murder
ವಾರಣಾಸಿ: ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ; ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಆಸ್ತಿಪಾಸ್ತಿ ಧ್ವಂಸ
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/03/77-1-1000x600.jpg&description=ವಾರಣಾಸಿ: ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ; ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಆಸ್ತಿಪಾಸ್ತಿ ಧ್ವಂಸ', 'pinterestShare', 'width=750,height=350'); return false;" title="Pin This Post">
ವಾರಣಾಸಿ ಉದಯ್ ಪ್ರತಾಪ್ ಕಾಲೇಜಿನ ಕ್ಯಾಂಪಸ್ನಲ್ಲಿ ಶುಕ್ರವಾರ ತಡರಾತ್ರಿ ಭೀಕರ ಘಟನೆಯೊಂದು ಸಂಭವಿಸಿದ್ದು, 23 ವರ್ಷದ ವಿದ್ಯಾರ್ಥಿಯೊಬ್ಬನನ್ನು ಆತನ ಸಹಪಾಠಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ವೈಯಕ್ತಿಕ ದ್ವೇಷವೇ ಈ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕೊಲೆಯಾದ ವಿದ್ಯಾರ್ಥಿಯನ್ನು ಬಿ.ಎ. ನಾಲ್ಕನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೂರ್ಯ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಮೂಲತಃ ಗಾಜಿಪುರ ಜಿಲ್ಲೆಯವನಾಗಿದ್ದು, ಓದಿಗಾಗಿ ವಾರಣಾಸಿಯಲ್ಲಿ ನೆಲೆಸಿದ್ದ. ಹೆತ್ತವರ ಏಕೈಕ ಪುತ್ರನಾಗಿದ್ದ ಸೂರ್ಯ ಪ್ರತಾಪ್ ಓದಿನಲ್ಲಿ ಬಹಳ ಪ್ರತಿಭಾವಂತನಾಗಿದ್ದ ಎಂದು ತಿಳಿದುಬಂದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾಲೇಜಿನ ಕಟ್ಟಡದ ಕಾರಿಡಾರ್ನಲ್ಲಿ ಸೂರ್ಯ ಪ್ರತಾಪ್ ಮೇಲೆ ಆತನ ಸಹಪಾಠಿ ಮಂಜೀತ್ ಚೌಹಾಣ್ ಎಂಬಾತ ತೀರಾ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ತಲೆ ಮತ್ತು ಎದೆಗೆ ಗುರಿಯಿಟ್ಟು ನಾಲ್ಕು ಸುತ್ತು ಗುಂಡು ಹಾರಿಸಿದ ಆರೋಪಿ, ನಂತರ ಮೊದಲ ಮಹಡಿಯ ತಡೆಗೋಡೆ ಹಾರಿ ಪಾರಾರಿಯಾಗಿದ್ದಾನೆ. ಹೋಗುವ ದಾರಿಯಲ್ಲಿ ಪಿಸ್ತೂಲನ್ನು ಕಸದ ಬುಟ್ಟಿಗೆ ಎಸೆದಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉದ್ವಿಗ್ನ ಸ್ಥಿತಿಯಲ್ಲಿ ಕ್ಯಾಂಪಸ್:
ಹತ್ಯೆ ಸುದ್ದ ತಿಳಿಯುತ್ತಿದ್ದಂತೆ ಕಾಲೇಜಿನಲ್ಲಿ ಭಾರೀ ಉದ್ವಿಗ್ನತೆ ಸೃಷ್ಟಿಯಾಗಿದೆ. ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಾಲೇಜಿನ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಲ್ಲದೆ, ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಹಲವು ವಾಹನಗಳಿಗೆ ಹಾನಿ ಮಾಡಲಾಗಿದ್ದು, ಮೂವರು ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಒಬ್ಬ ಪ್ರಾಧ್ಯಾಪಕರನ್ನು ಪೊಲೀಸ್ ರಕ್ಷಣೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಂದೆಯ ಆಕ್ರೋಶ:
ಮಗನನ್ನು ಕಳೆದುಕೊಂಡ ತಂದೆಯ ಆಕ್ರೋಶ ಮುಗಿಲು ಮುಟ್ಟಿದೆ. “ಆರೋಪಿಯನ್ನು ಎನ್ಕೌಂಟರ್ನಲ್ಲಿ ಹತ್ಯೆಗೈಯುವವರೆಗೂ ನನ್ನ ಮಗನ ಅಂತ್ಯಕ್ರಿಯೆ ಮಾಡುವುದಿಲ್ಲ” ಎಂದು ಅವರು ಹಠ ಹಿಡಿದಿದ್ದಾರೆ. ಸದ್ಯ ಕಾಲೇಜು ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
F.I.R.
ಕೇರಳದಲ್ಲಿ ಕರುಳು ಹಿಂಡುವ ಘಟನೆ: ಒಂದೂವರೆ ವರ್ಷದ ಕಂದಮ್ಮನಿಗೆ ನರಕಯಾತನೆ ನೀಡಿ ಕೊಂದ ಪಾಪಿ ತಾಯಿ ಮತ್ತು ಪ್ರೇಮಿ!
ಹೆತ್ತ ಕರುಳಿಗಿಂತ ಹೆಣ್ಣಿಗೆ ಕಾಮವೇ ಕಣ್ಣಾಯಿತು… ಆಶ್ರಯ ನೀಡಬೇಕಾದ ಕೈಗಳೇ ಯಮಸ್ವರೂಪಿಯಾದವು! ದೇವರ ಸ್ವಂತ ನಾಡು ಕೇರಳದಲ್ಲಿ ಮಾನವೀಯತೆಯೇ ಸಂಪೂರ್ಣವಾಗಿ ತಲೆತಗ್ಗಿಸುವಂತಹ, ಕಲ್ಲು ಹೃದಯದವರೂ ಕಣ್ಣೀರು ಸುರಿಸುವಂತಹ ಅತ್ಯಂತ ಕ್ರೂರ ಘಟನೆಯೊಂದು ತಿರುವನಂತಪುರಂ ನಿಂದ ಬೆಳಕಿಗೆ ಬಂದಿದೆ. ಮಾತು ಬಾರದ, ತನ್ನ ನೋವನ್ನು ಹೇಳಿಕೊಳ್ಳಲಾಗದ ಕೇವಲ ಒಂದೂವರೆ ವರ್ಷದ ಮುಗ್ಧ ಕಂದಮ್ಮ ಅರ್ಷಿದ್ನನ್ನು ಹೆತ್ತ ತಾಯಿ ಮತ್ತು ಆಕೆಯ ಪ್ರೇಮಿ ಸೇರಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಭೀಕರ ಕಥೆ ಇಡೀ ಸಮಾಜವನ್ನೇ ನಡುಗಿಸಿದೆ.

ಮಗುವನ್ನು ಹತ್ಯೆ ಮಾಡಿದ ಆರೋಪದ ಮೇಲೆ ತಾಯಿ ಅಖಿಲಾ (24) ಮತ್ತು ಆಕೆಯ ಲಿವ್-ಇನ್ ಸಂಗಾತಿ ಅಶ್ಕರ್ (31) ಎಂಬ ಇಬ್ಬರು ನರರೂಪದ ರಾಕ್ಷಸರನ್ನು ನೆಡುಮಂಗಾಡ್ ಪೊಲೀಸರು ಕಬ್ಬಿಣದ ಸರಳುಗಳ ಹಿಂದೆ ತಳ್ಳಿದ್ದಾರೆ.

ಸುಳ್ಳು ಕಥೆ ಸೃಷ್ಟಿಸಿದ್ದ ಪಾಪಿಗಳು: ಪೋಸ್ಟ್ಮಾರ್ಟಮ್ನಲ್ಲಿ ಬಯಲಾಯ್ತು ಸತ್ಯ!
ಮೇ 29ರ ಶುಕ್ರವಾರದಂದು ಈ ದುರಂತ ಜಗತ್ತಿಗೆ ಗೊತ್ತಾಯಿತು. ಮಗು ಅರ್ಷಿದ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ, ಆರೋಪಿಗಳು ನಾಟಕವಾಡಿ ಆಂಬ್ಯುಲೆನ್ಸ್ ಮೂಲಕ ಪಣವೂರಿನ ಖಾಸಗಿ ಆಸ್ಪತ್ರೆಗೆ, ಅಲ್ಲಿಂದ ಎಸ್ಎಟಿ (SAT) ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲೇ ಆ ಪುಟ್ಟ ಜೀವ ಬಾರದ ಲೋಕಕ್ಕೆ ಪಯಣಿಸಿತ್ತು.
ಆರೋಪಿ ಅಶ್ಕರ್ ಪೊಲೀಸರಿಗೆ ಹೇಳಿದ ಕಟ್ಟುಕಥೆ:
“ಮಗು ಹಾಲು, ನೀರು ಕುಡಿದು ಮಲಗಿತ್ತು. ಇದ್ದಕ್ಕಿದ್ದಂತೆ ಕೆಮ್ಮಲು ಮತ್ತು ವಾಂತಿ ಮಾಡಲು ಆರಂಭಿಸಿತು. ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿತು.”
ಆದರೆ, ಮಗುವಿನ ಮರಣೋತ್ತರ ಪರೀಕ್ಷಾ ವರದಿ ಬರುತ್ತಿದ್ದಂತೆ ವೈದ್ಯರೇ ಬೆಚ್ಚಿಬಿದ್ದರು. ಮಗುವಿನ ತಲೆ ಹಾಗೂ ದೇಹದಾದ್ಯಂತ ತೀವ್ರ ಆಂತರಿಕ ರಕ್ತಸ್ರಾವ ಉಂಟಾಗಿದ್ದೇ ಸಾವಿಗೆ ಕಾರಣ ಎಂದು ವರದಿ ಬಹಿರಂಗಪಡಿಸಿತು. ಪಾಪಿಗಳು ಹೆಣೆದಿದ್ದ ಸುಳ್ಳಿನ ಜಾಲ ಕ್ಷಣಾರ್ಧದಲ್ಲಿ ಧೂಳೀಪಟವಾಯಿತು.
ಪುಟ್ಟ ದೇಹದ ಮೇಲೆ 50ಕ್ಕೂ ಹೆಚ್ಚು ಗಾಯಗಳು: ದಿನವೂ ನಡೆಯುತ್ತಿತ್ತು ನರಕಯಾತನೆ!
ಪೊಲೀಸ್ ತನಿಖೆ ಮುಂದುವರಿದಂತೆ ಆ ಒಂದೂವರೆ ವರ್ಷದ ಕಂದ ಪ್ರತಿದಿನ ಅನುಭವಿಸುತ್ತಿದ್ದ ನರಕಯಾತನೆಯ ಎಳೆಎಳೆಗಳು ಬಿಚ್ಚಿಕೊಳ್ಳತೊಡಗಿದವು. ತನಿಖಾಧಿಕಾರಿಗಳು ಅರ್ಷಿದ್ನ ಪುಟ್ಟ ಮತ್ತು ಕೋಮಲವಾದ ದೇಹದ ಮೇಲೆ ಬರೋಬ್ಬರಿ 50ಕ್ಕೂ ಹೆಚ್ಚು ಹಳೆಯ ಮತ್ತು ತಾಜಾ ಗಾಯಗಳನ್ನು ಪತ್ತೆಹಚ್ಚಿದ್ದಾರೆ.
ಸಿಗರೇಟ್ನಿಂದ ಸುಟ್ಟ ಗಾಯಗಳು: ಮಗುವಿನ ಇಡೀ ದೇಹದಾದ್ಯಂತ ಸಿಗರೇಟ್ ತುಂಡುಗಳಿಂದ ಸುಟ್ಟು ಹಾಕಿರುವ ದುಂಡಗಿನ ಗುರುತುಗಳಿದ್ದವು.
ಮುರಿದಿದ್ದ ಕೈಗಳು: ಈ ಹಿಂದೆ ಮಗುವಿನ ಎರಡೂ ತೋಳುಗಳು ಮುರಿದಿದ್ದವು. ಆ ಸಮಯದಲ್ಲಿ “ಮಗು ಆಟ ಆಡುತ್ತಾ ಕೆಳಗೆ ಬಿದ್ದಿದೆ” ಎಂದು ಈ ಪಾಪಿಗಳು ಜಾಣತನದಿಂದ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದರು.

ಅರ್ಷಿದ್ನ ತಂದೆ (ಅಖಿಲಾಳ ಮೊದಲ ಪತಿ) ಮೃತಪಟ್ಟ ನಂತರ ಮಗುವನ್ನು ಅಜ್ಜಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅಜ್ಜಿಯ ಮಡಿಲಲ್ಲಿ ಮಗು ಸುರಕ್ಷಿತವಾಗಿತ್ತು. ಆದರೆ, ಅಖಿಲಾ ತನಗೆ ಮಗುವನ್ನು ಸಾಕಲು ಸಾಧ್ಯವಿಲ್ಲ ಎಂದು ಹೇಳಿ, ನಂತರ ತನ್ನ ಪ್ರೇಮಿ ಅಶ್ಕರ್ ಜೊತೆ ಲಿವ್-ಇನ್ ರಿಲೇಶನ್ಶಿಪ್ನಲ್ಲಿ ವಾಸಿಸಲು ಮಗುವನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಳು. ಅಲ್ಲಿಂದಲೇ ಮಗುವಿನ ಪಾಲಿಗೆ ನರಕದ ಬಾಗಿಲು ತೆರೆದಿತ್ತು. ಹೆತ್ತ ಮಗನಿಗೆ ಅಶ್ಕರ್ ರಾಕ್ಷಸನಂತೆ ಹಿಂಸಿಸುತ್ತಿದ್ದರೂ, ಕಣ್ಣೆದುರೇ ಮಗುವಿನ ಕೈ ಮುರಿದರೂ ಅಖಿಲಾ ಮಗನನ್ನು ರಕ್ಷಿಸಲಿಲ್ಲ, ಪೊಲೀಸರಿಗೂ ಹೇಳಲಿಲ್ಲ. ಇದೇ ಕಾರಣಕ್ಕೆ ಆಕೆಯನ್ನೂ ಕೊಲೆ ಆರೋಪಿಯನ್ನಾಗಿ ಮಾಡಲಾಗಿದೆ.
ಮೊದಲ ಪತ್ನಿಯನ್ನೂ ಜೀವಚ್ಛವ ಮಾಡಿದ್ದ ಕ್ರೂರಿ ಅಶ್ಕರ್!
ಬಂಧಿತ ಆರೋಪಿ ಅಶ್ಕರ್ ಕೇವಲ ಮಗುವಿನ ಪಾಲಿಗೆ ಮಾತ್ರವಲ್ಲ, ಆತನ ಸಹವಾಸಕ್ಕೆ ಬಂದವರೆಲ್ಲರಿಗೂ ಯಮನಾಗಿದ್ದ. ಆತನ ಮೊದಲ ಪತ್ನಿ ಅಮೀನಾಳ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಬಂದು ಆಘಾತಕಾರಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅಶ್ಕರ್ ಇನ್ನು ಕೂಡ ಅಮೀನಾಗೆ ಅಧಿಕೃತ ವಿಚ್ಛೇದನ ನೀಡಿಲ್ಲ. ಆಕೆಯ ತಲೆಯನ್ನು ಗೋಡೆಗೆ ಬಡಿಯುವುದು, ಸೀಲಿಂಗ್ ಫ್ಯಾನ್ ಉರುಳಿಗೆ ಸಿಲುಕಿಸಲು ಯತ್ನಿಸುವಂತಹ ಘೋರ ದೈಹಿಕ ಹಿಂಸೆ ನೀಡಿದ್ದ. ಆ ಭೀಕರ ಹಲ್ಲೆಯ ಕಾರಣದಿಂದಾಗಿ ಅಮೀನಾ ಕಳೆದ ಒಂದು ವರ್ಷದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸಿಗೆ ಹಿಡಿದಿದ್ದು, ಪ್ರಸ್ತುತ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಹೊತ್ತಿ ಉರಿದ ಗ್ರಾಮಸ್ಥರ ಆಕ್ರೋಶ: ಆರೋಪಿಗೆ ಧರ್ಮದೇಟು ನೀಡಲು ಯತ್ನ!
ರವಿವಾರ ತನಿಖೆಯ ಭಾಗವಾಗಿ ಮಹಜರು (ಸ್ಥಳ ಪರಿಶೀಲನೆ) ನಡೆಸಲು ನೆಡುಮಂಗಾಡ್ ಪೊಲೀಸರು ಆರೋಪಿ ಅಶ್ಕರ್ನನ್ನು ಕರಿಕುಳಿಯಲ್ಲಿರುವ ಆತನ ಮನೆಗೆ ಕರೆದೊಯ್ದಾಗ ಇಡೀ ಗ್ರಾಮವೇ ಆಕ್ರೋಶದ ಜ್ವಾಲೆಯಾಗಿ ಬೀದಿಗೆ ಬಂದಿತ್ತು. ನೂರಾರು ಸ್ಥಳೀಯ ನಿವಾಸಿಗಳು, ಮಹಿಳೆಯರು ಜಮಾಯಿಸಿ ಆ ಪಾಪಿಯ ಮುಖಕ್ಕೆ ಉಗುಳಿ, ಆತನ ಮೇಲೆ ದಾಳಿ ಮಾಡಲು ಯತ್ನಿಸಿದರು. “ಆ ನರರಾಕ್ಷಸನನ್ನು ನಮಗೆ ಒಪ್ಪಿಸಿ, ಇಲ್ಲೇ ಜೀವಂತವಾಗಿ ಮುಗಿಸುತ್ತೇವೆ” ಎಂದು ಜನ ಕಿರುಚಾಡಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಹರಸಾಹಸ ಪಟ್ಟು ಕೋಪಗೊಂಡ ಜನರನ್ನು ನಿಯಂತ್ರಿಸಿ, ಆರೋಪಿಯನ್ನು ಸುರಕ್ಷಿತವಾಗಿ ಜೈಲಿನತ್ತ ಸಾಗಿಸಿದರು.
ಒಡಲಲ್ಲಿ ಹೊತ್ತು ಹೆತ್ತ ಮಗುವನ್ನೇ ಕಾಮದ ಅಮಲಿನಲ್ಲಿ ಕ್ರೂರಿಯ ಕೈಗಿಟ್ಟು ಸಾಯಿಸಿದ ಆ ತಾಯಿಗೂ, ಚಿಕ್ಕ ಕಂದಮ್ಮನಿಗೆ ಸಿಗರೇಟ್ನಿಂದ ಸುಟ್ಟು ಕೊಂದ ಆ ನರರಾಕ್ಷಸನಿಗೂ ಕಾನೂನು ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕಿದೆ. ಇಂತಹ ಘಟನೆಗಳು ಮರುಕಳಿಸದಂತೆ ಇಡೀ ಸಮಾಜವೇ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮುಗ್ಧ ಅರ್ಷಿದ್ನ ಆತ್ಮಕ್ಕೆ ಶಾಂತಿ ಸಿಗಲಿ
arrest
ಬೆಳ್ತಂಗಡಿ: ಗುರುವಾಯನಕೆರೆ ಬಳಿ ಪತ್ತೆಯಾದ ಮೃತದೇಹದ ಗುರುತು ಪತ್ತೆ – ಯತೀಶ್ ಗೌಡ ಕೊಲೆ ಶಂಕೆ, ಮೂವರು ವಶಕ್ಕೆ
ಬೆಳ್ತಂಗಡಿ, ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಸಮೀಪದ ಅಲಾದಿಕೊಟ್ಟಿಗೆ ಎಂಬಲ್ಲಿ ಜೂನ್ 1ರಂದು ಬೆಳಿಗ್ಗೆ ಪತ್ತೆಯಾಗಿದ್ದ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ, ದಿ. ಕೂಸಪ್ಪ ಗೌಡ ಮತ್ತು ಪದ್ಮಾವತಿ ದಂಪತಿಯ ದ್ವಿತೀಯ ಪುತ್ರ ಯತೀಶ್ ಗೌಡ (33) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯತೀಶ್, ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ನಾಪತ್ತೆಯಾಗಿದ್ದರು.
ಘಟನೆಯ ಹಿನ್ನೆಲೆ ಮತ್ತು ದೂರು:
ಜೂನ್ 1ರಂದು ಬೆಳಿಗ್ಗೆ ಗುರುವಾಯನಕೆರೆಯ ಶ್ರೀದೇವಿ ಹಾರ್ಡ್ವೇರ್ ಬಳಿ ಅಪರಿಚಿತ ಮೃತದೇಹ ಇರುವ ಬಗ್ಗೆ ಭಾವಚಿತ್ರ ಸಹಿತ ಮಾಹಿತಿ ವಾಟ್ಸಾಪ್ ಮೂಲಕ ಮೃತರ ಸಹೋದರ ನಿತಿನ್ (34) ಅವರಿಗೆ ತಲುಪಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ನಿತಿನ್, ಮೃತದೇಹವನ್ನು ತನ್ನ ಸಹೋದರ ಯತೀಶ್ ಗೌಡ ಎಂದು ಗುರುತಿಸಿದ್ದಾರೆ.
ಸಿಸಿಟಿವಿ ತನಿಖೆ ಮತ್ತು ಕೊಲೆ ಶಂಕೆ:
ಮೃತದೇಹದ ಮೇಲೆ ಹಲ್ಲೆಯ ಗುರುತುಗಳಿದ್ದ ಹಿನ್ನೆಲೆಯಲ್ಲಿ, ದೂರುದಾರರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಜೂನ್ 1ರ ಬೆಳಿಗ್ಗಿನ ಸಮಯ ಮೂವರು ವ್ಯಕ್ತಿಗಳು ಯತೀಶ್ ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ತೀವ್ರ ಹಲ್ಲೆಯಿಂದಾಗಿಯೇ ಯತೀಶ್ ಮೃತಪಟ್ಟಿರುವುದಾಗಿ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ಕಾರ್ಯಾಚರಣೆ, ಮೂವರ ವಶಕ್ಕೆ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಿತಿನ್ ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ : 65/2026, ಕಲಂ: 115(2), 103 ಜೊತೆಗೆ 3(5) ಬಿ.ಎನ್.ಎಸ್ (BNS) ರಂತೆ ಕೊಲೆ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ:
ಯಶೋಧರ (35) – ನಿವಾಸಿ: ಮಿತ್ತಬಾಗಿಲು, ಬೆಳ್ತಂಗಡಿ
ಮೋಹನ್ (30) – ನಿವಾಸಿ: ಚಾರ್ವಾಕ, ಕಡಬ
ಇಬ್ರಾಹಿಂ (54) – ನಿವಾಸಿ: ಪದಂಗಡಿ, ಬೆಳ್ತಂಗಡಿ
ವಶಕ್ಕೆ ಪಡೆದಿರುವ ಮೂವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ನಿಖರವಾದ ಕಾರಣ ಮತ್ತು ಹಲ್ಲೆಯ ಹಿಂದಿನ ಸತ್ಯಾಸತ್ಯತೆಗಳನ್ನು ಪತ್ತೆಹಚ್ಚಲು ಬೆಳ್ತಂಗಡಿ ಪೊಲೀಸರು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
arrest
ಬದಿಯಡ್ಕ: ಬ್ಯಾಂಕ್ ಕಾವಲುಗಾರನ ಕೊಲೆ ಪ್ರಕರಣ; ಪುತ್ತೂರಿನಲ್ಲಿ ಆರೋಪಿಗಳ ಬಂಧನ
ಕ್ರಿಕೆಟ್ ಪಂದ್ಯಾವಳಿ ವೇಳೆ ಗಲಾಟೆ; ಕೊಲೆಯಲ್ಲಿ ಅಂತ್ಯ: ಆರ್ಲಪದವಿನಲ್ಲಿ ಸೆರೆಸಿಕ್ಕ ಆರೋಪಿಗಳು
ಬದಿಯಡ್ಕ: ಕುಂಬಡಾಜೆ ಮಾರ್ಪಿನಡ್ಕದಲ್ಲಿ ಕ್ರಿಕೆಟ್ ಪಂದ್ಯಾವಳಿ ವೇಳೆ ನಡೆದ ವಾಕ್ಸಮರ ಮತ್ತು ವೈಷಮ್ಯದ ಹಿನ್ನೆಲೆಯಲ್ಲಿ ಬದಿಯಡ್ಕದ ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಬಳಿ ಬ್ಯಾಂಕಿನ ಕಾವಲುಗಾರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬದಿಯಡ್ಕ ಪೊಲೀಸರು ಆರ್ಲಪದವು ಬಳಿ ಕೇವಲ 24 ಗಂಟೆಗಳ ಒಳಗಾಗಿ ಅತ್ಯಂತ ವೇಗವಾಗಿ ಬಂಧಿಸಿದ್ದಾರೆ.
ಕುಂಬಡಾಜೆ ಮಾರ್ಪಿನಡ್ಕದ ಕೊರಗ ಎಂಬವರ ಪುತ್ರ ಬಿ. ಕೆ. ಸುರೇಶ್ (42) ಎಂಬುವವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗಳು ಈಗ ಪೊಲೀಸರ ವಶವಾಗಿದ್ದಾರೆ. ಸೋಮವಾರ ಹೊರಬಿದ್ದ ಮಾಹಿತಿಯ ಪ್ರಕಾರ, ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಕಿರಣ್ (30) ಮತ್ತು ಅಖಿಲೇಶ್ (25) ಬಂಧಿತ ಆರೋಪಿಗಳಾಗಿದ್ದಾರೆ.
ಆಟದ ಮೈದಾನದ ಜಗಳ ತೀರಾ ವೈಷಮ್ಯಕ್ಕೆ ತಿರುಗಿತು
ಭಾನುವಾರ (ಮೇ 17) ರಾತ್ರಿ 9:25 ರ ಸುಮಾರಿಗೆ ಮಾರ್ಪಿನಡ್ಕ ಜಂಕ್ಷನ್ ವ್ಯಾಪ್ತಿಯ ಹೈಮಾಸ್ಟ್ ಲೈಟ್ ಬಳಿ ಈ ಭೀಕರ ಕೊಲೆ ನಡೆದಿತ್ತು. ಕಳೆದ ದಿನ ಕುಂಬಡಾಜೆ ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆದಿದ್ದ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಸುರೇಶ್ ಮತ್ತು ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದೇ ವೈಯಕ್ತಿಕ ದ್ವೇಷವೇ ಅಂತಿಮವಾಗಿ ಯೋಜಿತ ದಾಳಿಗೆ ಕಾರಣವಾಗಿದೆ ಎಂದು ತನಿಖಾ ತಂಡ ಖಚಿತಪಡಿಸಿದೆ.
ಜಂಕ್ಷನ್ನಲ್ಲಿ ಭೀಕರ ದಾಳಿ
ಘಟನೆಯ ಸಮಯದಲ್ಲಿ ಮಾರ್ಪಿನಡ್ಕ ಜಂಕ್ಷನ್ನಲ್ಲಿ ನಿಂತಿದ್ದ ಸುರೇಶ್ ಅವರ ಮೇಲೆ ಒಂದನೇ ಆರೋಪಿ ಕಿರಣ್ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ಪ್ರಕರಣ ದಾಖಲಾಗಿದೆ. ಈ ಕ್ರೂರ ದಾಳಿಯನ್ನು ನಡೆಸಲು ಎರಡನೇ ಆರೋಪಿ ಅಖಿಲೇಶ್ ಸಂಪೂರ್ಣ ನೆರವು ಮತ್ತು ಪ್ರಚೋದನೆ ನೀಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
(ಎದೆ) ಮತ್ತು ದೇಹದ ವಿವಿಧ ಭಾಗಗಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಅವರನ್ನು ತಕ್ಷಣವೇ ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರೂ, ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಕರ್ನಾಟಕ ಗಡಿಯಲ್ಲಿ ಚುರುಕಿನ ಕಾರ್ಯಾಚರಣೆ: ಆರೋಪಿಗಳ ಬಂಧನ
ಕೊಲೆ ಘಟನೆಯ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರಿಂದ, ಬದಿಯಡ್ಕ ಪೊಲೀಸರು ಕಾಸರಗೋಡು ಜಿಲ್ಲೆಯಾದ್ಯಂತ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದರು. ಕಾಸರಗೋಡು ಎಎಸ್ಪಿ ಅಚ್ಯುತ್ ಅಶೋಕ್ ಅವರ ನೇರ ಮೇಲ್ವಿಚಾರಣೆಯಲ್ಲಿ ನಡೆದ ತೀವ್ರ ತನಿಖೆಯ ಕೊನೆಯಲ್ಲಿ, ಆರೋಪಿಗಳನ್ನು ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಆರ್ಲಪದವು ಬಳಿ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬದಿಯಡ್ಕ ಸಿಐ ಆರ್. ಪಿ. ಅನೂಪ್ ಕೃಷ್ಣ ನೇತೃತ್ವದ ವಿಶೇಷ ತನಿಖಾ ತಂಡದಲ್ಲಿದ್ದ ಎಸ್ಐಗಳಾದ ರೂಪೇಶ್, ಸುಕುಮಾರನ್, ಪ್ರಸಾದ್, ಸಜೀವನ್ ಹಾಗೂ ಸಿಪಿಒಗಳಾದ ಗೋಕುಲ್, ಅನೀಶ್ ವರ್ಗೀಸ್ ಮತ್ತು ಶ್ರೀನೇಶ್ ಅವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಮೃತ ಸುರೇಶ್ ಅವರ ಪುತ್ರ ಬಿ. ಸುಭಾಷ್ ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಸ ಕಾನೂನು ತಿದ್ದುಪಡಿಯ ಪ್ರಕಾರ, ಭಾರತೀಯ ನ್ಯಾಯ ಸಂಹಿತೆ (BNS) 103(1) ಮತ್ತು 3(5) ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಲಾಗಿದೆ.
-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
