DEVELOPMENT
ವಿಟ್ಲ: ಬೊಬ್ಬೆಕೇರಿಯಲ್ಲಿ 60 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ
ವಿಟ್ಲ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೊಬ್ಬೆಕೇರಿಯಲ್ಲಿ ಸಾರ್ವಜನಿಕರ ಬಹು ವರ್ಷಗಳ ಬೇಡಿಕೆಯಾಗಿದ್ದ ನೂತನ ಕಾಂಕ್ರೀಟ್ ರಸ್ತೆಯು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ 60 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡು, ಸಾರ್ವಜನಿಕರ ಸಮ್ಮುಖದಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ.
ರಸ್ತೆಯ ವಿಶೇಷತೆಗಳು ಮತ್ತು ತಾಂತ್ರಿಕ ವಿವರಗಳು
- ಅನುದಾನ: 60 ಲಕ್ಷ ರೂ. (ಪುತ್ತೂರು ಶಾಸಕರ ನಿಧಿ)
- ಉದ್ದ ಹಾಗೂ ಅಗಲ: ಸುಮಾರು 130 ಮೀಟರ್ ಉದ್ದ ಮತ್ತು 7 ಮೀಟರ್ ಅಗಲ
- ದಪ್ಪ: 10 ಇಂಚು ದಪ್ಪದ ಗಟ್ಟಿಯಾದ ಕಾಂಕ್ರೀಟ್ ರಸ್ತೆ
- ಚರಂಡಿ ವ್ಯವಸ್ಥೆ: ರಸ್ತೆಯ ಎರಡೂ ಬದಿಗಳಲ್ಲಿ ನೀರು ನಿಲ್ಲದಂತೆ ಸುಧಾರಿತ ವ್ಯವಸ್ಥಿತ ಡ್ರೈನೇಜ್ ನಿರ್ಮಾಣ
ಸಮಸ್ಯೆಗೆ ಶಾಶ್ವತ ಮುಕ್ತಿ
ಈ ಹಿಂದೆ ಮಳೆಗಾಲದಲ್ಲಿ ಈ ರಸ್ತೆಯಲ್ಲಿ 1 ರಿಂದ 1.5 ಅಡಿಯಷ್ಟು ನೀರು ನಿಲ್ಲುತ್ತಿತ್ತು. ಇದರಿಂದಾಗಿ ವಾಹನ ಸವಾರರು ಸಂಚರಿಸಲು ಮತ್ತು ಶಾಲಾ ಮಕ್ಕಳು ನಡೆದುಕೊಂಡು ಹೋಗಲು ತೀವ್ರತರವಾದ ತೊಂದರೆಯಾಗುತ್ತಿತ್ತು. ಈ ಬಗ್ಗೆ ಸ್ಥಳೀಯ ಸಾರ್ವಜನಿಕರು ಹಾಗೂ ಮಹಿಳೆಯರು ಶಾಶ್ವತ ಪರಿಹಾರ ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಿಕೊಂಡಿದ್ದರು. ಜನರ ಈ ತುರ್ತು ಬೇಡಿಕೆಗೆ ಸ್ಪಂದಿಸಿದ ಶಾಸಕರು ಅತ್ಯಂತ ಗುಣಮಟ್ಟದ ರಸ್ತೆಯನ್ನು ನಿರ್ಮಿಸಿಕೊಟ್ಟಿದ್ದಾರೆ.
ಅಭಿವೃದ್ಧಿಗೆ ಬದ್ಧ – ಶಾಸಕ ಅಶೋಕ್ ಕುಮಾರ್ ರೈ
ರಸ್ತೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈಯವರು, ವಿಟ್ಲ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆಗಳು ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಈಗಾಗಲೇ ಹತ್ತು ಕೋಟಿ ರೂಪಾಯಿಗಳಿಗೂ ಅಧಿಕ ಅನುದಾನ ತರಲಾಗಿದೆ ಎಂದು ತಿಳಿಸಿದರು. ವಿಟ್ಲದ ಸಮಗ್ರ ಅಭಿವೃದ್ಧಿಗೆ ಯಾವುದೇ ಕೊರತೆಯಾಗದಂತೆ, ಸಾರ್ವಜನಿಕರ ಹಿತದೃಷ್ಟಿಯಿಂದ ಹಂತ ಹಂತವಾಗಿ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಸ್ಥಳೀಯರ ಸಹಕಾರ ಸದಾ ಹೀಗೆಯೇ ಇರಲಿ ಎಂದು ಆಶಿಸಿದರು.
“ಸಾರ್ವಜನಿಕರ ಹಾಗೂ ಮಹಿಳೆಯರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಈ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ. ವಿಟ್ಲ ಪಟ್ಟಣ ಪಂಚಾಯತಿಯ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ.” — ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖರು, ಪಟ್ಟಣ ಪಂಚಾಯತಿಯ ಸದಸ್ಯರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು, ನೂತನ ರಸ್ತೆ ನಿರ್ಮಾಣಕ್ಕೆ ಹರ್ಷ ವ್ಯಕ್ತಪಡಿಸಿದರು
DEVELOPMENT
ವಿಟ್ಲ ಪಟ್ಟಣ ಪಂಚಾಯತ್: 3 ವರ್ಷದಲ್ಲಿ ₹111.57 ಕೋಟಿ ಅನುದಾನ: ಶಾಸಕ ಅಶೋಕ್ ರೈ
ವಿಟ್ಲ: ತಮ್ಮ ಮೂರು ವರ್ಷದ ಶಾಸಕತ್ವದ ಅವಧಿಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ಗೆ ಕುಡಿಯುವ ನೀರಿನ ಯೋಜನೆಗೆ 100ಕೋಟಿ ರೂ. ಸೇರಿದಂತೆ ಒಟ್ಟು 111.57 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ತರಲಾಗುವುದು. ಹಿಂದೆ ಶಾಸಕರಾಗಿದ್ದವರು ಕಚೇರಿಯಲ್ಲಿ ಕುಳಿತು ಡೀಲ್ ಮಾಡುತ್ತಿದ್ದರು, ಅವರೀಗ ರಸ್ತೆಯಲ್ಲಿ ಗುಂಡಿ ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಜನರ ಬೇಡಿಕೆ ಈಡೇರಿಸಲು ಹಾಗೂ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ನಮಗೆ ವೋಟ್ ಹಾಕಿದ್ದಾರೆ. ಕಾಂಕ್ರೀಟ್ ಕಾಣದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶಾಸಕನಾಗಿ ಮೂರು ವರ್ಷದಲ್ಲಿ ಎಲ್ಲೆಲ್ಲಿಗೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಜಾತಕ ನಮ್ಮಲ್ಲಿದೆ. ಅಗತ್ಯವಿರುವವರು ತಮ್ಮ ಕಚೇರಿಯಿಂದ ಮಾಹಿತಿ ಪಡೆದುಕೊಳ್ಳಬಹುದು. ಅಭಿವೃದ್ಧಿಯೊಂದೇ ನಮ್ಮ ಮಂತ್ರವಾಗಿದ್ದು, ಈ ಕಾರಣಕ್ಕಾಗಿಯೇ ಜನ ಕಾಂಗ್ರೆಸ್ ಪಕ್ಷದತ್ತ ವಾಲುತ್ತಿದ್ದಾರೆ ಎಂದು ಸವಾಲು ಎಸೆದರು.

ಧರ್ಮದ ಹೆಸರಲ್ಲಿ ವಿಭಜಿಸಿ ವೋಟ್ ಕೇಳಲ್ಲ: ಜನರನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ, ಗಲಭೆ ಸೃಷ್ಟಿಸಿ, ಯಾರದ್ದೋ ಮಕ್ಕಳನ್ನು ಜೈಲಿಗೆ ಕಳುಹಿಸಿ ನಾವು ವೋಟ್ ಕೇಳುತ್ತಿಲ್ಲ. ಜನರ ಬೇಡಿಕೆ ಈಡೇರಿಸಿ ಅಭಿವೃದ್ಧಿಯ ಆಧಾರದಲ್ಲಿ ವೋಟ್ ಕೇಳುತ್ತಿದ್ದೇವೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಬಿಜೆಪಿಗೆ ಅಭಿವೃದ್ಧಿ ಮಾಡಿ ಗೊತ್ತಿಲ್ಲ. ಧರ್ಮದ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸುವುದೇ ಅವರ ಕೆಲಸ. ಜನ ಈಗ ವಿದ್ಯಾವಂತರಾಗಿದ್ದು, ಬಿಜೆಪಿಯ ನಾಟಕ ಯುವಕರಿಗೂ, ಪೋಷಕರಿಗೂ ಅರ್ಥವಾಗುತ್ತಿದೆ. ಮುಂದೆ ಇವರ ಧರ್ಮ ರಾಜಕೀಯ ನಡೆಯುವುದಿಲ್ಲ ಎಂದರು.

ಪಕ್ಷ-ಧರ್ಮ ನೋಡಿ ಅನುದಾನ ಹಂಚಿಲ್ಲ: ಮುಂದಿನ ಎರಡು ಅವಧಿಗೂ ಜನ ನಮ್ಮನ್ನೇ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಬಿಜೆಪಿ ಶಾಸಕರಿದ್ದಾಗ ಕಾಂಗ್ರೆಸ್ ಕಾರ್ಯಕರ್ತರ ಕೆಲಸ ಮಾಡುತ್ತಿರಲಿಲ್ಲ. ಆದರೆ ನಾನು ಪಕ್ಷ ಅಥವಾ ವ್ಯಕ್ತಿಯನ್ನು ನೋಡಿ ರಾಜಕೀಯ ಮಾಡಿಲ್ಲ. ಬಿಜೆಪಿ ಶಾಸಕರು ಜಾತಿ-ಧರ್ಮ ನೋಡಿ ಅನುದಾನ ಹಂಚುತ್ತಿದ್ದರು. ಆದರೆ ನಾವು ಆ ದುಷ್ಟ ಕೆಲಸ ಮಾಡುವುದಿಲ್ಲ. ರಾಜಧರ್ಮ ಪಾಲನೆಯೇ ನನ್ನ ಮುಖ್ಯ ಕರ್ತವ್ಯ ಎಂದು ಹೇಳಿದರು.
ಸೋಮವಾರ ಕಚೇರಿಗೆ ಬನ್ನಿ: ಸಾರ್ವಜನಿಕರ ಯಾವುದೇ ಕೆಲಸ ಬಾಕಿ ಇದ್ದರೆ ಅಥವಾ ಅಧಿಕಾರಿಗಳಿಂದ ತೊಂದರೆಯಾಗಿದ್ದರೆ ನೇರವಾಗಿ ನನ್ನ ಕಚೇರಿಗೆ ಬಂದು ತಿಳಿಸಿ. ಬೆಳಿಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕರಿಗಾಗಿ ಸಮಯ ಮೀಸಲಿಡುತ್ತೇನೆ. ಬಾಡಿಗೆ ಮನೆಯಲ್ಲಿರುವವರಿಗೆ 3 ಸೆಂಟ್ಸ್ ಜಾಗ, ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಹಾಗೂ ಮನೆ ಮನೆಗೆ 24 ಗಂಟೆ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸ ಮಾಡುತ್ತೇನೆ. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ, ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡಿಸುವ ಮೂಲಕ ಪುತ್ತೂರಿನಲ್ಲಿ ಶಾಂತಿಯುತ ಆಡಳಿತ ನೀಡುತ್ತೇನೆ ಎಂದು ಭರವಸೆ ನೀಡಿದರು.
15 ದಿನದಲ್ಲಿ ಹಕ್ಕುಪತ್ರ ಕೊಡದಿದ್ದರೆ ನೀರಿಲ್ಲದ ಊರಿಗೆ ಟ್ರಾನ್ಸ್ಫರ್!“
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಂದಪ್ಪಾಡಿ ಭಾಗದ ಸುಮಾರು 15 ಕುಟುಂಬಗಳು 94ಸಿ ಹಕ್ಕುಪತ್ರಕ್ಕಾಗಿ ಕಳೆದ 13 ವರ್ಷಗಳಿಂದ ಕಚೇರಿ ಅಲೆಯುತ್ತಿದ್ದಾರೆ. ಮನೆ ಕಟ್ಟಿಕೊಂಡು 13 ವರ್ಷಗಳಿಂದ ವಾಸವಿದ್ದರೂ ಹಕ್ಕುಪತ್ರ ನೀಡಲು ಅಧಿಕಾರಿಗಳಿಗೆ ಏನು ಸಂಕಟ? ಮುಂದಿನ 15 ದಿನಗಳೊಳಗೆ ಈ ಎಲ್ಲಾ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು. ಮನೆ ಇರುವ ಜಾಗವನ್ನು ಹಕ್ಕುಪತ್ರಕ್ಕೆ ನೀಡಿ, ಬಾಕಿ ಉಳಿದ ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸಿ. ನಿಗದಿತ ಅವಧಿಯೊಳಗೆ ಹಕ್ಕುಪತ್ರ ನೀಡದಿದ್ದರೆ, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಖಂಡಿತವಾಗಿಯೂ ನೀರಿಲ್ಲದ ಊರಿಗೆ ಟ್ರಾನ್ಸ್ಫರ್ ಮಾಡಿಸುತ್ತೇನೆ.”
— ಅಶೋಕ್ ರೈ, ಶಾಸಕರು, ಪುತ್ತೂರು
ನಮ್ಮ ವಾರ್ಡಿಗೆ ಇದುವರೆಗೂ ಯಾವ ಶಾಸಕರೂ ಬಂದಿಲ್ಲ
ನಮ್ಮ ವಾರ್ಡು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿದ್ದರೂ ಇಷ್ಟು ವರ್ಷದಲ್ಲಿ ಯಾವ ಶಾಸಕರೂ ನಮ್ಮ ಸಮಸ್ಯೆ ಕೇಳಲು ಬಂದಿಲ್ಲ, ಮೊದಲ ಬಾರಿಗೆ ನೀವು ಬಂದಿದ್ದೀರಿ. ನಮ್ಮ ಬೇಡಿಕೆಯನ್ನು ಈಡೇರಿಸಿದ್ದೀರಿ.ಮುಂದಿನ ಚುನಾವಣೆಯಲ್ಲಿ ನಾವು ಪಕ್ಷ ನೋಡದೆ ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಬಹುತೇಕ ವಾರ್ಡಿನ ನಿವಾಸಿಗಳು ಶಾಸಕರಲ್ಲಿ ನೋವು ತೋಡಿಕೊಂಡರು. ನಮಗೆ ಅಭಿವೃದ್ದಿ ಮುಖ್ಯ ಯಾರು ಅಭಿವೃದ್ದಿ ಮಾಡುತ್ತಾರೋ ಅವರಿಗೆ ನಾವು ವೋಟು ಹಾಕಿಯೇ ಹಾಕುತ್ತೇವೆ ಎಂದು ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ರಮಾಣ ಮಾಡಿದರು.

ಮುಂದಿನ ಜನವರಿಯಲ್ಲಿ ಶುದ್ದ ಕುಡಿಯುವ ನೀರು
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಈ ಕಾರಣಕ್ಕೆ ೧೦೦ ಕೋಟಿ ಅನುದಾನ ಇಟ್ಟಿದ್ದೇವೆ, ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಜನವರಿ ವೇಳೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಶಾಸಕರು ಈ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಿದರು.

ಸಂಘರ್ಷ ಸೃಷ್ಟಿಸಬೇಡಿ: ಪದ್ಮನಾಭ ಪೂಜಾರಿ
ಶಾಸಕರ ಅಭಿವೃದ್ದಿ ಕೆಲಸವನ್ನು ಕಂಡು ಬಿಜೆಪಿ ಹತಾಷೆಗೊಂಡಿದೆ, ಈ ಕಾರಣಕ್ಕೆ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟು ಪುತ್ತೂರಿನಲ್ಲಿ ಸಂಘರ್ಷವನ್ನು ಸೃಷ್ಟಿ ಮಾಡುತ್ತಿದೆ. ಇಲ್ಲಿ ಶಾಂತಿಯುತ ವಾತಾವರಣ ಇದ್ದರೆ ಮಾತ್ರ ಅಭಿವೃದ್ದಿ ಯಾಗಲು ಸಾಧ್ಯ ಎಂಬುದು ಬಿಜೆಪಿಗೆ ಗೊತ್ತಿದೆ. ಅಭಿವೃದ್ದಿಯಾಗುವುದನ್ನು ಕಂಡು ಸಹಿಸಲು ಸಾಧ್ಯವಾಗದ ಬಿಜೆಪಿ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಕೆಲಸದಲ್ಲಿ ತೊಡಗಿದೆ ಆದರೆ ಇನ್ನು ಬಿಜೆಪಿ ಡೋಂಗಿ ಆಟಗಳು ನಡೆಯುವುದಿಲ್ಲ ಎಂದು ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಹೇಳಿದರು.

ಪುತ್ತೂರು ವಿಧಾನಸಭಾ ಕ್ಷೆತ್ರದ ಗಲ್ಲಿ ಗಲ್ಲಿಯ ರಸ್ತೆಗಳು ಅಭಿವೃದ್ದಿಯಾಗುತ್ತಿದೆ, ಮೆಡಿಕಲ್ ಕಾಲೇಜು , ತಾಲೂಕು ಕ್ರೀಂಡಾಂಗಣ ಮಂಜೂರಾಗಿದೆ, ಜನರ ಬೇಡಿಕೆ ಏನಿತ್ತೋ ಅದೆಲ್ಲವೂ ಈಡೇರುತ್ತಿರುವುದು ಬಿಜೆಪಿ ದಿಕ್ಕಾಪಾಲಾಗಳು ಕಾರಣವಾಗಿದೆ ಎಂದು ಹೇಳಿದರು.

ಪಂಚಗ್ಯಾರಂಟಿ ಬೇಡವೇ: ಎಂ ಎಸ್ ಮಹಮ್ಮದ್
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮಾತನಾಡಿ ಕರ್ನಾಟಕ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಯನ್ನು ಬಿಜೆಪಿ ಅವಹೇಳನ ಮಾಡಿ ಅದನ್ನು ರದ್ದು ಮಾಡಬೇಕೆಂದು ಹೋರಾಟವನ್ನು ನಡೆಸುತ್ತಿದೆ ಈ ಯೋಜನೆಯಿಂದ ನಿಮಗೆ ಪ್ರಯೋಜನವಾಗದೇ ಇದ್ದಲ್ಲಿ ಅದನ್ನು ರದ್ದು ಮಾಡಬೇಕಾಗುತ್ತದೆ ಎಂದು ಹೇಳಿದಾಗ ಯಾವುದೇ ಕಾರಣಕ್ಕೂ ಅದನ್ನು ರದ್ದು ಮಾಡಬೇಡಿ,

ಅದರಿಂದ ನಮಗೆ ತುಂಬಾ ಪ್ರಯೋಜನವಾಗಿದೆ, ಬಡವರ ಪರ ಯೋಜನೆಯನ್ನು ರದ್ದು ಮಾಡಲು ಹೋರಾಟ ನಡೆಸುವವರಿಗೆ ನಾವು ಪಾಠ ಕಲಿಸುತ್ತೇವೆ ಎಂದು ನೆರೆದಿದ್ದ ಮಹಿಳೆಯರು ಹೇಳಿದರು. ಬಡವರ ಪರ ಇರುವ ಸರಕಾರ ಕಾಂಗ್ರೆಸ್ ಸರಕಾರ ಮಾತ್ರ ಎಂಬುದು ಈಗ ಜನತೆಗೆ ಅರಿವಾಗಿದೆ, ಬಿಜೆಪಿ ಬಡವರ ವಿರೋಧಿಯಾಗಿದೆ. ಕೇಂದ್ರದಲ್ಲಿ ಮೋದಿ ಸರಕಾರ ಅಢಳಿತಕ್ಕೆ ಬಂದ ಬಳಿಕ ನಿತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಂ ಎಸ್ ಹೇಳಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಡಿಸಿಸಿ ಕಾರ್ಯದರ್ಶಿ ಮುರಳೀಧರ್ ರೈ ಮಟಂತಬೆಟ್ಟು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಶ್ರಫ್,ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ್ ವಿಟ್ಲ, ಹಂಝ, ರಮನಾಥ ವಿಟ್ಲ , ಸುಧೀರ್ ಉಕ್ಕುಡ,ಸುರೇಶ್ ವಿಟ್ಲ, ಮುರಳೀ ನಾಯಕ್, ಅಬ್ದುಲ್ ರಹಿಮಾನ್ ಕಾಂತಡ್ಕ, ಅಬ್ದುಲ್ ರಹಿಮಾನ್ ಕುರುಂಬಳ,ಚಂದ್ರಹಾಸ ಗೌಡ, ಕೃಷ್ಣಯ್ಯ ವಿಟ್ಲ ಅರಮನೆ, ಆನಂದ ದರ್ಬೆ, ಗಿರಿಧರ್ ಪುಚ್ಚೆಗುತ್ತು, , ಎಸ್ ಕೆಮಹಮ್ಮದ್, ಸುನಿತಾ ಕೋಟ್ಯಾನ್ ಉಕ್ಕುಡ, ರವಿ ಬಿಕೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಫಲಾನುಭವಿಗಳು ಉಪಸ್ಥಿತರಿದ್ದರು.

ಶಿಲಾನ್ಯಾಸ ಗೊಂಡ ಕಾಮಗಾರಿಗಳು
10 ಲಕ್ಷ ಅನುದಾನದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ನೆಕ್ಕರೆ ಜಾಕಿ ಮೂಲೆ ರಸ್ತೆಗೆ ಶಿಲಾನ್ಯಾಸ
5 ಲಕ್ಷ ಅನುದಾನದಲ್ಲಿ ಬದನಾಜೆ ಕುಂದರ್ ಕುಟುಂಬದ ತರವಾಡು ಮನೆ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ
5 ಲಕ್ಷ ಅನುದಾನದಲ್ಲಿ ವಿಟ್ಲ ಪ್ಟಣ ಪಂಚಾಯತ್ ವ್ಯಾಪ್ತಿಯ ನಿಡ್ಯ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

10 ಲಕ್ಷ ಅನುದಾನದಲ ಚಂದಳಿಕೆ ಕುರುಂಬಳ ರಸ್ತೆಗೆ ಶಿಲಾನ್ಯಾಸ
5 ಲಕ್ಷ ಅನುದಾನದಲ್ಲಿ ಚಂದಳಿಕಎ ಕಾಯರ್ ಮಾರ್ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು
10 ಲಕ್ಷ ಅನುದಾನದಲ್ಲಿ ಕಲ್ಲಕಟ್ಟ ಕೊಲ್ಯ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು
5 ಲಕ್ಷ ಅನುದಾನದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪೊನ್ನೋಟು ದೇವಸ್ಯ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ ನಡೆಯಿತು

5 ಲಕ್ಷ ಅನುದಾನದಲ್ಲಿ ವಿಟ್ಲ ಟಿವಿಎಸ್ ಶೋರೂಂ ಬಳಿ ರಸ್ತೆ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು
10 ಲಕ್ಷ ಅನುದಾನದಲ್ಲಿ ವಿಟ್ಲ ಅರಮನೆ ಬಾಕಿಮಾರ್ ಅರಮನೆ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು
10 ಲಕ್ಣ ಅನುದಾನದಲ್ಲಿ ಪುಚ್ಚೆಗುತ್ತು ಕಾಶಿಪಟ್ನ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು

10 ಲಕ್ಷ ಅನುದಾನದಲ್ಲಿ ಚಂದಪ್ಪಾಡಿ ರಸ್ತೆ ಹಾಗೂ 5 ಲಕ್ಷ ಅನುದಾನದಲ್ಲಿ ಗೊಳಿದಡಿ ದೈವಸ್ಥಾನದ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು
10 ಲಕ್ಷ ಅನುದಾನದಲ್ಲಿ ಪುಚ್ಚೆಗುತ್ತು ಮುಗೇರ ದೈವಸ್ಥಾನಕ್ಕೆ ತೆರಳುವ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು
5 ಲಕ್ಷ ಅನುದಾನದಲ್ಲಿ ಅಪ್ಪೇರಿಪಾದೆ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು
5 ಲಕ್ಷ ಅನುದಾನದಲ್ಲಿ ಉಕ್ಕುಡ ಸರೋಳಿಯಲ್ಲಿ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಅವರು ಶಿಲಾನ್ಯಾಸ ನಡೆಸಿದರು.
15 ಲಕ್ಷ ಅನುದಾನದಲ್ಲಿ ವಿಟ್ಲ ಉಕ್ಕುಡ ಒತ್ತೆಸಾರು- ಆಲಂಗಾರು ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು
10 ಲಕ್ಷ ಅನುದಾನದಲ್ಲಿ ಉಕ್ಕುಡ ದರ್ಬೆ ರಸ್ತೆ ಅಭಿವೃದ್ದಿ ಹಾಗೂ 5 ಲಕ್ಣ ಅನುದಾನದಲ್ಲಿ ಒಳರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು
10 ಲಕ್ಣ ಅನುದಾನದಲ್ಲಿ ಉಕ್ಕುಡ ದರ್ಬೆ ಜಂಕ್ಷನ್ ಅಭಿವೃದ್ದಿ,10 ಲಕ್ಷ ಅನುದಾನದಲ್ಲಿ ಕಾನತ್ತಡ್ಕ ದರ್ಬೆ ರಸ್ತೆ,5 ಲಕ್ಷ ಅನುದಾನದಲ್ಲಿ ಉಕ್ಕುಡ ದರ್ಬೆ ಒಳ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನಡೆಯಿತು
-
accident1 month agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
