Connect with us

INTERNATIONAL

ಇರಾನ್‌ನ ಸರ್ವೋಚ್ಚ ನಾಯಕನ ಸಾವು ; ಖಮೇನಿ X ನಲ್ಲಿ ಕೊನೆಯ ಕುತೂಹಲಕಾರಿ ಪೋಸ್ಟ್ ​! ಖಮೇನಿ ಸಾವನ್ನು ದೃಢಪಡಿಸಿದ ಇರಾನ್‌

Published

on

ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ (Ali Khamenei) ಅವರು ಇಸ್ರೇಲ್ ಮತ್ತು ಅಮೆರಿಕಾದ ಸಂಯುಕ್ತ ವಾಯು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮಗಳು ಅಧಿಕೃತವಾಗಿ ದೃಢಪಡಿಸಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಮೊದಲು ಈ ಸುದ್ದಿಯನ್ನು ಘೋಷಿಸಿದ್ದರು. ಖಮೇನಿ ಅವರು ತಮ್ಮ ತೆಹ್ರಾನ್‌ನಲ್ಲಿರುವ ಕಚೇರಿಯಲ್ಲಿ ದಾಳಿಯ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.

ಇರಾನ್ ಸರ್ಕಾರವು ಖಮೇನಿ ಅವರ ನಿಧನದ ನಂತರ 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಇದು ಇರಾನ್‌ನ ಇತಿಹಾಸದಲ್ಲಿ ಒಂದು ಪ್ರಮುಖ ತಿರುವು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಖಮೇನಿ ಅವರು 1989ರಿಂದ ಸುಪ್ರೀಂ ಲೀಡರ್ ಆಗಿ 36 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಅವರು ಇರಾನ್‌ನ ಇಸ್ಲಾಮಿಕ್ ಕ್ರಾಂತಿಯ ನಂತರದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು ಮತ್ತು ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧದ ಕಠಿಣ ನಿಲುವಿಗೆ ಹೆಸರುವಾಸಿಯಾಗಿದ್ದರು.

ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ನಿಧನರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಆದರೆ ಈ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಖಮೇನಿ ಅವರ ಖಾತೆಯಿಂದ ಒಂದು ನಿಗೂಢ ಸಂದೇಶವನ್ನು ಹಂಚಿಕೊಳ್ಳಲಾಗಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಸಾವು ವಿಶ್ವದಾದ್ಯಂತ ದೊಡ್ಡ ಸುದ್ದಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಈ ಸಾವನ್ನು ಘೋಷಿಸಿದ್ದರು. ಆದರೆ ಕೂಡಲೇ, ಖಮೇನಿ ಅವರ ಅಧಿಕೃತ X (ಟ್ವಿಟರ್) ಖಾತೆಯಿಂದ ಒಂದು ನಿಗೂಢ ಸಂದೇಶ ಬಂದಿದೆ. ಇದು ಪರ್ಷಿಯನ್ ಭಾಷೆಯಲ್ಲಿ ಬರೆದಿದ್ದು, ಇದು ಈಗ ಎಲ್ಲೆಡೆ ವೈರಲ್​ ಆಗಿದೆ. ಜೊತೆಗೆ ಹಲವು ಅನುಮಾನಕ್ಕೆ ಕಾರಣವಾಗಿದೆ.

ಖಮೇನಿ ಸಾವಿನ ಬಗ್ಗೆ ಟ್ರಂಪ್​ ಘೋಷಣೆ; ಖಮೇನಿ ಕೊನೆಯ ಪೋಸ್ಟ್​ ವೈರಲ್​!
ಟ್ರಂಪ್ ಖಮೇನಿ ಸಾವಿನ ಬಗ್ಗೆ ಪೋಸ್ಟ್ ತಡರಾತ್ರಿ ಮಾಡಿದ್ದಾರೆ. ಅವರು ಹೇಳಿದ್ದು, “ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ನಿಧನರಾಗಿದ್ದಾರೆ. ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಬಳಸಿ ಅವರನ್ನು ಪತ್ತೆ ಮಾಡಲಾಯಿತು. ಇರಾನ್ ಜನರಿಗೆ ತಮ್ಮ ದೇಶವನ್ನು ಮರಳಿ ಪಡೆಯಲು ಇದು ದೊಡ್ಡ ಅವಕಾಶ” ಎಂದಿದ್ದಾರೆ. ಈ ಬೆನ್ನಲ್ಲೇ ಖಮೇನಿ ಪೋಸ್ಟ್​ ವೈರಲ್​ ಆಗಿದೆ. ಇದು ಪರ್ಷಿಯನ್ ಭಾಷೆಯಲ್ಲಿ ಬರೆದಿದ್ದು, “ಬಿ ನಮ್-ಎ ನಮಿ-ಯೇ ಹೇದರ್, ಅಲೈಹಿಸ್-ಸಲಾಮ್” ಎಂದು ಇದೆ. ಇದರ ಅರ್ಥ “ಹೈದರ್ (ಅವರಿಗೆ ಶಾಂತಿ ಸಿಗಲಿ)”, ಹೈದರ್ ಅಂದರೆ ಮೊದಲ ಶಿಯಾ ಇಮಾಮ್ ಅಲಿ ಅವರ ಹೆಸರು. ಈ ಸಂದೇಶ ಸಾವಿನ ನಂತರ ಬಂದಿದ್ದು, ವಿಶ್ವದಲ್ಲಿ ಚರ್ಚೆಗೆ ಕಾರಣವಾಗಿದೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ, ಟೆಹ್ರಾನ್‌ನ ಬೀದಿಗಳಲ್ಲಿ ಹರ್ಷೋದ್ಗಾರಗಳು ಕೇಳಿಬಂದಿವೆ.

ಇರಾನ್​ನಲ್ಲಿ 40 ದಿನಗಳ ರಾಷ್ಟ್ರೀಯ ಶೋಕಾಚರಣೆ
ಇರಾನ್ ಸರ್ಕಾರಿ ದೂರದರ್ಶನ ಭಾನುವಾರ ಬೆಳಿಗ್ಗೆ ಈ ಸಾವನ್ನು ದೃಢಪಡಿಸಿತು. ಅವರು 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದರು. ಖಮೇನಿ ಅವರ ಮಗಳು, ಮೊಮ್ಮಗಳು, ಸೊಸೆ ಮತ್ತು ಅಳಿಯ ಸೇರಿದಂತೆ ಕುಟುಂಬದ ಹಲವು ಸದಸ್ಯರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ. ಇದಲ್ಲದೆ, ಇರಾನ್ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್ ಮೊಹಮ್ಮದ್ ಪಕ್‌ಪೌರ್ ಕೂಡ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಖಮೇನಿ ಕೊನೆಯ ಪೋಸ್ಟ್​ ವೈರಲ್​!
ನಿಗೂಢ ಸಂದೇಶದ ಬಗ್ಗೆ ಹೇಳುವುದಾದರೆ, ಖಮೇನಿ ಅವರ ಪರ್ಷಿಯನ್ X ಖಾತೆ @Khamenei_fa ನಿಂದ ಈ ಪೋಸ್ಟ್ ಬಂದಿದೆ. ಇದು ಹೈದರ್ ಅಂದರೆ ಅಲಿ ಅವರನ್ನು ಸ್ಮರಿಸುತ್ತದೆ. ಸಾವಿನ ನಂತರ ಬಂದಿದ್ದರಿಂದ, ಇದು ಪೂರ್ವನಿಗದಿತ ಅಥವಾ ಹ್ಯಾಕ್ ಆಗಿರಬಹುದು ಎಂದು ಚರ್ಚೆಯಾಗಿದೆ.

ಈ ಘಟನೆ ಮಧ್ಯಪ್ರಾಚ್ಯದಲ್ಲಿ ದೊಡ್ಡ ಬದಲಾವಣೆ ತರಬಹುದು. ಇಸ್ರೇಲ್ ಮತ್ತು ಅಮೆರಿಕ ದಾಳಿ ಮಾಡಿದ ನಂತರ, ಇರಾನ್ ಪ್ರತೀಕಾರ ತೀರಿಸಿಕೊಳ್ಳಬಹುದು. ಸೌದಿ ಅರೇಬಿಯಾ ಮತ್ತು ಇತರ ದೇಶಗಳು ಇರಾನ್ ದಾಳಿಗಳನ್ನು ಖಂಡಿಸಿವೆ. ಕತಾರ್ ಸಮುದ್ರ ಸಂಚಾರವನ್ನು ತಾತ್ಕಾಲಿಕ ನಿಲ್ಲಿಸಿದೆ. ಇರಾನ್ ಅಮೆರಿಕ ಸೈನ್ಯ ಬೇಸ್‌ಗಳ ಮೇಲೆ ದಾಳಿ ಮಾಡಿದೆ ಎಂದು ವರದಿಗಳಿವೆ.
ಇರಾನ್ ಜನರ ಪ್ರತಿಕ್ರಿಯೆ ಮಿಶ್ರವಾಗಿದೆ. ಕೆಲವರು ಸಂತೋಷಪಡುತ್ತಿದ್ದರೆ, ಇನ್ನು ಕೆಲವರು ದುಃಖದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಹರಿದಾಡುತ್ತಿವೆ, ಅಲ್ಲಿ ಜನರು ಆಘಾತ ಮತ್ತು ಸಂತೋಷದ ಕಣ್ಣೀರು ಸುರಿಸುತ್ತಿದ್ದಾರೆ. ಇರಾನ್ ವಿರೋಧಿ ನಾಯಕರು ಇದನ್ನು ಆಚರಣೆಯಂತೆ ನೋಡುತ್ತಾರೆ. ರೆಜಾ ಪಹ್ಲವಿ ಅವರು “ಇಸ್ಲಾಮಿಕ್ ರಿಪಬ್ಲಿಕ್ ಅಂತ್ಯಗೊಂಡಿದೆ” ಎಂದು ಹೇಳಿದ್ದಾರೆ.

ಪ್ರತಿಕಾರಕ್ಕೆ ಪ್ರತಿಜ್ಞೆ ಮಾಡಿದ ಇರಾನ್

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತುತ್ತತುದಿಗೇರಿದೆ. ಇರಾನ್‌ನ (Iran) ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಸಾವು ವಿಶ್ವದಾದ್ಯಂತ ದೊಡ್ಡ ಆಘಾತ ಉಂಟುಮಾಡಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಅವರು ಕೊಲ್ಲಲ್ಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ದೃಢಪಡಿಸಿವೆ. ಇದರ ನಂತರ, ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) “ಇತಿಹಾಸದ ಅತ್ಯಂತ ಉಗ್ರ ಆಕ್ರಮಣಕಾರಿ ಕಾರ್ಯಾಚರಣೆ” ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಇದು ಯುದ್ಧದ ಭೀತಿಯನ್ನು ಹೆಚ್ಚಿಸಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್ ಅನ್ನು ಮುನ್ನಡೆಸಿದ ಮತ್ತು ದೇಶದ ರಾಜಕೀಯ ಮತ್ತು ಮಿಲಿಟರಿ ಮಾರ್ಗವನ್ನು ರೂಪಿಸಿದ ಅಯತೊಲ್ಲಾ ಅಲಿ ಖಮೇನಿ ಅವರು 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕಾ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರನ್ನ ಕೊಲ್ಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ ಖಮೇನಿ ಸಾವನ್ನು ಇರಾನ್ ಕೂಡ ದೃಢಪಡಿಸಿದೆ.
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಶನಿವಾರ ಅಮೆರಿಕದ ಬೆಂಬಲದೊಂದಿಗೆ ನಡೆಸಿದ ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದರು. ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಖಮೇನಿ ಅವರ ಮರಣವನ್ನು ಘೋಷಿಸಿದರು. ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ನಾಯಕರಲ್ಲಿ ಖಮೇನಿ ಒಬ್ಬರು. ಅವರು 1989 ರಲ್ಲಿ 50 ನೇ ವಯಸ್ಸಿನಲ್ಲಿ ಸರ್ವೋಚ್ಚ ನಾಯಕರಾದರು ಮತ್ತು ಫೆಬ್ರವರಿ 28, 2026 ರಂದು ಸಾಯುವವರೆಗೂ ಅಧಿಕಾರದಲ್ಲಿದ್ದರು.

ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೋಕಾಚರಣೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khameni) ಅವರ ಸಾವು ವಿಶ್ವದಾದ್ಯಂತ ದೊಡ್ಡ ಸುದ್ದಿಯಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಅವರು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಇರಾನ್‌ನಲ್ಲಿ ಮಾತ್ರವಲ್ಲ, ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಲ್ಲೂ ದುಃಖದ ಅಲೆ ಎಬ್ಬಿಸಿದೆ. ಗ್ರಾಮದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
ಅಲಿಪುರ ಗ್ರಾಮದಲ್ಲಿ ಕಪ್ಪು ಬಾವುಟಗಳನ್ನು ಪ್ರದರ್ಶಿಸಿ, ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಜನರು ಖಮೇನಿ ಅವರನ್ನು ಸ್ಮರಿಸುತ್ತಿದ್ದಾರೆ. ಇದು ಗ್ರಾಮದ ಇರಾನ್ ಸಂಬಂಧಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ

ಖಮೇನಿ ಅವರು ಶಿಯಾ ಇಸ್ಲಾಂನ ಕೇಂದ್ರ ವ್ಯಕ್ತಿ, ಹೀಗಾಗಿ ಅವರ ಸಾವು ಗ್ರಾಮಸ್ಥರಿಗೆ ವೈಯಕ್ತಿಕ ನಷ್ಟದಂತೆ ಕಾಣುತ್ತದೆ. ಗ್ರಾಮದಲ್ಲಿ ಖಮೇನಿ ಅವರ ಮಾರ್ಗದರ್ಶನವನ್ನು ಈ ಗ್ರಾಮದಲ್ಲಿ ಅನುಸರಿಸುತ್ತಾರೆ ಎಂದು ಹೇಳಲಾಗುತ್ತದೆ. 1981-82ರಲ್ಲಿ ಖಮೇನಿ ಅವರು ಅಲಿಪುರಕ್ಕೆ ಭೇಟಿ ನೀಡಿದ್ದರು ಎಂಬ ಐತಿಹಾಸಿಕ ನೆನಪುಗಳು ಇವೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Cinema

ಗಾನಲೋಕದ ಕೋಗಿಲೆ ಇನ್ನಿಲ್ಲ: ಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ವಿಧಿವಶ

Published

on

ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ಗಾನಸರಸ್ವತಿ; ಸಿನಿರಂಗ ಕಂಗಾಲು

ಮೈಸೂರು (ಜುಲೈ 11): ದಕ್ಷಿಣ ಭಾರತದ ‘ಗಾನ ಕೋಗಿಲೆ’ ಎಂದೇ ಜನಪ್ರಿಯರಾಗಿದ್ದ ಅಪ್ರತಿಮ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಅವರು ಇಂದು ಸಂಜೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಖಾಸಗಿ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತೀವ್ರ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹಾಗೂ ಆಪ್ತರು ಖಚಿತಪಡಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಜಾನಕಮ್ಮ ಅವರ ಆರೋಗ್ಯವನ್ನು ನವೀನ್ ಎಂಬ ಕೇರ್‌ಟೇಕರ್ ನೋಡಿಕೊಳ್ಳುತ್ತಿದ್ದರು. ಇಂದು ಸಂಜೆ ಇದ್ದಕ್ಕಿದ್ದಂತೆ ಅವರಿಗೆ ಹೃದಯಾಘಾತ ಸಂಭವಿಸಿದ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ವಿಧಿಯ ಆಟ ಮುಗಿದಿತ್ತು.

ಮೂರು ವರ್ಷಕ್ಕೇ ಸಂಗೀತ ಪಯಣ:

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ‘ರೆಪಲ್ಲೇ’ ಗ್ರಾಮದಲ್ಲಿ ಜನಿಸಿದ ಶಿಷ್ಟ್ಲ ಶ್ರೀರಾಮಮೂರ್ತಿ ಜಾನಕಿ (ಎಸ್. ಜಾನಕಿ), ಸಂಗೀತದ ವಾತಾವರಣದಲ್ಲೇ ಬೆಳೆದವರು. ತಮ್ಮ 3ನೇ ವಯಸ್ಸಿನಲ್ಲೇ ನಾದಸ್ವರ ವಿದ್ವಾನ್ ಶ್ರೀ ಪೈದಿಸ್ವಾಮಿ ಅವರ ಬಳಿ ಶಾಸ್ತ್ರೀಯ ಸಂಗೀತ ಅಭ್ಯಾಸ ಆರಂಭಿಸಿದ ಇವರು, ಮುಂದೆ ಭಾರತೀಯ ಚಿತ್ರರಂಗವೇ ಬೆರಗಾಗುವಂತಹ ಗಾಯಕಿಯಾಗಿ ಹೊರಹೊಮ್ಮಿದರು.

20ಕ್ಕೂ ಹೆಚ್ಚು ಭಾಷೆ, 48 ಸಾವಿರಕ್ಕೂ ಅಧಿಕ ಗೀತೆಗಳು:

1957ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ. ಚಲಪತಿ ರಾವ್ ಅವರ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ ಮೂಲಕ ಜಾನಕಿ ಅವರು ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು. ಆನಂತರ ತೆಲುಗಿನ ‘ಎಂ.ಎಲ್.ಎ’ ಹಾಗೂ ಕನ್ನಡದ ‘ಕೃಷ್ಣಗಾರುಡಿ’ ಚಿತ್ರಗಳ ಮೂಲಕ ಯಶಸ್ಸಿನ ಪಥದಲ್ಲಿ ಸಾಗಿದ ಅವರು ಹಿಂತಿರುಗಿ ನೋಡಲೇ ಇಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಭಾರತದ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಬರೋಬ್ಬರಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಕೋಟ್ಯಂತರ ರಸಿಕರ ಮನ ಗೆದ್ದಿದ್ದಾರೆ.

ಕನ್ನಡಿಗರ ಹೆಮ್ಮೆಯ ‘ಜಾನಕಮ್ಮ’:

ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಜೊತೆಗೆ ಹಿಂದಿ ಸೇರಿದಂತೆ ಹಲವು ಉತ್ತರ ಭಾರತೀಯ ಭಾಷೆಗಳಲ್ಲೂ ಹಾಡಿದ್ದರೂ, ಕನ್ನಡಿಗರಿಗೆ ಜಾನಕಮ್ಮ ಅತ್ಯಂತ ಆಪ್ತರಾಗಿದ್ದರು.

‘ದೀಪವು ನಿನ್ನದೆ, ಗಾಳಿಯೂ ನಿನ್ನದೆ…’‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ…’‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…’‘ಹೇಳೇ ಗೆಳತಿ, ಬಾನಲ್ಲು ನೀನೆ ಭುವಿಯಲ್ಲು ನೀನೆ…’‘ಬಿಸಿಲಾದರೇನು ಮಳೆಯಾದರೇನು, ಸೋಲೇ ಇಲ್ಲ…’ ಇಂತಹ ಅಸಂಖ್ಯಾತ ಎವರ್‌ಗ್ರೀನ್ ಭಾವಗೀತೆಗಳು ಹಾಗೂ ಚಲನಚಿತ್ರ ಗೀತೆಗಳಿಗೆ ದನಿಯಾಗುವ ಮೂಲಕ ಅವರು ಕನ್ನಡಿಗರ ಮನೆಮನಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ಪ್ರಶಸ್ತಿಗಳು ಹಾಗೂ ಸ್ವಾಭಿಮಾನದ ನಿಲುವು:

ಎಸ್. ಜಾನಕಿ ಅವರ ಗಾಯನ ಪ್ರತಿಭೆಗೆ ಸಾಲು ಸಾಲು ರಾಷ್ಟ್ರ ಪ್ರಶಸ್ತಿಗಳು ಹಾಗೂ ವಿವಿಧ ರಾಜ್ಯ ಸರ್ಕಾರಗಳ ಅತ್ಯುನ್ನತ ಪ್ರಶಸ್ತಿಗಳು ಲಭಿಸಿವೆ. ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿತ್ತು.

ಕೇವಲ ಸಂಗೀತ ಸಾಧನೆಯಷ್ಟೇ ಅಲ್ಲದೆ ತಮ್ಮ ಸ್ವಾಭಿಮಾನಿ ನಿಲುವಿನಿಂದಲೂ ಜಾನಕಮ್ಮ ಸುದ್ದಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿಯನ್ನು ಘೋಷಿಸಿದಾಗ, “ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ದಕ್ಷಿಣ ಭಾರತದ ಕಲಾವಿದರನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ” ಎಂದು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿ, ಆ ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ದಕ್ಷಿಣದ ಕಲಾ ಜಗತ್ತಿನ ಸ್ವಾಭಿಮಾನದ ಧ್ವನಿಯಾಗಿದ್ದರು.

ಗಾನ ಕೋಗಿಲೆಯ ನಿಧನಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಹಾಗೂ ಲಕ್ಷಾಂತರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಸಂಗೀತ ಲೋಕದ ಧ್ರುವತಾರೆಯೊಂದು ಮರೆಯಾದಂತಾಗಿದ್ದು, ಅವರ ದನಿ ಮಾತ್ರ ಎಂದಿಗೂ ಅಮರ

Continue Reading

arrest

ಮಂಗಳೂರು: ಸುರತ್ಕಲ್ ಬಳಿ ಕಟ್ಟಡ ಕಾರ್ಮಿಕರ ಸೋಗಿನಲ್ಲಿದ್ದ 8 ಅಕ್ರಮ ಬಾಂಗ್ಲಾದೇಶಿಗರ ಬಂಧನ!

Published

on

ಮಂಗಳೂರು: ದೇಶಾದ್ಯಂತ ಮತಪಟ್ಟಿ ಪರಿಶೀಲನೆ (SIR) ಪ್ರಕ್ರಿಯೆ ಚುರುಕುಗೊಂಡಿರುವ ಬೆನ್ನಲ್ಲೇ, ಅಕ್ರಮ ವಲಸಿಗರ ವಿರುದ್ಧ ಕೇಂದ್ರ ಸರ್ಕಾರದ ಕಠಿಣ ಸೂಚನೆಯ ಮೇರೆಗೆ ಮಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಹೊರವಲಯದ ಸುರತ್ಕಲ್ ಸಮೀಪದ ಮುಕ್ಕ ಎಂಬಲ್ಲಿ ಅಕ್ರಮವಾಗಿ ನೆಲೆಸಿದ್ದ ಎಂಟು ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಟ್ಟಡ ಕಾರ್ಮಿಕರ ಸೋಗಿನಲ್ಲಿ ವಾಸ:

ಸುರತ್ಕಲ್‌ನ ಮುಕ್ಕದಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜೊಂದರ ಕಟ್ಟಡ ಕಾಮಗಾರಿಯಲ್ಲಿ ಈ ವಿದೇಶಿಗರು ಕಾರ್ಮಿಕರ ಸೋಗಿನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಬಗ್ಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ ಸುರತ್ಕಲ್ ಪೊಲೀಸರು ದಿಢೀರ್ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದಾಗ ಇವರು ಬಾಂಗ್ಲಾದೇಶಿ ಮೂಲದವರು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

ಸ್ಥಳೀಯ ಏಜೆಂಟರ ಮೂಲಕ ಅಕ್ರಮ ಆಧಾರ್ ಕಾರ್ಡ್!

ಬಂಧಿತರು ಬಾಂಗ್ಲಾದೇಶದ ಗಡಿ ದಾಟಿ ಪಶ್ಚಿಮ ಬಂಗಾಳದ ಮೂಲಕ ಭಾರತದೊಳಗೆ ಅಕ್ರಮವಾಗಿ ನುಸುಳಿದ್ದರು. ಅಲ್ಲಿಂದ ಕರ್ನಾಟಕಕ್ಕೆ ಬಂದು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಇಲ್ಲಿನ ಸ್ಥಳೀಯ ಏಜೆಂಟರ ಸಹಾಯದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಕ್ರಮವಾಗಿ ಭಾರತೀಯ ‘ಆಧಾರ್ ಕಾರ್ಡ್’ ಕೂಡ ಪಡೆದುಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ಬಂಧಿತರ ವಿವರಗಳು:

ಬಂಧಿತರೆಲ್ಲರೂ ಬಾಂಗ್ಲಾದೇಶದ ರಾಜಶಾಹಿ ಪ್ರಾಂತ್ಯದ ನಿವಾಸಿಗಳಾಗಿದ್ದು, ಅವರನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:

  • MD MUKTAR ALI — ಎಂಡಿ ಮುಕ್ತಾರ್ ಅಲಿ
  • MD RAKIBUR HOSSEN — ಎಂಡಿ ರಕಿಬುರ್ ಹೊಸೈನ್
  • MD AJARUL ISLAM — ಎಂಡಿ ಅಜರುಲ್ ಇಸ್ಲಾಂ
  • MD ZAHID HOSEN — ಎಂಡಿ ಜಾಹಿದ್ ಹೊಸೈನ್
  • MD BELAL HOSSAIN — ಎಂಡಿ ಬೇಲಾಲ್ ಹೊಸೈನ್
  • MD HASIBUL HASAN SHANTO — ಎಂಡಿ ಹಸಿಬುಲ್ ಹಸನ್ ಶಾಂಟೋ
  • Md SAMEUL HASAN — ಎಂಡಿ ಸಮೀವುಲ್ ಹಸನ್
  • MD SAIBUL RAHMAN — ಎಂಡಿ ಸೈಬುಲ್ ರೆಹಮಾನ್

ಪೊಲೀಸ್ ಕಮಿಷನರ್ ಹೇಳಿಕೆ: ನಾವು ಅವರ ದಾಖಲೆಗಳನ್ನು ಪರಿಶೀಲಿಸುವಾಗ, ಅವರು ತಾಂತ್ರಿಕವಾಗಿ ಬಂಧನದಲ್ಲಿ ಇರುವುದಿಲ್ಲ. ಏಕೆಂದರೆ ಅದು ಕೇವಲ ಪರಿಶೀಲನೆಯಾಗಿರುತ್ತದೆ.ನಾವು 54 ಜನರನ್ನು ಪರಿಶೀಲಿಸಿದ್ದೇವೆ. ಅದರರ್ಥ ನಾವು ಅವರೆಲ್ಲರನ್ನೂ ಬಂಧಿಸಿದ್ದೇವೆ ಎಂದಲ್ಲ.””ಪರಿಶೀಲನೆಯ ನಂತರ, ಅವರಲ್ಲಿ 8 ಜನರು ಬಾಂಗ್ಲಾದೇಶದವರು ಎಂದು ಪೊಲೀಸರು ಖಚಿತಪಡಿಸಿಕೊಂಡು ಎಫ್.ಆರ್.ಆರ್.ಓ.ಗೆ (FRRO) ವರದಿ ನೀಡಿದ್ದಾರೆ. ಎಫ್.ಆರ್.ಆರ್.ಓ. ಆದೇಶದ ಮೇರೆಗೆ ಅವರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. “ಬಂಧಿತ ಬಾಂಗ್ಲಾ ಪ್ರಜೆಗಳ ಬಗ್ಗೆ ಈಗಾಗಲೇ ವಿದೇಶಿಗರ ನೋಂದಣಿ ಕಚೇರಿಗೆ (FRRO) ಅಧಿಕೃತ ಮಾಹಿತಿ ನೀಡಲಾಗಿದೆ. ಇವರನ್ನು ಮರಳಿ ಸ್ವದೇಶಕ್ಕೆ ಗಡೀಪಾರು (Deportation) ಮಾಡಲು ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ.”

ಸುಧೀರ್ ರೆಡ್ಡಿ, ಮಂಗಳೂರು ಪೊಲೀಸ್ ಕಮಿಷನರ್

ರಾಜ್ಯದಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯ ಚುರುಕುಗೊಂಡಿದ್ದು, ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಟ್ಟ ಸ್ಥಳೀಯ ಏಜೆಂಟರ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

Continue Reading

court

ಅಯೋಧ್ಯೆ ದೇಣಿಗೆ ದುರುಪಯೋಗ ಮತ್ತು RSS ನೋಂದಣಿ ವಿವಾದ: ಮೌನ ಮುರಿದ ಉಡುಪಿ ಪೇಜಾವರ ಶ್ರೀಗಳು!

Published

on

ರಾಮನ ಸನ್ನಿಧಿಯಲ್ಲಿ ಅಪಚಾರ ನಡೆಯಬಾರದಾಗಿತ್ತು : RSS ನೋಂದಣಿ ಬಗ್ಗೆ ಪೇಜಾವರ ಶ್ರೀಗಳು ಹೇಳಿದ್ದೇನು?, ದೇಣಿಗೆ ಲೂಟಿ ಆರೋಪ ಮತ್ತು ಸಂಘದ ನೋಂದಣಿ ವಿವಾದ : ಮೌನ ಮುರಿದ ಪೇಜಾವರ ಮಠದ ಶ್ರೀಗಳು, ತಪ್ಪು ನಡೆದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ : ಸಂಘಟನೆ ನೋಂದಣಿ ಮಾಡಿದರೆ ಯಾರಿಗೂ ಮಾತನಾಡಲು ಅವಕಾಶ ಇರುತ್ತಿರಲಿಲ್ಲ

ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಹಣದ ಅವ್ಯವಹಾರ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಮೌನ ಮುರಿದಿದ್ದಾರೆ. ರಾಮಮಂದಿರ ಟ್ರಸ್ಟ್‌ನ ಪ್ರಮುಖ ಸದಸ್ಯರೂ ಆಗಿರುವ ಶ್ರೀಗಳ ಈ ಹೇಳಿಕೆಗಳು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿವೆ.

ರಾಮನ ಸನ್ನಿಧಿಯಲ್ಲಿ ಅಪಚಾರ ನಡೆಯಬಾರದಿತ್ತು: ತನಿಖೆಗೆ ಶ್ರೀಗಳ ಸ್ವಾಗತ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕೋಟ್ಯಾಂತರ ರೂಪಾಯಿ ದೇಣಿಗೆ ಹಣ ಲೂಟಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳ (SIT) ಈಗಾಗಲೇ ತನಿಖೆ ಚುರುಕುಗೊಳಿಸಿದ್ದು, ಹಲವರನ್ನು ಬಂಧಿಸಿದೆ. ಈ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ಪೇಜಾವರ ಶ್ರೀಗಳು, “ಅಯೋಧ್ಯೆಯ ಶ್ರೀರಾಮ ಮಂದಿರವು ದೇಶ-ವಿದೇಶಗಳ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರವಾಗಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ದೇಣಿಗೆ ದುರುಪಯೋಗದಂತಹ ಘೋರ ಅಪಚಾರ ನಡೆಯಬಾರದಿತ್ತು,” ಎಂದು ವಿಷಾದಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ತಪ್ಪು ಯಾರು ಮಾಡಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಎಸ್‌ಐಟಿ ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ದುರುಪಯೋಗ ನಡೆದಿರುವುದು ಸಾಬೀತಾದರೆ ತಪ್ಪಿತಸ್ಥರಿಗೆ ತಕ್ಕ ತೀರ್ಪು ಸಿಗಲಿ. ನಾವು ಕೂಡ ಮುಂದಿನ ಕೆಲವು ದಿನಗಳಲ್ಲಿ ಅಯೋಧ್ಯೆಗೆ ಭೇಟಿ ನೀಡಲಿದ್ದೇವೆ,” ಎಂದಿದ್ದಾರೆ.

‘ನಾವು ಅಲ್ಲೇ ಇರಲು ಸಾಧ್ಯವಾಗುವುದಿಲ್ಲ’ – ಟ್ರಸ್ಟ್ ಜವಾಬ್ದಾರಿ ಕುರಿತು ಸ್ಪಷ್ಟನೆ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರಾಗಿರುವ ಪೇಜಾವರ ಶ್ರೀಗಳು, ಅಲ್ಲಿನ ಆಡಳಿತಾತ್ಮಕ ಸವಾಲುಗಳ ಕುರಿತು ಮಾತನಾಡುತ್ತಾ, “ನಾವು ಟ್ರಸ್ಟ್ ಸಭೆಗೆ ಅಯೋಧ್ಯೆಗೆ ಹೋದಾಗ ಕೆಲವು ಪ್ರಮುಖ ಸಲಹೆಗಳನ್ನು ನೀಡುತ್ತಿದ್ದೆವು. ನಾವು ಕೊಟ್ಟ ಸಲಹೆಗಳನ್ನು ಜಾರಿಗೆ ತರಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರು ನಮಗೆ ತಿಳಿಸುತ್ತಿದ್ದರು. ಆದರೆ, ನಾವು ಸದಾ ಕಾಲ ಅಲ್ಲೇ ಇರಲು ಸಾಧ್ಯವಾಗದ ಕಾರಣ, ಪ್ರತಿಯೊಂದನ್ನೂ ಕೂಲಂಕುಷವಾಗಿ ಪರಿಶೀಲಿಸುವುದು ನಮ್ಮಿಂದಲೂ ಸಾಧ್ಯವಾಗುತ್ತಿರಲಿಲ್ಲ,” ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

ದೇಣಿಗೆ ಸಂಗ್ರಹಣೆಯ ಪಾರದರ್ಶಕತೆ ಬಗ್ಗೆ ಒತ್ತಿ ಹೇಳಿದ ಶ್ರೀಗಳು, ಹಣ ಪಡೆದ ತಕ್ಷಣ ದಾನಿಗಳಿಗೆ ಕಡ್ಡಾಯವಾಗಿ ರಸೀದಿಯನ್ನು ನೀಡಬೇಕಿತ್ತು. ಹಣ ಕೊಡುವವರು ಮತ್ತು ತೆಗೆದುಕೊಳ್ಳುವವರು ಇಬ್ಬರ ಮೇಲೂ ಸಮಾನ ಜವಾಬ್ದಾರಿ ಇರುತ್ತದೆ ಎಂದಿದ್ದಾರೆ.

ಕೋಟಿ ಕೋಟಿ ದೇಣಿಗೆ ಬದಲು ‘ರಾಮ ದೇವರ’ ಹೆಸರಲ್ಲಿ ನೂರಾರು ಮನೆ ಕಟ್ಟಬಹುದಿತ್ತು!

ಇದೇ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಗಳತ್ತ ಗಮನ ಸೆಳೆದ ಶ್ರೀಗಳು, “ದೇಣಿಗೆ ಕೊಡುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ಇಷ್ಟೊಂದು ದೊಡ್ಡ ಮೊತ್ತದ ಹಣದಲ್ಲಿ ಸೂರು ಇಲ್ಲದ ಬಡವರಿಗೆ ಸಾವಿರಾರು ಸುಂದರ ಮನೆಗಳನ್ನು ನಿರ್ಮಿಸಿಕೊಡಬಹುದಿತ್ತು. ಇಂದಿನ ದಿನಗಳಲ್ಲಿ ಹತ್ತು ಲಕ್ಷ ರೂಪಾಯಿಗೆ ಒಂದು ಸುಂದರ ಮನೆ ನಿರ್ಮಾಣವಾಗುತ್ತದೆ. ಅಯೋಧ್ಯೆಗೆ ನೇರ ಹಣ ಕೊಡುವ ಬದಲು, ಬಡವರಿಗೆ ಮನೆ ನಿರ್ಮಿಸುವ ಕಾರ್ಯಗಳನ್ನು ಮಾಡಿ, ಆ ಪುಣ್ಯ ಕಾರ್ಯವನ್ನೇ ಶ್ರೀರಾಮ ದೇವರಿಗೆ ಸಮರ್ಪಿಸಬಹುದಿತ್ತು,” ಎಂದು ಅಭಿಪ್ರಾಯಪಟ್ಟಿದ್ದಾರೆ. ಉಡುಪಿ ಪೇಜಾವರ ಶ್ರೀಗಳು ಪ್ರಸ್ತುತ ದಾನಿಗಳ ನೆರವಿನಿಂದ ಸೂರು ಇಲ್ಲದವರಿಗೆ ಮನೆ ಕಟ್ಟಿಸಿಕೊಡುವ ಮಹತ್ತರ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಇಲ್ಲಿ ಗಮನಾರ್ಹ.

ಆರ್‌ಎಸ್‌ಎಸ್ ನೋಂದಣಿ ವಿವಾದ: ಸಂಘ ಪರಿವಾರಕ್ಕೆ ಶ್ರೀಗಳ ಅಚ್ಚರಿಯ ಸಲಹೆ!

ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಅಧಿಕೃತವಾಗಿ ನೋಂದಣಿ ಆಗಿದೆಯೇ? ಸಂಘಕ್ಕೆ ಹರಿದು ಬರುವ ಕೋಟ್ಯಂತರ ರೂಪಾಯಿ ಹಣದ ಲೆಕ್ಕಾಚಾರವೇನು? ಎಂಬ ವಿಚಾರವಾಗಿ ಸದ್ಯ ರಾಜಕೀಯ ವಲಯದಲ್ಲಿ ತೀವ್ರ ವಿವಾದ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ಸಚಿವ ಪ್ರಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರಿಗೆ ಈ ಕುರಿತು ಪತ್ರ ಬರೆದು ಪ್ರಶ್ನಿಸಿದ್ದರು.

ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, “ಆರ್‌ಎಸ್‌ಎಸ್ ಸಂಘಟನೆಯನ್ನು ಅಧಿಕೃತವಾಗಿ ನೋಂದಣಿ ಮಾಡಿಸಿದರೆ, ಯಾರೊಬ್ಬರಿಗೂ ಇಂತಹ ಆರೋಪಗಳನ್ನು ಮಾಡಲು ಅಥವಾ ಮಾತನಾಡಲು ಅವಕಾಶವೇ ಇರುವುದಿಲ್ಲ,” ಎಂದು ನೇರ ನುಡಿಗಳನ್ನಾಡಿದ್ದಾರೆ. ಸಂಘಟನೆಗೆ ನೋಂದಣಿಯ ಅವಶ್ಯಕತೆಯೇ ಇಲ್ಲ ಎಂದು ವಾದಿಸುತ್ತಿರುವ ಸಂಘ ಪರಿವಾರದ ಮುಖಂಡರಿಗೆ, ರಾಮಮಂದಿರ ಟ್ರಸ್ಟ್‌ನ ಪ್ರಮುಖರಾದ ಪೇಜಾವರ ಶ್ರೀಗಳ ಈ ಹೇಳಿಕೆ ತೀವ್ರ ಅಚ್ಚರಿ ಮತ್ತು ಇಕ್ಕಟ್ಟನ್ನು ತಂದಿಟ್ಟಿದೆ.

ಒಟ್ಟಾರೆಯಾಗಿ, ಅಯೋಧ್ಯೆಯ ಲೂಟಿ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿ ತನಿಖೆ ಹಾಗೂ ಆರ್‌ಎಸ್‌ಎಸ್‌ನ ಅಸ್ತಿತ್ವದ ಮೇಲಿನ ಪ್ರಶ್ನೆಗಳ ನಡುವೆ ಪೇಜಾವರ ಶ್ರೀಗಳು ನಡೆಸಿರುವ ಈ ಮುಕ್ತ ವಿಶ್ಲೇಷಣೆ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ಹೊಸ ಚರ್ಚೆಯ ಬಿರುಗಾಳಿಯನ್ನು ಎಬ್ಬಿಸಿದೆ.




Continue Reading

Trending

Copyright © 2025 Deevatige

error: Content is protected !!