F.I.R.
ಬುರ್ಖಾ ಧರಿಸಿ ಲೇಡೀಸ್ ಕೋಚ್ನಲ್ಲಿ ಯುವಕನ ಪಯಣ : ಮಹಿಳೆಯರಿಗೆ ಗೊತ್ತಾದಾಗ ಏನು ಮಾಡಿದರು ?
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/02/railway-1-1000x600.jpg&description=ಬುರ್ಖಾ ಧರಿಸಿ ಲೇಡೀಸ್ ಕೋಚ್ನಲ್ಲಿ ಯುವಕನ ಪಯಣ : ಮಹಿಳೆಯರಿಗೆ ಗೊತ್ತಾದಾಗ ಏನು ಮಾಡಿದರು ?', 'pinterestShare', 'width=750,height=350'); return false;" title="Pin This Post">
ಮುಂಬೈ ಲೋಕಲ್ ರೈಲಿನ ಲೇಡೀಸ್ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ಪುರುಷನೊಬ್ಬನನ್ನು ಮಹಿಳಾ ಪ್ರಯಾಣಿಕರು ಪತ್ತೆಹಚ್ಚಿದ್ದಾರೆ. ಮಹಿಳೆಯರು ಪ್ರಶ್ನಿಸಿ ಪೊಲೀಸರಿಗೆ ಒಪ್ಪಿಸುವ ಬೆದರಿಕೆ ಹಾಕಿದಾಗ, ಆತ ಚಲಿಸುವ ರೈಲಿನಿಂದ ಜಿಗಿದಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂಬೈ ಲೋಕಲ್ ರೈಲಿನ ಲೇಡಿಸ್ ಕೋಚ್ನಲ್ಲಿ ಬುರ್ಖಾ ಧರಿಸಿ ಪುರುಷನೋರ್ವ ಪ್ರಯಾಣಿಸಿದ ಘಟನೆ ನಡೆದಿದೆ ಈ ಸಂಬಂಧ ರೈಲ್ವೆ ರಕ್ಷಣಾ ಪಡೆ, ಆರ್ಪಿಎಫ್ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದು ಸಂಕಿತನಿಗಾಗಿ ಹುಡುಕಾಟ ಮುಂದುವರಿಸಿದೆ ಶುಕ್ರವಾರ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ಸಿ ಎಸ್ ಎಮ್ ಟಿ ಕಡೆಗೆ ತೆರಳುತ್ತಿದ್ದ ಲೋಕಲ್ ರೈಲಿನ ಲೇಡೀಸ್ ಭೋಗಿಯಲ್ಲಿ ಈ ಘಟನೆ ನಡೆದಿದೆ. ಬುರ್ಖಾ ಧರಿಸಿ ಮಹಿಳೆಯಂತೆ ಕಾಣಿಸಿಕೊಂಡಿದ್ದ ಆತನ ದೇಹ ಭಾಷೆ ಮತ್ತು ಚಲನವಲನ ಮಹಿಳೆಯಂತೆ ಇರಲಿಲ್ಲ ಎಂಬ ಕಾರಣದಿಂದ ಕೆಲವು ಮಹಿಳೆಯರು ಆತನನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಪ್ರಶ್ನಿಸಿದ ವೇಳೆ ಬುರ್ಖಾಧಾರಿಯು ಮಹಿಳೆ ಅಲ್ಲ ಪುರುಷ ಎಂಬುದು ಸ್ಪಷ್ಟವಾಗಿದ್ದು, ಇದರಿಂದ ಮಹಿಳಾ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ರೈಲ್ವೆ ರಕ್ಷಣಾ ದಳ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಅಧಿಕಾರಿಗಳ ಪ್ರಕಾರ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್(CSMT)ಗೆ ಹೋಗುತ್ತಿದ್ದ ಲೋಕಲ್ ರೈಲಿನ ಲೇಡೀಸ್ ಬೋಗಿಯಲ್ಲಿ ಪುರುಷನೋರ್ವ ಬುರ್ಖಾ ಧರಿಸಿ ಪಯಣಿಸುತ್ತಿದ್ದಾನೆ ಎಂಬ ಅನುಮಾನ ಆ ಬೋಗಿಯಲ್ಲಿದ್ದ ಇತರ ಮಹಿಳಾ ಪ್ರಯಾಣಿಕರಿಗೆ ಬಂದಿದೆ. ಅವರು ಆತನನ್ನು ಪ್ರಶ್ನಿಸಲು ಮುಂದಾದಾಗ ಆತ ಪುರುಷ ಎಂಬುದು ತಿಳಿದು ಬಂದಿದೆ. ಮಹಿಳೆಯರು ಆತನನ್ನು ಲೇಡೀಸ್ ಬೋಗಿಯಲ್ಲಿ ಬುರ್ಖಾ ಧರಿಸಿ ಬಂದಿದ್ದಕ್ಕೆ ಪ್ರಶ್ನಿಸಿದ್ದಲ್ಲದೇ ಆ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೇ ಮುಂಬರುವ ಘಾಟ್ಕೋಪರ್ ನಿಲ್ದಾಣದಲ್ಲಿ ಆತನನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಬೆದರಿಕೆ ಹಾಕಿದ್ದಾರೆ
ಮಹಿಳೆಯರು ಮುಂದಿನ ಘಾಟ್ ಕೋಪರ್ ನಿಲ್ದಾಣದಲ್ಲಿ ಆತನನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದರಿಂದ ಭಯಗೊಂಡ ಶಂಕಿತ ವ್ಯಕ್ತಿ ರೈಲು ನಿಲ್ದಾಣಕ್ಕೆ ತಲುಪುವ ಮುನ್ನ ರೈಲಿನಿಂದ ಜಿಗಿದಿದ್ದಾನೆ. ಚಲಿಸುತ್ತಿದ್ದ ರೈಲಿನಿಂದಲೇ ಹಾರಿ ಕೆಳಗೆ ಬಿದ್ದ ಆತ ರೈಲು ಹಳಿಗಳ ಮೇಲೆ ಓಡಿ ತಪ್ಪಿಸಿಕೊಂಡಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಮಾಹಿತಿ ಪಡೆದ ತಕ್ಷಣವೇ ರೈಲ್ವೆ ರಕ್ಷಣಾ ಪಡೆ ತನಿಖೆ ಆರಂಭಿಸಿದ್ದು, ವಿವಿಧ ನಿಲ್ದಾಣಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಮುಲುಂಡ್ ನಿಲ್ದಾಣದಲ್ಲಿ ಕರ್ಜತ್ ಲೋಕಲ್ ರೈಲನ್ನು ತಪಾಸಣೆ ನಡೆಸಿದರೂ, ಶಂಕಿತ ವ್ಯಕ್ತಿ ಆಗಲೇ ರೈಲಿನಿಂದ ಇಳಿದು ಪರಾರಿಯಾಗಿದ್ದರಿಂದ ಪೊಲೀಸರು ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಇದಾದ ಬಳಿಕ ಆತ ಕರ್ಜತ್ನಿಂದ ಬರುತ್ತಿದ್ದ ಮತ್ತೊಂದು ಲೋಕಲ್ ರೈಲಿಗೆ ಪ್ಲಾಟ್ಫಾರ್ಮ್ ಬದಲಿಸಿ ಹತ್ತಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಮಹಿಳಾ ಪ್ರಯಾಣಿಕರು ಘಟ್ಕೊಪರ್ ನಿಲ್ದಾಣದಲ್ಲಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣವೇ ರೈಲ್ವೆ ರಕ್ಷಣಾ ಪಡೆ ತನಿಖೆ ಆರಂಭಿಸಿದ್ದು, ಮಹಿಳಾ ಕೋಚ್ನಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಪ್ರಯಾಣಿಸಿದ್ದ ಆರೋಪದಡಿ ಭಾರತೀಯ ರೈಲ್ವೆ ಕಾಯ್ದೆಯ ಪ್ರಕಾರ ಆರ್ಪಿಎಫ್ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದೆ. ಶಂಕಿತನ ಗುರುತು ಪತ್ತೆಹಚ್ಚಲು ವೈರಲ್ ವೀಡಿಯೋ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.
F.I.R.
ಕೇರಳದಲ್ಲಿ ಕರುಳು ಹಿಂಡುವ ಘಟನೆ: ಒಂದೂವರೆ ವರ್ಷದ ಕಂದಮ್ಮನಿಗೆ ನರಕಯಾತನೆ ನೀಡಿ ಕೊಂದ ಪಾಪಿ ತಾಯಿ ಮತ್ತು ಪ್ರೇಮಿ!
ಹೆತ್ತ ಕರುಳಿಗಿಂತ ಹೆಣ್ಣಿಗೆ ಕಾಮವೇ ಕಣ್ಣಾಯಿತು… ಆಶ್ರಯ ನೀಡಬೇಕಾದ ಕೈಗಳೇ ಯಮಸ್ವರೂಪಿಯಾದವು! ದೇವರ ಸ್ವಂತ ನಾಡು ಕೇರಳದಲ್ಲಿ ಮಾನವೀಯತೆಯೇ ಸಂಪೂರ್ಣವಾಗಿ ತಲೆತಗ್ಗಿಸುವಂತಹ, ಕಲ್ಲು ಹೃದಯದವರೂ ಕಣ್ಣೀರು ಸುರಿಸುವಂತಹ ಅತ್ಯಂತ ಕ್ರೂರ ಘಟನೆಯೊಂದು ತಿರುವನಂತಪುರಂ ನಿಂದ ಬೆಳಕಿಗೆ ಬಂದಿದೆ. ಮಾತು ಬಾರದ, ತನ್ನ ನೋವನ್ನು ಹೇಳಿಕೊಳ್ಳಲಾಗದ ಕೇವಲ ಒಂದೂವರೆ ವರ್ಷದ ಮುಗ್ಧ ಕಂದಮ್ಮ ಅರ್ಷಿದ್ನನ್ನು ಹೆತ್ತ ತಾಯಿ ಮತ್ತು ಆಕೆಯ ಪ್ರೇಮಿ ಸೇರಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಭೀಕರ ಕಥೆ ಇಡೀ ಸಮಾಜವನ್ನೇ ನಡುಗಿಸಿದೆ.

ಮಗುವನ್ನು ಹತ್ಯೆ ಮಾಡಿದ ಆರೋಪದ ಮೇಲೆ ತಾಯಿ ಅಖಿಲಾ (24) ಮತ್ತು ಆಕೆಯ ಲಿವ್-ಇನ್ ಸಂಗಾತಿ ಅಶ್ಕರ್ (31) ಎಂಬ ಇಬ್ಬರು ನರರೂಪದ ರಾಕ್ಷಸರನ್ನು ನೆಡುಮಂಗಾಡ್ ಪೊಲೀಸರು ಕಬ್ಬಿಣದ ಸರಳುಗಳ ಹಿಂದೆ ತಳ್ಳಿದ್ದಾರೆ.

ಸುಳ್ಳು ಕಥೆ ಸೃಷ್ಟಿಸಿದ್ದ ಪಾಪಿಗಳು: ಪೋಸ್ಟ್ಮಾರ್ಟಮ್ನಲ್ಲಿ ಬಯಲಾಯ್ತು ಸತ್ಯ!
ಮೇ 29ರ ಶುಕ್ರವಾರದಂದು ಈ ದುರಂತ ಜಗತ್ತಿಗೆ ಗೊತ್ತಾಯಿತು. ಮಗು ಅರ್ಷಿದ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ, ಆರೋಪಿಗಳು ನಾಟಕವಾಡಿ ಆಂಬ್ಯುಲೆನ್ಸ್ ಮೂಲಕ ಪಣವೂರಿನ ಖಾಸಗಿ ಆಸ್ಪತ್ರೆಗೆ, ಅಲ್ಲಿಂದ ಎಸ್ಎಟಿ (SAT) ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲೇ ಆ ಪುಟ್ಟ ಜೀವ ಬಾರದ ಲೋಕಕ್ಕೆ ಪಯಣಿಸಿತ್ತು.
ಆರೋಪಿ ಅಶ್ಕರ್ ಪೊಲೀಸರಿಗೆ ಹೇಳಿದ ಕಟ್ಟುಕಥೆ:
“ಮಗು ಹಾಲು, ನೀರು ಕುಡಿದು ಮಲಗಿತ್ತು. ಇದ್ದಕ್ಕಿದ್ದಂತೆ ಕೆಮ್ಮಲು ಮತ್ತು ವಾಂತಿ ಮಾಡಲು ಆರಂಭಿಸಿತು. ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿತು.”
ಆದರೆ, ಮಗುವಿನ ಮರಣೋತ್ತರ ಪರೀಕ್ಷಾ ವರದಿ ಬರುತ್ತಿದ್ದಂತೆ ವೈದ್ಯರೇ ಬೆಚ್ಚಿಬಿದ್ದರು. ಮಗುವಿನ ತಲೆ ಹಾಗೂ ದೇಹದಾದ್ಯಂತ ತೀವ್ರ ಆಂತರಿಕ ರಕ್ತಸ್ರಾವ ಉಂಟಾಗಿದ್ದೇ ಸಾವಿಗೆ ಕಾರಣ ಎಂದು ವರದಿ ಬಹಿರಂಗಪಡಿಸಿತು. ಪಾಪಿಗಳು ಹೆಣೆದಿದ್ದ ಸುಳ್ಳಿನ ಜಾಲ ಕ್ಷಣಾರ್ಧದಲ್ಲಿ ಧೂಳೀಪಟವಾಯಿತು.
ಪುಟ್ಟ ದೇಹದ ಮೇಲೆ 50ಕ್ಕೂ ಹೆಚ್ಚು ಗಾಯಗಳು: ದಿನವೂ ನಡೆಯುತ್ತಿತ್ತು ನರಕಯಾತನೆ!
ಪೊಲೀಸ್ ತನಿಖೆ ಮುಂದುವರಿದಂತೆ ಆ ಒಂದೂವರೆ ವರ್ಷದ ಕಂದ ಪ್ರತಿದಿನ ಅನುಭವಿಸುತ್ತಿದ್ದ ನರಕಯಾತನೆಯ ಎಳೆಎಳೆಗಳು ಬಿಚ್ಚಿಕೊಳ್ಳತೊಡಗಿದವು. ತನಿಖಾಧಿಕಾರಿಗಳು ಅರ್ಷಿದ್ನ ಪುಟ್ಟ ಮತ್ತು ಕೋಮಲವಾದ ದೇಹದ ಮೇಲೆ ಬರೋಬ್ಬರಿ 50ಕ್ಕೂ ಹೆಚ್ಚು ಹಳೆಯ ಮತ್ತು ತಾಜಾ ಗಾಯಗಳನ್ನು ಪತ್ತೆಹಚ್ಚಿದ್ದಾರೆ.
ಸಿಗರೇಟ್ನಿಂದ ಸುಟ್ಟ ಗಾಯಗಳು: ಮಗುವಿನ ಇಡೀ ದೇಹದಾದ್ಯಂತ ಸಿಗರೇಟ್ ತುಂಡುಗಳಿಂದ ಸುಟ್ಟು ಹಾಕಿರುವ ದುಂಡಗಿನ ಗುರುತುಗಳಿದ್ದವು.
ಮುರಿದಿದ್ದ ಕೈಗಳು: ಈ ಹಿಂದೆ ಮಗುವಿನ ಎರಡೂ ತೋಳುಗಳು ಮುರಿದಿದ್ದವು. ಆ ಸಮಯದಲ್ಲಿ “ಮಗು ಆಟ ಆಡುತ್ತಾ ಕೆಳಗೆ ಬಿದ್ದಿದೆ” ಎಂದು ಈ ಪಾಪಿಗಳು ಜಾಣತನದಿಂದ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದರು.

ಅರ್ಷಿದ್ನ ತಂದೆ (ಅಖಿಲಾಳ ಮೊದಲ ಪತಿ) ಮೃತಪಟ್ಟ ನಂತರ ಮಗುವನ್ನು ಅಜ್ಜಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅಜ್ಜಿಯ ಮಡಿಲಲ್ಲಿ ಮಗು ಸುರಕ್ಷಿತವಾಗಿತ್ತು. ಆದರೆ, ಅಖಿಲಾ ತನಗೆ ಮಗುವನ್ನು ಸಾಕಲು ಸಾಧ್ಯವಿಲ್ಲ ಎಂದು ಹೇಳಿ, ನಂತರ ತನ್ನ ಪ್ರೇಮಿ ಅಶ್ಕರ್ ಜೊತೆ ಲಿವ್-ಇನ್ ರಿಲೇಶನ್ಶಿಪ್ನಲ್ಲಿ ವಾಸಿಸಲು ಮಗುವನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಳು. ಅಲ್ಲಿಂದಲೇ ಮಗುವಿನ ಪಾಲಿಗೆ ನರಕದ ಬಾಗಿಲು ತೆರೆದಿತ್ತು. ಹೆತ್ತ ಮಗನಿಗೆ ಅಶ್ಕರ್ ರಾಕ್ಷಸನಂತೆ ಹಿಂಸಿಸುತ್ತಿದ್ದರೂ, ಕಣ್ಣೆದುರೇ ಮಗುವಿನ ಕೈ ಮುರಿದರೂ ಅಖಿಲಾ ಮಗನನ್ನು ರಕ್ಷಿಸಲಿಲ್ಲ, ಪೊಲೀಸರಿಗೂ ಹೇಳಲಿಲ್ಲ. ಇದೇ ಕಾರಣಕ್ಕೆ ಆಕೆಯನ್ನೂ ಕೊಲೆ ಆರೋಪಿಯನ್ನಾಗಿ ಮಾಡಲಾಗಿದೆ.
ಮೊದಲ ಪತ್ನಿಯನ್ನೂ ಜೀವಚ್ಛವ ಮಾಡಿದ್ದ ಕ್ರೂರಿ ಅಶ್ಕರ್!
ಬಂಧಿತ ಆರೋಪಿ ಅಶ್ಕರ್ ಕೇವಲ ಮಗುವಿನ ಪಾಲಿಗೆ ಮಾತ್ರವಲ್ಲ, ಆತನ ಸಹವಾಸಕ್ಕೆ ಬಂದವರೆಲ್ಲರಿಗೂ ಯಮನಾಗಿದ್ದ. ಆತನ ಮೊದಲ ಪತ್ನಿ ಅಮೀನಾಳ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಬಂದು ಆಘಾತಕಾರಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅಶ್ಕರ್ ಇನ್ನು ಕೂಡ ಅಮೀನಾಗೆ ಅಧಿಕೃತ ವಿಚ್ಛೇದನ ನೀಡಿಲ್ಲ. ಆಕೆಯ ತಲೆಯನ್ನು ಗೋಡೆಗೆ ಬಡಿಯುವುದು, ಸೀಲಿಂಗ್ ಫ್ಯಾನ್ ಉರುಳಿಗೆ ಸಿಲುಕಿಸಲು ಯತ್ನಿಸುವಂತಹ ಘೋರ ದೈಹಿಕ ಹಿಂಸೆ ನೀಡಿದ್ದ. ಆ ಭೀಕರ ಹಲ್ಲೆಯ ಕಾರಣದಿಂದಾಗಿ ಅಮೀನಾ ಕಳೆದ ಒಂದು ವರ್ಷದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸಿಗೆ ಹಿಡಿದಿದ್ದು, ಪ್ರಸ್ತುತ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಹೊತ್ತಿ ಉರಿದ ಗ್ರಾಮಸ್ಥರ ಆಕ್ರೋಶ: ಆರೋಪಿಗೆ ಧರ್ಮದೇಟು ನೀಡಲು ಯತ್ನ!
ರವಿವಾರ ತನಿಖೆಯ ಭಾಗವಾಗಿ ಮಹಜರು (ಸ್ಥಳ ಪರಿಶೀಲನೆ) ನಡೆಸಲು ನೆಡುಮಂಗಾಡ್ ಪೊಲೀಸರು ಆರೋಪಿ ಅಶ್ಕರ್ನನ್ನು ಕರಿಕುಳಿಯಲ್ಲಿರುವ ಆತನ ಮನೆಗೆ ಕರೆದೊಯ್ದಾಗ ಇಡೀ ಗ್ರಾಮವೇ ಆಕ್ರೋಶದ ಜ್ವಾಲೆಯಾಗಿ ಬೀದಿಗೆ ಬಂದಿತ್ತು. ನೂರಾರು ಸ್ಥಳೀಯ ನಿವಾಸಿಗಳು, ಮಹಿಳೆಯರು ಜಮಾಯಿಸಿ ಆ ಪಾಪಿಯ ಮುಖಕ್ಕೆ ಉಗುಳಿ, ಆತನ ಮೇಲೆ ದಾಳಿ ಮಾಡಲು ಯತ್ನಿಸಿದರು. “ಆ ನರರಾಕ್ಷಸನನ್ನು ನಮಗೆ ಒಪ್ಪಿಸಿ, ಇಲ್ಲೇ ಜೀವಂತವಾಗಿ ಮುಗಿಸುತ್ತೇವೆ” ಎಂದು ಜನ ಕಿರುಚಾಡಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಹರಸಾಹಸ ಪಟ್ಟು ಕೋಪಗೊಂಡ ಜನರನ್ನು ನಿಯಂತ್ರಿಸಿ, ಆರೋಪಿಯನ್ನು ಸುರಕ್ಷಿತವಾಗಿ ಜೈಲಿನತ್ತ ಸಾಗಿಸಿದರು.
ಒಡಲಲ್ಲಿ ಹೊತ್ತು ಹೆತ್ತ ಮಗುವನ್ನೇ ಕಾಮದ ಅಮಲಿನಲ್ಲಿ ಕ್ರೂರಿಯ ಕೈಗಿಟ್ಟು ಸಾಯಿಸಿದ ಆ ತಾಯಿಗೂ, ಚಿಕ್ಕ ಕಂದಮ್ಮನಿಗೆ ಸಿಗರೇಟ್ನಿಂದ ಸುಟ್ಟು ಕೊಂದ ಆ ನರರಾಕ್ಷಸನಿಗೂ ಕಾನೂನು ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕಿದೆ. ಇಂತಹ ಘಟನೆಗಳು ಮರುಕಳಿಸದಂತೆ ಇಡೀ ಸಮಾಜವೇ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮುಗ್ಧ ಅರ್ಷಿದ್ನ ಆತ್ಮಕ್ಕೆ ಶಾಂತಿ ಸಿಗಲಿ
crime
ವಿಟ್ಲ ಪೊಲೀಸರ ಬಲೆಗೆ ಸಿಕ್ಕ ಅಂತರ್ ರಾಜ್ಯ ಗೋ ಸಾಗಾಟಗಾರ..ಪೊಲೀಸರ ಮೇಲೆಯೇ ಕಾರು ಹಾಯಿಸಲು ಯತ್ನಿಸಿ ಪರಾರಿಯಾದ ಬಷೀರ್
ವಿಟ್ಲ: ಹಲವು ಪೊಲೀಸ್ ಠಾಣೆಗಳಲ್ಲಿ ಗೋಸಾಗಾಟ ಪ್ರಕರಣಗಳ ಆರೋಪಿಯಾಗಿರುವ ಅಂತರರಾಜ್ಯ ಗೋಸಾಗಾಟಗಾರ, ಪಂಜರಗೋಡಿ ನಿವಾಸಿ ಬಷೀರ್ ಎಂಬಾತನ ಅಕ್ರಮ ಗೋಸಾಗಾಟ ಜಾಲವನ್ನು ವಿಟ್ಲ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲೆಗೆ ಯತ್ನಿಸಿ ಮುಖ್ಯ ಆರೋಪಿ ಬಷೀರ್ ಪರಾರಿಯಾಗಿದ್ದು, ಪಿಕಪ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಪಿಕಪ್ ಚಾಲಕನನ್ನು ಬಂಟ್ವಾಳ ಬಾಳೆಪುಣಿ (ಮುಡಿಪು ಸಮೀಪದ ನಾರ್ಯ) ನಿವಾಸಿ ಮೊಹಮ್ಮದ್ ಹನೀಫ್ (44) ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ ಪಿಕಪ್ ವಾಹನ ಹಾಗೂ ಹಿಂಸಾತ್ಮಕವಾಗಿ ಕಟ್ಟಲಾಗಿದ್ದ ಎರಡು ಗೋವುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆ ನಡೆದದ್ದು ಹೇಗೆ?
ಬುಧವಾರ (ಮೇ 20) ಬೆಳಗ್ಗೆ ಕಲ್ಲಡ್ಕ ಪ್ರಖಂಡ ಬಜರಂಗದಳ ಕಾರ್ಯಕರ್ತರಿಗೆ ಅಕ್ರಮ ಗೋಸಾಗಾಟದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅವರು ತಕ್ಷಣವೇ ಈ ಕುರಿತು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ವಿಟ್ಲ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಸಾಲೆತ್ತೂರು ಬಳಿ ನಿಗಾ ಇರಿಸಿದ್ದರು.

ದಿನಾಂಕ 21.05.2026 ರಂದು ಮುಂಜಾನೆ ಬಂಟ್ವಾಳ ಕೊಳ್ನಾಡು ಪಂಜರಕೋಡಿ ಎಂಬಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ KA-19-D-1496 ನೋಂದಣಿಯ ಪಿಕ್ ಅಪ್ ವಾಹನ ಬರುತ್ತಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ತಡೆಯಲು ಮುಂದಾಗಿದ್ದಾರೆ.
ಪೊಲೀಸರ ಕೊಲೆಗೆ ಯತ್ನಿಸಿ ಎಸ್ಕೋರ್ಟ್ ಕಾರು ಪರಾರಿ!

ಈ ವೇಳೆ ಗೋಸಾಗಾಟದ ಪಿಕ್ ಅಪ್ ವಾಹನಕ್ಕೆ ಮುಂಭಾಗದಲ್ಲಿ ಬೆಂಗಾವಲಾಗಿ (ಎಸ್ಕೋರ್ಟ್) KA-21-MA-0801 ನೇ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದ ಮುಖ್ಯ ಆರೋಪಿ ಬಷೀರ್, ತನ್ನ ಅಕ್ರಮ ದಂಧೆಗೆ ಅಡ್ಡಿಪಡಿಸಿದ ಪೊಲೀಸರ ಪ್ರಾಣಕ್ಕೆ ಅಪಾಯವಾಗುವಂತೆ ಅವರ ಮೇಲೆಯೇ ಕಾರನ್ನು ಚಲಾಯಿಸಿಕೊಂಡು ಹೋಗಿ ಕೊಲೆಗೆ ಯತ್ನಿಸಿದ್ದಾನೆ. ಆದರೆ ಸಮಯಪ್ರಜ್ಞೆ ಮೆರೆದ ಪೊಲೀಸರು ತಕ್ಷಣವೇ ಪಕ್ಕಕ್ಕೆ ಸರಿದು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರ ಮೇಲೆಯೇ ಕಾರು ಚಲಾಯಿಸಿದ ಬಷೀರ್, ತಕ್ಷಣವೇ ಸ್ವಿಫ್ಟ್ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಚಾಲಕನ ಬಂಧನ – ಗೋವುಗಳ ರಕ್ಷಣೆ
ಬಷೀರ್ ಪರಾರಿಯಾದ ಬೆನ್ನಲ್ಲೇ ಪೊಲೀಸರು ಹಿಂಬದಿಯಲ್ಲಿ ಬರುತ್ತಿದ್ದ ಪಿಕ್ ಅಪ್ ವಾಹನವನ್ನು ಯಶಸ್ವಿಯಾಗಿ ತಡೆದು ನಿಲ್ಲಿಸಿದ್ದಾರೆ. ಬಳಿಕ ಪಿಕ್ ಅಪ್ ಪರಿಶೀಲಿಸಿದಾಗ ಎರಡು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಈ ಬಗ್ಗೆ ಚಾಲಕ ಮೊಹಮ್ಮದ್ ಹನೀಫ್ನನ್ನು ವಿಚಾರಿಸಿದಾಗ, ಯಾವುದೇ ಪರವಾನಿಗೆ ಪಡೆಯದೇ ಜಾನುವಾರುಗಳನ್ನು ವಧೆ ಮಾಡಲು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪ್ರಕರಣ ದಾಖಲು
ಮುಂದಿನ ಕಾನೂನು ಕ್ರಮಕ್ಕಾಗಿ ಚಾಲಕನನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಎರಡು ಜಾನುವಾರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಬಷೀರ್ ಮತ್ತು ಬಂಧಿತ ಚಾಲಕ ಮೊಹಮ್ಮದ್ ಹನೀಫ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 114/2026 ರಂತೆ, ಬಿ.ಎನ್.ಎಸ್-2023 (BNS) ಕಾಯ್ದೆಯ ಕಲಂ: 118(1), 109, 132 ಜೊತೆಗೆ 3(5), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಂ 5, 7, 12 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಕಲಂ 11 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



F.I.R.
ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಪ್ರಕರಣ ದಾಖಲು; ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ಮಂಗಳೂರು ತಾಲೂಕಿನ ಗಂಜಿಮಠದ ಮುಚ್ಚೂರು ಕ್ರಾಸ್ ಬಳಿ ಮದುವೆ ಸಮಾರಂಭಕ್ಕೆ ಬಂದ ವಾಹನಗಳ ಅವ್ಯವಸ್ಥಿತ ಪಾರ್ಕಿಂಗ್ನಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ, ಎರಡು ಕಲ್ಯಾಣ ಮಂಟಪಗಳ ಮಾಲೀಕರು ಮತ್ತು ಆಯೋಜಕರ ಮೇಲೆ ಬಜಪೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ವಿವರ: ದಿನಾಂಕ 12-04-2026ರಂದು ಮಧ್ಯಾಹ್ನ 12:00 ರಿಂದ 2:00 ಗಂಟೆಯ ನಡುವೆ ಗಂಜಿಮಠದ ‘ರಾಯಲ್ ಪ್ಯಾಲೇಸ್’ ಮತ್ತು’ಒಂಡೆಲಾ ಹಾಲ್‘ನಲ್ಲಿ ಮದುವೆ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಮಾರಂಭಕ್ಕೆ ಆಗಮಿಸಿದ ನೂರಾರು ವಾಹನಗಳಿಗೆ ಕಲ್ಯಾಣ ಮಂಟಪದ ಆವರಣದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡದ ಕಾರಣ, ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಸಾಲು ಸಾಲಾಗಿ ನಿಲ್ಲಿಸಲಾಗಿತ್ತು.
ಸಾರ್ವಜನಿಕರಿಗೆ ತೊಂದರೆ: ಹೆದ್ದಾರಿಯಲ್ಲೇ ವಾಹನಗಳನ್ನು ನಿಲ್ಲಿಸಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಮತ್ತು ತುರ್ತು ವಾಹನಗಳಿಗೆ ತೀವ್ರ ತೊಂದರೆಯಾಗಿದ್ದು, ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪೊಲೀಸ್ ಕ್ರಮ: ನಿಯಮ ಮೀರಿ ವಾಹನ ಪಾರ್ಕಿಂಗ್ಗೆ ಅವಕಾಶ ನೀಡಿದ ಮತ್ತು ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಜಪೆ ಪೊಲೀಸರು ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ಮಾಲೀಕರು ಹಾಗೂ ಆಯೋಜಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ದಾಖಲಾದ ಪ್ರಕರಣ: ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 73/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 285, 292 ಮತ್ತು ಐ.ಎಂ.ವಿ ಆಕ್ಟ್ (IMV Act) ಕಲಂ 122 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ತನಿಖೆ ಪ್ರಗತಿಯಲ್ಲಿದೆ.
ಸಾರ್ವಜನಿಕ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಇಂತಹ ಬೇಜವಾಬ್ದಾರಿ ವರ್ತನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸರು ಈ ಮೂಲಕ ಎಚ್ಚರಿಸಿದ್ದಾರೆ.


-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
