INCIDENT
MRPL ನಲ್ಲಿ ಭಾರೀ ಸ್ಫೋಟ: ಬೆಂಕಿ ನಿಯಂತ್ರಣ, ಇಬ್ಬರು ಗಾಯಾಳುಗಳು – ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ
ಮಂಗಳೂರು, ಸೆ.30: ನಗರದ ಹೊರವಲಯದ ಜೋಕಟ್ಟೆ ಬಳಿ ಇರುವ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ 3ನೇ ಹಂತದ CHT ಘಟಕದಲ್ಲಿ (Hydro Sulphur Treatment Unit) ಇಂದು ಮಧ್ಯಾಹ್ನ 12:30ರ ಸುಮಾರಿಗೆ ಭಾರೀ ಸ್ಫೋಟ ಸಂಭವಿಸಿದೆ.
ಸ್ಫೋಟದ ಬೆನ್ನಲ್ಲೇ ಭಾರೀ ಬೆಂಕಿ ಕಾಣಿಸಿಕೊಂಡು ಆಕಾಶದೆತ್ತರಕ್ಕೆ ದಟ್ಟ ಹೊಗೆ ಆವರಿಸಿತ್ತು. ಸ್ಫೋಟದ ಶಬ್ದಕ್ಕೆ ಜೋಕಟ್ಟೆ ಪಂಚಾಯತ್ ಕಟ್ಟಡ ಸಹಿತ ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯ ಹಲವಾರು ಮನೆಗಳು ಕಂಪಿಸಿದ್ದು, ಬಾಗಿಲು-ಕಿಟಕಿಗಳ ಗಾಜುಗಳಿಗೆ ಹಾನಿಯಾಗಿದೆ. ಲೇಡಿ ಹಿಲ್ ತನಕವೂ ಸದ್ದು ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು,
“MRPL ನ CHT ಯುನಿಟ್ ನಲ್ಲಿ ಭಾರೀ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿತ್ತು. ಸದ್ಯ ಬೆಂಕಿಯನ್ನು ಸಂಪೂರ್ಣ ನಿಯಂತ್ರಿಸಲಾಗಿದೆ. ಆತಂಕ ಪಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಗಾಯಾಳುಗಳ ವಿವರ:
ಘಟಕದೊಳಗೆ ಕೆಲಸ ಮಾಡುತ್ತಿದ್ದ ಇಬ್ಬರಿಗೆ ಗಾಯಗಳಾಗಿವೆ.
- ರಾಜೇಶ್ ಬ್ಯಾಪ್ಟಿಸ್ಟ್ ಎಂಬುವವರಿಗೆ ಶೇ. 35ರಷ್ಟು ಸುಟ್ಟ ಗಾಯಗಳಾಗಿದ್ದು, ತಕ್ಷಣ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- ಪಕ್ಕದ ಕಚೇರಿಯಲ್ಲಿದ್ದ 8 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, OPD ಚಿಕಿತ್ಸೆ ಮತ್ತು ತಪಾಸಣೆ ಪಡೆದು ವಾಪಸ್ಸಾಗಿದ್ದಾರೆ.
ಘಟನಾ ಸ್ಥಳಕ್ಕೆ ನವ ಮಂಗಳೂರು, ಕದ್ರಿ, ಪಾಂಡೇಶ್ವರದಿಂದ ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸಿವೆ. ಸ್ಥಳದಲ್ಲಿ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ (DC) ಮತ್ತು MRPL ನ CEO ಉಪಸ್ಥಿತರಿದ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
“ಇದು ಗಂಭೀರ ಆತಂಕದ ವಿಷಯವಲ್ಲ, ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ನಾವು ನೋಡಿಕೊಳ್ಳುತ್ತೇವೆ” ಎಂದು ಕಮಿಷನರ್ ತಿಳಿಸಿದ್ದಾರೆ.
ಅವಘಡದ ನಿಖರ ಕಾರಣದ ಬಗ್ಗೆ MRPL ಆಡಳಿತ ಮಂಡಳಿ ಮತ್ತು ಪೊಲೀಸ್ ಇಲಾಖೆಯಿಂದ ಹೆಚ್ಚಿನ ತನಿಖಾ ವರದಿ ನಿರೀಕ್ಷಿಸಲಾಗಿದೆ
ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ – ಸಂಸತ್ ಸದಸ್ಯ ಕ್ಯಾಪ್ಟನ್ ಬೃಜೇಶ್ ಚೌಟ
ಮಂಗಳೂರಿನ MRPL ಘಟಕದಲ್ಲಿ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸತ್ ಸದಸ್ಯರಾದ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಎಂ.ಆರ್.ಪಿ.ಎಲ್ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಜಿಲ್ಲಾ ಆಡಳಿತ ಮತ್ತು ಬಜ್ಪೆ ಪಟ್ಟಣ ಪಂಚಾಯತ್ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಲು ಮುಂದಾಗಿರುವ ಅವರು, ಬೆಳ್ತಂಗಡಿಯಲ್ಲಿ ಇಂದು ನಿಗದಿಯಾಗಿದ್ದ ತಮ್ಮ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಆಸ್ಪತ್ರೆಗಳಿಗೆ ಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದೆ.
ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ, ವದಂತಿ ಅಥವಾ ತಪ್ಪು ಮಾಹಿತಿಗಳನ್ನು ಹರಡದೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
INCIDENT
ತುಳುನಾಡಿನ ನಂಬಿಕೆ ಹಾಗೂ ದೈವದ ಕಾರ್ಣಿಕ: MRPL ಸ್ಫೋಟ ಮತ್ತು ಜುಮಾದಿ ಎಚ್ಚರಿಕೆ
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪವಿರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಘಟಕದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಮತ್ತು ಸ್ಫೋಟವು ಇಡೀ ಕರಾವಳಿಯನ್ನು ಬೆಚ್ಚಿಬೀಳಿಸಿದೆ. ಈ ಅಪಘಾತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಆದರೆ, ಈ ದುರ್ಘಟನೆಯ ಬೆನ್ನಲ್ಲೇ ತುಳುನಾಡಿನಲ್ಲಿ ವ್ಯಾಪಕವಾಗಿ ನಂಬಲ್ಪಡುವ ಕಾಂತೇರಿ ಜುಮಾದಿ ದೈವದ ನುಡಿ ಮತ್ತು ಎಚ್ಚರಿಕೆಯು ಮನೆಮನೆಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜುಮಾದಿ ದೈವದ ಎಚ್ಚರಿಕೆ ಮತ್ತು ಸ್ಥಳೀಯರ ನಂಬಿಕೆ
ಬಾಜೆಪೆಯ ಎಸ್‌ಇಝಡ್ (SEZ) ವ್ಯಾಪ್ತಿಗೆ ಬರುವ ನೆಲ್ಲಿದಡಿ ಪ್ರದೇಶದಲ್ಲಿ ಸುಮಾರು ಎಂಟು ಶತಮಾನಗಳ ಇತಿಹಾಸವಿರುವ ಕಾಂತೇರಿ ಜುಮಾದಿ ದೈವಸ್ಥಾನವಿದೆ. ಭೂಸ್ವಾಧೀನ ಪ್ರಕ್ರಿಯೆಯ ಸಮಯದಲ್ಲಿ ಸ್ಥಳೀಯರಿಗೆ ನೀಡಿದ್ದ ಭರವಸೆಗಳನ್ನು ಅಧಿಕಾರಿಗಳು ಈಡೇರಿಸಿಲ್ಲ ಹಾಗೂ ದೈವದ ದೈನಂದಿನ ಪೂಜೆ, ಹಬ್ಬ-ಹರಿದಿನಗಳು ಮತ್ತು ವಾರ್ಷಿಕ ನೇಮೋತ್ಸವಕ್ಕೆ ಅಡ್ಡಿಪಡಿಸಲಾಗಿದೆ ಎಂಬುದು ಸ್ಥಳೀಯರ ಗಂಭೀರ ಆರೋಪವಾಗಿದೆ.
ಕಳೆದ ಫೆಬ್ರವರಿಯಲ್ಲಿ ನಡೆದ ನೇಮೋತ್ಸವದ ಸಂದರ್ಭದಲ್ಲಿ ದೈವವು ನುಡಿಗಟ್ಟಿನ ಮೂಲಕ ಈ ರೀತಿಯಾಗಿ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ:
“ಇದು ನನ್ನ ಮಣ್ಣು, ನನ್ನ ಪೂಜೆಗೆ ಹಾಗೂ ನನ್ನ ಜನರಿಗೆ ತೊಂದರೆ ಕೊಟ್ಟರೆ ಬೆಂಕಿಯ ಮಳೆಯನ್ನು ಸುರಿಸುತ್ತೇನೆ. ನನ್ನ ಮಣ್ಣನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ, ಯಾರೂ ಭಯಪಡಬೇಡಿ. ಒಂದು ವರ್ಷದೊಳಗೆ ನನ್ನ ಶಕ್ತಿಯನ್ನು ತೋರಿಸುತ್ತೇನೆ” ಎಂಬುವುದಾಗಿ ದೈವ ನುಡಿದ ಹಾಗೆ ಅದೇ ರೀತಿ ನಡೆದಿದೆ ಎಂಬ ಮಾತು ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ.
ದೈವದ ಶಕ್ತಿ ಮತ್ತು ಕಾಳಜಿ: ದೊಡ್ಡ ದುರಂತ ತಪ್ಪಿದ ಪವಾಡ
ಸ್ಥಳೀಯರ ನಂಬಿಕೆಯ ಪ್ರಕಾರ, MRPL ಘಟಕದಲ್ಲಿ ಸಂಭವಿಸಿದ ಈ ಅನಿರೀಕ್ಷಿತ ಸ್ಫೋಟವು ಕೇವಲ ಒಂದು ತಾಂತ್ರಿಕ ದೋಷವಲ್ಲ, ಬದಲಾಗಿ ದೈವದ ಮಾತಿನಂತೆ ನಡೆದಿರುವ ಒಂದು ದೈವೀ ಘಟನೆ. ಕಾರ್ಮಿಕರ ಶಿಫ್ಟ್ (Shift) ಬದಲಾವಣೆಯ ಸಮಯದಲ್ಲಿ ಈ ಸ್ಫೋಟ ಸಂಭವಿಸಿರುವುದರಿಂದ ಮತ್ತಷ್ಟು ಹೆಚ್ಚಿನ ಪ್ರಾಣಹಾನಿ ತಪ್ಪಿದೆ. ಇದನ್ನು ಸ್ಥಳೀಯರು ಜುಮಾದಿ ದೈವದ ಕಾರ್ಣಿಕ ಹಾಗೂ ಎಚ್ಚರಿಕೆಯ ರೂಪವೆಂದೇ ಪರಿಗಣಿಸಿದ್ದಾರೆ.
ಘಟನೆ: ಸುರತ್ಕಲ್ MRPL ಕಾರ್ಖಾನೆಯ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಬಾಯ್ಲರ್ ಸ್ಫೋಟ ಮತ್ತು ಭೀಕರ ಅಗ್ನಿ ದುರಂತ.
ಸಾವು-ನೋವು: ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಓರ್ವ ಕಾರ್ಮಿಕ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ.
ದೈವದ ನುಡಿ: ಜುಮಾದಿ ದೈವದ ನೇಮೋತ್ಸವದ ವೇಳೆ ನೀಡಿದ್ದ “ಬೆಂಕಿಯ ಮಳೆ” ಎಚ್ಚರಿಕೆ ಈಗ ನಿಜವಾಗಿದೆ ಎಂಬ ನಂಬಿಕೆ ಸ್ಥಳೀಯರಲ್ಲಿ ದೃಢಪಟ್ಟಿದೆ.
ಅಧಿಕಾರಿಗಳ ಅಸಡ್ಡೆ: SEZ ಹಾಗೂ ಕಂಪನಿ ಅಧಿಕಾರಿಗಳು ದೈವಸ್ಥಾನದ ಪೂಜೆಗೆ ನಿರ್ಬಂಧ ಹೇರಿರುವುದೇ ಈ ದುರ್ಘಟನೆಗೆ ಕಾರಣ ಎಂಬ ಸ್ಥಳೀಯರ ತೀವ್ರ ಆಕ್ರೋಶ.
ತುಳುನಾಡಿನ ಆಚರಣೆಗಳು, ನಂಬಿಕೆಗಳು ಮತ್ತು ದೈವದೇವರ ಶಕ್ತಿಯನ್ನು ಕಡೆಗಣಿಸಿದರೆ ಎಂತಹ ಶಕ್ತಿಶಾಲಿ ಸಂಸ್ಥೆಗಳಿಗೂ ಎಚ್ಚರಿಕೆ ಗಂಟೆ ಕಟ್ಟಿ ಎನ್ನುವುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ ಎಂಬುದು ಕರಾವಳಿಯ ಜನಮಾನಸದಲ್ಲಿ ಬಲವಾಗಿ ಬೇರೂರಿದೆ. “ದೈವದ ನುಡಿ ತಪ್ಪಾಗದು” ಎಂಬ ಸತ್ಯ ಮತ್ತೊಮ್ಮೆ ಇಲ್ಲಿ ಸಾಕ್ಷೀಕೃತಗೊಂಡಿದೆ
accident
ಮಂಗಳೂರು: ಎಂಆರ್‌ಪಿಎಲ್ ಫೇಸ್-3 ಘಟಕದಲ್ಲಿ ಭೀಕರ ಸ್ಫೋಟ; ಒಬ್ಬ ಕಾರ್ಮಿಕ ಸಾವು, ಹಲವರಿಗೆ ಗಾಯ, ಬೆಂಕಿ ಸಂಪೂರ್ಣ ನಿಯಂತ್ರಣ
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳ ಕಟಿಪಲ್ಲೆಯಲ್ಲಿರುವ ಎಂಆರ್‌ಪಿಎಲ್‌ನ (MRPL) 3ನೇ ಹಂತದ (Phase-3) ಕೋಕರ್ ಹೈಡ್ರೋ ಟ್ರೀಟರ್ ಯುನಿಟ್‌ನಲ್ಲಿ (Coker Hydro Treater Unit) ಸಂಭವಿಸಿದ ಭೀಕರ ಸ್ಫೋಟದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು, ಹಲವರು ಗಾಯಗೊಂಡಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ
ನಗರದ ಹೊರವಲಯದ ಬಾಳ ಕಟಿಪಲ್ಲೆ / ಜೋಕಟ್ಟೆ ಬಳಿ ಇರುವ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ 3ನೇ ಹಂತದ CHT (Coker Hydro Treater) ಘಟಕದಲ್ಲಿ ಇಂದು ಮಧ್ಯಾಹ್ನ 12:30ರ ಸುಮಾರಿಗೆ ಭಾರೀ ಸ್ಫೋಟ ಸಂಭವಿಸಿತ್ತು.
ದಿನಾಂಕ 30-09-2026 ರಂದು ಮಧ್ಯಾಹ್ನ 12:15 ರ ಸುಮಾರಿಗೆ ಎಂಆರ್‌ಪಿಎಲ್‌ನ ಫೇಸ್-3 ರಲ್ಲಿರುವ ಕೋಕರ್ ಹೈಡ್ರೋ ಟ್ರೀಟರ್ ಯುನಿಟ್‌ನಲ್ಲಿ ಹಠಾತ್ ಸ್ಪೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಯಂತ್ರೋಪಕರಣಗಳು ಹಾಗೂ ಬಿಡಿಭಾಗಗಳು ಚಿದ್ರಗೊಂಡು ಬೆಂಕಿಯ ಜ್ವಾಲೆಯೊಂದಿಗೆ ಪರಿಸರದಲ್ಲಿ ಆವರಿಸಿದೆ.
ಈ ದುರ್ಘಟನೆಯಲ್ಲಿ ‘K Star Food And Hospitality Services’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಊಟ, ಉಪಹಾರ ಮತ್ತು ನೀರು ಸರಬರಾಜು ಸೇವೆಯಲ್ಲಿ ತೊಡಗಿದ್ದ ರವಿ ಪೂಜಾರಿ ಸೇರಿದಂತೆ ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ, ಜಗಜೀವನ್ ಸಿಂಗ್, ಶರತ್ ಶೆಟ್ಟಿ, ರಾಜೇಶ್ ಪೂಜಾರಿ ಹಾಗೂ ಮನೀಶ್ ಕರ್ಕಡ ಇವರಿಗೆ ಗಾಯಗಳಾಗಿವೆ.

ಓರ್ವ ಮೃತ್ಯು, ಗಂಭೀರ ಗಾಯಗೊಂಡವರು: ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮನೀಶ್ ಕರ್ಕಡ ಅವರು ಗಂಭೀರ ಗಾಯಗಳಿಂದಾಗಿ ಮೃತಪಟ್ಟಿರುತ್ತಾರೆ. ಇನ್ನುಳಿದ ರಾಜೇಶ್ ಪ್ರಸಾದ್ ಹಾಗೂ ಇತರೆ ಕಾರ್ಮಿಕರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿರ್ಲಕ್ಷ್ಯವೇ ಕಾರಣ ಆರೋಪ: ಫೇಸ್-3 ರಲ್ಲಿರುವ ಕೋಕರ್ ಹೈಡ್ರೋ ಟ್ರೀಟರ್ ಯುನಿಟ್‌ನ ಯಂತ್ರೋಪಕರಣಗಳನ್ನು ಯುನಿಟ್‌ನ ಮುಖ್ಯಸ್ಥರು ಮತ್ತು ಎಂಆರ್‌ಪಿಎಲ್ ಸಂಸ್ಥೆಯವರು ಸರಿಯಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದೇ ಈ ದುರ್ಘಟನೆಗೆ ಪ್ರಮುಖ ಕಾರಣI ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ BNS ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.
ಮೃತ ಹಾಗೂ ಗಾಯಾಳುಗಳ ವಿವರ: ಘಟನೆ ನಡೆದ ಸಮಯದಲ್ಲಿ ‘K Star Food And Hospitality Services’ ಸಂಸ್ಥೆಯಡಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸ್ಥಳದಲ್ಲಿದ್ದರು. ಸ್ಫೋಟದಿಂದಾಗಿ ಯಂತ್ರೋಪಕರಣಗಳು ಹಾಗೂ ಬಿಡಿಭಾಗಗಳು ಚಿದ್ರಗೊಂಡು ಬೆಂಕಿಯ ಜ್ವಾಲೆಯೊಂದಿಗೆ ಚಿಮ್ಮಿದ ಪರಿಣಾಮ ರವಿ ಪೂಜಾರಿ, ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ, ಜಗಜೀವನ್ ಸಿಂಗ್, ಶರತ್ ಶೆಟ್ಟಿ, ರಾಜೇಶ್ ಪೂಜಾರಿ ಹಾಗೂ ಮನೀಶ್ ಕರ್ಕಡ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕಾರ್ಮಿಕ ಮನೀಶ್ ಕರ್ಕಡ ಅವರು ಮೃತಪಟ್ಟಿರುತ್ತಾರೆ. ಉಳಿದ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ದಟ್ಟ ಹೊಗೆ, ಕಂಪಿಸಿದ ಸುತ್ತಮುತ್ತಲಿನ ಪ್ರದೇಶ: ಸ್ಫೋಟದ ಬೆನ್ನಲ್ಲೇ ಭಾರೀ ಬೆಂಕಿ ಕಾಣಿಸಿಕೊಂಡು ಆಕಾಶದೆತ್ತರಕ್ಕೆ ದಟ್ಟ ಹೊಗೆ ಆವರಿಸಿತ್ತು. ಸ್ಫೋಟದ ತೀವ್ರತೆಯ ಶಬ್ದಕ್ಕೆ ಜೋಕಟ್ಟೆ ಪಂಚಾಯತ್ ಕಟ್ಟಡ ಸಹಿತ ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯ ಹಲವಾರು ಮನೆಗಳು ಕಂಪಿಸಿದ್ದು, ಬಾಗಿಲು-ಕಿಟಕಿಗಳ ಗಾಜುಗಳಿಗೆ ಹಾನಿಯಾಗಿದೆ. ಈ ಸ್ಫೋಟದ ಸದ್ದು ಮಂಗಳೂರಿನ ಲೇಡಿ ಹಿಲ್ ತನಕವೂ ಕೇಳಿಸಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ನಿರ್ಲಕ್ಷ್ಯವೇ ಕಾರಣ – ಎಫ್‌ಐಆರ್ ದಾಖಲು: ಫೇಸ್-3 ರ CHT ಯುನಿಟ್‌ನ ಯಂತ್ರೋಪಕರಣಗಳನ್ನು ಯುನಿಟ್‌ನ ಮುಖ್ಯಸ್ಥರು ಮತ್ತು ಎಮ್ ಆರ್ ಪಿಎಲ್ ಸಂಸ್ಥೆಯವರು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೇ ಈ ದುರ್ಘಟನೆಗೆ ಕಾರಣವೆಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ BNS ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೃತ ಮನೀಶ್ ಕರ್ಕಡ ಅವರು ಹಳೆಯಂಗಡಿಯ ನಿವಾಸಿಗಳಾದ ಆಲ್ಬರ್ಟ್ ಕರ್ಕಡ ಮತ್ತು ಸುನಿತಾ ಕರ್ಕಡ ದಂಪತಿಯ ಪ್ರೀತಿಯ ಸುಪುತ್ರ ಹಾಗೂ ಅನಿಶ್ ಕರ್ಕಡ ಅವರ ಸಹೋದರನಾಗಿದ್ದರು. ಇವರು ಹಳೆಯಂಗಡಿಯ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್ ಚರ್ಚ್‌ನ ಸಕ್ರಿಯ ಹಾಗೂ ಅತ್ಯಂತ ಪ್ರೀತಿಯ ಯುವ ಸದಸ್ಯರಾಗಿದ್ದರು. ಎಂ.ಆರ್.ಪಿ.ಎಲ್. ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಇಂದು ಮಧ್ಯಾಹ್ನ ಸಂಭವಿಸಿದ ಸ್ಫೋಟದ ಬಳಿಕ ನಾಪತ್ತೆಯಾಗಿದ್ದರು. ತದನಂತರ ಹುಡುಕಾಟ ನಡೆಸಿದಾಗ ಅವರ ಮೃತದೇಹವು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
Educational
ಮಂಗಳೂರು: ಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದ ವೇಳೆ ದುರಂತ; ಬಾಲ್ಕನಿ ತಡೆಗೋಡೆ ಕುಸಿದು ಬಿದ್ದು ಓರ್ವ ಗಂಭೀರ( ಬ್ರೈನ್ ಡೆಡ್), ಐವರಿಗೆ ಗಾಯ
ಮಂಗಳೂರು: ನಗರದ ಎಮ್ಮೆಕೆರೆ ಬಳಿಯ ರಾಮ ಲಕ್ಷ್ಮೀ ನಾರಾಯಣ ಸಭಾಭವನದಲ್ಲಿ (ಕನ್ವೆನ್ಷನ್ ಹಾಲ್) ಆಯೋಜಿಸಲಾಗಿದ್ದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದ ವೇಳೆ ಭೀಕರ ದುರ್ಘಟನೆ ಸಂಭವಿಸಿದೆ. ಸಭಾಭವನದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಜನಸಂದಣಿ ಹೆಚ್ಚಾಗಿತ್ತು. ಈ ವೇಳೆ ಕಾರಿಡಾರ್‌ನಲ್ಲಿ (ಹಜಾರ) ನಿಂತಿದ್ದ ವಿದ್ಯಾರ್ಥಿಗಳು ದಟ್ಟಣೆಯಿಂದಾಗಿ ಅಲ್ಲಿದ್ದ ದುರ್ಬಲ ತಡೆಗೋಡೆಗೆ (ಪಕ್ಕದ ಗೋಡೆಗೆ) ಆತುಕೊಂಡಿದ್ದಾರೆ. ತಡೆಗೋಡೆ ತೂಕವನ್ನು ತಡೆಯಲಾರದೆ ಕುಸಿದುಬಿದ್ದ ಪರಿಣಾಮ, ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಐವರ ಆಸ್ಪತ್ರೆಗೆ ದಾಖಲು, ಓರ್ವ ಚಿಂತಾಜನಕ : ಅವಘಡದಲ್ಲಿ ಗಾಯಗೊಂಡ ಒಟ್ಟು 5 ಜನ ವಿದ್ಯಾರ್ಥಿಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಗಾಯಗೊಂಡಿರುವ ಓರ್ವ ವಿದ್ಯಾರ್ಥಿ ಪ್ರಸ್ತುತ ಬ್ರೈನ್ ಡೆಡ್ (Brain dead) ಸ್ಥಿತಿಯಲ್ಲಿರುವಂತೆ ಕಂಡುಬರುತ್ತಿದೆ” ಎಂದು ತಿಳಿದುಬಂದಿದೆ.

ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ:
ಈ ದುರ್ಘಟನೆಯ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದ್ದು, ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಅಧಿಕ ಜನಸಂದಣಿಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಹಳೆಯ ಹಾಗೂ ಸುರಕ್ಷಿತವಲ್ಲದ ರಚನೆಗಳಲ್ಲಿ ಇಂತಹ ದೊಡ್ಡ ಮಟ್ಟದ ಸಾರ್ವಜನಿಕ ಸಮಾರಂಭಗಳಿಗೆ ಅವಕಾಶ ನೀಡಿದ ಕುರಿತು ಮತ್ತು ಘಟನೆಗೆ ಕಾರಣವಾದ ಸುರಕ್ಷತಾ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪು ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್‌ಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದು, ವಿದ್ಯಾರ್ಥಿ ಮೃತಪಟ್ಟಿರುವುದಾಗಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಗಾಯಗೊಂಡಿರುವ ಓರ್ವ ವಿದ್ಯಾರ್ಥಿ ಪ್ರಸ್ತುತ ಬ್ರೈನ್ ಡೆಡ್ (Brain dead) ಸ್ಥಿತಿಯಲ್ಲಿರುವಂತೆ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ವಿವರಗಳು: ಈ ದುರ್ಘಟನೆಯಲ್ಲಿ ಗಾಯಗೊಂಡು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐವರು ವಿದ್ಯಾರ್ಥಿಗಳ ವಿವರಗಳು ಈ ಕೆಳಗಿನಂತಿವೆ:
1) ಮಹಮ್ಮದ್ ಶಮಾಜ್ (೧೬): ತಂದೆ: ಮಹಮ್ಮದ್ ಇಲಿಯಾಸ್ ಮೊಯಿದಿನಬ್ಬ, ವಿಳಾಸ: ಹಳೆಯಂಗಡಿ, ಮಂಗಳೂರು. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಲಾಗಿದೆ.
2) ಮಹಮ್ಮದ್ ಶನಾನ್ ಅಹಮ್ಮದ್ (೧೮): ತಂದೆ: ಹಬೀಬ್ ಅಹಮ್ಮದ್, ವಿಳಾಸ: ಸೂರಿಂಜೆ, ಮಂಗಳೂರು.
3) ಹನೀಫ್ (೨೩): ತಂದೆ: ಸುಲೈಮಾನ್, ವಿಳಾಸ: ಅಡ್ಯಾರ್, ಮಂಗಳೂರು.
4) ದವೂದ್ ಫರ್ಸಿನ್ ಅಹಮ್ಮದ್ (೧೮): ವಶ/ಪಾಲಕರು: ಫಾತಿಮಾ, ವಿಳಾಸ: ಗಾಂಧಿನಗರ, ಕಾವೂರ್, ಮಂಗಳೂರು.
5) ಮಹಮ್ಮದ್ ಶಾಕೀಲ್ ಹುಸೈನ್ (೧೮): ತಂದೆ: ಮಹಮ್ಮದ್ ಶಾಲಿ, ವಿಳಾಸ: ಕಸಬ ಬೆಂಗ್ರೆ, ಮಂಗಳೂರು.
ಸಭಾಭವನದಲ್ಲಿ ಅಧಿಕ ಜನಸಂದಣಿ ಇದ್ದ ಕಾರಣ, ಕಾರಿಡಾರ್‌ನಲ್ಲಿ ನಿಂತು ಗೋಡೆಗೆ ಆತುಕೊಂಡ ವಿದ್ಯಾರ್ಥಿಗಳ ಭಾರವನ್ನು ತಡೆಯಲಾರದೆ ಈ ದುರ್ಬಲ ಗೋಡೆ ಕುಸಿದುಬಿದ್ದಿದೆ. ಹಳೆಯ ಕಟ್ಟಡಗಳ ಸುರಕ್ಷತೆ ಹಾಗೂ ನಿಯಮಗಳ ಪಾಲನೆ ಬಗ್ಗೆ ಈ ಅವಘಡವು ಗಂಭೀರ ಕಳಕಳಿಯನ್ನು ಹುಟ್ಟುಹಾಕಿದೆ.
ಈ ಘಟನೆಯು ನಗರದ ಹಳೆಯ ಕಟ್ಟಡಗಳ ಸುರಕ್ಷತೆ ಹಾಗೂ ನಿಯಮಗಳ ಪಾಲನೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala3 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala9 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident5 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
