celebration
ಮೈಸೂರು ‘ದಸರಾ ಕಂಬಳ’ಕ್ಕೆ ವಿರೋಧ: ತುಳುನಾಡಿನ ಸಂಪ್ರದಾಯ ಮೀರಿದರೆ ದೈವಕೋಪದ ಎಚ್ಚರಿಕೆ ನೀಡಿದ ದೈವಾರಾಧಕ ತಮ್ಮಣ್ಣ ಶೆಟ್ಟಿ
ಮಂಗಳೂರು: ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಅಕ್ಟೋಬರ್ 18 ಮತ್ತು 19 ರಂದು ಆಯೋಜಿಸಲು ಉದ್ದೇಶಿಸಿರುವ ‘ದಸರಾ ಕಂಬಳ’ ಸ್ಪರ್ಧೆಗೆ ಕರಾವಳಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕರಾವಳಿಯ ಪ್ರಸಿದ್ಧ ದೈವಾರಾಧಕ ತಮ್ಮಣ್ಣ ಶೆಟ್ಟಿ ಅವರು ಈ ಸ್ಪರ್ಧೆಯು ತುಳುನಾಡಿನ ದೈವಾರಾಧನೆ ಹಾಗೂ ಧಾರ್ಮಿಕ ಸಂಪ್ರದಾಯಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮೈಸೂರಿನ ಸಾತಗಳ್ಳಿ ಬಳಿಯ ವಿಟಿಯು (VTU) ಕಾಲೇಜು ಮೈದಾನದಲ್ಲಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಆಯೋಜಿಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಈ ವಿರೋಧಗಳು ಕೇಳಿಬಂದಿವೆ.
ತಮ್ಮಣ್ಣ ಶೆಟ್ಟಿ ಅವರ ಪ್ರಮುಖ ಆಕ್ಷೇಪಗಳು ಹಾಗೂ ಕಾರಣಗಳು:
ಪವಿತ್ರ ಸಂಬಂಧ: ಕರಾವಳಿಯ ಕಂಬಳ ಕ್ರೀಡೆಗೂ ಮತ್ತು ದೈವಾರಾಧನೆಗೂ ಅವಿನಾಭಾವ ಸಂಬಂಧವಿದ್ದು, ಕಂಬಳದ ಗದ್ದೆಗೆ ದೈವ ಸಾನಿಧ್ಯದಷ್ಟೇ ಪವಿತ್ರ ಮಹತ್ವ ನೀಡಲಾಗುತ್ತದೆ.
ಧಾರ್ಮಿಕ ಆಚರಣೆಗಳು: ತುಳುನಾಡಿನಲ್ಲಿ ನವರಾತ್ರಿಯ ಸಮಯವನ್ನು ‘ಮಾರ್ನೆಮಿ’ ಎಂದು ಕರೆಯಲಾಗುತ್ತದೆ. ಈ ಒಂಭತ್ತು ದಿನಗಳಲ್ಲಿ ದೈವಗಳ ವಿಶೇಷ ಪೂಜೆ, ನೇಮೋತ್ಸವಗಳು ಹಾಗೂ ತಂಬಿಲಗಳು ಜರುಗುತ್ತವೆ.
ದೈವ ನಿಯಮದ ಕಟ್ಟುಪಾಡು: ಈ ಪವಿತ್ರ ಅವಧಿಯಲ್ಲಿ ಕಂಬಳದ ಕೋಣಗಳನ್ನು ಬೇರೆ ಊರುಗಳಿಗೆ ಕೊಂಡೊಯ್ಯಬಾರದು ಎಂಬ ದೈವ ನಿಯಮದ ಕಟ್ಟುಪಾಡು ಇದೆ.
ಕೃಷಿ ನಂಬಿಕೆಗಳು: ಗದ್ದೆಗಳಲ್ಲಿ ಭತ್ತದ ಬೆಳೆ ಇರುವುದರಿಂದ ನವರಾತ್ರಿ ಸಮಯದಲ್ಲಿ ಕರಾವಳಿಯಲ್ಲಿ ಕಂಬಳ ಆಯೋಜಿಸಿದ ಇತಿಹಾಸವೇ ಇಲ್ಲ.
ದೈವಕೋಪದ ಎಚ್ಚರಿಕೆ: “ಲಾಭಕ್ಕಾಗಿ ಅಥವಾ ಪ್ರಚಾರಕ್ಕಾಗಿ ತುಳುನಾಡಿನ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಮಾರಾಟ ಮಾಡಬಾರದು. ಸಂಪ್ರದಾಯವನ್ನು ಮೀರಿ ಮೈಸೂರಿನಲ್ಲಿ ಕಂಬಳ ನಡೆಸಿದರೆ ದೈವಕೋಪ ಎದುರಿಸಬೇಕಾಗುತ್ತದೆ” ಎಂದು ತಮ್ಮಣ್ಣ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಈ ವಿವಾದವು ಈಗ ಕರಾವಳಿ ಭಾಗದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಧಾರ್ಮಿಕ ಸಂಪ್ರದಾಯ ಹಾಗೂ ಸಾಂಪ್ರದಾಯಿಕ ಕ್ರೀಡೆಯ ಪ್ರದರ್ಶನದ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ
Bantawala
ಮಂಕುಡೆ-ಕುಡ್ತಮುಗೇರು: ಸಾರ್ವಜನಿಕ ಶ್ರೀ ಗಣೇಶೋತ್ಸವದ 50ನೇ ವರ್ಷದ ‘ಸುವರ್ಣ ಮಹೋತ್ಸವ’ ಹಾಗೂ ಸುವರ್ಣ ಮಂಟಪ ಲೋಕಾರ್ಪಣೆ
ಮಂಕುಡೆ (ಬಂಟ್ವಾಳ): ಮಂಕುಡೆ-ಕುಡ್ತಮುಗೇರು ಪರಿಸರದಲ್ಲಿ 1977ರಲ್ಲಿ ಆರಂಭಗೊಂಡ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಈ ಬಾರಿ 50ನೇ ವರ್ಷದ ‘ಸುವರ್ಣ ಮಹೋತ್ಸವ’ದ ಸಂಭ್ರಮದಲ್ಲಿದ್ದು, ಈ ಸವಿನೆನಪಿನ ಸುಂದರ ‘ಮುಖ ಮಂಟಪ’ದ ಲೋಕಾರ್ಪಣೆ ಹಾಗೂ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 14-09-2026 ರಿಂದ 18-09-2026ರವರೆಗೆ ಅತ್ಯಂತ ವಿಜೃಂಭಣೆಯಿಂದ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದ ಕಲಾ ಮಂಟಪದಲ್ಲಿ ಜರುಗಲಿವೆ.
ದಿನನಿತ್ಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ:
- 13-09-2026 (ಆದಿತ್ಯವಾರ):
- ಅಪರಾಹ್ನ 3.30ಕ್ಕೆ: ವಿಟ್ಲ ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ಕುಡ್ತಮುಗೇರಿನಿಂದ ಬೃಹತ್ ಹಸಿರುವಾಣಿ ಮೆರವಣಿಗೆ ಚಾಲನೆಗೊಳ್ಳಲಿದೆ.
- 14-09-2026 (ಸೋಮವಾರ):
- ಪೂರ್ವಾಹ್ನ 8.00ಕ್ಕೆ: ಶ್ರೀ ಗಣಪತಿ ಹವನ.
- ಪೂರ್ವಾಹ್ನ 9.00ಕ್ಕೆ: ಶ್ರೀ ಗಣೇಶ ಪ್ರತಿಷ್ಠೆ.
- ಪೂರ್ವಾಹ್ನ 9.30 ರಿಂದ: ಭಜನಾ ಕಾರ್ಯಕ್ರಮಗಳು (ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಮಂಕುಡೆ-ಕುಡ್ತಮುಗೇರು ಹಾಗೂ ಶ್ರೀ ಮಹಮ್ಮಾಯಿ ಭಜನಾ ಮಂಡಳಿ, ನಾಗವನ).
- ಮಧ್ಯಾಹ್ನ 12.30ಕ್ಕೆ: ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ.
- ಸಂಜೆ 7.00ಕ್ಕೆ: ಧಾರ್ಮಿಕ ಸಭಾ ಕಾರ್ಯಕ್ರಮ – ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರಿಂದ ಆಶೀರ್ವಚನ.
- ರಾತ್ರಿ 8.30ಕ್ಕೆ: ಶಿವ ಗಣೇಶ ಸಂಗೀತ ನೃತ್ಯ ವಿದ್ಯಾಲಯ ಕಾಡುಮಠ ಹಾಗೂ ಶಿವಮ್ ನೃತ್ಯ ಕಲಾ ಕೇಂದ್ರ ಮಂಜೇಶ್ವರ ಇವರಿಂದ “ನಾದ ನೃತ್ಯ ನಮನ” ಸಾಂಸ್ಕೃತಿಕ ಕಾರ್ಯಕ್ರಮ.
- 15-09-2026 (ಮಂಗಳವಾರ):
- ದಿನಪೂರ್ತಿ: ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ.
- ಮಧ್ಯಾಹ್ನ 12.30 ಹಾಗೂ ಸಂಜೆ 6.30ಕ್ಕೆ: ಮಹಾಪೂಜೆ ಮತ್ತು ಅನ್ನಸಂತರ್ಪಣೆ.
- ರಾತ್ರಿ 7.00ಕ್ಕೆ: ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕು| ಧ್ರೇಿಯಾ ಮಂಕುಡೆ-ನೆಡ್ಯಾಳು ಅವರಿಂದ ಹರಿಕಥೆ.
- ರಾತ್ರಿ 8.30ಕ್ಕೆ: ಗಯಾಪದ ಕಲಾವಿದಿರ್ ಉಬಾರ್ ಅಭಿನಯಿಸುವ ತುಳು ಸಾಮಾಜಿಕ ಹಾಸ್ಯಮಯ ನಾಟಕ “ನಾಗ್ಮೋಣಿಕ್ಯ” ಪ್ರದರ್ಶನ.
- 16-09-2026 (ಬುಧವಾರ):
- ಪೂರ್ವಾಹ್ನ 6.00ರಿಂದ: ವೇದಮೂರ್ತಿ ಶ್ರೀ ಭಾರ್ಗವ ಉಡುಪ ಅವರ ನೇತೃತ್ವದಲ್ಲಿ 108 ಕಾಯಿಗಳ ಗಣಪತಿ ಹವನ.
- ಪೂರ್ವಾಹ್ನ 11.00ಕ್ಕೆ: ಸುವರ್ಣ ಮಹೋತ್ಸವದ ಮುಖ ಮಂಟಪ ಲೋಕಾರ್ಪಣಾ ಸಮಾರಂಭ.
- ಆಶೀರ್ವಚನ: ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು (ಶ್ರೀ ಕ್ಷೇತ್ರ ಒಡಿಯೂರು).
- ಮುಖ್ಯ ಅತಿಥಿಗಳು: ದಕ್ಷಿಣ ಕನ್ನಡ ಲೋಕಸಭಾ ಸಂಸದರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಶಾಸಕರಾದ ಶ್ರೀ ಮಂಜುನಾಥ ಭಂಡಾರಿ, ಶ್ರೀ ಕಿಶೋರ್ ಕುಮಾರ್ ಪುತ್ತೂರು ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
- ರಾತ್ರಿ 7.30ಕ್ಕೆ: ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ “ಲಕ್ಷ್ಮಿ ಸ್ವಯಂವರ – ಶ್ರೀನಿವಾಸ ಕಲ್ಯಾಣ”.
- 17-09-2026 (ಗುರುವಾರ):
- ಪೂರ್ವಾಹ್ನ: ಭಜನಾ ಸಂಕೀರ್ತನೆ ಹಾಗೂ ಮಹಾಪೂಜೆ.
- ರಾತ್ರಿ 7.00ರಿಂದ: ವೇದಮೂರ್ತಿ ಭಾರ್ಗವ ಉಡುಪ ಅವರ ನೇತೃತ್ವದಲ್ಲಿ ಮೂಡಪ್ಪ ಸೇವೆಯ ಧಾರ್ಮಿಕ ವಿಧಿವಿಧಾನಗಳು ಹಾಗೂ ಮಹಾಪೂಜೆ.
- ರಾತ್ರಿ 8.30ರಿಂದ: ಕಲಾವಿದೆರ್ ಉಡಲ್ ಜೋಡುಕಲ್ಲು ಅಭಿನಯಿಸುವ ತುಳು ಹಾಸ್ಯಮಯ ನಾಟಕ “ಡೆನ್ನ ಡೆನ್ನಾನ” ಪ್ರದರ್ಶನ.
- 18-09-2026 (ಶುಕ್ರವಾರ – ಸಮಾರೋಪ ಸಮಾರಂಭ):
- ಪೂರ್ವಾಹ್ನ 8.00ಕ್ಕೆ: ಮೂಡಪ್ಪ ಸೇವೆಯ ಪ್ರಸಾದ ವಿತರಣೆ.
- ಪೂರ್ವಾಹ್ನ 10.00ಕ್ಕೆ: ಮಂಕುಡೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
- ಪೂರ್ವಾಹ್ನ 11.30ಕ್ಕೆ: ಸಮಾರೋಪ ಸಮಾರಂಭ – ಒಡಿಯೂರು ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಶ್ರೀ ಮಾತಾನಂದಮಯಿ ಅವರ ಸಾನ್ನಿಧ್ಯದಲ್ಲಿ ನೆರವೇರಲಿದೆ.
- ಅಪರಾಹ್ನ 3.00ರಿಂದ: ಶ್ರೀ ದೇವರ ದಿಗ್ವಿಜಯ ಮೆರವಣಿಗೆ ಹಾಗೂ ಜಲಸ್ತಂಭನ. ಮೆರವಣಿಗೆಯು ಮಂಕುಡೆ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದಿಂದ ಹೊರಟು ಕಾಡುಮಠ, ಸಾಲೆತ್ತೂರಿನವರೆಗೆ ಸಾಗಲಿದೆ.
ಈ ಸಮಸ್ತ ಸುಖ-ಸಂತೋಷದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸುವರ್ಣ ಮಹೋತ್ಸವ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿ, ಹಳೆ ವಿದ್ಯಾರ್ಥಿ ಯುವಕ ಮಂಡಲ ಹಾಗೂ ಭಜನಾ ಮಂದಿರದ ಪದಾಧಿಕಾರಿಗಳು ವಿನಂತಿಸಿದ್ದಾರೆ.
celebration
ವಿಟ್ಲ: ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಉದ್ಘಾಟನೆ
ವಿಟ್ಲ: ಬೆಳೆಯುತ್ತಿರುವ ವಿಟ್ಲಕ್ಕೆ ಇಂತಹ ಸಂಸ್ಥೆಯ ಅಗತ್ಯ ಅತೀ ಇತ್ತು. ಸಂಸ್ಥೆ ಬೆಳೆಯಲು ಶ್ರಮ ಹಾಗೂ ಪ್ರಾಮಾಣಿಕತೆ ಅಗತ್ಯ. ಪ್ರಾಮಾಣಿಕತೆಯಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ. ಈಗಾಗಲೇ ನೇರಳಕಟ್ಟೆಯಲ್ಲಿ ಸಂಸ್ಥೆ ಸ್ಥಾಪಿಸಿ ಯಶಸ್ವಿಯಾಗಿರುವ ಭಾರತ್ ಗ್ರೂಪ್ ಸಂಸ್ಥೆ, ವಿಟ್ಲದಲ್ಲೂ ಅದೇ ರೀತಿ ಯಶಸ್ಸು ಕಾಣಲಿ ಎಂದು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟು ಶುಭಹಾರೈಸಿದರು.
ಅವರು ನೇರಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ‘ಭಾರತ್ ವಹಿಕಲ್ ಬಜಾರ್’ನ ಸಹಸಂಸ್ಥೆಯಾಗಿ ವಿಟ್ಲ ಮೇಗಿನಪೇಟೆಯಲ್ಲಿ ನೂತನವಾಗಿ ಆರಂಭಗೊಂಡ ‘ಭಾರತ್ ಡಿಜಿಟಲ್ ಸೇವಾ ಕೇಂದ್ರ’ ಹಾಗೂ ‘ವಾಯು ಮಾಲಿನ್ಯ ತಪಾಸಣಾ ಕೇಂದ್ರ’ವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಡಾಜೆ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಜ್ ದಾರಿಮಿ, “ಇಂಡಿಯಾವನ್ನು ಡಿಜಿಟಲ್ ಮಾಡಲು ಸರಕಾರ ಪ್ರಯತ್ನಿಸುತ್ತಿದೆ. ಡಿಜಿಟಲ್ ಇಂಡಿಯಾ ದೇಶದ ಬೆಳವಣಿಗೆಯ ಪ್ರಮುಖ ಭಾಗವಾಗಿದ್ದು, ಈ ನಿಟ್ಟಿನಲ್ಲಿ ಇಂತಹ ಸಂಸ್ಥೆಗಳು ಅತ್ಯಗತ್ಯ. ಸೇವೆ ಎಂದರೆ ಅದು ವಿಶ್ವಾಸದಿಂದ ಕೂಡಿರಬೇಕು. ಒಮ್ಮೆ ಬಂದ ಗ್ರಾಹಕರು ಮತ್ತೊಮ್ಮೆ ಬರುವಂತೆ ಉತ್ತಮ ಸೇವೆ ನೀಡಬೇಕು. ಜಾತಿ-ಮತ ಮರೆತು ಸೇವೆ ನೀಡುವ ಕೆಲಸ ನಮ್ಮದಾಗಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಗ್ರೂಪ್‌ನ ಪಾಲುದಾರರಾದ ಹರೀಶ್ ಎಂ. ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಟ್ಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ, ಹೊರೈಝನ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಅಝೀಝ್ ಸನ, ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಆರಿಸ್ ಭಾಖವಿ, ಸಾಮಾಜಿಕ ಮುಖಂಡ ಶಾಕೀರ್ ಅಳಕೆಮಜಲು, ಐಕ್ಯ ವೇದಿಕೆ ಅಧ್ಯಕ್ಷ ಹನೀಫ್ ಬಗ್ಗುಮೂಲೆ, ವೈ ಫ್ರೆಂಡ್ಸ್‌ನ ಸಿದ್ದಿಕ್ ಸೂರ್ಯ ಹಾಗೂ ಪಂತಡ್ಕ ಮದರಸದ ಅಧ್ಯಾಪಕರಾದ ಜಾಫರ್ ಸಾದಿಕ್ ಪೈಝಿ ಸೇರಿದಂತೆ ಹಲವು ಪ್ರಮುಖರು ಆಗಮಿಸಿ ಶುಭಹಾರೈಸಿದರು.
ಪತ್ರಕರ್ತ ಲತೀಪ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಭಾರತ್ ಧನ್ಯವಾದ ಸಮರ್ಪಿಸಿದರು.
ಎಲ್ಲವೂ ಒಂದೇ ಸೂರಿನಲ್ಲಿ: ಈ ನೂತನ ಸಂಸ್ಥೆಯಲ್ಲಿ ಎಲ್ಲಾ ವಿಧದ ಆನ್‌ಲೈನ್ ಸೇವೆಗಳು, ವಾಹನಗಳ ವಾಯುಮಾಲಿನ್ಯ ತಪಾಸಣೆ (Pollution Test), ವಾಹನ ಇನ್ಶೂರೆನ್ಸ್ ಹಾಗೂ ಬಸ್, ವಿಮಾನ ಮತ್ತು ರೈಲು ಟಿಕೆಟ್‌ಗಳ ಬುಕಿಂಗ್ ಸೇವೆಗಳು ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ 8951271449, 6360943710 ಸಂಪರ್ಕಿಸಬಹುದಾಗಿದೆ.
ವಿಶೇಷ ಕೊಡುಗೆ – ಉಚಿತ ಟೀ-ಶರ್ಟ್: ಸಂಸ್ಥೆಯ ಶುಭಾರಂಭದ ಪ್ರಯುಕ್ತ ಸೆಪ್ಟೆಂಬರ್ 3ರಿಂದ ಸೆಪ್ಟೆಂಬರ್ 5ರ ವರೆಗೆ ಸಂಸ್ಥೆಯಲ್ಲಿ ವಾಹನಗಳ ಇನ್ಶೂರೆನ್ಸ್ ಅಥವಾ ವಾಯುಮಾಲಿನ್ಯ ತಪಾಸಣೆ (PUC) ಮಾಡಿಸುವ ಗ್ರಾಹಕರಿಗೆ ಉಚಿತವಾಗಿ ಟೀ-ಶರ್ಟ್ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
celebration
ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ
ವಿಟ್ಲ: “ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಉನ್ನತ ತತ್ವದೊಂದಿಗೆ ಹಿಂದುಳಿದ ಹಾಗೂ ಶೋಷಿತ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಮಾನವತಾವಾದಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸದೆ, ಅವರ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಮತ್ತು ಸಾರ್ಥಕತೆ ಸಿಗುತ್ತದೆ” ಎಂದು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಡಾ. ಕೆ. ಬಿ. ರಾಜಾರಾಂ ಹೇಳಿದರು.
ಸೋಮವಾರ (ಆಗಸ್ಟ್ 31) ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

“ಸಮಾಜ ಪರಿವರ್ತನೆಯ ಹರಿಕಾರರಾಗಿದ್ದ ನಾರಾಯಣ ಗುರುಗಳು ಎಂದಿಗೂ ಸಂಘರ್ಷದ ಹಾದಿ ತುಳಿದವರಲ್ಲ. ಅವರ ಆದರ್ಶಗಳ ಅಡಿಯಲ್ಲಿ ಸತ್‌ಚಿಂತನೆ ನಡೆಸುತ್ತಾ, ಮೌಲ್ಯಾಧಾರಿತ ಶಿಕ್ಷಣವನ್ನು ಪಡೆದು ಮಾನವೀಯ ಮೌಲ್ಯಗಳನ್ನು ರಕ್ಷಿಸುವ ಪ್ರತಿಯೊಂದು ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಿದೆ” ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಎಂ. ಎಸ್. ಮಹಮ್ಮದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ ವಿಟ್ಲ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ ಗುರ್ಜಿನಡ್ಕ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ರೈ ಪೆರ್ನೆ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುಲ್ ರಹಿಮಾನ್, ಹಸೈನಾರ್ ನೆಲ್ಲಿಗುಡ್ಡೆ, ಪದ್ಮಿನಿ, ಸುನಿತಾ ಹಾಗೂ ಹಾನೆಸ್ಟ್ ಇಕ್ಬಾಲ್ ಉಪಸ್ಥಿತರಿದ್ದರು.
ಅಲ್ಲದೆ, ಮಾಣಿಲ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಪ್ರಮುಖರಾದ ವಿ. ಕೆ. ಹಂಸ, ನಾಸೀರ್ ಕೋಲ್ಪೆ, ಅಬ್ಬು, ಎಲ್ಯಣ ಪೂಜಾರಿ, ರಾಮಣ್ಣ ಪಿಲಿಂಜ, ಚೇತನ್ ಕಂಬಳದಡ್ಡ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಯೋಜನೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಮೋಹನ ಗುರ್ಜಿನಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala3 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala9 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident5 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
