Connect with us

Entertainment

ಪುತ್ತೂರು ಮಹಾಲಿಂಗೇಶ್ವರ ಜಾತ್ರೆ: ಬಿರುವೆರ್ ಕುಡ್ಲ ವತಿಯಿಂದ ಭಕ್ತಾದಿಗಳಿಗೆ ತಂಪು ಪಾನೀಯ ವಿತರಣೆ

Published

on

ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಂಭ್ರಮದ ನಡುವೆ, ಬಿರುವೆರ್ ಕುಡ್ಲ (ರಿ.) ಪುತ್ತೂರು ಘಟಕದ ವತಿಯಿಂದ ಭಕ್ತಾದಿಗಳಿಗೆ ತಂಪು ಪಾನೀಯ ವಿತರಣಾ ಸೇವಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಭಂಡಾರ ಆಗಮನದ ಪುಣ್ಯದಿನದಂದು ಸಂಜೆ 6:00ರಿಂದ ತಡರಾತ್ರಿಯವರೆಗೆ ಸಾವಿರಾರು ಭಕ್ತಾದಿಗಳಿಗೆ ತಂಪು ಪಾನೀಯವನ್ನು ವಿತರಿಸುವ ಮೂಲಕ ಬಿರುವೆರ್ ಕುಡ್ಲ ಸಂಘಟನೆಯು ತನ್ನ ಸಾಮಾಜಿಕ ಬದ್ಧತೆಯನ್ನು ಮೆರೆಯಿತು.

ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿದ ಬಿರುವೆರ್ ಕುಡ್ಲ ಸಂಘಟನೆಯ ಸಂಸ್ಥಾಪಕರಾದ ಉದಯ ಪೂಜಾರಿ ಬಳ್ಳಾಲ್‌ಬಾಗ್ ಅವರ ನೇತೃತ್ವದಲ್ಲಿ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ದೇವಸ್ಥಾನದ ಕೆರೆ ಪಕ್ಕದಲ್ಲಿ ಅಳವಡಿಸಲಾಗಿದ್ದ ತಂಪು ಪಾನೀಯ ವಿತರಣಾ ಕೌಂಟರ್ ಅನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಭೇಟಿ ನೀಡಿ ಸಂಘಟನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಯಶಸ್ಸಿಗಾಗಿ ಬಿರುವೆರ್ ಕುಡ್ಲ ಪುತ್ತೂರು ಘಟಕದ ಅಧ್ಯಕ್ಷರಾದ ಜನಾರ್ಧನ ಪೂಜಾರಿ ಪಡುಮಲೆ, ಉಪಾಧ್ಯಕ್ಷರಾದ ಮನೋಹರ್ ರೈ ಮೇಲ್ಮಜಲು ಮತ್ತು ಜಗದೀಶ್ ಅಮೀನ್ ನಡುಬೈಲು ಅವರು ಮಾರ್ಗದರ್ಶನ ನೀಡಿದರು. ಘಟಕದ ವಿವಿಧ ಪದಾಧಿಕಾರಿಗಳು ಹಾಗೂ ನೂರಾರು ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಭಕ್ತಾದಿಗಳಿಗೆ ಪಾನೀಯ ವಿತರಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಜಾತ್ರೆಯಲ್ಲಿ ದಣಿದು ಬಂದ ಭಕ್ತರಿಗೆ ಈ ತಂಪು ಪಾನೀಯ ವಿತರಣೆಯು ಹೆಚ್ಚಿನ ಆರಾಮವನ್ನು ನೀಡಿತು, ಸಾರ್ವಜನಿಕರು ಬಿರುವೆರ್ ಕುಡ್ಲದ ಈ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಪೆರುವಾಯಿಯಲ್ಲಿ ವಿಜೃಂಭಣೆಯ 37ನೇ ವರ್ಷದ ಶ್ರೀ ಗಣೇಶೋತ್ಸವ: ಸಾಧಕರಿಗೆ ಸನ್ಮಾನ ಮತ್ತು ಧಾರ್ಮಿಕ ಕಾರ್ಯಕ್ರಮ ಸಂಪನ್ನ

Published

on

ಪೆರುವಾಯಿ: ಯುವ ಚೇತನ ಕ್ಲಬ್ (ರಿ) ಪೆರುವಾಯಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ಪೆರುವಾಯಿ ಇದರ ವತಿಯಿಂದ 37ನೇ ವರ್ಷದ “ಶ್ರೀ ಗಣೇಶೋತ್ಸವ”ವು ಸೆಪ್ಟೆಂಬರ್ 14 ಮತ್ತು 15 ರಂದು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಲ್ಲಿ ಅತ್ಯಂತ ವಿಜೃಂಭಣೆಯಿಂದ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಧಾರ್ಮಿಕ ಸಭೆ ಮತ್ತು ಗಣ್ಯಾತಿಗಣ್ಯರ ಉಪಸ್ಥಿತಿ

ಉತ್ಸವದ ಎರಡನೇ ದಿನವಾದ ಮಂಗಳವಾರದಂದು (ಸೆ. 15) ಧಾರ್ಮಿಕ ಸಭೆಯು ನಡೆಯಿತು. ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದಿವ್ಯ ಉಪಸ್ಥಿತಿಯನ್ನು ವಹಿಸಿ ಆಶೀರ್ವಚನ ನೀಡಿದರು.

ಸಭಾ ಅಧ್ಯಕ್ಷತೆಯನ್ನು ಸರಕಾರಿ ಪದವಿಪೂರ್ವ ಕಾಲೇಜು (K P S) ಕನ್ಯಾನದ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ರೈ ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಟ್ರಸ್ಟಿ ಶ್ರೀಮತಿ ರೇವತಿ ಪೆರ್ನೆ ಹಾಗೂ ವಿಟ್ಲದ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಶ್ರೀ ರವಿಪ್ರಕಾಶ್ ಉಪಸ್ಥಿತರಿದ್ದರು.

ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ

ಕಾರ್ಯಕ್ರಮದಲ್ಲಿ ಊರಿಗೆ ಕೀರ್ತಿ ತಂದ ವಿವಿಧ ಕ್ಷೇತ್ರದ ಸಾಧಕರನ್ನು ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು:

ವಿದ್ಯಾರ್ಥಿ ಪ್ರತಿಭೆಗಳಿಗೆ ಸನ್ಮಾನ: ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಸಾಧನೆಗೈದ ಊರಿನ 5 ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.

ಚಿನ್ನದ ಪದಕ ವಿಜೇತರಿಗೆ ಸನ್ಮಾನ: ಎಂ.ಎ. ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಹಾಗೂ ಚಿನ್ನದ ಪದಕ ಪಡೆದ ಕು. ದೀಕ್ಷಾ. T ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಪವರ್ ಮೆನ್ ಗಳ ಸೇವಾ ಸನ್ಮಾನ: ಪೆರುವಾಯಿ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಪವರ್ ಮೆನ್ ಗಳಾದ ಶ್ರೀ ಲಕ್ಷಣ್ H N ಮತ್ತು ಶ್ರೀ ಯಲಗುರೇಶ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ವಿಶೇಷ ಸಾಧನೆ – ನಿವೃತ್ತ ಯೋಧರಿಗೆ ಗೌರವ: ಕಾರ್ಯಕ್ರಮದ ವಿಶೇಷ ಮೇರುವಾಗಿ, ಗಣೇಶೋತ್ಸವ ಸಮಿತಿಯ ಸದಸ್ಯರೂ ಆಗಿರುವ, ಬರೋಬ್ಬರಿ 23 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಭಾರತಾಂಬೆಯ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀ ಚಂದ್ರಶೇಖರ್ ಪೂಜಾರಿ ಕಲ್ಲಡ್ಕ ಪೆರುವಾಯಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿದ ಈ ಗಣೇಶೋತ್ಸವವು ಊರಿನ ಭಕ್ತಾದಿಗಳ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

Continue Reading

Entertainment

ಶುಭ ಕಾರ್ಯದಲ್ಲಿ ಭಯಾನಕ/ವಿಪರೀತ ವೇಷಭೂಷಣ – ಸಂಪ್ರದಾಯದ ಹೆಸರಿನಲ್ಲಿ ಅತಿಯಾಯಿತೇ ನವವರನ ಎಂಟ್ರಿ?

Published

on

ಇದು ನೇಮೋತ್ಸವವೂ ಅಲ್ಲ.. ಯಕ್ಷಗಾನವೂ ಅಲ್ಲ… ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಹಾಗೂ ಶಿಸ್ತುಬದ್ಧ ಆಚರಣೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲು ಮತ್ತು ವೈರಲ್ ಆಗಲು ಸಂಪ್ರದಾಯದ ಗಡಿಯನ್ನು ಮೀರಿ ವಿಚಿತ್ರ ಹಾಗೂ ಭಯಾನಕ ರೀತಿಯಲ್ಲಿ ಪ್ರವೇಶ (Groom Entry) ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಇತ್ತೀಚೆಗೆ ಕೇರಳದ ಮತ್ತಿಪರಂಬಿಲ್ ಮೂಲದವರ ಮದುವೆ ಸಮಾರಂಭವೊಂದರಲ್ಲಿ ನವವರ ಹಾಗೂ ಆತನ ಗೆಳೆಯರ ಬಳಗ ರಾಕ್ಷಸಿ, ಅಸ್ಥಿಪಂಜರ ಹಾಗೂ ಬೆಂಕಿಯ ದೀವಟಿಗೆ ಹಿಡಿದು ಭಯಾನಕ ವೇಷಧರಿಸಿ ಆಗಮಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್‌ ಆಗಿದೆ.

ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿಯೂ ಮದುವೆ ಮೆರವಣಿಗೆಯೊಂದರಲ್ಲಿ ಸ್ಥಳೀಯ ಕೊರಗಜ್ಜ ದೈವದ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದು, ಅದರ ವಿರುದ್ಧ ಕಾನೂನು ಕ್ರಮ ಹಾಗೂ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರ ನೆನಪಿನಲ್ಲಿದೆ. ಅಂತಹ ಘಟನೆಗಳಿಂದ ಪಾಠ ಕಲಿಯದೆ, ಈಗ ಮತ್ತೊಮ್ಮೆ ಇಂತಹ ಅತಿರೇಕದ ಸಂಪ್ರದಾಯ/ಪ್ರವೇಶಗಳು ಸಮಾಜದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಣೆಗೆ ಕಾರಣವಾಗುತ್ತಿವೆ.

ಇಂತಹ ಆಚರಣೆಗಳು ಸಮಾಜದ ಶಾಂತಿ, ಸಾಂಪ್ರದಾಯಿಕ ಮೌಲ್ಯಗಳು ಹಾಗೂ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ ಎಂದು ಸ್ಥಳೀಯರು ಹಾಗೂ ಹಿರಿಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

Continue Reading

Entertainment

200 ವರ್ಷಗಳ ಬಳಿಕ ದಹಿಫಲೆ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ: ರಥದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದ ಅಜ್ಜ-ಅಜ್ಜಿ!

Published

on

ಬೀಡ್ (ಮಹಾರಾಷ್ಟ್ರ): ಸಮಾಜದ ಕೆಲವೆಡೆ ಇಂದಿಗೂ ಹೆಣ್ಣು ಮಗು ಹುಟ್ಟಿದರೆ ನಿರಾಸೆ ವ್ಯಕ್ತಪಡಿಸುವ ಜನರ ನಡುವೆ, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅಪರೂಪದ ಹಾಗೂ ಅದ್ಧೂರಿ ಸಂಭ್ರಮವೊಂದು ನಡೆದಿದೆ. ಬರೋಬ್ಬರಿ ನಾಲ್ಕು ತಲೆಮಾರುಗಳ (ಸುಮಾರು 200 ವರ್ಷಗಳ) ದೀರ್ಘ ಕಾಯುವಿಕೆಯ ನಂತರ ಕುಟುಂಬದಲ್ಲಿ ಮೊದಲ ಬಾರಿಗೆ ಹೆಣ್ಣು ಮಗು ಜನಿಸಿದ್ದು, ದಹಿಫಲೆ ಕುಟುಂಬಸ್ಥರು ಮಗುವನ್ನು ರಥದಲ್ಲಿ ಕುಳ್ಳಿರಿಸಿ, ಡೊಳ್ಳು-ಕುಣಿತ ಮತ್ತು ವಾದ್ಯವೃಂದದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಮನೆಗೆ ಬರಮಾಡಿಕೊಂಡಿದ್ದಾರೆ.

‘ಮನೆಗೆ ಬಂದ ಮಹಾಲಕ್ಷ್ಮಿ, ಗಾರ್ಗಿ!’ ಆಸ್ಪತ್ರೆಯಿಂದ ತಾಯಿ ಮತ್ತು ಮಗು ಬಿಡುಗಡೆಯಾಗುತ್ತಿದ್ದಂತೆ, ಕುಟುಂಬಸ್ಥರು ರಥವನ್ನು ತಂದು ಹೂವುಗಳಿಂದ ಶೃಂಗರಿಸಿ ಆಸ್ಪತ್ರೆಯಿಂದಲೇ ಮೆರವಣಿಗೆ ಆರಂಭಿಸಿದರು. ನಾಲ್ಕು ತಲೆಮಾರುಗಳ ಬಳಿಕ ಜನಿಸಿದ ಈ ಮುದ್ದಾದ ಹೆಣ್ಣು ಮಗುವಿಗೆ ‘ಗಾರ್ಗಿ’ ಎಂದು ನಾಮಕರಣ ಮಾಡಲಾಗಿದೆ.

“ನಮ್ಮ ಮನೆಗೆ ಸ್ವತಃ ಮಹಾಲಕ್ಷ್ಮಿಯೇ ಬಂದಿದ್ದಾಳೆ. 200 ವರ್ಷಗಳಿಂದ ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಇರಲಿಲ್ಲ. ಆದ್ದರಿಂದಲೇ ಈ ಕ್ಷಣವನ್ನು ಸಂಭ್ರಮಿಸಲು ಆಕೆಯನ್ನು ಆಸ್ಪತ್ರೆಯಿಂದಲೇ ವಿಜೃಂಭಣೆಯಿಂದ ಕರೆತರಲು ನಿರ್ಧರಿಸಿದೆವು” ಎಂದು ಮಗುವಿನ ಅಜ್ಜಿ ಸುರೇಖಾ ದಹಿಫಲೆ ಆನಂದಬಾಷ್ಪ ಹರಿಸಿದರು.

ಭಾವುಕ ರಾದ ಅಜ್ಜ ಲಿಂಬಾಜಿ ದಹಿಫಲೆ: ಮಗುವಿನ ಅಜ್ಜ ಲಿಂಬಾಜಿ ದಹಿಫಲೆ ಮಾತನಾಡಿ, “ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿರುವುದು ನಮಗೆ ಸಿಕ್ಕ ದೊಡ್ಡ ಭಾಗ್ಯ. ಇಷ್ಟು ವರ್ಷಗಳಿಂದ ನಮಗಿದ್ದ ದೊಡ್ಡ ಕೊರತೆ ಇಂದು ನೀಗಿದೆ. ನನ್ನ ಇಬ್ಬರು ಸೊಸೆಯಂದಿರನ್ನು ನಾನು ಹೆತ್ತ ಮಗಳಂತೆಯೇ ಸಾಕಿ ಬೆಳೆಸಿದ್ದೇನೆ, ಈಗ ಮೊಮ್ಮಗಳನ್ನು ರಥ ಹಾಗೂ ವಾದ್ಯವೃಂದದೊಂದಿಗೆ ಕರೆತರಲು ನಮಗೆ ಅತಿಯಾದ ಸಂತೋಷವಾಗುತ್ತಿದೆ” ಎಂದು ಭಾವುಕರಾಗಿ ತಮ್ಮ ಸಂತಸ ಹಂಚಿಕೊಂಡರು.

‘ಹೂವಿನಂತೆ ಸಾಕಿ ಬೆಳೆಸುತ್ತೇವೆ’: ತಂದೆಯ ಹರ್ಷ “ಸಾಮಾನ್ಯವಾಗಿ ಜನರು ಗಂಡು ಮಗುವನ್ನು ಬಯಸುತ್ತಾರೆ, ಆದರೆ ಹೆಣ್ಣು ಮಗು ಹುಟ್ಟಿದಾಗ ಸಿಗುವ ಆನಂದವೇ ಬೇರೆ. ಹೆಣ್ಣು ಮಕ್ಕಳಿಗೆ ತಂದೆಯ ಮೇಲೆ ಹೆಚ್ಚಿನ ಪ್ರೀತಿ ಇರುತ್ತದೆ. ನಾವು ನಮ್ಮ ಮಗಳನ್ನು ಹೂವಿನಂತೆ ಸಾಕಿ ಬೆಳೆಸುತ್ತೇವೆ” ಎಂದು ಮಗುವಿನ ತಂದೆ ಹೆಮ್ಮೆಯಿಂದ ಹೇಳಿದರು.

ಸಮಾಜಕ್ಕೆ ಮಾದರಿಯಾದ ದಹಿಫಲೆ ಕುಟುಂಬ: ದಹಿಫಲೆ ಕುಟುಂಬದ ಈ ವಿಶೇಷ ಆಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅನಂತ್ ಇಂಗಳೆ, “ಇಂದಿಗೂ ಸಮಾಜದ ಕೆಲವೆಡೆ ಹೆಣ್ಣು ಮಗುವಿನ ಜನನದ ಬಗ್ಗೆ ಕಿರಿದಾದ ಮನಸ್ಥಿತಿ ಇದೆ. ಆದರೆ ದಹಿಫಲೆ ಕುಟುಂಬವು ಹೆಣ್ಣು ಮಗುವನ್ನು ರಥದಲ್ಲಿ ಕರೆತರುವ ಮೂಲಕ ಸಮಾಜಕ್ಕೆ ಉತ್ತಮ ಹಾಗೂ ಪ್ರೇರಣಾದಾಯಿ ಸಂದೇಶ ನೀಡಿದ್ದಾರೆ” ಎಂದು ಶ್ಲಾಘಿಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!