿದ್ಯುತ್ ಶಾಕ್ ತಗುಲಿ ಯುವಕ ದಾರುಣ ಸಾವು

Published

on

ಪುತ್ತೂರು: ವಿದೇಶದಲ್ಲಿ ಉದ್ಯೋಗದಲ್ಲಿದ್ದು, ರಜೆಯ ನಿಮಿತ್ತ ಊರಿಗೆ ಬಂದಿದ್ದ ಯುವಕನೊಬ್ಬ ವಿದ್ಯುತ್ ಶಾಕ್ ತಗುಲಿ ದಾರುಣವಾಗಿ ಮೃತಪಟ್ಟ ಘಟನೆ ನಿಡ್ಪಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ಮೇ 24ರಂದು ರಾತ್ರಿ ಸಂಭವಿಸಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂಕಿಹಳ್ಳಿ ನಿವಾಸಿ ಜೋಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ (29 ವರ್ಷ) ಮೃತಪಟ್ಟ ದುರ್ದೈವಿ.

ರೋಶನ್ ಪಿಂಟೋ ಅವರು ತಮ್ಮ ತಂದೆ-ತಾಯಿ ಹಾಗೂ ಸಹೋದರಿಯೊಂದಿಗೆ ನಿಡ್ಪಳ್ಳಿಯಲ್ಲಿರುವ ಮಾವನ ಮನೆಗೆ ಬಂದಿದ್ದರು. ಮೇ 24ರಂದು ರಾತ್ರಿ ಸ್ನಾನ ಮುಗಿಸಿದ ರೋಶನ್, ಬಟ್ಟೆ ಒಗೆಯುವ ಜಾಗಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿ ಆಕಸ್ಮಿಕವಾಗಿ ಲೈವ್ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಜೋರಾಗಿ ಶಾಕ್ ಹೊಡೆದು ನೆಲಕ್ಕೆ ಬಿದ್ದಿದ್ದಾರೆ.

ತಕ್ಷಣವೇ ಮನೆಯವರು ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ರೋಶನ್ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Continue Reading

accident

ಮಾಣಿ: ಮೀನಿನ ಲಾರಿ–ಸ್ಕೂಟಿ ಭೀಕರ ಅಪಘಾತ; ಪುತ್ತೂರಿನ ಖಲಂದರ್ ಶಾ ದುರ್ಮರಣ

Published

on

ಮಾಣಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಮೇ 25 ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರರೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಸುಳ್ಯ ಗಾಂಧಿನಗರದ ಮೋಹಿದೀನ್ ಎಂಬವರ ಪುತ್ರ ಖಲಂದರ್ ಶಾ (ಖಲಂದರ್) ಎಂದು ಗುರುತಿಸಲಾಗಿದೆ. ಇವರು ಕಳೆದ ಕೆಲವು ವರ್ಷಗಳಿಂದ ಪುತ್ತೂರಿನಲ್ಲಿ ವಾಸವಾಗಿದ್ದರು.

ಘಟನೆಯ ವಿವರ:

ಮುಖಾಮುಖಿ ಢಿಕ್ಕಿ: ಖಲಂದರ್ ಶಾ ಅವರು ತಮ್ಮ ಹೋಂಡಾ ಡಿಯೋ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದಾಗ, ಮಾಣಿ ಜಂಕ್ಷನ್ ಸಮೀಪ ವೇಗವಾಗಿ ಬಂದ ಮೀನಿನ ಲಾರಿಯೊಂದು ಮುಖಾಮುಖಿ ಢಿಕ್ಕಿ ಹೊಡೆದಿದೆ.

ತೀವ್ರ ರಕ್ತಸ್ರಾವ: ಢಿಕ್ಕಿಯ ಭೀಕರತೆಗೆ ಸ್ಕೂಟಿ ಸವಾರ ರಸ್ತೆಗೆ ಬಿದ್ದು ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಗಾಯಗಳಾಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಆಸ್ಪತ್ರೆಗೆ ಸಾಗಿಸುವಾಗ ಸಾವು:

ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ದರು. ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಅವರು ಆಸ್ಪತ್ರೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢೀಕರಿಸಿದ್ದಾರೆ.

ಸ್ಥಳಕ್ಕೆ ಸಂಚಾರಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಅವರು ಮೂಲತಃ ಸುಳ್ಯ ನಿವಾಸಿಯಾಗಿದ್ದು, ಪ್ರಸ್ತುತ ಪುತ್ತೂರಿನ ಕಲ್ಲರ್ಪೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮಂಗಳೂರು ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.





Continue Reading

Trending

Copyright © 2025 Deevatige

error: Content is protected !!