Connect with us

crime

ಬಂಟ್ವಾಳ: ವಿಟ್ಲ ಅರಮನೆ ರಸ್ತೆಯಲ್ಲಿ ದೇವರು ಹೆಸರಿನ ಜಾಗದಲ್ಲಿ ಅಕ್ರಮ ಕಟ್ಟಡ! ಅಧಿಕಾರಿಗಳ ಮೌನದ ವಿರುದ್ಧ 9 ತಿಂಗಳ ಹೋರಾಟ ಅಂತಿಮ ಘಟ್ಟಕ್ಕೆ

Published

on

ದೇವಸ್ಥಾನಕ್ಕೆ ಸೇರಿದ ಪಹಣಿ ಜಾಗದಲ್ಲಿ ಪಂಚಾಯತ್ ಅನುಮತಿ ಇಲ್ಲದೆ ಕಟ್ಟಡ, ಹೈಕೋರ್ಟ್ ನಲ್ಲಿ ದಾವೆ ಇದ್ದರೂ ಕಾಮಗಾರಿ ಮುಂದುವರಿಕೆ ಆರೋಪ – ನ್ಯಾಯ ಸಿಗದಿದ್ದರೆ ಪಟ್ಟಣ ಪಂಚಾಯತ್ ಎದುರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿದ್ಧತೆ

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಅರಮನೆ ರಸ್ತೆ ಅಂಚಿನಲ್ಲಿರುವ, ಅರೇಖಾನ ಗುತ್ಯಮ್ಮ ದೇವರು ಹೆಸರಿನ ಪಹಣಿಯ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದರ ವಿರುದ್ಧ ಮತ್ತು ತೆರೆಮರೆಯಲ್ಲಿ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಸಾಮಾಜಿಕ ಹೋರಾಟಗಾರರೋರ್ವರು ನಡೆಸುತ್ತಿರುವ ಕಾನೂನು ಹೋರಾಟ ಇದೀಗ ಅಂತಿಮ ಘಟ್ಟ ತಲುಪಿದೆ.

ವಿವಾದಿತ ಜಾಗದ ಸರ್ವೆ ನಂಬರ್ 426/8, ವಿಸ್ತೀರ್ಣ 0.97 ಎಕ್ರೆ. ಈ ಜಾಗವು ಸ್ಥಳೀಯ ಭಗವತೀ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವಾಗಿದ್ದು, ಈ ಜಮೀನಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ಈಗಲೂ ದಾವೆ ಬಾಕಿ ಇದೆ. (RSA NO 1879/21). ಹೀಗಿದ್ದರೂ ಇಲ್ಲಿ ಪಟ್ಟಣ ಪಂಚಾಯತ್ ನ ಯಾವುದೇ ಪೂರ್ವಾನುಮತಿ ಇಲ್ಲದೆ ಕಟ್ಟಡ ಮೇಲೆದ್ದಿದೆ ಎಂಬುದು ಗಂಭೀರ ಆರೋಪ.

ಘಟನೆಯ ಹಿನ್ನೆಲೆ: 12 ವರ್ಷದ ಬಾಡಿಗೆದಾರ ಬೀದಿಪಾಲು

ಈ ವಿವಾದಿತ 0.97 ಎಕ್ರೆ ಜಾಗವನ್ನು ಕಬಳಿಸುವ ಸಂಚು ರೂಪಿಸಲಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಈ ಜಾಗದಲ್ಲಿ ಈ ಹಿಂದೆ ಇದ್ದ ಹಳೆಯ ಅಂಗಡಿ ಸೆಡ್ ಗಳಲ್ಲಿ ಕಳೆದ 12 ವರ್ಷಗಳಿಂದ ವೀರಕಂಭ ಗ್ರಾಮದ ಮಂಗಿಲಪದವು ನಿವಾಸಿ ಅಬ್ದುಲ್ ಹಕೀಂ ಅವರು ದಿನಕ್ಕೆ 400 ರೂ. ಬಾಡಿಗೆ ನೀಡುತ್ತಾ ತರಕಾರಿ ಅಂಗಡಿ ನಡೆಸುತ್ತಿದ್ದರು. ಬಾಡಿಗೆಯನ್ನು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಪಿಗ್ಮಿ ಮೂಲಕ ಪಾವತಿಸುತ್ತಿದ್ದರು.

ಇತ್ತೀಚೆಗೆ ಮಾಲೀಕರೆಂದು ಹೇಳಿಕೊಂಡು ಬಂದವರು ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಟ್ಟಿದ್ದಾರೆ. ಆಗ ಹಕೀಂ ಅವರು ಬಾಡಿಗೆ ಕರಾರು ಪತ್ರಕ್ಕಾಗಿ ಜಾಗದ ಮೂಲ ದಾಖಲೆಯನ್ನು ಕೇಳಿದ್ದಾರೆ. ದಾಖಲೆ ನೀಡುವಲ್ಲಿ ತಡಕಾಡಿದಾಗಲೇ ಈ ಜಾಗವು ಅವರು ಬಾಡಿಗೆ ಕೊಡುತ್ತಿದ್ದವರಿಗೆ ಸೇರಿದ್ದಲ್ಲ, ಅದು ಅರೇಖಾನ ಗುತ್ಯಮ್ಮ ದೇವರು ಹೆಸರಿನಲ್ಲಿದೆ ಮತ್ತು ವಿವಾದಿತ ಜಾಗ ಎಂಬ ಸತ್ಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಪ್ರಶ್ನಿಸಿದ ಕಾರಣಕ್ಕೆ ಹಕೀಂ ಅವರಿಗೆ ಸಮರ್ಪಕ ಉತ್ತರ ನೀಡದೆ, “ಮುಂದೆ ನಿನಗೆ ಬಾಡಿಗೆಗೆ ಜಾಗ ನೀಡುವುದೇ ಇಲ್ಲ” ಎಂದು ಹೇಳಿ ಅವರನ್ನು ಅಂಗಡಿ ಸಹಿತ ಬೀದಿಪಾಲು ಮಾಡಲಾಗಿದೆ ಎಂದು ದೂರಲಾಗಿದೆ.

ರಾತ್ರೋರಾತ್ರಿ ಬೀಗ ಒಡೆದು 4 ಲಕ್ಷ ನಷ್ಟ

ತನ್ನ ಅಂಗಡಿಯ ಸಾಮಾನುಗಳನ್ನು ರಾತ್ರೋರಾತ್ರಿ ಹೊರಗೆ ಎಸೆದಿರುವ ಬಗ್ಗೆ ಹಕೀಂ ಅವರು ದಿನಾಂಕ 11.03.2026 ರಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಆರೋಪಿಗಳು ಅವರು ತಮ್ಮ ಜನರೊಂದಿಗೆ ಸೇರಿ ಅಂಗಡಿಯ ಬೀಗ ಒಡೆದು ಬೇರೆ ಬೀಗ ಹಾಕಿ, ಒಳಗಿದ್ದ 3 ಫ್ರಿಡ್ಜ್, ತಂಪು ಪಾನೀಯ ಬಾಟಲ್ ಗಳು, ತರಕಾರಿ, ಹಣ್ಣುಗಳನ್ನು ಹೊರಗೆ ಎಸೆದು, ಸಿಸಿ ಕ್ಯಾಮೆರಾವನ್ನು ಧ್ವಂಸ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ಸುಮಾರು 4 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ದೂರಿನ ಬಗ್ಗೆ ಇದುವರೆಗೆ ಯಾವುದೇ FIR ದಾಖಲಾಗಿಲ್ಲ ಎಂಬುದು ಹೋರಾಟಕ್ಕೆ ಕಾರಣವಾಗಿದೆ.

ನೋಟಿಸ್ ಗೆ ಕ್ಯಾರೇ ಎನ್ನದ ಕಟ್ಟಡ ಮಾಲೀಕರು

ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗದಿದ್ದಾಗ ಹಕೀಂ ಅವರು ದಾಖಲೆಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಈ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ, ಅಳತೆ ಕಾರ್ಯ ಅಥವಾ ಕನ್ವರ್ಷನ್ ಮಾಡಲು ಸಾಧ್ಯವಿಲ್ಲ ಎಂಬುವುದನ್ನು ಸಂಬಂಧಪಟ್ಟ ಇಲಾಖೆಗಳಿಂದ ಆಧಾರ ಸಹಿತ ದಾಖಲೆ ಪಡೆದಿದ್ದಾರೆ. ನಂತರ ಅವರು ವಿಟ್ಲ ಪಟ್ಟಣ ಪಂಚಾಯತ್ ಗೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ದೂರು ಅರ್ಜಿ ಸಲ್ಲಿಸಿದ್ದಾರೆ.

ದೂರನ್ನು ಪರಿಶೀಲಿಸಿದ ಪಟ್ಟಣ ಪಂಚಾಯತ್, ಎದಿರುದಾರರಾದ ಹಾರಿಸ್ ಅವರಿಗೆ ದಿನಾಂಕ 05.05.2026 ರಂದು ನೋಟಿಸ್ ಜಾರಿ ಮಾಡಿ, ವಿಟ್ಲ ಕಾಸರಗೋಡು ರಸ್ತೆ ಬದಿಯ ಶ್ರೀ ವಿನಾಯಕ ಹೋಟೆಲ್ ಹತ್ತಿರದ ಕಟ್ಟಡವನ್ನು ಪೂರ್ವಾನುಮತಿ ಪಡೆಯದೆ ಕಾಮಗಾರಿ ಮಾಡುತ್ತಿರುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆದೇಶಿಸಿತ್ತು.

ಆದರೆ ಎದಿರುದಾರರು ಯಾವುದೇ ಕಾನೂನು ಪ್ರಕ್ರಿಯೆಗೆ ತಲೆಬಾಗದೆ ಕಾಮಗಾರಿಯನ್ನು ಸ್ಥಗಿತಗೊಳಿಸದೆ, ಹಳೆಯ ಕಟ್ಟಡ ದುರಸ್ತಿ ಹೆಸರಲ್ಲಿ ಹೊಸ ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸಿ ಶೆಟರ್ ಅಳವಡಿಕೆ ಕೂಡ ಮಾಡಿದ್ದಾರೆ.

ಜಿಲ್ಲಾಧಿಕಾರಿ ಮೆಟ್ಟಿಲೇರಿದ ಪ್ರಕರಣ

ಪಂಚಾಯತ್ ನೋಟಿಸ್ ಉಲ್ಲಂಘನೆಯಾದ ನಂತರ ಹಕೀಂ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಮಂಗಳೂರು, ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು ಯೋಜನಾ ಪ್ರಾಧಿಕಾರ ಪುತ್ತೂರು ಇವರಿಗೆ ಲಿಖಿತ ದೂರು ನೀಡಿದ್ದಾರೆ. ಆದರೂ ಸ್ಥಳದಲ್ಲಿ ಕಟ್ಟಡ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ತಮಗೆ ಮೋಸ ವಂಚನೆ ಎಸಗಿದವರ ವಿರುದ್ಧ ಕಾನೂನು ಸಮರಕ್ಕೆ ಹಕೀಂ ಸಿದ್ಧತೆ ನಡೆಸಿದ್ದಾರೆ.

ಹೋರಾಟದ ಮುಂದಿನ ಹೆಜ್ಜೆ: ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಕಳೆದ 9 ತಿಂಗಳಿನಿಂದ ಕಾನೂನಿನ ಚೌಕಟ್ಟಿನೊಳಗೆ ಹೋರಾಟ ನಡೆಸುತ್ತಿರುವ ಹಕೀಂ ಅವರಿಗೆ ಇದುವರೆಗೆ ನ್ಯಾಯ ಸಿಕ್ಕಿಲ್ಲ. ಅಕ್ರಮ ಕಟ್ಟಡ ನಿರ್ಮಾಣ ಪೂರ್ಣಗೊಂಡು ವ್ಯಾಪಾರ ಆರಂಭಕ್ಕೆ ಸಿದ್ಧತೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಮುಂದೆ ನ್ಯಾಯ ಸಿಗದಿದ್ದಲ್ಲಿ, ಈ ದೇಶದ ಸಂವಿಧಾನದ ಆಶಯದಂತೆ ವಿಟ್ಲ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿ ನ್ಯಾಯ ಪಡೆಯುವುದು ತಮ್ಮ ಕೊನೆಯ ಅಸ್ತ್ರ ಎಂದು ಹೋರಾಟಗಾರರು ತಿಳಿಸಿದ್ದಾರೆ.

ದೇವರು ಹೆಸರಿನಲ್ಲಿರುವ ವಿವಾದಿತ ಜಾಗದಲ್ಲಿ, ಹೈಕೋರ್ಟ್ ನಲ್ಲಿ ಕೇಸ್ ಇರುವಾಗಲೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದ್ದು ಹೇಗೆ? ಪಂಚಾಯತ್ ನೋಟಿಸ್ ನಂತರವೂ ಕಾಮಗಾರಿ ನಡೆಯಲು ಅಧಿಕಾರಿಗಳ ಮೌನವೇ ಕಾರಣವೇ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಪುತ್ತೂರು: ಅಕ್ರಮ ಗೋಸಾಗಾಟ ಪ್ರಕರಣ – ಆರೋಪಿತನ ಮನೆ ಹಾಗೂ ಕೊಟ್ಟಿಗೆ ಜಪ್ತಿ!

Published

on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಜೂರುಪಂಜ ದೇವಸ್ಯ ಬಳಿ ಅಕ್ಟೋಬರ್ 5 ರಂದು ಬೆಳಕಿಗೆ ಬಂದಿದ್ದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಪ್ರಮುಖ ಆರೋಪಿತನಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆಯನ್ನು ನಿಯಮಾನುಸಾರ ಜಪ್ತಿ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ:

ದಿನಾಂಕ 05.10.2026 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಕುಂಜೂರುಪಂಜ ದೇವಸ್ಯ ಬಳಿಯಿಂದ ಬುಳೇರಿಕಟ್ಟೆ ಮಾರ್ಗವಾಗಿ ಕೇರಳಕ್ಕೆ ಜಾನುವಾರುಗಳನ್ನು ಅಕ್ರಮವಾಗಿ ಹಾಗೂ ಅತ್ಯಂತ ಕ್ರೂರ ರೀತಿಯಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 11 ಗೋವುಗಳನ್ನು ರಕ್ಷಿಸಿದ್ದರು.

ವಾಹನದಲ್ಲಿ ಗೋವುಗಳ ಕಾಲುಗಳನ್ನು ಹಗ್ಗದಿಂದ ಬಿಗಿದು, ಯಾವುದೇ ಮುಕ್ತ ಅವಕಾಶವಿಲ್ಲದೆ ಅತ್ಯಂತ ಹಿಂಸಾತ್ಮಕ ಮತ್ತು ಅಮಾನವೀಯ ರೀತಿಯಲ್ಲಿ ಜಾನುವಾರುಗಳನ್ನು ತುರುಕಿಸಿ ಸಾಗಿಸಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಪೊಲೀಸರು ವಾಹನವನ್ನು ಅಡ್ಡಗಟ್ಟುತ್ತಿದ್ದಂತೆ, ಕತ್ತಲಲ್ಲಿ ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸದ್ರಿ ಜಾನುವಾರುಗಳನ್ನು ಅಗತ್ಯ ಪರವಾನಿಗೆ ಇಲ್ಲದೇ ಮಾರಾಟ ಮಾಡಿದ ಪುತ್ತೂರು ಆರ್ಯಾಪು ನಿವಾಸಿ ಶಿವಪ್ರಸಾದ್ (52) ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು.

ಕಾನೂನು ಕ್ರಮ – ಮನೆ ಮತ್ತು ಕೊಟ್ಟಿಗೆ ಜಪ್ತಿ:

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಅ.ಕ್ರ: 125/2026 ರ ಈ ಪ್ರಕರಣದಲ್ಲಿ, ತನಿಖೆ ಮುಂದುವರೆಸುತ್ತಾ ಪೊಲೀಸರು ಕಠಿಣ ಹೆಜ್ಜೆ ಇಟ್ಟಿದ್ದಾರೆ. ತನ್ನ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳನ್ನು ಪಡೆಯದೇ ಅಕ್ರಮವಾಗಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ, ಪ್ರಮುಖ ಆರೋಪಿತ ಶಿವಪ್ರಸಾದ್ ರವರಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಅಧಿಕಾರಿಗಳು ದಿನಾಂಕ: 08.10.2026 ರಂದು ನಿಯಮಾನುಸಾರ ಜಪ್ತಿ ಮಾಡಿಕೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರ ತನಿಖೆ ತೀವ್ರಗೊಂಡಿದೆ.

Continue Reading

crime

ನಾನಾ ಪಾಟೇಕರ್ ಸಾವಿನಲ್ಲಿ ಬಿಗ್ ಟ್ವಿಸ್ಟ್: ಅಸಹಜ ಸಾವು (UD) ಪ್ರಕರಣ ದಾಖಲು, ತನಿಖೆ ಆರಂಭ!

Published

on

ಭಾರತೀಯ ಚಿತ್ರರಂಗದ ಪ್ರತಿಭಾವಂತ ಹಿರಿಯ ನಟ, ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಾನಾ ಪಾಟೇಕರ್ (75) ಅವರ ಹಠಾತ್ ನಿಧನವು ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟುಮಾಡಿದೆ. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿಯಲಾಗಿತ್ತು. ಆದರೆ, ಅವರ ಸಾವಿನ ಬಳಿಕ ಗೋವಾ ಪೊಲೀಸರು ನೀಡಿರುವ ಒಂದು ಹೆಜ್ಜೆಯು ಈ ಸಾವಿನ ಸುತ್ತ ಹೊಸ ಅನುಮಾನಗಳಿಗೆ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ.

ಪೊಲೀಸರಿಂದ ಯುಡಿ (UD) ಕೇಸ್ ದಾಖಲು:

ನಾನಾ ಪಾಟೇಕರ್ ಅವರ ಸಾವು ಸಹಜವಾದುದಲ್ಲ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪಣಜಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194ರ ಅಡಿಯಲ್ಲಿ ಅಸ್ವಾಭಾವಿಕ ಸಾವು (Unnatural Death – UD) ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ PSI ನಿತಿನ್ ನಾಯಕ್ ನೇತೃತ್ವದಲ್ಲಿ ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಎಎನ್‌ಐ ವರದಿ ಮಾಡಿದೆ.

ಪ್ರಕರಣ ದಾಖಲಿಸಿದ್ದು ಯಾಕೆ? (ಅಸಲಿ ಕಾರಣ):

ಇದು ಯಾವುದೇ ಕ್ರಿಮಿನಲ್ ಹಿನ್ನೆಲೆಯ ಪ್ರಕರಣವಲ್ಲ ಬದಲಿಗೆ ಇದೊಂದು ತನಿಖಾ ಪ್ರಕ್ರಿಯೆಯ ಕಾನೂನು ಕ್ರಮವಷ್ಟೇ ಎಂದು ಮೂಲಗಳು ತಿಳಿಸಿವೆ. ಹಿರಿಯ ನಟ ನಾನಾ ಪಾಟೇಕರ್ ಅವರು ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಥವಾ ಆಸ್ಪತ್ರೆಗೆ ತಲುಪಿದಾಗ ಮೃತಪಟ್ಟಿದ್ದಾರೆ.

ಯಾವುದೇ ವ್ಯಕ್ತಿ ಮನೆಯಲ್ಲಿ ಒಂಟಿಯಾಗಿರುವಾಗ ಅಥವಾ ಅನಿರೀಕ್ಷಿತವಾಗಿ ಸಾವನ್ನಪ್ಪಿದಾಗ, ಭವಿಷ್ಯದಲ್ಲಿ ಯಾವುದೇ ಕಾನೂನು ತೊಡಕುಗಳು ಅಥವಾ ಅನುಮಾನಗಳು ಬಾರದಂತೆ ಎಚ್ಚರಿಕೆ ವಹಿಸಲು ಪೊಲೀಸರು ಇಂತಹ ಸಂದರ್ಭಗಳಲ್ಲಿ ಮೆಡಿಕೋ-ಲೀಗಲ್ ಕೇಸ್ (MLC) ಅಥವಾ ಯುಡಿ (UD) ಪ್ರಕರಣವನ್ನು ದಾಖಲಿಸುವುದು ವಾಡಿಕೆ. ಮಣಿಪಾಲ್ ಆಸ್ಪತ್ರೆಯಿಂದ ಸಲ್ಲಿಕೆಯಾದ ವರದಿಯ ಆಧಾರದ ಮೇರೆಗೆ ಗೋವಾ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಮಣಿಪಾಲ್ ಆಸ್ಪತ್ರೆಯ ವೈದ್ಯರ ಸ್ಪಷ್ಟನೆ:

ಗೋವಾದ ಬಂಬೋಲಿಮ್‌ನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ನಾನಾ ಪಾಟೇಕರ್ ಅವರನ್ನು ಕರೆತಂದಾಗ ನಡೆದ ಘಟನೆಗಳ ಬಗ್ಗೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ತೀವ್ರವಾದ ಹೃದಯಾಘಾತದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ತರಲಾಗಿತ್ತು. ವೈದ್ಯಕೀಯ ತಂಡವು ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಸತತವಾಗಿ ಸಿಪಿಆರ್ (CPR) ನೀಡಿ ಜೀವ ಉಳಿಸಲು ಹರಸಾಹಸ ಪಟ್ಟಿತಾದರೂ, ದುರದೃಷ್ಟವಶಾತ್ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ (GMC) ರವಾನಿಸಲಾಗಿದ್ದು, ಅಂತಿಮ ವಿಧಿವಿಧಾನಗಳನ್ನು ಪುಣೆಯ ದೋಂಜೆ ಗ್ರಾಮದಲ್ಲಿರುವ ಅವರ ತೋಟದ ಮನೆಯಲ್ಲಿ ಪೂರ್ಣಗೊಳಿಸಲಾಗಿದೆ.

Continue Reading

arrest

ಮಂಗಳೂರು: ಕೋರಿಯರ್ ಮೂಲಕ ಎಂಡಿಎಂಎ ಸಾಗಾಟ; ₹1.58 ಕೋಟಿ ಮೌಲ್ಯದ ಮಾದಕವಸ್ತು ವಶ, ಮೂವರ ಬಂಧನ!

Published

on

ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲು ಸಂಚು ರೂಪಿಸಿದ್ದ ದೊಡ್ಡ ಜಾಲವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಉಳ್ಳಾಲ ತಾಲೂಕಿನ ಕುಂಪಲದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ₹1.58 ಕೋಟಿಗೂ ಅಧಿಕ ಮೌಲ್ಯದ ಬೃಹತ್ ಪ್ರಮಾಣದ ಎಂಡಿಎಂಎ (MDMA) ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯ ವಿವರ:

ಮಂಗಳೂರು ನಗರದಲ್ಲಿ ಸಾರ್ವಜನಿಕರನ್ನು, ವಿಶೇಷವಾಗಿ ಯುವ ಜನತೆಯನ್ನು ಗುರಿಯಾಗಿಸಿಕೊಂಡು ನಿಷೇಧಿತ ಎಂಡಿಎಂಎ ಮಾದಕವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಅಕ್ಟೋಬರ್ 08, 2026ರ ರಾತ್ರಿ 10:00 ಗಂಟೆಗೆ ಉಳ್ಳಾಲ ತಾಲೂಕು ಕುಂಪಲದ ಡಿಮಾರ್ಟ್ (D-Mart) ಬಳಿ ದಾಳಿ ನಡೆಸಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳ ವಿವರ:

ಅಪರಾಧ ವಸ್ತು: 1 ಕೆಜಿ 796.96 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ ₹ 1,58,34,000/-)

ಇತರೆ ವಸ್ತುಗಳು: 3 ಮೊಬೈಲ್ ಫೋನ್‌ಗಳು, ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹಾಗೂ ಆಟೋ ರಿಕ್ಷಾ, ಕೊರಿಯರ್ ರಟ್ಟಿನ ಬಾಕ್ಸ್ ಮತ್ತು ವಾಟರ್ ಪ್ಯೂರಿಫೈಯರ್.

ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ: ₹ 1,63,84,000/-

ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.

ಬಂಧಿತ ಆರೋಪಿಗಳ ವಿವರ:

ಅಬ್ದುಲ್ ಹಾಪೀಲ್ (25 ವರ್ಷ): ಅನೀಸಾ ಮಂಜಿಲ್, ಬೈದಲಾ ಪೋಸ್ಟ್, ಮಂಗಳ್ಪಾಡಿ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ. (ಈತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಪ್ರಕರಣ ದಾಖಲಾಗಿದೆ).

ಜಿಯಾವುಲ್ ಹಕ್ (30 ವರ್ಷ): ವಾಸ: # 1-12/1, ಎಂ.ಜೆ.ಎಂ.156, ಪಿ.ಬಾವ ಹೌಸ್, ಕಸಬಾ ಬೆಂಗ್ರೆ, ಕೂಳೂರು, ಮಂಗಳೂರು. (ಈತನ ವಿರುದ್ಧ ದುಬೈ ದೇಶದ ರಸ್-ಅಲ್-ಖೈಮಾ ಎಂಬಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ವಾಪಸಾಗಿರುವ ಹಿನ್ನೆಲೆಯಿದೆ).

ಅಲ್ತಾಫ್ (28 ವರ್ಷ): ಹಾಲಿ ವಾಸ: ಫ್ಲ್ಯಾಟ್ ನಂ. 201, ಆಯಿಷಾ ಅಪಾರ್ಟಮೆಂಟ್, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು (ಸ್ವಂತ ವಿಳಾಸ: ಸಿರಿಸೀಮೆ ನರ್ಸರಿ ಹತ್ತಿರ, ಫೈಸಲ್ ನಗರ, ಬಜಾಲ್ ಗ್ರಾಮ, ಜಲ್ಲಿಗುಡ್ಡೆ ಪೋಸ್ಟ್, ಮಂಗಳೂರು). (ಈತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಪ್ರಕರಣವಿದೆ).

    ವಿನೂತನ ಕೃತ್ಯ – ಪಂಜಾಬ್‌ನಿಂದ ವಾಟರ್ ಪ್ಯೂರಿಫೈಯರ್ ಒಳಗೆ ಸಾಗಾಟ!

    ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸುತ್ತಿದ್ದರು. ಸಿಕ್ಕಿಬೀಳದಂತೆ ತಡೆಯಲು, ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹವಾಗುವ ಒಳಭಾಗದಲ್ಲಿ ಎಂಡಿಎಂಎ ಅನ್ನು ಅತ್ಯಂತ ಸುರಕ್ಷಿತವಾಗಿ ಭದ್ರಪಡಿಸಿ, ಬಳಿಕ ಕೊರಿಯರ್ ಮೂಲಕ ಮಂಗಳೂರಿಗೆ ಕಳುಹಿಸುತ್ತಿದ್ದರು.

    ನಂತರ ಈ ಮಾದಕವಸ್ತುವನ್ನು ಕೇರಳ ರಾಜ್ಯ ಹಾಗೂ ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಆದರೆ, ಪೊಲೀಸರು ಆರಂಭಿಕ ಹಂತದಲ್ಲೇ ಕಾರ್ಯಾಚರಣೆ ನಡೆಸಿ ಈ ಅಂತರರಾಜ್ಯ ಜಾಲವನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

    Continue Reading

    ads (2)
    ads (3)
    ads (4)
    ads (5)
    ads (6)
    ads (1)
    ads (8)
    ads (7)

    Trending

    Copyright © 2025 Deevatige

    error: Content is protected !!