Connect with us

Entertainment

ವಿಟ್ಲದಲ್ಲಿ ಅಕ್ಟೋಬರ್ 6ರಂದು ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ‘ಜಿಲ್ಲಾ ವಾರ್ಷಿಕ ಮಿಲನೋತ್ಸವ – 2026’

Published

on

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.) ಹಾಗೂ ವಿಟ್ಲ ಘಟಕದ ಆತಿಥ್ಯದಲ್ಲಿ ‘ಜಿಲ್ಲಾ ವಾರ್ಷಿಕ ಮಿಲನೋತ್ಸವ – 2026’ ಕಾರ್ಯಕ್ರಮವು ಅಕ್ಟೋಬರ್ 6ರ ಮಂಗಳವಾರದಂದು ವಿಟ್ಲದ ಬಸವನಗುಡಿಯಲ್ಲಿರುವ ವಿಠಲ್ ಜೇಸೀಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಬೆಳಿಗ್ಗೆ 9:00 ಗಂಟೆಗೆ ಕಾರ್ಯಕ್ರಮವು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದ್ದು, ವಿಟ್ಲ ಅರಮನೆಯ ಶ್ರೀ ಬಂಗಾರು ಅರಸರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಬಾಬು ಕೆ. ವಿಟ್ಲ ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ಯು.ಟಿ. ಖಾದರ್, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ, ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳೆಪಾಡಿಗುತ್ತು, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕರುಣಾಕರ ಗೌಡ ನಾಯ್ತೊಟ್ಟು, ವಿಠಲ್ ಜೇಸೀಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಅಧ್ಯಕ್ಷರಾದ ಶ್ರೀ ಶ್ರೀಧರ್ ಶೆಟ್ಟಿ, ವಿಟ್ಲ ಗ್ರಾಮೀಣ ಸಹಕಾರಿ ನಿಯಮಿತದ ಅಧ್ಯಕ್ಷರಾದ ಶ್ರೀ ಹೆಚ್. ಜಗನ್ನಾಥ ಸಾಲಿಯಾನ್ ಹಾಗೂ ಜಿಲ್ಲೆಯ ವಿವಿಧ ತಾಲೂಕು ಮತ್ತು ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭದ ಬಳಿಕ ಬೆಳಿಗ್ಗೆ 11:00 ಗಂಟೆಯಿಂದ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನಂತರ ಸಂಜೆ 5:00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಇದರಲ್ಲಿ ವಿಟ್ಲ ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಕಾಶ್ ದೇವಾಡಿಗ, ವಿಟ್ಲ ಘಟಕದ ನಿಕಟಪೂರ್ವಾಧ್ಯಕ್ಷರಾದ ಶ್ರೀ ಚಂದ್ರಹಾಸ ಸುವರ್ಣ, ಯಕ್ಷ ಭಾರತ್ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಲಯನ್ ಶ್ರೀ ಸಂಜೀವ ಪೂಜಾರಿ, ಧ್ವನಿ-ಬೆಳಕು ಸಂಯೋಜಕರ ಒಕ್ಕೂಟ ಬಂಟ್ವಾಳ ತಾಲೂಕು ಇದರ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ರವಿವರ್ಮ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಜಿಲ್ಲೆಯ ಶಾಮಿಯಾನ ಮಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಮಹಾಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಪ್ರಮುಖರು ಕೋರಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

award

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಘೋಷಣೆ: ದೈವನರ್ತಕ ಮಾಡಾವು ನೇಮು ಪರವ ಸೇರಿದಂತೆ ದಿಗ್ಗಜರಿಗೆ ಒಲಿದ ಗೌರವ!

Published

on

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2025 ಮತ್ತು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ತುಳು ನಾಡು, ಸಂಸ್ಕೃತಿ ಹಾಗೂ ಜಾನಪದ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ ಸಾಧಕರನ್ನು ಈ ಬಾರಿ ಗೌರವಿಸಲಾಗುತ್ತಿದೆ. ವಿಶೇಷವಾಗಿ 2026ನೇ ಸಾಲಿನ ಜಾನಪದ ಕ್ಷೇತ್ರಕ್ಕೆ ಹಿರಿಯ ದೈವನರ್ತಕ ನೇಮು ಪರವ ಅವರು ಆಯ್ಕೆಯಾಗಿರುವುದು ತುಳುನಾಡಿನ ದೈವಾರಾಧನೆ ಮತ್ತು ಶ್ರಮಿಕ ವರ್ಗಕ್ಕೆ ಸಂದ ಅತ್ಯುನ್ನತ ಗೌರವವಾಗಿದೆ.

ಅಕ್ಟೋಬರ್ 04 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ. ಪ್ರಶಸ್ತಿಯು 50,000 ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ.

ಪ್ರಮುಖ ಆಕರ್ಷಣೆ: ದೈವನರ್ತಕ ನೇಮು ಪರವ

2026ನೇ ಸಾಲಿನ ಜಾನಪದ ಕ್ಷೇತ್ರಕ್ಕೆ ಆಯ್ಕೆಯಾಗಿರುವ ನೇಮು ಪರವ ಅವರು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದವರು. ತಮ್ಮ 16ನೇ ವಯಸ್ಸಿನಿಂದಲೇ ದೈವ ನರ್ತನ ಸೇವೆಯನ್ನು ಆರಂಭಿಸಿದ ಇವರು, ಪುತ್ತೂರು, ಸುಳ್ಯ, ಬಂಟ್ವಾಳ ಹಾಗೂ ಕೊಡಗು ಭಾಗದ 25ಕ್ಕೂ ಹೆಚ್ಚು ಭೂತಾರಾಧನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೊರಗಜ್ಜ, ಪಂಜುರ್ಲಿ, ಪಿಲಿಚಾಮುಂಡಿ, ರಕ್ತೇಶ್ವರಿ ಸೇರಿದಂತೆ ವಿವಿಧ ದೈವಗಳ ನರ್ತನ ಸೇವೆಯ ಮೂಲಕ ತುಳುನಾಡಿನ ಮೂಲ ಸಂಸ್ಕೃತಿಯನ್ನು ದಶಕಗಳಿಂದ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಇವರ ಸಾಧನೆ ಅನನ್ಯವಾದುದು.

2025 ಮತ್ತು 2026ನೇ ಸಾಲಿನ ಇತರ ಪ್ರಶಸ್ತಿ ಪುರಸ್ಕೃತರು

2025ನೇ ಸಾಲು:

ಪ್ರೊ. ಬಿ. ಶಿವರಾಮ ಶೆಟ್ಟಿ (ಸಾಹಿತ್ಯ / ಸಂಶೋಧನೆ ಕ್ಷೇತ್ರ) – ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕರು, ತುಳುನಾಡಿನ ಸಸ್ಯ ಜಾನಪದ ಮಹಾಪ್ರಬಂಧದ ಸಂಶೋಧಕರು.

ಕುಡ್ಡು ಕೊರಗ ಪಾಂಗಾಳ (ಜಾನಪದ ಕ್ಷೇತ್ರ) – 4 ದಶಕಗಳ ಕಾಲ ಸಾಂಪ್ರದಾಯಿಕ ಡೋಲು ವಾದನ ಕಲಾವಿದ ಹಾಗೂ ಅಜಲು ಪದ್ಧತಿ ನಿಷೇಧ ಹೋರಾಟಗಾರರು.

ಉಷಾ ಭಂಡಾರಿ (ನಾಟಕ / ಸಿನಿಮಾ ಕ್ಷೇತ್ರ) – ಬೆಂಗಳೂರು ನಿವಾಸಿ, ನಿನಾಸಂ ತರಬೇತಿ ಪಡೆದ ಹಿರಿಯ ನಟಿ ಹಾಗೂ ನಿರ್ದೇಶಕಿ.

2026ನೇ ಸಾಲು:

ಕೆ.ಪಿ. ರಾವ್ (ಸಾಹಿತ್ಯ / ಸಂಶೋಧನೆ ಕ್ಷೇತ್ರ) – ತುಳು ಲಿಪಿಯ ತಂತ್ರಾಂಶ ಅಭಿವೃದ್ಧಿಪಡಿಸಿದವರು ಮತ್ತು ತುಳು ನಿಘಂಟು ಮುದ್ರಣಕ್ಕೆ ಕಾರಣರಾದವರು.

ನೇಮು ಪರವ (ಜಾನಪದ ಕ್ಷೇತ್ರ) – ಹಿರಿಯ ದೈವನರ್ತಕರು (ತುಳುನಾಡಿನ ದೈವಾರಾಧನಾ ಸೇವೆ).

ಸುಧಾಕರ ಬನ್ನಂಜೆ (ನಾಟಕ / ಸಿನಿಮಾ ಕ್ಷೇತ್ರ) – 64 ತುಳು ಹಾಗೂ 24 ಕನ್ನಡ ನಾಟಕಗಳನ್ನು ರಚಿಸಿರುವ ಪ್ರಸಿದ್ಧ ನಾಟಕಕಾರ ಹಾಗೂ ನಿರ್ದೇಶಕರು.

ತುಳು ಭಾಷೆಗೆ ಸ್ಥಾನಮಾನದ ಹಿನ್ನೆಲೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಾಚೀನ ಹಾಗೂ ಸಿರಿವಂತ ಭಾಷೆಯಾದ ತುಳು, ಇಂದು ಕೇವಲ ಮಾತೃಭಾಷೆಯಾಗಿ ಉಳಿಯದೆ ವಿಶ್ವದಾದ್ಯಂತ ತನ್ನದೇ ಆದ ಸಾಂಸ್ಕೃತಿಕ ಸ್ಥಾನಮಾನವನ್ನು ಪಡೆದುಕೊಳ್ಳುತ್ತಿದೆ. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಬೇಕು ಎಂಬ ಕೂಗು ದಶಕಗಳಿಂದ ಕೇಳಿಬರುತ್ತಿದ್ದು, ತುಳು ಸಾಹಿತ್ಯ, ಜಾನಪದ, ಸಿನಿಮಾ ಹಾಗೂ ತಂತ್ರಜ್ಞಾನದ ಬೆಳವಣಿಗೆಯು ಈ ಭಾಷೆಯ ಗಟ್ಟಿತನವನ್ನು ಜಗತ್ತಿಗೆ ಸಾರಿದೆ. ಇಂತಹ ಐತಿಹಾಸಿಕ ಹಿನ್ನೆಲೆಯಲ್ಲಿ, ದುಡಿಯುವ ವರ್ಗದ ದೈವನರ್ತಕ ನೇಮು ಪರವ ಅವರಂತಹ ತಳಮಟ್ಟದ ಜಾನಪದ ಕಲಾವಿದರಿಗೆ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ತುಳು ಭಾಷೆ ಮತ್ತು ಸಂಸ್ಕೃತಿಗೆ ಸಂದ ಸಕ್ಕರೆ ಸವಿಯ ಗೌರವವಾಗಿದೆ

Continue Reading

Bantawala

ಪೆರುವಾಯಿಯಲ್ಲಿ ವಿಜೃಂಭಣೆಯ 37ನೇ ವರ್ಷದ ಶ್ರೀ ಗಣೇಶೋತ್ಸವ: ಸಾಧಕರಿಗೆ ಸನ್ಮಾನ ಮತ್ತು ಧಾರ್ಮಿಕ ಕಾರ್ಯಕ್ರಮ ಸಂಪನ್ನ

Published

on

ಪೆರುವಾಯಿ: ಯುವ ಚೇತನ ಕ್ಲಬ್ (ರಿ) ಪೆರುವಾಯಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ಪೆರುವಾಯಿ ಇದರ ವತಿಯಿಂದ 37ನೇ ವರ್ಷದ “ಶ್ರೀ ಗಣೇಶೋತ್ಸವ”ವು ಸೆಪ್ಟೆಂಬರ್ 14 ಮತ್ತು 15 ರಂದು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಲ್ಲಿ ಅತ್ಯಂತ ವಿಜೃಂಭಣೆಯಿಂದ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಧಾರ್ಮಿಕ ಸಭೆ ಮತ್ತು ಗಣ್ಯಾತಿಗಣ್ಯರ ಉಪಸ್ಥಿತಿ

ಉತ್ಸವದ ಎರಡನೇ ದಿನವಾದ ಮಂಗಳವಾರದಂದು (ಸೆ. 15) ಧಾರ್ಮಿಕ ಸಭೆಯು ನಡೆಯಿತು. ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದಿವ್ಯ ಉಪಸ್ಥಿತಿಯನ್ನು ವಹಿಸಿ ಆಶೀರ್ವಚನ ನೀಡಿದರು.

ಸಭಾ ಅಧ್ಯಕ್ಷತೆಯನ್ನು ಸರಕಾರಿ ಪದವಿಪೂರ್ವ ಕಾಲೇಜು (K P S) ಕನ್ಯಾನದ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ರೈ ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಟ್ರಸ್ಟಿ ಶ್ರೀಮತಿ ರೇವತಿ ಪೆರ್ನೆ ಹಾಗೂ ವಿಟ್ಲದ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಶ್ರೀ ರವಿಪ್ರಕಾಶ್ ಉಪಸ್ಥಿತರಿದ್ದರು.

ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ

ಕಾರ್ಯಕ್ರಮದಲ್ಲಿ ಊರಿಗೆ ಕೀರ್ತಿ ತಂದ ವಿವಿಧ ಕ್ಷೇತ್ರದ ಸಾಧಕರನ್ನು ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು:

ವಿದ್ಯಾರ್ಥಿ ಪ್ರತಿಭೆಗಳಿಗೆ ಸನ್ಮಾನ: ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಸಾಧನೆಗೈದ ಊರಿನ 5 ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.

ಚಿನ್ನದ ಪದಕ ವಿಜೇತರಿಗೆ ಸನ್ಮಾನ: ಎಂ.ಎ. ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಹಾಗೂ ಚಿನ್ನದ ಪದಕ ಪಡೆದ ಕು. ದೀಕ್ಷಾ. T ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಪವರ್ ಮೆನ್ ಗಳ ಸೇವಾ ಸನ್ಮಾನ: ಪೆರುವಾಯಿ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಪವರ್ ಮೆನ್ ಗಳಾದ ಶ್ರೀ ಲಕ್ಷಣ್ H N ಮತ್ತು ಶ್ರೀ ಯಲಗುರೇಶ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ವಿಶೇಷ ಸಾಧನೆ – ನಿವೃತ್ತ ಯೋಧರಿಗೆ ಗೌರವ: ಕಾರ್ಯಕ್ರಮದ ವಿಶೇಷ ಮೇರುವಾಗಿ, ಗಣೇಶೋತ್ಸವ ಸಮಿತಿಯ ಸದಸ್ಯರೂ ಆಗಿರುವ, ಬರೋಬ್ಬರಿ 23 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಭಾರತಾಂಬೆಯ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀ ಚಂದ್ರಶೇಖರ್ ಪೂಜಾರಿ ಕಲ್ಲಡ್ಕ ಪೆರುವಾಯಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿದ ಈ ಗಣೇಶೋತ್ಸವವು ಊರಿನ ಭಕ್ತಾದಿಗಳ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

Continue Reading

Entertainment

ಶುಭ ಕಾರ್ಯದಲ್ಲಿ ಭಯಾನಕ/ವಿಪರೀತ ವೇಷಭೂಷಣ – ಸಂಪ್ರದಾಯದ ಹೆಸರಿನಲ್ಲಿ ಅತಿಯಾಯಿತೇ ನವವರನ ಎಂಟ್ರಿ?

Published

on

ಇದು ನೇಮೋತ್ಸವವೂ ಅಲ್ಲ.. ಯಕ್ಷಗಾನವೂ ಅಲ್ಲ… ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಹಾಗೂ ಶಿಸ್ತುಬದ್ಧ ಆಚರಣೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲು ಮತ್ತು ವೈರಲ್ ಆಗಲು ಸಂಪ್ರದಾಯದ ಗಡಿಯನ್ನು ಮೀರಿ ವಿಚಿತ್ರ ಹಾಗೂ ಭಯಾನಕ ರೀತಿಯಲ್ಲಿ ಪ್ರವೇಶ (Groom Entry) ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಇತ್ತೀಚೆಗೆ ಕೇರಳದ ಮತ್ತಿಪರಂಬಿಲ್ ಮೂಲದವರ ಮದುವೆ ಸಮಾರಂಭವೊಂದರಲ್ಲಿ ನವವರ ಹಾಗೂ ಆತನ ಗೆಳೆಯರ ಬಳಗ ರಾಕ್ಷಸಿ, ಅಸ್ಥಿಪಂಜರ ಹಾಗೂ ಬೆಂಕಿಯ ದೀವಟಿಗೆ ಹಿಡಿದು ಭಯಾನಕ ವೇಷಧರಿಸಿ ಆಗಮಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್‌ ಆಗಿದೆ.

ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿಯೂ ಮದುವೆ ಮೆರವಣಿಗೆಯೊಂದರಲ್ಲಿ ಸ್ಥಳೀಯ ಕೊರಗಜ್ಜ ದೈವದ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದು, ಅದರ ವಿರುದ್ಧ ಕಾನೂನು ಕ್ರಮ ಹಾಗೂ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರ ನೆನಪಿನಲ್ಲಿದೆ. ಅಂತಹ ಘಟನೆಗಳಿಂದ ಪಾಠ ಕಲಿಯದೆ, ಈಗ ಮತ್ತೊಮ್ಮೆ ಇಂತಹ ಅತಿರೇಕದ ಸಂಪ್ರದಾಯ/ಪ್ರವೇಶಗಳು ಸಮಾಜದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಣೆಗೆ ಕಾರಣವಾಗುತ್ತಿವೆ.

ಇಂತಹ ಆಚರಣೆಗಳು ಸಮಾಜದ ಶಾಂತಿ, ಸಾಂಪ್ರದಾಯಿಕ ಮೌಲ್ಯಗಳು ಹಾಗೂ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ ಎಂದು ಸ್ಥಳೀಯರು ಹಾಗೂ ಹಿರಿಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!