complaint
ನೆಲ್ಯಾಡಿ: ಭೀಕರ ಅನೈತಿಕ ಪೊಲೀಸ್ಗಿರಿ, ಯುವತಿಯರು ಮತ್ತು ಕುಟುಂಬದ ಮೇಲೆ ಪೈಶಾಚಿಕ ಹಲ್ಲೆ – 9 ಜನರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ FIR
ನೆಲ್ಯಾಡಿ/ಉಪ್ಪಿನಂಗಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ಅನೈತಿಕ ಪೊಲೀಸ್ಗಿರಿ (Moral Policing) ನೆಪದಲ್ಲಿ ಯುವತಿಯರು ಹಾಗೂ ಅವರ ಕುಟುಂಬದವರ ಮೇಲೆ ಭೀಕರ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಅಮಾನವೀಯ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ನೀಡಿದ ದೂರಿನನ್ವಯ ಕೋಲ್ಪೆ ನಿವಾಸಿಗಳಾದ 9 ಜನರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಕೋಲ್ಪೆ ನಿವಾಸಿ ಫಾಯಿಝಾ (18) ಎಂಬ ಯುವತಿ ಮೆಲ್ಕಾರ್ನಲ್ಲಿರುವ ಝಾಹಿರ್ ಎಂಬವರ ಅಂಗಡಿಯಲ್ಲಿ ಹ್ಯಾಂಪರ್ ಕೆಲಸ ಮಾಡಿಕೊಂಡಿದ್ದರು. ಆಗಸ್ಟ್ 12 ರಂದು ಕೆಲಸ ಮುಗಿಸಿ ರಾತ್ರಿ ಝಾಹಿರ್ ಅವರ ಗೆಳೆಯ ಸಿಪ್ನಾನ್ ಅವರ ಕಾರಿನಲ್ಲಿ ಸಿಪ್ನಾನ್, ಝಾಹಿರ್ ಹಾಗೂ ಅವರ ತಾಯಿ ಸಫಿಯಾ ಅವರೊಂದಿಗೆ ಫಾಯಿಝಾ ತಮ್ಮ ಮನೆ ಬಳಿ ತಲುಪಿದ್ದರು.
ಬಳಿಕ ಸಫ್ನಾನ್ ಹಾಗೂ ಸಫಿಯಾ ಕಾರಿನಲ್ಲಿ ಮತ್ತು ಝಾಹಿರ್ ಅವರು ಫಾಯಿಝಾ ಅವರ ಮನೆಯಲ್ಲಿದ್ದ ಸ್ಕೂಟರ್ ಪಡೆದುಕೊಂಡು ತಮ್ಮ ಮನೆಗೆ ಹೊರಡಲು ಸಿದ್ಧರಾಗಿದ್ದರು. ಈ ವೇಳೆ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕೋಲ್ಪೆ ಎಂಬಲ್ಲಿ 5-6 ಜನರ ಪುಂಡರ ಗುಂಪು ಕಾರು ಮತ್ತು ಸ್ಕೂಟರ್ ಅನ್ನು ಅಕ್ರಮವಾಗಿ ತಡೆದು ಅತ್ಯಂತ ಕೆಟ್ಟ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದೆ.
ಪ್ರಶ್ನಿಸಿದ್ದಕ್ಕೆ ಪೈಶಾಚಿಕ ದೌರ್ಜನ್ಯ:
ಗಲಾಟೆ ಕೇಳಿ ಸ್ಥಳಕ್ಕೆ ಬಂದ ಫಾಯಿಝಾ “ನಮ್ಮನ್ನು ಕೇಳಲು ನಿಮಗೇನು ಹಕ್ಕಿದೆ?” ಎಂದು ಪ್ರಶ್ನಿಸಿದಾಗ, ಆಕ್ರೋಶಗೊಂಡ ಜಾಬೀರ್ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಸಿದ್ದೀಕ್ ಎಂಬಾತ ಫಾಯಿಝಾರ ಕಪಾಳಕ್ಕೆ ಹೊಡೆದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ. ಜಗಳ ಬಿಡಿಸಲು ಬಂದ ಜಮಾಲ್ ಎಂಬವರಿಗೂ ಸಿದ್ದಿಕ್, ಉನೈಸ್ ಮತ್ತು ರಂಶಿಕ್ ಹೊಡೆದು ದೂಡಿ ಹಾಕಿದ್ದಾರೆ.
ಮುಂದುವರಿದು, ರಂಶಿಕ್, ಸಂಶುದ್ದೀನ್, ಜಾಫರ್ ಹಾಗೂ ಜಾಬೀರ್ ಸೇರಿ ಫಾಯಿಝಾರನ್ನು ತಳ್ಳಿ, ಪಕ್ಕದಲ್ಲಿದ್ದ ಝಾಹಿರ್ ಅವರ ಸ್ಕೂಟರ್ (KA 21 EE 6302) ಅನ್ನು ಆಕೆಯ ಕಾಲಿನ ಮೇಲೆ ಕೆಡವಿ ತೀವ್ರ ನೋವುಂಟು ಮಾಡಿದ್ದಾರೆ. ಸ್ಕೂಟರ್ ಎತ್ತಲು ಬಂದ ಝಾಹಿರ್ ಮೇಲೆಯೂ ಹಲ್ಲೆ ನಡೆಸಲಾಗಿದೆ. ಆಶಿಕ್ ಮತ್ತು ಅಚೂರು @ ಅಶ್ರಫ್ ಎಂಬವರು ಫಾಯಿಝಾರ ಎದೆಗೆ ಹೊಡೆದ ಪರಿಣಾಮ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಪ್ರಜ್ಞೆ ತಪ್ಪಿ ಬಿದ್ದಿದ್ದ ಅಕ್ಕನನ್ನು ಎತ್ತಲು ಬಂದ ಆಕೆಯ ತಂಗಿ ಫಾಸಿಲಾ ಅವರ ಕಪಾಳಕ್ಕೆ ಸಿದ್ದಿಕ್ ಹೊಡೆದು ದೂಡಿ ಹಾಕಿದ್ದರೆ, ಅಶ್ರಫ್ ಕೋಲ್ಪೆ ಎಂಬಾತ ತಲೆಗೆ ಹೊಡೆದಿದ್ದಾನೆ. ಆಸ್ಪತ್ರೆಯ ಮಂಚದ ಮೇಲಿದ್ದು ಹಂಚಿಕೊಂಡ ವಿಡಿಯೋದಲ್ಲಿ ಮಾತನಾಡಿದ ಸಂತ್ರಸ್ತೆ, ಮಹಿಳೆಯರೆಂಬ ಕನಿಷ್ಠ ದಯೆಯೂ ಇಲ್ಲದೆ ಅಕ್ಕ-ತಂಗಿಯರಿಬ್ಬರ ಮೇಲೆಯೂ ಅತ್ಯಂತ ರೌದ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕಣ್ಣೀರಿಟ್ಟು ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ.
ಆರೋಪಿಗಳ ಪಟ್ಟಿ ಮತ್ತು ಪೊಲೀಸ್ ಕ್ರಮ:
ಗಂಭೀರ ಗಾಯಗೊಂಡ ಫಾಯಿಝಾ ಹಾಗೂ ಆಕೆಯ ತಂಗಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಪ್ರಕರಣ ದಾಖಲಾಗಿರುವ ಆರೋಪಿಗಳು:
- ಜಾಬಿರ್ (A1)
- ಸಿದ್ದೀಕ್ (A2)
- ಉನೈಸ್ (A3)
- ರಂಶಿಕ್ (A4)
- ಸಂಶುದ್ದೀನ್ (A5)
- ಜಾಫರ್ (A6)
- ಆಶಿತ್ (A7)
- ಅಚೂರು @ ಅಶ್ರಫ್ (A8)
- ಅಶ್ರಫ್ ಕೋಲ್ಪೆ (A9)
ಅಕ್ಕ-ತಂಗಿಯರ ಮೇಲೆ ಕ್ರೂರ ದೌರ್ಜನ್ಯ:
ಯುವತಿ ಪ್ರಜ್ಞೆ ತಪ್ಪಿ ಬಿದ್ದಾಗ, ಸ್ಥಳದಲ್ಲಿದ್ದ ಸ್ಕೂಟರ್ ಒಂದನ್ನು ಆಕೆಯ ಕಾಲಿನ ಮೇಲೆ ಕೆಡವಿ ತೀವ್ರ ಗಾಯಗೊಳಿಸಲಾಗಿದೆ. ಅಲ್ಲದೆ, ಬಿಡಿಸಲು ಬಂದ ಆಕೆಯ ತಂಗಿ ಫಾಸಿಲಾ ಹಾಗೂ ಕುಟುಂಬದ ಇತರರ ಮೇಲೆಯೂ ಆರೋಪಿಗಳಾದ ಅಚೂರು @ ಅಶ್ರಫ್, ಅಶ್ರಫ್ ಕೋಲ್ಪೆ, ಉನೈಸ್, ರಂಶಿಕ್, ಸಂಶುದ್ದೀನ್ ಮತ್ತು ಜಾಫರ್ ಕೊಲೆ ಬೆದರಿಕೆಯೊಡ್ಡಿ ಭೀಕರ ಹಲ್ಲೆ ನಡೆಸಿದ್ದಾರೆ. ಮಹಿಳೆಯರೆಂಬ ಕನಿಷ್ಠ ಕರುಣೆಯೂ ಇಲ್ಲದೆ ಅಕ್ಕ-ತಂಗಿಯರಿಬ್ಬರ ಖಾಸಗಿ ಅಂಗಗಳಿಗೆ ತುಳಿದು, ಎದೆ ಹಾಗೂ ತಲೆಗೆ ಹೊಡೆದು ರಸ್ತೆಯಲ್ಲೇ ಬಿದ್ದಿರುವಂತೆ ಮಾಡಿದ್ದರೆಂದು ಸಂತ್ರಸ್ತೆ ಕಣ್ಣೀರಿಡುತ್ತಾ ವಿವರಿಸಿದ್ದಾರೆ.
ಪೋಲಿಸ್ ಪ್ರಕರಣ ದಾಖಲು:
ಈ ಕೃತ್ಯದ ಕುರಿತು ಸಂತ್ರಸ್ತರ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ವಿವಿಧ ತೀವ್ರ ಕಾನೂನು ವಿಭಾಗಗಳ ಅಡಿಯಲ್ಲಿ (U/S 115(2), 126(2), 189(2), 190, 191(2), 351(2), 352) ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಅನೈತಿಕ ಪೊಲೀಸ್ಗಿರಿ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Bantawala
ಪುತ್ತೂರು: ಕೆದಿಲ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ. ಅಕ್ರಮ ಆರೋಪ – CEO ಸೇರಿ ಇಬ್ಬರ ವಿರುದ್ಧ FIR
ಪುತ್ತೂರು/ಬಂಟ್ವಾಳ: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ) ಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಸಂಘದ CEO ಸೇರಿದಂತೆ ಇಬ್ಬರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು (PCR) ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು:
ಕೇಶವ ಗೌಡ ಕೆ (A1) – CEO, ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ, ಕೆದಿಲ
ಸಮೀರಾ ರಿಯಾಝ್ (A2) – ಮಂಗಳೂರು, ಕದ್ರಿ ನಿವಾಸಿ
BNS ಕಾಯ್ದೆ ಅಡಿ ಪ್ರಕರಣ: ಭಾರತೀಯ ನ್ಯಾಯ ಸಂಹಿತಾ (BNS) 2023 ರ ಕಲಂ 316(5), 318(4), 336(3), 340(2) r/w 3(5) – ಅಂದರೆ ನಂಬಿಕೆ ದ್ರೋಹ, ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಸಂಚು ರೂಪಿಸಿ ಅಪರಾಧ ಎಸಗಿದ ಆರೋಪದಡಿ FIR ದಾಖಲಾಗಿದೆ.

ದೂರಿನಲ್ಲಿ ಏನಿದೆ?
ದೂರಿನ ಪ್ರಕಾರ, 01/04/2024 ರಿಂದ 31/03/2026 ರ ಅವಧಿಯಲ್ಲಿ ಸಂಘದ ವಹಿವಾಟಿನಲ್ಲಿ ಅಕ್ರಮ ನಡೆದಿದೆ.
ಸಂಘದಲ್ಲಿ ಒಟ್ಟು ರೂ. 31,21,84,821/- ಮೊತ್ತದ ವಹಿವಾಟಿನಲ್ಲಿ ಲೋಪದೋಷಗಳು ಕಂಡುಬಂದಿವೆ ಎಂದು ಲೆಕ್ಕ ಪರಿಶೋಧನೆಯಲ್ಲಿ ತಿಳಿದು ಬಂದಿದೆ.
2025-26 ನೇ ಸಾಲಿನ ಸಾಲ ವಿತರಣೆಯನ್ನು ಪರಿಶೀಲಿಸಿದಾಗ ಸುಮಾರು ರೂ. 6,86,00,000/- ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
CEO ಕೇಶವ ಗೌಡ ಅವರು CoBank ಸಾಫ್ಟ್ವೇರ್ನಲ್ಲಿ ಸದಸ್ಯರ ಹೆಸರಿನಲ್ಲಿ ಇಲ್ಲದ ಸಾಲಗಳನ್ನು ಸೃಷ್ಟಿಸಿ, ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂಬುದು ಆರೋಪ.
ಯೋಗೀಶ್ ಆಚಾರ್ಯ ಎಂಬುವವರ ಮೂಲಕ ಪರಿಚಯವಾದ ಸಮೀರಾ ರಿಯಾಝ್ ಅವರ ಹೆಸರಿನಲ್ಲಿ ರೂ. 1,67,00,000/- ಹಾಗೂ ಒಟ್ಟು ರೂ. 7,26,00,000/- ವರೆಗೆ ಸಾಲ ಮಂಜೂರು ಮಾಡಿ, ನಂತರ ಅವರಿಂದ ರೂ. 6,96,00,000/- ವನ್ನು ಮರುಪಾವತಿಯ ಹೆಸರಿನಲ್ಲಿ ವಸೂಲಿ ಮಾಡಿ ಹೊಂದಾಣಿಕೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಘದ ಆಡಳಿತ ಮಂಡಳಿ ಮತ್ತು ಸಾಲಗಾರರ ಸಭೆಯ ನಡಾವಳಿ ಪುಸ್ತಕದಲ್ಲಿ ತಿದ್ದುಪಡಿ ಮಾಡಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದೂ ಆರೋಪಿಸಲಾಗಿದೆ.
ಈ ಬಗ್ಗೆ ಸಂಘದ ಆಡಳಿತ ಮಂಡಳಿ ಪರಿಶೀಲನೆ ನಡೆಸಿ, ಬ್ಯಾಂಕಿನ ನಿರ್ದೇಶಕರಿಗೆ ದೂರು ನೀಡಿತ್ತು. ನಂತರ ಅಧ್ಯಕ್ಷರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣವನ್ನು ಪುತ್ತೂರು ನ್ಯಾಯಾಲಯಕ್ಕೆ 27/10/2026 ರಂದು ಸಂಜೆ 6:30 ಕ್ಕೆ ಹಾಜರುಪಡಿಸಲಾಗಿದ್ದು, ತನಿಖೆಯನ್ನು ASI ವಾಸು ನಾಯ್ಕ ಎಂ ಅವರು ನಡೆಸುತ್ತಿದ್ದಾರೆ. ಪಿಸಿ ಹೆಚ್.ಸಿ ಶಿವಕುಮಾರ್ ನಾಯ್ಕ್ (2278) ಅವರು FIR ಅನ್ನು ನ್ಯಾಯಾಲಯಕ್ಕೆ ತಲುಪಿಸಿದ್ದಾರೆ.
ಸಮೀರಾ ರಿಯಾಜ್ ಅವರು ಪ್ರತಿದಿನ ಕೇಶವ ಗೌಡ ಅವರಿಗೆ ಫೋನ್ ಕರೆ ಮಾಡಿ “ನನಗೆ ಹಣ ನೀಡಬೇಕು, ನೀಡದಿದ್ದರೆ ನಿನ್ನ ವಿರುದ್ಧ ಸುಳ್ಳು ಕಥೆ ಕಟ್ಟಿ ಮಾನ ಹರಾಜು ಹಾಕುತ್ತೇನೆ” ಎಂದು ಮಾನಸಿಕ ಕಿರುಕುಳ ಮತ್ತು ಬ್ಲಾಕ್ಮೇಲ್ ಮಾಡಿದ್ದಾರೆ. ಇದಕ್ಕೆ ಹೆದರಿ ಕೇಶವ ಗೌಡ ಅವರು ಹಂತ ಹಂತವಾಗಿ ಒಟ್ಟು ರೂ. 7,26,00,000/- ವನ್ನು ಸಮೀರಾ ರಿಯಾಜ್ ಅವರಿಗೆ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ ಎಂದು FIR ನಲ್ಲಿ ಉಲ್ಲೇಖವಿದೆ.
4. ನಕಲಿ ದಾಖಲೆ ಸೃಷ್ಟಿಯ ಆರೋಪ – ಅತ್ಯಂತ ಗಂಭೀರ ಅಂಶ:
ಪಿರ್ಯಾದಿದಾರರು ಮತ್ತು ಬ್ಯಾಂಕಿನ ನಿರ್ದೇಶಕರು ಬ್ಯಾಂಕಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ಇನ್ನಷ್ಟು ಅಕ್ರಮಗಳು ಬಯಲಾಗಿವೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕೇಶವ ಗೌಡ ಕೆ ಅವರು ಪಿರ್ಯಾದಿದಾರರ ಸಹಕಾರಿ ಸಂಘಕ್ಕೆ ಮೋಸ ಮತ್ತು ವಂಚನೆ ಮಾಡುವ ಉದ್ದೇಶದಿಂದ ಸಾಲಗಾರರ ಸಾಲದ ಅರ್ಜಿಗಳನ್ನು ನಕಲಿಯಾಗಿ ಸೃಷ್ಟಿಸಿ, ಮಂಜೂರಾತಿ ಮಾಡಿರುವ ಆಡಳಿತ ಮಂಡಳಿಯ ಸಭಾ ನಡಾವಳಿ ಪುಸ್ತಕದ ಹಾಳೆಗಳನ್ನು, ಸಾಲಗಾರರ ಅರ್ಜಿ ಮತ್ತು ಪೂರಕ ದಾಖಲೆಗಳನ್ನು ತಿದ್ದುಪಡಿ ಮಾಡಿ, ನಡಾವಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರು ಸಹಿ ಮಾಡಿದ ನಂತರ ತನ್ನ ಅನುಕೂಲಕ್ಕೆ ಹೆಚ್ಚುವರಿಯಾಗಿ ಪಿರ್ಯಾದಿದಾರರ ಅನುಮತಿ ಇಲ್ಲದೆ ಬರೆದು ನಕಲಿ ಸಹಿ ಮಾಡಿದ್ದಾರೆ.
ಸಾಲದ ಅರ್ಜಿಯಲ್ಲಿ ವಕೀಲರ ಲೀಗಲ್ ಒಪಿನಿಯನ್ ಪತ್ರವನ್ನು ನಕಲಿಯಾಗಿ ಸೃಷ್ಟಿಸಿ, ಹಳೆಯ ಲೀಗಲ್ ಒಪಿನಿಯನ್ ಪತ್ರಗಳನ್ನು ಹೊಸ ಸಾಲಗಾರರ ಅರ್ಜಿಗೆ ಇಟ್ಟು ವಕೀಲರ ನಕಲಿ ಸಹಿ ಹಾಕಿದ್ದಾರೆ.
ಸಂಘದ ಕಾನೂನಿನ ಪ್ರಕಾರ ಮಂಜೂರು ಮಾಡಿದ ಸಾಲಗಳನ್ನು ತದನಂತರ ತಿದ್ದುಪಡಿ ಮಾಡಿ ಫೋರ್ಜರಿ ಸಹಿಗಳನ್ನು ಹಾಕಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ.
ಅಷ್ಟೇ ಅಲ್ಲ, ಸಭಾ ನಡಾವಳಿ ಪುಸ್ತಕದಲ್ಲಿ ದಿನಾಂಕಗಳನ್ನು, ಮೊತ್ತಗಳನ್ನು ತಿದ್ದುಪಡಿ ಮಾಡಿ, ಯಾವುದೇ ಇನಿಷಿಯಲ್ ಕೂಡ ಹಾಕದೇ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಪಿರ್ಯಾದಿದಾರರು ಸಹಿ ಮಾಡಿದ ನಂತರ ತಾವೇ ಹೆಚ್ಚುವರಿಯಾಗಿ ನಡಾವಳಿಗಳನ್ನು ಬರೆದಿರುವುದು ಕಂಡುಬಂದಿದೆ.
ಈ ಕೃತ್ಯವನ್ನು 2024 ರಿಂದಲೇ ಕೇಶವ ಗೌಡ ಅವರು ಸಮೀರಾ ರಿಯಾಜ್ ರವರಿಗೆ ಹಣ ನೀಡುವ ಉದ್ದೇಶದಿಂದ ಮಾಡುತ್ತಿರುವುದು ಕಂಡುಬಂದಿದೆ ಎಂದು FIR ನಲ್ಲಿ ವಿವರಿಸಲಾಗಿದೆ.
ಈ ಎಲ್ಲಾ ಕೃತ್ಯದಿಂದ ಪಿರ್ಯಾದಿದಾರರ ಸಂಘಕ್ಕೆ ರೂ. 6,86,00,000/- ವಂಚನೆಯಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು. ಪೊಲೀಸರು ಪ್ರಕರಣವನ್ನು Investigation ಹಂತಕ್ಕೆ ತೆಗೆದುಕೊಂಡಿದ್ದು, ತನಿಖೆ ಮುಂದುವರಿದಿದೆ.
complaint
ವಿಟ್ಲ: ಪರವಾನಿಗೆ ಇಲ್ಲದೆ ವಸತಿ ಪ್ರದೇಶದಲ್ಲಿ ಹೋಟೆಲ್ ನಿರ್ಮಾಣ; ಪಟ್ಟಣ ಪಂಚಾಯತ್ನಿಂದ ಕಟ್ಟುನಿಟ್ಟಿನ ನೋಟೀಸ್ ಜಾರಿ! ಮುಂದುವರಿಯುತ್ತಿರುವ ಕಾಮಗಾರಿ ?
ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೆ, ವಸತಿ ಉದ್ದೇಶದ ಜಮೀನಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಶೀಟ್ ಅಳವಡಿಸಿ ಹೋಟೆಲ್ ನಿರ್ಮಾಣ ಮಾಡುತ್ತಿರುವ ಅನಧಿಕೃತ ಕಾಮಗಾರಿಯ ವಿರುದ್ಧ ಪಟ್ಟಣ ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಾಮಗಾರಿ ಮಾತ್ರ ಸದ್ದಿಲ್ಲದೆ ನಡೆಯುತ್ತಲೇ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಘಟನೆಯ ವಿವರ:
ವಿಟ್ಲದ ಅಡ್ಡದಬೀದಿ ನಿವಾಸಿ ಶ್ರೀ ಸಂತೋಷ್ ಕುಮಾರ್ ಅವರು ತಮ್ಮ ಮನೆಯ ಹತ್ತಿರ ವಸತಿ ಉದ್ದೇಶದ ಜಮೀನಿನಲ್ಲಿ ಶೀಟ್ ಅಳವಡಿಸಿ ಹೋಟೆಲ್ ಹಾಗೂ ವಾಣಿಜ್ಯ ಉದ್ದೇಶದ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದರಿಂದ ಸದರಿ ಪ್ರದೇಶ ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರಾದ ಶ್ರೀ ಅಬ್ದುಲ್ ರವರು 2026ರ ಆಗಸ್ಟ್ 04 ರಂದು ವಿಟ್ಲ ಪಟ್ಟಣ ಪಂಚಾಯತ್ಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಎಚ್ಚೆತ್ತ ಪಂಚಾಯತ್ ಆಡಳಿತವು, ತಮ್ಮ ಕಚೇರಿಯ ಕಿರಿಯ ಅಭಿಯಂತರರಿಂದ ಸ್ಥಳ ಪರಿಶೀಲನೆ ನಡೆಸಿ 2026ರ ಸೆಪ್ಟೆಂಬರ್ 01 ರಂದು ವರದಿ ಪಡೆದುಕೊಂಡಿದೆ.
ಪಂಚಾಯತ್ನಿಂದ ಎಚ್ಚರಿಕೆ ಹಾಗೂ ಸೂಚನೆ:
ವರದಿಯ ಆಧಾರದ ಮೇಲೆ ಶ್ರೀ ಸಂತೋಷ್ ಕುಮಾರ್ ಅವರಿಗೆ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಯು ನೋಟೀಸ್ ಜಾರಿ ಮಾಡಿದ್ದು, ಕೂಡಲೇ ಶೀಟ್ ಅಳವಡಿಸುವ ಹಾಗೂ ನಿರ್ಮಾಣ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ಪಟ್ಟಣ ಪಂಚಾಯತ್ ಕೃಪಾಕಟಾಕ್ಷದಲ್ಲಿ ಕಾಮಗಾರಿ ನಡೆಯುತ್ತಲೇ ಇದೆ ಎಂದು ದೂರುದಾರರು ಆಕ್ರೋಶಿತರಾಗಿದ್ದಾರೆ.
ಯಾವುದೇ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಲು ನಿಯಮಾನುಸಾರ ಸೂಕ್ತ ದಾಖಲೆಗಳೊಂದಿಗೆ ಕಚೇರಿಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ, 1964ರ ಪುರಸಭಾ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟೀಸ್ನಲ್ಲಿ ಕಟ್ಟು ನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ.
complaint
ಸಿದ್ದರಾಮಯ್ಯಗೆ ಬಿಗ್ ರಿಲೀಫ್: ವೈರಲ್ ಸ್ಟಿಂಗ್ ವಿಡಿಯೋ ಸ್ಕ್ರಿಪ್ಟೆಡ್ ಎಂದು ಒಪ್ಪಿಕೊಂಡ ಮಹಿಳೆ!
ಬೆಂಗಳೂರು / ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವೈರಲ್ ಸ್ಟಿಂಗ್ ಆಪರೇಷನ್ ವಿಡಿಯೋ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯೇ ಇದು ಸೃಷ್ಟಿಕರ್ತರು ಬರೆದುಕೊಟ್ಟ ಸ್ಕ್ರಿಪ್ಟ್ ಎಂದು ಒಪ್ಪಿಕೊಂಡಿದ್ದು, ಸಿದ್ದರಾಮಯ್ಯಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಪೊಲೀಸರ ಮುಂದೆ ಸಂತ್ರಸ್ತೆ ನೀಡಿದ ಹೇಳಿಕೆಯಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿದೆ. ಸದ್ಯ ನ್ಯಾಯಾಲಯದಲ್ಲಿ ಸಂತ್ರಸ್ತೆ ನೀಡುವ ಹೇಳಿಕೆ ಮೇಲೆ ಇಡೀ ಪ್ರಕರಣ ನಿಂತಿದೆ. ಆ ಹೇಳಿಕೆ ಬಂದ ನಂತರವೇ ಅದು ಅಧಿಕೃತವಾಗಲಿದೆ.
ಪೊಲೀಸರು ಸಂತ್ರಸ್ತೆಯ ಬಳಿ ಹೇಳಿಕೆ ಪಡೆದಾಗ ಆಕೆ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾಳೆ.
“ಪೊಲೀಸರ ಮುಂದೆ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಹಿಂದೆ ವಿಡಿಯೋದಲ್ಲಿ ನಾನು ಹೇಳಿದ ಹೇಳಿಕೆಗಳೆಲ್ಲವೂ ಹೇಳಿಕೊಟ್ಟ ಸ್ಕ್ರಿಪ್ಟ್ ಆಗಿದೆ. ನಾನು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಯೇ ಇಲ್ಲ. ವಿಡಿಯೋ ಮಾಡಿದವರ ಅಣತಿಯಂತೆ ನಾನು ಹೇಳಿಕೆ ನೀಡಿದ್ದೇನೆ. ನನಗೆ ಸಿದ್ದರಾಮಯ್ಯ ಅವರಿಂದ ಯಾವುದೇ ತೊಂದರೆಯಾಗಿಲ್ಲ.”
ಈ ಹೇಳಿಕೆಯಿಂದಾಗಿ ಪೊಲೀಸ್ ತನಿಖೆಯಲ್ಲಿ ಸದ್ಯ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಂತಾಗಿದೆ.
ಈ ಪ್ರಕರಣದಲ್ಲಿ ಅತ್ಯಂತ ಮಹತ್ವದ ಕಾನೂನು ಅಂಶವೆಂದರೆ – ಒಂದು ವೇಳೆ ಸ್ಟಿಂಗ್ ಆಪರೇಷನ್ ನಲ್ಲಿ ಸಂತ್ರಸ್ತೆ ಹಿಂದೆ ಯಾವ ರೀತಿ ಹೇಳಿಕೆ ನೀಡಿದ್ದಾರೋ, ಅದೇ ಹೇಳಿಕೆಯನ್ನು ಪೊಲೀಸರ ಮುಂದೆ ನೀಡುತ್ತಿದ್ದರೆ, ಆಗ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಾಗಬೇಕಿತ್ತು.
ಆದರೆ ಸಂತ್ರಸ್ತೆ ಪೊಲೀಸರ ಮುಂದೆ ಆ ಹಳೆಯ ಹೇಳಿಕೆಗಳನ್ನು ತಳ್ಳಿಹಾಕಿ, ಅದೆಲ್ಲ ಸ್ಕ್ರಿಪ್ಟೆಡ್ ಎಂದು ಹೇಳಿರುವುದರಿಂದ ಸದ್ಯಕ್ಕೆ ಪ್ರಕರಣ ದುರ್ಬಲವಾಗಿದೆ.
ಸಂತ್ರಸ್ತೆ ನ್ಯಾಯಾಲಯದಲ್ಲಿ ಇನ್ನೂ ಹೇಳಿಕೆ ನೀಡಿಲ್ಲ. ಪೊಲೀಸರ ಮುಂದೆ ನೀಡಿದ ಹೇಳಿಕೆ ಸದ್ಯ ಸಿದ್ದರಾಮಯ್ಯಗೆ ರಿಲೀಫ್ ತಂದಿದೆ. ಮುಂದೆ ನ್ಯಾಯಾಲಯದಲ್ಲಿ ಸಂತ್ರಸ್ತೆ ಯಾವ ಹೇಳಿಕೆ ನೀಡುತ್ತಾಳೋ, ಅದರ ಮೇಲೆ ಈ ಪ್ರಕರಣ ಅಧಿಕೃತವಾಗಿ ನಿಂತಿದೆ. ಆಕೆಯ ಕೋರ್ಟ್ ಹೇಳಿಕೆಯೇ ಫೈನಲ್ ಮತ್ತು ಅಧಿಕೃತವಾಗಲಿದೆ.
ಈ ಹಿನ್ನೆಲೆಯಲ್ಲಿ ಕೃಪಾ ಆಳ್ವ ಮತ್ತು ರಾಕೇಶ್ ಶೆಟ್ಟಿ ವಿರುದ್ಧದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಲಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
2023 ರಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಈ ಸ್ಟಿಂಗ್ ವಿಡಿಯೋ, 2011 ರಲ್ಲಿ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿದ್ದಾಗಿನ ಘಟನೆಗೆ ಸಂಬಂಧಿಸಿದ್ದು ಎಂದು ಕೆಲವು ಸ್ಥಳೀಯ ಚಾನೆಲ್ಗಳಲ್ಲಿ ಪ್ರಸಾರವಾಗಿತ್ತು.
ಸಿದ್ದರಾಮಯ್ಯ ಆರೋಪ ಏನು?
ಮೈಸೂರಿನಲ್ಲಿ ಅಕ್ಟೋಬರ್ 23 ರಂದು ಮಾತನಾಡಿದ ಸಿದ್ದರಾಮಯ್ಯ, ಇದೊಂದು 100% ಸುಳ್ಳು ಮತ್ತು ಬ್ಲ್ಯಾಕ್ಮೇಲ್ ಮಾಡುವ ಉದ್ದೇಶದ ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದು ಸುಳ್ಳು ಪ್ರಕರಣ. ನನ್ನನ್ನು ಬ್ಲ್ಯಾಕ್ಮೇಲ್ ಮಾಡುವ ಉದ್ದೇಶದಿಂದ ಮಾಡಲಾಗಿದೆ. ಆದ್ದರಿಂದ ಸತ್ಯ ಹೊರಬರಬೇಕು ಎಂದು ನಾನೇ ದೂರು ನೀಡಿದ್ದೇನೆ. ಜನರಿಗೆ ಸತ್ಯ ಗೊತ್ತಾಗಬೇಕು, ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗಬೇಕು. ನಾನು 8 ವರ್ಷ ಮುಖ್ಯಮಂತ್ರಿಯಾಗಿದ್ದೆ, ಆಗ ಇಂತಹ ಘಟನೆ ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರ ಇಲ್ಲದಾಗ ಇಂತಹ ಷಡ್ಯಂತ್ರ ನಡೆದಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿಡಿಯೋದಲ್ಲಿ ಕಾಣಿಸಿಕೊಂಡವರು ದಕ್ಷಿಣ ಕನ್ನಡ ಮೂಲದ ಕೃಪಾ ಆಳ್ವ ಮತ್ತು ರಾಕೇಶ್ ಶೆಟ್ಟಿ ಎಂದು ಅವರು ಹೆಸರಿಸಿದ್ದಾರೆ. “ರಾಕೇಶ್ ಶೆಟ್ಟಿ ಅವರೇ ಇದನ್ನು ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯಾವುದೇ ಸತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಕೋರ್ಟ್ ನಿಂದ ರಿಲೀಫ್:
ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್, 42 ಮಾಧ್ಯಮ ಸಂಸ್ಥೆಗಳು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳು ಈ ವಿಡಿಯೋ ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅವರ ಮಾನಹಾನಿ ಮತ್ತು ಘನತೆಗೆ ಧಕ್ಕೆ ತರುವ ಅಪಾಯ ಇರುವುದರಿಂದ ಈ ಆದೇಶ ನೀಡಲಾಗಿದೆ.
ಪೊಲೀಸ್ ದೂರು ಮತ್ತು ರಾಜಕೀಯ ಬೆಳವಣಿಗೆ:
ಸಿದ್ದರಾಮಯ್ಯ ಅವರು ಅಕ್ಟೋಬರ್ 6 ರಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಈ ಮಧ್ಯೆ, ಕೆಪಿಸಿಸಿ ವಕ್ತಾರೆ ಆಗಿರುವ ಕೃಪಾ ಆಳ್ವಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ವರದಿಯಾಗಿದೆ. ಸಿದ್ದರಾಮಯ್ಯ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಇದು ಸ್ಟಿಂಗ್ ಅಲ್ಲ, ವ್ಯಕ್ತಿಯ ಇಮೇಜ್ ಹಾಳು ಮಾಡುವ ಪಿತೂರಿ ಎಂದು ಹೇಳಿದ್ದಾರೆ
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
